ಬಾಕಿ ಉಳಿದಿದ್ದ ಪದಗಳೀಗ ಸಾಲುಗಳಾಗಿ ಬರಲು ತಡಕಾಡುತ್ತಿವೆ.. ಹೆಣ್ಣು ಜೀವದ ಮಜಲುಗಳೇಕೆ ಹೀಗೆ ಎಂದು ಬಾರಿ ಬಾರಿ ಪ್ರಶ್ನಿಸುತ್ತಿವೆ… ಗುಪ್ತಗಾಮಿನಿಯಾದರೂ ಹೆಣ್ಣು ಭಾವನೆಗಳು ಗುಪ್ತವಲ್ಲ ಅಲ್ಲವೇ..?! ಹುಟ್ಟಿನಿಂದ ಸ್ವತ್ತಾಗಿದ್ದ ಕೆಂಪು ಅತ್ತ -ಇತ್ತ -ಸುತ್ತ ಚೆಲ್ಲಿದ್ದರೂ ಎತ್ತಿಕೊಳ್ಳುವ ತ್ರಾಣವಿದ್ದರೂ ಏಕೋ ಈಗ ಇದು ಸರಿಯಲ್ಲ… ಹೂದೋಟದಿ ಮಲ್ಲಿಗೆ...
ಕವಿತೆ
ಕೊನೆ
ಪ್ರೀತಿ ಮುಳುಗಿತೋ? ಎದೆಯೇ ಒಡೆಯಿತೋ ? ಅವಳ ನೆನಪೇ ಹೃದಯವ ಬರಿದು ಮಾಡಿತೋ..? ಕವಿತೆಯಿಲ್ಲದ ಬದುಕು ಯಾವ ಕವಿಗೆ ಬೇಕು ಈ ನೀರವತೆಗೆ ಹೃದಯ ಮತ್ತೇಕೆ ಜಾರಬೇಕು ಮರವನೆ ನುಂಗಿ, ನೆಲವನೆ ಬಳಸಿ ಹೃದಯದರಸಿಯ ಹೆಜ್ಜೆಯಚ್ಚಿನಂತೆ ಹರಿದಿದೆ ಒಲವ ನದಿಯ ಹರಿವು ಕದನ ಕಾದಿರುವಂತೆ ಹೃದಯ ದೇಶದೊಳು ಬರವು ಬಡಿದಿರುವಂತೆ ಭಾವದೂರಿನೊಳು ಬರಿಯ ಮೌನವೇ ಬೆನ್ನು...
ಎಪ್ಪತ್ತರ ಸ್ವಾತ೦ತ್ರ್ಯ ( ಭಾಮಿನಿ ಷಟ್ಪದಿ)
ಒಂದೆ ತಾಯಿಯ ಮಕ್ಕಳಂತಾ ವೊಂದುಗೂಡುತ ಬಾಳಿಬದುಕುವೆ ವಿಂದು ನಮಿಸುತೆ ಭಾರತಾಂಬೆಯ ದಿವ್ಯಚರಣಕ್ಕಂ | ಪಿಂದೆ ಪರಕೀಯ ಬ್ರಿಟಿಷರುಗ ಳೆಂದ ಮಿಥ್ಯದ ಮೋಡಿಮಾತಿಗೆ ನಂದಿಪೋದರು ನಮ್ಮ ಭುವಿಯ ಸ್ವಾರ್ಥದರಸುಗಳು || ೧|| ಬೇಗಬೇಗನೆ ಮೋಸಗೊಳಿಸುತ ಜಾಗವೆಲ್ಲವ ಸೂರೆಗೈಯುತ ಸಾಗಿ ಬಂದರು ನಮ್ಮ ರಾಷ್ಟ್ರದ ಮೇಲೆ ಕಣ್ಣಿಡುತ | ತೂಗಿ ನೇಲುವ ತೋಟದಲ್ಲಿನ ಬೀಗಿ ಕೊಬ್ಬಿದ ಫಲಗಳೆಲ್ಲವ...
ಮೊಬೈಲ್
ಕೈಯಲಿ ಹಿಡಿದರೆ ಮೊಬೈಲು ಫೋನನು ಮೈಮರೆಯುವರು ಜನರೆಲ್ಲ ಜೈ ಜೈ ಎಂದಿದೆ ಜಂಗಮವಾಣಿಗೆ ಥೈತಕ ಕುಣಿಯುತ ಜಗವೆಲ್ಲ ! ಮಾಯಾಪೆಟ್ಟಿಗೆ ಕೈಯೊಳಗಿದ್ದರೆ ಊಟವು ನಿದ್ರೆಯು ಬೇಕಿಲ್ಲ ಹಾಯಾಗಿರುವರು ಸಮಯವ ಕೊಲ್ಲುತ ಕೆಲಸವ ಮರೆತಿಹ ಜನರೆಲ್ಲ ! ವಸ್ತುವ ಕೊಳ್ಳಲು ಅಂಗಡಿ ಅಂಗಡಿ ಸುತ್ತುವ ಕೆಲಸವು ಈಗಿಲ್ಲ ಸುಸ್ತೇ ಇಲ್ಲದೆ ಆನ್ಲೈನ್ ಆರ್ಡರು ಮಾಡುತಲಿದ್ದರೆ ಸಾಕಲ್ಲ! ಬಗೆ ಬಗೆ ಆಟವ...
ನಗೆಮುಗಿಲು
ಘೋರ ಶೋಕದಿ ನೀನು ಜೊತೆಯಾಗಿ ನಿಂದೆ! ಕಂಗೆಡದೆ ಜೀವಿಸುವ ಧೃತಿಯ ನೀ ತಂದೆ! ಬದುಕ ವೀಣೆಯ ಭಾವ ತಂತಿಗಳ ಮೀಟುತಲಿ ಒಲವ ವಾಣಿಯನುಲಿದೆ ಮೌನ ಶ್ರುತಿಯಲ್ಲೇ.. ಕಂಗಳಲಿ ಇಂಗದಾ ಕಂಬನಿಯು ತುಂಬಿರಲು ಬೆಂಗಡೆಯೆ ನೀ ನಿಂದೆ ಸಂಗಡಿಗನಂತೆ. ಮೌನ ತಾ ಧುಮ್ಮಿಕ್ಕಿ ಮಡುವಿನಿಂ ಬರುತಿರಲು ತಂಪಿನಿಂ ಮೈದಡವಿ ಸಾವರಿಸಿ ನಿಂದೆ. ತಾಯಿ ಕಂದನ ತೆರದಿ ಸಂತೈಸಿದೆ… ಎನ್ನ ಕರಗಳ...
ಸತ್ಯದ ಡಮರುಗ
ಸತ್ಯದ ಡಮರುಗ ಬಡಿಯುವ ಜಂಗಮ, ನಡೆದಿಹ ಮಸಣದ ಓಣಿಯೊಳು! ಜೀವವೆ ಇಲ್ಲದ ದೇಹಕೆ ಮಾಡುತ, ಬೆಳಕಿನ ಪಾಠ ಇರುಳಿನೊಳು..! ಸುಳ್ಳಿನ ಸಾವಿಗೆ ಮೋಕ್ಷವ ನೀಡಿ, ಮಸಣವ ಮಂದಿರವಾಗಿಸುತ, ಢಂ!ಢಂ!ಘಂಟೆಯಿಂ ಬಡಿದೆಬ್ಬಿಸುತ, ಪ್ರತಿಮಿಸಿ ಸತ್ಯವ ಗರ್ಭದೊಳು! ಮೋಸಗಳೆಲ್ಲವೂ ಮುಳ್ಳುಗಳು, ಮೋಹವೆ ಗಾಜಿನ ಚೂರುಗಳು! ಪಾದಕೆ ಪ್ರೇಮದ ರಕ್ಷೆಯ ಧರಿಸಿ, ಗುಡಿಸಿಹ ಕೆಡುಕಿನ ಕುರುಹುಗಳು...
ವರ್ಷ-ಹರ್ಷ
ಕಾದಿದೆ ಇಳೆಯು ಮಳೆಯ ಆಗಮನಕೆ ಎಲ್ಲರ ಬಾಯಲ್ಲೂ ಒಂದೇ ಮಾತು ಅಬ್ಬಬ್ಬಾ ಎಂಥಾ ಸೆಕೆ ! ಗ್ರೀಷ್ಮ ಕಳೆದು ವರ್ಷ ಬಂತು || ದೂರದಿ ಕೇಳುವ ಕಡಲ ಭೋರ್ಗರೆತ ಧಾವಿಸಿತು ನೈಋತ್ಯ ಮಾರುತ | ಯಾರೋ ಅತ್ತಿಸಿ ಬಂದಂತೆ ಓಡುವ ಮೋಡಗಳು ನೀರ ಹನಿಗೆ ಹಾತೊರೆದಿವೆ ಜೀವ ಸಂಕುಲಗಳು || ಝಲ್ಲನೆ ಆಗಸ-ಭುವಿಯ ಬೆಳಗಿತು ಮಿಂಚು ಅದನು ಮೀರಿಸಲು ಗುಡುಗಿನ ಸಂಚು | ಬಾನಿನ ತುಂಬಾ ಕವಿಯಿತು...
ಅವನು ಮತ್ತೆ ಬರುತ್ತಾನ..?
ಹುಚ್ಚು ಮಳೆ, ವಾರವಾಯ್ತೇನೋ ಬಿಟ್ಟು ಬಿಡದೆ ಸುರೀತಾನೆ ಇದೆ ನಿನ್ನೆ, ಮೊನ್ನೆಯಿರದ ಅವನ ನೆನಪ ಹಾವಳಿ ಸಹ ಮತ್ತೆ ಶುರುವಾಗಿದೆ ನನ್ನಲ್ಲೇ ಭಯ ಮೂಡಿಸಿದೆ ಹೊಳೆವ ಕಂಗಳಲ್ಲಿ ಮತ್ತೆ ಮೂಡಿದ ಕನಸು ಕಣ್ಣ ಬಿಂಬದಲ್ಲಿ ಮೂಡಿ ನಿಂತ ರೂಪ ಸುರಿವ ಮಳೆಗೆ ಚಳಿಯಾದರೂ ಮನದಲ್ಲಿ ಬೆಚ್ಚನೆ ಭಾವ ಮೂಡಿಸಿದವ ಅವನೇ.. ಕನಸುಗಳಿರದ ಕಗ್ಗತ್ತಲ ಬದುಕಲ್ಲಿ ಬದುಕಬೇಕೆಂಬ ಭರವಸೆ ಮೂಡಿಸಿದವನು...
ಬಿಳಿ ಪಾರಿವಾಳ
ಅದೋ ನೋಡಿ ಹಾರುತಿದೆ ಬಿಳಿ ಬಾನಾಡಿ ಶಾಂತಿಯ ರೆಕ್ಕೆಗಳ ಹರಡಿ ಬಾನಗಲ.. ಮನಸುಗಳ ಮನೆಯೊಳಗೆ ಹಾರಾಡಿ ನವೋಲ್ಲಾಸದ ಗಾನವ ಹಾಡಿ ಹಾರುತಿದೆ.. ಹಾರುತಿದೆ.. ಹಾರುತಿದೆ..! ಯಾರಿದನು ಹಾರಿ ಬಿಟ್ಟಿರಬಹುದು ಬುದ್ಧನೋ.. ಮಹಾವೀರನೋ.. ಯಾರಿದಕೆ ಕನಸುಗಳ ತುಂಬಿರಬಹುದು ಗಾಂಧಿಯೋ.. ಮಂಡೇಲನೋ..! ಹೋದ ದಾರಿಯಲೆಲ್ಲ ಚೆಲ್ಲುತಿದೆ ವಿಶ್ವಶಾಂತಿಯ ಬೆಳದಿಂಗಳು ಮನವು ಬಯಸಿತು ಇನ್ನಾದರು...
ಹನಿಗವನಗಳು
೧.ನಲ್ಲನಿಲ್ಲದಿರೆ… ಮುಂಗುರುಳ ಕರೆಗೆ ಓಗೊಡುವ ನಲ್ಲನಿಲ್ಲದಿರೆ ಇನ್ನೆಲ್ಲಿಯ ನಿದಿರೆ…? ೨.ಬರಹ.. ಕಲಹ..ವಿರಹ.. ಇನ್ನೇನಿದೆ ಆಮೇಲೆ? ಬರೆದದ್ದು ಅವನ ನೆನಪಿನದೇ ಬರಹ ೩.ಮಿಂಚುಹುಳು.. ನಾನೋ ಯಾವಾಗಲೂ ನಿನಗಾಗೇ ಕಾಯ್ದವಳು ನೀನೋ ಆಗಾಗ ಮಿಂಚಿ ಮರೆಯಾಗುವ ಮಿಂಚು ಹುಳು ೪.ಸೋತವಳು.. ಅಕ್ಷರಗಳಲ್ಲಿ ನಿನ್ನ ಕಟ್ಟಿ ಹಾಕುವ ತಾಕತ್ತಿದೆ ನನಗೆ…...