Author - Sandesh H Naik

ಅಂಕಣ

ಆ ಮೆಟ್ಟಿಲುಗಳಿಗೆ ಇನ್ನಾದರೂ ಮುಕ್ತಿ ಸಿಕ್ಕೀತೆ??!

ನಮ್ಮ ರಾಜ್ಯದ ಮಟ್ಟಿಗೆ ಈ ಮೆಟ್ಟಿಲುಗಳು ಸು(ಕು)ಪ್ರಸಿದ್ಧವೇ ಸರಿ. ಪತ್ರಿಕೆ, ದೂರದರ್ಶನ, ಸಾಮಾಜಿಕ ಮಾಧ್ಯಮಗಳಲ್ಲಿ ಇವು ವಾರಕ್ಕೆ ಒಂದೆರಡು ಬಾರಿಯಾದರೂ ಸುದ್ದಿಯಾಗದೇ ಹೋಗುವುದಿಲ್ಲ. ಒಂದಷ್ಟು ಪ್ರತಿಭಟನಾಕಾರರಿಗೆ ಈ ಮೆಟ್ಟಿಲುಗಳೇ ತಮ್ಮ ಅಧಿಕೃತ  ಅಡ್ಡಾ.  ಪ್ರತಿಭಟನಾಕಾರರ ಸ್ವರ್ಗ ಅಂತೆನಿಸಿಕೊಳ್ಳುವ ತಾಣ ನಮ್ಮ ರಾಜ್ಯದಲ್ಲಿ ಯಾವುದಾದರೂ ಇದೆಯೆಂದಾದರೆ, ಅದು...

ಅಂಕಣ

ಪ್ರಾಣವಲ್ಲ, ಮಾನಹಾನಿಯ ‘ಶೂ’ಟ್!

ಫಿರಂಗಿಗಳ ಬೂಟಿನೇಟಿನಿಂದ ಬಾಸುಂಡೆ ಬರಿಸಿಕೊಂಡು, ಬುಲೆಟಿನೇಟಿಗೆ ಸಿಕ್ಕು ನೆತ್ತರು ಹರಿಸಿಕೊಂಡು ನಮ್ಮ ನಾಯಕರು ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಟ್ಟರು. ಆದರೆ ಸದ್ಯ, ಅಧಿಕಾರದ ಸವಿಯುಣ್ಣುತ್ತಿರುವ ಕೆಲವು ನಾಯಕರು ತಮ್ಮ ಬೂಟಾಟಿಕೆ ಮೆರೆಯಲು ಮುಂದಾಗಿ ಜನರಿಂದ ಬೂಟಿನೇಟು ತಿಂದು ಅನ್ಯರೆಡೆಗೆ ಬೊಟ್ಟು ಮಾಡುತ್ತಾ ಬುಸುಗುಟ್ಟುತ್ತಿದ್ದಾರೆ. ಕ್ಷುಲ್ಲಕ...

ಅಂಕಣ

ಹೊಸ ವರ್ಷವ ಸ್ವಾಗತಿಸುವ ಕ್ಯಾಲೆಂಡರ್’ನ ಸ್ವಗತ

ಶತಮಾನವೆಂಬ ಸಂತತಿಯ ಕುಡಿಯೊಂದರ ಹದಿಹರೆಯವಿದು. ಸೂರ್ಯ ಎಂದಿನಂತೆಯೇ ಮುಳುಗೆದ್ದರೂ ನಿನ್ನೆಯದ್ದು ಹುಚ್ಚುಕೋಡಿ ಹದಿನಾರು ಕಳೆದು ಹದಿನೇಳರ ಹಾದಿ ತೆರೆದಿಟ್ಟ ತುಸು ವಿಶೇಷ ಬೆಳಗು. ಸಂಸ್ಕೃತಿ, ಸಂಪ್ರದಾಯಗಳ ವ್ಯಾಖ್ಯಾನದ ಹೊಸ ವರ್ಷದ ಭಿನ್ನ ನಂಬಿಕೆ ಒಂದೆಡೆಯಾದರೆ, ಇದೇ ಹೊಸವರ್ಷವೆಂಬ ಮೋಜು, ಮಸ್ತಿಯಲ್ಲಿ ಕುಡಿದು ಕುಪ್ಪಳಿಸಿ ಕೊನೆಗೆ ಗಸ್ತಿನಲ್ಲಿ ತಿರುಗಾಡುವ ಪೋಲಿಸರ...

ಅಂಕಣ

ಅಯೋಗ್ಯರನ್ನು ಆರಿಸಿ ಅರಚಾಟಕ್ಕೆ ಅಂಜಿದೊಡೆಂತಯ್ಯಾ?!

ನಮ್ಮ ದೇಶದಲ್ಲಿ ನಡೆಯುವ ಚುನಾವಣಾ ಪ್ರಚಾರಗಳೆಂದರೆ ಕುರಿಯನ್ನು ಕೊಬ್ಬಿಸುವ ಪ್ರಕ್ರಿಯೆಯಿದ್ದಂತೆಯೇ ಸರಿ. ಸುಳ್ಳು ಪೊಳ್ಳು ಆಶ್ವಾಸನೆಗಳೇ ಭಾಷಣಕಾರರ ಉಚ್ವಾಸ, ನಿಶ್ವಾಸ!! ಕಲರ್ ಕಲರ್ ಆಸೆ ತೋರಿಸಿ ಬ್ಲ್ಯಾಕ್&ವೈಟ್ ರೀಲು ಓಡಿಸುತ್ತಾರೆ. ಗಿಲೀಟು ಮಾಡಿ ಓಟು ಗಿಟ್ಟಿಸಿಕೊಂಡು ತಮ್ಮ ಸೀಟು ಭದ್ರಪಡಿಸಿಕೊಂಡ ಮೇಲೆ ಇವರ ಕಿವಿಗೆ ಯಾವುದೂ ನಾಟುವುದೇ ಇಲ್ಲ ಬಿಡಿ...