@ಅವನು: ಅಸೈನ್ಮೆಂಟ್ ಗೆ ಇರೋ ವಿಷಯ ಟ್ವಿಟ್ಟರ್. ಕೆಲವು ಟ್ವೀಟ್ ಮತ್ತು ಟ್ವಿಟ್ಟರ್ ಹ್ಯಾಂಡಲ್ ನ ಕೂಡಿಸಿ ೪ ಪೇಜ್ ಬರದರೆ ೨೦ ಮಾರ್ಕ್ಸ್ ಬಂದಂಗೆ. ಬೀಯಿಂಗ್ ಇಂದ ಬಿಗ್ ಬಾಸ್ ವರೆಗೂ ಎಲ್ಲಾ ವಿಷಯಗಳ ಬಗ್ಗೆ ಟ್ವೀಟ್ ಸಂಗ್ರಹಿಸಿ ೨ ಪೇಜ್ ಬರದೆ. ಟ್ರೆಂಡಿಂಗ್ ಬಗ್ಗೆ ಬರೀಬೇಕು ಅಂಥ ಹುಡುಕಾಟ ಮಾಡ್ತಿರುವಾಗ #ಮದರ್ ಸಿಕ್ಕಿದ್ದು. ಒಂದು ಅಕೌಂಟ್ ನಿಂದ ಒಳ್ಳೊಳ್ಳೆ ಟ್ವೀಟ್ಗಳು #ಮದರ್ ನಲ್ಲಿ ಬರ್ತಾ ಇದ್ವು. ಫೇವರಿಟ್ ಮಾಡಿದೆ, ಲೈಕ್ ಮಾಡಿದೆ. ರಿಪ್ಲೈ ಮಾಡ್ಬೇಕು ಅಷ್ಟರಲ್ಲೇ ನೋಟಿಫಿಕೇಶನ್ ಬಂತು.
*****
@ಅವಳು: ಅಮ್ಮನ ನೆನಪು ಟ್ವೀಟ್ ಆಗಿ #ಮದರ್ ನಲ್ಲಿ ಒಂದೊಂದಾಗಿ ಬರತಾ ಇತ್ತು. ಫೇಸ್ಬುಕ್ ನಲ್ಲಿ ಬರದ್ರೆ ಎಲ್ಲಾ ಜನಕ್ಕೆ @ಅವಳು ಫೀಲಿಂಗ್ ಸ್ಯಾಡ್ ಅಂಥ ಗೊತ್ತ ಆಗತ್ತೆ ಅಂಥ ಟ್ವಿಟ್ಟರ್ ನಲ್ಲಿ ನೆನಪುಗಳ ಮೋಡಗಳ ನಡುವೆ ಹಾರಾಟ ನಡೆಸಿದ್ದೆ. #ಹ್ಯಾಷ್ ಟ್ಯಾಗ್ ಹಾಕೋದು ಒಂಥರಾ ಮಜಾ. ಯಾರೋ @ಅವನು ಅನ್ನೋರು ಲೈಕ್ ಮಾಡ್ತಾ ಇದ್ರೂ. ಟ್ವೀಟ್ ಮಾಡಿದ ೨ ಸೆಕೆಂಡ್ ನಲ್ಲೆ ಲೈಕ್ ನೋಟಿಫಿಕೇಶನ್. ನನ್ನ ಎಲ್ಲಾ ಟ್ವೀಟ್ ಗಳು @ಅವನ ಲೈಕ್ ಗೆ ಆಹುತಿ ಆಗುತ್ತಿದ್ದಂತೆ ಇತ್ತು. ಲೈಕ್ ಮಾಡಬೇಡ ಡಿಸ್ಟರ್ಬ್ ಆಗ್ತಾ ಇದೆ ಅಂಥ ತಿಳಿಸೋಕೆ ರಿಪ್ಲೈ ಮಾಡಿ ಹಲೋ ಅಂದೇ.
*****
@ಅವನು:@ಅವಳು ಹಲೋ ಅಂತಿದಾರೆ. ರಿಪ್ಲೈ ಮಾಡೋದು ಬೇಡ. ನೋಡೋಣ ಏನು ಆಗುತ್ತೆ.
*****
@ಅವಳು:#ಮದರ್ ನಲ್ಲಿ ಏನೇ ಬರೆದರು ಲೈಕ್ ಮಾತ್ರ ಬರೋದು ನಿಲ್ಲಲಿಲ್ಲ. #ಮದರ್ ನ ನಿಲ್ಲಿಸಿ #ಅಮ್ಮ ಶುರು ಮಾಡಿದೆ. ೮ ಟ್ವೀಟ್ ಕಂಪ್ಲೀಟ್ ಆಗಿತ್ತು.ಲೈಕ್ ಮಾತ್ರ ಇರಲಿಲ್ಲ. ಏನೋ ಮಿಸ್ಸಿಂಗ್ ಭಾವನೆ. ೯ ನೆ ಟ್ವೀಟ್ ಸ್ಟಾರ್ಟ್ ಮಾಡಿದೆ.
“#ಅಮ್ಮ ಎಲ್ಲಿದಿಯಾ?” ಎಂಟರ್ ಮಾಡು ಮುಂಚೆ. ಸ್ವಲ್ಪ್ ಆಡ್ ಮಾಡಬೇಕು ಅನಸಿತ್ತು.”#ಅಮ್ಮ ಎಲ್ಲಿದಿಯಾ? ಐ ಲವ್ ಯು #ಮದರ್” ಅಂಥ ಟ್ವೀಟ್ ಮಾಡಿದೆ. ೪ ಸೆಕೆಂಡ್ ಆಗಿತ್ತು ನೋಟಿಫಿಕೇಶನ್ ಬಂದಿತ್ತು.
*****
@ಅವನು: ಅವರು ತಮ್ಮ ಹ್ಯಾಶ್ ಟ್ಯಾಗ್ ನ #ಮದರ್ ನಿಂದ #ಅಮ್ಮ ಅಂಥ ಮಾಡಿದಾರೆ. ಈಗ ನಾನು ಟ್ವೀಟ್ ಮಾಡಿದೆ.
“#ಮದರ್ ನಿಂದ #ಅಮ್ಮ ನ ವರೆಗೂ”
೫ ಸೆಕೆಂಡ್ನಲ್ಲೆ ಲೈಕ್ .
*****
@ಅವಳು: ರಾತ್ರಿ ೧೨.೦೦ ಗಂಟೆ ಆಗಿತ್ತು. ಆಟದಲ್ಲಿ ಮಜಾ ಇದ್ರೂ ಬೈ ಹೇಳಬೇಕಿತ್ತು.
“ನಿನ್ನ ಜೋಗುಳಕೆ,,ತನು ಮನು ಸೋತಿದೆ,ಕಣ್ಣು ಮುಚ್ಚಿದೆ,
ನಿನ್ನೆಡೆಗೆ ಬರುವ ಹಂಬಲವ ನಿದ್ರೆ ತಡೆದಿದೆ,#ಗುಡ್ ನೈಟ್ #ಅಮ್ಮ”
*****
@ಅವನು: ರಿಪ್ಲೈ
“ಬರುವದನು ಕರೆ,ಹಂಬಲವ ತಡೆ
ನಿದ್ರಾ ದೇವತೆ ಎಡೆಗೆ ನಡೆ…#ಗುಡ್ ನೈಟ್ #ಅಮ್ಮ”
*****
@ಅವಳು:ಬೆಳಿಗ್ಗೆ ೬.೩೦..
ಫೋನ್ ನೋಟಿಫಿಕೇಶನ್ ಸೌಂಡ್ ಅದು,ಫೋನ್ ಓಪನ್ ಮಾಡಿ ನೋಡಿದ್ರೆ ೧೫೦ ಗು ಹೆಚ್ಚು ಲೈಕ್. ಹಳೆಯ ಟ್ವೀಟ್ ಗಳಿಗೆ ಲೈಕ್ ಬರತಾ ಇದ್ವು. ಕೋಪ ಬಂತು. ಮಾಡೋಕೆ ಕೆಲಸ ಇಲ್ವಾ ಅನ್ಕೊಂಡು ಟ್ವಿಟ್ಟರ್ ಓಪನ್ ಮಾಡಿದೆ. @ಅವನು ಲೈಕ್ ಮಾಡ್ತಾ ಇದ್ದ.
“#ಗುಡ್ ಮಾರ್ನಿಂಗ್ #ಕ್ರೇಜಿ”
*****
@ಅವನು:ಒಹ್,ಹೊಸ ಹ್ಯಾಷ್ ಟ್ಯಾಗ್
“ಬೆಳಿಗ್ಗೆ ಬೇಗ ಏಳವರು #ಕ್ರೇಜಿ,ಸೂರ್ಯ ಬಂದರು ಮಲಗವರು #ಲೇಜಿ, ಗುಡ್ ಮಾರ್ನಿಂಗ್”
*****
@ಅವಳು:
“#ಲೇಜಿ ಗೆ ಇವತ್ತು #ಬಯಾಲಜಿ ಟೆಸ್ಟ್,ಸೊ ಬೈ ಟು ಟ್ವಿಟ್ಟರ್”
*****
@ಅವನು:
“ಬಯಾಲಜಿ ಗೆ #ಆಲ್ ದಿ ಬೆಸ್ಟ್”
*****
@ಅವಳು:ಟೆಸ್ಟ್ ಇರೋ ಭಯದಲ್ಲಿ ಲಾಸ್ಟ್ ಹ್ಯಾಷ್ ಟ್ಯಾಗ್ ನ ಮರತಿದ್ದೆ.#ಗುಡ್ ಮಾರ್ನಿಂಗ್,#ಕ್ರೇಜಿ,#ಲೇಜಿ,#ಬಯಾಲಜಿ ನಲ್ಲಿ ಎಲ್ಲಾ ಟ್ವೀಟ್ಗಳನ್ನೂ ಓದಿದೆ.ಆದರೆ #ಅವನು ಮತ್ತೆ ಟ್ವೀಟ್ ಮಾಡಿರಲಿಲ್ಲ.ಬೇರೆ ದಾರಿ ಇಲ್ಲದೆ @ಅವನು ಅಕೌಂಟ್ ಗೆ ಹೋಗಿ ನೋಡಿದೆ.@ಅವನು ಅಕೌಂಟ್ ಗೆ ಹೋಗಿ ಮೊದಲೇ ನೋಡಬಹುದು ಆದರೆ #ಟ್ಯಾಗ್ ಸರ್ಚ್ ನಲ್ಲಿ ಇರೋ ಮಜಾ ಮಿಸ್ ಆಗ್ತಿತ್ತು.
ಟ್ವೀಟ್ ಇತ್ತು “ಬಯಾಲಜಿ ಗೆ #ಆಲ್ ದಿ ಬೆಸ್ಟ್” ಪಾಪ ಬಯಾಲಜಿ ಗೆ # ಹಾಕೋದು ಮರತಿದ್ದ.
#ಆಲ್ ದಿ ಬೆಸ್ಟ್ ಸರ್ಚ್ ಮಾಡ್ತಾ ಇದ್ದೆ.ಸರ್ಚ್ ಮಾಡ್ತಾ ಮಾಡ್ತಾ ಸಿಕ್ಕದ್ದು #ಅಸಹನೆ
“#ಅಸಹನೆ ಗೆ #ಆಲ್ ದಿ ಬೆಸ್ಟ್”.
*****
@ಅವನು:
“#ಅಸಹನೆ ಅನ್ನೋದು ಜಸ್ಟ್ ಕಾಲ್ಪನಿಕ,ರಾಜಕೀಯದ ಅಸ್ತ್ರ”
@ಅವಳು #ಅಸಹನೆ ಬಗ್ಗೆ ಆಲ್ ದಿ ಬೆಸ್ಟ್ ಹೇಳತಿದಾಳೆ ಅಂದ್ರೆ,ಅವಳು ಆ ಗುಂಪಿಗೆ ಸೇರಿದವಳು ಇರಬೇಕು.ದೇಶದ ಬಗ್ಗೆ ಯಾವ ರೀತಿಯ ಹೇಳಿಕೆ ಇದು,ಸರಿ ಇಲ್ಲ ಇದು.
ಮತ್ತೆ ಟ್ವೀಟ್ ಮಾಡಿದೆ.
“#ಅಸಹನೆ ಗೆ #ಧಿಕ್ಕಾರ”
*****
@ಅವಳು:#ಅಸಹನೆ ಟ್ಯಾಗ್ ನ ಸರ್ಚ್ ಮಾಡಿದೆ.ಅದು ಅವತ್ತು ಟ್ರೆಂಡಿ ಟ್ಯಾಗ್ ಆಗಿತ್ತು.@ಅವನ ಟ್ವೀಟ್ ನನಗೆ ಸಿಕ್ತಾ ಇರಲಿಲ್ಲ.ಲಕ್ಷಕ್ಕು ಹೆಚ್ಚು ಟ್ವೀಟ್ ಸರ್ಚ್ ಮಾಡಿದ್ದೆ. ಬೇರೆ ದಾರಿ ಕಾಣದೆ @ಅವನ ಅಕೌಂಟ್ ಗೆ ಹೋದೆ.
ಟ್ವೀಟ್ ಗಳ ಸರಮಾಲೆ ನೆ ಇತ್ತು.
“#ಅಸಹನೆ ಅನ್ನೋದು ಜಸ್ಟ್ ಕಾಲ್ಪನಿಕ,ರಾಜಕೀಯದ ಅಸ್ತ್ರ”
“#ಅಸಹನೆ ಗೆ #ದಿಕ್ಕಾರ”
“#ಅಸಹನೆ #ಮದರ್ #ಅಮ್ಮ #ಲೇಜಿ #ಕ್ರೇಜಿ #ಬಯಾಲಜಿ #ಐ ಹೇಟ್ ಯು”
ಎಲ್ಲಾ ಟ್ವೀಟ್ ನ ಲೈಕ್ ಮಾಡಿದೆ.
#ಅಸಹನೆ ಅಲ್ಲಿ ಎಲ್ಲಾ ಕೆಲಸವನ್ನು ಮಾಡಿ ಬಿಟ್ಟಿತ್ತು.@ಅವನ ಮುಂದಿನ ಟ್ವೀಟ್ ಗಳನ್ನ ಓದ್ತಾ ಹೋದೆ.ಆಗ ಅನಿಸಿದ್ದು ಟ್ವೀಟ್ ಮಾಡಿದೆ.
“#ಅಸಹನೆ #ಈವನ್ ಐ ಹೇಟ್ ಯು”
*****
@ಅವನು: ೨೪ ಗಂಟೆ ಒಳಗೆ ನಮ್ಮ ನಡುವೆ ಬಿರುಕು ಬಂದಿತ್ತು.ಒಂದು #ಟ್ಯಾಗ್ ಇಬ್ಬರು ಅಪರಿಚಿತರ ನಡುವೆ ಇಷ್ಟು ಪರಿಣಾಮಕಾರಿ ಬಿರುಕು ತಂದಿದ್ದರೆ ದೇಶದ ಮೇಲೆ ಎಂತಾ ಪರಿಣಾಮ ಆಗಿರಬೇಕು.
ಸಂಜೆಗೆ ಟ್ರೆಂಡ್ ಕಡಿಮೆ ಆಗಿತ್ತು. ಅದರ ಕೆಲಸ ಮುಗಿದಿತ್ತು. #ಟ್ಯಾಗ್ ಹರಿದ ಹೃದಯಗಳ ತೇಪೆ ಹಚ್ಚಲು ಕೆಲವರು ಸೂಜಿ ಹುಡುಕಿದರೆ ಕೆಲವರು ಅಂಟಿನ ಪಟ್ಟಿ ಹುಡುಕುತ್ತಿದ್ದರು. ನಾನು ಮಾತ್ರ #ಈವನ್ ಐ ಹೇಟ್ ಯು ನ ಮುಂದಿನ ಕೊಂಡಿಯ ಹುಡುಕ್ತಾ ಇದ್ದೆ…….
Anand R C