Author - Shruthi Rao

Featured ಅಂಕಣ

ನಿಮ್ಮ ಟ್ಯೂಮರ್’ನ್ನು ಕಾಯ್ದಿರಿಸಿ…

ಯಾವುದೇ ಕ್ಷೇತ್ರವಾಗಿರಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಬದಲಾವಣೆಯನ್ನು ಕಾಣುತ್ತಿರುತ್ತದೆ, ವೃದ್ಧಿಯಾಗಿತ್ತಿರುತ್ತದೆ. ಅದು ಅವಶ್ಯಕವೂ ಹೌದು! ವೈದ್ಯಕೀಯ ಕ್ಷೇತ್ರವೂ ಇದಕ್ಕೇನು ಹೊರತಲ್ಲ. ಅದರಲ್ಲೂ ಕ್ಯಾನ್ಸರ್’ನಂತಹ ಖಾಯಿಲೆಗಳ ವಿಚಾರ ಬಂದಾಗ ಬದಲಾವಣೆ, ಬೆಳವಣಿಗೆ ಅತ್ಯವಶ್ಯಕ. ದಿನೇ ದಿನೇ ಹೆಚ್ಚುತ್ತಿರುವ ಇಂತಹ ಖಾಯಿಲೆಗಳಿಗೆ ಹೊಸ ಚಿಕಿತ್ಸೆಯ ಬಗ್ಗೆ...

ಅಂಕಣ

ಕ್ಯಾನ್ಸರ್ ಅನುವಂಶಿಕವೇ?

ಕ್ಯಾನ್ಸರ್ ಅನುವಂಶಿಕವೇ ಅನ್ನುವ ಪ್ರಶ್ನೆ ಕೇವಲ ಕ್ಯಾನ್ಸರ್ ಸರ್ವೈವರ್ ಅಷ್ಟೇ ಅಲ್ಲ, ಸಾಮಾನ್ಯನನ್ನು ಕಾಡುವಂಥದ್ದು! ಯಾವಾಗಲೇ ಕ್ಯಾನ್ಸರ್ ಬಗ್ಗೆ ಮಾತು ಬಂದರೂ ಅಲ್ಲಿ ಈ ಪ್ರಶ್ನೆ ಬಂದೇ ಬರುತ್ತದೆ. “ಯಾಕೆ ನಿನಗೆ ಹೀಗಾಯ್ತು? ನಿನ್ನ ಕುಟುಂಬದವರಲ್ಲಿ ಯಾರಿಗಾದರೂ ಆಗಿತ್ತಾ?” ಅಂತ ಸಾಕಷ್ಟು ಜನ ಪ್ರಶ್ನೆ ಕೇಳುತ್ತಾರೆ. ಆಗೆಲ್ಲಾ ’ಹಾಗಾದರೆ ಇದರರ್ಥ ಕ್ಯಾನ್ಸರ್...

ಅಂಕಣ

ಕೀಮೋಗಾಗಿ ರಾಕಿಂಗ್ ಕೊಠಡಿಗಳು…

         ಬದುಕಿನ ಇನ್ನೊಂದು ಮುಖ ಕಾಣುವುದು ಬಹುಶಃ ಆಸ್ಪತ್ರೆಯಲ್ಲಿಯೇ ಇರಬೇಕು. ಅದರಲ್ಲೂ ಕ್ಯಾನ್ಸರ್ ಆಸ್ಪತ್ರೆಗಳಂತೂ ನೋವು, ಚಿಂತೆ, ಭಯ, ಸಿಟ್ಟು, ಅಸಹಾಯಕತೆ, ಅನಿಶ್ಚಿತತೆಯಿಂದಲೇ ತುಂಬಿಹೋಗಿರುತ್ತದೆ.  ಕೇವಲ ನೆಗೆಟಿವ್ ಎಮೊಷನ್’ಗಳನ್ನೇ ಹೊಂದಿರುವ ಒಂದು ಪ್ರಪಂಚದಂತೆ ಕಾಣುತ್ತದೆ. ಕ್ಯಾನ್ಸರ್ ಆಸ್ಪತ್ರೆಗೆ ಹೋದ ನಂತರವೇ ತಿಳಿಯುವುದು ಹೊರಗಿನ ಪ್ರಪಂಚ...

Featured ಅಂಕಣ

ಯಾರು ಹೇಳಿದ್ದು ಪವಾಡಗಳು ನಡೆಯುವುದಿಲ್ಲ ಎಂದು..?

       ನಾವು ಯಾವಾಗಲೂ ಬದುಕಿನಲ್ಲಿ ನಡೆಯುವ ಘಟನೆಗಳನ್ನ ತರ್ಕಗಳ ಆಧಾರದ ಮೇಲೆ, ಕಾರಣಗಳ ಮೇಲೆ ವಿಶ್ಲೇಷಿಸುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಯಾವಾಗಲೂ ಅದನ್ನ ಮಾಡಲೇಬೇಕಾದ ಅವಶ್ಯಕತೆ ಇದೆಯೋ ಇಲ್ಲವೋ ಆದರೆ ನಮ್ಮ ಪಾಡಿಗೆ ನಾವು ಅದನ್ನ ಮಾಡುತ್ತಲೇ ಇರುತ್ತೇವೆ. ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಎಷ್ಟು ವಿಚಿತ್ರ ಘಟನೆಗಳು ನಡೆದು ಹೋಗುತ್ತವೆ ಎಂದರೆ ನಮ್ಮ ಯಾವ...

Featured ಅಂಕಣ

ಕ್ಯಾನ್ಸರ್ ಎಂಬ ಬದಲಾವಣೆಯೇ ಬೇಕೆಂದೇನಿಲ್ಲ…

ಸುಮಾರು ವರ್ಷಗಳ ಹಿಂದೆ ಡಿಡಿ ನ್ಯಾಷನಲ್ ಚಾನೆಲ್’ನಲ್ಲಿ ’ಫಿಲ್ಮೋತ್ಸವ್’ ಅನ್ನುವ ಕಾರ್ಯಕ್ರಮ ಬರುತ್ತಿತ್ತು. ರಾಜ್ ಕಪೂರ್, ವಹೀದಾ ರೆಹ್ಮಾನ್, ದೇವಾನಂದ್, ಮನೋಜ್ ಕುಮಾರ್ ಇಂತಹ ಹಲವು ಪ್ರಸಿದ್ಧ ಕಲಾಕಾರರ ಚಿತ್ರಗಳನ್ನ ಅದರಲ್ಲಿ ಹಾಕುತ್ತಿದ್ದರು. ನಾನು ಆಗ ೬ನೇ ಕ್ಲಾಸಿನಲ್ಲೋ ಅಥವಾ ೭ನೇ ಕ್ಲಾಸಿನಲ್ಲೋ ಇದ್ದೆ. ಪ್ರತಿ ಭಾನುವಾರ ೧೨ ಗಂಟೆಗೆ ತಪ್ಪದೇ ಈ...

Featured ಅಂಕಣ

ಕ್ಯಾನ್ಸರ್ ದೇಹಕ್ಕೇ ಬಂದಿರಲಿ ಅಥವಾ ದೇಶಕ್ಕೆ ಬಂದಿರಲಿ ಚಿಕಿತ್ಸೆಯ ಕೆಲ...

ಕೆಲವೊಂದು ವಿಷಯಗಳು ಕೇಳುವಾಗ ಬಹಳ ಸರಳ ಎನಿಸುತ್ತದೆ ಆದರೆ ನಂತರವೇ ತಿಳಿಯುವುದು ಅದೆಷ್ಟು ಕ್ಲಿಷ್ಟಕರವಾಗಿರುತ್ತದೆ ಎಂದು. ಈ ಕ್ಯಾನ್ಸರ್ ಚಿಕಿತ್ಸೆಯೂ ಹೀಗೆಯೇ. ’ಆರು ಕೀಮೋ ಹಾಗೂ ಕೊನೆಯಲ್ಲಿ ಒಂದು ಆಪರೇಷನ್’ ಎಂದಾಗ ಕ್ಯಾನ್ಸರ್’ನಂತಹ ಖಾಯಿಲೆಯ ಚಿಕಿತ್ಸೆ ಸರಳವಾಗಿಯೇ ಇದೆಯಲ್ಲ ಎನಿಸಿತ್ತು. ಆದರೆ ಅದರ ತೀವ್ರತೆ ಅರ್ಥವಾಗಿದ್ದು ಮಾತ್ರ ಚಿಕಿತ್ಸೆ ಆರಂಭವಾದ ಮೇಲೆಯೇ...

Featured ಅಂಕಣ

ಕಾಡುವ ಸೈಡ್’ಎಫೆಕ್ಟ್’ಗಳು..

            ಕ್ಯಾನ್ಸರ್ ಚಿಕಿತ್ಸೆಯ ಸೈಡ್ ಎಫೆಕ್ಟ್’ಗಳ ಬಗ್ಗೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂತದ್ದೇ! ಕೀಮೋನ ಅಡ್ಡ ಪರಿಣಾಮಗಳನ್ನ ನೋಡಿ ಅಥವಾ ಕೇಳಿ ಎಲ್ಲರೂ ತಿಳಿದುಕೊಂಡಿರುತ್ತಾರೆ. ಆದರೆ ಈ ಸೈಡ್ ಎಫೆಕ್ಟ್’ಗಳ ಬಗ್ಗೆ ನಮಗಿರುವ ಜ್ಞಾನ ತುಂಬಾ ಕಡಿಮೆ ಅಂತಲೇ ಹೇಳಬಹುದು. ಕ್ಯಾನ್ಸರ್ ಎನ್ನುವುದು ತುಂಬ ವಿಸ್ತಾರವಾದದ್ದು ಹಾಗೆಯೇ ಅದರ ಅಡ್ಡಪರಿಣಾಮಗಳು ಕೂಡ...

Featured ಅಂಕಣ

ಕ್ಯಾನ್ಸರ್ ಉಂಟಾದಾಗ ಕೋಪ ಸಹಜ, ಆದರೆ ಅದು ಇತರರ ಮೇಲೆ ಪರಿಣಾಮ ಬೀರದಿರಲಿ.!!

‘It is okay to be mad at someone during cancer’  ಅನ್ನೋ ಸಾಲನ್ನ ಇತ್ತೀಚೆಗೆ ಟ್ವಿಟರ್’ನಲ್ಲಿ ನೋಡಿದೆ. ಯಾರೋ ಒಬ್ಬ ಸರ್ವೈವರ್ ಆ ಮಾತನ್ನು ಹೇಳಿದ್ದರು. ನನಗೂ ಕೂಡ ಈ ಮಾತು ಅಕ್ಷರಶಃ ನಿಜ ಎನಿಸಿತು. ಆದರೆ..! ಆ ಸಾಲಿನಲ್ಲಿ ಸ್ವಲ್ಪ ಬದಲಾವಣೆಯಾಗಬೇಕೇನೋ ಎನಿಸಿತು. ಕ್ಯಾನ್ಸರ್ ಸಮಯದಲ್ಲಿ ನಮ್ಮ ಆ ಎಲ್ಲಾ ಋಣಾತ್ಮಕ ಭಾವಗಳನ್ನ ಹೊರ ಹಾಕುವುದು ಅವಶ್ಯಕ ಆದರೆ...

Featured ಅಂಕಣ

ಕ್ಯಾನ್ಸರ್ ಸರ್ವೈವರ್ ಕೇಳ ಬಯಸುವ ಮ್ಯಾಜಿಕಲ್ ವರ್ಡ್ಸ್…

          ಈ ಸಿನಿಮಾಗಳಲ್ಲಿ ಹೀರೋ ಹೀರೋಯಿನ್’ಗಳ ಬದುಕಲ್ಲಿ ಮೂರು ಮ್ಯಾಜಿಕಲ್ ವರ್ಡ್ಸ್ ಬರುವಂತೆ ನಾವು ಸರ್ವೈವರ್’ಗಳ ಬದುಕಲ್ಲೂ ಮೂರು ಮ್ಯಾಜಿಕಲ್ ವರ್ಡ್ಸ್ ಇದೆ. ಆ ಮೂರು ಮ್ಯಾಜಿಕಲ್ ವರ್ಡ್ಸ್’ನ ಕೇಳಿದಾಗ ಸಿಗುವ ಸಂತಸ, ಶಾಂತಿ, ನೆಮ್ಮದಿ ಬೇರೆ ಯಾವುದರಲ್ಲಿಯೂ ಇರುವುದಿಲ್ಲ.  ಆದರೆ ಸಿನಿಮಾ ಹೀರೊ ಹೀರೋಯಿನ್’ಗಳ ಮ್ಯಾಜಿಕಲ್ ವರ್ಡ್ಸ್’ಗೂ ನಾವು ಕೇಳ ಬಯಸುವ...

Featured ಅಂಕಣ

ಅನಾನುಕೂಲತೆಯಲ್ಲಿ ಉತ್ತಮವಾದದ್ದು ಯಾವುದು?

         ಮೊನ್ನೆ ಸುಮನಾ ಅವರು ಒಂದು ವೀಡಿಯೋ ಕಳುಹಿಸಿ ಕೊಟ್ಟಿದ್ದರು. ಗ್ಯಾಬಿ ಶುಲ್ ಎಂಬ ೧೪-೧೫ ವರ್ಷದ ಹುಡುಗಿಯೊಬ್ಬಳು ಬ್ಯಾಲೆ ನೃತ್ಯ ಅಭ್ಯಾಸ ಮಾಡುತ್ತಿರುವ ವೀಡಿಯೋ ಅದು. ಆಕೆ ಪ್ರೊಸ್ತೆಟಿಕ್ ಲೆಗ್ (ಕೃತಕ ಕಾಲು)ನ್ನು ಬಳಸಿ ಇತರರಂತೆಯೇ  ಆರಾಮಾಗಿ ನೃತ್ಯಾಭ್ಯಾಸ ಮಾಡುತ್ತಿದ್ದಳು. ತನ್ನ ಒಂಭತ್ತನೇ ವಯಸ್ಸಿನಲ್ಲಿ ಬೋನ್ ಕ್ಯಾನ್ಸರಿಗೆ ತುತ್ತಾಗಿ ಕಾಲು...