ಕಾರ್ಮೋಡದ ಹೊನಲಿನ ಸುಳಿಯಲಿ ಮುಳುಗಿದ ತಿಳಿ ಚಂದಿರನ ಮಾಸಿದ ಮುಗ್ಧ ಮುಗುಳ್ನಗುವಿಗೆ, ಅವನೊಡಲಿನಲಿ ಬಚ್ಚಿಟ್ಟು ಕದ್ದು ಜತೆಗೊಯ್ದ ಸುಂದರ ಸ್ವಪ್ನಗಳಿಗೆ, ದೂರದಲೆಲ್ಲೋ ಕಾಣದೆ ಅಡಗಿ, ಕುಳಿತಿಹ ನೇಸರನ ಸುಡುಮೌನಕೆ, ನೀ ಉತ್ತರವಾಗುವೆಯಾ?! ಬೆಳಕದುವು ಮಾಯವಾಗಿ, ಮಳೆಯ ತರುವುದೋ? ಸಾವಿನ ನೆರೆಯ ತರುವುದೋ? ಜತೆ ಗುಡುಗುಮ್ಮನು ನೀಲಾಕಾಶದಿ ಮಧುರ ಹಿಮ್ಮೇಳವಾಗಿಹನೋ? ಮರಣ...
ಕವಿತೆ
ನೀನಿರಬೇಕು..
ಕೊನೆಯೆಂದು ಇರದ ಪರದಾಟದಲ್ಲಿ ಕಳೆದೊದುದೆನೋ ಸಿಕ್ಕಂತೆ ಈಗ ನನಗಾರು ಎಂಬ ಹುಡುಕಾಟದಲ್ಲಿ ಸಿಗಬಾರದಿತ್ತೇ ನೀ ಸ್ವಲ್ಪ ಬೇಗ! ಮೊಗದಲ್ಲಿ ನಿನ್ನ ಸಿಹಿ ನಗುವ ತರುವ ನಾ ಸಣ್ಣ ನೆನಪಾಗಿ ಇರಲೆ ಇರುವೆಲ್ಲ ಸಮಯ ನಿನ್ನೊಡನೆ ಕಳೆವ ನೆಪವೆಲ್ಲ ನಾ ಹುಡುಕಿ ತರಲೆ! ಯಾರಲ್ಲೂ ಹೇಳಿರದ ನೂರಾರು ಮಾತು ನೀ ಕೇಳಬೇಕು ಜತೆಯಲ್ಲಿ ಕುಳಿತು ಒಂದಿಷ್ಟು ಮುನಿಸು ಒಂದಷ್ಟು ಒಲವು ನೀ ತೋರಬೇಕು...
ಜೊತೆಗಾರ್ತಿ
ನಿನ್ನ ಅರಿಯರು ಯಾರು! ನನ್ನ ಬಿಟ್ಟು ಇನ್ನಾರು? ಮಾತು ನಿನ್ನರಿವು, ಪರ್ಣ ನಿನ್ನೆಸರು. ಕವಿತೆ ನಿನ್ನುಸಿರು, ಭಾವ ನಿನ್ನ ಸಿರಿಯು. ಸಿರಿ ದೇವಿಯೂ ನೀ ವರ್ಷದಾಯಿನಿ ಪ್ರೀತಿಯಲ್ಲಿ ನೀ ಸುವರ್ಣವೋ ಕೋಪದಲ್ಲಿ ಸೂರ್ಯರಶ್ಮಿ ನೀ ನಗುವೇ ನಿನ್ನ ಆಭೂಷಣವು ಧನ್ಯವೀ ಜನುಮ, ನಿನ್ನ ಕಂಡ ಆ ಘಳಿಗೆ ನೀನೇ ದೇವತೆ ನನ್ನ ಪದಸಿರಿಗೆ ನೀನೇ ಗಾಯಕಿ ನನ್ನ ಗಾನಸಿರಿಗೆ
ಹೂದಾನಿ ಮತ್ತು ಪಾರಿವಾಳ
ಮನೆಯ ತಾರಸಿಯ ಪುಟ್ಟ ಕೈದೋಟದಿ ಸ್ಥಿತವಾಗಿಹದೊಂದು ಖಾಲಿ ಹೂ ಕುಂಡ ; ಒಂದು ತಳಿಯನೂ ಪಲ್ಲವಿಸಲಾಗದೆ ನೀರು,ಬೆಳಕು,ಮಣ್ಣು- ಎಲ್ಲವೂ ದಂಡ . ಅತ್ತ ಕಡೆ ಗುಲಾಬಿ, ಇತ್ತ ಕಡೆ ತುಳಸಿ ಸುತ್ತ ಕೆಲವು ಅಲಂಕಾರದ ಗಿಡಗಳು ಕಾಲಕಾಲಕೆ ಬೆಳೆದು ನಳನಳಿಸಿ ಹಂಗಿಸಿದರೂ ಬಂಜೆತನ ತೊರೆಯಲ್ಲಿಲ್ಲ ಮನೆಯೊಡತಿಯ ನಿರ್ಲಕ್ಷ್ಯದ ನೋಟಕೂ ಹೆದರದೇ ಬಂಡಾಯ ಬಿಡಲಿಲ್ಲ !! ಒಂದು ತಿಳಿ ಮುಂಜಾವಿನ...
ಹಿಡಿಂಬೆ
ಸೋಕುತಿದೆ ತಂಗಾಳಿ ಹಿತವಾಗಿ ಮಧುರ ನೆನಪುಗಳ ಹರವಿಡುತಾ ಬಚ್ಚಿಟ್ಟ ಬಯಕೆಗಳ ಬಡಿದೆಬ್ಬಿಸುತಾ ಜೀವಲಹರಿ ಮೂಡಿಸುತಾ ವರುಷವರುಷಗಳೇ ಕಳೆದರೂ ಹರುಷದ ಪರ್ವವದೊಂದೇ ಅನುದಿನಾದನುಕ್ಷಣದನುಭವ ಹಸಿರು ಉಸಿರಲೆಂದೆಂದೂ ಹಿಡಿಂಬವನದ ರಕ್ಕಸಿ ಅಂದು ಘಟೋತ್ಕಚನ ತಾಯಿಯಾಗಿ ದಿನವೂ ಭೀಮಾನಾಗಮಾನಕೆ ಪ್ರಾರ್ಥಿಸುವ ಪತಿವ್ರತೆಯಿಂದು ನರಮಾಂಸದಾಸೆಗೆ ಹೋದೆನಲ್ಲಿ ಪವಡಿಸಿತ್ತು ಪೂರ್ತಿ...
ನಿರೀಕ್ಷೆ
ನೀಲಾಕಾಶದಿ ತೇಲುವ ಮೋಡವೆ ಮೆಲ್ಲಗೆ ಚಲಿಸು ನೀನೀಗ ಮಲ್ಲಿಗೆ ನಗುವಿನ ನನ್ನಯ ಗೆಳತಿಗೆ ಓಲೆಯ ನೀ ಬೇಗ ಚುಕ್ಕಿಯ ಚಂದಿರ ಬೆಚ್ಚನೆ ಹಾಸುಗೆ ಮುದ ನೀಡದು ನನ್ನ ಮನಕೀಗ ಸಂಚನು ಬೀರುವ ಮಿಂಚಿನ ಕಣ್ಣಿನ ನೋಟದ ಚೆಲುವೆ ಬಾ ಬೇಗ ಮನವಿದು ಮರುಗಿದೆ ತನುವಿದು ಸೊರಗಿದೆ ಕಾಯುತ ನಿನ್ನಯ ಹಾದಿಯನು ನನ್ನೀ ಉಸಿರಿನ ಕಣಕಣವೆಲ್ಲಾ ಕಾದಿಹುದು ನಿನ್ನಯ ಬರವನ್ನು ನಿನ್ನುಸಿರಿನ ತಂಗಾಳಿಯ...
ಇಂಕು ಮುಗಿದಿದೆ
ಸಮಾಜ ತಿದ್ದಲು ಬಂದವರ ಲೇಖನಿಯ ಇಂಕು ಖಾಲಿಯಾಗುತಿದೆ, ಚಾಟಿಂಗು ಡೇಟಿಂಗುಗಳ ಸೆಲೆಯಲ್ಲಿ ಯುವಕರ ಗಡಿಯಾರದ ಮುಳ್ಳು ಸ್ತಬ್ದವಾಗಿದೆ, ಬಾರು ಬೀರಿನ ನಿಶೆಯ ನಶೆಯಲ್ಲಿ ದ್ವಜದ ತಿರಂಗ ತಿರುಗು ಮುರುಗಾಗಿದೆ, ನಿಂತು ಸೇದಿದ ಸಿಗರೇಟ್ ಕುಂತು ಸೇದಿದ ಹುಕ್ಕದ ಹೊಗೆಯು ನಾಲ್ಕು ಸಿಂಹಗಳ ಕಣ್ಣು ಮುಸುಕಿದೆ, ಪಿಜಾ ಬರ್ಗರ್ ತಿಂದ ಹೊಟ್ಟೆಗೆ ಭರತ...
ಬಂಜೆ ಇವಳು..
ಕಾಡಿಗೆಯ ತಂದಿದ್ದೇನೆ ಕಂದ ನಿನ್ನ ಕಣ್ಣಿಗೆ ಲೇಪಿಸಲು ನಿನ್ನ ಪುಟ್ಟ ಕಾಲಿಗೊಂದು ದೃಷ್ಟಿ ಬೊಟ್ಟಿಡಲು ಕಾಯ್ದವಳು ಕಾಲ್ಗೆಜ್ಜೆಯ ತಂದಿಟ್ಟು ವರ್ಷವೇ ಆಯಿತೇನೋ ಇನ್ನೂ ಅದರ ಸಪ್ಪಳವೇ ಕೇಳದ ನತದೃಷ್ಟಳಿವಳು ಕುಲಾಯಿಯೊಂದ ಕೈಯಾರೆ ಹೆಣೆದಿರುವೆ ಅಂದಕ್ಕಿರಲೆಂದು ಮುತ್ತು ಪೋಣಿಸುತ್ತಿರುವವಳು ತೊಟ್ಟಿಲ ಮಾಡಿರುವ ಬಡಗಿ ಬಗೆ ಬಗೆ ಚಿತ್ತಾರವ...
ಶೋಭನ !
ಆ ದಿನವು ಬಂದಿದೆ ಕಾದು ಕೂತಿಹ ಮನಕೆ ಕ್ಷಣಗಣನೆ ಜೋರಾಗಿ ಹರಕೆ ಹಾರೈಕೆಯಾಗಿ ಹಸಿ ಹಸಿ ಹಸಿವಿನ ಗಂಟೆ ನಾದದಂತೆ. ಮನದ ಮೂಲೆಯ ಬಯಕೆ ಮೈಮುರಿದು ಎದ್ದು ಕಾನನದ ಕತ್ತಲೆಗೂ ಭವ್ಯ ಕಿರಣ ಸೂಸುವ ಸೂರ್ಯ ಶಾಖದ ತೇಜ ಒಳಾಂತರಂಗದಲಿ. ಕಾಣಿಸಲು ಮೊಗವು ಮಂದಾನಿಲ ಎದೆಯಲಿ ಹರಡಿ ಅಗುಳು ನುಂಗುವ ತವಕವು, ಮನಸಲಿ ಪ್ರಣಯಿ ಕಾತರವು.!ಸಾಗಿ ಬಂದಿಹ ನಡೆಯು ವಿಪುಲ ಸುಂದರ ಹೂಗಳ- ಘಮ! ಗಾಢ...
ಸೆಟ್ಟೇರಿತು ಚಿತ್ರ(ಣ)
ಇಷ್ಟೂದಿನ ತಿರುಗಿ ತಿಣುಕಿ ಒಂದೊಂದೆ ಬಲೆಗೆ ಅವರಿವರ ಸೆಳೆದು ಒಳ ಸೇರಿಸಿ ಮೆಲ್ಲಗೆ ಪುಸಲಾಯಿಸಿ ಹೆಸರು ಹಣ ಗ್ಲಾಮರು ಮೂಟೆ ಮೂಟೆ ತೋರಿಸಿ ಅಂತೂ ಕಾಲ್ಷೀಟುಗಳ ತಾರಮ್ಮಯ್ಯ ಬಗೆಹರಿಸಿ ಒಟ್ಟಾಗಿಸಿ ಸೇರಿಸಿ ನಿರ್ಮಾಪಕ ನಿರ್ದೇಶಕ ನೆರೆದಲ್ಲರೂ ಒಬ್ಬರಬೆನ್ನೊಬ್ಬರು ತಟ್ಟಿ ಪೋಸು ಕೊಡುವ ತರಾತುರಿ ಕ್ಯಾಮರಾಗಳ ಕ್ಲಿಕ್ಕಿಗೆ ಚದುರಿದ್ದವರು ಹತ್ತಿರ ಸರಿ ಸರಿ ದೂರ ನಾಯಕ ’ಸುರಾ”...