ಸ್ಪ್ಯಾನಿಷ್ ಗಾದೆಗಳು

ಕನ್ನಡಿಯೊಳಗಿನ ಗಂಟಿಗಿಂತ ಕೈಯಲ್ಲಿರುವ ದಂಟೇ ಲೇಸು!

 

ನಮ್ಮಲ್ಲಿನ ಆಡು ಮಾತುಗಳು ಅಥವಾ ಗಾದೆಗಳು ಜೀವನದ ಸಾರಾಂಶವನ್ನು  ಒಂದೆರಡು ವಾಕ್ಯಗಳಲ್ಲಿ ಕಟ್ಟಿಕೊಡುತ್ತವೆ. ಅಂತಹ ನೂರಾರು ಗಾದೆಗಳು ನಮ್ಮಲಿವೆ. ಇಂದಿನ ಗಾದೆ ಅವುಗಳಲ್ಲಿ ಒಂದು. ಗಾದೆ ಮಾತು ಎಲ್ಲವೂ ಅರ್ಥವಾಗುವ ರೀತಿಯಲ್ಲೇ ಇದೆ. ಕನಸು ಕಾಣುವುದು ಬಹಳ ಮುಖ್ಯ ಕನಸಿಲ್ಲದೆ ಅದನ್ನು ನನಸಾಗಿಸುವ ಬಗೆಯಾದರೂ ಹೇಗೆ? ಅಲ್ಲವೇ? ಆದರೆ ಕನಸು ಕಾಣುವ ಭರದಲ್ಲಿ ಸದ್ಯದಲ್ಲಿ ನಮ್ಮ ಕೈಯಲ್ಲಿರುವ ಅವಕಾಶ ಜಾರಿಹೋಗದಂತೆ ನೋಡಿಕೊಳ್ಳಬೇಕು. ನಾಳೆ ಒಳಿತಾಗುತ್ತದೆ ಎನ್ನುವ ಖುಷಿಯಲ್ಲಿ ಇಂದು ಹಿಡಿದ ಕೆಲಸವನ್ನು ಪೂರ್ಣ ಮಾಡದೆ ಹೋಗುವುದು ತಪ್ಪು ಏಕೆಂದರೆ ಬದುಕು ಬಹಳ ಅನಿಶ್ಚತೆಯಿಂದ ಕೂಡಿದೆ. ನಾಳೆ ಏನು ಬೇಕಾದರೂ ಆಗಬಹದು. ನಕಾರಾತ್ಮಕವಾಗಿ ಯೋಚಿಸುವ ಆವಶ್ಯಕತೆ ಇಲ್ಲ. ಬದುಕನ್ನು ಪ್ರಾಕ್ಟಿಕಲ್ ದೃಷ್ಟಿಯಿಂದ ನೋಡುವುದನ್ನು ಈ ಗಾದೆ ಮಾತು ಕಲಿಸುತ್ತದೆ. ನಾಳೆ ನೀನು ಬಯಸಿದ್ದು ಸಿಗುವವರೆಗೆ ಈಗ ಕೈಯಲ್ಲಿರುವುದನ್ನು ಗೌರವಿಸಲು ಕಲಿತುಕೊ ಎನ್ನುವ ಪಾಠ ಇದರಲ್ಲಿದೆ. ನಾಳೆ ಅಕಸ್ಮಾತ್ ಬಯಸಿದ್ದು ಸಿಗದೆ ಹೋದರೆ ಗಂಟು ಇಲ್ಲ, ಕೈಯಲ್ಲಿರುವ ದಂಟೂ ಇಲ್ಲ ಎನ್ನುವ ಪರಿಸ್ಥಿತಿ ಬರಬಾರದು. ಹೀಗಾಗಿ ಕೈಯಲ್ಲಿರುವ ಅವಕಾಶವನ್ನು ಎಂದೂ ಕೇವಲವಾಗಿ ನೋಡಬಾರದು ಎನ್ನುವುದು ಸಾರಾಂಶ.

ಅಂದಿನ ಸ್ಪಾನಿಷ್ ಸಮಕಾಲೀನರು Más vale pájaro en mano que cien volando ( ಮಾಸ್ ಬಾಲೆ ಪಹಾರೊ ಇನ್ ಮಾನೋ ಕೆ ಸಿಯನ್ ವೊಲಾಂದೋ ) ಎಂದರು. ಕೈಯಲ್ಲಿರುವ ಪಕ್ಷಿ  ಹಾರುತ್ತಿರುವ ನೂರಕ್ಕೆ ಸಮ ಎನ್ನುವುದು ಯಥಾವತ್ತು ಅನುವಾದ. ಇದು ನಮ್ಮ ಕನ್ನಡ ಗಾದೆಯ ಸಾರಾಂಶವನ್ನೇ ಹೇಳುತ್ತದೆ. ಇಂದು ನಮ್ಮ ಬಳಿ ಏನಿದೆಯೂ ಅದು ಹೆಚ್ಚು ಮೌಲ್ಯವುಳ್ಳದ್ದು. ನಾಳೆ ಇದರ ನೂರು ಪಟ್ಟು ಮೌಲ್ಯದ ವಸ್ತು ನಮ್ಮ ಬಳಿ ಬರಬಹದು. ಆದರೇನು ಅದು ನಮ್ಮದಾಗದ ಹೊರತು ಇಂದಿರುವ ವಸ್ತುವಿನ ಮೌಲ್ಯವೇ ಹೆಚ್ಚು. ನಮ್ಮ ಇಂದಿನ ಸ್ಥಿತಿಯನ್ನು ಗೌರವಿಸುವುದು ನಾವು ಕಲಿಯಬೇಕು. ನಮ್ಮ ಪರಿಸ್ಥಿತಿ ನಮಗೆ ಅರಿವಿದ್ದರೆ ಮಾತ್ರ ಬದಲಾವಣೆಗೂ ಪ್ರಯತ್ನಿಸಬಹದು.

ಇದನ್ನು ಇಂಗ್ಲಿಷ್ ಭಾಷಿಕರು  “Bird in hand is worth more than a hundred in flight.” ಎಂದರು . ಸ್ಪಾನಿಷ್ ಮತ್ತು ಕನ್ನಡ ಗಾದೆಗೆ ಸನಿಹದ ಇವರ ಧ್ವನಿ “A bird in the hand is worth two in the bush.” ಇಲ್ಲಿಯೂ ಕೈಯಲ್ಲಿರುವ ಒಂದು  ಪಕ್ಷಿ ಪೊದೆಯಲ್ಲಿರುವ ಎರಡು ಪಕ್ಷಿಗೆ ಸಮ ಎನ್ನುವ ಇಂದಿನ ಮೌಲ್ಯ ತಿಳಿಸುವ ಮಾತನ್ನೇ  ಅನುರುಣಿಸುತ್ತಾರೆ.

ಸ್ಪಾನಿಷ್ ಭಾಷೆಯ ಅರ್ಥ ಮತ್ತು ಉಚ್ಚಾರಣೆ :

Más vale  : ಇಟ್ಸ್ ಬೆಟರ್ .. ಅಥವಾ ಅದಕ್ಕಿಂತ ಉತ್ತಮ ಎನ್ನುವ ಅರ್ಥ ನೀಡುತ್ತದೆ . ಮಾಸ್ ಬಾಲೆ ಎನ್ನುವುದು ಉಚ್ಚಾರಣೆ . ಗಮನಿಸಿ ಉಚ್ಚಾರಣೆ ವಾಲೆ ಅಲ್ಲ ಬಾಲೆ .

pájaro  : ಪಕ್ಷಿ ಎನ್ನುವ ಅರ್ಥ , ಪಹಾರೊ ಎನ್ನುವುದು ಉಚ್ಚಾರಣೆ . ಗಮನಿಸಿ ಪಜಾರೊ ಅಲ್ಲ .

mano  : ಕೈ , ಹಸ್ತ ಎನ್ನುವ ಅರ್ಥ . ಮಾನೋ ಎನ್ನುವುದು ಉಚ್ಚಾರಣೆ .

que  : ಸಂದರ್ಭಕ್ಕೆ ಅನುಗುಣವಾಗಿ ಅರ್ಥ ನೀಡುತ್ತದೆ . ಇಲ್ಲಿ ಇಂಗ್ಲಿಷ್ ನ THAN , ಅದಕ್ಕಿಂತ ಎನ್ನುವ ಅರ್ಥ ಕೊಡುತ್ತದೆ . ಕೆ ಎನ್ನುವುದು ಉಚ್ಚಾರಣೆ .

cien   : ನೂರು ಎನ್ನುವುದು ಅರ್ಥ . ಸಿಯನ್ ಎನ್ನುವುದು ಉಚ್ಚಾರಣೆ .

  • volando : ಹಾರಾಡು , ಹಾರುತ್ತಿರುವ ಎನ್ನುವುದು ಅರ್ಥ . ವೊಲಾಂದೋ ಉಚ್ಚಾರಣೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!