Featured ಪ್ರಚಲಿತ

ಇಂದು ಪೊಲೀಸರಿಗೆ ಒದ್ದವರೇ ನಾಳೆ ಮತ್ತೆ ಗದ್ದುಗೆಯಲ್ಲಿ ಕೂತರೆ ನಾವು ನೀವು ದೇಶಾಂತರ ಹೋಗಬೇಕಾದೀತು!

ಸಿದ್ದರಾಮಯ್ಯನವರ ಸರಕಾರದ ಸಾಧನೆ ಇದೀಗ ಇಲ್ಲಿಗೆ ಬಂದು ನಿಂತಿದೆ. ಮೊನ್ನೆಯಷ್ಟೇ ಐಬಿಎಮ್ ಉದ್ಯೋಗಿ ನಂದಿನಿ ಮೇಲೆ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಪುಂಡರು ದಾಳಿ ಮಾಡಿ ಆಕೆಯ ಕೈ ಮುರಿದು, ಹಣೆಯಲ್ಲಿ ರಕ್ತ ಬರುವಂತೆ ಹೊಡೆದು, ಕಾರಿನ ಗಾಜು, ಬಂಪರ್, ಟೈರ್ ಸಮೇತ ಎಲ್ಲವನ್ನೂ ಪುಡಿ ಮಾಡಿ ಹಾಕಿದ್ದರು. ಅಂದು ನಂದಿನಿಯವರು ಹೇಳಿದ್ದು ಒಂದೇ ಮಾತು: “ನನ್ನನ್ನು ಈ ಘಟನೆಯಲ್ಲಿ ಸಿಕ್ಕಿಸಿ ಹಾಕಿಸಲಾಯಿತು. ನಾನು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರೂ ಅದನ್ನು ಪಡೆದು ತನಿಖೆ ನಡೆಸುವ ಚುರುಕುತನ ಅಲ್ಲಿ ಕಾಣಲಿಲ್ಲ. ಘಟನೆ ನಡೆದಿರುವ ಸ್ಥಳಕ್ಕೆ ಹೋಗೋಣ ಬನ್ನಿ, ಅಕ್ರಮ ಕಸಾಯಿಖಾನೆ ಕಾರ್ಯನಿರ್ವಹಿಸುತ್ತಿರುವ ಜಾಗ ತೋರಿಸುತ್ತೇನೆ, ಅಲ್ಲಿ ಅಕ್ರಮದಲ್ಲಿ ತೊಡಗಿರುವವರ ಮೇಲೆ ಸ್ಥಳದಲ್ಲೇ ಕ್ರಮ ಕೈಗೊಳ್ಳಿ ಎಂದೆ. ಆದರೆ ನಮ್ಮಲ್ಲೀಗ ವಾಹನಗಳಿಲ್ಲ ಎಂದು ಸಬೂಬು ಹೇಳಿದರು. ಹಾಗಾದರೆ ನನ್ನ ಕಾರಿನಲ್ಲೇ ಹೋಗೋಣ ಎಂದು ಹೇಳಿದಾಗ ಅದಕ್ಕೆ ಮತ್ತೆ ಹೊಸ ಸಬೂಬು ಹೇಳಲು ತೋಚದೆ ಮನಸ್ಸಿಲ್ಲದ ಮನಸ್ಸಿಂದ ಇಬ್ಬರು ಪೇದೆಗಳನ್ನು ಕಳಿಸಿಕೊಟ್ಟರು. ನಾವು ಒಟ್ಟು ನಾಲ್ಕು ಜನ ಆ ಅಕ್ರಮ ಕಸಾಯಿಖಾನೆಯ ಸ್ಥಳಕ್ಕೆ ಬರುತ್ತಿದ್ದಂತೆಯೇ ಅಲ್ಲಿ ಅದಾಗಲೇ ಜಮಾಯಿಸಿದ್ದ ನೂರಕ್ಕೂ ಹೆಚ್ಚು ಮಂದಿ, ಹುಚ್ಚುನಾಯಿಗಳು ಮೈಮೇಲೆ ಬಿದ್ದಂತೆ ನಮ್ಮ ಮೇಲೆ ಮುಗಿಬಿದ್ದರು. ಪರಿಸ್ಥಿತಿ ಹೇಗಿತ್ತೆಂದರೆ ಅಲ್ಲಿಂದ ಜೀವಂತ ಪಾರಾಗಿ ಬರುವ ಯಾವ ಭರವಸೆಯೂ ನನಗಿರಲಿಲ್ಲ. ಒಟ್ಟಾರೆ ಈ ಘಟನೆಯಲ್ಲಿ ದೂರು ಕೊಡಲು ಹೋದವರನ್ನೇ ಬಲಿಪಶು ಮಾಡಲಾಯಿತು.”

ಅಲ್ಲಿ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿದ್ದದ್ದು ಸಾಬೀತಾಗಿದೆ. ನಿಮ್ಮ ಈ ಅಕ್ರಮ ಕೆಲಸ ನಿಲ್ಲಿಸಿ; ಕಸಾಯಿಖಾನೆಗೆ ಬೀಗ ಹಾಕಿ ಎಂದು ಹೇಳಲು ಹೋದ ವಕೀಲರನ್ನು ಇಂದು ಅದೇ ಬೀದಿಯ ಜನ ದನಕ್ಕೆ ಹೊಡೆದಂತೆ ಹೊಡೆದು ಕಳಿಸಿದ್ದಾರೆ. ನೋಟೀಸ್ ಕೊಟ್ಟು ಎಚ್ಚರಿಕೆ ಕೊಡಲು ಹೋಗಿದ್ದ ಪೊಲೀಸರನ್ನು ಸರಕಾರೀ ಕೆಲಸದಲ್ಲಿರುವ ನೌಕರರೆಂದೂ ನೋಡದೆ ಅದೇ ಮಂದಿ ಮತ್ತೆ ರೇಬೀಸ್ ಹತ್ತಿದ ನಾಯಿಗಳಂತೆ ಮುಗಿಬಿದ್ದು ಹೊಡೆದಿದ್ದಾರೆ! ಲಾಠಿ ಬೀಸುತ್ತ ಹೋಗಿದ್ದ ಪೊಲೀಸರೇ ತಮ್ಮ ಬಟ್ಟೆಗಿಟ್ಟೆ ಹರಿಸಿಕೊಂಡು ವಾಪಸ್ ಬರುವಂತಾಗಿದೆ. ಜಗತ್ತಿನ ಯಾವ ಮೂಲೆಯಲ್ಲಾದರೂ ಇಂಥದೊಂದು ಘಟನೆ ನಡೆಯಲು ಸಾಧ್ಯವೇ? ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುವ ನೆಲದಲ್ಲಿ ಅಕ್ರಮ ಕೆಲಸ ನಿಲ್ಲಿಸಲು ಹೋದ ಆರಕ್ಷಕರನ್ನೇ ಹಿಗ್ಗಾಮುಗ್ಗಾ ಥಳಿಸಿ ಕಳಿಸುವ ಜನರಿದ್ದಾರೆ ಎಂದರೆ ಆ ನೆಲದ ಕಾನೂನು ಪರಿಸ್ಥಿತಿ ಅದೆಷ್ಟು ಹದಗೆಟ್ಟಿರಬೇಕು! ಹಿಂದೆಲ್ಲ ಇಂಥ ಘಟನೆಗಳು ನಡೆದಾಗ ಅದನ್ನು ಆಫ್ರಿಕದ ಯಾವುದೋ ದೇಶದಲ್ಲಿ ಅಥವಾ ಪಾಕಿಸ್ತಾನದ ಯಾವುದೋ ಗಲ್ಲಿಯಲ್ಲಿ ಆಯಿತೆಂದು ಓದಿ ನಗುತ್ತಿದ್ದ ನಮಗೆ ಈಗ ಅವು ನಮ್ಮ ನೆಲದಲ್ಲೇ, ನಮ್ಮ ರಾಜ್ಯದಲ್ಲೇ, ನಮ್ಮ ಬೀದಿಗಳಲ್ಲೇ ಸಂಭವಿಸುತ್ತಿವೆ ಎಂದಾದಾಗ ಭಯವಾಗಬೇಕು. ನಾವೇನು ಶಿಲಾಯುಗದಲ್ಲಿ ಬದುಕುತ್ತಿದ್ದೇವೆಯೇ? ಇದು ಪೊಲೀಸ್, ನ್ಯಾಯಾಂಗ, ಕಾನೂನು, ಸರಕಾರ ಯಾವುದೂ ಇಲ್ಲದ ಅರಾಜಕ ವ್ಯವಸ್ಥೆಯೇ? ಜನರಿಗೆ ನೆಲದ ಕಾನೂನಿಗಿಂತ ತಂತಮ್ಮ ಮತ-ಧರ್ಮಗಳು ಬೋಧಿಸುವ ಕಲ್ಲು ಹೊಡೆವ ಕಾನೂನೇ ಮುಖ್ಯವಾಗುವುದಾದರೆ, ತಮ್ಮ ಅನಾಗರಿಕ ವಿಕೃತಿಗಳನ್ನು ಉಳಿಸಿಕೊಳ್ಳಲು ಅವರು ಪೊಲೀಸರ ಮೇಲೂ ಏರಿ ಹೋಗುವ ಧೈರ್ಯ ತೋರಿಸುತ್ತಾರೆಂದರೆ ಏನು ಹೇಳಬೇಕು? ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಇಡೀ ಕರ್ನಾಟಕವೇ ಐಸಿಸ್ ರಾಜ್ಯ ಆಗಲಾರದೆ?

ಇಲ್ಲಿ ಪೊಲೀಸರದ್ದೂ ತಪ್ಪಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈ ರಾಜ್ಯದ ಜನತೆಗೆ ಪೊಲೀಸರ ಮೇಲಿನ ವಿಶ್ವಾಸ ಸಂಪೂರ್ಣವಾಗಿ ಕುಸಿದಿದೆ. ಎಲ್ಲಿ ಲಾಟಿ ಬೀಸಬೇಕಿತ್ತೋ ಅಲ್ಲಿ ಇದೇ ಪೊಲೀಸರು ಬೆಣ್ಣೆ ಮಸಾಲೆ ದೋಸೆ ತಿನ್ನಿಸುತ್ತಾರೆ. ಎಲ್ಲಿ ನಿಜವಾಗಿಯೂ ಅಹವಾಲು ಕೇಳಿ ಸಮಸ್ಯೆ ಪರಿಹರಿಸಬೇಕಿತ್ತೋ ಅಲ್ಲಿ ಲಾಟಿ ಬೀಸುತ್ತಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಪಟ್ಟಿ ಮಾಡುತ್ತ ಹೋದರೆ, ಪೊಲೀಸರ ದೌರ್ಜನ್ಯ, ದಬ್ಬಾಳಿಕೆ, ಹಿಂಸೆಗಳಿಗೆ ಗುರಿಯಾದ ಜನರ ಪಟ್ಟಿ ದೊಡ್ಡದಿದೆ. ಅದೇ ರೀತಿಯಲ್ಲಿ ಪೊಲೀಸರ ಕೃಪಾಕಟಾಕ್ಷದಿಂದ ಶಿಕ್ಷೆಯಿಂದ ಪಾರಾಗಿ ಸಮಾಜದಲ್ಲಿ ಆರಾಮಾಗಿ ಓಡಾಡಿಕೊಂಡಿರುವ ಕ್ರಿಮಿನಲ್ಲುಗಳ ಪಟ್ಟಿಯೂ ದೊಡ್ಡದಿದೆ. ಈ ರಾಜ್ಯದಲ್ಲಿ ಹುಚ್ಚರು, ಲಫಂಗರು, ಫಟಿಂಗರು, ದೇಶದ್ರೋಹಿಗಳು, ಹಿಂದೂಗಳನ್ನು ವಾಚಾಮಗೋಚರ ಬಯ್ಯುವವರು, ಹಿಂದೂ ದೇವತೆಗಳನ್ನು ಮೂದಲಿಸುವವರು, ಗಂಜಿಗಿರಾಕಿಗಳು, ತಲೆಹಿಡುಕರು, ಸರಕಾರದ ಆಯಕಟ್ಟಿನ ಸ್ಥಾನಗಳಲ್ಲಿ ಕೂತದ್ದೇ ತಮ್ಮ ಜೀವಮಾನದ ಸಾಧನೆ ಎಂದು ಬೀಗುತ್ತಿರುವ ಕೋಳಿಮೊಟ್ಟೆಗಳು ಪೊಲೀಸ್ ವ್ಯವಸ್ಥೆಯನ್ನು ತಮಗೆ ಬೇಕಾದಂತೆ ಬಗ್ಗಿಸಿ, ಕುಗ್ಗಿಸಿ ಕಾರ್ಯಸಾಧನೆ ಮಾಡಿಕೊಳ್ಳುತ್ತಿದ್ದಾರೆ. ತನಗೆ ವಿಶ್ವವಿದ್ಯಾಲಯದ ಪೋಸ್ಟ್ ಡಾಕ್ಟರಲ್ ಫೆಲೋ ಒಬ್ಬನಿಂದ ಮಾನಹಾನಿಯಾಯಿತು ಎಂದು ದೂರು ಕೊಡಲು ಹೋದ ಮಹಿಳೆಯನ್ನು ಮೂರು ತಾಸು ಠಾಣೆಯ ಹೊರಗೆ ನಿಲ್ಲಿಸಿ ಸತಾಯಿಸಿದವರು ಈ ಪೊಲೀಸರು. ರಾಜ್ಯದ ಮುಖ್ಯಮಂತ್ರಿಯೊಬ್ಬರ ಫೋಟೋವನ್ನು ಮಾರ್ಫ್ ಮಾಡಿ ಅವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆಂದು ಬಿಂಬಿಸಿ ತೇಜೋವಧೆ ಮಾಡಿದ ಮಹಿಳೆಯೊಬ್ಬಳ ಮೇಲೆ ರಾಜ್ಯಾದ್ಯಂತ ಕೇಸು ದಾಖಲಿಸಿದರೂ ಒಂದೇ ಒಂದು ಹೆಜ್ಜೆ ತನಿಖೆ ನಡೆಸದ ಕೈಲಾಗದವರು ಇದೇ ಪೊಲೀಸರು. ಮೈಸೂರಿನ ಮೂರ್ಖನೊಬ್ಬನ ಪ್ರಕರಣದಲ್ಲಿ ಹುಬ್ಬಳ್ಳಿಯಿಂದ ಬಡಪಾಯಿಯೊಬ್ಬನನ್ನು ದರದರನೆ ಎಳೆದು ಬೆಂಗಳೂರಿಗೆ ತಂದು ಆತನ ಜೇಬಲ್ಲಿದ್ದ ದುಡ್ಡಲ್ಲಿ ಮಟನ್ ಬಿರಿಯಾನಿ ತಿಂದು ತೇಗಿದವರು ಇದೇ ಖಾಕಿಬಟ್ಟೆಗಳು. ರೈತರ ಹೊಟ್ಟೆಗಳಿಗೆ ಹೊಡೆದವರು, ಮಹದಾಯಿ ಹೋರಾಟಕ್ಕೆ ಹೋಗಿದ್ದವರ ಮೈ ಮೇಲೆ ಬಾಸುಂಡೆ ಎಬ್ಬಿಸಿದವರು, ಟಿಪ್ಪು ಜಯಂತಿ ಕೂಡದು ಎಂದವರ ಮೇಲೆ ಸಿಕ್ಕ ಸಿಕ್ಕ ಸೆಕ್ಷನ್‍ಗಳಲ್ಲಿ ಪ್ರಕರಣ ದಾಖಲಿಸಿ ಸುಳ್ಳೇ ಸುತ್ತಾಡಿಸಿದವರು, ಕುಟ್ಟಪ್ಪನವರ ಕೊಲೆಯನ್ನು ಅಸಹಜ ಸಾವು ಎಂದು ಬರೆದು ಕೇಸು ಕ್ಲೋಸ್ ಮಾಡಿದವರು, ರಾಜ್ಯದಲ್ಲಿ ನಡೆದ ಹತ್ತಾರು ಅಸಹಜ ಸಾವುಗಳನ್ನು, ಕೊಲೆಗಳನ್ನು ಮುಚ್ಚಿ ಹಾಕಿ ಪ್ರಕರಣಗಳ ದಾರಿ ತಪ್ಪಿಸಿದವರು ಇದೇ ಪೊಲೀಸರಲ್ಲವೆ? ತಮ್ಮದೇ ಇಲಾಖೆಯ ಗಣಪತಿ ಸಾವಿಗಾದರೂ ಇವರು ನ್ಯಾಯ ಒದಗಿಸಿದರಾ? ಇದೇ ಪೊಲೀಸರ ಹಿತರಕ್ಷಣೆಗಾಗಿ ದುಡಿಯುತ್ತಿದ್ದ ಶಶಿಧರ್ ಅವರನ್ನು ಮನೆಯ ಹೆಂಚು ಕಳಚಿ ತೆಗೆದು ಒಳಹೋಗಿ ಬಂಧಿಸಿ ಎಳೆದೊಯ್ದವರಲ್ಲವೆ ಇವರು? ತಮ್ಮ ಮೇಲೆ ಯಾರು ಬರೆಯುತ್ತಾರೆ, ಸರಕಾರದ ವಿರುದ್ಧ ಯಾರು ಮಾತಾಡುತ್ತಾರೆ ಅಂಥವರ ಮೇಲೆ ಸ್ಯುಮೋಟೋ ಕೇಸು ದಾಖಲಿಸಿಕೊಂಡು ಅವರಿಗೆ ಜೈಲುಭಾಗ್ಯ ಕರುಣಿಸಿದ ವೀರಾಧಿವೀರರಲ್ಲವೆ ಇವರೆಲ್ಲ? ಇವರ ಪೌರುಷ ಎಲ್ಲ ಖರ್ಚಾದದ್ದು ಬಡಪಾಯಿ ಹಿಂದೂಗಳ ಮೇಲೆ. ಆರೆಸ್ಸೆಸ್ ಅಥವಾ ವಿಶ್ವ ಹಿಂದೂ ಪರಿಷತ್ ಜೊತೆ ಗುರುತಿಸಿಕೊಂಡವರ ಮೇಲೆ. ಒಂದು ರಾಜಕೀಯ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡವರ ಮೇಲೆ. ನಾಲ್ಕು ವರ್ಷಗಳ ಹಿಂದಾದರೆ ಬಾಂಧವರಿಂದ ಪೊಲೀಸರು ಒದೆ ತಿಂದದ್ದಕ್ಕೆ ಸಾರ್ವಜನಿಕ ಆಕ್ರೋಶ, ಪೊಲೀಸರ ಮೇಲೆ ಒಂದಷ್ಟು ಅನುಕಂಪ ಸೃಷ್ಟಿಯಾಗುತ್ತಿತ್ತೋ ಏನೋ. ಆದರೆ, ಇಂದು ಪೊಲೀಸರು ಬಾಂಧವರಿಂದ ಒದೆಸಿಕೊಂಡರು ಎಂದರೆ ಜನ ಕೂಡ “ಹಾಗೇ ಆಗಲಿ” ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಆ ಪರಿಯಲ್ಲಿ ತಮ್ಮ ಇಲಾಖೆ ಜನರ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿಕೊಂಡಿದ್ದಾರೆ ನಮ್ಮ ಖಾಕಿ ಸ್ನೇಹಿತರು.

ಖಾಕಿಪಡೆಯೇನೋ ನಿಷ್ಕ್ರಿಯವಾಗಿದೆ. ಸರಕಾರಕ್ಕೇನಾಗಿದೆ? ಯಾವ ಪಾರ್ಶ್ವವಾಯು ಬಡಿದಿದೆ? ಈ ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅದೆಷ್ಟು ಲಕ್ಷ ಬಾಂಗ್ಲಾ ಬಾಂಧವರು ತುಂಬಿಕೊಂಡಿದ್ದಾರೆ, ಯಾರಾದರೂ ಲೆಕ್ಕವಿಟ್ಟಿದ್ದಾರೆಯೇ? ಸರಿಯಾಗಿ ತನಿಖೆ ಮಾಡಿದರೆ ಬೆಂಗಳೂರು ಒಂದರಲ್ಲೇ ಲಕ್ಷಕ್ಕೂ ಮೇಲ್ಪಟ್ಟು ಸಂಖ್ಯೆಯಲ್ಲಿ ಬಾಂಗ್ಲಾ ಅಕ್ರಮ ನುಸುಳುಗೋರರು ಸಿಕ್ಕಿಯಾರು. ಮೊಟ್ಟಮೊದಲ ಟಿಪ್ಪುಜಯಂತಿ ಕಾರ್ಯಕ್ರಮ ನಡೆದಾಗ ಕನಿಷ್ಠ ಐದು ಸಾವಿರ ಮಾಪಿಳ್ಳೆಗಳು ಕೇರಳದಿಂದ ಬಂದು ಕರ್ನಾಟಕದೊಳಗೆ ಸೇರಿಕೊಂಡರು ಎಂದು ಅಂದಿನ ರಾಜ್ಯ ಗೃಹಸಚಿವರು ಓಪನ್ ಆಗಿ ಹೇಳಿಕೊಂಡಿದ್ದರು. ಪಿಎಫ್‍ಐ, ಕೆಎಫ್‍ಡಿ, ಎಸ್‍ಡಿಪಿಐ ಮುಂತಾದ ಭಯೋತ್ಪಾದಕ ಸಂಘಟನೆಗಳ ಮೇಲಿದ್ದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನೂ ರದ್ದುಗೊಳಿಸಿ ಸರಕಾರ ಆದೇಶ ಹೊರಡಿಸಿದ್ದರಿಂದ ಸಾವಿರಾರು ಉಗ್ರರನ್ನು, ಗೂಂಡಾಗಳನ್ನು ಪೊಲೀಸರು ಅನಿವಾರ್ಯವಾಗಿ ಹೊರಬಿಡಬೇಕಾಯಿತು. ಹಾಗೆ ತಮ್ಮ ಮೇಲಿನ ಪ್ರಕರಣಗಳಿಂದ ಕಳಚಿಕೊಂಡವರಲ್ಲಿ ಅದೇ ಪೊಲೀಸರ ಮೇಲೆ ಹಲ್ಲೆ ಮಾಡಿದವರು, ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದ್ದವರು ಕೂಡ ಸೇರಿದ್ದರು. ರಾಜ್ಯದಲ್ಲಿ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ನಕ್ಸಲ್ ಕೂಂಬಿಂಗ್ ಹಂತ ಹಂತವಾಗಿ ಕಡಿಮೆಯಾಗುತ್ತ ಬಂದು ಸಂಪೂರ್ಣವಾಗಿ ನಿಂತಿದೆ. ಪರಿಣಾಮವಾಗಿ ಇಂದು ಕರ್ನಾಟಕ ಮತ್ತು ಕೇರಳದ ನಕ್ಸಲರು ಆರಾಮಾಗಿ ಎರಡೂ ರಾಜ್ಯಗಳ ನಡುವೆ ಓಡಾಡಿಕೊಂಡಿದ್ದಾರೆ. ಆಗಾಗ ಇವರು ಬೆಂಗಳೂರಂಥ ನಗರದೊಳಗೆಯೂ ಕಾಣಿಸಿಕೊಂಡು ತಮಗಾಗದವರ ಮೇಲೆ ಗುಂಡು ಹಾರಿಸಿ ಕಾಣೆಯಾಗುತ್ತಾರೆ. ರಾಜ್ಯದೊಳಗೆ ಐಸಿಸ್, ಇಂಡಿಯನ್ ಮುಜಾಹಿದೀನ್ ಸಂಘಟನೆಗಳ ಚಟುವಟಿಕೆಗಳು ಹೆಚ್ಚಾಗಿವೆ. ಪಶ್ಚಿಮ ಘಟ್ಟದಲ್ಲಿ ಐಸಿಸ್ ತರಬೇತಿಗಳು ನಡೆಯುವುದಕ್ಕೂ ಪ್ರಾರಂಭವಾಗಿದೆ. ಕೇರಳ, ಭಟ್ಕಳಗಳಿಂದ ಬಂದು ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ವಿಮಾನ ಹತ್ತಿದ ಕೆಲವರು ಕೆಲವೇ ದಿನಗಳಲ್ಲಿ ಸಿರಿಯಾದ ಐಸಿಸ್ ತರಬೇತಿ ಶಿಬಿರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ನಮ್ಮ ಭದ್ರತಾ ವ್ಯವಸ್ಥೆ ಮೂಕವಾಗಿದೆ. ರಾಜ್ಯದೊಳಗೆ ಹದಿನೈದಕ್ಕೂ ಹೆಚ್ಚು ಹಿಂದೂ ಯುವಕರು ಬರ್ಬರವಾಗಿ ಐಸಿಸ್ ಮಾದರಿಯಲ್ಲಿ ಕೊಲೆಯಾಗಿ ಹೋಗಿದ್ದಾರೆ. ಸರಕಾರ ಇಂಥ ಎಲ್ಲ ವಿಷಯಗಳಿಗೂ ಧೃತರಾಷ್ಟ್ರನಾಗಿದೆ. ರಾಜ್ಯದ ಪೊಲೀಸ್ ಇಲಾಖೆ, ಗಾಂಧಾರಿಯಾಗಿ ತಾನೂ ಬಟ್ಟೆ ಕಟ್ಟಿಕೊಂಡು ಕೂತಿದೆ. ಒಟ್ಟಾಗಿ ಹೇಳಬೇಕಾದರೆ ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟುಕೂತಿದೆ. ರಾಷ್ಟ್ರಪತಿ ಆಳ್ವಿಕೆ ಹೇರಿ ಬಿಎಸ್‍ಎಫ್ ಯೋಧರನ್ನೋ ಮಿಲಿಟರಿಯನ್ನೋ ಆರು ತಿಂಗಳ ಮಟ್ಟಿಗಾದರೂ ರಾಜ್ಯದೊಳಗೆ ನಿಯೋಜಿಸಬೇಕಾದಂಥ ಗಂಡಾಂತರಕಾರೀ ಸ್ಥಿತಿಯಲ್ಲಿ ನಾವಿಂದು ಇದ್ದೇವೆ.

ಇಷ್ಟೆಲ್ಲ ಅಧ್ವಾನಗಳಾದರೂ ನಮ್ಮ ರಾಜ್ಯದ ದೊರೆಗಳು ಮಾತ್ರ ತಮ್ಮ ಆಸ್ಥಾನ ವಿದೂಷಕರನ್ನು, ಗಂಜಿಪಡೆಯನ್ನು, ಪ್ರಗತಿಪರ ಬಕೆಟ್‍ಗಳನ್ನು ಓಲೈಸುತ್ತ; ತಮ್ಮ ಅಚ್ಚುಮೆಚ್ಚಿನ ಓಟ್‍ಬ್ಯಾಂಕ್ ಆದ ಬಾಂಧವರ ಸಮುದಾಯಕ್ಕೆ ಪೂಸಿ ಹೊಡೆಯುತ್ತ ಕಾಲ ಕಳೆಯುತ್ತಿದ್ದಾರೆ. ರೋಮ್ ನಗರ ಹೊತ್ತಿ ಉರಿದಾಗ ನೀರೋ ದೊರೆ ಪಿಟೀಲು ನುಡಿಸಿದನೋ ಇಲ್ಲವೋ; ಆದರೆ ಕರ್ನಾಟಕ ಹೊತ್ತಿ ಉರಿಯುತ್ತಿರುವಾಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಗೊರಕೆ ಹೊಡೆಯುತ್ತಿರುವುದಂತೂ ಸತ್ಯ. ಇಲ್ಲಿ ದನಗಳ್ಳರಿಗೆ ಶಿಕ್ಷೆಯಾಗುವುದಿಲ್ಲ; ಬದಲಾಗಿ ಹತ್ತೋ ಇಪ್ಪತ್ತೋ ಲಕ್ಷ ರುಪಾಯಿ ಪರಿಹಾರ ಸಿಗುತ್ತದೆ! ಮಾಂಸದಂಗಡಿ ತೆರೆಯುವುದಾದರೆ ಲಕ್ಷಗಳ ಲೆಕ್ಕದಲ್ಲಿ ಸಹಾಯಧನ ಸಿಗುತ್ತದೆ. ತಮ್ಮ ವಂಧಿಮಾಗಧರನ್ನು ಕೂಡ ಮುಖ್ಯಮಂತ್ರಿಗಳು ಅದೇ ರೀತಿಯಲ್ಲಿ ಸಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಗಂಜಿಯಲ್ಲೇ ದಿನ-ವರ್ಷ ತಳ್ಳುವ ಗಂಜಿಗಿರಾಕಿಗಳು ರಾಜ್ಯದಲ್ಲಿ ಏನೇ ಅನಾಹುತಗಳು ನಡೆದರೂ ಅದನ್ನು ಮೋದಿಯ ತಲೆಗೆ ಕಟ್ಟಿ ಕೈತೊಳೆದುಕೊಳ್ಳುತ್ತಾರೆ. ಇಲ್ಲಿ ಡಾ. ಕಲಬುರ್ಗಿ ಸತ್ತರು, ಕೊಂದ ಪಾಪವನ್ನು ಮೋದಿಯ ಹಣೆಗೆ ಅಂಟಿಸಲಾಯಿತು. ಸತ್ತು ವರ್ಷ ಮೂರಾದರೂ ಇನ್ನು ನಿಮ್ಮ ತನಿಖೆ ಮುಗಿದಿಲ್ಲವೇನ್ರೀ? ಯಾವ ಸೀಮೇ ತನಿಖೆರೀ ಅದು? ಎಂದು ಯಾವ ಗಂಜಿಗಿರಾಕಿಯೂ ರಾಜ್ಯದ ಕೊರಳುಪಟ್ಟಿ ಹಿಡಿದು ಕೇಳಲಿಲ್ಲ. ಗೌರಿಯ ಹತ್ಯೆಯಾದಾಗ ಮೋದಿ ಮಾತಾಡಬೇಕು ಎಂದು ಹೇಳಿದ ಬಣ್ಣದ ಪರದೆಯ ಜೋಕರ್‍ಗಳು ಯಾರೂ ಸಿದ್ದರಾಮಯ್ಯ ಈ ವಿಷಯದಲ್ಲಿ ಮಾತಾಡಬೇಕು ಎಂದು ಒತ್ತಾಯಿಸಲಿಲ್ಲ. ಅಷ್ಟರ ಮಟ್ಟಿಗೆ ಅವರ ಗಂಜಿಋಣ ಅವರ ಬಾಯಿಗಳನ್ನು ಕಟ್ಟಿ ಹಾಕಿತ್ತು ನೋಡಿ! ಕಲಬುರ್ಗಿ ಮತ್ತು ಗೌರಿಯ ಕೊಲೆಗಳ ನಡುವೆ ಈ ರಾಜ್ಯದಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಹತ್ಯೆಗಳು ನಡೆದು ಹೋದವು. ಪ್ರಶಾಂತ್ ಪೂಜಾರಿ, ರುದ್ರೇಶ್, ಕುಟ್ಟಪ್ಪ ಮುಂತಾದವರ ಕೊಲೆಗಳು ನಡೆದ ರೀತಿ ನೋಡಿದರೆ ಎದೆ ನಡುಗುತ್ತದೆ. ಆದರೆ ಇಂಥ ಯಾವ ಕೊಲೆಗಳಿಗೂ ಕಾಂಗ್ರೆಸ್ ಗಂಜಿಗಳ ಎದೆ ಕರಗಲಿಲ್ಲ. ಕಾಂಗ್ರೆಸ್‍ನದ್ದಲ್ಲದ, ತಮಗೆ ವೈಯಕ್ತಿಕ ಲಾಭ ತಂದು ಕೊಡದ ಒಂದೇ ಒಂದು ಕೊಲೆ ಅಥವಾ ಸಾವಿನ ವಿಚಾರದಲ್ಲೂ ಗಂಜಿಗಳು ಮಾತಾಡಿದ ಉದಾಹರಣೆ ಇಲ್ಲ! ಇಂಥ ಹಡಬಿಟ್ಟಿ ಸಂತತಿಯನ್ನು ನಾವು ಹಿಂದೆ ಕಂಡಿಲ್ಲ, ಮುಂದೆ ಕಾಣುವವರಿಲ್ಲ. ಅಕ್ರಮ ಕಸಾಯಿಖಾನೆಯನ್ನು ಪ್ರಶ್ನಿಸ ಹೋದ ನಂದಿನಿ ಮೇಲೆ ಹಲ್ಲೆ ಮಾಡಿದವರು ಯಾರು? ಪತ್ರಿಕೆಗಳಲ್ಲಿ ಅನ್ಯಕೋಮು ಎಂದು ಕರೆಸಿಕೊಳ್ಳುವ ಬಾಂಧವರು. ಸಿದ್ದರಾಮಯ್ಯನವರ ಪರಮಾಪ್ತ ಸಮುದಾಯದವರು. ಹಾಗಾಗಿಯೇ ಒಬ್ಬನೇ ಒಬ್ಬ ಗಂಜಿಯೂ ನಂದಿನಿಗೆ ಆದ ಅನ್ಯಾಯದ ವಿರುದ್ಧ ಮಾತಾಡಿಲ್ಲ; ಜಾಲತಾಣದಲ್ಲಿ ಬರೆದುಕೊಂಡಿಲ್ಲ. ಈ ಗಂಜಿಗಳ ಸ್ವಾಮಿನಿಷ್ಠೆ ನೋಡಿದರೆ ನಾಯಿಗಳು ಅದರೆದುರಲ್ಲಿ ತಮ್ಮದು ಏನೇನೂ ಅಲ್ಲವೆಂದು ನಾಚಿಕೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತವೇನೋ!

ನಾಲ್ಕೂವರೆ ವರ್ಷಗಳ ಆಡಳಿತವೇ ಹೀಗೆ. ಇನ್ನು ಮತ್ತೊಂದು ಚುನಾವಣೆಯಲ್ಲೂ ಈ ಪಕ್ಷವನ್ನು ಗೆಲ್ಲಿಸಿ ಗದ್ದುಗೆಯಲ್ಲಿ ಕೂರಿಸಿದರೆ ಏನಾಗಬಹುದು? ಬೀದಿಗಳಲ್ಲಿ ಹಿಂದೂಗಳು ನಿರ್ಭಯವಾಗಿ ಓಡಾಡಲು ಸಾಧ್ಯವಾದೀತೇ? ಹಿಂದೂ ಹೆಣ್ಣುಮಕ್ಕಳು ಆತಂಕ, ಭಯ ಇಲ್ಲದೆ ನಡೆದಾಡಲು ಸಾಧ್ಯವಾದೀತೇ? ಮೊನ್ನೆ ನಡೆದ ಘಟನೆಯಲ್ಲಿ ನಂದಿನಿ “ನೋಟೆಡ್” ಆಗಿದ್ದಾರೆ. ಸಾವಿರಾರು ಬಾಂಧವರ ಕಣ್ಣುಗಳು ಆಕೆಯನ್ನು ಗುರುತಿಸಿವೆ. ಮುಂದೆ ಆಕೆ ಆ ರಸ್ತೆಯಲ್ಲಿ ಮತ್ತೆ ನಿರಾಳವಾಗಿ ಓಡಾಡಲು ಸಾಧ್ಯವಾಗುತ್ತದೆಯೇ? ಕರ್ನಾಟಕದ ಪರಿಸ್ಥಿತಿ ಬಿಡಿ, ಕೇವಲ ಬೆಂಗಳೂರನ್ನು ತೆಗೆದುಕೊಂಡರೂ ಅಷ್ಟೆ; ಇಂದು ಹಣೆಗೆ ತಿಲಕ ಇಟ್ಟ, ನಾಮಗೀಮ ಹಚ್ಚಿಕೊಂಡ, ಕಚ್ಚೆ-ಶಾಲು ಧರಿಸಿದ ವ್ಯಕ್ತಿಯೊಬ್ಬ ಶಿವಾಜಿನಗರ, ಕಾಟನ್ ಪೇಟೆ, ಇಲ್ಯಾಸ್ ನಗರ, ಜಯನಗರ ಟಿ ಬ್ಲಾಕ್‍ನಂಥ ಏರಿಯಾಗಳಲ್ಲಿ ಒಂಟಿ ಓಡಾಡಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಇನ್ನೂ ಇನ್ನೂ ನಾವು ಓಲೈಕೆ ಪಕ್ಷಕ್ಕೇ ಅಧಿಕಾರ ಕೊಟ್ಟು ಸಿಂಹಾಸನದಲ್ಲಿ ಕೂರಿಸುತ್ತಿದ್ದರೆ ಏನಾಗಬಹುದು? ದೇಶಭಕ್ತಿಯ ವಿಚಾರದಲ್ಲಿ ಬಾಂಧವರ ಮನಸ್ಥಿತಿ ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ದೇಶದ ರಕ್ಷಣೆ ಮತ್ತು ವೋಟ್ ಬ್ಯಾಂಕ್ ಓಲೈಕೆ – ಇವೆರಡರ ನಡುವಿನ ಆಯ್ಕೆಯ ಪ್ರಶ್ನೆ ಬಂದರೆ ಕೈ ಪಕ್ಷದ ಆಯ್ಕೆ ಯಾವುದು ಎಂಬುದೂ ನಮಗೆಲ್ಲ ಗೊತ್ತಿಲ್ಲದ್ದೇನಲ್ಲ. ಇನ್ನು, ಪ್ರಗತಿಪರ ಜೀವಪರ ಜಾತ್ಯತೀತ ಗಂಜಿಗಳು… ಇವುಗಳು ದೇಶವನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತವೆ ಎಂಬುದಕ್ಕೆ ಈಗಾಗಲೇ ಹಲವಾರು ಉದಾಹರಣೆಗಳನ್ನು ನೋಡಿದ್ದೇವೆ. ಸಂಸತ್ತಿಗೆ ಬಾಂಬಿಟ್ಟವರನ್ನು, ಮುಂಬೈಯಲ್ಲಿ 260 ಮಂದಿಯನ್ನು ಅರ್ಧ ದಿನದಲ್ಲಿ ಕೊಂದು ಉರುಳಿಸಿದವರನ್ನು, ದೇಶದ ಉದ್ದಗಲದಲ್ಲಿ ಬಾಂಬ್ ಇಡುವ ಹಂಚಿಕೆ ಹಾಕಿ ಬಂಧಿಗಳಾದವರನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಸಮರ್ಥಿಸಿಕೊಳ್ಳುವ ಗಂಜಿಪಡೆ ಈ ದೇಶ ಸದ್ಯ ಎದುರಿಸುತ್ತಿರುವ ದೊಡ್ಡ ಭದ್ರತಾ ಸಮಸ್ಯೆಗಳಲ್ಲೊಂದು. ಈ ಗಂಜಿಪಡೆಯನ್ನು ಕೈ ಪಕ್ಷ ತಲೆ ಮೇಲಿಟ್ಟು ಮೆರೆಸುತ್ತದೆ ಎಂಬುದನ್ನು ನೆನಪಿಸಿಕೊಂಡರೆ ಈ ದೇಶದ ಭವಿಷ್ಯ ಅದೆಂಥ ಗಂಡಾಂತರದಲ್ಲಿದೆ ಎಂಬುದು ಅರಿವಾದೀತು. ಇನ್ನೂ ಐದು ವರ್ಷ ಇದೇ ಪಕ್ಷಕ್ಕೆ ಅಧಿಕಾರ ಕೊಟ್ಟದ್ದೇ ಆದರೆ ಈ ರಾಜ್ಯ ಸಂಪೂರ್ಣವಾಗಿ ಐಸಿಸ್ ರಾಜ್ಯವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ರಾಜ್ಯದ ಕೆಲವು ನಗರಗಳಿಗೆ, ಬೆಂಗಳೂರು ಒಳಗಿನ ಕೆಲವೊಂದು ಲೇಔಟ್‍ಗಳಿಗೆ ಪೊಲೀಸರು ಹೋಗುವುದಕ್ಕೇ ಹೆದರುವಂಥ ಪರಿಸ್ಥಿತಿ ಉದ್ಭವವಾಗಬಹುದು. ಹಿಂದೂಗಳು ಎಚ್ಚರವಾದರೆ, ಈಗಾಗಲೇ ಅಪಾಯದ ಅಂಚಿಗೆ ಬಂದು ನಿಂತಿರುವ ಈ ರಾಜ್ಯವನ್ನು ಕಷ್ಟಪಟ್ಟಾದರೂ ಉಳಿಸಿಕೊಳ್ಳಬಹುದು. ಮುಂದಿನ ಐದು ವರ್ಷ ಮತ್ತೆ ಹಿಂದೂಗಳು ನಿದ್ದೆ ಮಾಡುವುದನ್ನೇ ಆಯ್ಕೆ ಮಾಡಿಕೊಂಡರೆ, ಪೊಲೀಸರನ್ನಲ್ಲ ಜನರನ್ನೇ ಮನೆಮನೆಗೆ ನುಗ್ಗಿ ಹೊಡೆಯುವ ಬಾಂಧವರ ಪಡೆ ಈ ರಾಜ್ಯದಲ್ಲಿ ಹುಟ್ಟಿಕೊಳ್ಳಬಹುದು. ಕಸಾಯಿಖಾನೆಗಳಲ್ಲಿ ಹಸುಗಳ ಕೊರಳು ಕತ್ತರಿಸಿ ರಕ್ತ ಹರಿಸುವ ಕತ್ತಿಗಳು ಬೀದಿಗಿಳಿದು ಜನಿವಾರ, ಇಷ್ಟಲಿಂಗ, ತಾಳಿ, ಉಡುದಾರ, ಶಿಖೆ, ರವಿಕೆ, ರಾಖಿ, ತುರುಬಿನ ಹೂವುಗಳನ್ನು ಕತ್ತರಿಸಿ ಎಸೆವ ಮುನ್ನ ಹಿಂದೂ, ಎಚ್ಚರಾಗು!

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!