ಇಂದು ವಿಶ್ವ ಒಂದು ಗ್ರಾಮ ಅನ್ನುವ ಹಂತಕ್ಕೆ ಬಂದು ನಿಂತಿದೆ. ಅಂಗೈಯಲ್ಲಿಯ ಒಂದು ಪುಟ್ಟ ಮೊಬೈಲ್ ಮೂಲಕ ನಾವು ವಿಶ್ವದ ಬಗ್ಗೆ ತಿಳಿದುಕೊಳ್ಳಬಹುದು ಹಾಗೆ ವಿಶ್ವಕ್ಕೆ ನಮ್ಮ ಬಗ್ಗೆ ತಿಳಿಸಿಯೂಕೊಡಬಹುದು. ಇಂದಿನ ವ್ಯಾಪಾರ ಉದ್ದಿಮೆಗಳು ಆನ್-ಲೈನ್ ಮಾರುಕಟ್ಟೆತಾಣಗಳಿಂದ ವಿಶ್ವವ್ಯಾಪಿ ಆಗುತ್ತಿವೆ. ಇದುವೆರೆಗೂ ಪುರುಷ ಪ್ರಧಾನವಾಗಿ ಕಂಡು ಬರುತ್ತಿದ್ದ ಆನ್-ಲೈನ್...
Author - Guest Author
ಪಶ್ಚಿಮದಲ್ಲಿ ವಿಜ್ಞಾನದ ಸೂರ್ಯೋದಯ
ಭಾರತದಲ್ಲಿ ಗಣಿತದ ಜೊತೆಜೊತೆಯಲ್ಲೇ ಖಗೋಲಶಾಸ್ತ್ರ, ಖಭೌತಶಾಸ್ತ್ರವೂ ವಿಕಾಸ ಕಂಡಿತು. ಪ್ರಾಚೀನ ಜ್ಞಾನರಾಶಿಯಾದ ವೇದಗಳಲ್ಲೇ ಖಗೋಲಶಾಸ್ತ್ರದ ಹುಟ್ಟನ್ನು ಕಾಣಬಹುದು. ಲಗಧ ಮಹರ್ಷಿಯಿಂದ ಕಂಡುಕೊಳ್ಳಲ್ಪಟ್ಟ ವೇದಾಂಗ ಜ್ಯೋತಿಷದಲ್ಲಿ ಖಗೋಲದ ವಿಸ್ತಾರವಾದ ವಿವರಣೆಯಿದೆ. ಹಗಲು ರಾತ್ರಿಗಳ ಪ್ರಮಾಣ, ಸೂರ್ಯನ ಸ್ಥಾನ, ನಕ್ಷತ್ರಗಳು ಹಾಗೂ ಗ್ರಹಗಳು, ಗ್ರಹಣಗಳು, ಕ್ರಾಂತಿವೃತ್ತ...
ಮಳೆಯೆಂದರೆ ಬರೀ ನೀರಲ್ಲ…
ಮಳೆಯೆಂದರೆ ಬರೀ ನೀರಲ್ಲ… ಇನ್ನೇನು? ಮಳೆ ಬರುವಾಗ ನೀರು ಬರುತ್ತದಲ್ಲ … ಹೌದು. ಮಳೆ ಬಂದರೆ ನೀರಾಗುತ್ತದೆ, ಹಾಗೆಯೇ ಮಳೆ ಬರದಿದ್ದರೆ ನೀರಿಲ್ಲ ಅಲ್ವಾ? ಮೇ ಅಥವಾ ಜೂನಲ್ಲಿ ಮೊದಲ ಮಳೆ ಬಂದಾಗ ಅದರ ಜೊತೆಗೆ ಒಂದಿಷ್ಟು ಬಾಲ್ಯದ ನೆನಪುಗಳು ಸಹ ಬರುತ್ತವೆ… ನೆನಪುಗಳು ನೆನಪಿಗೆ ಬಂದಾಗ ಈ ಬಾಲ್ಯ ಮತ್ತೆ ಬರಬಾರದೇ ಎಂದು ಅನಿಸುವುದು ಸಹಜ… ಮಳೆ...
ಕೌದಿ ಅಮ್ಮಾ ಕೌದಿ
ಅಂದು ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಇರಬಹುದು. ಹೆಂಗಸೊಬ್ಬಳು “ಕೌದಿ ಅಮ್ಮ ಕೌದಿ” ಎಂದು ಕೂಗುತ್ತ ಸಾಗುತ್ತಿದ್ದಳು ಮನೆ ಮುಂದಿನ ರಸ್ತೆಯಲ್ಲಿ. ಅಡಿಗೆ ಮನೆಯಲ್ಲಿ ಇದ್ದ ನನ್ನ ಕಿವಿ ನೆಟ್ಟಗಾಯಿತು. ಉರಿಯುವ ಒಲೆ ಪಟಕ್ಕೆಂದು ಆರಿಸಿ ಒಂದೇ ನೆಗೆತಕ್ಕೆ ಗೇಟಿನ ಹತ್ತಿರ ಓಡಿ ಬಂದೆ. ಮನಸಲ್ಲಿ ಅವಳೆಲ್ಲಿ ಹೋಗಿಬಿಟ್ಟರೆ ಅನ್ನುವ ಆತಂಕ. ಕೌದಿ...
ಜಟಿಲವಲ್ಲ ಜಿ.ಎಸ್.ಟಿ
ಜುಲೈ ಒಂದಕ್ಕೆ ಸರಕು ಮತ್ತು ಸೇವಾ ತೆರಿಗೆ (GST) ಜಾರಿಗೆ ಬಂದಿದೆ. ಬಹಳಷ್ಟು ಜನಕ್ಕೆ ಅದರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೆ ಜಾಲತಾಣಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಆದ್ದರಿಂದ GSTಗೆ ಸಂಬಂಧ ಪಟ್ಟ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಆದಷ್ಟೂ ಸರಳವಾಗಿ ಹೇಳುವುದೇ ಈ ಲೇಖನದ ಉದ್ದೇಶ. ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳೆಂದರೇನು? ಸರಕು ಮತ್ತು ಸೇವಾ...
ಮಹಾರವ – A Sound of Thunder – 3
ರೇ ಬ್ರಾಡ್ಬರಿಯವರು ೧೯೫೨ರಲ್ಲಿ ಬರೆದ ಸಣ್ಣ ಕಥೆ – ‘A Sound Of Thunder’ನ ಕನ್ನಡ ಭಾವಾನುವಾದ. ಅಮೇರಿಕಾ ಗಣಿತಜ್ಞ ಎಡ್ವರ್ಡ್ ಲೊರೆಂಜರ Chaos ಸಿದ್ಧಾಂತದ, Butterfly effect ಗೆ ಬಹಳ ಹತ್ತಿರದಂತೆ ಕಂಡು ಬರುವ ಇದು, ಲೋರೆಂಜ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮುಂಚೆಯೇ ಬರೆಯಲ್ಪಟ್ಟಿದ್ದಾದರೂ Buttefly effectನ ವಿವರಣೆಗೆ...
ಮಹಾರವ – A Sound of Thunder – 2
ರೇ ಬ್ರಾಡ್ಬರಿಯವರು ೧೯೫೨ರಲ್ಲಿ ಬರೆದ ಸಣ್ಣ ಕಥೆ – ‘A Sound Of Thunder’ನ ಕನ್ನಡ ಭಾವಾನುವಾದ. ಅಮೇರಿಕಾ ಗಣಿತಜ್ಞ ಎಡ್ವರ್ಡ್ ಲೊರೆಂಜರ Chaos ಸಿದ್ಧಾಂತದ, Butterfly effect ಗೆ ಬಹಳ ಹತ್ತಿರದಂತೆ ಕಂಡು ಬರುವ ಇದು, ಲೋರೆಂಜ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮುಂಚೆಯೇ ಬರೆಯಲ್ಪಟ್ಟಿದ್ದಾದರೂ Buttefly effectನ ವಿವರಣೆಗೆ...
ಪೇಜಾವರ ಶ್ರೀಗಳೇ ನೀವು ಹಾಗೆ ಮಾಡಬಾರದಿತ್ತು’ ಎನ್ನುವ ಮೊದಲು..
1968-69ಕ್ಕೂ ಮುನ್ನ ಹಿಂದುಗಳಲ್ಲಿ ಸಾಮರಸ್ಯ ಭಾವನೆ ಬಹಳ ಕಡಿಮೆ ಇರುವಂತೆ ಒಂದು ವ್ಯವಸ್ಥಿತವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಕಾರಣ ಏನೇ ಇರಬಹುದು. ಅದರಲ್ಲಿ ನಮ್ಮಲ್ಲಿನ ವಿಚಾರಶೀಲತೆಯ ಪ್ರಮಾಣ ಕಡಿಮೆ ಇರುವುದಂತೂ ಜಗಜ್ಜಾಹೀರಾದ ವಿಷಯ. ಅದೇನೇ ಇರಲಿ, ಆದರೆ ಇಂತಹ ಸಮಯದಲ್ಲಿ ಈ ಹಿಂದು ಜನಾಂಗಕ್ಕೆ ಒಂದು ಬಲವಾದ ಶಕ್ತಿಯ ಅವಶ್ಯಕತೆ ಬೇಕೆನ್ನುವ ಹೆಬ್ಬಯಕೆ...
ಕನ್ನಡಿಗರೇ ಕೇಳಿ ಇಲ್ಲಿ…
ಮೊನ್ನೆ ಬೆಳ್ಳಂದೂರಿನ ಮುಖ್ಯ ರಸ್ತೆಯಲ್ಲಿ ನನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆ. ನೋಡ ನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಬಂದು ಬಿಟ್ಟ. ನಾನು ಗಡಿಬಿಡಿಯಲ್ಲಿ ನಿಯಂತ್ರಕವನ್ನು ಅದುಮಿ ವಾಹನ ನಿಲ್ಲಿಸಿದೆ. “ನೋಡೇ ಇಲ್ಲಾ ಗುರು.. ಕ್ಷಮಿಸಿಬಿಡು (ಆಂಗ್ಲ ಭಾಷೆಯಲ್ಲಿ ಕ್ಷಮಿಸಿಬಿಡು) ಎಂದ. ಅವನು ಗೋಲಗಪ್ಪಾ ಮಾರುವ ಉತ್ತರಭಾರತೀಯ ಹುಡುಗ...
ಮಳೆಯ ಮೆಲುಕು
ಮೋಡ ಮುಸುಕಿ ಆಗಸದ ಮೂತಿ ಕಪ್ಪಿಟ್ಟಾಗಲೆಲ್ಲ ಮನಸ್ಸು ನನ್ನ ಊರಿನ ಮಳೆಗಾಲದ ದಿನಗಳಿಗೆ ಜಾರಿ ಮೆಲುಕುಹಾಕಿ ಮರುಗುತ್ತದೆ. ನಮ್ಮೂರಿನ ಮಳೆಗಾಲದ ಬಗ್ಗೆ ಒಂದ್ ಸ್ವಲ್ಪ ಹೇಳುವ ಅಂತ. ಅದಕ್ಕಿಂತ ಮುಂಚೆ ನಮ್ಮೂರಿನ ಪರಿಚಯ ಮಾಡಿಕೊಳ್ಳುವ. ಮಲೆನಾಡಿನ ಹೃದಯ ಭಾಗವೆನಿಸಿರುವ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಹಿರೇಬಿಲುಗುಂಜಿ ಗ್ರಾಮ. ಸಾಗರ ಸಿಟಿಯಿಂದ 25 ಕೀ. ಮಿ, ಅನಂದಪುರ...