Featured ಪ್ರಚಲಿತ

ಮೋದಿಯ ಮುಗಿಸಲೆಂದೆ ಬೆನ್ನು ಹತ್ತಿದ ಇಶ್ರತ್ ಎಂಬ ಭೂತ

ಸಾಮಾನ್ಯವಾಗಿ ಸತ್ತ ಮೇಲೆ ಇನ್ನೊಬ್ಬರನ್ನು ಪೀಡಿಸುವ ಆತ್ಮಕ್ಕೆ/ಜೀವಕ್ಕೆ “ಭೂತ” ಅಥವ “ದೆವ್ವ” ಎಂದು ಕರೆಯುವುದು ಉಂಟು. ಈ ಥರಹದ ಭೂತಗಳು, ಜೀವಿತ ಕಾಲದಲ್ಲಿ ಹಗೆ ತೀರಿಸಿಕೊಳ್ಳಲಾಗದೆ, ಜೀವನದ ನಂತರವೂ ತೀರಿಸಿಕೊಳ್ಳುತ್ತದೆ ಎಂಬ ಕಥೆಗಳನ್ನು ಕೇಳಿದ್ದೇವೆ. ಅದೇ ರೀತಿ ಈ “ಇಶ್ರತ್ ಜಹಾನ್’ ಎಂಬಾಕೆಯ ಕುರಿತಾಗಿ ಇತ್ತೀಚೆಗೆ ಬಹಳಷ್ಟು ಚರ್ಚೆಗೆ ಬರುತ್ತಿದೆ. ಈ ಭೂತವು ಬೆನ್ನು ಹತ್ತಿರುವುದು ನಮ್ಮ ಪ್ರಧಾನಿಯಾದ ಮೋದಿಯನ್ನು; ಕ್ಷಮಿಸಿ ಈ ಭೂತವನ್ನು ಬೆನ್ನು “ಹತ್ತಿಸಿರುವುದು” ಎಂದರೆ ಸರಿಯಾದ ಪ್ರಯೋಗವಾದೀತು. “ಇಶ್ರತ್” ಎಂಬ ಹೆಸರು ಇದೇ ಮೊದಲ ಬಾರಿಗೆ ಕೇಳುತ್ತಿರುವುದು ಅಲ್ಲ;2004ರಿಂದಲೂ ಇವಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇವಳ ಜೊತೆ ಮೋದಿಯವರ ಹೆಸರನ್ನು ಎಳೆಯುವುದು ಒಂದು ರೀತಿ ವಾಡಿಕೆಯಾಗಿದೆ. ಈ “ಇಶ್ರತ್” ಎಂಬಾಕೆ ಯಾರು? ಕೇವಲ ಅಮಾಯಕ ಮುಸ್ಲಿಮ್ ಮಹಿಳೆಯೋ ಅಥವ ಉಗ್ರವಾದಿಯೋ? ಇವಳಿಗೂ ಮೋದಿಯವರಿಗು ಏನು ನಂಟು? ಬನ್ನಿ ಈ ಲೇಖನದ ಮುಖಾಂತರ ಸವಿವರವಾಗಿ ತಿಳಿಯೋಣ.

ಇಶ್ರತ್ ಯಾರು?

          ಇಶ್ರತ್ ಜಹಾನ್ ರಾಜ಼ಾ ಎಂಬಾಕೆ 1985ರಲ್ಲಿ ಮುಂಬೈನಲ್ಲಿ ಜನೆಸಿದ್ದು. ಸಾಯುವ ಸಮಯದಲ್ಲಿ ಇವಳ ವಯಸ್ಸು 19 (2004). ಎಳೆಯ ವಯಸ್ಸಿನ ಹೆಣ್ಣು-ಮಗಳು, ಮೇಲಾಗಿ ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದವಳು. ಇವಳ ಬಗ್ಗೆ ಕನಿಕರ ಬರೋದು ಸಹಜವೆ. ಅದರಲ್ಲೂ ’ಕಾಂಗ್ರೇಸ್’ನಂತ ರಾಜಕೀಯ ಪಕ್ಷಕ್ಕೆ “Vote Bank Opportunity” ಕೂಡ ಆಗಿದ್ದವಳು. ಈ ಇಶ್ರತ್ “ಭಯೋತ್ಪಾದಕಿ” ಎಂದು, ಕೇವಲ ಗಾಳಿ ಮಾತಿನಲ್ಲೋ, ಅಥವ ಭಾವನಾತ್ಮಕ ಮಾತಿನಲ್ಲೋ ನಿರ್ಣಯಕ್ಕೆ ತಲುಪಿ, ಈ ಲೇಖನವನ್ನು ಮುಗಿಸಲಿಕ್ಕೆ ನಾನು ಪ್ರಯತ್ನ ಪಡುವುದಿಲ್ಲ. ಈಕೆಯಲ್ಲಿ “Vote Bank” ಯಾಕೆ ಇತ್ತು ಮತ್ತು ಇವಳ ಸಾವನ್ನು ರಾಜಕೀಯ ಉದ್ದೇಶಗಳಿಗೆ ಕಾಂಗ್ರೇಸ್ ಹೇಗೆ ಬಳಸಿಕೊಂಡಿತು ಎಂಬುದನ್ನು ಮುಂದಿನ ಮಾತುಗಳಲ್ಲಿ ಹೇಳುತ್ತೇನೆ. ಸಧ್ಯಕ್ಕೆ ಈ ಇಶ್ರತ್ ಎಂಬಾಕೆ ಮುಂಬೈನ “ಗುರು ನಾನಕ್ ಖಾಲ್ಸಾ” ಕಾಲೇಜಿನಲ್ಲಿ B.Sc. ಓದುತ್ತಿದ್ದ 19 ವರ್ಷದ ಮಹಿಳೆ. ಸತ್ತದ್ದು 2004  ’ಪೊಲೀಸ್ ಎನ್ಕೌಂಟರ್’ನಲ್ಲಿ.

ಎನ್ಕೌಂಟರ್ ಕಥೆ

          15 ಜೂನ್, 2004ರಲ್ಲಿ ಗುಜರಾತಿನ ಪೊಲೀಸರು, ಇಶ್ರತ್ ಮತ್ತು ಇನ್ನು ಮೂವರನ್ನು ’ಎನ್ಕೌಂಟರ್’ನಲ್ಲಿ ಮುಗಿಸಿರುವುದಾಗಿ ತಿಳಿಸಿದರು.ಅಹ್ಮದಾಬಾದಿನ “ಕೊಟರ್ ಪುರ್ ನೀರು  ಚಿಕಿತ್ಸೆಯ ಕಾರ್ಖಾನೆಯ” ಬಳಿ ಈ ಎನ್ಕೌಂಟರ್ ನಡೆದದ್ದು. ಸಾಮಾನ್ಯ ಗುಪ್ತಚರ ಇಲಾಖೆಯ ಮಾಹಿತಿಯಿಲ್ಲದೆ ಇಂಥಹ ’ಎನ್ಕೌಂಟರ್’ಗಳನ್ನು ಪೊಲೀಸ್ ಪಡೆ ಮಾಡುವುದಿಲ್ಲ. ಅಮ್ಜದ್ ಅಲಿ ರಾಣ, ಇಶ್ರತ್ ಜಹಾನ್ ರಾಜ಼ಾ, ಜಾವೆದ್ ಗುಲಾಮ್ ಶೇಖ್, ಮತ್ತು ಜ಼ಿಷಾನ್ ಜ಼ೊಹರ್ ಎಂಬ ನಾಲ್ವರನ್ನು ಎನ್ಕೌಂಟರ್ನಲ್ಲಿ ಮುಗಿಸಿಬಿಟ್ಟರು ಗುಜರಾತ್ ಪೊಲೀಸ್. 2002ರ ಗುಜರಾತಿನ ಹತ್ಯಾಖಾಂಡದ ನಂತರ, ’ಅಂದು ಗುಜರಾತಿನ ಮುಖ್ಯಮಂತ್ರಿಯಾದ ಮೋದಿಯವರನ್ನು ಮುಗಿಸಲು ಬಂದಿದ್ದ ನಾಲ್ಕು ಮಂದಿಯನ್ನು ಕೊಂದದ್ದು’ ಎಂದು ಗುಜರಾತ್ ಪೊಲೀಸ್ ವರದಿಯನ್ನು ನೀಡಿತ್ತು. ಇದು ಬರಿ “ಎನ್ಕೌಂಟರ್”ನ ಸ್ಥಳೀಯ ಘಟನೆಯ ವಿಶ್ಲೇಷಣೆ. ಇನ್ನು ’ಎನ್ಕೌಂಟರ್ ಆದದ್ದು ಯಾಕೆ?’ ಎಂದು ತಿಳಿಯುವ ಮುನ್ನ ಈ ನಾಲ್ವರ ಚರಿತ್ರೆಯನ್ನೊಮ್ಮೆ ನಿಮ್ಮ ಮುಂದಿಡುತ್ತೇನೆ.

ದುಷ್ಟ ಚತುಷ್ಟರು

  1. ಜ಼ಿಷಾನ್ ಜ಼ೊಹರ್ (Zeeshan Johar) ಎಂಬಾತ ಮೂಲತಃ ಪಾಕಿಸ್ತಾನದವ; ಗುಜ್ರನ್ವಾಲಾ ಎಂಬ ಊರಿನವ. ಪಾಕಿಸ್ತಾನದಿಂದ ಭಾರತಕ್ಕೆ ಶ್ರೀನಗರದಲ್ಲಿ ಅತಿಕ್ರಮಣ ಪ್ರವೇಶ ಮಾಡಿದ್ದಕ್ಕೆ 2003 ರಲ್ಲಿ ಇವನನ್ನು ಹಿಡಿಯಲಾಗಿತ್ತು. ’ಇವನನ್ನು ಹಿಡಿದು ಬಿಟ್ಟವರು ಯಾರು? ಪಾಕಿಸ್ತಾನಕ್ಕೆ ಮರಳಿ ಹೋಗುವುದು ಬಿಟ್ಟು ಗುಜರಾತಿಗೆ 2004ರಲ್ಲಿ ಯಾಗೆ ಬಂದ?’ ಎಂಬ ಪ್ರಶ್ನೆಗಳು ಕಾಡಬಹುದು. ಅದನ್ನೆ ಮುಂದಕ್ಕೆ ನೀವು ತಿಳಿಯುತ್ತೀರಿ.
  2. ಜಾವೆದ್ ಗುಲಾಮ್ ಶೇಖ್ (Javed Gulam Sheikh) ಎಂಬವ ಮೂಲತಃ ಕೇರಳ ರಾಜ್ಯದವನು. ಹುಟ್ಟಿನಿಂದ ಹಿಂದುವಾಗಿದ್ದು, ಮುಂಬೈನ “ಸಜ್ಜಾದ್” ಎಂಬಾಕೆಯನ್ನು ವಿವಾಹವಾಗಲು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡವ. ಈ ಎನ್ಕೌಂಟರ್ ಪ್ರಕರಣದ ಮುನ್ನ ಇವನ ಮೇಲೆ ’4 ಹಲ್ಲೆಯ’ ಪ್ರಕರಣಗಳು ಹಾಗು ’1 ನಕಲಿ ನೋಟಿನ ವ್ಯಾಪಾರದ’ ಪ್ರಕರಣ ದಾಖಲಾಗಿತ್ತು. ನಕಲಿ ನೋಟ್ ದಂಧೆ ಮಾಡುವವ ಮುಂಬೈನಿಂದ ಗುಜರಾತಿಗೆ ಯಾಕೆ ಬಂದಾ?’ ಎಂಬುದು ಒಂದು ದೊಡ್ಡ ಪ್ರಶ್ನೆ. ಇಷ್ಟಂತೂ ಸತ್ಯ, ದಂಧೆಯನ್ನು ಮುಂದುವರೆಸುವುದಕ್ಕಂತೂ ಬಂದಿರಲಿಲ್ಲ.
  3. ಅಮ್ಜದ್ ಅಲಿ ರಾಣ (Amjad Ali Rana): ಈತ ಕೂಡ ಮೂಲತಃ ಪಾಕಿಸ್ತಾನಿ. “ಹವೇಲಿ ದೀವಾನ್” ಎಂಬ ಗ್ರಾಮದವ. ಮತ್ತದೇ ಪ್ರಶ್ನೆ ಕಾಡುತ್ತದೆ. ಪಾಕಿಸ್ತಾನಿ ಓರ್ವ ಭಾರತಕ್ಕೆ ನುಸುಳಿದ್ದರೂ ಅಂದಿನ ಕೇಂದ್ರ ಸರ್ಕಾರ ಏನು ಮಾಡುತ್ತಿತ್ತು? ಕಡೆಲೆಕಾಯಿ ತಿನ್ನುತ್ತಿತೋ? ಅಥವ ಅವನು ಮಾಡಲು ಬಂದ ಕೆಲಸ ಪೂರೈಸಲಿ ಎಂದು ಸುಮ್ಮನಿತ್ತೋ?
  4. ಇಶ್ರತ್ ಜಹಾನ್ ರಾಜಾ (Ishrat Jahan Raza) ಈಕೆಯ ಚರಿತ್ರೆಯ ಬಗ್ಗೆ ಹೇಳಾಗಿದೆ. ಆದರೆ ಅದರಲ್ಲಿ ಈಕೆಯು ಭಯೋತ್ಪಾದಕಿ ಎಂಬ ವಿಷಯ ಬಂದಿರಲಿಲ್ಲ; ಕೇವಲ 19 ವಯಸ್ಸಿನ ವಿದ್ಯಾರ್ಥಿ ಎಂಬ ವಿಷಯ ಮಾತ್ರವಿತ್ತು. ಆದರೆ, ಮೊದಲನೆಯ ಪ್ರಶೆ ಇದು, “ಈಕೆ ನಿಜವಾಗಲೂ ಆಮಾಯಕಿಯಾಗಿದ್ದರೆ ನಕಲಿ ನೋಟು ದಂಧೆ ಮಾಡುವವರ ಜೊತೆ ಮತ್ತು ಪಾಕಿಸ್ತಾನಿಗಳ ಜೊತೆ ಮುಂಬೈನಿಂದ ಅಹ್ಮದಾಬಾದಿಗೆ ಓಡಿಹೋದದ್ದು ಏಕೆ?”. ಪಾಪ, ಅಮಾಯಕ ಹೆಣ್ಣುಮಗಳು! ಇರಲಿ, ಈ ’ಇಶ್ರತ್’ನ ಮತ್ತೊಂದು ಮುಖದ ಪರಿಚಯ ಮಾಡಿಕೊಡುತ್ತೇನೆ.

ಗುಪ್ತಚರ ಮಾಹಿತಿಗಳು

ಜ಼ಿಷಾನ್ ಜ಼ೊಹರ್ ಮತ್ತು ಅಮ್ಜದ್ ಅಲಿ ರಾಣ ಬಗ್ಗೆ ಈಗಾಗಲೆ ಹೇಳಿದ್ದೆ ಅಲ್ವಾ? ಇವರು ಕೇವಲ ಸಾಮಾನ್ಯ ಪಾಕಿಸ್ತಾನಿ ನಾಗರೀಕರಾಗಿರಲಿಲ್ಲ. ಗುಪ್ತಚರ ಮಾಹಿತಿಗಳ ಪ್ರಕಾರ ಇವರು “Lashkar-e-Toiba” ಎಂಬ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಯವರು. ಮಾಜಿ Intelligence Bureau (IB)ಮುಖ್ಯಸ್ಥರು ಮತ್ತು ಪ್ರಸಕ್ತ National Security Advisor (NSA) ಆಗಿರು “ಅಜಿತ್ ಧೊವಲ್”ರವರು, “ಇಶ್ರತ್ ಮತ್ತು ’ಜಾವೆದ್’ನನ್ನು ಬಳಸಿಕೊಂಡು LeTನವರು ನರೇಂದ್ರ ಮೋದಿಯವರ ಹನನ ಮಾಡಲು ಗುಜರಾತಿಗೆ ಬಂದದ್ದು” ಎಂದು ಒಮ್ಮೆ ಹೇಳಿದ್ದರು. ಇನ್ನು ಭಾರತದ ವಿರುದ್ಧ “Proxy war” ಮಾಡಲು ಕೂಡ ಒಂದು ದೊಡ್ಡ ಹುನ್ನಾರವನ್ನು ಹಾಕಿದ್ದರು ಎಂಬ ಶಂಕೆ ಕೂಡ ಗುಪ್ತಚರ ವಲಯದಲ್ಲಿ ಇತ್ತು. ಈ ಮಾಹಿತಿಯನ್ನು “Research and Analysis Wing ” (RAW) ನ ಸದಸ್ಯರಾದ ಆರ್.ಎನ್.ಎಸ್.ಸಿಂಗ್ ಅವರ ಸ್ವಲ್ಪ ದಿನಗಳ ಹಿಂದೆ ಪ್ರಕಟಿಸಿದ್ದರು.

ಈ ನಾಲ್ವರು, ಹೆಚ್ಚು ಜನರ ಸಂಪರ್ಕ ಮತ್ತು ಶಸ್ತ್ರಾಸ್ತ್ರಗಳ ಕ್ರೋಢೀಕರಣ ಮಾಡುತ್ತಿದ್ದರು. “ಎನ್ಕೌಂಟರ್” ಆದ ಜಾಗದಲ್ಲಿ ಈ ನಾಲ್ವರೊಂದಿಗೆ “AK-47”ನನ್ನು ವಶಪಡಿಸಿಕೊಳ್ಳಲಾಗಿತ್ತು. ಒಬ್ಬ ಅಮಾಯಕ ಹೆಣ್ಣಿಗೆ ಏಕೆ ಬೇಕು AK-47 ನಂಥಹ ಭಯಾನಕ ಶಸ್ತ್ರ? ಪ್ರಾಯಶಃ ತಿಳಿದಿರುವ ಮಾಧ್ಯಮದವರು ಮತ್ತು ರಾಜಕಾರಣಿಗಳನ್ನು ಕೇಳಿದರೆ ಮಾಹಿತಿ ಸಿಗಬಹುದು.

ಕಾಂಗ್ರೇಸಿನಿಂದ ಸರ್ಕಾರಿ ಯಂತ್ರಗಳ ದುರ್ಬಳಕೆ, ಹುತಾತ್ಮ ಇಶ್ರತ್, ಮತ್ತು ಕೊಲೆಗಾರ ಮೋದಿ

          ಮಣಿಯುವ ಪೊಲೀಸ್ ವ್ಯವಸ್ಥೆ, ಕಾಂಗ್ರೆಸ್-ಸ್ನೇಹಿ ಮಾಧ್ಯಮ, ಮತ್ತು ಕೆಲ ಪ್ರತಿಷ್ಠಿತ “NGO”ಗಳ ಮೂಲಕ ಅಂದಿನ “United Progressive Alliance” (UPA) ಸರ್ಕಾರ ಒಂದು ದೊಡ್ಡ ಹೊಂಚನ್ನೆ ಹಾಕಿತ್ತು. ಅದಕ್ಕಾಗಿ ಇವರಿಗೆ ಸಿಕ್ಕ ಬಲಿ “ಇಶ್ರತ್ ಜಹಾನ್”. ಈಕೆಯ ಸಾವನ್ನು “ನಕಲಿ ಎನ್ಕೌಂಟರ್” ಎಂದು ಒಂದು ಕೇಸು ರಚನೆ ಮಾಡುವ ಹುನ್ನಾರ. ಒಂದೇ ಏಟಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವುದು ಎಂದು ಕೇಳಿರಬಹುದು. ಈ ಚಾಣಾಕ್ಷತನವನ್ನು ಯಾರಾದರು ಕಾಂಗ್ರೇಸ್ ಪಕ್ಷದಿಂದ ಕಲಿಯಬೇಕು. ಮೊದಲನೆಯದಾಗಿ, ಇಶ್ರತ್ ನಕಲಿ ಎನ್ಕೌಂಟರ್’ನಲ್ಲಿ ಸತ್ತದ್ದು ಎಂದಾದರೆ, ಮೋದಿಯವರನ್ನು ಈ ಕೇಸಿನಲ್ಲಿ ಒಳಕ್ಕೆ ಹಾಕಿಸಬಹುದು (ಅವರ ಆದೇಶದ ಮೇರೆಗೆ ಗುಜರಾತ್ ಪೊಲೀಸ್ ಇಶ್ರತ್ ಹನನ ಮಾಡಿದ್ದು ಎಂದು). ಎರಡನೆಯದು, ಇಶ್ರತ್ ಮುಸಲ್ಮಾನ ಜನಾಂಗಕ್ಕೆ ಸೇರಿದವಳಾದ್ದರಿಂದ, ಅವಳು ಸತ್ತದ್ದು ಎನ್ಕೌಂಟರ್”ನಲ್ಲಿ ಅಲ್ಲ, ಅದು ಒಂದು ಕೊಲೆಯೆಂದು, ಅಲ್ಪಸಂಖ್ಯಾತರ “Vote Bank” ಗಟ್ಟಿ ಮಾಡುವ ಹುನ್ನಾರವಾಗಿತ್ತು. ಛೇ! ಮತದ ಆಸೆಗೋಸ್ಕರ ಮತ್ತು ಇನ್ನೊಬ್ಬ ರಾಜಕಾರಣಿಯನ್ನು (ಅದು ಭಾರತದ ಒಂದು ರಾಜ್ಯದ ಮುಖ್ಯಮಂತ್ರಿ) ಜೈಲಿಗೆ ಹಾಕಿಸಿ ತಮ್ಮ ರಾಜಕೀಯ ಯಶಸ್ಸಿಗೋಸ್ಕರ, ಭಯೋತ್ಪಾದಕರನ್ನು ಅಮಾಯಕರಾಗಿ ತೊರ್ಪಡಿಸಿದ ಪಕ್ಷ ಈ ಕಾಂಗ್ರೇಸ್.

          ಆಸಿಫ಼ ಇಬ್ರಾಹಿಮ್, ನಮ್ಮ ದೇಶದ ಗುಪ್ತಚರ ಇಲಾಖೆಯ ಮುಖ್ಯಸ್ಥರು, ಈ ಇಶ್ರತ್ ಎಂಬಾಕೆ ಭಯೋತ್ಪಾದಕಿ ಎಂದು ಅಂದಿನ ಪ್ರಧಾನಮಂತ್ರಿಯಾದ ಸಿಂಗ್’ರವರಿಗೆ ಮತ್ತು ಗೃಹ ಸಚಿವರಾದ ಶಿಂದೆಯವರಿಗೆ ಹೇಳಿದ್ದು ಉಂಟು. ಇದೇ ಮಾತನ್ನು ಮುಂಚಿನ ಮುಖ್ಯಸ್ಥರಾದ ರಾಜೇಂದ್ರ ಕುಮಾರರೂ ಸಹ ಹೇಳಿದ್ದರು. ಹಿಂದಿನ IB Chief ರಾಜೇಂದ್ರ ಕುಮಾರರಂತೂ, “UPA ಸರ್ಕಾರದವರು CBI ನ ದುರ್ಬಳಕೆ ಮಾಡಿ ನರೇಂದ್ರ ಮೋದಿಯವರನ್ನು “ನಕಲಿ ಎನ್ಕೌಂಟರ್” ಕೇಸಿನಲ್ಲಿ ಸಿಕ್ಕಿಹಾಕಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಕೂಡ ಹೇಳಿದ್ದು ಉಂಟು. “ಇಬ್ರಾಹಿಮ್” ಮತ್ತು “ರಾಜೇಂದ್ರ ಕುಮಾರ” ಎಂಬ ಎರಡು ದಕ್ಷ ಅಧಿಕಾರಿಗಳು ನಮ್ಮ ದೇಶಕ್ಕೆ ಕೊಡುಗೆಯಾಗಿ ಬಂದದ್ದು. ಇವರ ಈ ಹೇಳಿಕೆಗಳಿಂದಲೆ, ಸತ್ಯಾಂಶ ಹೊರಕ್ಕೆ ಬಂದದ್ದು. ಇಷ್ಟೇಯೆನು, LeT ಕಾರ್ಯಕಾರಿಯಾದ “ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ” ಕೂಡ ಅಮೇರಿಕಾದ FBI ಅಧಿಕಾರಿಗಳಿಗೆ “ಇಶ್ರತ್ LeT ನ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದಳು” ಎಂದುಹೇಳಿಕೆ ನೀಡಿದ್ದನು.
ಪೊಳ್ಳು/ಬೊಕಳೆ ತನಿಖೆಗಳನ್ನು ಆಧಾರಿಸಿ ಸುಳ್ಳು ಕೇಸನ್ನು ಸೃಷ್ಠಿಸುವ ಮಹಾ ಪಿತೂರಿ ಒಂದು ನಡೆದಿತ್ತು.

ಘಟನಾ ಕಾಲಕ್ರಮಗಳು

  1. 15/06/2004 – ದುಷ್ಟ ಚತುಷ್ಟರ ಎನ್ಕೌಂಟರ್ ಪ್ರಕರಣ.
  2. ನಂತರ ಪ್ರಾರಂಭಿಕ ತನಿಖೆ ಮತ್ತು ಸುದ್ದಿ.
  3. 06/08/2009 ರಲ್ಲಿ ಭಾರತ ಸರ್ಕಾರದ “ಆಂತರಿಕ ಭದ್ರತಾ ಕಾರ್ಯದರ್ಶಿ”ಯಾದ (Under Secretary, Internal Security) ಆರ್.ವಿ.ಎಸ್. ಮಣಿಯವರು “ಇಶ್ರತ್ ಮತ್ತು ಇನ್ನು ಮೂವರನ್ನು ಲಷ್ಕರ್ ಕಾರ್ಯಕಾರಿಗಳು” ಎಂದು ಶಪಥ ಪತ್ರವನ್ನು (Affidavit) ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
  4. 30/09/2009 ಅದೇ ಶಪಥ ಪತ್ರವನ್ನು ತಿರುಚಿ “ಇಶ್ರತ್ ಲಷ್ಕರ್ ಕಾರ್ಯಕಾರಿಯಲ್ಲ” ಎಂದು ನ್ಯಾಯಾಲಯಕ್ಕೆ ನೀಡಲಾಯಿತು (UPA ಸರ್ಕಾರದ ಮಂತ್ರಿಗಳ ಆದೇಶಕ್ಕನುಗುಣವಾಗಿ affidavit ನ ಬದಲಾವಣೆ).
  5. 2010 – “ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ” ಅಮೇರಿಕಾದ FBI ಅಧಿಕಾರಿಗಳಿಗೆ “ಇಶ್ರತ್ LeT ನ ಮಹಿಳಾ ವಿಭಾಗದ ಮುಖ್ಯಸ್ತೆಯಾಗಿದ್ದಳು” ಎಂದು ಹೇಳಿಕೆ ನೀಡಿದ್ದು.
  6. ಜೂನ್ 2013 – Sunday Guardian ಪತ್ರಿಕೆಯು “ಡೇವಿಡ್ ಹೆಡ್ಲಿ”ಯ ಹೇಳಿಕೆಗಳನ್ನು ಪ್ರಕಟಿಸಿದ್ದು.
  7. 2016 – ಪ್ರತಿಷ್ಠಿತ ಮಾಧ್ಯಮಗಳಿಂದ ಸತ್ಯಾಂಶ ಪ್ರಕಟನೆ.

ಇಷ್ಟೇ ಅಲ್ಲ, ಇತ್ತೀಚೆಕೆ ಮಾಧ್ಯಮಗಳಲ್ಲಿ ಬಂದು ಮಾತನಾಡಿದ ಅಂದಿನ UPA ಸರ್ಕಾರ ಸಮಯದ ಕೆಲ IAS ಅಧಿಕಾರಿಗಳು, ’ಸರ್ಕಾರದ ಒತ್ತಡದಿಂದ ಕೇಸನ್ನು ಕಟ್ಟಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿತ್ತು’ ಎಂದು ಒಪ್ಪಿಕೊಂಡರು. ಈ ಇಶ್ರತ್ ಕೇಸಿಗಾಗಿ ಕೇಂದ್ರ ಸರ್ಕಾರದವರು CBI ನ ಒಂದು Special Investigation Team (SIT) ರಚಿಸಿತ್ತು. ಅದರ ಮುಖ್ಯಸ್ತರನ್ನಾಗಿ ಸತೀಶ್ ವರ್ಮಾ ಅವರನ್ನು ಮಾಡಿತ್ತು. ಈ ವರ್ಮಾರವರ ಮೇಲೂ ಸಹ “ನಕಲಿಎನ್ಕೌಂಟರ್”ನ ಆರೋಪಗಳಿದ್ದವು. ಐವರನ್ನು ಪೊಲೀಸ್ ಠಾಣೆಯಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪವಿದೆ. ಇವರನ್ನು SIT ಮುಖ್ಯಸ್ಥರಾಗಿ ಮಾಡಿದರೆ ಯಾವ ನ್ಯಾಯ ಸಿಗೊತ್ತೆ ಸ್ವಾಮಿ? ನೈತಿಕತೆಯಿಲ್ಲದವರು ಕಾರ್ಯಾಚರಣೆ ಮಾಡಿದರೆ “ಸುಳ್ಳು ಕೇಸೇ” ಗತಿ. IAS ಅಧಿಕಾರಿಯಾದ ಆರ್.ವಿ.ಎಸ್. ಮಣಿಯನ್ನು, ಈ ಸತೀಶ್ ವರ್ಮಾ,  cigarette ನ ಸುಡುವ ತುದಿಯಿಂದ ತೊಡೆಯನ್ನು ಸುಟ್ಟು, ಸುಳ್ಳು affidavit ಬಗ್ಗೆ ಹೇಳಿಕೆ ನೀಡಿಲು ಒತ್ತಾಯಿಸಿದರಂತೆ. ಯಪ್ಪಾ! CBI ನ ದುರ್ಬಳಕೆ ಮಾಡಿ ಪ್ರಾಮಾಣಿಕ IAS ಅಧಿಕಾರಿಗಳನ್ನು ಈ ಪಾಟಿ ಕಿರುಕುಳ ನೀಡೋದು ನ್ಯಾಯಾನ? ಒಬ್ಬ ಮೋದಿಯ ಮೇಲಿನ ದ್ವೇಷಕ್ಕೆ ಸರ್ಕಾರವನ್ನು ಈ ರೀತಿಯಾಗಿ ದುರ್ಬಳಿಕೆ ಮಾಡುವುದು ನ್ಯಾಯಾನ?  ಇದೇ SIT ಮತ್ತು CBI ಮಾಧ್ಯಮಗಳನ್ನು ಉಪಯೋಗಿಸಿ, “IB ಮತ್ತು RAW”ನ ಗುಪ್ತಚರ ಮಾಹಿತಿಗಳನ್ನು ತ್ಯಜಿಸಿ, ಸುಳ್ಳು ಕೇಸನ್ನು ಅದ್ಭುತವಾಗಿ ರಚಿಸಿದ್ದರು. ಇದ್ದಕ್ಕೆ ಸರಿಯಾಗಿ “ಉಪ್ಪು-ಖಾರ” ಹಾಕೊಕ್ಕೆ ಅಂತ, ಕೆಲ ಮಾಧ್ಯಮದವರು ಇದೇ ಸುಳ್ಳು ಕೇಸಿನ ಸುಳ್ಳು ವರದಿಗಳನ್ನು “ಟಾಮ್ ಟಾಮ್” ಎಂದು ಬಾರಿಸಿದರು. ಒಟ್ಟಿನಲ್ಲಿ ಎಲ್ಲರೂ ಸೇರಿ ಮೋದಿಯನ್ನು ಮುಗಿಸುವ ಸಂಚು ಇದಾಗಿತ್ತು.

ಸಮಾಪ್ತಿ

ಈ ಹುನ್ನಾರದಲ್ಲಿ ಮೋದಿಯವರದ್ದಂತೂ ಸಮಾಪ್ತಿಯಾಗಲಿಲ್ಲ. ಇಶ್ರತ್ ಎಂಬ ಭಯೋತ್ಪಾದಕಿಯ ಸಮಾಪ್ತಿಯ ಆಯ್ತು. ಆದರೆ ಅವಳ ಭೂತವನ್ನು ಹಿಡಿದು ಮೋದಿಯ ಬೆನ್ನ ಹತ್ತಲು ಇಂದಿಗೂ ಸಹ ತೊಳಗಳು ಕಾದು ಕೂತಿವೆ; ಅದು ಮಾಧ್ಯಮಗಳಲ್ಲಿರಬಹುದು, ರಾಜಕಾರಣಿಗಳಾಗಿರಬಹುದು, ಅಥವ ಕಾಂಗ್ರೇಸ್ ಪಕ್ಷದ ಉಪ್ಪು ತಿಂದ CBI ಇತ್ಯಾದಿ ಅಧಿಕಾರಿಗಳಾಗಿರಬಹುದು.

ಇಶ್ರತ್ ಜಹಾನ್ ಎಂಬ ಭಯೋತ್ಪಾದಕಿಯನ್ನು ಹೀರೋ ಮಾಡಿ, ನರೇಂದ್ರ ಮೋದಿಯನ್ನು ಸಿಕ್ಕಿಹಾಕಿಸಲು, ಪ್ರಾಮಾಣಿಕ IAS ಅಧಿಕಾರಿಗಳಿಗೆಕಿರುಕುಳ ಕೊಡಲು ಪ್ರೇರಣೆ ನೀಡಿದವರಿಗೆ ನನ್ನ ಧಿಕ್ಕಾರವಿರಲಿ! ಹೆಡ್ಲಿ confession ಮತ್ತು IAS ಅಧಿಕಾರಿಗಳ ಸತ್ಯಾಂಶ ಪ್ರಕಟಣಾನಂತರವೂ ಇಶ್ರತ್ ನನ್ನುvictim ಆಗಿ ತೋರಿಸುತ್ತಿರುವ/ಹೇಳುತ್ತಿರುವ ಎಲ್ಲಾ ಮಾಧ್ಯಮಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ನನ್ನ ಧಿಕ್ಕಾರವಿರಲಿ! IB report ನ ನಂತರವೂ,ಮೋದಿಯವರನ್ನು “fake encounter” ನಲ್ಲಿ ಒಳಕ್ಕೆ ಹಾಕಲು, ಇಶ್ರತ್ ಭಯೋತ್ಪಾದಕಿಯಲ್ಲ ಎಂದು Affidavit ನನ್ನು ಬದಲಾಯಿಸಿ ನ್ಯಾಯಾಲಯಕ್ಕೆ ಸುಳ್ಳುವರದಿಕೊಟ್ಟ ಎಲ್ಲರಿಗೂ ನನ್ನ ಧಿಕ್ಕಾರವಿರಲಿ!

ನಿಮ್ಮ ನಿರ್ಧಾರವಿಲ್ಲಿ ಅತ್ಯಮೂಲ್ಯವಾಗಿದೆ.  ಮುಂದಿನ ಬಾರಿ, ಈ  ತೋಳಗಳ ಪಕ್ಷಕ್ಕೆ ಮತ ನೀಡುವ ಮುನ್ನ ಒಮ್ಮೆ ಯೋಚಿಸಿ:

೧. IAS ಅಧಿಕಾರಿಗಳಿಗೆ cigarette ನಿಂದ ಸುಟ್ಟು ಕಿರುಕಿಳ ಕೊಟ್ಟವರ ಜೊತೆ ನೀವು ನಿಲ್ಲುತ್ತೀರಾ?

೨. “ಇಶ್ರತ್ ಭಯೋತ್ಪಾದಕಿಯಲ್ಲ, “ಬಿಹಾರದ’ ಪುತ್ರಿ'” ಎಂಬ ಧ್ವನಿಯೊಂದಿಗೆ ನಿಮ್ಮ ಸ್ವರವನ್ನು ಸೇರಿಸುತ್ತೀರಾ?

೩. ತಮ್ಮ ಅಧಿಕಾರದ ದಾಹದಿಂದ ಮತ್ತು ರಾಜಕೀಯ ಉದ್ದೇಶಗಳಿಂದ, ದೇಶದ್ರೋಹಿಗಳ ಪರವಾಗಿ ನಿಂತು, ದೇಶಭಕ್ತರನ್ನು ಮಟ್ಟಹಾಕಲು ಸದಾನಿರತರಾಗಿರುವವರ ವಿಚಾರಗಳೊಂದಿಗೆ ನಿಮ್ಮ ಸಮ್ಮತಿಯಿದೆಯಾ?

ಮೇಲ್ಕಂಡ ಪ್ರಶ್ನೆಗಳಿಗೆಲ್ಲಾ ನಿಮ್ಮ ಉತ್ತರ “ಇಲ್ಲ” ಎಂದಾದಲ್ಲಿ ಈ ತೋಳಗಳಿಗೆ ಬಹಿಷ್ಕಾರ ಹಾಕಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Vittal

ಪ್ರವೃತ್ತ ವಿದ್ಯಮಾನಗಳ ಚಿಂತಕ, ಲೇಖಕ. ಯೋಗ ತಜ್ಞ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!