ಸುತ್ತತುಂಬಿದೆ
ಮುಗಿಲೆತ್ತರ ಧೂಳು
ಇದ್ದ ಮರಗಿಡ
ಹಸುರ ಸಸ್ಯ ಶ್ಯಾಮಲೆ
ಕೆಂಬಣ್ಣಕ್ಕೆತಿರುಗಿದೆ
ಉರುಳಿ ಬಿದ್ದು
ಇದ್ದಾನೆ-ಇಲ್ಲೇ
ನೀರುಣಿಸಿದವ
ಮೈ ತಡವಿದವ
ಹೊತ್ತುಕೈಯತಲೆಯ ಮೇಲೆ
ಪ್ರೇಕ್ಷಕನಂತೆ,ಮೂಲೆಯಲ್ಲಿ
ಬತ್ತಿದಕಣ್ಣೀರು
ಭಾವನೆಗಳು ಸ್ಥಬ್ಧ
ಕಬ್ಬಿಣದ ಕೈ ಜರಿಯುತ್ತಿದೆ
ಮನೆ-ಮಠ
ಗಿಡ-ಮರಗಳ
ಹೊಡೆತ ತಾಳಲಾರದೆ ನಲುಗುತ್ತಿದೆ
ಜೀವ-ನಿಜರ್ೀವ
ಸಮತ್ತಟ್ಟು ನೆಲ
ಮೇಲೇರುತ್ತಿರುವ
ಒಂದೊಂದೇಇಟ್ಟಿಗೆ
ಸಮಾಧಿಯ ಮೇಲೆ
ಆಧುನಿಕತೆಯ ಸೋಗು
ತಂಗಾಳಿ ಬೀಸುತ್ತಿದ್ದಲ್ಲಿ
ಕಪ್ಪು ಹೊಗೆಯ
ರೌದ್ರಾವತಾರ!
Raghavendra Prasad