Uncategorized ಅಂಕಣ

ಮೆಟ್ರೋದಲ್ಲಿ ಕನ್ನಡ ಮಾತ್ರ ಬೇಕು ಅಂದವರೇ, ಇಂದಿರಾಳ ಬಗ್ಗೆ ಮೌನವೇಕೆ

ಒಂದು ತಿಂಗಳ ಹಿಂದಿನ ಮಾತು. ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಹೇರಿಕೆ ಆಗ್ತಾ ಇದೆ ಅಂತ ಆಕಾಶ ಭೂಮಿಯನ್ನ ಒಂದು ಮಾಡಲಾಗಿತ್ತು. ಕನ್ನಡ ಸಂಘಟನೆಗಳು, ಪ್ರಗತಿಪರರು, ಜೀವಪರರು ಅಂತ ಸುಮಾರು ಜನ ಸೇರಿ ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೇನಕ್ಕು ಜಾಗ ಇಲ್ಲ ಅಂದಿದ್ರು.

ಕಬಾಲಿ ಅನ್ನುವ ರಜನಿಯ ಚಲನಚಿತ್ರ ಬಿದುಗಡೆಯಾದ ಸಮಯದಲ್ಲಿ ಕರ್ನಾಟಕದಲ್ಲಿ ಅನ್ಯಭಾಷಾ ಚಲನಚಿತ್ರಗಳಿಗೆ ಅವಕಾಶ ಅಗತ್ಯಕ್ಕಿಂತ ಹೆಚ್ಚು ಸಿಗ್ತಾ ಇದೆ ಅನ್ನುವ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿತ್ತು. ಅವ್ರು ಹೇಳುವ ವಿಚಾರವೂ ಸರಿ ಅನ್ನುವ. ಕರ್ನಾಟಕ ಅಂದ ಮೇಲೆ ಕನ್ನಡವೇ ಅಲ್ಲವೇ ಎಲ್ಲ! ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ! ಆದರೆ ಈ ಜೀವಪರರಲ್ಲೆಲ್ಲ ಒಂದು ಪ್ರಶ್ನೆ, ಕನ್ನಡಿಗರು ಉಣ್ಣುವ ಬಡವರೇ ಬರುವ ಕ್ಯಾಂಟೀನ್ಗ್ಯಾಕೆ ಸ್ವಾಮಿ ಇಂದಿರಾ ಹೆಸರು? ನಮ್ಮ ವಿಶಾಲ ಕನ್ನಡ ನೆಲದಲ್ಲಿ ಒಂದೂ ಕನ್ನಡ ಹೆಸರು ಸಿಗಲಿಲ್ಲವೇ? ಚೆನ್ನಮ್ಮನೋ ಅಬ್ಬಕ್ಕಳೋ, ಸಾಲುಮರದ ತಿಮ್ಮಕ್ಕನೋ, ನಾಡಪ್ರಭು ಕೆಂಪೇಗೌಡರೋ, ಸಂಗೊಳ್ಳಿಯ ರಾಯಣ್ಣನೋ ಇಂತಹ ಜಾಗದಲ್ಲಿ ವಿರಾಜಿಸಿದ್ದರೆ ಅದೆಷ್ಟು ಚೆನ್ನಾಗಿರ್ತಿತ್ತು ಅಲ್ವಾ? ಹೋರಾಟವನ್ನ ಮಾಡುವಾಗ ವಿಷಯಾಧಾರಿತವಾಗಿ ಹೋರಡ್ಬೇಕು ಅಲ್ವಾ? ಮಂತ್ರಿಯೊಬ್ಬರ ಮನೆ ಮೇಲೆ ಐಟಿ ದಾಳಿಯಾದಾಗ ಅದು ಕೇಂದ್ರ ನಮ್ಮ ರಾಜ್ಯದ ಸ್ವಾಯತ್ತತೆಯ ಮೇಲೆ ಮಾಡಿದ ದಾಳಿ ಅಂತ ಮಾತಾಡಿದ್ದವ್ರೆಲ್ಲಾ ಈಗ ಹೋರಾಡದಿದ್ರೆ ಅದು ರಾಜ್ಯದ ಸ್ವಾಯತ್ತತೆಯ ಮೇಲೂ ನಿಮ್ಮ ಅಂತಃಸಾಕ್ಷಿಯ ಮೇಲೂ ನೀವೇ ಮಾಡಿದ ಮೋಸ ಅಲ್ವಾ?

ಇನ್ನೊಂದು ಪ್ರಶ್ನೆ ಜನನಾಯಕರಲ್ಲಿ! ಯಾಕೆ ಸ್ವಾಮಿ ಯಾವಾಗಲೂ ರಾಜಕಾರಿಣಿಗಳ ಹೆಸರಿನಿಂದ ಎಲ್ಲ ಯೋಜನೆಗಳನ್ನ ಹೆಸರಿಡಬೇಕು? ದೇಶಕ್ಕೆ ದೇಶವೇ ನೆನಪಿಡುವಂತ ಯಾವ ಕೆಲಸಗಳನ್ನು ಅವರು ಮಾಡಿದ್ದಾರೆ ಅಂತಾ? ಅದೂ ಕೂಡ ನೆಹರು, ಇಂದಿರಾ, ರಾಜೀವ್ ಎಂಬ ಮೂರು ಹೆಸರುಗಳ ಮದ್ಯೆಯೇ ಎಲ್ಲ ಯೋಜನೆಗಳೂ ಸೀಲುಕಿರಬೇಕೆಂಬ ಭಾವನೆ ಮತ್ತು ವಾಂಛೆ ಯಾಕೆ. ನಿಮ್ಮಲ್ಲೇ ಸಾಧನೆ ಮಾಡಿದ ಬಾಬು ಜಗಜೀವನ್ರಾಮ್ ಇದ್ದಾರೆ. ಭಾರತ ದೇಶ ಕಂಡ ಮುತ್ಸದ್ದಿ ರಾಜಕಾರಿಣಿ ಲಾಲ್ ಬಹದ್ದೂರ್ ಶಾಸ್ತ್ರಿ ಇದ್ದಾರೆ. ರಾಜಕಾರಿಣಿಗಳ ಮಾತು ಹಾಗಿರಲಿ. ‘ಏ ದಿಲ್ ಮಾಂಗೆ ಮೋರ್’ ಅಂತ ಪಾಕಿಸ್ತಾನಿಗಳ ಹುಟ್ಟಡಗಿಸಿದ ಹುತಾತ್ಮನಾದ ವಿಕ್ರಮ್ ಭಾತ್ರಾನದ್ದೋ ಅಥವಾ ತಾಜ್ ಅನ್ನೋ ಮುಂಬಯಿಯ ಕನಸನ್ನು ಉಗ್ರರ ಹಿಡಿತದಿಂದ ಬಿಡಿಸುತ್ತಾ ವೀರ ಮರಣವನ್ನಪ್ಪಿದ ಸಂದೀಪ್ ಉನ್ನಿಕೃಷ್ಣನ್ರಂತವರ ಹೆಸರನ್ನೋ, ಅಥವಾ ಅಷ್ಟೆತ್ತರದ ಸಿಯಾಚಿನ್ನಲ್ಲಿ ಮಂಜಿನಡಿಗೆ ಸಿಕ್ಕು ದೇಶಕ್ಕಾಗಿ ಪ್ರಾಣ ಬಿಟ್ಟ ಹನುಮಂತಪ್ಪ ಕೊಪ್ಪದ್ ಅವರ ಹೆಸರು ಇಡಬಹುದಿತ್ತಲ್ವಾ? ಕನ್ನಡಕ್ಕೆ 8 ಜ್ನಾನಪೀಟಗಳನ್ನು ತಂದು ಕೊಟ್ಟ ಶ್ರೇಷ್ಟ ಕವಿಗಳಿದ್ದಾರೆ. ಇಸ್ರೋ ಅನ್ನೋ ಸಂಸ್ಥೆಯನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಯು ಆರ್ ರಾವ್ ಹೆಸರು ಕ್ಯಾಂಟೀನ್ಗೆ ಶೋಭೆಯಲ್ಲವೇ? ಮತ್ತೊಮ್ಮೆ ಯೋಚಿಸಿ. ಈ ದೇಶ ಕಾದ ನಿಜವಾದ ನಾಯಕರು ಯಾರು ಅಂತ!
ಇದೆಲ್ಲಾ ಆದ ನಂತರ ನಮ್ಮನಿಮ್ಮಲ್ಲಿ, ಅಂದರೆ ಪ್ರಜೆಗಳಲ್ಲಿ ಒಂದು ಮನವಿ. ನಮ್ಮ ದನಿಗೆ ಇಲ್ಲಿ ಅವಕಾಶವಿದೆ. ಸರಕಾರಗಳನ್ನು ತಿದ್ದುವ ಶಕ್ತಿ ಮತ್ತು ಹಕ್ಕು ನಮಗಿದೆ. ಯಾರೋ ಅನ್ಯರಾಷ್ಟ್ರೀಯರ ಮುಂದೆ ನಮ್ಮ ದೇಶದ ಇತಿಹಾಸ ಮತ್ತು ಸೊಬಗನ್ನ ವಿವರಿಸುವಾಗ, ಆ ಸೊಬಗಿಗೆ, ಆ ಇತಿಹಾಸಕ್ಕೆ ಗೌರವಪೂರ್ವಕವಾಗಿ ನಾವು ಹೆಸರಿಟ್ಟ ಸ್ಥಳ ಅದು ಅಂತ ತೋರಿಸೋಕ್ಕೆ ಎಷ್ಟು ಹೆಮ್ಮೆಯಿರುತ್ತೆ ಅಲ್ವಾ? ವಿಕ್ರಮ್ ಭಾತ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅನ್ನುವಾಗ ಆಗುವ ರೋಮಾಂಚನ ಯಾಕೋ ಜವಹಾರ್ ನೆಹರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅನ್ನುವಾಗ ಆಗಲ್ಲ!

ಜೈ ಭುವನೇಶ್ವರಿ ! ಜೈ ಕನ್ನಡ ಮಾತೆ!

-Ashish Saradka

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!