ಕಥೆ

ಭಾಮಿನಿ

ಅವ ಬಂದಾಗ ಎದಿರಾಗಬಾರದು ಎಂಬ ಹಿಂಜರಿಕೆಇತ್ತು. ಹೀಗಾಗಿಯೇ ನೆವ ಮಾಡಿ ಬಾಜೂ ಮನೆಯಶಾಮರಾಯರ ಕಡೆ ಹೋಗಿದ್ದೆ. ವಾಸು ಮಾಮಾನಜೊತೆ ಅವನ ಹರಟೆ ಜೋರಾಗಿ ನಡೆದಿತ್ತು. ಸ್ವಲ್ಪಅನ್ನುವುದಕ್ಕಿಂತ ಪೂರ್ತಿಯೇ ಬದಲಾಗಿದ್ದ. ಕೂದಲಿಗೆಢಾಳಾಗಿ ಬಣ್ಣ ಬಡಿದುಕೊಂಡಿದ್ದ. ಬೊಜ್ಜುಸ್ವಲ್ಪ ಅತೀಅನ್ನಿಸುವಂತಿತ್ತು. ಒಬ್ಬನೇ ಬಂದಿದ್ದಾನೆ. ಇದ್ದಾಗಲೇಶಾಮರಾಯರ ಮನೆಯಲ್ಲಿ ಸುದ್ದಿ ಹಬ್ಬಿತ್ತು.ಪಡಸಾಲೆಯಲ್ಲಿ ಕುಳಿತ ಅವನ ಮುಂದೆ ಹಾದೇ ಅಡಿಗೆಮನೆಗೆ ಹೋಗಬೇಕು. ನನ್ನ ನೋಡಿದನೋ ಇಲ್ಲವೋಗೊತ್ತಾಗಲಿಲ್ಲ. ಹರಟೆ ಜೋರಾಗಿತ್ತು. ಗಮನಿಸಿರಲಿಕ್ಕಿಲ್ಲಅಂದುಕೊಂಡೆ. ಅವನನ್ನುಇಷ್ಟು ವರ್ಷದ ನಂತರನೋಡುತ್ತಿರುವುದಕ್ಕೋ ಏನೋ ಗೊತ್ತಿಲ್ಲ ಯಾಕೋಎದೆಯಲ್ಲಿ ಅಳುಕು. ಒಂಥರಾ ಅಧೈರ್ಯದ ಭಾವನೆ,ತಪ್ಪು ಮಾಡಿರುವ ಹಾಗೆಅವನ ಊಟಮುಗಿಯುವವರೆಗೂ ಕಣ್ಣು ತಪ್ಪಿಸಿಯೇ ಇದ್ದೆ. ಮೇಲಿನಪಡಸಾಲೆಯಲ್ಲಿ ಗಂಡಸರೆಲ್ಲ ಅಡ್ಡಾಗಿದ್ದರು. ಹೆಂಗಸರುಹರಟೆಯಲ್ಲಿ ಮಗ್ನರಾಗಿದ್ದರು. ಮಗಳು ಮಾವಿನಕಾಯಿಸಲುವಾಗಿ ಪೀಡಿಸುತ್ತಿದ್ದಳು. ಅದೇ ಗಿಡಗಿಡದ ತುಂಬತೊನೆಯುವ ಹಸಿರು, ಕಾಯಿಗಳು. ಎಷ್ಟೊಂದು ನೆನಪು ಗಿಡದ ಸುತ್ತ ಸುತ್ತಿಕೊಂಡಿವೆ ಅಲ್ಲ… !

ಭಾಮಿನಿ ಹೆಂಗಿದ್ದೀ…’ ಕಾಯಿಗೆ ಕಲ್ಲು ಬೀಸುತ್ತಿದ್ದವಳುದನಿ ಬಂದ ಕಡೆ ತಿರುಗಿದೆ. ಅವ ನಿಂತಿದ್ದ ಅದೇಮುಗುಳು ನಗೆ ನಗುತ್ತ.

ಹೂಂ ಆರಾಮಏನು ಒಬ್ಬನ ಬಂದಿಮನಿಯವ್ರುಬರಲಿಲ್ಲ…” ಅರಿವಿಲ್ಲದೇ ನನ್ನ ದನಿಯಲ್ಲಿ ವ್ಯಂಗ್ಯಇಣುಕಿತ್ತು.

ನಮ್ಮ ಬಾಯಿ ಸಾಹೇಬರಿಗೆ ಇಲ್ಲಿ ಆಗಿ ಬರಲಿಕ್ಕಿಲ್ಲಅಂತ ತಿಳೀತು. ನಾನೂ ಒಬ್ಬಾವನ ಬರೂದು ಅಂತಠರಾವಾಗಿತ್ತು. ಮಗನಿಗೂ ಇಲ್ಲಿ ಯಾರೂಪರಿಚಯವಿಲ್ಲ. ಹಿಂಗಾಗಿ ನಾ ಒಬ್ಬಾವ್ನ ಬಂದೆ…”

ನನ್ನ ಮಗಳ ಹಠದ ಕಡೆ ಗಮನ ಹರಿಸಿ ಕಾಯಿಗಳ ಕಡೆಗುರಿ ಇಟ್ಟು ಕಲ್ಲು ಬೀಸಿದೆ ಒಂದು ಕಾಯಿ ಬಿದ್ದಾಗಮಗಳು ಚಪ್ಪಾಳೆ ಹೊಡೆದು ಸಂಭ್ರಮಿಸಿದಳು.

ನಿಂಗ ನೆನಪದೇನುನಾ ಗಿಡಾ ಹತ್ತಿ ಕಾಯಿ ಹರದಕೊಡತಿದ್ದೆ. ನೀನು, ಗೋಪಾಲ, ಶಶಿ, ನಂದಿ ಎಲ್ಲಾ ನನಗಕೊಡು ನನಗ ಕೊಡು ಅಂತ ಬೇಡತಿದ್ರಿ. ನಿನ್ನ ಸಲುವಾಗಿಸ್ಪೆಶಲ್ ಅಂತ ಯಾವಾಗಲೂ ನಾ ಒಂದು ಕಾಯಿ ಎಲ್ಲರಕಣ್ತಪ್ಪಿಸಿ ಕೊಡತಿದ್ದೆ…”

ಬೇಕಂತಲೇ ಸುಮ್ಮನಾದೆ. ಇದು ಅವನ ಗಮನಕ್ಕೆಬಂದಿತೋ ಏನೋ ಗೊತ್ತಿಲ್ಲ. ಅವನಿಂದತಪ್ಪಿಸಿಕೊಳ್ಳುವ ಹಂಬಲ ಮಗಳನ್ನು ಕರಕೊಂಡು ಒಳಗೆಹೊರಡಬೇಕೆನ್ನುವಷ್ಟರಲ್ಲಿ. ಅವ ಮಗಳಿಗೆ ಚಾಕಲೇಟುತೆಗದುಕೊಟ್ಟ. ಅದು ಸಿಕ್ಕ ಸಂತೋಷದಲ್ಲಿ ಅವಳುಕಾಯಿ ಮರೆತು ಓಡಿ ಹೋದಳು. ಸುಡುವ ಬಿಸಿಲುಎದುರಿಗೆ ನಿಂತ ಅವನು ಸುತ್ತಲೂ ಚೆಲ್ಲಿಕೊಂಡನೆನಪುಗಳು ನನ್ನ ಬಗ್ಗೆ ಎಲ್ಲಾ ತಿಳಕೊಂಡಿದ್ದಾನೆ. ವಾಸುಮಾಮಾನ ಜೊತೆ ಸಂಪರ್ಕ ಇಟ್ಟುಕೊಂಡವಎಲ್ಲಾಅವನಿಂದಲೇ ತಿಳಕೊಂಡಿರಬಹುದು.

ನೀ ನನಗ ಎಂದೂ ಕ್ಷಮಾ ಮಾಡಲಾರೆ ಅಂತ ಗೊತ್ತುಭಾಮಿನಿಬಹುಷಃ ತಪ್ಪಾತು ಅಂತ ಕೇಳುವಯೋಗ್ಯತಾನೂ ನಾ ಕಳಕೊಂಡೇನಿ ಅನಸ್ತದ…” ಅವನದನಿಯಲ್ಲಿ ಪ್ರಾಮಾಣಿಕತೆ ಇತ್ತು. ಆದರೂ ನಾಬಗ್ಗಬಾರದು.

ಇರಲಿ ಬಿಡು. ಈಗೊಂದು ವಾರ ಆತು. ಕನಸನ್ಯಾಗಅತ್ತಿ ಬರಲಿಕ್ಕ ಹತ್ಯಾಳ. ಮೊದಲ ಹೆಂಗ ಇದ್ಲು ಹಂಗಏನೂ ಬದಲಾಗಿಲ್ಲ. ಸುಮ್ಮನೆ ನಿಂದರತಾಳ ಏನೂಮಾತಾಡೂದಿಲ್ಲ ವಿಚಿತ್ರ ಅನಸ್ತದ ನನಗ. ನಾ ಎಷ್ಟುಅನ್ಯಾಯ ಮಾಡೇನಿ ಆದ್ರ ಅಕಿ ಏನೂ ಹೇಳೂದಿಲ್ಲ.ಸುಮ್ಮನ ನಿಂತಿರತಾಳ…”

ಹೋಗಲಿ ಬಿಡು ರಾಜಾ ಹಳೆ ಸುದ್ದಿ ಎಲ್ಲಾ ಯಾಕ ಈಗ.ನಸೀಬದಾಗ ಏನಿರತದನೋ ಅದ ಆಗೂದು… “ಒಳದನಿ ಕುದಿಯುತ್ತಿತ್ತು. ನಂಬಿಕೆಗಳಿಗೆ, ವಿಶ್ವಾಸಕ್ಕೆಅಂತಃಕರಣಕ್ಕೆ ಕೊಳ್ಳಿ ಇಟ್ಟು ಹೋದವ ಮತ್ತೆ ಹೀಗೆಎದಿರಾಗಿದ್ದಾನೆ. ನಾಟಕ ಮಾಡುತ್ತಿದ್ದಾನೆ

ಇಲ್ಲ ಭಾಮಿನಿ. ಅವಕಾಶ ಮತ್ತ ಸಿಗಲಾರದುನಾನೂ ನೊಂದೇನಿತಪ್ಪು ಅರಿವಾಗೇದ…”

ರಾಜಾ  ಹೇಳುತ್ತಲೇ ಇದ್ದ. ನಾ ಏನೂ ಪ್ರತಿಕ್ರಿಯೆನೀಡಬಾರದು ಎಂದುಕೊಂಡೆ. ಅವನ ಸಮ್ಮುಖದಿಂದಬಿಡುಗಡೆ ಆದರೆ ಸಾಕು ಅಂದುಕೊಂಡೆ. ಸರಿಯಾಗಿಚಹಾಕ್ಕೆ ಬರುವಂತೆ ಮಾಮಿ ಕರೆದಾಗ ನಿರಾಳವಾಗಿಎದ್ದೆ.

***

ರಾಜಾಭಾಮಿನಿ ಹಿಂಗ ನಮ್ಮಿಬ್ಬರ ಹೆಸರು ತಳಕುಹಾಕಿಕೊಂಡಿದ್ದವು. ಅವ್ವಳಿಗೆ ಅವ ಅಣ್ಣನ ಮಗ,ಅಪ್ಪನಿಗೆ ಅವ ಅಳಿಯ ಆಗುವವ. ಅಪ್ಪ ಅವ್ವಗ ಅವನಮ್ಯಾಲ ಪ್ರೀತಿ ನನಕಿಂತ ಒಂದು ತೂಕ ಹೆಚ್ಚಿಗೇನ ಇತ್ತು.ಇದು ನನಗ ಯಾವಾಗಲೂ ಅನಸತಿತ್ತು. ರಾಜಾಗೂನನ್ನ ಸಂಗ ಬೇಕಾಗಿತ್ತು. ಅಜ್ಜನ ಮನಿಗೆ ಸೂಟಿಗೆಹೋದಾಗ ಅವನೂ ಅಲ್ಲಿ ಬರತಿದ್ದ. ಗಿಡಾ ಹತ್ತಿಮಾವಿನಕಾಯಿ, ಪೇರಲಕಾಯಿ ಹರದು ಎಲ್ಲಾರಿಗೂಹಂಚತಿದ್ದ. ತನ್ನ ಪ್ಯಾಂಟಿನ ಕಿಸೆದಾಗ ನನಗಂತಒಂದೆರಡು ಮುಚ್ಚಟ್ಟು ಕೊಂಡು ಎಲ್ಲಾರ ಕಣ್ಣ ತಪ್ಪಿಸಿಕೊಡತಿದ್ದ. ಅವ ಹಂಗ ಕೊಟ್ಟ ಪೇರಲಕಾಯಿ.ಮಾವಿನಕಾಯಿ ಯಾಕೋ ಭಾಳ ರುಚಿ ಅನಸತಿದ್ವು.ಎಲ್ಲಾರೂ ಮಾತಾಡುತಿದ್ರು. ಮುಂದ ನಾವಿಬ್ಬರೂಜೋಡಿ ಆಗಾವ್ರು ಅಂತ ನಗೆಚಾಟಿಗಿ, ಚೇಷ್ಟಿಮಾಡುದ್ರಾಗ ಕಮ್ಮಿ ಇರಲಿಲ್ಲ. ರಾಜಾ ಪಿಯುಸಿ ಮುಗಿಸಿಇಂಜಿನೀಯರಿಂಗ್ ಓದಲಿಕ್ಕೆ ಹುಬ್ಬಳ್ಳಿಗೆ ಬಂದ. ನಮ್ಮಮನಿಯಲ್ಲಿಯ ಮಾಳಿಗೆ ಮೇಲಿನ ರೂಮು ಅವನವಾಸಕ್ಕೆ ತಯಾರಾತು. ಸದಾವರ್ಗ ಆಗುವ ನೌಕರಿಯಗಿರಿ ಮಾಮಾರಾಜಾನ ತಂದೆಹಾಗೂ ಮಾಮಿಮಗನನನ್ನು ಹಾಸ್ಟೆಲ್ನಲ್ಲಿಡದೆ ನಮ್ಮ ಮನೆಯಲ್ಲಿಟ್ಟರೆಮನೆ ಊಟ ಸಿಗುವುದು ಎಂದು ಲೆಕ್ಕ ಹಾಕಿದ್ದರು.ಮೇಲಾಗಿ ಮಾಮಿ ಅಪ್ಪಾಗ ಉದ್ದೇಶಿಸಿ ಮಾತೂಆಡಿದ್ರು.

ಭಾವುಜಿ ಈಗ ಅಳಿಯನ್ನ ಸೇವಾ ಮಾಡೂದು ಸುರುಹಚ್ಕೋರಿಟ್ರೇನಿಂಗ್ ಆದಂಗ ಆಗತದ…” ಅವರಮಾತು ನನ್ನಲ್ಲಿ ಹೊಸ ಕಂಪನ ತಂದಿದ್ದವು. ನಾ ಈಗಮೊದಲಿನ ಹಾಗೆ ಇಲ್ಲ ವಿಷಯ ಕನ್ನಡಿ ನನಗೆಹೇಳಿತ್ತು. ಅದೂ ರಾಜಾನ ಮುಂದ ಅಡ್ಡಾಡುವಾಗಅವನ ಕಣ್ಣು ನನ್ನ ಬೆನ್ನ ಹತ್ತೂದು ನನಗೆ ಗೊತ್ತಾಗಿತ್ತು.ಅವ ನನ್ನ ನೋಡಬೇಕು ಅನ್ನುವ ಹಂಬಲ ನನಗೂಇತ್ತು. ಮಾಳಿಗಿಮ್ಯಾಲಿನ ರೂಮಿನಲ್ಲಿ ಅವನ ವಾಸ.ಅಪ್ಪ, ಅವ್ವರಿಗೂ ನಾ ಹಗಲೆಲ್ಲ ಅವನ ರೂಮಿಗೆಹೋಗುವುದು ತೀರ ವಿರೋಧ ಇರಲಿಲ್ಲ. ಮುಂದಿನಅಳಿಯ ಅವನೇ ಎಂಬ ವಿಶ್ವಾಸದಲ್ಲಿ ಅವರಿದ್ದರು.ನಾವು ಬೇರೆ ಕಡೆ ಭೇಟಿಯಾಗುವುದಿತ್ತು. ಉಣಕಲ್ಕೆರೆದಂಡೆ, ಗಾರ್ಡನ ಹೀಗೆ ಅನೇಕ ವೇಳೆಸಿನೇಮಾಗಳಿಗೆ ಒಟ್ಟಿಗೆ ಹೋಗುವುದುಕೈಹಿಡಿದುಕೊಂಡು ಕೂಡುವುದು. ಇದು ಬರುಬರುತ್ತಮುತ್ತುಗಳ ವಿನಿಮಯದವರೆಗೂ ಮುಂದುವರೆಯಿತು.ನಾ ಮುಡಿದ ಮಲ್ಲಿಗೆ ಮೂಸುತ್ತ ನನ್ನ ತುಟಿ ಕಚ್ಚುತ್ತಅವ ನನ್ನಮೈಮರೆಸುತ್ತಿದ್ದ. ಸುಖ ಎಂಬುದು ಇದೇಹಾಗೂ ಇದು ನಿರಂತರ ಎಂಬುದು ನನ್ನನಂಬಿಕೆಯಾಗಿತ್ತು.

ಎಲ್ಲ ಸುಖಕರ ಕತೆಗಳಿಗೂ ಒಂದು ತಿರುವು ಬರುತ್ತದೆ.ನನ್ನ ಕತೆಯಲ್ಲಿ ಅದು ಬಂದಿತ್ತು. ಕೊನೇಯ ವರ್ಷದಇಂಜಿನಿಯರಿಂಗ್ ಪರೀಕ್ಷೆ ಮುಗಿಸಿದ ರಾಜಾ ಪುಣೆಗೆಹೋದ. ಅವನಿಗೆ ಅಲ್ಲಿಯ ದೊಡ್ಡ ಕಂಪನಿಯಲ್ಲಿಸಂದರ್ಶನಕ್ಕೆ ಕರೆ ಬಂದಿತ್ತು. ನೌಕರಿಯೂ ಸಿಕ್ಕಿತು.ಅದೇಕೋ ಅವನಿಂದಾಗಲಿ ಅಥವಾಗಿರಿಮಾಮಾನಿಂದಾಗಲಿ ಪತ್ರಗಳೇ ಇಲ್ಲವಾದವು. ನಾಡಿಗ್ರಿಯ ಕೊನೆ ವರ್ಷದಲ್ಲಿದ್ದೆ. ವಾಸುಮಾಮಾನ್ನ ಜೊತೆಮಾಡಿಕೊಂಡು ಅಪ್ಪ ಪುಣೆಗೆ ಹೋದರು. ಹೋದಮರುದಿನವೇ ಅಪರಾತ್ರಿ ಬಂದ ಅಪ್ಪ ತೀರ ಇಳಿದುಹೋದಂತೆ ಕಂಡ. ಬಚ್ಚಲಿಗೆ ಹೋದವನೇ ತಣ್ಣೀರುಸುರಿದುಕೊಂಡ ಅವನ ಕ್ರಿಯೆ ನನಗೆ ಅವ್ವನಿಗೆ ಗಾಬರಿಮೂಡಿಸಿತ್ತು. ಜೊತೆಯಲ್ಲಿ ಬಂದ ವಾಸು ಮಾಮಾಅವ್ವಳನ್ನು ಕರೆದುಕೊಂಡು ರೂಮು ಸೇರಿದ. ನನಗೋದಿಕ್ಕು ತೋಚದ ಗತಿ. ಅಪ್ಪ ಸಹ ವಾಸುಮಾಮಾಹಾಗೂ ಅವ್ವ ಇದ್ದ ರೂಮು ಸೇರಿಕೊಂಡಾಗ ನನಗೆಮನದಟ್ಟಾಯಿತು. ಪುಣೆಯಲ್ಲಿ ಏನೋ ಆಗಬಾರದ್ದುಆಗಿದೆ. ಎಷ್ಟೊ ಸಮಯದ ನಂತರ ನನಗೆ ರೂಮಿಗೆ ಕರೆಬಂತು. ಅವ್ವ ನನ್ನ ಕೈ ಹಿಡಿದು ಹತ್ತಿರಕೂಡಿಸಿಕೊಂಡಳು. ಅವಳು ನನ್ನಿಂದ ಉತ್ತರಬಯಸಿದ್ದಳು. ನನ್ನ ಹಾಗೂ ರಾಜಾನ ಸಂಬಂಧಎಲ್ಲಿವರೆಗೆ ಹೋಗಿದೆ ಎಂದು ಅವಳ ದನಿಕಂಪಿಸುತ್ತಿತ್ತು. ಅಲ್ಲಿದ್ದ ವ್ಯಕ್ತಿಗಳ ಕಣ್ಣು ನನ್ನೇನೋಡುತ್ತಿದ್ದವು. ನಾ ಅಳುಕಲಿಲ್ಲ. ಏನಿತ್ತು ಎಂಬುದನ್ನುಧೃಡವಾಗಿ ಹೇಳಿದೆ. ನನ್ನ ಉತ್ತರ ರೂಮಿನಲ್ಲಿದ್ದವರಿಗೆ ನಿರಾಳತೆ ತಂದಿತ್ತು.

ರಾಜಾನಿಗೆ ಅವನ ಕಂಪನಿಯ ಹಿರಿಯ ಅಧಿಕಾರಿ ಹೆಣ್ಣುಕೊಡಲು ಮುಂದಾಗಿದ್ದರು. ಅಷ್ಟೇ ಅಲ್ಲ ಅವ ಮುಂದಿನವಾರ ಜರ್ಮನಿಗೆ ಹೊರಟ್ಟಿದ್ದ. ಹೀಗಾಗಿ ತರಾತುರಿಯಲ್ಲಿಮದುವೆಯ ನಿಶ್ಚಯ ಕಾರ್ಯ ಮುಗಿದಿತ್ತು.ಗಿರಿಮಾಮಾ, ಮಾಮಿ ಮತ್ತು ರಾಜಾ ಯಾರಿಗೂ ವಿಷಯ ನಮಗೆ ತಿಳಿಸುವ ಸೌಜನ್ಯವೂ ಇರಲಿಲ್ಲ.ರಾಜಾ ನನ್ನಿಂದ ದೂರ ಸಾಗಿಹೋಗಿದ್ದ. ಕಟ್ಟಿಕೊಂಡಕನಸನ್ನು ಒಡೆದು. ನಾ ಅಳುತ್ತ ಕೂರವ ಹಾಗಿರಲಿಲ್ಲ.ಅವ್ವ ಬಹಳೇ ಸುಸ್ತಾದ ಹಾಗೆ ಕಾಣುತ್ತಿದ್ದಳು. ಅಪ್ಪಜಿದ್ದಿಗೆ ಬಿದ್ದವರಂತೆ ಇದೇ ವರ್ಷ ನನ್ನ ಮದುವೆಮಾಡುವುದಾಗಿ ಹೇಳಿದ. ಅವನ ಪ್ರಯತ್ನಕ್ಕೆ ಫಲವೂಸಿಕ್ಕಿತು. ಹುಡುಗನಿಗೆ ಬ್ಯಾಂಕಿನ ನೌಕರಿ, ಅತ್ತೆ ನಾದಿನಿಕಾಟ ಇಲ್ಲ ಮಾವನಿಗೆ ವಯಸ್ಸಾಗಿದೆ. ಧಾರವಾಡದಲ್ಲಿಸ್ವಂತ ಮನೆ ಹೀಗೆ ಅನೇಕ ಗುಣಗಳುಅಪ್ಪ ಒಪ್ಪಿಗೆಕೊಟ್ಟಿದ್ದ.ನಾನೂ ಹುಂಗುಟ್ಟಿದೆ. ಸಂಸಾರ ಸಾಗರದಲ್ಲಿಬಿದ್ದೆ. ಸಂಪ್ರದಾಯಸ್ಥ ಮನೆತನ. ಏಕಾದಶಿ, ಪಾರಣೆಆರಾಧನೆ ಹೀಗೆ ನೂರೆಂಟು ನಿಯಮಗಳು. ತಿಂಗಳಿಗೆಮೂರುದಿನ ಮೂಲೆಯಲ್ಲಿ ಕೊಡುವ ಶಿಕ್ಷೆ ವಯಸ್ಸಾದಮಾವ, ಇವರು ಊಟ ಮಾಡಿ ಬಡಿಸುತ್ತಿದ್ದರು. ದಿನಗಳಲ್ಲಿ ಮೊದಲೆಲ್ಲ ನಿಯಮಗಳು ಬಹಳೇಹತ್ತಿರ ಅನಿಸಿದವು. ಸುಲಭವಾಗಿ ಒಗ್ಗಿಕೊಂಡೆ.ಇದೊಂಥರಾ ಹೊಸದು ಮತ್ತು ಇದೇ ನನ್ನ ಬದುಕುಅನ್ನುವ ಹಾಗೆ.

ದಿನಗಳು ಉರುಳುತ್ತಿದ್ದವು. ಕಾಲಗತಿ ತನ್ನ ಜೊತೆ ಅವ್ವಅಪ್ಪರನ್ನು ಸೆಳೆದೂಯ್ಯಿತ್ತು. ನಾನು ಎರಡು ಮಕ್ಕಳತಾಯಿಯಾಗಿದ್ದೆ. ಮಾವ ಹಾಸಿಗೆ ಹಿಡಿದಿದ್ದರು. ಡಾಕ್ಟರ್ಉಸಾಬರಿ ಬೇಡ ಇದು ಅವರ ಹಟ. ಇವರೂ ನಾನುಹೇಳಿ ಹೇಳಿ ಸುಸ್ತಾಗಿದ್ದೆವು. ಮಕ್ಕಳುದೊಡ್ಡವರಾಗುತ್ತಿದ್ದರು ಮಾವ ರಾತ್ರಿ ಏಳುವವರುಅವರಿಗೆ ನೆರವಾಗಬೇಕು ಎಂಬ ನೆಪ, ಇವರು ಹೊರಗಮಲಗತಿದ್ರು. ಮಂಚದ ಮೇಲೆ ನಾ ಒಬ್ಬಾಕಿನ. ರಾತ್ರಿನೀರಸ ಅನಸತಿದ್ವು. ಎರಡು ಮಕ್ಕಳು ಆದವು ಇನ್ನುಅಂತಾದ್ದೆಲ್ಲ ವಿಚಾರ ಮಾಡೂದು ಕಮ್ಮಿಯಾಗಬೇಕುಅಂತ. ಅಲ್ಲಿ ಇಲ್ಲಿ ನಡೆಯುವ ಭಜನೆ ಕೀರ್ತನೆಗಳಗುಂಪಿಗೆ ಹೋದೆ. ಮನದಯಾವುದೋ ಮೂಲೆಯಲ್ಲಿಅಸಹನೆ ಇತ್ತು. ಆಗಾಗ ಹೆಡೆ ಎತ್ತುತ್ತಿತ್ತು. ನನ್ನ ಜೀವನಏನು ನಾ ಹಿಂಗಇವರ ಮನಿ ಸಂಪ್ರದಾಯ, ನಿಯಮಪಾಲಿಸ್ಕೋತ ಇರೂದು ಏನು. ನನಗ ಅಂತ ಕೆಲವುಆಶಾ, ಬಯಕಿ ಇದಾವನೊ ಅಂತ ಇವರು ಯಾಕತಿಳಕೊಳ್ಳೂದಿಲ್ಲ. ಇವರಂತೂ ಕಟ್ಟಾಸಂಪ್ರದಾಯವಾದಿ.ಜುಟ್ಟು ಬಿಟ್ಟಕೊಂಡಓಡಾಡುತಿದ್ರು. ಮಕ್ಕಳೂ ದೊಡ್ಡವರಾಗಿದ್ರು ಅವರಿಗೂತಮ್ಮ ಓರಗಿ ಹುಡುಗರು ತಮ್ಮ ಅಪ್ಪನ ಚಂಡಿಕೆ ಬಗ್ಗೆನಗುವುದು, ಇವರಿಗೆ ಅವಮಾನ ಆಗೂದು ನಡೆದಿತ್ತು.ಹೊರಗ ಒಂದು ಕಪ್ಪು ಚಹಾ ಸಹ ಇವರುಕುಡೀತಿರಲಿಲ್ಲ. ನಾನೂ ಅದಕ್ಕ ಒಗ್ಗಿಕೊಂಡಿದ್ದೆ. ಮಕ್ಕಳುಪ್ರಶ್ನೆ ಕೇಳತಿದ್ರು ಉತ್ತರ ಕೊಡುದು ಕಠಿಣ ಇತ್ತು. ನಮ್ಮಅಸಮಾಧಾನಕ್ಕಾಗಲಿ, ಭಾವನೆಗಳಿಗಾಗಲಿ ಇಲ್ಲಿಕಿಮ್ಮತ್ತಿರಲಿಲ್ಲ. ಆವಾಗಾವಾಗ ಇದರ ಬಗ್ಗೆ ಪ್ರಸ್ತಾಪಮಾಡಿದ್ರ ಸಿಗತಿದ್ದುದು ಪುಗಶಟ್ಟಿ ಉಪದೇಶ. ನಮ್ಮಸಂಸ್ಕೃತಿ, ಹೆಂಗಸರು ಸಂಸ್ಕೃತಿ ಉಳಸಲಿಕ್ಕೆ ಏನೆಲ್ಲತ್ಯಾಗ ಮಾಡ್ಯಾರ, ಹಂಗ ಹೆಂಗಸೂರಿಂದನ ಬಾಳು,ದೇಶಬೆಳಗತದ. ನಾನು ಚೀರಿ ಚೀರಿ ಹೇಳಬೇಕೆಂದೆ.ಹೆಂಗಸರಿಗೆ ಗೌರವ, ಮರ್ಯಾದೆ ಹಿಂಗ ಎಲ್ಲಾ ಬೇಡಿಹಾಕಿ ಅಕಿಯೊಳಗೂ ಒಂದು ಜೀವ ಅದ ಅದುಮಿಡೀತದ ಅನ್ನುವ ಹಕೀಕತ್ತು ಮರತ್ರು ಅಂತ ನನ್ನಬದುಕಿನ ಸಂಧಿಗ್ಧ ಪರಿಸ್ಥಿತಿಯಲ್ಲಿಯೇವಾಸುಮಾಮಾನಿಂದ ಆಮಂತ್ರಣ ಬಂದಿತ್ತು.ರಾಜಾಬರಾವಿದ್ದಾನಂತ. ಅವ ಹೇಗಿರಬಹುದು ಅವನಕತೆ ಏನುನನ್ನ ತಳಮಳಗಳಿಗೆ ಅವ ಉತ್ತರಆಗಬಲ್ಲನೇ… ?

ರಾಜಾ :

ಹುಬ್ಬಳ್ಳ್ಯಾಗ ಅತ್ಯಾನ ಮನಿಯೊಳಗಿನ ದಿನ ನಾಎಂದೂ ಮರೆಯುವ ಹಂಗಿಲ್ಲ. ಒಲಿಮ್ಯಾಲಿನ ಬಿಸಿ ಭಕ್ರಿಜೋಡಿ ರುಚಿಯಾದ ಪಲ್ಯ, ಚಟ್ನಿ, ಅತ್ತಿ ಭಕ್ರಿ ತಟ್ಟು ದೃಶ್ಯನಾ ಎಂದೂ ಮರೀಲಾರೆ. ಅತ್ತಿ ನನ್ನ ಅಳಿಯ ಎಂದುಒಪ್ಪಿಕೊಂಡಿದ್ದಳು ಕಾಕಾಗೂ ಇದು ಒಪ್ಪಿಗಿತ್ತು. ಹೀಗಾಗಿಭಾಮಿನಿ ನನ್ನ ಜೊತೆತಿರುಗುವುದು ಅವರಿಗೆಗೊತ್ತಿದ್ದರೂ ಸುಮ್ಮನಿರುತಿದ್ದರು. ಅವು ಮಧುರದಿನಗಳು ಕಾಲೇಜಿನ ರಂಗು ರಂಗಿನ ಜೀವನಭಾಮಿನಿಯೊಡನೆ ಒಡನಾಟ ಮುಂದಿನ ಜೀವನದ ಬಗ್ಗೆಮಧುರ ಕನಸು ರೂಪಿಸುತ್ತಿದ್ದ ಕಾಲ ಅದು.

ಕನಸುಗಳಿಗೆ ವಾಸ್ತವದ ಶಾಖ ಕೊಟ್ಟಿದ್ದು ಆಯಿ,ಇಂಜಿನಿಯರಿಂಗ್ ರಿಸಲ್ಟು, ಫಸ್ಟ್ಕ್ಲಾಸ್ನಲ್ಲಿಪಾಸಾದವನಿಗೆ ಪುಣೆಯಲ್ಲಿಯ ಕಂಪನಿಯಲ್ಲಿಸಂದರ್ಶನಕ್ಕೆ ಕರೆ ಬಂದಿತ್ತು. ಆಯ್ಕೆ ಆಗುವುದರಲ್ಲಿಯಾವ ಅನುಮಾನವಿರಲಿಲ್ಲ. ಗೆಳೆಯರ ಜೊತೆ ಪಾರ್ಟಿಮುಗಿಸಿ ತಡವಾಗಿ ಮನೆಗೆ ಬಂದವನಿಗೆ ಎದಿರಾದದ್ದುಆಯಿ. ನನ್ನ ಜೊತೆ ಮಾತನಾಡುವ ಇರಾದೆ ಹೇಳಿದಾಗನಾನು ನಾಳೆಗೆ ಮುಂದೂಡಲು ಪ್ರಯತ್ನಿಸಿದೆ. ಆದರೆಅವಳ ದನಿಯಲ್ಲಿದ್ದ ನಿಖರತೆ ನನ್ನ ಸೆಳೆಯಿತು. ಆಯಿಹೇಳುತ್ತಲೇ ಹೋದಳು. ನನ್ನ ಸಂದರ್ಶನ ತಗೂಂಡಭಂಡಿವಾಡೇಕರ್ ನಮ್ಮ ಮನೆಗೆ ಹುಡುಕಿಕೊಂಡುಬಂದಿದ್ದು, ಕಂಪನಿಯಲ್ಲಿ ನಾ ಆಯ್ಕೆಯಾದದ್ದುಹೇಳಿಹೋಗಿದ್ದರು. ಹಾಗೆಯೇ ತಮ್ಮ ಮಗಳುಮಾಧುರಿಯ ಪ್ರಸ್ತಾಪ ತಂದಿದ್ದರುಅವಳ ಜೊತೆಮದುವೆ ಆದರೆ ಕಂಪನಿಯಲ್ಲಿ ಸಿಗುವ ಉನ್ನತ ಹುದ್ದೆ.ವಿದೇಶದಲ್ಲಿ ಕೊಡುವ ತರಬೇತಿ ಹೀಗೆ ಅನೇಕಆಮಿಷಗಳನ್ನು ಆಯಿಯ ಮುಂದೆ ಇಟ್ಟಿದ್ದರು. ಮಾತು ಹೇಳುವಾಗ ಆಯಿಯ ದನಿ ಉತ್ಸಾಹದಿಂದಕಂಪಿಸುತ್ತಿತ್ತು. ಅಂದರೆ ಇದಾಗಲೇ ಅವಳಿಗೆ ಅವರಪ್ರಸ್ತಾಪ ಒಪ್ಪಿಗೆಯಾಗಿದೆ. ಆಯಿ ಸ್ಪಷ್ಟವಾಗಿ ಹೇಳಿದಳು.ಭಂಡಿವಾಡೇಕರ್ರ ಪ್ರಸ್ತಾಪ ಒಪ್ಪಿಕೊಳ್ಳುವುದರಿಂದ ನನ್ನಜೀವನದಲ್ಲಿ ಆಗುವ ಬದಲಾವನೆಗಳ ಬಗ್ಗೆ ನಾಅಳುಕುತ್ತಲೇ ಭಾಮಿನಿ ಬಗ್ಗೆ ಹೇಳಿದೆ.

ನಿಜ, ನಿಂಗ ಭಾಮಿನಿ ಬಗ್ಗೆ ಭಾವನಾ ಇರೂದು ಖರೇಅದ ಅಂತ ನನಗೂ ಗೊತ್ತಿದೆ. ಆದ್ರ ರಾಜಾ, ತಕ್ಕಡಿತೂಗಿ ನೋಡು. ಭಾಮಿನಿ ಜೋಡಿ ಏನೂ ಬರುವುದಿಲ್ಲ.ಆದ್ರ ಮಾಧುರಿ ಜೋಡಿ ವಿದೇಶದ ಟ್ರೇನಿಂಗು, ಉನ್ನತಹುದ್ದೆ, ಒಳ್ಳೆ ಪಗಾರ ಹಿಂಗ ಸಾಲುಸಾಲು ಬರತಾವ.ಜೀವನದಾಗ ನಾವು ಭಾವನಾ ಬದಿಗೊತ್ತಿ ಕೆಲವೊಂದುನಿರ್ಧಾರ ತಗೋಬೇಕಾಗತದ. ಹಂಗ ನಿಶ್ಚಯ ಮಾಡಿದಮನುಷ್ಯ ಬೆಳಿತಾನ, ಹೊಳಿತಾನ…” ಆಯಿಯ ಮಾತುಕೆಲಸ ಮಾಡಿತ್ತು. ಭಾಮಿನಿಯ ಚೆಲುವಿನ ಮುಖಮನಸ್ಸಿನಿಂದ ಮಾಯ ಆತು. ಮಾಧುರಿಯ ಮಾದಕಚೆಲುವು ವ್ಯಾಪಿಸಿಕೊಂಡಿತು.

ಎಲ್ಲಾ ಪಡೆದು ಬಂದ ಭಾಗ್ಯ ಅಂತ ಅತ್ತಿ ಸುದ್ದಿ ಕೇಳಿಹಳಹಳಿಸಿದಳಂತೆ. ವಾಸುಕಾಕಾನ ಎದುರು ತನ್ನ ಅಂಗೈತೋರಿಸಿಭಕ್ರಿ ಬಡದು ಬಡದು ಅಂಗೈಯೊಳಗಿನ ಗೆರಿಸವದು ಹೋದವು. ಭಕ್ರಿ ತಿಂದಾವ ಹಿಂಗದಗಾಮಾಡತಾನ ಅಂದುಕೊಂಡಿರಲಿಲ್ಲನಿಜ ನಾದಗಾಕೋರ ಅವರ ದೃಷ್ಟಿಯೊಳಗಆದ್ರ ನನ್ನ ಕನ್ನಡಿನನಗ ಹೇಳುತಿತ್ತು ನಾ ಪ್ರಾಕ್ಟಿಕಲ್ ಮನುಷ್ಯ ಅಂತಭಾವನಾದ ವೇಗದಾಗ ನಿರ್ಧಾರ ಯಾವಾಗಲೂತಗೋಬಾರದು. ಅಂಕಿಅಂಶ ತೂಗಿತೂಗಿ ಅಳದುಸುರದು ನಿರ್ಧಾರ ತಗೋಬೇಕು. ಮ್ಯಾನೇಜಮೆಂಟಿನನಿಯಮ ಅದನ್ನು ಬದುಕಿಗೂಅನ್ವಯಿಸಿಕೊಳ್ಳುವದರಾಗ ಏನು ತಪ್ಪುಕಾಣಲಿಲ್ಲನನಗ. ಜೀವನಕ್ಕ ಗತಿ ಬಂದಿತ್ತು.ಮಾಧುರಿಯ ಜೊತೆ ಕಳೆದ ರಸ ನಿಮಿಷಗಳು, ವಿದೇಶಪ್ರವಾಸ, ಎಕ್ಸಿಕ್ಯೂಟಿವ ಹುದ್ದೆಮುಂಬಯಿಯೊಳಗೆಆರಾಮ ಅನಿಸುವ ಫ್ಲಾಟು, ಕಾರು ಹಿಂಗ ಸುಖಅನ್ನುವುದು ಕಾಲುಚೆಲ್ಲಿ ಬಿದ್ದಿತ್ತು.

ಸುಖದ ಅಮಲು ಯಾವಾಗ ಕರಗಲಿಕ್ಕೆ ಹತ್ತಿತ್ತುಗೊತ್ತಾಗಲೇ ಇಲ್ಲ. ಅಪ್ಪ ಹಾಗೂ ಆಯಿ ಹಾಗೂಮಾಧುರಿ ನಡುವೆ ಹೊಂದಾಣಿಕೆ ಕಮ್ಮಿ ಆತು ಜಗಳವಾದ ವಿವಾದ ಶುರು ಇಟ್ಟವು. ಅವು ತಾರಕಕ್ಕೇರಿದಾಗಆಯಿ ಹಾಗೂ ಅಪ್ಪಗ ಇನ್ನೂಂದ ಫ್ಲಾಟ್ನಾಗಇಡುವುದುನಾ ವಾರಕ್ಕೊಮ್ಮೆ ಅವರಿಗೆ ಭೇಟಿಆಗಿಬರುವುದು ಹಿಂಗ ಠರಾವಾತು. ಆಯಿಗನೋವಾಗಿತ್ತು. ಅಪ್ಪ ಎಂದಿನಂತೆ ನಿರ್ಲಿಪ್ತ, ಮಾಧುರಿಒಂದು ಸಲನೂ ನನಗ ಅಪ್ಪ ಆಯಿ ಇದ್ದ ಫ್ಲಾಟ್ಗೆಹೋಗಲು ಜೊತೆಗೂಡಲಿಲ್ಲ. ಅವರ ಬಗ್ಗೆ ಆಕೆಮಾತನಾಡುತ್ತಲೇ ಇರಲಿಲ್ಲ. ನನಗೆ ಇದು ಸಹನಆಗತಿರಲಿಲ್ಲ ಆದ್ರ ನಾನ ಶಾಣ್ಯಾ ಆದೆ. ಮೌನಆಶ್ರಯಿಸಿದೆ. ಮಗ ರಾಹುಲ್ ಸಹ ಅಜ್ಜ, ಅಜ್ಜಿ ನೆನಪುತಗೀತಿರಲಿಲ್ಲ. ಮಾಧುರಿ ಸುಮ್ಮನ ಕೂಡುವವಳಲ್ಲಇದು ನನಗ ಮೊದಲ ತಿಳಿದಿತ್ತು. ಈಗೀಗಂತೂ ಅವಳಪಾರ್ಟಿ, ಕ್ಲಬ್ ವಿಪರೀತ ಆದ್ವು ಅಂತ ಅನಿಸಿ ಒಂದುಸಲ ಅವಳಿಗೆ ಆಕ್ಷೇಪಿಸಿದೆ.

ರಾಜಾ ನೀ ಇನ್ನೂ ಅದ ಧಾರವಾಡದಮೆಂಟಾಲಿಟಿಯೊಳಗೆ ಇರೂದು ನಂಗ ಬೇಜಾರಾತು.ಜಗತ್ತು ಬದಲಾಗೇದ ಅದರ ಜೋಡಿ ನಾವು ಹೆಜ್ಜೆಹಾಕಬೇಕು. ನಮ್ಮ ಲೆವಲ್ಗ ತಕ್ಕಂಗ ಪಾರ್ಟಿ, ಕ್ಲಬ್ಬುಬೇಕಬೇಕು. ನೀನ ವಿಚಾರ ಮಾಡುಇದರಿಂದ ನಿನ್ನಸ್ಟೇಟಸ್ಸೂ ಹೆಚ್ಚಿಗೆ ಆಗತದ ಸುಮ್ಮನ ದೊಡ್ಡಪುರಾಣಬ್ಯಾಡ ನಿಂಗ ಬೇಡಾದ್ರ ಬಿಡುನಂಗ ತಡೀಬ್ಯಾಡ…”

ನನಗ ಅವಳನ್ನು ತಡೆಯುವ ಶಕ್ತಿ ಇರಲೇ ಇಲ್ಲ.ರಾಹುಲ್ನನ್ನು ನೋಡಿಕೊಳ್ಳಲು ಆಯಾ ಇದ್ದಳು.ನನಗ ತಲಿ ಬಿದ್ದು ಹೋಗುವಷ್ಟು ಒತ್ತಡ ಕೆಲಸದ್ದು.ಯಾಕೋ ಅನಸತದ ರೊಕ್ಕ, ಅಧಿಕಾರ ಮನಷ್ಯಾಗಸಿಗಲಿಕ್ಕೆ ಸುರು ಆತು ಅಂದ್ರ ಅದಕ್ಕ ನಿಲಗಡೆನಇರುವುದಿಲ್ಲ ಅನಾಯಾಸವಾಗಿ ದೊರೆತದ್ದಲ್ಲ ಪದವಿ. ಹಿಂದೆ ನನ್ನ ಪರಿಶ್ರಮ ಅದ. ಆದ್ರ ಮಾಧುರಿಗೆನನ್ನ ಸ್ಥಿತಿ ಅವರ ಅಪ್ಪನ ದೇಣಿಗಿ ಅಂತ ಅನಸತದಒಂದೆರಡು ಸಲ ಹಂಗಂತ ಮಾತಾಡಿಯೂ ತೋರಿಸ್ಯಾಳಅಕಿ. ನನಗ ಸಿಟ್ಟು ಬಂದಿತ್ತು ಖರೇಆದ್ರತಡಕೊಂಡಿದ್ದೆ. ಅಕಿ ಅಪ್ಪನದು ಸಾಧು ಸ್ವಭಾವ. ನನ್ನ ಕೈಹಿಡದು ತಮ್ಮ ಮಗಳ ಹಠಮಾರಿತನಕ್ಕ ಇಲಾಜಿಲ್ಲಅನ್ನುವ ರೀತಿ ಮಾತಾಡಿದ್ರು. ನಾನೂ ಪ್ರಕರಣಅಲ್ಲಿಗೇ ಮರೆತೆ. ಆದ್ರ ಮಾಧುರಿ ಹಗಲೆಲ್ಲ ಚುಚ್ಚತಿದ್ಲು.ನಾ ಬೆಳೆದುಬಂದ ಪರಿಸರ ನಾ ಮಾತಾಡುವ ಕನ್ನಡಎಲ್ಲ ಅವಳಿಗೆ ತಾತ್ಸಾರ. ರಾಹುಲ್ ನನ್ನ ಜೊತೆ ಕನ್ನಡಕಲಿತ. ಆದ್ರ ಮಾಧುರಿ ಹಪಾಪಿ ಬ್ಯಾರೇ ಇತ್ತು. ಮಗಇಂಗ್ಲೀಷನ್ಯಾಗ ಮಾತಾಡಬೇಕು ಅಂತ. ಅವಳಿಗೆತಿಳಿಹೇಳಲಿಕ್ಕೆ ಹೋಗಿ ಸೋಲೊಪ್ಪಿಕೊಂಡೆ. ನನಗೆಗೊತ್ತಿಲ್ಲದಂತೆ ಕೆಲಸದ ಒತ್ತಡ ಆರೋಗ್ಯದ ಮೇಲೆಪರಿಣಾಮ ಮಾಡಿತ್ತು. ಬಿಪಿ, ಶುಗರ್ ಶುರು ಆಗಿದ್ವು.ಭಾಮಿನಿ ಅಪ್ಪ ನೆನಪಾಗತಿದ್ರು. ಎಷ್ಟು ಛಂದ ತಮ್ಮಆರೋಗ್ಯ ಕಾಪಾಡಿಕೊಂಡು ಬಂದಿದ್ರು. ಅವರುಮುಖ್ಯಅಂದ್ರ ಅವರಿಗೆ ಒತ್ತಡ ನೋವು ಇರಲೇ ಇಲ್ಲ.ನೋವು ಮೊದಲಸಲ ಕೊಟ್ಟಿದ್ದು ನಾನಯಾಕೆ ಹಂಗಮಾಡಿದೆಈಗ್ಯಾಕ ಅದು ಕಸಿವಿಸಿಕೊಡತದ.ಸಮಾಧಾನ ಸಿಕ್ಕೀತು. ಹಂಗ ಒಂದು ವೇಳೆ ಭಾಮಿನಿಬಂದಿದ್ದರೂ ಬಂದಿರಬಹುದು. ಲಗ್ನಕ್ಕ ಎಂಬ ಉಮೇದಿನನಗ ಇಲ್ಲಿ ವಾಸುಮಾಮಾನ ಕಡೆಸೆಳೀತೋ ಏನೂ…?

ಹೌದು ಭಾಮಿನಿಗೆ ಮತ್ತ ಭೇಟಿಯಾಗಬೇಕು. ಎಲ್ಲಾಹೇಳಿಕೊಳ್ಳಬೇಕು. ಕ್ಷಮಿಸು ಅಂತ ಕೇಳಬೇಕು. ಅಕಿಕ್ಷಮಾನೂ ಮಾಡಬಹುದು. ಅಕಿ ಬಗ್ಗೆನೂ ಗೊತ್ತದಗಂಡ ಸಂಪ್ರದಾಯವಾದಿ ಅಂತ ತಿಳೀತು. ಹೊರಗಏನೂ ತಿನದಿದ್ದ ಕಟ್ಟಾ ಮಡಿವಂತ. ಇಂಥಾವನ ಜೋಡಿಅದ್ಹೆಂಗ ಸಂಸಾರಮಾಡಿಕೊಂಡಿದ್ದಾಳೋಮಾರಾಯಿತಿಎರಡು ಮಕ್ಕಳು ಬ್ಯಾರೆ ಆಗ್ಯಾವ ಅಂತವಾಸುಮಾಮಾ ಹೇಳಿದ್ದ. ಅಕಿಗೆ ನನ್ನ ಬಗೆ ಇನ್ನೂಮಧುರಭಾವನ ಇರಲೇ ಬೇಕು. ನಾ ಬಂದೇನಿ ಅಂತಗೊತ್ತಾದ್ರೂ ಬಾಜೂಮನಿಗೆ ಹೋಗಿ ಕೂತಾಕಿ. ಎದಿರಾಎದಿರು ಸಿಕ್ಕಾಗಲೂ ಏನೂ ಮಾತಾಡದ ಸಿಡಕಿನ್ಯಾಕಿಅಕಿ.ಇಂಧಾಕಿ ಜೋಡಿ ನಾ ನನ್ನ ಮನಸ್ಸಿನ್ಯಾಗಇರೋದು ಹೆಂಗ ಹೇಳಿಕೊಳ್ಳಿ ಇದು ಕಷ್ಟದ ಕೆಲಸ. ಆದ್ರಅನಿವಾರ್ಯ ಅದ. ನಾ ಮುಂದ ಹೆಜ್ಜೆ ಇಡಲೇಬೇಕಾಗೇದ. ಒಂದು ವೇಳೆ ಗ್ರಹಗತಿ ಅನುಕೂಲ ಇದ್ರಅಕಿ ನನ್ನ ಕ್ಷಮಾನೂ ಮಾಡಬಹುದು. ಮತ್ತ ಎಲ್ಲಸುರಳಿತ ಆಗಬಹುದು. ಸಂಜಿನ್ಯಾಗ ಅಕಿಜೋತಿಹೊರಗ ಹೋಗುವ ನೆಪ ಮಾಡಿ ಎಲ್ಲಾಹೇಳಬೇಕು. ಹೌದು ಹಂಗ ಮಾಡೂದು ಬರೋಬ್ಬರಿ

***

ಓದುಗ ಮಹಾಶಯ, ರಸಭಂಗವಾಗಿದ್ದರೆ ಕ್ಷಮೆ ಇರಲಿ,ಭಾಮಿನಿ, ರಾಜಾ ಇಬ್ಬರೂ ಬಾಳ ಪುಟಗಳಲ್ಲಿ ತಮ್ಮಹಳವಂಡಗಳನ್ನು ತೋಡಿಕೊಂಡಿದ್ದಾರೆ. ಇನ್ನೇನು ಎಲ್ಲಸುಲಲಿತ ಆತು ನೀನು ನಿಟ್ಟುಸಿರು ಬಿಡುವ ವೇಳೆ ನಾನುಅಂದರೆ ಕತೆಗಾರ ವಕ್ಕರಿಸಿರುವೆ. ಹೌದು ನನ್ನ ಪ್ರವೇಶಅನಿವಾರ್ಯ ಅಂತ.ನನಗ ಅನಿಸಿದೆ. ರಾಜಾ ಭಾಮಿನಿಮೊದಲು ಪ್ರೇಮಿಸಿ, ಮುಂದೆ ರಾಜಾನ ಉದ್ದೇಶಅಥವಾ ಸ್ವಾರ್ಥ ಸಾಧನೆಯ ಸಲುವಾಗಿ ಬೇರೆ ಆದರು.ಬೇರೆ ಬೇರೆಯವರ ಜೊತೆ ಸಂಸಾರ ಮಾಡಿ,ಮಕ್ಕಳಾದರೂ ಹಳವಂಡಗಳಿಂದ ಮುಕ್ತಿಹೊಂದಲಿಲ್ಲ ಅವರು. ಇದ್ಯಾವ ಮಾಯೆ ಅವರಿಗೆಕಾಡಿದೆಯಾಕೆ ಇಬ್ಬರಲ್ಲೂ ಅದೇ ತುಡಿತಗಳಿವೆ.ಕಟ್ಟುಪಾಡು, ಸಮಾಜ ನಿಯಮ ಎಲ್ಲ ಸುಳ್ಳೇಅಥವಾಪ್ರೀತಿಯ ಸೆಳೆತದ ಮುಂದೆ ಅದೆಲ್ಲ ಗೌಣವೇಇರಬಹದು. ಅಲ್ಲವೇ ಮುಂದೇನು ಎಂಬ ಪ್ರಶ್ನೆನಿನ್ನಲ್ಲಿರುವ ಹಾಗೆ ನನಗೂ ಇದೆ. ಉತ್ತರ ಸಿಕ್ಕಾಗಖಂಡಿತ ತಿಳಿಸುವೆ. ಈಗ ಸಧ್ಯ ಅವರಿಗೆ ತಮ್ಮತುಡಿತಗಳುಭಾವನೆಗಳ ಬಗ್ಗೆ ದನಿಯತ್ತಲು ಅವಕಾಶಕೊಡುವ.

ತೀರದುದ್ದಕ್ಕೂ ತುಡಿತಗಳಿವೆ

ಅಲೆ ಬಂದು ಚುಂಬಿಸಲೆಂದು

ಅಲೆಗಳಿಗೂ ಮಿಡಿತವಿದೆ

ಸಮಾಗಮ ಆಗಿ ಬಿಡಲೆಂದು

-Umesh Desai

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!