ಅಂಕಣ

ಅಕ್ರಮ ಆಗಂತುಕರ ಹಾರಾಟ ಮತ್ತು ‘ಮಾನವ ಹಕ್ಕು ಹೋರಾಟ’

ಭಾರತದ ಉಳಿವಿಗೆ ಹೊಸಹೊಸ ದಾರಿ ಸೃಷ್ಟಿಯಾಗುತ್ತಿದ್ದಂತೆ, ಅದನ್ನು ವಿರೋಧಿಸುವವರು ಧರಿಸುವ ಮುಖವಾಡವೇ ಮಾನವ ಹಕ್ಕು ಹೋರಾಟಗಾರ, ಜಾತ್ಯತೀತವಾದಿ ಹೀಗೆ ಇನ್ನೂ ಏನೇನೋ. ಈಗ ಸದ್ಯದ ಪರಿಸ್ಥಿತಿಯಲ್ಲಿ ಭಾರತವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ, ಅಕ್ರಮ ನುಸುಳುಕೋರರ ಹಾವಳಿ. ಇದನ್ನು ತಡೆಯಲು ಸಿದ್ಧಗೊಳಿಸಿದ ಕರಡು ಪ್ರತಿ ಅಥವ ಕಾನೂನೇ ರಾಷ್ಟ್ರೀಯ ಪೌರತ್ವ ನೋಂಡಣಿ. ಅಕ್ರಮ ನುಸುಳುಕೋರರಿಂದ ಭಾರತದ ರಕ್ಷಣೆಗೆ ಅತ್ಯಂತ ಸೂಕ್ತವಾದ ಕಾನೂನೇ ಈ ಎನ್.ಆರ್.ಸಿ ಅಥವ ರಾಷ್ಟ್ರೀಯ ಪೌರತ್ವ ನೋಂದಣಿ. ಆದರೆ ಇದೇ ಕಾನೂನು ಈಗ ಮಾನವ ಹಕ್ಕು ಹೋರಾಟಗಾರರಿಗೆ ಜೋರು ಕೆಲಸ ಒದಗಿಸಿದೆ. ಅವರು ಅಂಡು ಸುಟ್ಟವರಂತೆ ಆಡುತ್ತಿದ್ದಾರೆ. ಅವರು ಭಾರತದ ಪರ ಹೋರಾಟ ಮಾಡುವ ಬದಲು ಅಕ್ರಮ ನುಸುಳುಕೋರರ ಪರ ನಿಂತಿರುವುದು ಆಶ್ಚರ್ಯಕರ ವಿಚಾರವೇನಲ್ಲ ಆದರೆ ಕೊನೆಯಪಕ್ಷ ಈ ವಿಚಾರದಲ್ಲಾದರೂ ಭಾರತದ ಸಾರ್ವಭೌಮತ್ವದ ಪರ ಅವರು ನಿಲ್ಲುತ್ತಾರೆ ಎಂದು ನಂಬಿದ್ದು ನಮ್ಮಂತಹ ಕೆಲವರು ಮಾಡಿದ ದೊಡ್ಡ ತಪ್ಪು. ಹಾಗಾದರೆ ರಾಷ್ಟ್ರೀಯ ಪೌರತ್ವ ನೋಂದಣಿ ಕೇವಲ ಅಸ್ಸಾಂಗೆ ಸೀಮಿತವಾಗಬೇಕ? ಇದು ಭಾರತದ ಎಲ್ಲಾ ರಾಜ್ಯದಲ್ಲೂ ಜಾರಿಗೆ ಬರಬೇಕು.

ಅಳವಡಿಕೆಯ ಪರಿಣಾಮ

ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರ ಸಂಖ್ಯೆ ಸುಮಾರು ಹತ್ತು ಕೋಟಿಗೂ ಮೀರಿದೆ. ಅಂದರೆ ಇವರ್ಯಾರೂ ಭಾರತೀಯರೇ ಅಲ್ಲ.  ಎನ್ ಆರ್ ಸಿ ಯಾವಾಗ ಅಸ್ಸಾಂ ನಂತಹ ರಾಜ್ಯದಲ್ಲಿನ ಸುಮಾರು ನಲವತ್ತು ಲಕ್ಷ ಅಕ್ರಮ ವಲಸಿಗರನ್ನು ಗುರುತಿಸುವ ಕೆಲಸ ಮಾಡಿತೋ, ಆಗ ಸೋ ಕಾಲ್ಡ್ ಲಿಬರಲ್ಸ್ ಗಳ ಮಾನವ ಹಕ್ಕು ಹೋರಾಟ ಎಂಬ ನಕಲಿ ಹಾರಾಟ ಶುರುವಾಯಿತು. ಸುಮಾರು ಮೂರೂವರೆ ಕೋಟಿ ಜನಸಂಖ್ಯೆ ಇರೋ ಅಸ್ಸಾಂನಂತಹ ರಾಜ್ಯದಲ್ಲಿಯೇ ನಲವತ್ತು ಲಕ್ಷ ಜನ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದರೆ ಇಡೀ ಭಾರತದಲ್ಲಿನ್ನೆಷ್ಟು ಜನ ಅಕ್ರಮ ಜನ ವಾಸಿಸುತ್ತಿರಬಹುದು. ಭಾರತದ ಅದೆಷ್ಟೋ ಸಮಸ್ಯೆಗೆ ಈ ರಾಷ್ಟ್ರೀಯ ಪೌರತ್ವ ನೋಂದಣಿ ಕಾರ್ಯಕ್ರಮ ಪರಿಹಾರವಾಗಬಲ್ಲುದು ಅಲ್ಲವ? ಆದರೆ ವಿಚಿತ್ರ ಎಂಬಂತೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಎನ್‌ಆರ್‌ಸಿ ಪರಿಷ್ಕೃತ ಕರಡು ಪಟ್ಟಿಯಿಂದಾಗಿ ಅಸ್ಸಾಂ ಜನರ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿವೆ. ವಿಪಕ್ಷಗಳ ಉದ್ದೇಶವೇನು ಹಾಗಾದರೆ? ಮೋದಿ ಮಾಡಿದ್ದೆಲ್ಲವನ್ನೂ ವಿರೋಧಿಸಬೇಕೆಂಬ ‘ಬೈ ಲಾ’ವನ್ನೇನಾದರೂ  ಕಾಂಗ್ರೆಸ್ ಪಕ್ಷದಲ್ಲಿ ಸೇರಿಸಲಾಗಿದಯೇ?

ಇದೀಗ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದೊಂದಿಗೆ ಮೋದಿ ಸರಕಾರದ ಉಸ್ತುವಾರಿಯಲ್ಲಿ 1951 ಹಾಗೂ 1971ರ ಜನಗಣತಿ ಆಧಾರಿತವಾಗಿ ಅಸ್ಸಾಂನಲ್ಲಿ “ರಾಷ್ಟ್ರೀಯ ಪೌರ ಹೊತ್ತಗೆ’ಯ ಪುಟಗಳ ಪ್ರಥಮ ಕರಡು ಪ್ರತಿ ಹೊರ ಬಂದಿದೆ. ಆಕ್ಷೇಪಣೆಗಳಿದ್ದರೆ, ಸೂಕ್ತ ದಾಖಲೆಯೊಂದಿಗೆ ಮುಂದೆ ಬಂದು, ನ್ಯಾಯದಾನ ಪಡೆಯಲೂ ಅನುವು ನೀಡಲಾಗಿದೆ.ನಮ್ಮ ಸಂವಿಧಾನ ತನ್ನ 19 (1) (ಡಿ, ಇ) ಉಪವಿಧಿಗಳಲ್ಲಿ ಹಲವು ವಿಧಿ ನಿಷೇಧಗಳೊಂದಿಗೆ ಕೇವಲ ‘ಭಾರತದ ಪೌರರಿಗೆ’ ಮಾತ್ರ ನಿರಾತಂಕವಾಗಿ ಸಂಚರಿಸುವ ಹಾಗೂ ನೆಲಸುವ ಸ್ವಾತಂತ್ರ್ಯ ನೀಡಿದೆ. ವಿನಹ ಯಾವುದೇ ರಾಷ್ಟ್ರ ನಿಷ್ಠೆ, ಕಾನೂನು ಚೌಕಟ್ಟು ಬಗ್ಗೆ ಗೌರವ ಇಲ್ಲದೆ ಪರದೇಶಿಗರಿಗಿಲ್ಲ. ‘ಅವರಿಗೂ ನೀಡಿ’ ಎಂದು ಒತ್ತಾಯಿಸುವ ರಾಜಕಾರಣಿಗಳು, ಗುಲ್ಲೆಬ್ಬಿಸುವ ಬುದ್ಧಿಜೀವಿಗಳೆನಿಸಿದ ಮಂದಿ ತಂತಮ್ಮ ಮನೆಯೊಳಗೇ ಒಂದಿಬ್ಬರು ಅಪರಿಚಿತ ಆಗಂತುಕರಿಗೆ ನೆಲೆ ಕಲ್ಪಿಸಬಲ್ಲರೇ? ಹಾಗಿದ್ದರೆ ವಿಶಾಲ ದೇಶ ಎಂದ ಮೇಲೆ ಅಂತಹ ಬೇಜಾವಾಬ್ದಾರಿಯ ಪ್ರದರ್ಶನ ಸಾಧುವೇ? ಇದು ನಾಳೆಗಳ ಬಗೆಗಿನ ಜ್ವಲಂತ ಪ್ರಶ್ನೆ, ನಾಡಿನ ನೇರ ಪ್ರಶ್ನೆ.1971ರ ಮಾರ್ಚ್ 24ಕ್ಕಿಂತ ಹಿಂದಿನಿಂದಲೂ ಅಸ್ಸಾಂನಲ್ಲಿ ನೆಲೆಸಿರುವವರು ಮತ್ತು ಅವರ ಮಕ್ಕಳನ್ನು ಮಾತ್ರ ಭಾರತದ ಪೌರರು ಎಂದು ಪರಿಗಣಿಸಲಾಗುತ್ತದೆ. ಬಾಂಗ್ಲಾದೇಶ ಪ್ರತ್ಯೇಕ ರಾಜ್ಯವಾದ ಬಳಿಕ ಅಸ್ಸಾಂಗೆ ಬಾಂಗ್ಲಾದಿಂದ ಹಲವು ವಲಸಿಗರು ಬಂದರು. 1972, ಮಾರ್ಚ್‌ 19ರಂದು ದ್ವಿಪಕ್ಷೀಯ ಸ್ನೇಹ ವೃದ್ಧಿಗೆ ಭಾರತ-ಬಾಂಗ್ಲಾದೇಶ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ, ವಲಸಿಗರು ಆಗಮಿಸುವುದು ಮುಂದುವರೆಯಿತು.ಆಗ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಭಾರೀ ಆಂದೋಲನ ಆರಂಭವಾಯಿತು. ಅಸ್ಸಾಂನ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಈ ಆಂದೋಲನದ ಉದ್ದೇಶವಾಗಿತ್ತು. ಅಸ್ಸಾಂ ಸ್ಟೂಡೆಂಟ್ ಯೂನಿಯನ್ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಈ ಕುರಿತು ಗಮನ ಹರಿಸುವಂತೆ ಮನವಿ ಮಾಡಿತು. ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಡಿಟರ್‌ಮಿನೇಷನ್ ಬೈ ಟ್ರಿಬ್ಯುನಲ್ ಕಾಯ್ದೆ 1983 ಅನ್ನು ಮಂಡನೆ ಮಾಡಿತು. ಈ ಕಾಯ್ದೆ ಅಸ್ಸಾಂ ರಾಜ್ಯಕ್ಕೆ ಮಾತ್ರ ಅನ್ವಯವಾಗುತ್ತದೆ. ಈ ಕಾಯ್ದೆ ಮೂಲಕ ವಲಸಿಗರನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ.ಇಷ್ಟು ಹೋರಾಟಗಳು ನಡೆದಿದ್ದು ಒಂದು ಸಂಸ್ಕೃತಿಯ ಉಳಿವಿಗಾಗಿತ್ತು. ಇದನ್ನು ಪ್ರಾರಂಭ ಮಾಡಿದ್ದೆ ಕಾಂಗ್ರೆಸ್ ಆದರೆ ಈಗ ಅವರ ವರಸೆಯೇ ಬದಲಾಗಿದೆ. ಹಾಗಾದರೆ ಇದು ಕಾಂಗ್ರೆಸ್ ನವರ ಡಬಲ್ ಸ್ಟಾಂಡರ್ಡ್ ಗೆ ಮತ್ತೊಂದು ಉದಾಹರಣೆಯಲ್ಲವ?

ಗಡಿಯೊಳಗೆ ನುಸುಳುವವರನ್ನು ಬಾಚಿ ತಬ್ಬಿಕೊಂಡು ಮನೆಕಟ್ಟಲು  ಜಾಗಮಾಡಿಕೊಟ್ಟು, ಪಡಿತರ ಚೀಟಿ, ಮತದಾರರ ಪಟ್ಟಿಯಲ್ಲಿ ನಾಮಧಾರಿತ್ವ, ಬ್ಯಾಂಕ್‌ ಸಾಲ ಸೌಲಭ್ಯ, ಪಾಸ್‌ಪೋರ್ಟ್‌ ಕೊನೆಗೆ ಇವೆಲ್ಲದ್ದಕ್ಕೂ ಮಾತೃಸ್ವರೂಪವಾಗಿ ಆಧಾರ್‌ ನೀಡುವಿಕೆ ಹೀಗೆ ನಮ್ಮ ರಾಜಕೀಯ ಸೋಗಲಾಡಿಗಳ ಉದಾರೀಕರಣ ತೆರೆದುಕೊಳ್ಳುತ್ತದೆ. ಈ ತೆರನಾದ ಸ್ವಾಗತ ಸಾಧುವೇ? ಇದೆಲ್ಲಾ ಕತೆಯಲ್ಲ , 1951ರ ಮಾರ್ಚ್‌ 24, 1971ರ ಮಾರ್ಚ್‌ 24 ಹಾಗೂ 2001ರ ಜನಗಣತಿ-ಹೀಗೆ ಸಾಲು ಸಾಲು ಲೆಕ್ಕಾಚಾರಗಳು ತೆರೆದಿಡುತ್ತಿರುವ ಈಶಾನ್ಯ ಭಾರತದ ಅದರಲ್ಲಿಯೂ ಅಸ್ಸಾಂ ಗುಡ್ಡಬೆಟ್ಟ ಬಯಲು ಕಂಡ ವಾಸ್ತವಿಕತೆ- ವ್ಯಥೆ. ಇದಕ್ಕೆ ಉತ್ತರವಾಗಿ ನಿಲ್ಲವಂತಹ ಕಾನೂನು ಯಾವಾದಾದರೂ ಇದ್ದರೆ ಅದು ರಾಷ್ಟ್ರೀಯ ಪೌರತ್ವ ನೋಂದಣಿ ಎನ್ನಬಹುದು.

ದೇಶ ಎಂಬುದು ಯಾವುದೇ ರಾಜಕಾರಣಿಯ, ಕುಟುಂಬದ ಸ್ವಯಾರ್ಜಿತ ಸ್ವತ್ತಂತೂ ಅಲ್ಲ. 2005ರಲ್ಲಿ “ಅಕ್ರಮ ನುಸುಳುಕೋರರಿಗೆ ಕೆಂಪು ಕಮ್ಯುನಿಸ್ಟರು ಹಸಿರು ನಿಶಾನೆ ತೋರುತ್ತಿದ್ದಾರೆ, ಇದನ್ನು ಕಮ್ಯೂನಿಸ್ಟ್  ರು ಮಾಡುತ್ತಿರುವುದು ರಾಜಕೀಯ ಲಾಭಕ್ಕೆ’ ಎಂದು ರಾಜೀನಾಮೆಯ ಸ್ಟಂಟ್‌ ಮಾಡಿದವರು ಇದೇ ಬಂಗಾಳದ ದೀದಿ. ಇಂದು “ಸ್ವಲಾಭಕ್ಕೆ’ ಪಶ್ಚಿಮ ಬಂಗಾಳದಲ್ಲಿದ್ದುಕೊಂಡು ನೆರೆಯ ಆಸ್ಸಾಮ್‌ ರಾಜ್ಯದ ಸುಮಾರು 40 ಲಕ್ಷ ಅಗಾಧ ಸಂಖ್ಯೆಯ ಅಕ್ರಮ ಬಾಂಗ್ಲಾದೇಶಿಯರ ಬಗ್ಗೆ ಎಲ್ಲಿಲ್ಲದ ಕರುಣೆ, ಮೊಸಳೆ ಕಣ್ಣೀರು ಸುರಿಸುವುದು ಏಕೆ? ತನ್ನ ಪಟ್ಟಭದ್ರ ಹಿತಾಸಕ್ತಿಗಾಗಿಯೇ 1985ರ ರಾಜೀವ ಗಾಂಧಿ ಸರಕಾರದ ಒಪ್ಪಂದದನ್ವಯ, ಅಂದಿನ ವಿದ್ಯಾರ್ಥಿ ಸಂಘಟನೆಗಳಿಗೆ ನೀಡಿದ ವಾಗ್ಧಾನದಂತೆ ಅಕ್ರಮ ನುಸುಳುಕೋರರ ಹೊರ ನೂಕುವ ಪ್ರಕ್ರಿಯೆ ಆರಂಭಗೊಳ್ಳಲೇ ಇಲ್ಲ. ಏಕೆ?

ಅಸ್ಸಾಂನಲ್ಲಿರುವ ಜನರೇ ಬಾಂಗ್ಲಾ ಗಡಿಯ ಪ್ರದೇಶಕ್ಕೆ ಹೋಗಲು ಹೆದರುತ್ತಾರೆ. 1951ರಿಂದ ಅಂದಿನ ಪೂರ್ವ ಪಾಕಿಸ್ತಾನಿಯರು ಒಳನುಗ್ಗಿ, “ಭಾರತದ ಪೌರತ್ವದ ಸರ್ವಸ್ವವನ್ನೂ’ ತಮ್ಮ ಪಾಲಾಗಿಸಿಕೊಂಡಿದ್ದಾರೆ. 1971ರ ಹೋರಾಟದಿಂದ ಬಾಂಗ್ಲಾದೇಶ ನಿರ್ಮಾಣದ ಬಳಿಕವೂ ನಮ್ಮ ನೆಲದಲ್ಲೇ ಅಂದು ಬಂದ ನಿರಾಶ್ರಿತರು ನೆಲೆನಿಂತರು. ಮರಳಿ ಹೋಗಿಯೇ ಇಲ್ಲ. ಇಲ್ಲಿನ ಎಂ.ಎಲ್‌.ಎ., ರಾಜಕೀಯ ನಾಯಕರು ಎಲ್ಲರೂ ಮೂಲತಃ ಬಾಂಗ್ಲಾ ಮುಸ್ಲಿಮರೇ. ಹಾಗಾಗಿ ಇಲ್ಲಿ ಮಾತ್ರವಲ್ಲ ಕರಿಂಗಂಜ್‌, ಬಾಪೆìಟಾ ಹೀಗೆ ಒಟ್ಟು 8 ಜಿಲ್ಲೆಗಳಲ್ಲಿ ಅವರದೇ ಬಾಹುಳ್ಯ…! ಇಷ್ಟೆಲ್ಲ ನಮ್ಮ ಅಸ್ಸಾಂ ನಲ್ಲಿ ನಡೆಯುತ್ತದೆ ಅಂದರೆ ನಾವೆಲ್ಲ ಬೆಚ್ಚಿಬೀಳಲೇ ಬೇಕಲ್ಲವೇ?

ಕಾಂಗ್ರೆಸ್ಸಿಗರೇ ಮತ್ತು ತಥಾಕಥಿತ ಬುದ್ಧಿಜೀವಿಗಳೇ, ಭಾರತೀಯತೆಯೆದುರು ನಿಮ್ಮ ಮಾನವ ಹಕ್ಕು ಹೋರಾಟ ಎನ್ನೋ ನಾಟಕ ಬಹಳ ದಿನ ನಡೆಯುವುದಿಲ್ಲ. ಭಾರತಾಂಬೆಯನ್ನೇ ಅಡವಿಡಲು ಹೊರಟಿರುವ ನಿಮ್ಮಂತಹ ತಾಯ್ಗಂಡ ಮನಸ್ಥಿತಿಯ ಜನರನ್ನೂ ಭಾರತಾಂಬೆ ಪ್ರೀತಿಯಿಂದ ಸಹಿಸಿಕೊಂಡಿದ್ದಾಳೆ‌‌. ಭಾರತವೆಂದರೆ ‘ಆ ಒಂದು ಕುಟುಂಬ’ ಎನ್ನುವ ಮನಸ್ಥಿತಿಯಿಂದ ಆದಷ್ಟು ಬೇಗ ಗುಲಾಮರು ಹೊರಬರಲಿ ಎಂಬುದೇ ನಮ್ಮ ಆಶಯ.

ಭಾರತ ತಿಂದಷ್ಟು ಪೆಟ್ಟನ್ನು ಬಹುಶಃ ಬೇರಿನ್ಯಾವ ರಾಷ್ಟ್ರವೂ ತಿಂದಿರಲಿಕ್ಕಿಲ್ಲ. ಜಾತ್ಯಾತೀತ ಮನೋಭಾವ ಈಗ ಹಿಡಿದಿರುವ ಹಾದಿ ರಾಷ್ಟ್ರದ್ರೋಹದ್ದ? ಇತಿಹಾಸ ಕರಾಳ ಎಂದು ವಾಸ್ತವದಲ್ಲಿ ಯೋಚಿಸುವಾಗ ಈ ವಾಸ್ತವವನ್ನೂ ಕರಾಳ ಮಾಡಹೊರಟವರು ನಮ್ಮ ಭವ್ಯ ಭಾರತದ ಭವಿಷ್ಯಕ್ಕೆ ಮುಳುವಾಗಬಾರದು ಎಂಬುದೇ ನಮ್ಮ ಇರಾದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!