ಅದು ಎಲ್ಲಿಂದಲೋ ಯಾವ್ದೋ ಇಂಗ್ಲಿಷ್ ಹಾಡು ನಿದ್ದೆ ಹಾಳು ಮಾಡ್ತಾ ಇತ್ತು. ಎದ್ದು ನೋಡಿದೆ ನಂದೇ ಫೋನ್ ರಾಘು ಕಾಲಿ೦ಗ್….ಫೋನ್ ತಗೊಂಡು ಯಾಕೋ ಅಂದೇ… “ಲೇ ಬೇಗ ನಮ್ಮ ಮನೆ ಹತ್ತರ ಬಾ ಅಂತ ಕಟ್ ಮಾಡಿದ.” ನಾನೇ ಅವನ ನಂಬರ್’ಗೆ ಕಾಲ್ ಮಾಡಿದೆ. ಬ್ಯುಸಿ ಬರ್ತಾ ಇತ್ತು, ನಾಯಿ ಸತ್ತರು ಎಲ್ಲರ್ಗೂ ಕಾಲ್ ಮಾಡ್ತಾನೆ ಅನ್ಕೊಂಡು ಸುಮ್ನೆ ಮಲಗಿದೆ. ಆದ್ರು ನಿದ್ದೆ ಬರ್ಲಿಲ್ಲ. ಎದ್ದು ಸ್ನಾನ ಮಾಡಿ ರೆಡಿ ಆದೆ. ಪಕ್ಕದ ಮನೆ ಅಂಗಡಿಗೆ ಹೋಗಿ ಒಂದು ಚಿಪ್ಸ್ ಪ್ಯಾಕ್ ತಗೊಂಡು ರಾಘು ಮನೆ ಹತ್ತಿರ ಕಾಲು ಹಾಕೋಕೆ ಶುರು ಮಾಡಿದ್ದೆ ಅಷ್ಟರಲ್ಲೇ ನಮ್ಮ ಎಲ್ಲಾ ಹುಡ್ಗುರು ನನ್ನ ಹತ್ತರ ಬರ್ತಾ ಇರೋದು ಕಾಣಸ್ತು. ಬಿಸಿಲಿಗೆ ಯಾಕೆ ಹೋಗೋದು ಅನ್ಕೊಂಡು ಪಕ್ಕಕ್ಕೆ ಇದ್ದ ಮರದ ಕಟ್ಟೆಗೆ ಕೂತೆ. ಎಲ್ಲರು ಹತ್ತರಕ್ಕೆ ಬಂದ್ರು.”ಯಾಕೋ ಏನ್ ಆಯ್ತು ಕ್ಯಾಂಪಸ್ ಸೆಲೆಕ್ಟ್ ಆಯ್ತಾ”ಅಂದೇ. “ಲೇ ನಿನ್ನೆ ಸಂಜೆ ನೋಕಿಯಾನ ಕಿಡ್ನಾಪ್ ಮಾಡಿ ಇಬ್ಬರು ರೇಪ್ ಮಾಡಿದಾರೆ” ಅಂದ. ಅಲ್ಲಿ ಮುಂದೆ ಮಾತಾಡೋಕೆ ಏನು ಇರ್ಲಿಲ್ಲ……….
ಸಮಾಧಾನದಿಂದ ಕಟ್ಟೆಗೆ ಕೂತ್ವಿ ಆಗಿದ್ದನ್ನ ರಾಘು ಹೇಳಿದ. ನೋಕಿಯಾ ನನಗೆ ವಿಶ್ ಮಾಡಿ ಹೊರಗ ಬಂದ್ಲು ಆಮೇಲೆ ರಾಘು ಅವಳ ಹತ್ತರ ಹೋಗಿ “ಏನು ಕೇಳಿದ್ರು ಇಂಟರ್ವ್ಯೂ ನಲ್ಲಿ” ಅಂತ ಕೇಳಿದಾನೆ. ಅದಕ್ಕೆ ನೋಕಿಯಾ ಎಲ್ಲಾ ಮಾರ್ಗದರ್ಶನ ಕೊಟ್ಟು ನನಗೆ ಸ್ವಲ್ಪ್ ಉಗುದು “ಅವನಿಗೆ ವಿಶ್ ಮಾಡಿದ್ರೆ ಥ್ಯಾಂಕ್ಸ್ ಹೇಳೋಕು ಬರಲ್ವ” ಅಂಥ ಬೇಜಾರ ಮಾಡ್ಕೊಂಡು ಸ್ವಲ್ಪ್ ಕೆಲಸ ಇದೆ ಹೋಗ್ತೀನಿ ಅಂಥ ಹೋಗಿದಾಳೆ. ಕಾಲೇಜ್ ಮುಂದೆ ಹೋಗೋವಾಗ ಯಾರೋ ಕಾರಿನಲ್ಲಿ ಬಂದು ಅವಳನ್ನ ಕರಕೊಂಡು ಊರಿನ ಹೊರಗಡೆ ಇರೋ ಜಾಗದಲ್ಲಿ ರೇಪ್ ಮಾಡಿ ಅಲ್ಲೇ ಬಿಟ್ಟು ಹೋಗಿದ್ದರು. ಬೆಳಿಗ್ಗೆ ಯಾರೋ ನೋಡಿ ಹಾಸ್ಪಿಟಲ್’ಗೆ ಹಾಕಿದ್ದು. ಇನ್ನು ಪ್ರಜ್ಞೆ ಬಂದಿಲ್ಲ.
ಆ ಕಡೆ ಕಾಲೇಜ್’ಗೆ ಹೋಗೋ ಮನಸು ಇಲ್ಲ. ನೋಕಿಯಾ ನೋಡೋಕೆ ಹೋಗೋ ಮನಸು ಇಲ್ಲ ಸುಮ್ಮನೆ ಮನೆಗೆ ಹೋಗಿ ಮಲಗಿದೆ. ಅವತ್ತು ಕಣ್ಣ ಮುಚ್ಚಿದರೆ ನೋಕಿಯಾ ಇಂಟರ್ವ್ಯೂ ರೂ೦ನಿಂದ ಹೊರಗ ಬರೋದು ನಾನು ಒಳಗೆ ಹೋಗೋದೆ ಕಣ್ಣ ಮುಂದೆ ಬರ್ತಾ ಇತ್ತು. ಮೈ ಬಿಸಿ ಮತ್ತು ನೆನ್ನೆ ರಾತ್ರಿಯ ಎಲ್ಲಾ ಲಕ್ಷಣಗಳು ಮತ್ತೆ ತೋರುತ್ತಿತ್ತು. ಅದು ಏನು ಹೇಳದ ಮಾತನಾಡದ, ಏನನ್ನು ಮಾಡಲಾಗದ ಕ್ಷಣ. ಅವತ್ತು ರಾತ್ರಿಯಲ್ಲ ಸಿಕ್ಕಾಪಟ್ಟೆ ಯೋಚನೆ ಮಾಡಿದ್ದೆ. ನೋಕಿಯಾ ಮೊದಲ ಸಾರಿ ನೋಡಿದಾಗಿಂದ ಇಲ್ಲಿಯವರೆಗೂ ಎಲ್ಲಾ ನೆನಪು ಬರ್ತಾ ಇತ್ತು. ಒಂದ್ಸರಿ ನೋಡಿದ್ರೆ ಅವಳು ನನ್ನ ಜಾಸ್ತಿ ಪರಿಚಯ ಇಲ್ಲ, ಆಪ್ತೆ ಅಲ್ಲಾ ಅವಳಿಗಿಂತ ಹೆಚ್ಚಿಗೆ ಪರಿಚಯ ಇದ್ದ ಬೇಕಾದಷ್ಟು ಹುಡ್ಗೀರು ಇದ್ದರು. ಆದ್ರೆ ಅವತ್ತು ನನಗೆ ಅನ್ಸಿತ್ತು ಹೌದು ನನಗೂ ಅವಳಿಗೂ ಏನೋ ಸಂಬಂಧ ಇದೆ ಅಂತ. ಆ ಸಂಬಂದಕ್ಕೆ ಹೆಸರು ಇಡೋ ಅಷ್ಟು ಧೈರ್ಯ ನಂಗೆ ಇರ್ಲಿಲ್ಲ. ಸಂಬಂಧ ಎರಡು ಕಡೆ ಇಂದ ಇರ್ಬೇಕು. ನಾನೇ ತೀರ್ಮಾನ ಮಾಡೋದು ಅಲ್ಲಾ, ಅದರಲ್ಲೂ ಈಗ ಅವಳು ಇರೋದು ಪ್ರಜ್ಞಾಹೀನ ಸ್ಥಿತಿ.
ಮರುದಿನ ಬೆಳಿಗ್ಗೆ ರಾಘು ಬಂದು ಅವಳಿಗೆ ಪ್ರಜ್ಞೆ ಬಂದಿದೆ. ಅವರ ಮನೆಗೆ ಹೋಗಿ ಬರುವ ವಿಚಾರ ಹೇಳಿದ. ಮನಸಲ್ಲೇ ಅವಳ ವಿಚಾರ ಇದ್ದರೂ ನಾನು ಬರಲ್ಲ ನೀವು ಹೋಗಿ ಬನ್ನಿ ಅಂದೆ. ಅವರೆಲ್ಲ ಸೇರಿ ಅವರ ಮನೆಗೆ ಹೋಗಿ ನೋಡಿ ಕೊಂಡು ಬಂದ್ರು. ಅವಳ ಬಗ್ಗೆ ಮಾತಾಡ್ತಾ ಇದ್ರೂ. ಆಮೇಲೆ ಮರೆತು ಮನೆಗೆ ಹೋಗ್ತಾ ಇದ್ರೂ. ಆದರೆ ನನಗೆ ಮಾತ್ರ ಯಾವಾಗಲು ಅವಳದೇ ಯೋಚನೆ ಅವಳದೇ ನೆನಪು , ಅವಳು ಭಾಷಣ ಮಾಡಿದ್ದು ಈಗ ಆ ಭಾಷಣ ಏನ್ ಆಗುತ್ತೆ ಬರಿ ಅದೇ ಯೋಚನೆ.
ಸ್ವಲ್ಪ ದಿನಕ್ಕೆ ನಂಗೆ ಕೆಲಸ ಸಿಕ್ಕತು. ರಾಘುಗೂ ನಮ್ಮ ಕಂಪನಿನಲ್ಲೆ ಕೆಲಸ ಸಿಕ್ತು. ರಾಘುಗೆ ಕೆಲಸ ಸಿಕ್ಕು ಆರು ತಿಂಗಳಿಗೆ ಮದ್ವೆ ಮಾಡಿದ್ರು. ಇವೆಲ್ಲದರ ನಡುವೆ ನೋಕಿಯಾ ಸ್ವಲ್ಪ ಮನೆ ಇಂದ ಹೊರಗೆ ಬರ್ತಾ ಇದ್ರು. ಈಗಲು ಕಂಡಾಗ ಸ್ಮೈಲ್ ಕೊಡ್ತಾ ಇದ್ಲೋ ಗೊತ್ತಿಲ್ಲ ಮೊದಲಿನ ಹಾಗೆ ನಾನು ನೋಡದೆ ಹೋಗ್ತಾ ಇದ್ದೆ. ರಾಘು ಮಾತಾಡ್ತಾ ಇದ್ದ. ರಾಘು ಒಂದ್ಸರಿ ನನ್ನ ಕರೆದು ಹೇಳಿದ “ಲೋ ನೋಕಿಯಗೆ ಗಂಡು ನೋಡ್ತಾ ಇದಾರೆ, ಆದರೆ ಯಾರು ಬರ್ತಾ ಇಲ್ಲ”ಅಂದ.
ಅವತ್ತು ಮನೆಗೆ ಹೋಗಿ ಕೂತಿದ್ದೆ. ನಾನು ನೋಕಿಯಾ ಮದ್ವೆ ಆಗ್ತಿರೋ ಚಿತ್ರ ಕಣ್ಣ ಮುಂದೆ ಬಂತು, ಕಣ್ಣ ತೆರೆದು ಆ ಯೋಚನೆ ಇಂದ ಹೊರಗೆ ಬರೋಕೆ ಏನೇನೋ ಪ್ರಯತ್ನ ಮಾಡಿದೆ ಆಗಲಿಲ್ಲ. ಎಲ್ಲ ಗೆಳೆಯರು ಸಂತಾಪ ಸೂಚನೆ ಅಂಥ ಅವರ ಮನೆಗೆ ಹೋದಾಗ ನಾನು ಹೋಗ ಬೇಕಿತ್ತು, ಅವಳು ಸ್ಮೈಲ್ ಕೊಟ್ಟಾಗ ನಾನು ಸ್ಮೈಲ್ ಕೊಟ್ಟಿದ್ರೆ, ಅವಳು ವಿಶ್ ಮಾಡಿದಾಗ ಥ್ಯಾಂಕ್ಸ್ ಹೇಳಿದ್ರೆ ಈ ಯೋಚನೆ ಬರ್ತಾ ಇರ್ಲಿಲ್ಲ ಅನ್ಸತ್ತೆ. ನಾನು ಹೀಗೆ ಯೋಚನೆ ಮಾಡೋದು ತಪ್ಪಾ ????? ಈ ಗೊಂದಲ ಬಗೆ ಹರಿಬೇಕು ಅಂದ್ರೆ ಯಾರಿಗಾದ್ರು ಹೇಳ್ಕೋ ಬೇಕು ಅನ್ನಿಸ್ತು.
ಬೆಳಿಗ್ಗೆ ರಾಘುಗೆ ಕಾಲ್ ಮಾಡಿ ಬೇಗಾ ಬಾ ಅಂದೆ. ಅವತ್ತು ಅವನಿಗೆ ಏನೋ ಕೆಲಸ ಲೇಟ್ ಆಗಿ ಬಂದ. ತನ್ನ ಕ್ಯಾಬಿನ್ ಇಂದಲೇ ಸಾರೀ ಕೇಳಿ ಕೆಲಸ ಸ್ಟಾರ್ಟ್ ಮಾಡಿದ. ಸಂಜೆಗೆ ಕಾಯ್ತಾ ಇದ್ದೆ. ಅವನನ್ನ ಕರ್ಕೊ೦ಡು ನಮ್ಮ ಕಾಲೇಜ್ ಮುಂದೆ ಇರೋ ಗಾರ್ಡನ್’ಗೆ ಹೋದ್ವಿ. ಯಾರು ಇಲ್ಲದೆ ಇರೋ ಜಾಗಕ್ಕೆ ಹೋಗಿ ಕೂತ್ವಿ. ತಡಿಯೋಕೆ ಆಗದೆ “ಲೋ ನಾನು ನೋಕಿಯನ ಮದ್ವೆ ಆದ್ರೆ ತಪ್ಪಾ ಅಂದೇ”….ರಾಘುನ ತಲೆ ಬಿಸಿ ಆಯ್ತು …ಸಣ್ಣಗೆ ಕಣ್ಣಲ್ಲಿ ನೀರ ಇತ್ತು… ಅಪ್ಪಿಕೊಂಡ…” ಯಾಕೋ ಈ ಯೋಚನೆ ಅಂದ”… ನನ್ನ ಹತ್ತರ ಉತ್ತರ ಇರ್ಲಿಲ್ಲ.
ಇಬ್ಬರು ಯೋಚನೆ ಮಾಡಿದ್ವಿ ಕೊನೆಗೆ ಅಗಿದ್ದ ನಿರ್ಧಾರ …. ನಾನು ಅವಳ ಮೇಲೆ ಯಾವುದೇ ಕರುಣೆ ಇಲ್ಲದೆ ಅವಳನ್ನ ಮದ್ವೆ ಆಗ್ತಾ ಇದ್ದೆ. ಹಿಂದೆ ಯಾವತ್ತು ನಾನು ಅವಳನ್ನ ಪ್ರೀತಿಸಬೇಕು ಅ೦ತ ಅನ್ಕೊ೦ಡಿದ್ದಿಲ್ಲ. ನಾನು ಒಂದು ಅನಾಥ ಆಶ್ರಮ ಮತ್ತು ವೃದ್ಧಾಶ್ರಮ ಕಟ್ಟೋ ಆಸೆ ಇತ್ತು. ನಾನು ಮದ್ವೆ ಆದ್ರೆ ಅದಕ್ಕೆ ಅಡ್ಡಿ ಆಗುತ್ತೆ ಅನ್ನೋ ಭಾವನೆ ಇತ್ತು. ಎಲ್ಲಾ ರೀತಿಯಲ್ಲಿ ನನ್ನ ನಿರ್ಧಾರ ಸರಿ ಇತ್ತು. ಆದರೆ ಮನೆಯಲ್ಲಿ ಒಪ್ಪಿಸೋದು ಅಸಾಧ್ಯಕ್ಕೆ ಸಮ ಆಗಿತ್ತು. ಕೊನೆಗೆ ಮದುವೆ ಇಲ್ಲದೆ ಇರುದಕ್ಕಿಂತ ಮದುವೆ ಆಗೋದು ಒಳ್ಳೇದು ಅಂಥ ಎರಡು ವರ್ಷದ ಮೇಲೆ ಮದ್ವೆ ಆಗಿತ್ತು.
ಅವತ್ತು ನಮ್ಮ ಮದುವೆ ದಿನಾ ಬೆಳಿಗ್ಗೆ ನಾನು ರಾಘು ಅವರ ಮನೆಗೆ ಹೋದ್ವಿ .ಅವಳ ಒಬ್ಬಳ ಜೊತೆ ಮಾತಾಡಬೇಕು ಅಂದೇ.ಅವರು ಅವತ್ತು ಒಂದ ಮಾತನ್ನು ಮಾತಾಡಿರಲಿಲ್ಲ.ಆದರೆ ನನ್ನ ಮುಂದಿನ ಕೆಲಸಕ್ಕೆ ಸಹಾಯ ಮಾಡ್ತೇನೆ ಅಂಥ ಹೇಳಿದ್ರು. ಅಷ್ಟು ಸಾಕಿತ್ತು ನನಗೆ. ದೇವಸ್ಥಾನದಲ್ಲಿ ಮದ್ವೆ ಆಯ್ತು. ಮನೆಗೆ ಬಂದ್ವಿ. ನನ್ನ ರೂಂನ ಅಲಂಕಾರ ಮಾಡಿದ್ರು. ಆದರೆ ಅದರ ಬಗ್ಗೆ ನನ್ನಲ್ಲಿ ಯಾವುದೇ ಯೋಚನೆ ಇರ್ಲಿಲ್ಲ. ರಾಘು ನನ್ನ ಬಿಟ್ಟು ಹೋದ. ಮುಂದೆ ಏನು ಗೊತ್ತಿರ್ಲಿಲ್ಲ. ಅವರು ಒಳಗೆ ಬಂದ್ರು. ನಾನು ಕೂತಿದ್ದ ಹತ್ತಿರ ಬಂದ್ರು, ಇನ್ನೇನು ಅವರ ಧ್ವನಿ ಕೇಳುತ್ತೆ ಅನ್ಸಿತ್ತು. ಅಷ್ಟರಲ್ಲೇ “ನಾನು ನಿಮ್ಮನ್ನ ಮದ್ವೆ ಆಗಿದ್ದು ಸಂಸಾರ ಮಾಡೋಕೆ ಅಲ್ಲಾ, ನಿಮ್ಮ ಕನಸನ್ನ ಪೂರ್ತಿ ಮಾಡೋಣ ಅಂದ್ರು.” ಅದು ನನ್ನ ನಿರ್ಧಾರ ಕೂಡ ಆಗಿತ್ತು.
ಆಮೇಲೆ ನಾನು ಒಂದು ಮನೆ ಕಟ್ಟಿದ್ದು ಅದರಲ್ಲಿ ನಿಮ್ಮ ಆರು ಜನ ಮಕ್ಕಳನ್ನ ತಂದು ಬೆಳೆಸಿದ್ದು. ನೀವು ಯಾವಾಗ ಹುಟ್ಟಿದ್ದು ನಂಗೆ ಗೊತ್ತಿಲ್ಲ ಆದ್ರೆ ನನ್ನ ಕೈ ಗೆ ಸಿಕ್ಕ ನಿಮಗೆ, ಅಮ್ಮಾ ಹೆಸರು ಇಟ್ಟಿದ್ದು. ನಾನು ಅದೇ ದಿನಾ ನಿಮ್ಮ ಜನ್ಮ ದಿನಾ ಅಂತ ಮಾಡಿದ್ದು. ನಾವಿಬ್ಬರೂ ಯಾರನ್ನೇ ಮದ್ವೆಯಾಗಿ ಯಾವ ದೇಶದಲ್ಲೂ ಇದ್ದರೂ ಎಷ್ಟು ಮಕ್ಕಳನ್ನ ಮಾಡಿದ್ದರು ಇಷ್ಟು ಸಂತೋಷದಿಂದ ಇರ್ತ ಇರ್ಲಿಲ್ಲ. ನಾವಿಬ್ಬರು ಯಾವುದನ್ನು ತ್ಯಾಗ ಮಾಡಿಲ್ಲ ನಾವು ಹುಟ್ಟಿದ್ದೇ ಇದಕ್ಕೆ.
Anand R C, aanu.rc@gmail.com