X

‘ದಂಡ’ ನಾಯಕರ ಈ ಮೌನ ಸಹ್ಯವೇ..?

ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ನಿರಂತರವಾದ ದಾಳಿಗಳು ನಡೆಯುತ್ತಲೇ ಇವೆ. ಕೇವಲ ದಾಳಿಯಲ್ಲ, ಹಾಡು ಹಗಲೇ ಬರ್ಬರವಾಗಿ ಕೊಂದು ಹಾಕಲಾಗುತ್ತಿದೆ. ಅಮಾಯಕರನ್ನು ರಕ್ಷಿಸಿ, ತಪ್ಪಿತಸ್ತರ ವಿರುದ್ಧ…

Guest Author

ಎಲ್ಲರೊಳಗಿರುವನೊಬ್ಬ !

  ಎಲ್ಲರೊಳಗೂ ಮತ್ತೊಬ್ಬನಿರುತ್ತಾನೆ. ಇದು ಕಟು ಸತ್ಯ. ಆದರೆ ನಮ್ಮಲ್ಲಿ ಯಾರೂ ಅವನಿಗೆ ಮಹತ್ವ ಕೊಡುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿಯ ಒತ್ತಡ , ಮತ್ತೊಮ್ಮೆ ಇನ್ನೊಬ್ಬರಿಗೆ ನೋವಾಗುವುದೇನೋ ಎನ್ನುವ…

Guest Author

ಬಣ್ಣದ ಚಿಟ್ಟೆ

"If you love a flower, don’t pick it up. Because if you pick it up it dies and it ceases…

Guest Author

ಬಾಲ್ಕನಿ ಬರ್ಡಿಂಗ್ ನ 4 ನೇ ಹಕ್ಕಿ – ಪಿಕಳಾರ.

ಪರಿಸರ ವೀಕ್ಷಣೆ ನನಗೆ ಮೊದಲಿನಿಂದಲೂ ಆಸಕ್ತಿಯ ವಿಷಯವೇ. ಹೈಸ್ಕೂಲಿನ ವಿಜ್ಞಾನದಲ್ಲಿ ಓಡುತಿದ್ದ ಪಾಠಗಳ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುತಿತ್ತು.ಜೀವಶಾಸ್ತ್ರವನ್ನು ಪಿ‌ಯೂ‌ಸಿಯಲ್ಲಿ ಅರಿಸಿಕೊಂಡಾಗಲೂ ನಮ್ಮ ಪರಿಸರವೇ ಜೀವಶಾಸ್ತ್ರದ ಪ್ರಯೋಗಶಾಲೆಯಾಗಿತ್ತು. ಅತಿಯಾದ crazy ಯಾಗಿ ಅಲ್ಲದಿದ್ದರೂ ಅವಕಾಶ ಸಿಕ್ಕಿದಾಗ ಕಣ್ಣು ಜಾಸ್ತಿ ವಿಷಯಗಳನ್ನು ವೀಕ್ಷಿಸಲು ಹವಣಿಸುತ್ತದೆ.ಪಕ್ಷಿ ವೀಕ್ಷಣೆಗೂ  ಅತಿಯಾಗಿ ಹಚ್ಚಿಕೊಂಡಿರಲಿಲ್ಲ.ಪಕ್ಷಿಗಳ ಬಗ್ಗೆ ಆಸಕ್ತಿ ಬರಲು ಕಾರಣವಾಗಿದ್ದು ಇದೇ ಪಿಕಳಾರ.ನಮ್ಮ ಮಾವನ ಮನೆಯ ಕೈತೋಟದಲ್ಲಿ ಕೆಮ್ಮೀಸೆ ಪಿಕಳಾರ ಗೂಡು ಕಟ್ಟಿ ಮೂರು ಮರಿಗಳನ್ನು ಬೆಳೆಸಿತ್ತು.ತುಂಬಾ ಕೆಳಸ್ತರದಲ್ಲಿ ಚಿಕ್ಕ ಹೂವಿನ ಗಿಡದಲ್ಲಿ ಗೂಡು ಕಟ್ಟಿದ್ದನ್ನು ಅದಕ್ಕಿಂತ ಮೊದಲು ನೋಡಿರಲಿಲ್ಲ.ಆ ಗೂಡನ್ನು ನೋಡಿದ ಮೇಲೆ ನನ್ನ ಕಣ್ಣು, ಪಕ್ಷಿಗಳ ಮುಖ್ಯವಾಗಿ ಈ ಪಿಕಳಾರ ಹಕ್ಕಿಯ ಗೂಡು ಕಟ್ಟುವ ದೃಶ್ಯಗಳನ್ನು ಇನ್ನೂ ಹೆಚ್ಚಾಗಿ ಹುಡುಕಲು ಶುರು ಮಾಡಿದವು.ಮನೆಯ ಕೈ ತೋಟಗಳಲ್ಲಿ, ಸಣ್ಣ ಸಣ್ಣ ಪೊದೆಗಳಲ್ಲಿ ಈ ಪಿಕಲಾರದ ಗೂಡುಗಳು ಹಲವಾರು ಸಿಕ್ಕಿದರೂ ಸೂಕ್ಷ್ಮ ವೀಕ್ಷಣೆ ಮಾಡಲಾಗುತ್ತಿರಲಿಲ್ಲ. ನಾವಿರುವ ಅಪಾರ್ಟ್ಮೆಂಟಿನ 8ನೇ ಅಂತಸ್ತಿನಲ್ಲಿರುವ ನಮ್ಮ ಮನೆ ಬಾಲ್ಕನಿಗೆ  ಕೆಮ್ಮೀಸೆ ಪಿಕಳಾರ ಜೋಡಿಗಳು  ಆಗಾಗ್ಗೆ ಬಂದು ಆಹಾರಕ್ಕಾಗಿ ಹುಡುಕಾಡುತಿತ್ತು. ಮದ್ಯಾಹ್ನನ ಸಮಯದಲ್ಲಿ ಬಾಲ್ಕನಿಯಲ್ಲಿ  ಬೆಳೆಸಿದ “ಅಂತರಗಂಗೆ” ಯ ಕುಂಡದಲ್ಲಿನ ನೀರನ್ನು ಕುಡಿದು ಹೋಗುತಿದ್ದವು. ಕೆಲವು ದಿನಗಳ ನಂತರ ಒಮ್ಮೆ ಕತ್ತಲಾದ  ನಂತರ ಬಾಲ್ಕನಿಯಲ್ಲಿ ಕಟ್ಟಿರುವ ಹಗ್ಗದಲ್ಲಿ ಬಟ್ಟೆ ಒಣಗಿಸಲು ಹೋದಾಗ ಆಶ್ಚರ್ಯ ಕಾದಿತ್ತು.ಒಂದು ಕೆಮ್ಮೀಸೆ ಪಿಕಳಾರ ಆ ಹಗ್ಗ ಕಟ್ಟಿದ ಮರದ ಫ್ರೇಮೀನ ಮೇಲೆ ಮುದುಡಿಕೊಂಡು ಕುಳಿತಿತ್ತು.ತನ್ನ ಕೊಕ್ಕು ಮತ್ತು ಕೊರಳನ್ನು ದೇಹದ ಪುಕ್ಕಗಳ ನಡುವೆ ಹುದುಕಿಸಿಕೊಂಡು ಕುಳಿತಿರುವ ಪಿಕಳಾರ ಹಕ್ಕಿಯು ಫೋಟೋ ಕ್ಲಿಕ್ಕಿಸಿದಾಗಲೂ ಹಾರಲಿಲ್ಲ.!!!ನಾವು ಬಟ್ಟೆ ಹರಡುವಷ್ಟು ಹೊತ್ತು ಅದು ಹೆದರಿಕೊಳ್ಳದೆ ಅಲ್ಲಿಯೇ ಕುಳಿತಿತ್ತು.ಇಲ್ಲಿ ಯಾಕೆ ಇದು ಕುಳಿತುಕೊಳ್ಳುತ್ತಿದೆ ಎಂಬುದು ನಮ್ಮ ಪ್ರಶ್ನೆಯಾಗಿತ್ತು.   First sight---ತಲೆ ಮತ್ತು ಕೊಕ್ಕನ್ನು ಗರಿಗಳೊಳಗೆ ಅಡಗಿಸಿಕೊಂಡಿದ್ದಾಗ ಹೀಗೆ ಒಂದೆರಡು ದಿನ ಕಳೆದ ಮೇಲೆ ತಿಳಿದ ವಿಷಯ ತುಂಬಾ ಆಶ್ಚರ್ಯಕರವಾಗಿತ್ತು.ಆ ಪಿಕಳಾರ ನೆರೆಮನೆಯ ಬಾಲ್ಕನಿಯ ಇದೇ ರೀತಿಯ ಬಟ್ಟೆ ಒಣಗಿಸುವ ಹಗ್ಗದ ಮರದ ಫ್ರೇಮೀನ ಮೇಲೆ ಗೂಡು ಕಟ್ಟಿತ್ತು!!! ತಕ್ಷಣ‌ನಾವು ಅಲ್ಲಿಗೆ ಹೋಗಿ ನೋಡಿದರೆ ಆವಾಗಲೇ ಅದು ಮೊಟ್ಟೆ ಇಟ್ಟಾಗಿತ್ತು.!! ಸಣ್ಣ ಸಣ್ಣ ಪೊದೆಗಳಲ್ಲಿ ಕೆಳಸ್ತರದಲ್ಲಿ ಮಾತ್ರ ಗೂಡನ್ನು ನೋಡಿದ ನನಗೆ ಅದು ನೆರೆಮನೆಯ ಬಾಲ್ಕನಿಯಲ್ಲಿ, ಅದೂ ಎಂಟನೇ ಅಂತಸ್ತಿನಲ್ಲಿ, ಗೂಡನ್ನು ನೋಡಿ ಆಶ್ಚರ್ಯವಾಯಿತು.ಅವರ ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳಿರುವುದರಿಂದ ಯಾವಾಗಲೂ ಮಕ್ಕಳು ಹೊರ…

Nagaraj Adiga

ನೊಂದ ಮನಸ್ಸುಗಳಿಗೆ ನನ್ನ ಕಿವಿಮಾತು…

ಎಲ್ಲಿಂದ ಶುರು ಮಾಡೋದು ಅಂತ ಗೊತ್ತಾಗ್ತಿಲ್ಲ. ಆತ್ಮಹತ್ಯೆಯಿಂದನೇ ಶುರು ಮಾಡೋಣ... ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ದೊಡ್ಡ ಖಾಯಿಲೆ ಅಂದರೆ ಅದು "ಆತ್ಮಹತ್ಯೆ". ಆತ್ಮಹತ್ಯೆ ಏಕೆ ಮಾಡ್ತಾರೆ???…

Guest Author

​ಆಕೆ ತಿಂಗಳಲ್ಲಿ ಮೂರು ದಿನ ಸತ್ತು, ಮತ್ತೆ ಬದುಕುತ್ತಾಳೆ..!

ಪ್ರತಿನಿತ್ಯ ರಾತ್ರಿ ಊಟವಾದ ಬಳಿಕ ನನ್ನಾಕೆಗೆ ಪೋನ್ ಮಾಡಿ ಮಾತನಾಡುವುದು ದಿನಚರಿಯಲ್ಲಿ ನನಗರಿವಿಲ್ಲದೇ ಒಗ್ಗಿಹೋಗಿತ್ತು. ಅಂದು ಕೂಡ ತುಸು ರಾತ್ರಿಯಾದರೂ ಹಾಸ್ಟೆಲ್'ನಲ್ಲಿ ಇರುವ ಕಾರಣಕ್ಕೆ ಸ್ನೇಹಿತೆಯರೊಡನೆ ಓದುತ್ತಿರಬಹುದೆಂದು…

Guest Author

ಮಕ್ಕಳನ್ನು ಮನುಷ್ಯರನ್ನಾಗಿ ಮಾಡಿ ,ಮೆಷೀನ್’ಗಳನ್ನಾಗಿಯಲ್ಲ.

     ಪ್ರತಿ ವರ್ಷ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾದಾಗ, ಪರೀಕ್ಷೆಯಲ್ಲಿ ಪಾಸಾದ ಮಕ್ಕಳ ಹೆತ್ತವರ ಆನಂದಕ್ಕಿಂತ , ಮೇಲಾಗಿ ಜೀವಕಳೆದುಕೊಂಡ/ಫೇಲಾಗುವ ಭಯದಿಂದ ಜೀವ…

Arjun Devaladakere

ಕಾಡುವ ಪೈಜಾಮ ಹುಡುಗ

ಅಮಾನುಷ ಸಾಹಸ ಸನ್ನಿವೇಶಗಳು, ಅಸಾಧಾರಣ ಗ್ರಾಫಿಕ್ಸ್ ಗಳ ಭರಾಟೆಯಲ್ಲಿ ಕಳೆದು ಹೋದ ಹಾಲಿವುಡ್ ಚಿತ್ರಗಳ ನಡುವೆ ದಿ ಬಾಯ್ ಇನ್ ಸ್ಟ್ರೈಪ್ಡ್ ಪೈಜಾಮ ದಂತಹ ಸೂಕ್ಷ್ಮ ಸಂವೇದಿ…

Harikiran H

ಆ ಮೆಟ್ಟಿಲುಗಳಿಗೆ ಇನ್ನಾದರೂ ಮುಕ್ತಿ ಸಿಕ್ಕೀತೆ??!

ನಮ್ಮ ರಾಜ್ಯದ ಮಟ್ಟಿಗೆ ಈ ಮೆಟ್ಟಿಲುಗಳು ಸು(ಕು)ಪ್ರಸಿದ್ಧವೇ ಸರಿ. ಪತ್ರಿಕೆ, ದೂರದರ್ಶನ, ಸಾಮಾಜಿಕ ಮಾಧ್ಯಮಗಳಲ್ಲಿ ಇವು ವಾರಕ್ಕೆ ಒಂದೆರಡು ಬಾರಿಯಾದರೂ ಸುದ್ದಿಯಾಗದೇ ಹೋಗುವುದಿಲ್ಲ. ಒಂದಷ್ಟು ಪ್ರತಿಭಟನಾಕಾರರಿಗೆ ಈ…

Sandesh H Naik

ಸುದ್ದಿವಾಹಿನಿಗಳೂ, ಚರ್ಚಾಕೂಟಗಳೂ, ನಿರೂಪಕರುಗಳೂ, TRP ಅಂಕೆಗಳೂ ಹಾಗು ವೀಕ್ಷಕರುಗಳೂ ಜೊತೆಗೆ ಸಮಾಜಗಳು…!!

ಅದು ದೇಶದ ಅತಿ ಪ್ರಸಿದ್ಧ ಸುದ್ದಿವಾಹಿನಿ. ಪ್ರತಿದಿನ ಸಂಜೆ ಎಂಟು ಘಂಟೆಗೆ ಸರಿಯಾಗಿ ಒಂದಲ್ಲೊಂದು ವಿಷಯದ ಕುರಿತು ಅಲ್ಲಿ ಚರ್ಚಾಕೂಟವಿರುತ್ತದೆ. ಕರಿಕೋಟನ್ನು ಧರಿಸಿ ಕೂತಿರುವ ನಿರೂಪಕ ಮೊದಲು…

Sujith Kumar