ತುಂತುರು ಮಳೆಯಲಿ ನೆನೆಯುತ್ತ ಏನೇನನೊ ಮನದಲಿ ನೆನೆಯುತ್ತ ಸಾಗಿದ್ದೆ ತುಂತುರು ಹನಿ-ಸುತ್ತ ಮನಕೆ ನೆನಪಿನ ಹನಿ ಹನಿ ಎರಚಿತ್ತಾ ಮುದಕೆ ಯಾರನೊ ಮನಸದು ನೆನೆಸಿತ್ತು ತುಂತುರು ಹನಿ ತಲೆಯ ನೆನೆಸಿತ್ತು ನೆನೆದಿದ್ದು ಒಳಗೊ ಹೊರಗೊ ಗೋಜಲು ಒಳಗ್ಹೊರಗೆಲ್ಲ ಒದ್ದೆಯಾಗಿ ಜುಳು ಜುಳು.. ನೆನೆದಾಕೆಯ ನಗು ನೆನೆದಾ ವದನ ಹನಿ ಜತೆ ಬೆವರು ಸಾಲುಗಟ್ಟಿ ತೋರಣ ನೆನಪಿನಾ ತೋಟದಲೆಲ್ಲಾ...
Author - Nagesha MN
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೨ _______________________________ ಮಾನವರೋ ದಾನವರೋ ಭೂಮಾತೆಯನು ತಣಿಸೆ | ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? || ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ | ಸೌನಿಕನ ಕಟ್ಟೆಯೇಂ ? – ಮಂಕುತಿಮ್ಮ || ಸುತ್ತೆಲ್ಲ ನಡೆದಿರುವ ಅಟ್ಟಹಾಸದ ರೂವಾರಿಗಳಾದರೊ ಬೇರಾರೊ ಆಗಿರದೆ ಇದೆ ಮನುಕುಲದ ಸಂತತಿಯ ವಾರಸುದಾರರೆ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೦ ____________________________________ ಏನು ಪ್ರಪಂಚವಿದು | ಏನು ಧಾಳಾಧಾಳಿ! | ಏನದ್ಭುತಾಪಾರಶಕ್ತಿ ನಿರ್ಘಾತ! || ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? | ಏನರ್ಥವಿದಕೆಲ್ಲ ? ಮಂಕುತಿಮ್ಮ || ಪ್ರಪಂಚವೆನ್ನುವುದು ಅಸ್ತಿತ್ವಕ್ಕೆ ಬಂದದ್ದೇನೊ ಆಯಿತು, ಜೀವಿಗಳ ಸೃಷ್ಟಿಯಾಗಿ ಕಾಲ ದೇಶಗಳ ಕೋಶದಲ್ಲಿ ಭೂಗೋಳದ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೯ ಏನು ಭೈರವಲೀಲೆಯೀ ವಿಶ್ವಭ್ರಮಣೆ! | ಏನು ಭೂತಗ್ರಾಮನರ್ತನೋನ್ಮಾದ! || ಏನಗ್ನಿ ಗೋಳಗಳು! ಏನಂತರಾಳಗಳು! | ಏನು ವಿಸ್ಮಯ ಸೃಷ್ಟಿ! ಮಂಕುತಿಮ್ಮ || ಭೈರವ ಲೀಲೆಯೆನ್ನುವುದು ಆ ಕಾಲ ಭೈರವನ ಪ್ರಚಂಡ ರೂಪಿನ ರೌದ್ರಾವತಾರದ ಹಿನ್ನಲೆಯಲ್ಲಿ ಪರಿಗಣಿಸಬೇಕಾದ ಹೋಲಿಕೆ. ಇಲ್ಲಿ ಕವಿ ಸೃಷ್ಟಿಯುಂಟಾದ ಬಗೆಯನ್ನು ನಮ್ಮ ಕಲ್ಪನೆಗೆಟುಕುವ...
ದುರಂತ ನಾಯಕಿ ಸೀತೆಯ ಬದುಕು………!
(ಓದುವ ಮುನ್ನ : ರಾಮನ ಹಬ್ಬದ ಹಾಗೆ ಸೀತೆಗೊಂದು ಹಬ್ಬವನ್ನು ಪ್ರತ್ಯೇಕವಾಗಿ ಆಚರಿಸಿದ ನೆನಪಿಲ್ಲ ನನಗೆ. ಬಹುಷಃ ನಿತ್ಯವೂ ಸ್ಮರಣೆಯಾಗುವ ವ್ಯಕ್ತಿತ್ವಗಳಿಗೆ ದಿನನಿತ್ಯವೂ ಹಬ್ಬವೆಂಬ ಭಾವದಿಂದಿರಬೇಕು. ಆದರ್ಶ ದಾಂಪತ್ಯದ ಜೋಡಿಗೆ ಸದಾ ಉದಾಹರಣೆಯಾಗುವ ಸೀತಾರಾಮರ ಬದುಕಿನಲ್ಲಿ ಸೀತೆಯ ಬದುಕು ಅಷ್ಟೊಂದು ನಿರಾಳವಾಗಿತ್ತೆ ? ಎಂದು ನೋಡಿದರೆ ಹುಟ್ಟುವ ಪ್ರಶ್ನೆಗಳ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೮ ____________________________________ ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? | ಭ್ರಮಿಪುದೇನಾಗಾಗ ಕರ್ತೃವಿನ ಮನಸು? || ಮಮತೆಯುಳ್ಳವನಾತನಾದೊಡೀ ಜೀವಗಳು | ಶ್ರಮಪಡುವುವೇಕಿಂತು ? – ಮಂಕುತಿಮ್ಮ || ೦೦೮ || ನಮ್ಮ ಸುತ್ತಲ ಸೃಷ್ಟಿಯನ್ನು ಒಮ್ಮೆ ಅವಲೋಕಿಸಿ ನೋಡಿದರೆ ಎಷ್ಟೊಂದು ವೈವಿಧ್ಯ ಪ್ರಬೇಧಗಳು...
ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ..
ಹೂವಲ್ಲೂ ಗಂಡು ಹೂ ಮತ್ತು ಹೆಣ್ಣು ಹೂವಿರುವುದು ಸಾಮಾನ್ಯ ಜ್ಞಾನವಲ್ಲ. ಬಹುಶಃ ವಿಜ್ಞಾನದ ಕಲಿಕೆಯಲಿ ತೊಡಗಿರುವವರಿಗೆ ಗೊತ್ತಿರಬಹುದಾದರೂ, ಕವಿ ಕಲ್ಪನೆಯ ಮೂಸೆಯಲ್ಲಿ ಹೂವೆಂದರೆ ಹೆಣ್ಣಿನ ರೂಪವೆ ಕಣ್ಮುಂದೆ ಬಂದು ನಿಲ್ಲುತ್ತದೆ. ಕವಿಯತ್ರಿಗಳೂ ಸಹ ಹೆಚ್ಚು ಕಡಿಮೆ ಇದೆ ಅರಿವಿನ ಮೂಸೆಯಲ್ಲೆ ಕಾವ್ಯ ಹೊಸೆಯುವಂತೆ ಭಾಸವಾಗುತ್ತದೆ. ಈ ಗುಂಪಿನಲ್ಲಿ ಬಹುತೇಕ ಹೂವೆಂದರೆ...
ನೇತ್ರಾವತಿ ಅತ್ತ ಸದ್ದು..
ಅತ್ತವಳೆ ನೇತ್ರಾವತಿ ಗೊಳೋ ಬೆತ್ತಲೆ ನೆಲವಾಗೊ ಸಂಕಟಕೆ ತಂದಿಕ್ಕಿದೆ ಆತಂಕ ಭವಿತದ ರಚ್ಚೆ ಭೀತಿ ಎತ್ತಿನ ಹೊಳೆಯಲಿ ಕೊಚ್ಚೆ.. ಜೀವನಾಡಿಯಾದವಳು ಮಾತೆ ಕರಾವಳಿಗವಳು ಕನ್ನಡಿಯಂತೆ ಕಣ್ಣಾಗ್ಹರಿಸಿಹಳು ಜೀವ ಜಲಧಾರೆ ನೇತ್ರದಿ ನೆತ್ತರ ಹರಿಸೆ ದಿಕ್ಕಿನ್ಯಾರೆ ? ಧರ್ಮಸ್ಥಳದಲಿ ಮುಳುಗು ಹಾಕಿ ಮೀಯುವ ಭಕ್ತರ ತೋಯಿಸೊ ಶಕ್ತಿ ಬತ್ತಿಸೆ ಪಾತ್ರ ಕುಗ್ಗಿ, ಮಬ್ಬುಕಣ್ಣ ಮಂಜೆ...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೭ ಬದುಕಿಗಾರ್ ನಾಯಕರು ? ಏಕನೊ ಅನೇಕರೋ? | ವಿಧಿಯೊ, ಪೌರುಷವೊ, ಧರುಮವೊ, ಅಂಧಬಲವೋ? || ಕುದುರುವುದದೆಂತು ಈಯವ್ಯವಸ್ಥೆಯ ಪಾಡು ? | ಅದಿಗುದಿಯೆ ಗತಿಯೇನೊ? – ಮಂಕುತಿಮ್ಮ || ಬದುಕಿನ ನಾವೆ ನಡೆಸಲು ಚುಕ್ಕಾಣಿ ಹಿಡಿದಿರುವ ನಾಯಕರಾದರು ಯಾರು ? ಅದೇನು ಒಬ್ಬರಿಂದ ನಡೆಯುವ ಯಾನವೊ ಅಥವಾ ಅನೇಕರಿಂದಲೊ? ಅದನ್ನು...
ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೬
ಒಗಟೆಯೇನೀ ಸೃಷ್ಟಿ ? ಬಾಳಿನರ್ಥವದೇನು | ಬಗೆದು ಬಿಡಿಸುವರಾರು ಸೋಜಿಗವನಿದನು ? || ಜಗವ ನಿರವಿಸಿದ ಕೈಯೊಂದಾದೊಡೇಕಿಂತು ? | ಬಗೆ ಬಗೆಯ ಜೀವಗತಿ – ಮಂಕುತಿಮ್ಮ || ಈ ಸೃಷ್ಟಿಯೇನಿದ್ದರು ಬರಿಯ ಒಗಟಾಗಿಯೆ ಇರುವಂತದ್ದೇನು? ಆ ಒಗಟಿನೊಳಗೆ ಬೆಸೆದುಕೊಂಡ ಈ ಬಾಳಿಗೇನಾದರೂ ಅರ್ಥವಿದೆಯೆ? ಈ ಒಗಟಿನ ಗುಟ್ಟನ್ನು ಹರಿದು, ಈ ಸೃಷ್ಟಿಯ, ಬಾಳಿನ ಸೋಜಿಗದ ಸೂತ್ರವನ್ನು...