ಪ್ರೀತಿ ಮುಳುಗಿತೋ? ಎದೆಯೇ ಒಡೆಯಿತೋ ?
ಅವಳ ನೆನಪೇ
ಹೃದಯವ ಬರಿದು ಮಾಡಿತೋ..?
ಕವಿತೆಯಿಲ್ಲದ ಬದುಕು
ಯಾವ ಕವಿಗೆ ಬೇಕು
ಈ ನೀರವತೆಗೆ ಹೃದಯ ಮತ್ತೇಕೆ ಜಾರಬೇಕು
ಮರವನೆ ನುಂಗಿ, ನೆಲವನೆ ಬಳಸಿ
ಹೃದಯದರಸಿಯ ಹೆಜ್ಜೆಯಚ್ಚಿನಂತೆ
ಹರಿದಿದೆ ಒಲವ ನದಿಯ ಹರಿವು
ಕದನ ಕಾದಿರುವಂತೆ ಹೃದಯ ದೇಶದೊಳು
ಬರವು ಬಡಿದಿರುವಂತೆ ಭಾವದೂರಿನೊಳು
ಬರಿಯ ಮೌನವೇ
ಬೆನ್ನು ಹಿಡಿದಿರಬೇಕು..
ಸಂಗೀತ ರಸವಿಂದು ಸಂತಸವನೀಯದು
ಚಳಿಯಿರಲಿ ಮಳೆಯಿರಲಿ
ಎನ್ನ ಪರಿವಿಗೆ ಬರದು,
ಸ್ನೇಹ ಸರಸವ ತರದು
ಒಲುಮೆಗಾಸೆಯೇ ಇರದು,
ಮತ್ತೇನು ಕೊನೆ
ಅದುವೇ ಇದು…!!