ಕವಿತೆ

“ದೇವರ ಗುಟ್ಟು” 

ಕಳೆದ ರಾತ್ರಿ ಮದದಲ್ಲಿ
ಉನ್ಮತ್ತ ದೇವರು!
ಬಾಯ್ತಪ್ಪಿ ದೊಡ್ಡ ಗುಟ್ಟೊಂದ ಅರುಹಿದ …
ಭುವಿಯ ಮೇಲೆ ಒಬ್ಬನೇ ಒಬ್ಬನಿಲ್ಲ
ನನ್ನ ದಯೆಯ ಅಗತ್ಯವಿರುವವ…
ದಯೆಯಾದರೂ ಯಾಕೆ?
ಪಾಪವೆಂಬುದೇ ಇಲ್ಲದಿರುವಾಗ!
ಆ ಪ್ರಿಯದೇವ ಎಂತಹ ತಲ್ಲೀನನಾಗಿದ್ದ!
ನನ್ನ ಮೇಲೆ ಅವನೇ ಧಾರೆಯಾದ…
ಆನಂದದ ಅತಿರೇಕದಲ್ಲಿ
ನಾನೂ ಆ ರಸವ ಕುಡಿದೆ
ಕೊಚ್ಚಿ ಹರಿದೆ…
ಓ ಪ್ರಿಯರೇ,
ಆಸ್ವಾದಿಸಿ ಚೈತನ್ಯವ
ನನ್ನಿಂದ…
ಪ್ರಿಯ ದಾರಿಹೋಕರೇ,
ಬನ್ನಿ ಹೀರಿರಿ
ನಿಮ್ಮ ಬೊಗಸೆಯಲ್ಲಿ
ಹರಿವ ಮಾಣಿಕ್ಯವ
ನನ್ನೆದೆಯಿಂದ
ದೇವನಿತ್ತ ಚಿರಂತನ ಚಿಲುಮೆಯಿಂದ!
****
“The Great Secret”
God was full of Wine last night,
So full of wine
That He let a great secret slip.
He said:
There is no man on earth
Who needs a pardon from Me –
For there is really no such thing,
No such thing
As Sin!
That Beloved has gone completely Wild-He has poured Himself into me!
I am Blissful and Drunk and Overflowing.
Dear world,
Draw life from my Sweet Body,
Dear wayfaring souls,
Come drink your fill of liquid rubies,
For God has made my heart
An Eternal Fountain!
****
– Hafiz
– Translated by: Daniel Ladinsky
ಕನ್ನಡಕ್ಕೆ:
– ಡಾ. ಪಲ್ಲವಿ ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!