ನುವಾರ ಎಲಿಯಾದ ಸುಂದರ ಪ್ರಕೃತಿ ಸೌಂದರ್ಯ ಸವಿದು, ಅಲ್ಲಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಹಾರ್ಟನ್ ಪ್ಲೈನ್ಸ್ ಎನ್ನುವ ನ್ಯಾಷನಲ್ ಪಾರ್ಕ್ ನಲ್ಲಿ ಚಾರಣ ಮಾಡಿ ಬದುಕಿಗೆ ಬೇಕಾಗುವ ಅತಿ ಅವಶ್ಯಕ ಅನುಭವ ಪಾಠ ಕಲಿತು, ರಾತ್ರಿ ದಿಂಬಿಗೆ ತಲೆ ಕೊಟ್ಟದಷ್ಟೇ ನೆನಪು ದಣಿದ ದೇಹವನ್ನ ನಿದ್ರಾದೇವಿ ಯಾವಾಗ ಅವರಿಸಿಕೊಂಡಳೋ ತಿಳಿಯದು. ಮರುದಿನ ಬೆಳಿಗ್ಗೆ ನೂರಾರು ವರ್ಷ...
Author - Rangaswamy mookanahalli
ಶ್ರೀಮಂತ ಅನುಭವಗಳ ಧಾರೆಯೆರೆದ ಶ್ರೀಲಂಕಾದ ಹಾರ್ಟನ್ ಪ್ಲೈನ್ಸ್!
ಪ್ರವಾಸ ಹೊರಡುವುದು ಎಂದರೆ ಅವ್ಯಕ್ತ ಆನಂದ. ಇಂತಹ ಆನಂದ ತಿಂಗಳುಗಟ್ಟಲೆ ಇರುತ್ತದೆ. ಅದಕ್ಕೆ ಕಾರಣ ಎಲ್ಲಿ ಹೋಗಬೇಕು, ಎನ್ನುವುದನ್ನು ನಿರ್ಧಾರ ಮಾಡುವುದರಿಂದ ಪ್ರಾರಂಭವಾಗಿ ಹೋಗಬೇಕಾದ ಸ್ಥಳದ ಮಾಹಿತಿ ಸಂಗ್ರಹ ಮಾಡುವುದು; ನಂತರ ಅಲ್ಲಿನ ವಾಸ್ತವ್ಯ, ಏರ್ ಟಿಕೆಟ್ ನಿಂದ ಹಿಡಿದು ಎಲ್ಲಾ ಸೌಕರ್ಯಗಳ ಕಾಯ್ದಿರಿಸುವ ಪ್ರಕ್ರಿಯೆ. ಹೀಗೆ ತಿಂಗಳುಗಳು ಕಳೆದದ್ದು ತಿಳಿಯುವುದೇ...
ಲೋಕೋ ಭಿನ್ನ ರುಚಿಃ
ಯಾವ ಪುಸ್ತಕ ಎನ್ನುವುದು ನೆನಪಿಲ್ಲ ಆದರೆ ನಮ್ಮ ಹೆಚ್ ನರಸಿಂಹಯ್ಯನವರು ಹಲವಾರು ವರ್ಷ ಮೂರು ಹೊತ್ತು ಉಪ್ಪಿಟ್ಟು ತಿಂದುಕೊಂಡು ಜೀವಿಸಿದ್ದರು ಎನ್ನುವುದು ಓದಿದ್ದು ಮಾತ್ರ ನೆನಪಿನಲ್ಲಿದೆ . ಬಾರ್ಸಿಲೋನಾಗೆ ಬಂದ ಹೊಸತು ನನಗೆ ಅಡುಗೆ ಮಾಡಿ ಅಭ್ಯಾಸವಿಲ್ಲ . ಮೊದಲು ಮಾಡಲು ಕಲಿತದ್ದು ಉಪಿಟ್ಟು! ನಂತರ ಹಾಗೂ ಹೀಗೂ ಮಾಡಿ ಹೊಟ್ಟೆಯೆಂಬ ಎಂದೂ ತುಂಬದ ಉಗ್ರಾಣವ ತುಂಬಿಸಲು...
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರಂತೆ!
ಈವತ್ತಿನ ಸಮಾಜದಲ್ಲಿ ಹಿಂದಿನ ಒಂದು ನೈತಿಕತೆ ಉಳಿದಿಲ್ಲ ಎಂದು ಬೊಬ್ಬೆ ಹಾಕುವ ಮುನ್ನ, ನಮ್ಮ ಗಾದೆ ಮಾತುಗಳನ್ನು ಒಮ್ಮೆ ನೋಡಿದರೆ ಸಾಕು. ತಿಳಿಯುವ ವಿಚಾರ ಇಷ್ಟೇ, ಮನುಷ್ಯನ ಮೂಲ ಸ್ವಭಾವ ಅಂದಿಗೂ ಇಂದಿಗೂ ಎಂದೆಂದಿಗೂ ಒಂದೇ! ಗಾದೆ ಮಾತುಗಳು ಅಂದಿನ ಸಮಾಜದ ಹುಳುಕನ್ನ ಸ್ಪಷ್ಟರೂಪದಲ್ಲಿ ತೋರಿಸುತ್ತದೆ. ಜನರ ಸ್ವಭಾವ ಅಂದಿನ ಸಮಾಜದ ಪದ್ದತಿಗಳನ್ನು ಹೇಳುವುದರೊಂದಿಗೆ ...
ಏನ್ಬೇಕು, ಅಂತ ಕೇಳೋಕೆ ಇಲ್ಲಿಲ್ಲ ಮಾಣಿ! ಇದು ವಿಯೆಟ್ನಾಮ್ ಪ್ರವಾಸಿ ತಾಣದ...
ಹರಿಯುವ ಕೊಳದಲ್ಲಿ ಬಿಂದಿಗೆಯೋ ಲೋಟವೋ ಕೊನೆಗೆ ನಮ್ಮ ಕೈ ಬೊಗಸೆಯಲ್ಲಿ ತೆಗೆದುಕೊಂಡ ನೀರಷ್ಟೇ ನಮ್ಮದು. ಅದರಲ್ಲೂ ಕುಡಿದಿದ್ದೆಷ್ಟು ಉಳಿದಿದ್ದೆಷ್ಟು ಎನ್ನುವ ಲೆಕ್ಕಾಚಾರ ಬೇರೆ ಬಿಡಿ. ಪ್ರವಾಸಾನುಭವಗಳು ಕೂಡ ಇದಕ್ಕೆ ಹೊರತಲ್ಲ. ನಮ್ಮ ಅರಿವಿಗೆ ನಿಲುಕಿದ್ದು, ಕಂಡದ್ದು ಕೇಳಿದ್ದು… ಹೊರಟಾಗ ಹೋದ ‘ನಾವು’ಗಿಂತ ಬರುವಾಗಿನ ನಾವು ಎಷ್ಟೆಲ್ಲಾ ಹೊಸ...
ಬೆಳ್ಳಗಿರುವುದೆಲ್ಲ ಹಾಲಲ್ಲ!
ನಾವು ಬದುಕಿನಲ್ಲಿ ನೂರಾರು ಜನರ ಸಂಪರ್ಕಕ್ಕೆ ಬರುತ್ತೇವೆ. ಹಲವರು ಒಳ್ಳೆಯವರು, ಹಲವರು ಕೆಟ್ಟವರು. ಎಲ್ಲರನ್ನೂ ಒಳ್ಳೆಯವರು ಎಂದು ತೀರ್ಮಾನಿಸುವ ಹಾಗಿಲ್ಲ. ನೋಡಲು ಸುಭಗರಂತೆ ಕಂಡರೂ ಕೆಲವೊಮ್ಮೆ ಮೋಸ ಹೋಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ನಮ್ಮ ಹಿರಿಯರು ಈ ರೀತಿ ಸಂಪರ್ಕಕ್ಕೆ ಬಂದವರನೆಲ್ಲ ಒಳ್ಳೆಯವರು ಎಂದುಕೊಂಡು ಬೇಸ್ತು ಬಿದ್ದಿರುವುದು ಸತ್ಯ. ನಾವು ಮಾಡಿದ ತಪ್ಪು...
ಆಪತ್ತಿಗಾದವನೇ ಸ್ನೇಹಿತ /ನೆಂಟ
ಇವತ್ತು ಜಗತ್ತು ಓಡುತ್ತಿರುವ ವೇಗದ ಲೆಕ್ಕಾಚಾರದಲ್ಲಿ ಈ ಮಾತು ನೂರಕ್ಕೆ ನೂರು ನಿಜ. ಬಂಧು-ಬಳಗ ದೂರದ ಮಾತಾಯಿತು. ಒಡಹುಟ್ಟಿದವರು ಕೂಡ ಒಬ್ಬರ ಮುಖ ಒಬ್ಬರು ನೋಡಿ ವರ್ಷಗಳು ಕಳೆದಿರುತ್ತವೆ. ಕೆಲಸ-ಬದುಕು ಅರಸಿ ಭೂಪಟದ ಒಂದೊಂದು ಮೂಲೆಯಲ್ಲಿ ಬದುಕುವ ಜನರದ್ದು ಒಂದು ಮಾತಾದರೆ, ಪಕ್ಕದ ರಸ್ತೆಯಲ್ಲಿದ್ದೂ ಮುಖ ನೋಡದ ಸಂಬಂಧ ಇನ್ನಷ್ಟು ಜನರದ್ದು. ಭೂಮಿಯ ಬೆಲೆ...
ಜೂರಿಚ್‘ನಲ್ಲಿ ಎಲ್ಲಿ ಸಿಕ್ಕೀತು ಚಿತ್ರಾನ್ನ? ಬ್ರೆಡ್ಡು, ಚೀಸು, ಕಾಫಿಯೇ...
ಸ್ವಿಸ್ ಎಂದರೆ ಹಿಂಜಿ ಬಿಟ್ಟ ಹತ್ತಿಯಂತೆ. ಕಣ್ಣು ಕಾಣುವಷ್ಟು ದೂರಕ್ಕೂ ಹರಡಿರುವ ಹಿಮ ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಅದು ಸಾಮಾನ್ಯ. ಜೊತೆಜೊತೆಗೆ ಸ್ವಿಸ್ ವಾಚುಗಳು, ಭಾರತೀಯರ ಹಣ ಸುರಕ್ಷಿತವಾಗಿ ಇಟ್ಟುಕೊಂಡು ಅವರ ಹೆಸರು ಹೇಳದೆ ಗೌಪ್ಯತೆ ಕಾಪಾಡುವ ಬ್ಯಾಂಕುಗಳು, ಬಾಲಿವುಡ್ ಶೂಟಿಂಗ್ .. ಮಸ್ತಕದಲ್ಲಿ ಹಾದು ಹೋಗುತ್ತದೆ ಅಲ್ಲವೇ? ನಿಜ, ಇವು ಸ್ವಿಟ್ಜರ್ಲ್ಯಾಂಡ್...
ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೆ ರಾಜ
ಇವತ್ತು ಬಹಳಷ್ಟು ಕ್ಷೇತ್ರಕ್ಕೆ ಈ ಮಾತು ಅನ್ವಯವಾಗುತ್ತದೆ. ವಿಷಯದ ತಳ ಮುಟ್ಟುವುದು ಇಂದು ಯಾರಿಗೂ ಬೇಡದ ಕೆಲಸ. ಅಂದಿನ ದಿನ ಜೈ ಎನ್ನಿಸಿಕೊಳ್ಳಲು ಎಷ್ಟು ಬೇಕು ಅಷ್ಟು ಮಾತ್ರ ಮಾಡಿ, ಕೈ ತೊಳೆದುಕೊಂಡರೆ ಸಾಕು ಎನ್ನುವರ ಸಂಖ್ಯೆ ದೊಡ್ಡದಿದೆ. ಇಂತಹ ಸಂದರ್ಭದಲ್ಲಿ ಅಲ್ಪಸ್ವಲ್ಪ ತಿಳಿದುಕೊಂಡವರೇ ಮೇಧಾವಿ ಪಟ್ಟಕ್ಕೆ ಏರಿಬಿಡುತ್ತಾರೆ. ಆಗೆಲ್ಲಾ ಸಾಮಾನ್ಯವಾಗಿ ಅಂತಹ...
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ದೂರದಲ್ಲಿರುವ ಬೆಟ್ಟ ಸಮತಟ್ಟವಾಗಿ ಕಾಣುತ್ತದೆ. ದೂರದಿಂದ ಅದನ್ನು ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನು ನೀಡುತ್ತದೆ. ನಿಜದ ಅರಿವು ಆಗಬೇಕೆಂದರೆ ಅದರ ಹತ್ತಿರ ಹೋಗಬೇಕು. ಹತ್ತಿರದಿಂದ ಬೆಟ್ಟದ ಮೇಲಿರುವ ಕಲ್ಲುಮುಳ್ಳುಗಳು ದುರ್ಗಮ ರಸ್ತೆ ಕಾಣಸಿಗುತ್ತದೆ. ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ ಕೂಡ...