ಕಥೆ

ಋಣಾನುಬಂಧ…….ಋಣಾನುಬಂಧ ರೂಪೇನ ಪಶು ಪತ್ನಿ ಸುತಾಲಯ

ಕೈಯಲ್ಲಿದ್ದ ಮೊಬೈಲ್ ತನ್ನ ರಾಗ ಆರಂಭಿಸಿತು…

ಕೈಗೆತ್ತಿ ನೋಡಿದರೆ ಶೇಷರಾಯರದ್ದು…

ಸಾಮಾನ್ಯವಾಗಿ ಉಭಯಕುಶಲೊಪರಿ ಮಾತಾಡುವ ಶೇಷರಾಯರು ಇಂದು ನೀವು ಫ್ರೀ ಆಗಿದ್ದರೆ ಒಂದುಸಲ ಬನ್ನಿ ..

ಅಗತ್ಯದ ಕೆಲಸವಿದ್ದರೆ ಯಾರಿಗಾದರು ಹೇಳಿ ಕೂಡಲೇ ಇಲ್ಲಿಗೆ ಬನ್ನಿ …..

ಬೇರೆ ಮಾತು ಅಡುವ ಮೊದಲೇ ಫೋನ್ ನಿಲ್ಲಿಸಿಬಿಟ್ಟರು,

ಮನಸಿನತುಂಬಾ ಹತ್ತು ಹಲವು ವಿಧದ ಆಲೋಚನೆ ..

ನಂದಗೋಕುಲ-ಕುಚೇಲನರಮನೆ,

ಮೂರು ದಶಕಗಳ ಹಿಂದೆ ಶೇಷರಾಯರು ಹುಟ್ಟುಹಾಕಿ ಬೆಳೆಸಿದ ಆಶ್ರಮ,

ನಂದಗೋಕುಲ ಇಂದು ಹೆಮ್ಮರವಾಗಿ ಹತ್ತಾರು ಜೀವರಾಶಿಗಳಿಗೆ ಆಶ್ರಯಧಾಮ.

ಬೇಡದೆ ಸಕಲ ಸಂಪತ್ತನ್ನು ಕುಚೇಲನಿಗೆ ನೀಡಿದ ಶ್ರೀಕೃಷ್ಣನಂತೆ ಈ ನಂದಗೋಕುಲ,

ಕೃಷ್ಣಾ ನೀನೆ ಗತಿ ಎನ್ನುವವರ ಅರಮನೆ,

ಅವಸರ ಅವಸರವಾಗಿ ಹೋಗಿ ನಂದಗೋಕುಲ ಸೇರಿದೆ ,

ಶೇಷರಾಯರು : ಬನ್ನಿ ಬನ್ನಿ ಶ್ರೀನಿವಾಸ್ ,

ನಂದಗೋಕುಲ ನಿಶ್ಶಬ್ದವಾಗಿತ್ತು,

ಎಲ್ಲರ ಮುಖವು ಬಾಡಿತ್ತು,

ಕೈಹಿಡಿದ ಶೇಷರಾಯರು ಸೀದಾ ರಾಧಮ್ಮನ ಕೋಣೆಗೆ ಕರೆದೊಯ್ದರು…

ನೋಡುತ್ತಿದ್ದಂತೆ ಎಲ್ಲರ ಮುಖದಲ್ಲೂ ದುಃಖ ದುಮ್ಮಾನ,

ರಾಧಮ್ಮ ಇನ್ನಿಲ್ಲ ಶ್ರೀಕೃಷ್ಣನ ಪಾದಸೇರಿದ್ದರು ,

ಕಡೆಯ ಕಾಲದಲ್ಲೂ ಅವರ ಬಾಯಲ್ಲಿದ್ದದ್ದು ಸೀನು ಸೀನು ಅನ್ನುವಮಾತು,

ಅವರು ಶ್ರೀನಿವಾಸನನ್ನು ಕರೆದರೋ ಇಲ್ಲ ನಿನ್ನನ್ನು ಕರೆದರೋ ಗೊತ್ತಿಲ್ಲ,

ರಾಧಮ್ಮ ನನ್ನನ್ನು ಪ್ರೀತಿಯಿಂದ ಕರೆಯುತ್ತಿದ್ದದ್ದು ಸೀನು ಸೀನು ಎಂದು,

ನಾನೆಂದರೆ ರಾಧಮ್ಮನವರಿಗೆ ಪ್ರಾಣ ,

ಅದೇನೋ ಅನ್ನುತಿದ್ದರು ನೀನು ನನ್ನ ಮಗನ ಹಾಗೆ,…….

ರಜಾದಿನಗಳಲ್ಲಿ ಅಲ್ಲಿಗೆ ಹೋಗಿ ಕೈಲಾದದ್ದನ್ನು ಮಾಡುವುದು ..

ಅಲ್ಲಿಯ ಜನರ ಸೇವೆ ಮಾಡುವುದು ಅವರ ಬೇಕು ಬೇಡಗಳಲ್ಲಿ …

ಹಲವಾರು ಬಾರಿ ರಾಧಮ್ಮನವರು ಅವರಿಗೆ ಕೊಟ್ಟ ಸಿಹಿ ತಿಂಡಿಯನ್ನು ನನಗೆ ಕೊಟ್ಟದ್ದು ಇದೆ,

ಶವವಾಗಿ ಮಲಗಿದ ರಾಧಮ್ಮನನ್ನು ಕಂಡ ನನ್ನ ಕಣ್ಣಲ್ಲಿ ನನಗರಿವಿಲ್ಲದೆ ನೀರು ಇಳಿಯಿತು….

ಮನಸಿನ ತುಂಬಾ ಬೇಸರ, ದುಃಖ, ಏನೇನೋ ಆಲೋಚನೆ,

ಬಾಳು ಎಷ್ಟೊಂದು ವಿಸ್ಮಯ, ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಇನ್ನೆಲ್ಲಿಯೋ ಸಾವು.

ರಾಯರು ಕೈಯಲ್ಲಿದ್ದ ಒಂದು ಪತ್ರವನ್ನು ಕೊಟ್ಟು..

ನಾನು ಅದನ್ನು ಓದಲಾರಂಭಿಸಿದಾಗ..

ಇದರಲ್ಲಿಯ ಅಕ್ಷರಗಳಷ್ಟೆ ನನ್ನದು ಆದರೆ ಇದರಲ್ಲಿರುವ ಶಬ್ದ, ವಾಕ್ಯ ಅರ್ಥ ಎಲ್ಲಾ ರಾಧಮ್ಮನದು,

ಅವರ ಕಾಲಾನಂತರ ಇದನ್ನು ನಿನಗೆ ಕೊಡಬೇಕೆಂಬುದು ಅವರಿಚ್ಚೆ,

………..

ಪ್ರೀತಿಯ ಸೀನುವಿಗೆ ರಾಧ ಅಮ್ಮನ ಮೊದಲ ಹಾಗೂ ಕೊನೆಯ ಕೋರಿಕೆ,

ನನ್ನ ಬಗ್ಗೆ ನಿಂಗೆ ಏನು ತಿಳಿದಿದೆ ಅನ್ನುವುದು ನನಗೆ ಗೊತ್ತಿಲ್ಲ,

ನಾನೇ ಹೇಳುತ್ತೇನೆ…..

ನಾನು ನಿನ್ನ ಜಾತಿಯವಳೇ, ನಾನು ಹುಟ್ಟಿದ ಕೆಲ ತಿಂಗಳಲ್ಲೇ ತಂದೆಯನ್ನು ಕಳಕೊಂಡೆ,

ಅಮ್ಮನಿಗೋ ಅಡುಗೆ ಬಿಟ್ಟರೆ ಬೇರೆ ಯಾವುದೇ ಕೆಲಸ ಗೊತ್ತಿಲ್ಲ.

ನಮ್ಮವರ ಹಲ ಕೆಲವು ಮನೆಗಳಲ್ಲಿ ವಿಶೇಷ ದಿನದ ಅಡುಗೆಮಾಡಿ ನನ್ನನ್ನು ಬೆಳೆಸಿದಳು,

ಹದಿ ಹರೆಯದಲ್ಲೇ ಮದುವೆ ,ಅದೂ ದೊಡ್ಡ ಸಂಸಾರ , ಮಾವ ಮಾಮಿ,ಅವರ ೩ ಸಹೋದರರು, ಇಬ್ಬರು ಸಹೋದರಿಯರು ,ಹೀಗೆ….

ಅಮ್ಮನಿಗೆ ಬೇರೆಯಾರು ಇಲ್ಲದ ಕಾರಣ ಆಗಾಗ ನನ್ನ ನೋಡಲು ಬರುತ್ತಿದ್ದಳು,

ಆದರೆ ಇದು ನನ್ನವರಿಗೆ ಮತ್ತು ಮನೆಯವರಿಗೆ ಇಷ್ಟ ಇರಲಿಲ್ಲ ಅನ್ನುವುದು ಅವರ ಹಾವಭಾವದಲ್ಲಿ ತಿಳಿಯುತ್ತಿತ್ತು ,

ನನಗೋ ನುಂಗಲಾರದ ತುತ್ತು ,

ಹೇಳುವಂತಿಲ್ಲ ,ಹೇಳದೆ ಇದ್ದರೆ…….

ಹಾಗೊಂದುದಿನ ಯಾವುದೊ ಕಾರಣಕ್ಕೆ ಶುರು ಆದ ಜಗಳ …

ಅವರು ಎಲ್ಲರೆದುರು ನನ್ನದೇ ಮಕ್ಕಳೆದುರು ನನ್ನ ಹೊಡೆದೆ ಬಿಟ್ಟರು….

ನನಗೋ ನನ್ನಮೇಲೆ ಅಸಹ್ಯ, ಜಿಗುಪ್ಸೆ ,ಹೇಸಿಗೆಯ ಭಾವ ಉಂಟಾಗಿತ್ತು….

ಅದಕ್ಕೆ ಸರಿಯಾಗಿ ಮರುದಿನ ಅಮ್ಮ ಬಂದಿದ್ದಳು , ಹೇಳದೆ ಕೇಳದೆ ಮನೆಬಿಟ್ಟು ಅಮ್ಮನ ಮನೆಗೆ ಹೋದೆ

ಅವಳು ಹೇಳಿಯೋ ಇಲ್ಲ ನಾನೇ ಬುದ್ದಿಕೆಟ್ಟು ಹೋದೇನೋ ಗೊತ್ತಿಲ್ಲ ..

,

ದಿನ ವಾರ ತಿಂಗಳುಗಳೇ ಕಳೆದವು ,

ನನ್ನವರಾಗಲಿ ಮಾವನವರಾಗಲಿ ನಮ್ಮಲ್ಲಿಗೆ ಬರಲಿಲ್ಲ ,

ಅವರು ಬರಲಿಲ್ಲ, ನನ್ನ ಕರೆಯಲಿಲ್ಲ.

ನಾನು ಅಲ್ಲಿಗೆ ಹೋಗಲಿಲ್ಲ,

ಯಾರು ಮೊದಲು ಅನ್ನುವ ಗೊಂದಲ ,ಅಹಂಕಾರದಲ್ಲಿ ನಾನು ಇಲ್ಲೇ ಉಳಿದೆ,

ಮನಸಿನೊಳಗೆ ಕೊರಗಿ ಅಮ್ಮ ನನ್ನನ್ನು ಒಂಟಿಯಾಗಿ ಬಿಟ್ಟು ಪರಮಾತ್ಮನ ಪಾದ ಸೇರಿದಳು,

ಅಲ್ಲಿ ಇಲ್ಲಿ ಅಡುಗೆ ಕೆಲಸ ಮಾಡಿ ಕೆಲಕಾಲ ದುಡಿದೆ …..

….

ರಾಯರ ನಂದಗೋಕುಲ ಕಂಡು ಇಲ್ಲಿ ಆಶ್ರಯ ಪಡೆದೆ,

ನೀನು ಬರುತ್ತಿದ್ದೆ ನಿನ್ನಲ್ಲಿ ನನ್ನ ಮಗನನ್ನು ಕಂಡೆ ,ನಿನ್ನ ಹೆಸರು, ಪ್ರಾಯ ಜಾತಿ ಎಲ್ಲ ನನ್ನ ಮಗನದೇ,

ಅದೊಂದುದಿನ ನಿನ್ನೊಡನೆ ಯಾರೋ ಇದ್ದರು ನೋಡುತ್ತಿದ್ದಂತೆ ನನಗೆ ತಲೆ ಸುತ್ತಿದಂತಾಯಿತು…….,

ನಿಜ ಅದು ನನ್ನದೇ ಮಗ, ಬಲಗೈಯ್ಯಲ್ಲಿ ಆರು ಬೆರಳು, ತಲೆಯಲ್ಲಿ ಎರಡು ಸುಳಿ,

ನಿನ್ನದೇ ಹೆಸರು… ಜಾತಿ, ಪ್ರಾಯ ಎಲ್ಲಾ.

ಆದರೆ ಇದು ಯಾವುದು ಅವನಿಗೆ ತಿಳಿಸಬೇಡ , ನನ್ನ ಬಗೆಗಿನ ಅವನ ಅಭಿಪ್ರಾಯ ಹಾಗೆ ಇರಲಿ.

ನೀನು ನನ್ನ ಬಗ್ಗೆ ಅವನಿಗೆ ತಿಳಿಸಬೇಡ ….

ನನ್ನದೊಂದು ಕೊನೆಯ ಆಸೆ, ಕೋರಿಕೆ ,ಇಲ್ಲ ಆಜ್ಞೆ ….

ನೀನು ಇಲ್ಲ , ಕಷ್ಟ ಎಂತೆಲ್ಲ ಅನ್ನಬಾರದು…

ನೀನು ಹಾಗನ್ನುವುದಿಲ್ಲ ಅಂತ ನನಗೆ ಗೊತ್ತು,

ನೀನು ನನಗೆ ಅಂತ್ಯ ಸಂಸ್ಕಾರ ಮಾಡಬೇಕು, …

ನನ್ನ ಎಲುಬನ್ನು ವಡಬಾಂಡೆಸ್ವರದಲ್ಲಿ ಸಮುದ್ರಕ್ಕೆ ಹಾಕಬೇಕು,

ನನಗೆ ಗತಿಯಾಗುವಂತೆ ದೇವರಲ್ಲಿ ಪ್ರಾರ್ಥಿಸಬೇಕು.

ಇದರೊಟ್ಟಿಗೆ ನನಗೆ ಹಬ್ಬ ಹರಿದಿನದಲ್ಲಿ ಬೇರೆಯವರು ಕೊಟ್ಟ ಉಡುಗೊರೆ ಹಣದಲ್ಲಿ ಸೇರಿಸಿಟ್ಟ ರೂ. ೧೦೦೦ ವನ್ನು ಇಟ್ಟಿದ್ದೇನೆ….

ನಿನ್ನ ಗೆಳೆಯ ನನ್ನ ಮಗನು ನಿನ್ನ ಜೊತೆಗಿರಲಿ ಆದರೆ ಈ ವಿಚಾರ ಅವನಿಗೆ ತಿಳಿಸಬೇಡ….

ನನ್ನ ಕೊನೆಯ ಆಸೆ ಈಡೇರಿಸು….

ಓದುತ್ತಿದ್ದಂತೆ ಕಣ್ಣೀರ ಧಾರೆ ಹರಿಯಿತು ..

ರಾಯರು ನನ್ನ ಉತ್ತರಕ್ಕಾಗಿ ನೋಡುವಂತಿತ್ತು ಅವರ ನೋಟ…

ನನಗರಿವಿಲ್ಲದೆ ಮಾತುಹೊರಟಿತು…

ಅಮ್ಮನ ರಾಧಮ್ಮನ ಕೊನೆಯ ಆಸೆ ಪೂರೈಸುತ್ತೇನೆ ..

ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ….

ಇದಕ್ಕೆ ಇರಬಹುದು ಋಣಾನುಬಂಧ ಅನ್ನುವುದು.

ಋಣಾನುಬಂಧ ರೂಪೇನ ಪಶು ಪತ್ನಿ ಸುತಾಲಯ

ಕಮಲಾತನಯ.

 

Lakshmikantha Thantry

laxmikantha@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!