ಅರೆ ಮಲೆನಾಡಿನ ಸುಂದರ ತಾಣವದು. ಸುತ್ತಲೂ ಹಸಿರು. ಹಸಿರಿನ ನಡುವೆ ಹಸಿರಾಗಿ ನಿಂತಿರುವ ಸುಂದರ ಬೆಟ್ಟ. ಬೆಟ್ಟದ ಮೇಲೂಂದು ದುರ್ಗಾಂಬಿಕೆಯ ಮಂದಿರ. ಬೆಳಗ್ಗೆ ಎದ್ದೊಡನೆ ಬೆಟ್ಟ ಏರಿದರೆ ಸಾಕು ಕವಿತೆ ಗೀಚಲು ಎಲ್ಲಿಲ್ಲದ ಹುಮ್ಮಸ್ಸು ಬರುತ್ತಿತ್ತು. ಸ್ವಲ್ಪ ಹೊತ್ತು ಆರೋಗ್ಯಕ್ಕಾಗಿ ಅಲ್ಲೇ ತಾಲೀಮು ನಡೆಸಿ ಆಮೇಲೆ ಕವಿತೆಯನ್ನು ಬರೆಯಲು ದಿಬ್ಬದ ಕಲ್ಲಿನ ಮೇಲೆ ಕುಳಿತೆ...
ಕಥೆ
ಪಾರಿ ಭಾಗ-೧೨
“ನಿಮ್ ಗೌಡನ್ ಮನಿಗೆ ನಾವ್ಯಾಕ ಬರ್ಬೆಂಕತ? ನಮ್ ಪಾರಿ ಒದ್ದಾಡಿದ್ ಸಾಕ್ ಹೋಗು..ನಾವ್ಯಾರ್ ಮನಿಗೂ ಬರಲ್ಲ..ನಿಮ್ ಗೌಡಗ ಹೇಳ್ ಹೋಗ ಬಿಕನಾಸಿ..ನಾವ್ ಬರಲ್ಲಂತ…ಇನ್ನ ಗೌಡ ಈ ಕಡಿ ತೆಲಿ ಹಾಕಿದ ಅಂದ್ರ ಆಗುದ ಬ್ಯಾರೆ..ಎಷ್ಟಂತ ತಡ್ಕೊಳೋನು. ಹೋಗ ಭಾಡ್ಯಾ..ಬಂದ್ಬಿಟ್ಟ ಕರಿಯಾಕ..!!” ಎಂದು ಗೌಡರ ಆಳು ಮರಿಯಪ್ಪನನ್ನು ಮಲ್ಲವ್ವ ತರಾಟೆಗೆ...
ಪಾರಿ ಭಾಗ-೧೧
ಹಿಂದಿನ ಭಾಗ: ಪಾರಿ ಭಾಗ-೧0 ಮಹದೇವಸ್ವಾಮಿ ಮದುವೆಯಾದ ಹುಡುಗಿಗೆ ಮೂರ್ಛೆ ರೋಗ ಇರುವ ವಿಚಾರ ಮದುವೆಯಾದಾಗಲೇ ಗೊತ್ತಾಗಿತ್ತು. ಜೊತೆಗೆ ಮೈಮೇಲೆ ಅಲ್ಲಲ್ಲಿ ಚಿಕ್ಕದಾಗಿ ಹರಡಿಕೊಂಡಿರುವ ಸೋರಿಯಾಸಿಸ್ ಅನ್ನುವ ಚರ್ಮದ ಕಾಯಿಲೆ ಬೇರೆ ಇತ್ತು..ಇತ್ತಿಚೆಗೆ ಮಹದೇವಸ್ವಾಮಿಗೆ ಸಾಂಸಾರಿಕ ಜೀವನವೇ ಸಾಕಾಗಿ ಹೋಗಿತ್ತು.ಎರಡು ಗಂಡು ಮಕ್ಕಳು ಹುಟ್ಟಿದ್ದರೂ ಒಂದು ಮಗುವಿಗೆ ಮೂರ್ಛೆ...
ಅವನಂಥ ಕಥೆಗಾರ ಯಾರಿಲ್ಲ
“ನಿನ್ನ ಕಥೆಗಳೆಲ್ಲ ಬರಿಯ ಕಲ್ಪನೆ . ಕಥೆಗೆ ಚಿತ್ರ ವಿಚಿತ್ರ ತಿರುವುಗಳನ್ನು ಕೊಟ್ಟು ಜನರನ್ನು ರಂಜಿಸಿ ವಂಚಿಸುವ ಜಾಣ್ಮೆ ನಿನ್ನದು” ಗೆಳೆಯ ವಾಸು ಛೇಡಿಸಿದ . ನಾನು ನಗುತ್ತ ಹೇಳಿದೆ “ಕಥೆಗಳಿಗೆ ಸ್ಫೂರ್ತಿ ಎಲ್ಲೋ ನಡೆದ ಘಟನೆಗಳು, ಕೇಳಿದ್ದು ಅತಿರಂಜನೆ ಕಲ್ಪನೆ ಎಲ್ಲ ಬೇಕು. ಆದರೆ ಈ ಸಾರಿ ನಾನು ನನ್ನ ಸುತ್ತ ನಡೆಯುವ ಘಟನೆಗಳನ್ನೇ ಕಥೆ...
ಪಾರಿ ಭಾಗ-೧೦
ಪಾರಿ ಏನೂ ತಿಳಿಯದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಳು.ಅತ್ತು ಅತ್ತು ಕಣ್ಣುಗಳು ಊದಿಕೊಂಡಿದ್ದವು.ಪಕ್ಕದಲ್ಲಿ ಮಹೇಶ ಮೌನವಾಗಿ ನಿಂತುಕೊಂಡಿದ್ದ.ತನಗೊಂದು ದಾರಿ ತೋರಿಸಿದ ಅವಳ ಪ್ರೀತಿಯ “ಯಲ್ಲಪ್ಪಣ್ಣ”ಇಂದು ಜೀವನ್ಮರಣದ ಹೋರಾಟ ನಡೆಸುತ್ತಾ ಆಸ್ಪತ್ರೆಯಲ್ಲಿದ್ದ. ಯಲ್ಲಪ್ಪ ಓಡಿಸಿಕೊಂಡು ಬರುತ್ತಿದ್ದ ಬೈಕಿಗೆ ಲಾರಿಯೊಂದು ಜೋರಾಗಿ ಬಂದು ಗುದ್ದಿತ್ತು...
ಪಾರಿ ಭಾಗ-೯
ಪಾರಿ ಸಿಕ್ಕ ಸುದ್ದಿಯನ್ನು ಯಲ್ಲಪ್ಪನಿಂದ ತಿಳಿದ ಸುಬ್ಬಣ್ಣನವರಿಗೆ ಸಮಾಧಾನವಾಗಿತ್ತು. ಪಾರಿ ಯಲ್ಲಪ್ಪನ ಹತ್ತಿರ ಎಲ್ಲ ಗೋಳು ಹೇಳಿಕೊಂಡು ಅತ್ತಿದ್ದಳು.ಅವಳಿಗೆ ತಿಳಿಹೇಳಿದ ಯಲ್ಲಪ್ಪ “ನೀ ಸ್ವಲ್ಪ ದಿವ್ಸ್ ಊರಿನ್ ಸುದ್ದಿ ಮರ್ತು ಬಿಡು..ಆಮ್ಯಾಲ ನೋಡುನಂತ..ನೀ ಈಗ ಮತ್ತ ಊರ್ಗೆ ಹೋದ್ರ ಇಲ್ಲದ್ ಪ್ರಶ್ನೆ ಕೇಳಿ ನಿನ್ ತೆಲೆ ಹಾಳ್ ಮಾಡ್ತಾರ..ಮತ್ತ ನಿನ್ ಬದಕಾಕ...
ಪಾರಿ ಭಾಗ-೮
ಸಾವಿತ್ರಮ್ಮನವರು ಬೆಳಿಗ್ಗೆ ಬೆಳಿಗ್ಗೆಯೇ ಜೋರು ಧ್ವನಿಯಲ್ಲಿ ” ಮಾದೇವಾ..ಮಾದೇವಾ..ಏಳ ಮ್ಯಾಲ..ಪಾರಿ ಕಾಣವಲ್ಲು..ಮತ್ಯಾರ ಮನಿ ಹಾಳ ಮಾಡಾಕ ಹೋಗ್ಯಾಳ ನೋಡ್ ನಡಿಯ..ಎಂತಾಕಿನ ತಂದು ಮನಿ ಹೋಗ್ಸಿದೀ..ಇನ್ನೂ ಅದೇನನ್ ಕರ್ಮ ನೋಡ್ಬೇಕೋ..ಅಯ್ಯ ದೇವ್ರ..ನಮಗ ಯಾಕ ಇಂತಾದ್ದು ಕೊಡ್ತಿಯಪ್ಪಾ..”ಎಂದು ಹಣೆ ಬಡಿದುಕೊಂಡು ಅತ್ತಂತೆ ನಾಟಕ ಮಾಡತೊಡಗಿದರು.ಅಂಗಳ...
ಯಾರವನು? ಭಾಗ-೨
ಮಂಜುನಾಥ ರೈಗಳು ಥಟ್ಟನೆ ಎಚ್ಚರವಾಗಿ ಎದ್ದು ಕುಳಿತರು..ಹೊರಗಿನಿಂದ ಕೋಳಿಯ ಕೂಗು ಕೇಳಿಸುತ್ತಿದೆ..ಅದರ ಜೊತೆಗೆ ಕೆಲವು ಹಕ್ಕಿಗಳ ಕಲರವವೂ ಕೇಳಿಸುತ್ತಿದೆ..ಸಮಯ ಎಷ್ಟಾಗಿದೆಯೆಂದು ನೋಡಿದರೆ ಬೆಳಗ್ಗೆ ಐದು ಗಂಟೆ..!! ಹೊರಗೆ ಕತ್ತಲು ಸ್ವಲ್ಪ ಸ್ವಲ್ಪವೇ ಸರಿದು ಬೆಳಕು ಹರಿಯತೊಡಗಿತ್ತು..ಹಾಲ್ಗೆ ಬಂದವರು ಬೆಚ್ಚಿ ಬಿದ್ದರು..ಮುಂಬಾಗಿಲು ತೆರೆದಿದೆ.!! ಇದೇನು ಇಷ್ಟು...
ಯಾರವನು..?!
ಭಾಗ-೧ ಬೆಳಗಿನ ಎಂಟು ಗಂಟೆ..!! ರವಿಯ ಆಗಮನವಾಗಿತ್ತು..!! ಆಗಸ ತುಂಬ ಕೆಂಬಣ್ಣದ ಚಿತ್ತಾರ..!! ವಿವಿಧ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆ..!! ಆಗ ತಾನೇ ಗಿಡಗಳಲ್ಲಿ ಅರಳಿ ನಿಂತಿರುವ ಬಣ್ಣ ಬಣ್ಣದ ಸುಂದರ ಪುಷ್ಪಗಳು..!! ಮನಸ್ಸಿಗೆ ಮುದ ನೀಡುತ್ತಿರುವ ಹಿತವಾದ ತಂಗಾಳಿ..!! ಅದಕ್ಕೆ ಖುಷಿಗೊಂಡು ತಲೆದೂಗುತ್ತಿರುವ ಮರ ಗಿಡಗಳು..!! ಒಟ್ಟಿನಲ್ಲಿ ರವಿಯ ಆಗಮನ...
ಪಾರಿ ಭಾಗ -೭
ಹೇಳಿ ಕೇಳಿ ಮಧ್ಯರಾತ್ರಿಯ ಹೊತ್ತು..ಕಾಲ್ಗೆಜ್ಜೆಯ ಸದ್ದಿಗೆ ಸುಬ್ಬಣ್ಣನವರು ತುಸು ಬೆದರಿದರು. ಗದ್ದೆಗೆ ನೀರು ಹಾಯಿಸುವ ವಿಷಯದಲ್ಲಿ ಅವರು ಆಳುಗಳನ್ನು ನಂಬದೇ ತಾವೇ ಖುದ್ದಾಗಿ ಬರಲು ಕಾರಣವಿತ್ತು.ಎರಡು ಮೂರು ಬಾರಿ ನೀರು ಹಾಯಿಸಲೆಂದು ಗೊತ್ತು ಮಾಡಿದ ಆಳುಗಳು ಮೋಟಾರು ನಿಲ್ಲಿಸದೇ ಹಾಗೆಯೇ ಮಲಗಿಬಿಟ್ಟಿದ್ದರು. ಇದರಿಂದ ನೀರು ಪೋಲಾಗಿದ್ದಲ್ಲದೇ ಬೆಳೆಗೂ...