Author - Rangaswamy mookanahalli

ಸ್ಪ್ಯಾನಿಷ್ ಗಾದೆಗಳು

ಹಸಿದ ಹೊಟ್ಟೆಗೆ ತಂಗಳು ಪರಮಾನ್ನ ! ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು...

ಬದುಕು ಎಷ್ಟು ವಿಚಿತ್ರ ಅಲ್ವಾ ? ಒಬ್ಬ ವ್ಯಕ್ತಿಯ ಎರಡು ಸನ್ನಿವೇಶದಲ್ಲಿ ನಿಲ್ಲಿಸಿ ನೋಡಿ ಅವನ ವರ್ತನೆ ಹೇಗೆ ಬದಲಾಗುತ್ತದೆ ಎನ್ನುವುದು ತಿಳಿಯುತ್ತದೆ . ದಿನ ,ವಾರದ ಕಥೆಯಿರಲಿ ಒಂದಷ್ಟು ತಾಸು ತಿನ್ನಲು ಸಿಗದಿದ್ದರೆ ಮನುಷ್ಯನ ಸ್ವಭಾವ ಬದಲಾಗುವುದು ಕಾಣಬಹದು . ಹೀಗೆ ಬಹಳ ಹಸಿದು ತಿಂದರೆ ತಿಂದ ಪದಾರ್ಥ ಹೆಚ್ಚು ರುಚಿಸುತ್ತದೆ . ಹಸಿಯದೆ ಮೃಷ್ಟಾನ್ನ ತಿಂದರೂ...

ಅಂಕಣ

ಎಂ.ಡಿ.ಪಿ. ಕಾಫಿಹೌಸ್ – ಮತ್ತೊಂದು ಹೊಸ ಔಟ್’ಲೆಟ್

ಅದು ೨೦೦೪ರ ಸಮಯ ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಕಾಫಿ ಶಾಪ್ ತೆಗೆಯಲು ಪ್ರಸಿದ್ಧ ಐಟಿ ಕಂಪೆನಿಯಿಂದ ಅವಕಾಶ ಸಿಗುತ್ತದೆ. ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ಬಳಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಎಂಡಿಪಿ ಕಾಫಿ ಹೌಸ್ ಒಂದು ಉತ್ತಮ ಉದಾಹರಣೆ. ಒಂದು ಹತ್ತಾಯಿತು, ಹತ್ತು ನೂರಾಯಿತು. ಭಾರತದ ಉದ್ದಗಲಕ್ಕೂ ಕಾರ್ಪೊರೇಟ್ ವಲಯದಲ್ಲಿ ಇಂದು ಎಂಡಿಪಿ ಶಾಖೆಗಳಿವೆ...

Featured ಪ್ರಚಲಿತ

ಭಾಗ್ಯಗಳ ಭರಾಟೆಯಿಲ್ಲದ ದೇಶದ ಪರ ಬಜೆಟ್!

ಈ ಬಾರಿಯ ಬಜೆಟ್ ಹಲವು ವಿಷಯಗಳಿಗಾಗಿ ನೆನಪಿನಲ್ಲಿ ಉಳಿಯಲಿದೆ . ಮೊದಲನೆಯದಾಗಿ ಹೆಚ್ಚಿನ ಜನರು ಭಾವಿಸಿದ್ದು ನರೇಂದ್ರ ಮೋದಿ ನೇತೃತ್ವದ ಸರಕಾರ ೨೦೧೯ ರಲ್ಲಿ ಚುನಾವಣೆ ಗೆಲ್ಲಲು ಏನು ಬೇಕು ಅದನ್ನ ಬಜೆಟ್ನಲ್ಲಿ ಅಳವಡಿಸಿಕೊಳ್ಳುತ್ತದೆ ಎನ್ನುವುದು . ತಾತ್ಕಾಲಿಕ ಶಮನ ನೀಡುವ ಅಥವಾ ಸುಖ ನೀಡುವ ಫಾರ್ಮುಲಾಗೆ ಮೋದಿ ಮಣೆ ಹಾಕಿಲ್ಲ . ಎರಡನೆಯದಾಗಿ ಮಧ್ಯಮ ವರ್ಗದ ಜನರಿಗೆ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಆಡುತ್ತ ಆಡುತ್ತ ಭಾಷೆ ಹಾಡುತ್ತ ಹಾಡುತ್ತ ರಾಗ!

ಬಾರ್ಸಿಲೋನಾ ನಗರಕ್ಕೆ ಕೆಲಸ – ಬದುಕು ಅರಸಿ ಬಂದು ವರ್ಷವೂ ತುಂಬಿರಲಿಲ್ಲ . ಹೇಗೋ ಕಷ್ಟಪಟ್ಟು ಸ್ಪಾನಿಷ್ ಭಾಷೆಯನ್ನು ಸಂವಹನಕ್ಕೆ ಬೇಕಾದಷ್ಟು ಕಲಿತಿದ್ದೆ. ಅಲ್ಲಿನ ಕಥೆ, ಕವನ, ಕಾದಂಬರಿಗಳ ಓದಬೇಕೆನ್ನುವ ಬಯಕೆ, ಅಲ್ಲಿಗೂ ನಮ್ಮ ಕನ್ನಡ ನಾಡಿಗೂ ಒಂದು ಸಾಂಸ್ಕೃತಿಕ ಸೇತುವೆ ಬೆಸೆಯಬೇಕೆನ್ನುವ ಯಾವ ಬಯಕೆಯೂ ಇಲ್ಲದ ಹೊಸದಾಗಿ ಕಾಣುತಿದ್ದ ಬದುಕನ್ನು ಹಸಿಹಸಿಯಾಗಿ...

ಸ್ಪ್ಯಾನಿಷ್ ಗಾದೆಗಳು

ಕನ್ನಡಿಯೊಳಗಿನ ಗಂಟಿಗಿಂತ ಕೈಯಲ್ಲಿರುವ ದಂಟೇ ಲೇಸು!

  ನಮ್ಮಲ್ಲಿನ ಆಡು ಮಾತುಗಳು ಅಥವಾ ಗಾದೆಗಳು ಜೀವನದ ಸಾರಾಂಶವನ್ನು  ಒಂದೆರಡು ವಾಕ್ಯಗಳಲ್ಲಿ ಕಟ್ಟಿಕೊಡುತ್ತವೆ. ಅಂತಹ ನೂರಾರು ಗಾದೆಗಳು ನಮ್ಮಲಿವೆ. ಇಂದಿನ ಗಾದೆ ಅವುಗಳಲ್ಲಿ ಒಂದು. ಗಾದೆ ಮಾತು ಎಲ್ಲವೂ ಅರ್ಥವಾಗುವ ರೀತಿಯಲ್ಲೇ ಇದೆ. ಕನಸು ಕಾಣುವುದು ಬಹಳ ಮುಖ್ಯ ಕನಸಿಲ್ಲದೆ ಅದನ್ನು ನನಸಾಗಿಸುವ ಬಗೆಯಾದರೂ ಹೇಗೆ? ಅಲ್ಲವೇ? ಆದರೆ ಕನಸು ಕಾಣುವ ಭರದಲ್ಲಿ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಹನಿ ಹನಿ ಗೂಡಿದರೆ ಹಳ್ಳ !

ಜಗತ್ತಿನಲ್ಲಿ ಹುಬ್ಬೇರಿಸುವ ಯಾವ ಕೆಲಸವೇ ಇರಲಿ ಅದನ್ನು ಒಂದೇ ದಿನದಲ್ಲಿ ಮಾಡಿದ ಉದಾಹರಣೆ ಕಂಡಿದ್ದೀರಾ? ನಲ್ಲಿಯ ಕೆಳಗಿನ ಕಲ್ಲನ್ನು ಗಮನಿಸಿ ನೋಡಿ ಅಲ್ಲೊಂದು ಸಣ್ಣ ಹಳ್ಳ ಬಿದ್ದಿರುತ್ತದೆ . ಅದು ಸೃಷ್ಟಿಯಾದದ್ದು ಒಂದು ದಿನದಲ್ಲಿ ಖಂಡಿತಾ ಅಲ್ಲ . ಎಷ್ಟೋ ವರ್ಷಗಳು  ಒಂದೊಂದು ಹನಿ ಬಿದ್ದು  ಆ ಹಳ್ಳವನ್ನು ಸೃಷ್ಟಿಸಿದೆ . ನೀವು ಅದೇ ನಲ್ಲಿಯ ನೀರನ್ನು ಅದೆಷ್ಟೇ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಅತ್ತರಷ್ಟೇ ಹಾಲು ! ಇಲ್ಲದಿದ್ದರೆ ಬರಿ ನೋವು !!

ಬದಲಾಗುತ್ತಿರುವ ಕಾಲ ಮತ್ತು ಜನರ ನಡವಳಿಕೆಯನ್ನ ಗಮನಿಸಿ ನಮ್ಮಲ್ಲಿ  ಒಂದು ನಾಣ್ನುಡಿ ಹೆಚ್ಚಾಗಿ ಪ್ರಚಲಿತವಾಗಿದೆ  .ಮಗು ಅಳದಿದ್ದರೆ ತಾಯಿ ಕೂಡ ಹಾಲುಣಿಸುವುದಿಲ್ಲ ಎನ್ನುವುದು ಆ ಮಾತು . ! ತಾಯಿಯಂತ ತಾಯಿಯೇ ಮಗು ಅಳದೆ ಸುಮ್ಮನೆ ಇದ್ದರೆ ಅದಕ್ಕೆ ಹೊಟ್ಟೆ ತುಂಬಿದೆ ಎಂದುಕೊಂಡು ಹಾಲು ಕೊಡುವುದಿಲ್ಲ ಎಂದ ಮೇಲೆ ಬೇರೆಯವರ ಬಗ್ಗೆ ಹೇಳುವುದಿನ್ನೇನು ? ಇದರ ಅರ್ಥವಿಷ್ಟೆ...

Featured ಅಂಕಣ ಪ್ರಚಲಿತ

ಬಡ ಭಾರತೀಯನ ಬೆನ್ನೆಲುಬು ಮುರಿದು ಮ್ಯಾರಥಾನ್ ಓಡು ಎಂದರೆ ಹೇಗೆ ಮೋದಿಯವರೇ ?

ಆನೆ ನಡೆದದ್ದೇ ದಾರಿ ಎನ್ನುವ ಒಂದು ಮಾತಿದೆ. ಅದು ಇಂದಿನ ಶ್ರೀ ನರೇಂದ್ರ ಮೋದಿ ಸರಕಾರಕ್ಕೆ ಹೆಚ್ಚು ಅನ್ವಯಿಸುತ್ತದೆ. ಹೀಗಾಗಲು ಕಾರಣ ನಮ್ಮ ಭಾವುಕ ಜನ. ಹೌದು ದಶಕಗಳಿಂದ ಜಿಡ್ಡುಗಟ್ಟಿದ ನಮ್ಮ ಮನಸ್ಸಿಗೆ ಸಾಂತ್ವನ ನೀಡುವ ಮಾತನಾಡಿದವರು ಅಪ್ಯಾಯವಾಗುವುದು ಸಹಜ ತಾನೆ? ನಮಗೂ ಆಗಿದ್ದು ಅದೇ. ಮೋದಿ ಸಹಜ ಮಾತುಗಾರ ಮಾತಿನಿಂದ ಜನರನ್ನು ಮೋಡಿ ಮಾಡುವ ಚತುರತೆ ಮತ್ತು ಕಲೆ...

Featured ಅಂಕಣ

ಮಂತ್ರಕ್ಕಿಂತ ಉಗುಳು ಜಾಸ್ತಿ !

ಸ್ಪಾನಿಷ್ ಗಾದೆಗಳು ವಿಶ್ವ ಮಾನವತೆಯನ್ನ ಸಾರಲು ನನಗೆ ಸಿಕ್ಕಿರುವ ಒಂದು ನೆವವಷ್ಟೇ . ಅದೇಕೆ ಎಂದು ಸ್ಪಾನಿಷ್ ಗಾದೆಗಳನ್ನ ಓದುತ್ತ ಬಂದಿರುವವರಿಗೆ ವಿಶೇಷವಾಗಿ ವಿವರಿಸುವ  ಅವಶ್ಯಕತೆಯಿಲ್ಲ . ದೇಶ -ಭಾಷೆ – ಕಾಲವನ್ನ ಮೀರಿ ಮನುಷ್ಯನ ಭಾವನೆಗಳು ಒಂದೇ ಎಂದು ಉದಾಹರಣೆ ಸಹಿತ ಹೇಳುವುದು ಇಲ್ಲಿನ ಉದ್ದೇಶ . ಇರಲಿ . ಇನ್ನೊಂದು ವರ್ಷ ನಮ್ಮ ಕೈ ಜಾರಿ ಹೋಗಿದೆ ...

ಸ್ಪ್ಯಾನಿಷ್ ಗಾದೆಗಳು

ಅವರವರ ತಲೆಗೆ ಅವರವರದೇ ಕೈ !

ನಮ್ಮ ಜೀವನದಲ್ಲಿ ನಾವು ಎಷ್ಟೊಂದು ಕೆಲಸ ಮಾಡುತ್ತೇವೆ, ಎಷ್ಟೊಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಅಲ್ಲವೇ ? ಕೆಲವೊಮ್ಮೆ ಇಂತಹ ಕೆಲಸಗಳು ಅಥವಾ ನಿರ್ಧಾರಗಳು ನಮ್ಮದಾಗಿರುವುದಿಲ್ಲ . ಯಾವುದೊ ಕಟ್ಟುಪಾಡಿಗಾಗಿ ಅಥವಾ ಸಂಧರ್ಭದ ಒತ್ತಾಯಕ್ಕೆ ನಾವು ಆ ಕೆಲಸ ಮಾಡಿರುವ ಸಾಧ್ಯತೆ ಇರುತ್ತದೆ . ಕೆಲವೊಂದು ನಿರ್ಧಾರಗಳು ನಮ್ಮ ಮನಸ್ಸಿಗೆ ಒಪ್ಪಿಗೆಯಾಗದಿದ್ದರೂ ಅದಕ್ಕೆ ನಮ್ಮ...