Author - Sandesh H Naik

ಅಂಕಣ

ಸಿಹಿ-ಕಹಿಯ ಸಮಾಚಾರ

ಸವಿ ಸವಿ ಸಡಗರ, ಸಂಭ್ರಮದ ಸುಮಧುರ ಕ್ಷಣಗಳೇ ಹಬ್ಬದ ಹಿಗ್ಗು. ಇವು ಬದುಕಿನ ಮಬ್ಬು ಮಾಸುವಂತೆ ಮಾಡಿ, ಮಾಸದ ಖುಷಿಯ ಕಳೆಯನ್ನು ಮೈಮನಗಳಲ್ಲೆಲ್ಲಾ ಹಬ್ಬಿಸಿಬಿಡುತ್ತವೆ. ಹಲವು ಹಬ್’ಗಳ ಜಪದಲ್ಲೇ ಮುಳುಗಿಹೋಗುವ ಇಂದಿನವರಿಗೆ ತಮ್ಮದೇ ಮನೆಯಲ್ಲಿ ನಡೆಯುವ ಹಬ್ಬಗಳ ಬಗ್ಗೆ ಮಾತ್ರ ಆಸಕ್ತಿಯೇ ಇಲ್ಲ. ಹಬ್ಬ ಹರಿದಿನವೆಂದರೇ ಸಿಹಿ. ಅದೇಕೆ ತಾರತಮ್ಯ? ಎಲ್ಲ ಹಬ್ಬಗಳಲ್ಲೂ...

ಅಂಕಣ

ಪರಿ ಪರಿ ಕಾಡುವ ಪರೀಕ್ಷೆ

ಈ ಮಾರ್ಚ್ ಎಫ್ರಿಲ್ ತಿಂಗಳು ಹಬ್ಬ, ಜಾತ್ರೆಗಳ ಸೀಸನ್ ಅಷ್ಟೇ ಅಲ್ಲ, ಪರೀಕ್ಷೆಯ ಪರ್ವ ಕಾಲವೂ ಹೌದು. ಹಿಂದೆಲ್ಲಾ ಪರೀಕ್ಷೆಯೆಂದರೆ ಅದು ಕೇವಲ ಮಕ್ಕಳಿಗಷ್ಟೇ ಎಂಬ ಭಾವನೆಯಿತ್ತು. ಪೋಷಕರು  ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ನಿರಾಳರಾಗಿರುತ್ತಿದ್ದರು. ಪ್ರಸ್ತುತ ಪರೀಕ್ಷಾ ಕಾಲದಲ್ಲಿ ಸ್ವತಃ ವಿದ್ಯಾರ್ಥಿಗಳಾದರೂ ನಿರಾಳರಾಗಿದ್ದಾರು, ಆದರೆ ಪೋಷಕರು...

ಅಂಕಣ

ಇದು ಫಾರೆಸ್ಟ್ ” ‘ಬರ್ನಿಂಗ್’ ಇಶ್ಯೂ”!

ನಮ್ಮಲ್ಲಿ ಒಂದು ಮಾತಿದೆ, “ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ನಿಂತರು” ಎಂದು. ಕೊನೆ ಕ್ಷಣದಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ಒದ್ದಾಡುವವರಿಗೆ ಹೀಗೆನ್ನುತ್ತಾರೆ.  ಇದು ತುಂಬಾ ಹಳೆಯದಾಯಿತೆನಿಸುತ್ತದೆ. ಸದ್ಯದ ಮಟ್ಟಿಗೆ ಆ ಮಾತನ್ನೇ ತುಸು ಹೀಗೆ ಬದಲಿಸಿ ಹೇಳಿದರೆ ಸೂಕ್ತವೆನಿಸುತ್ತದೆ. “ಕಾಡಿಗೆ ಬೆಂಕಿ ಬಿದ್ದ ಮೇಲೆ, ನಂದಿಸುವುದು...

ಅಂಕಣ

“ಡೈರಿ” ಸಂಬಂಧ ಹೀಗೊಂದು ಸಂಭ್ರಮ!

ಎಂಕ ತುಸು ವಾಚಾಳಿ. ಪ್ರತಿನಿತ್ಯ ಆತ  ತನ್ನೂರಿನ ಗೂಡಂಗಡಿಯ ಮುರುಕು ಬೆಂಚಿನ ಮೇಲೆ ಕುಳಿತು, ಪೇಪರ್’ನಲ್ಲಿ ಮುಖ ಹುದುಗಿಸಿ, ಬಿಸಿ ಬಿಸಿ ಚಹಾ ಹೀರುತ್ತಾನೆ. ಓದಿದ ಕೇಳಿದ ಸುದ್ದಿಗೆ ತನ್ನದೊಂದಷ್ಟು ಒಗ್ಗರಣೆಯನ್ನೂ ಸೇರಿಸುವುದು ಆತನ ಚಾಳಿ. ಒಂಥರಾ ಸುದ್ದಿವಾಹಿನಿಗಳ ಪ್ರೈಮ್ ಟೈಮ್ ವಿಶ್ಲೇಷಣೆಯ ರೀತಿ. ಈ ಅವಸರದಲ್ಲಿ ಎಷ್ಟೋ ಬಾರಿ ಆತ ಸುದ್ದಿಯನ್ನು...

ಅಂಕಣ

ಉಲಿದದ್ದು ಮತ್ತು ಮನದಲ್ಲೇ ಉಳಿದದ್ದು

ಇತ್ತೀಚೆಗೆ, ಹೆಚ್ಚಿನವರ ತಲೆಯಲ್ಲಿ, ಹೇಗಾದರೂ ಸರಿ, “ಮಾತನಾಡಿದವನೇ ಮಹಾಶೂರ” ಎಂಬ ಭ್ರಮೆ ಪದರಗಟ್ಟಿದೆ. ಹಾಗಾಗಿ ಪದಗಳ ಮೇಲೆ ನಿಯಂತ್ರಣವೇ ಇಲ್ಲದಾಗಿದೆ. ಬೇಕಾಬಿಟ್ಟಿ ಹೇಳಿಕೆಗಳ ಹಳಹಳಿಕೆಯ ಗೀಳು ಇಂದು ರಾಜಕಾರಣಿಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದೇ ದೊಡ್ಡ ಗೋಳು. ಈಗೀಗ ಕೆಲವು ಸಾಹಿತಿ, ಚಿಂತಕ, ಹೋರಾಟಗಾರರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ...

ಅಂಕಣ

ಉಪವಾಸ, ಜಾಗರಣೆ, ಶಿವಧ್ಯಾನದ ಸಂಗಮ: ಮಹಾಶಿವರಾತ್ರಿ

ಆಧ್ಯಾತ್ಮಿಕ ನಂಟಿನ ಕರುಳಬಳ್ಳಿಯ ಬಂಧ ಹೊಂದಿರುವ ನಮ್ಮಭಾರತೀಯ ಸಂಸ್ಕೃತಿಯಲ್ಲಿ ವೈಶಿಷ್ಟ್ಯ ಹಾಗೂ ಮಹತ್ವಪೂರ್ಣವಾದ ಹಲವಾರು ಅಂಶಗಳು ಅಡಕವಾಗಿವೆ. ನಿರ್ಮಲವಾದ ಭಕ್ತಿ, ಶ್ರದ್ಧೆ, ಆರಾಧನೆ ಹಾಗೂ ಸಂಸ್ಕಾರಗಳ ಮೂಲಕವಷ್ಟೇ ಆಧ್ಯಾತ್ಮಿಕತೆಯ ನೈಜ ಸಾರವನ್ನು ಅನುಭವ ವೇದ್ಯವನ್ನಾಗಿಸಿಕೊಳ್ಳಬಲ್ಲ  ಆಚರಣೆಗಳು ಚಾಲ್ತಿಯಲ್ಲಿರುವ ನಾಡು ನಮ್ಮದು. ಇದಕ್ಕೆ ಹೊರತಾದ ಪ್ರಯತ್ನಗಳು...

ಅಂಕಣ

ಆಸೆಗೆ ತಣ್ಣೀರು,”ಪನ್ನೀರ್” ಕಣ್ಣೀರು!

ತಾಯಿಯ ಮಹತ್ವದ ಬಗ್ಗೆ ಹೇಳುವಾಗ ‘ಅಮ್ಮನಿಗೆ ಪರ್ಯಾವಿಲ್ಲ. ಆಕೆಯ ಸ್ಥಾನವನ್ನು ಯಾರಿಂದಲೂ ತುಂಬಲಾಗದು’, ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ ಸದ್ಯ ಈ ಮಾತು ರಾಜಕೀಯ ಕ್ಷೇತ್ರದಲ್ಲೂ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೆರೆ ರಾಜ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಕ್ಷಿಪ್ರ  ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ...

ಅಂಕಣ

ಅತ್ತ ಆಯವ್ಯಯ ಲೆಕ್ಕ, ಇತ್ತ ತೆ(ಹೊ)ಗಳಿಕೆ ಪಕ್ಕಾ!

ಪಂಚ ರಾಜ್ಯಗಳ ಚುನಾವಣೆ ಬಿ.ಜೆ.ಪಿ ಪಾಲಿಗೆ ಸಿಹಿ ಪಂಚಕಜ್ಜಾಯ ಆಗಲೇಬಾರದೆಂದು ನಿರ್ಧರಿಸಿದ ವಿಪಕ್ಷಗಳು ಕೇಂದ್ರ ಬಜೆಟ್ ಮಂಡನೆಯ ಪ್ಲ್ಯಾನನ್ನೇ ಪಂಚರ್ ಮಾಡಲು ಪ್ರಯತ್ನಿಸಿದವು. ಕೊನೆಗೆ ಅವರ ತಂತ್ರಗಳೇ ಪಂಚರ್ ಆಗಿ ಮುಖಭಂಗ ಅನುಭವಿಸಬೇಕಾಯಿತು. ಅಷ್ಟರಲ್ಲಾಗಲೇ, ಪ್ರಮುಖ(??) ವಿರೋಧ ಪಕ್ಷವೊಂದು ಪಂಚರ್ ಆದ ಸೈಕಲ್ ಮೇಲೆ ಡಬಲ್ ರೈಡ್ ಮಾಡಲು ಹೊರಟಿದ್ದು ಆ ಮೂಲಕವಾದರೂ...

ಅಂಕಣ

ನೀರೆಯರ ನೆಚ್ಚಿನ ಸೀರಿಯಲ್!

ಮಹಿಳೆಯರ ಪಾಲಿನ ಸಾರ್ವಕಾಲಿಕ ಸೀರಿಯಸ್ ಮ್ಯಾಟರ್’ಗಳಲ್ಲಿ ಸೀರಿಯಲ್ ಕೂಡಾ ಒಂದು! ಕೆಲವು ಮಹಿಳೆಯರಂತೂ ಸಿರಿ ಸಂಪತ್ತುಗಳಿಗಿಂತಲೂ ಹೆಚ್ಚಾಗಿ ಸೀರಿಯಲ್’ನಲ್ಲಿನ ಸಂಕಟಗಳ ಬಗ್ಗೆಯೇ ವಿಚಾರ ಮಾಡುತ್ತಿರುತ್ತಾರೆ. ಸೀರೆ ತೊಡುವವರೇ ಹೆಚ್ಚು ಇಷ್ಟಪಡುವ ಕಾರಣಕ್ಕೂ ಅದನ್ನು ‘ಸೀರಿಯಲ್’ ಎನ್ನುತ್ತಿರಬಹುದೇನೊ! ಹಾಗೆಂದು ಸೀರೆಯಲ್ಲೇ ಎಲ್ಲರೂ...

ಅಂಕಣ

ಕೃತಿ ಬಿಡುಗಡೆಯೋತ್ತರ ಕಾಂಡ

ಕೊಂಡು ಓದುವವರ ಸಂಖ್ಯೆ ಕಂಡಾಪಟ್ಟೆ ಕಡಿಮೆಯಾಗಿದೆ ಎಂಬ ಆತಂಕದ ನಡುವೆಯೇ ಆಗೀಗ ಸಾಮಾಜಿಕ ತಾಣಗಳಲ್ಲೂ ಓದಿನ ಬಗ್ಗೆ ಗಂಭೀರ ಚರ್ಚೆ ನಡೆಯುವುದಿದೆ. ಇಷ್ಟದ ಪುಸ್ತಕ ಸಿಕ್ಕ ತಕ್ಷಣ ಅದರ ಪ್ರತಿಯ ಜೊತೆಗೊಂದು ‘ಸೆಲ್ಫಿ’ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದೂ ಇದೆ. ಇದೆಲ್ಲಾ ಪುಸ್ತಕಕ್ಕೆ ದೊರೆಯುವ ಉಚಿತ ಪ್ರಚಾರವೂ ಹೌದು. ಆದರೇನು...