ಆನೆಯ ಆನನ ಹೊತ್ತಿರುವ, ಲಂಬೋದರನಾದ, ಉದ್ದನೆಯ ವಕ್ರವಾದ ಸೊಂಡಿಲಿರುವ, ಮೊರದಗಲದ ಕಿವಿಯ, ಕೋರೆ ದಾಡೆಯ, ಚತುರ್ಭುಜಗಳಲ್ಲಿ ಪಾಶ–ಅಂಕುಶ–ಲಡ್ಡು ಧರಿಸಿರುವ, ದೀರ್ಘ ದೇಹ ಹೊ೦ದಿರುವ ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ, ಮೋದಕ–ಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶನ ಚೌತಿ...
ಅಂಕಣ
ಶಬರಿಮಲೈ ಮತ್ತು ಮಹಿಳಾ ಸಮಾನತೆ- 2
ಶನಿ ಶಿಂಗನಾಪುರ, ಉಜ್ಜಯಿನಿಯ ಭೈರವನ ದೇವಸ್ಥಾನ, ಕಾಮಾಕ್ಯ ಮುಂತಾದವುಗಳು ವಾಮ ಮಾರ್ಗ, ಕೌಲ ಮಾರ್ಗ ಮುಂತಾದ ತಾಮಸಿಕ ತಂತ್ರಗಳ ಮೂಲಕ ವಾಮಾಚಾರ ನಡೆಯುವ ಜಾಗಗಳು. ಆ ಕಾರಣಕ್ಕಾಗಿ ಅಲ್ಲಿ ಪಶುಬಲಿ, ವಿಗ್ರಹದ ಮೇಲೆ ಎಣ್ಣೆ ಸುರಿಯುವುದು, ಮದ್ಯ ಮಾಂಸ ನೈವೇದ್ಯ ಮುಂತಾದ ಆಚರಣೆಗಳು ಇರುತ್ತವೆ. ಶನಿ ಶಿಂಗನಾಪುರದಲ್ಲಿ ಯಾವುದೇ ಆಗಮ ಪ್ರಕಾರ ನಿರ್ಮಿಸಿದ ದೇವಸ್ಥಾನ ಇಲ್ಲ...
ಶಿಕ್ಷಣ ವ್ಯವಸ್ಥೆ ಶಿಕ್ಷಕರ ಗೌರವ ಕುಸಿಯಲು ಹಲವು ಕಾರಣಗಳು.
ಅದೊಂದು ಕಾಲವಿತ್ತು. ಕಡು ಬಡವರಿಗೆ ಸರ್ಕಾರಿ ಶಾಲೆ. ಮಧ್ಯಮ ವರ್ಗದವರಿಗೆ ಖಾಸಗೀ ಶಾಲೆ. ಸ್ವಲ್ಪ ಅನುಕೂಲಸ್ಥರಿಗೆ ಕಾನ್ವೆಂಟ್. ಇನ್ನೂ ಶ್ರೀಮಂತರಿದ್ದರೆ ಅವರಿಗೆ ಸಿ.ಬಿ.ಎಸ್.ಸಿ ಇತ್ಯಾದಿ ದೊಡ್ಡ ದೊಡ್ಡ ಹೆಸರಿನ ಶಾಲೆಗಳು. ಆದರೆ ಎಲ್ಲವೂ ನಮ್ಮ ಆರ್ಥಿಕತೆಗೆ ನಿಲುಕುವಷ್ಟೆ ಶುಲ್ಕವಿರುತ್ತಿತ್ತು. ಶಿಕ್ಷಕರೇ ನಮ್ಮ ಪಾಲಿನ ಪಂಡಿತರಾಗಿದ್ದರು. ಕಲಿಸಿದ ಶಿಕ್ಷಕ ಇಡೀ...
ನೀ ಮರೆತರೂ ನಾ ಮರೆಯುವುದಿಲ್ಲ ನಿನ್ನ
गुरु ब्रम्हा गुरु विष्णू गुरुः देवो महेश्वरा I गुरु शाक्षात परब्रम्हा तस्मै श्री गुरुवे नमः II ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಮುಂದೆ ಗುರಿ ಹಾಗೂ ಹಿಂದೆ ಗುರು ಇರಬೇಕೆಂಬ ಮಾತು ಈ ಕಲಿಯುಗಕ್ಕೆ ಅನ್ವಯಿಸುವುದಿಲ್ಲ ಅನ್ನಿಸುತ್ತದೆ. ಈಗಿನ ಕಾಲದ ವಿದ್ಯಾರ್ಥಿಗಳಿಗೆ ಸರಿಯಾದ ಗುರಿಯೇ ಇರುವುದಿಲ್ಲ. ಏನೋಒಂದು ಪದವಿ ಅಂತ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೩ ___________________________________ ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು | ಮೆರೆದು ಮೈ ಮರೆಯುವುದು ಹಲ್ಲ ಕಿರಿಯುವುದು || ಮರಳಿ ಕೊರಗಾಡುವುದು ಕೆರಳುವುದು ನರಳುವುದು | ಇರವಿದೇನೊಣರಗಳೆ? – ಮಂಕುತಿಮ್ಮ || ೦೨೩ || ಇಡೀ ಬದುಕಿನ ಕಿತ್ತಾಟವೆಲ್ಲ ನಾಲ್ಕೆ ಸಾಲುಗಳಲ್ಲಿ ಎಷ್ಟು ಸೊಗಸಾಗಿ...
ಶಬರಿಮಲೈ ಮತ್ತು ಮಹಿಳಾ ಸಮಾನತೆ- 1
ಶನಿ ಶಿಂಗಣಾಪುರದಲ್ಲಿ ಸ್ತ್ರೀಯರ ಪ್ರವೇಶಕ್ಕಾಗಿ ಹೋರಾಡಿದವರು ಶನಿಯ ಭಕ್ತರಲ್ಲದಿದ್ದರೂ ಕೋರ್ಟಿನಲ್ಲಿ ಅವರ ಪರವಾಗಿ ತೀರ್ಪು ಬಂದಿದೆ. ಕೋರ್ಟಿನ ತೀರ್ಪಿಗೆ ಸ್ಥಳೀಯವಾಗಿ ಕೆಲ ಗ್ರಾಮಸ್ಥರ ವಿರೋಧದ ಹೊರತಾಗಿ ಅಲ್ಲಿ ದೊಡ್ಡಮಟ್ಟದಲ್ಲಿ ವಿರೋಧ ಎದುರಾಗಲಿಲ್ಲ. ಸ್ವಲ್ಪಮಟ್ಟಿಗಿನ ವಿರೋಧ ತೋರಿದ ಗ್ರಾಮಸ್ಥರನ್ನು ಹಾಗೂ ಭಕ್ತರನ್ನು ಆರ್ಟ್ ಆಫ್ ಲಿವಿಂಗ್ ಮತ್ತು ಆರ್ ಎಸ್...
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು..
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಈ ಗಾದೆಯ ಒದೆ ತಿಂದವರು ಅದೆಷ್ಟೋ ಜನ. ಕೆಲವೊಮ್ಮೆ ಅದ್ಯಾವುದೋ ಒಂದು ಸಮಯದಲ್ಲಿ ಒಂದು ಕೆಟ್ಟ ಮಾತನಾಡಿ ಬಿಡುತ್ತೇವೆ ಕೊನೆಗೆ ಮನಸ್ಸು ಹದಗತಿಗೆ ಬಂದಾಗಲೋ ಅಥವಾ ಬಲ್ಲವರು ಹಿಡಿದು ಜಾಢಿಸಿದಾಗಲೋ ನಮ್ಮ ಆ ಕೆಟ್ಟ ಮಾತಿನ ಪರಿಣಾಮ ಅರಿತು ಪರಿತಪಿಸುತ್ತೇವೆ. ಕಾಣೆ ಮೀನು ಕೆಲಸ ಇಲ್ದೆ ವಿವೇಕಾನಂದರ ಬಗ್ಗೆ ಬರೆದಿತ್ತಲ್ಲ...
ಹೀಗೊಂದು ದಿನ..
ಛೆ! ಎದ್ದಿದ್ದೇ ತಡವಾಯ್ತು. ಇನ್ನೇನು ೩೦ ನಿಮಿಷಗಳಲ್ಲಿ ತಯಾರಾಗಬೇಕು, ಇಲ್ಲವೆಂದರೆ ಕಛೇರಿಯ ಬಸ್ಸು ತಪ್ಪಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಮೊನ್ನೆ ಹೀಗೇ ಆಗಿತ್ತು, ಅದೂ ಇದೂ ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಏಳುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಹೆಂಗೋ ಗಡಿಬಿಡಿಯಲ್ಲಿ ನಿತ್ಯಕರ್ಮ, ಮಜ್ಜನಾದಿಗಳನ್ನು ಮುಗಿಸಿ ಬೀದಿಗೆ ಬಿದ್ದಾಗ ಬಸ್ಸು ಬರಲು ಇನ್ನೂ...
ಅಭಿವ್ಯಕ್ತಿಗೆ ಅಂತರ್ಜಾಲ ತಾಣ ಸೂಕ್ತ ವೇದಿಕೆ
ಉಜಿರೆ, ಆ.30: ಬರೆಯಬೇಕೆಂಬ ಹಂಬಲವಿರುವ ಯುವಬರಹಗಾರರು ಅಂತರ್ಜಾಲ ತಾಣಗಳನ್ನು ಬಳಸಿಕೊಂಡು ವಿವಿಧ ಬಗೆಯ ಓದುಗರನ್ನು ತಲುಪುವುದರ ಕಡೆಗೆ ಆದ್ಯತೆ ನೀಡಬೇಕು ಎಂದು ರೀಡೂ ಕನ್ನಡ, ಇಂಗ್ಲಿಷ್ ಅಂತರ್ಜಾಲ ತಾಣದ ಸಂಪಾದಕ ಶಿವಪ್ರಸಾದ್ ಭಟ್ ಹೇಳಿದರು. ಉಜಿರೆಯ ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...
Jio ಜೀ ಭರ್ ಕೆ…
ಮುಖೇಶ್ ಅಂಬಾನಿ ಇಂದು ವಾರ್ಷಿಕ ಷೇರುದಾರರ ಸಭೆಯಲ್ಲಿ ಜಿಯೊದ ಉದ್ದೇಶಗಳನ್ನು ಮತ್ತು ವಿಶೇಷತೆಗಳನ್ನು ಹೇಳುತ್ತಾ ಅದನ್ನು ಅನಾವರಣಗೊಳಿಸಿದ್ದಾರೆ. ಇಂದು ಅವರು ನೀಡಿದ ಕೊಡುಗೆಗಳು ಮತ್ತು ಅದರ ವಿಶೇಷತೆಗಳು ನಮ್ಮಲ್ಲಿ ಹೊಸ ಕುತೂಹಲವನ್ನು ಮೂಡಿಸಿರುವುದಂತೂ ಸತ್ಯ… ಡಿ.31ರ ತನಕ ಡಾಟಾ ಮತ್ತು ಧ್ವನಿ ಕರೆಗಳು ಪೂರ್ತಿ ಉಚಿತ. ಆ ಬಳಿಕವೂ ಭಾರತದೆಲ್ಲೆಡೆ ಜಿಯೋ...