Author - Rangaswamy mookanahalli

ಅಂಕಣ ಸ್ಪ್ಯಾನಿಷ್ ಗಾದೆಗಳು

ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು !?

ನಮ್ಮಲ್ಲಿ ಜನ ನಾಯಕರಿಗೆ ಏನೂ ಕೊರತೆಯಿಲ್ಲ. ಅವರನ್ನ ಅಭಿಮಾನದಿಂದ ಕಾಣುವ ಅಭಿಮಾನಿಗಳಿಗೂ ಕೊರತೆಯಿಲ್ಲ . ಅಂತಹ ಮಹಾನ್ ನಾಯಕರ ನಂತರ ಆತನ ಸಂತಾನ ನಾಯಕನಾಗಿ ಮುಂದುವರಿಯಲಿ ಎನ್ನುವ ಆಸೆ ಕೂಡ ನಮ್ಮ ಸಮಾಜದಲ್ಲಿ ಒಂದು ಕೈ ಜಾಸ್ತಿಯೇ ಎನ್ನಬಹುದು . ತಂದೆಯ ನಂತರ ಹೀಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಆತನ ತಂದೆಯಂತೆಯೇ ದಕ್ಷನಾಗಿದ್ದರೆ ಕೇಳುವುದಿನ್ನೇನು? ತನ್ನ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಮಂತ್ರಕ್ಕಿಂತ ಉಗುಳು ಜಾಸ್ತಿ!

ಮಂತ್ರಕ್ಕಿಂತ ಉಗುಳು ಜಾಸ್ತಿ ಎನ್ನುವ ಗಾದೆ ನಮ್ಮಲ್ಲಿ ಹಾಸ್ಯದಿಂದ ಬಳಸುತ್ತೇವೆ. ಸ್ಪಷ್ಟವಾಗಿ ಮಂತ್ರ ಬಾಯಿಂದ ಹೊರಡುವುದರ ಬದಲು ಉಗಳು ಜಾಸ್ತಿ ಬರುತ್ತದೆ – ಅಂದರೆ ಮಂತ್ರ ಹೇಳುವನಿಗೆ ಅದರ ಮೇಲಿನ ಪಾಂಡಿತ್ಯ ಅಷ್ಟಕಷ್ಟೇ ಎನ್ನುವ ಅರ್ಥದಲ್ಲಿ ಇದನ್ನ ಬಳಸುತ್ತೇವೆ. ಹಾಗೆ ನೋಡಲು ಹೋದರೆ ಈ ಗಾದೆ ಪಾಂಡಿತ್ಯವಿರದ ಪುರೋಹಿತನ ಕುರಿತು ಶುರುವಾದರೂ, ನಂತರದ...

Uncategorized

ನುಡಿದಂತೆ ನಡೆಯುವರು ಉಳಿದವರು  ಯಾರಿಲ್ಲಿ ? 

ಆಚಾರ ಹೇಳುವುದಕ್ಕೆ – ಬದನೇಕಾಯಿ ತಿನ್ನುವುದಕ್ಕೆ ಅಂತ ನಮ್ಮಲ್ಲಿ ಒಂದು ಗಾದೆಯಿದೆ. ಇದರ ಅರ್ಥ ನುಡಿದಂತೆ ನುಡಿಯುವರು ಕಡಿಮೆ ಎನ್ನುವುದು. ನಮ್ಮಲ್ಲಿ ಅಂತಲ್ಲ ಜಗತ್ತಿನ ಬಹುಸಂಖ್ಯೆಯ ಜನ ಈ ಒಂದು ಕೆಟಗರಿಯಲ್ಲಿ ಬರುತ್ತಾರೆ. ಇಂದಿನ ದಿನದಲ್ಲಿ ೯೯ ಪ್ರತಿಶತ ಜನ ಹೀಗೆ ಅಂದರೂ ತಪ್ಪಾಗುತ್ತದೆ. ಏಕೆಂದರೆ ಉಳಿದ ಒಂದು ಪ್ರತಿಶತ ಜನರೂ ಕೂಡ ಸಮಯ ಬಂದರೆ ಹೇಗೆ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಆಳಾಗಿ ದುಡಿ ,ಹಸಿದು ತಿನ್ನು !

ಹಸಿದಾಗ ತಿನ್ನುವುದು ಸಂಸ್ಕೃತಿ, ಹಸಿವಿಲ್ಲದೆ ತಿನ್ನುವುದು ವಿಕೃತಿ ಎನ್ನುವುದು ಸನಾತನ ಹಿಂದೂ ಧರ್ಮದಲ್ಲಿ ಹೇಳಿರುವ ಮಾತು. ಹಸಿವಿಲ್ಲದೆ ತಿನ್ನುವುದರಿಂದ ಮುಖ್ಯವಾಗಿ ಮತ್ತೊಬ್ಬ ಹಸಿದವನ ಅನ್ನ ಕಸಿದ ಹಾಗೆ ಆಗುತ್ತದೆ. ಜೊತೆಗೆ ಹೆಚ್ಚು ತಿಂದವನ ಆರೋಗ್ಯ ಕೂಡ ಕೆಡುತ್ತದೆ. ಮಿತಾಹಾರ ಬದುಕಿಗೆ ಒಳ್ಳೆಯದು ಎನ್ನುವುದು ನಮ್ಮ ಎಲ್ಲಾ ಹಿರಿಯರು ಕಾಲದಿಂದ ಕಾಲಕ್ಕೆ...

ಸ್ಪ್ಯಾನಿಷ್ ಗಾದೆಗಳು

ನೋವಿಲ್ಲದ ಗೆಲುವಿಲ್ಲ !

ಬದುಕಿನಲ್ಲಿ ಯಶಸ್ಸು ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ಮನುಷ್ಯನ ಸಹಜ ಆಕಾಂಕ್ಷೆ . ಒಬೊಬ್ಬರಿಗೆ ಒಂದೊಂದು ಕ್ಷೇತ್ರದಲ್ಲಿ  ಯಶಸ್ಸು ಸಿಗುತ್ತದೆ . ಕೆಲವರು ಕಲಾವಿದರಾಗಿ ಯಶಸ್ಸು ಪಡೆದರೆ ಇನ್ನು ಕೆಲವರು ವೈದ್ಯರಾಗಿ , ಇಂಜಿನಿಯರ್ ಆಗಿ .. ಹೀಗೆ ಪಟ್ಟಿ ಬೆಳೆಯುತ್ತದೆ . ಕ್ಷೇತ್ರ ಯಾವುದೇ ಇರಲಿ ಯಶಸ್ಸು ಪಡೆಯಲು ಇರುವುದು ಒಂದೇ ದಾರಿ, ನಿಷ್ಠೆ ಮತ್ತು...

ಅಂಕಣ ಸ್ಪ್ಯಾನಿಷ್ ಗಾದೆಗಳು

ಗೋಡೆಗೂ ಕಿವಿಯಿದೆ !

ನಮ್ಮಲ್ಲಿ ರಹಸ್ಯ ಮಾತುಕತೆ ನಡೆಯುವಾಗ ಮಾತುಕತೆಯಲ್ಲಿ ತೊಡಗಿರುವ ಇಬ್ಬರಲ್ಲಿ ಒಬ್ಬರು ‘ಶ್ .. ಮೆಲ್ಲಗೆ ಮಾತನಾಡು ಇಲ್ಲಿ ಗೋಡೆಗೂ ಕಿವಿಯಿದೆ’ ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ನಮ್ಮಲ್ಲಿ ಯಾರಾದರೊಬ್ಬರು ಈ ಪದವನ್ನು ತಮ್ಮ ಜೀವನದ ಪಯಣದಲ್ಲಿ ಉಪಯೋಗಿಸಿರಲಿಕ್ಕೂ ಸಾಕು. ಇದಕ್ಕೆ ಹೆಚ್ಚು ಅರ್ಥ ವಿವರಣೆ ನೀಡುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಮನೆ ಗೆದ್ದು ಮಾರು ಗೆಲ್ಲು !

ನಮ್ಮ ನಡುವೆ ಒಂದಷ್ಟು ಜನ ಜಗತ್ತಿನ ಎಲ್ಲಾ ನೂನ್ಯತೆಗಳನ್ನು ಸರಿಪಡಿಸಿಬಿಡುತ್ತೇವೆ ಎನ್ನುವ ಹುಮ್ಮಸ್ಸಿನಿಂದ ಎಲ್ಲರ/ಎಲ್ಲವುಗಳ ತಪ್ಪನ್ನು ಎತ್ತಿ ಆಡುತ್ತಾರೆ ಅಥವಾ ಅವರ/ಅವುಗಳ ತಪ್ಪನ್ನು ಸರಿಪಡಿಸಲು ಹೊರಡುತ್ತರೆ. ಅವರಲ್ಲಿ ತಿದ್ದಿಕೊಳ್ಳಬೇಕಾದ ನೂರು ಅವಗುಣಗಳಿರುತ್ತವೆ. ಅದನ್ನು ಸರಿಪಡಿಸಿಕೊಳ್ಳದೆ ಜಗತ್ತಿನ ನೂನ್ಯತೆಯ ತಿದ್ದುವುದು ಎಷ್ಟು ಸಮಂಜಸ?  ಅಲ್ಲವೇ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಮಾತಿಗಿಂತ ಕೃತಿ ಮೇಲು!

ಸ್ಪಾನಿಷರಲ್ಲಿ ‘ಚಲನೆ ಸರಿಯಾಗಿದೆ ಎನ್ನುವುದು ನಡಿಗೆಯಿಂದ ತಿಳಿಯುತ್ತದೆ ‘ ಎನ್ನುವ ಮಾತಿದ. ಅದನ್ನು ಸ್ಪಾನಿಷ್’ನಲ್ಲಿ El movimiento se demuestra andando. (ಎಲ್ ಮೊವಿಮಿಯೆಂತೊ ಸೆ ಡೆಮೊಸ್ತ್ರ ಅಂದಾಂದೋ ) ಎನ್ನುತ್ತಾರೆ. ಯಾವುದಾದರೂ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ಬಗ್ಗೆ ಬಹಳ ಹೊತ್ತು ಚರ್ಚೆ ಆಗುತ್ತಲೇ ಇದ್ದು; ಮತ್ತು...

ಸ್ಪ್ಯಾನಿಷ್ ಗಾದೆಗಳು

ದೇವನೊಬ್ಬ ನಾಮ ಹಲವು ! 

ನಮ್ಮಲ್ಲಿ ನಾವೆಲ್ಲ ಒಂದೇ ಎನ್ನುವುದಕ್ಕೆ ದೇವನೊಬ್ಬ ನಾಮ ಹಲವು ಎನ್ನುವುದನ್ನ ಬಳಸುತ್ತೇವೆ . ಇಲ್ಲಿ ದೇವರನ್ನ ಹಲವು ಹೆಸರುಗಳಿಂದ ಕರೆದರೂ ದೇವನೊಬ್ಬನೇ ಇರುವುದು ಎನ್ನುವುದನ್ನ ಸಾರುವುದು ಉದ್ದೇಶ , ಜೊತೆಗೆ ಬೇರೆ ಧರ್ಮದವರು ಕೂಡ ತಮ್ಮ ದೇವರ ಹೆಸರನ್ನ ಏನೇ ಹೇಳಲಿ ಎಲ್ಲವೂ ಕೊನೆಗೆ ಆತನಿಗೆ ಸಮರ್ಪಿತ ಎನ್ನುವ ವಿಶಾಲ ಮನೋಭಾವನೆ ಬಿತ್ತುವುದರಲ್ಲಿ  ಕೂಡ ಸಫಲವಾಗಿದೆ ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಹುಟ್ಟಿಸಿದ ದೇವರು ಹುಲ್ಲು  ಮೇಯಿಸದೆ ಇರುತ್ತಾನೆಯೇ?

ಬದುಕಿನಲ್ಲಿ ಬದಲಾವಣೆ ಸಹಜ. ಆದರೆ ಪ್ರತಿ ಬದಲಾವಣೆಯೂ ಅದರದೇ ಆದ ನೋವು ಕೊಡದೆ ಬಿಡುವುದಿಲ್ಲ. ’Every change brings in pain’ ಎನ್ನುವ ವಾಕ್ಯವನ್ನು ಇಂಗ್ಲಿಷ್ ಭಾಷಿಕರು ಬಹಳವಾಗಿ ಬಳಸುತ್ತಾರೆ. ನೋವು ಎಂದು ಬದಲಾವಣೆಗೆ ತೆರೆದುಕೊಳ್ಳದೆ ಹೋದರೆ ಅದು ಇನ್ನೊಂದು ದೊಡ್ಡ ನೋವಾಗುತ್ತದೆ. ಬದುಕು ತೆರೆದುಕೊಂಡ ಹಾಗೆ ನಡೆದುಕೊಂಡು ಹೋಗಬೇಕು ಎನ್ನುವುದು ನಾನು...