Author - Guest Author

ಅಂಕಣ

ದೇವೇಗೌಡರೇ, ನೀವು ನಿಜವಾದ ಜಾತ್ಯಾತೀತ ಆಗುವುದು ಯಾವಾಗ? ?

ಕೃಷಿಕ್ ಸರ್ವೋದಯದ  ಬೆಳ್ಳಿ ಮಹೋತ್ಸವದ ಕಾರ್ಯಕ್ರಮದಲ್ಲಿ ಇಬ್ಬರು  ಒಕ್ಕಲಿಗ  ರಾಜಕಾರಣಿಗಳು  (ಒಕ್ಕಲಿಗರ  ನಾಯಕರು ಎಂದು ಹೇಳುತ್ತಿಲ್ಲ) ಪರಸ್ಪರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಡಿಕೆಶಿಯವರನ್ನು ಉದ್ದೇಶಿಸಿ “ನಿಮ್ಮನ್ನು  ಸುಲಭವಾಗಿ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಳ್ಳಬೇಡಿ. ಒಕ್ಕಲಿಗರನ್ನು ಎರಡನೇ ದರ್ಜೆಯಯಲ್ಲಿಯೇ ಇರಿಸುತ್ತಾರೆ. ಮೊದಲಿನ ದರ್ಜೆಗೆ...

ಅಂಕಣ

“ಮತ್ತೆ ಮತ್ತೆ ಓದಿಸಿಕೊಳ್ಳುವ – ಕರ್ವಾಲೊ”

ಒಂದು ಪುಸ್ತಕ ತನ್ನನ್ನು  ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ ಅಂದರೆ, ಅದರೊಳಗಿನ ವಸ್ತುವಿಷಯ ಓದುಗನ ಮನಸ್ಸನ್ನು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ ಎಂದರ್ಥ. ನಮ್ಮ ಬದುಕಿನಲ್ಲಿ ಸಿಗುವ ಸಾಮಾನ್ಯ ಅನುಭವಕ್ಕಿಂತ ಭಿನ್ನವಾದುದನ್ನೋ ಅಥವಾ ಅಪೂರ್ವವಾದುನ್ನೋ ಕಥಾವಸ್ತು ಮನಸ್ಸಿನ ಅನುಭವಕ್ಕೆ ತಂದಾಗ, ನಮ್ಮ ಪ್ರಜ್ಞೆ ಅಂತಹ ಅನುಭವ ವಿಶೇಷವನ್ನು ಹೆಚ್ಚು ಸಮಯ ತನ್ನ...

ಅಂಕಣ

ಛೇ, ಇಂತಹ ಶಿಕ್ಷಕರೇ ದೇಶದ ತುಂಬಾ ಇದ್ದಿದ್ದರೆ!

ಆ ಅನುಭವವೇ ಒಂದು ರೋಮಾಂಚನ. ಕಾಲೇಜ್‍ನಲ್ಲಿ ಶಿಕ್ಷಕರ ದಿನಾಚರಣೆ ಕುರಿತು ಮಾತಾಡಬೇಕಿದ್ದ ಕಾರಣ ಏನನ್ನಾದರು ಹೊಸದನ್ನು ಹುಡುಕುತಿದ್ದೆ. ಆಗ ನೆನಪಾದದ್ದು ರಾಧಾಕೃಷ್ಣನ್ ಮತ್ತು ಸ್ಟಾಲಿನ್ ಭೇಟಿ. ನೀವು ಒಮ್ಮೆ ಓದಿ ನೋಡಬೇಕು. ರಷ್ಯಾದಲ್ಲಿ ಸ್ಟಾಲಿನ್ ಹೆಗಲ ಮೇಲೆ ಕೈ ಹಾಕಿ ಬೀಳ್ಕೊಂಡ ರಾಧಾಕೃಷ್ಣನ್ ಕಥೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅದಕ್ಕೂ ಮುನ್ನ ಅವರಿಬ್ಬರ ನಡುವೆ...

Featured ಅಂಕಣ

ಅಯ್ಯೋ ,ಕೆಂಪು ರತ್ನವೆಂದುಕೊಂಡಿದ್ದು  ಸುಡುವ ಕೆಂಡವಾಯ್ತೆ!

ವೈದ್ಯಕೀಯ ವೆಚ್ಚವನ್ನ ತಗ್ಗಿಸುವ ನಿಟ್ಟಿನಲ್ಲಿ ಮೋದಿ ತುಳಿಯುತ್ತಿರುವ  ಹಾದಿ, ಹೆಚ್ಚು ಜನ ನಾಯಕರು ನಡೆಯದ ಅಪರೂಪದ ದಾರಿ  ಎಂದರೆ ತಪ್ಪಾಗಲಾರದು . ಕರ್ನಾಟಕ ಸರ್ಕಾರ ಅವೈಜ್ಞಾನಿಕವಾಗಿ ಚಿಕಿತ್ಸೆಯ ವೆಚ್ಚಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿರುವಾಗ , ಮೋದಿಯವರು ವೈದ್ಯಕೀಯ ವೆಚ್ಚದ ಮೂಲಕ್ಕೆ ಕೈ ಹಾಕುತ್ತಿದ್ದಾರೆ. ಫೆಬ್ರವರಿ ತಿಂಗಳನಲ್ಲಿ  ಮೋದಿಯ ಕಣ್ಣು...

ಅಂಕಣ

ದಕ್ಷಿಣ ಭಾರತದ ಜೀವನದಿಯಲ್ಲಿ ಮಹಾಪುಷ್ಕರ.

“177 ವರ್ಷಗಳ ನಂತರ ಮತ್ತೆ ಪುನರಾವರ್ತನೆಯಾಗುತ್ತಿರುವ ಐತಿಹಾಸಿಕ ಮಹಾಪುಷ್ಕರ ಮೇಳ. ಸೆಪ್ಟೆಂಬರ್ 12 ರಿಂದ 24ರ ವರೆಗೆ 12 ದಿನಗಳೂ ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾವೇರಿ ನದಿಪಾತ್ರದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳಲ್ಲಿ ಮಿಂದೇಳುವ ಸಂಭ್ರಮ. “ತಲಕಾವೇರಿಯಿಂದಮಾ ಬಂಗಾಳಕೊಲ್ಲಿಯ ವರಮಿರ್ಪ ನದಿಯೇ ಕಾವೇರಿ.” ಈ ಹೊತ್ತಿನಲ್ಲಿ ಮರೆಯಬಾರದ...

ಪ್ರವಾಸ ಕಥನ

ಲಡಾಖ್ ಹಾಗು ಭಾರತೀಯ ಸೇನೆ

ಇದೀಗಷ್ಟೇ ಸ್ವಾತಂತ್ರ್ಯ ದಿನ ಕಳೆದು ಹೋಗಿದೆ. ಪ್ರತಿ ವರುಷದಂತೆ ಈ ಬಾರಿಯೂ ಅದೇ ಸಂಭ್ರಮ ಸಡಗರದಿಂದ ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂಭ್ರಮಗಳೆಲ್ಲಾ ಮುಗಿಯುತ್ತಿದ್ದಂತೆ ಅದೊಂದು ವಾರ್ತೆ ನಮ್ಮ ವಾರ್ತಾಪತ್ರಿಕೆಗಳ ಮುಖಪುಟ ಸೇರಿಕೊಂಡಿತ್ತು. ಇನ್ನೂ ಮಾಸದ ನನ್ನ ಕೆಲ ಹೊಸ ನೆನಪುಗಳನ್ನು ಅದು ಕೆದಕತೊಡಗಿತು. “ಲಡಾಖ್‌’ನಲ್ಲಿ...

ಅಂಕಣ

ತಿಲಕರಿಂದ “ಸ್ವರಾಜ್ಯ ಗಣಪ”ನವರೆಗಿನ ಉತ್ತಿಷ್ಠ ಭಾರತ.

ಭಗವದ್ಗೀತೆ ನಾಲ್ಕನೇ ಅಧ್ಯಾಯದ ಕೊನೆಯಲ್ಲಿ ಗೊಂದಲ ಮನಸ್ಠಿತಿಯಲ್ಲಿ ಮುಳುಗಿದ್ದ ಅರ್ಜುನನನ್ನು ಸಂಬೋಧಿಸುತ್ತಾ ಕೃಷ್ಣ ಹೇಳುವ ಮಾತೇ, “ಉತ್ತಿಷ್ಠ ಭಾರತ”. ಸರಳಾರ್ಥದಲ್ಲಿ ಎದ್ದೇಳು ಭಾರತ, ಒಳಗಿನ ಜ್ಞಾನದ ಬೆಳಕನ್ನು ಬೆಳಗಿಸು. ಅಂದರೆ ಅರಿವಿಗೆ ಬಾರದ ಮಂಪರಿನ ಮಗ್ನತೆಯಿಂದ ಜಾಗೃತಾವಸ್ಥೆಗೆ ಮರಳುವ ಎಚ್ಚರಿಸುವ, ಮಲಗಿದ್ದವರನ್ನೂ ಎದ್ದೇಳಿಸುವ ಕರೆಘಂಟೆ...

ಅಂಕಣ

ಸಾವೇ ಸರಿದು ನಿಂತ ಸಾಧಕನ ಕತೆಯಿದು.

ಎಲ್ಲರಂತೆಯೇ ಶಾಲೆಗೆ ಹುಡುಗನ ಗತ್ತಿನಿಂದಲೇ ಓಡಾಡಿದವರು ವಿನಾಯಕರು. ಸಹಪಾಠಿಗಳೊಡನೆ ಜಂಗಿ ಕುಸ್ತಿ, ಭವಿತವ್ಯದ ನೂರಾರು ಕನಸು, ಮಳೆಯ ನೀರಿನೊಂದಿಗಿನ ಮಕ್ಕಳಾಟ, ಕಾಲುಹಾದಿಗಳ ನಿತ್ಯದ ಗುಣಾಕಾರ, ಹೀಗೆ ಅವರ ನೆನಪುಗಳೇ ಅನನ್ಯವಾದುದು. ಬಾಲ್ಯವೆಂದರೆ ಎಲ್ಲರಿಗೂ ಬೆಟ್ಟದಷ್ಟು ಕನಸು ತಾನೇ? ದೂರದ ಪರ್ವತ, ಮುಗಿಯದ ಕಾಡು, ಹರಿಯುವ ನೂರಾರು ತೊರೆ, ವರುಷವಾದರೆ ಮುಗಿದು...

ಅಂಕಣ

ಸರಿಗಮಪ – ಇದು ಸಂಗೀತಗಳ ಬೆಸೆಯುವ ಸಂಬಂಧ – ಅನುಬಂಧ

ಕಿರುತೆರೆ ಲೋಕದಲ್ಲಿ ಅತ್ಯಂತ ಮನರಂಜನಾ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ವೀಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಿರುವ ಜೀ ಕನ್ನಡ ತುಂಬಾ ಜನಪ್ರಿಯ ವಾಹಿನಿಯಾಗಿ ಹೊರಹೊಮ್ಮಿದೆ. ಸಾಧಕರ ಪರಿಚಯಕ್ಕೆ ವೀಕೆಂಡ್  ವಿತ್ ರಮೇಶ್, ನೃತ್ಯಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ನಾಟಕ,ಅಭಿನಯಕ್ಕೆ ಡ್ರಾಮಾ ಜೂನಿಯರ್ಸ, ಹಾಸ್ಯ ಪ್ರತಿಭೆಗಳ ಅನಾವರಣಕ್ಕೆ ಕಾಮಿಡಿ...

ಕವಿತೆ

ಜಲಪಾತ

ಧೋ! ಧುಮ್ಮಿಕ್ಕುವ ಜಲಪಾತ ಧರೆಯ ಎದೆಯೊಳಗೆ ನವರಸಗಳ ಅಖಂಡ ಜಾತ!   ಬಂಡೆ ಎದೆ ಹರವಿಗೆ ಬೆಣ್ಣೆ ತಿಕ್ಕಿ ಬಿಗಿದಪ್ಪುವ ಬಯಕೆ ಬಿಸುಪಿಗೆ ಕರಗಿ ಜಾರುವ ಹುಸಿ ನಾಚಿಕೆ ಮಾಟ| ತೆರೆದ ಹೊಕ್ಕುಳಿಗೆ ಕಚಗುಳಿಯಿಡುವ ಹನಿಗಳ ಕೂಟ ಸೃಜಿಪ ಮನ್ಮಥ ಚಾಪ ಉರಿಗಣ್ಣ ತಣಿಪ ಶೃಂಗಾರನೋಟ || ೧ ||   ಶತಮಾನಗಳ ಕಂಡಜ್ಜಿಗೆ ಮುಡಿ ಹರಡಿ ಸಿಕ್ಕು ಬಿಡೀಸುವ ತವಕ ನಿತ್ಯ ಕಳೆದು...