Featured ಸಿನಿಮಾ - ಕ್ರೀಡೆ

ವಿಜಯೋತ್ಸವದ ಅಬ್ಬರದಲ್ಲಿ ಸಾಕ್ಷಿ ಮಲಿಕ್ ಅವರ ಕೋಚ್’ನ್ನು ಮರೆತೇ ಬಿಟ್ಟರಾ?!

ಒಂದೆಡೆ ರಿಯೋ ಒಲಂಪಿಕ್’ನಲ್ಲಿ ಬೆಳ್ಳಿ ಪದಕ ಪಡೆದ ಪಿ.ವಿ.ಸಿಂಧು ಕೋಚ್ ಪುಲ್ಲೆಲ ಗೋಪಿಚಂದ್’ಗೆ ಪ್ರಶಸ್ತಿ, ಪುರಸ್ಕಾರ ಸುರಿಮಳೆಯಾಗುತ್ತಿದ್ದರೆ ಇನ್ನೊಂದೆಡೆ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಅವರ  ಕೋಚ್ ಕುಲದೀಪ್ ಮಲಿಕ್ ಅವರನ್ನು ಯಾರು ಕೇಳುವವರಿಲ್ಲವಾಗಿದ್ದಾರೆ. ಪುಲ್ಲೆಲ ಗೋಪಿಚಂದ್ ಸಿಂಧು ಅವರ ಜೊತೆ ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆ, ಕುಲದೀಪ್ ಮಾತ್ರ ಪರದೆಯ ಹಿಂದಿರುವುದನ್ನೇ ಆಯ್ಕೆ ಮಾಡಿದ್ದಾರೆ.

ಸಾಕ್ಷಿ ಗೆದ್ದ ನಂತರ ಇವರ ಹೆಗಲ ಮೇಲೆ ಕುಳಿತು ತ್ರಿವರ್ಣ ಧ್ವಜ ಹಾರಿಸಿದ ಕ್ಷಣವನ್ನು ಈಗಲೂ ನೆನೆಯುತ್ತಾ “ಭಾರತೀಯರ ಪದಕದ ಕಾತರವನ್ನು ಕಂಚನ್ನು ಗೆಲ್ಲುವುದರ ಮೂಲಕ ಕೊನೆಗೊಳಿಸಿದಳು ನನ್ನ ಶಿಷ್ಯೆ, ಜನ ಅದನ್ನು ಸಂಭ್ರಮಿಸಿದ ಪರಿಯನ್ನ ಎಂದೂ ಮರೆಯುವುದಿಲ್ಲ. ಅದು ನನ್ನ ಸಮಾಧಿಯವರೆಗೂ ಹೋಗುತ್ತದೆ. ಯಾವ ಪ್ರಶಸ್ತಿಯೂ, ಹಣವೂ ಅದಕ್ಕೆ ಸಮನಲ್ಲ. ಒಂದೇ ಕ್ಷಣದಲ್ಲಿ ೧.೩ಬಿಲಿಯನ್ ಜನರಲ್ಲಿ ಹೆಮ್ಮೆಯ ಭಾವ ಮೂಡಿಸುವುದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ” ಎಂದಿದ್ದಾರೆ ಕುಲದೀಪ್.

ಒಂದೆಡೆ ಸಾಕ್ಷಿಗೆ ಹಣದ ಸುರಿಮಳೆಯಾಗುತ್ತಿದ್ದರೆ, ಕುಲದೀಪ್ ಮಾತ್ರ ಬರಿಗೈಯ್ಯಲ್ಲಿದ್ದಾರೆ. ಇಲ್ಲಿಯವರೆಗೆ ರೆಸ್ಟ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಆಗಲಿ ಅಥವಾ ಇನ್ನಾವುದೇ ಸಂಸ್ಥಗಳಾಗಲಿ ಕುಲದೀಪ್ ಅವರಿಗೆ ಬಹುಮಾನ,ಹಣವನ್ನ ಘೋಷಿಸಿಲ್ಲ. ಹರ್ಯಾಣ ಸರ್ಕಾರ ೧೦ಲಕ್ಷ ಘೋಷಿಸಿದ್ದರೂ ಕೂಡ, ಸನ್ಮಾನ ಸಮಾರಂಭದಲ್ಲಿ ಸಾಕ್ಷಿಗೆ ೨.೫ಕೋಟಿ ಬಹುಮಾನಹಣವನ್ನು ಮುಖ್ಯಮಂತ್ರಿ ಎಮ್.ಎಲ್.ಕಟ್ಟರ್ ನೀಡುವಾಗ ಅದೇ ಸ್ಟೇಜಿನಲ್ಲಿದ್ದ ಕುಲದೀಪ್’ಗೆ ಮಾತ್ರ ಏನನ್ನೂ ನೀಡಿಲ್ಲ.

ಚಾಂಪಿಯನ್ ರೆಸ್ಟ್ಲರ್ ವಿನೇಶ್ ಫೊಗತ್ ಬಗ್ಗೆ ಹೇಳುತ್ತಾ, “ಆಕೆ ಗಾಯಗೊಳ್ಳದಿದ್ದಿದ್ದರೆ ಭಾರತಕ್ಕೆ ಇನ್ನೊಂದು ಪದಕ ಖಂಡಿತವಾಗಿಯೂ ಬರುತ್ತಿತ್ತು. ಇದು ನಿಜಕ್ಕೂ ದುರಾದೃಷ್ಟ. ಮೊದಲ ಬಾರಿ ತನ್ನ ಕೈಗೆ ಸಣ್ಣ ಗಾಯವಾಗಿದ್ದರೂ ಕೂಡ ತನ್ನ ಎದುರಾಳಿಯನ್ನ ೧೧-೦ ಯಿಂದ ಸೋಲಿಸಿದ್ದಳು. ಆಕೆ ಎಷ್ಟು ತಯಾರಿ ನಡೆಸಿದ್ದಳು ಎನ್ನುವುದನ್ನ ತೋರಿಸುತ್ತದೆ ಇದು. ಆದರೆ ಎರಡನೇ ಬಾರಿಯಲ್ಲಿ ಬಲಗಾಲಿನ ಮಂಡಿಯ ಲಿಗಮೆಂಟ್ ಹರಿದಿತ್ತು. ಆಕೆ ಎಂತಹ ಫಾರ್ಮ್’ನಲ್ಲಿದ್ದಳು ಎಂದರೆ ಆಕೆ ಖಂಡಿತ ಚಿನ್ನದ ಪದಕ ಗೆಲ್ಲುತ್ತಾಳೆಂಬ ಭರವಸೆಯಲ್ಲಿದ್ದೆ.” ಎನ್ನುತ್ತಾರೆ ಕುಲದೀಪ್. ಆಕೆ ಗುಣಮುಖಳಾಗಲು ಇನ್ನೂ ಆರು ತಿಂಗಳು ಬೇಕಾಗಬಹುದು. ಆಕೆಯ ಮೇಲೆ ಸಂಪೂರ್ಣ ಭರವಸೆ ಇಟ್ಟಿರುವ ಕುಲದೀಪ್ “ಆಕೆ ಚಾಂಪಿಯನ್ ಮೆಟಿರಿಯಲ್..ಆಕೆ ಆದಷ್ಟು ಬೇಗ ತನ್ನ ಬೆಸ್ಟ್ ಫಾರ್ಮ್’ಗೆ ಬರಲಿದ್ದಾಳೆ. ಟೋಕಿಯೋದಲ್ಲಿ ಖಂಡಿತ ಪದಕ ಗೆಲ್ಲುತ್ತಾಳೆ” ಎನ್ನುವರು.

ಸಾಕ್ಷಿ ಸದ್ಯ ತಮ್ಮ ಗೆಲುವನ್ನ ಸಂಭ್ರಮಿಸುತ್ತಿದ್ದಾಳೆ. ಎಲ್ಲೆಡೆಯಿಂದ ಬಹುಮಾನ ಹಣ, ಬಿ.ಎಮ್.ಡಬ್ಯೂ ಕಾರ್, ನೌಕರಿ, ಪುರಸ್ಕಾರಗಳು ಹರಿದು ಬರುತ್ತಿದೆ. ಕೆಲವೊಮ್ಮೆ ಯಶಸ್ಸು ವ್ಯಕ್ತಿಯನ್ನು ತನ್ನ ಶ್ರಮ ಹಾಗೂ ಗುರಿಯಿಂದ ದೂರ ಮಾಡುತ್ತದೆ. ಆದರೆ ಕುಲದೀಪ್ ತನ್ನ ಶಿಷ್ಯೆ ಸಾಕ್ಷಿಯ ಗಮನವನ್ನು ತನ್ನ ಗುರಿಯಿಂದ  ಬೇರೆಡೆ ಹೊರಳಲು ಬಿಡುವುದಿಲ್ಲ ಎಂದಿದ್ದಾರೆ. “ಈ ಸಂಭ್ರಮದ ಕ್ಷಣಗಳ ಮೇಲೆ ಆಕೆಯ ಹಕ್ಕಿದೆ. ಹಾಗಾಗಿ ಸದ್ಯ ಆಕೆಯನ್ನು ಡಿಸ್ಟರ್ಬ್ ಮಾಡುವುದಿಲ್ಲ. ಒಮ್ಮೆ ಇವೆಲ್ಲ ಮುಗಿದ ನಂತರ ಮತ್ತೆ ಆಕೆ ದಿನಚರಿ ಮೊದಲಿನಂತಾಗಲಿದೆ” ಎನ್ನುತ್ತಾರೆ ಕುಲದೀಪ್ ಮಲ್ಲಿಕ್.

ಕುಲದೀಪ್ ಅವರು, ಆ ಒಂದು ಕ್ಷಣ ನಮ್ಮೆಲ್ಲರನ್ನೂ ಹುಚ್ಚೆದ್ದು ಸಂಭ್ರಮಿಸುವಂತೆ ಮಾಡಿದ್ದಾಗ್ಯೂ ಯಾವುದೇ ಫಲಾಪೇಕ್ಷೆಯನ್ನು ಹೊಂದಿಲ್ಲ, ಗ್ರೇಟ್ ಅಲ್ವಾ??

(ಮಣಿಂದರ್ ದಬಸ್ ಅವರು  “ಇಂಡಿಯಾ ಟೈಮ್ಸ್” ನಲ್ಲಿ ಬರೆದಿರುವ ಈ ಲೇಖನವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ)

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!