ಕಗ್ಗಕೊಂದು ಹಗ್ಗ ಹೊಸೆದು… – 4 ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ ? | ನಾವರಿಯಲಾರದೆಲ್ಲದರೊಟ್ಟು ಹೆಸರೆ ? || ಕಾವನೋರ್ವನಿರಲ್ಕೆ ಜಗದ ಕಥೆಯೇಕಿಂತು ? | ಸಾವು ಹುಟ್ಟುಗಳೇನು ? – ಮಂಕುತಿಮ್ಮ || ಒಳಗೇನಿದೆಯೆಂದು ಕಾಣಿಸದಂತೆ ಗಾಡಾಂಧಕಾರದಿಂದ ತುಂಬಿರುವ ನಿಗೂಢ ಗವಿಯಂತಹ ಅಸ್ತಿತ್ವವೆ ದೇವರೆ ? ನಮ್ಮ ನಿಲುಕಿಗೆ ಸಿಗದ, ನಾವು ಅರಿಯಲಾಗದೆ...
Author - Nagesha MN
ಕಗ್ಗಕೊಂದು ಹಗ್ಗ ಹೊಸೆದು
ಮಂಕುತಿಮ್ಮನ ಕಗ್ಗ – ಟಿಪ್ಪಣಿ -4 ಏನು ಜೀವನದರ್ಥ ? ಏನು ಪ್ರಪಂಚಾರ್ಥ ? | ಏನು ಜೀವಪ್ರಪಂಚಗಳ ಸಂಬಂಧ ? || ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು ? | ಜ್ಞಾನ ಪ್ರಮಾಣವೇಂ ? – ಮಂಕುತಿಮ್ಮ || ನಾವೆಲ್ಲಾ ನಡೆಸಲೇಬೇಕಾದ ಈ ಜೀವನದರ್ಥವೇನು, ಉದ್ದೇಶವೇನು ? ಅದನ್ನು ನಡೆಸುವ ರಂಗವೇದಿಕೆಯಾದ ಈ ಪ್ರಪಂಚದ ಅರ್ಥವೇನು, ಉದ್ದೇಶವೇನು ? ಇವೆರಡರ ನಡುವಿನ...
ನರಮಾನವನಾಗಿ ರಾಮನ ಜನುಮ. 5
ನರಮಾನವನಾಗಿ ರಾಮನ ಜನುಮ. 4 ಯುದ್ಧ ಗೆದ್ದಾಯ್ತು, ರಾವಣ ಬಿದ್ದಾಯ್ತು ಇನ್ನೆಲ್ಲಾ ನಿರಾಳವಾಯ್ತು ಎಂದು ಎಲ್ಲರು ಅಂದುಕೊಳ್ಳುತ್ತಿರುವಾಗಲೆ ಬಂದೆರಗಿತು ಮತ್ತೊಂದು ರೀತಿಯ ಧರ್ಮ ಸಂಕಟ. ಸೀತೆಯ ಪಾವಿತ್ರ್ಯ, ಪಾತಿವ್ರತ್ಯದ ಬಗ್ಗೆ ಶ್ರೀರಾಮನಿಗೆಷ್ಟೆ ನಂಬಿಕೆಯಿದ್ದರೂ, ಅವನು ಇಳೆಯ ರಾಜವಂಶದವನ ಪಾತ್ರದಲ್ಲಿ ಆ ನಂಬಿಕೆಯನ್ನು ಮಾತ್ರ ಆದರಿಸಿ ನಿರ್ಧಾರ ಕೈಗೊಳ್ಳುವಂತಿಲ್ಲ...
ನರಮಾನವನಾಗಿ ರಾಮನ ಜನುಮ – 4
ನರಮಾನವನಾಗಿ ರಾಮನ ಜನುಮ – 3 ಒಟ್ಟಾರೆ ರಾಮನ ಮಾನವ ಮನದ ಮಾನಸಿಕ ತುಮುಲ, ತಾಕಲಾಟಗಳಿಗೆಲ್ಲ ಮದ್ದು ಲೇಪಿಸುವ ಹಾಗೆ, ಬರಿ ಅವನ ಆಂತರ್ಯದ ನೋವನ್ನರಿಯುವುದಷ್ಟೆ ಅಲ್ಲ, ನಿಷ್ಠೆಯಿಂದ ಅದನ್ನು ಪರಿಹರಿಸುವ ದಾರಿ ಹುಡುಕುವ ಹನುಮನಂತಹ ಬಂಟನೂ ಸಿಕ್ಕಿದ್ದು ರಾಮನ ಪರಿತಪ್ತ ಮನವನ್ನು ಅದೆಷ್ಟೊ ನಿರಾಳವಾಗಿಸಿತೆನ್ನಬೇಕು. ಅಂತೆಯೆ ಸೂಕ್ತ ಸಾಂಗತ್ಯ, ಸಹಚರ್ಯದ...
ನರಮಾನವನಾಗಿ ರಾಮನ ಜನುಮ – 3
ಅಂತೂ ಯಾವ ರಾಜನೀತಿಯ ಸೂತ್ರವೊ, ಯಾವ ರಣನೀತಿಯ ಹಿನ್ನಲೆಯೊ, ಎರಡೂ ಅಲ್ಲದ ‘ಮೊದಲು ಸಿಕ್ಕಿದವರಿಗೆ ಮೊದಲ ಆದ್ಯತೆ’ ಎನ್ನುವ ಸರಳ ಮತ್ತು ನೇರ ನೀತಿ ಅನುಕರಿಸಿದ ಪರಿಣಾಮವೊ – ಒಟ್ಟಾರೆ ಸುಗ್ರೀವ ಸಖ್ಯ ಬೆಳೆಸಿದ್ದಾಯ್ತು ಮತ್ತು ಅವನನ್ನು ಕಿಷ್ಕಿಂದೆಯ ರಾಜನನ್ನಾಗಿಸಿದ್ದೂ ಆಯ್ತು. ಆರಂಭದ ಹರ್ಷೊಲ್ಲಾಸದ ಆಚರಣೆ, ಹೇಷಾರವವೆಲ್ಲ ಮುಗಿದ ಮೇಲೆ ತಳಾರ ಕೂತು ಚರ್ಚಿಸಿ...
ನರಮಾನವನಾಗಿ ರಾಮನ ಜನುಮ – 2
ಆಯಿತು – ಯಾವುದಾವುದೊ ನೆಪವೊ, ಜಗನ್ನಾಟಕದ ಸೊಗವೊ ಕಾಡಿಗಂತೂ ಹೊರಟಿದ್ದಾಯಿತು. ಹೇಳಿ ಕೇಳಿ ಪತಿಯೆ ಪ್ರತ್ಯಕ್ಷ ದೈವವೆನ್ನುವ ಕಾಲಮಾನ. ಪತಿಯ ಬೆನ್ನಿಡಿದು ಬಾಳುವುದೆ ಪತಿವ್ರತಾಸತಿಯ ಪರಮ ಧರ್ಮವೆನ್ನುವ ಕಾಲ. ವನವಾಸಕ್ಕೆ ಹೊರಟವನ ಹಿಂದೆ ಸೀತಾ ಮಾತೆಯೂ ಹೊರಟಾಗ ಬೇಡವೆನ್ನಲಾದೀತೆ? ಅದೆ ಲಾಘವದಲ್ಲಿ ನಲ್ಮೆಯ ಸೋದರ ಲಕ್ಷ್ಮಣನೂ ನಾರುಮಡಿಯುಟ್ಟು ಬಿಲ್ಲು ಬಾಣ ಹಿಡಿದು...
ನರಮಾನವನಾಗಿ ರಾಮನ ಜನುಮ – 1
ಪ್ರತಿ ಬಾರಿಯಂತೆ ಈ ಬಾರಿಯೂ ಉರಿಬಿಸಿಲಿನ ನಡುವೆ ಕಾಲಿಡುತ್ತಿದೆ ಶ್ರೀ ರಾಮನವಮಿ. ಈಚಿನ ಕೆಲವಾರು ದಿನಗಳಲ್ಲಿ ಸೀತೆ, ಊರ್ಮಿಳೆ, ಮಂಡೋದರಿ, ಶೂರ್ಪನಖಿ, ಭಾನುಮತಿಯಂತಹ ಕೆಲವು ಸ್ತ್ರೀ ಪಾತ್ರಗಳನ್ನು ಕುರಿತು ಬರೆಯುತ್ತಿದ್ದಾಗೆಲ್ಲ ನಮ್ಮ ರಾಮಾಯಣ ಮಹಾಭಾರತಗಳ ಪ್ರಮುಖ ಪುರುಷ ಪಾತ್ರಗಳನ್ನು ಕುರಿತೂ ಅಷ್ಟಿಷ್ಟು ಜಾಲಾಡಿಸಬೇಕೆಂಬ ಅನಿಸಿಕೆ ಮೂಡಿ ಬರುತ್ತಿತ್ತು. ಅದರಲ್ಲೂ...
ಕಗ್ಗಕೊಂದು ಹಗ್ಗ ಹೊಸೆದು…
೦೦೩. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೩ ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ | ಮಹಿಮೆಯಿಂ ಜಗವಾಗಿ ಜೀವವೇಷದಲಿ || ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ | ಗಹನ ತತ್ವಕೆ ಶರಣೊ – ಮಂಕುತಿಮ್ಮ || ಹಿಂದಿನ ಕಗ್ಗದ ಹಾಗೆ ಮತ್ತೆ ಅದೇ ಅತೀತ ಶಕ್ತಿಯ ಗುಣಗಾನ ಮಾಡುತ್ತಲೇ, ಅದರ ಬೆನ್ನಲ್ಲಡಗಿರುವ ತತ್ವ ಸಿದ್ಧಾಂತಕ್ಕೆ ಬೆರಗಾಗುವ ಪರಿಯನ್ನು ಈ...
ಯುಗಾದಿ ಹಾಯ್ಕುಗಳು
(೦೧) ಬಂತು ಯುಗಾದಿ ಬೇವು ಬೆಲ್ಲ ತಗಾದೆ – ಸಿಕ್ಕದ ಲೆಕ್ಕ ! (೦೨) ಬೇವಿನ ಹೂವ್ವ ವಾರ್ಷಿಕ ಸಂಭ್ರಮಕೆ – ಬೆಲ್ಲದ ನಗು ..! (೦೩) ಹಬ್ಬದುಡುಗೆ ಹಬ್ಬದಡಿಗೆ ಭರ್ಜರಿ.. – ಕೊಂಡೆಲ್ಲ ತಂದು ! (೦೪) ಯಾರಿಗೆ ಬೇಕು ಯುಗಾದಿ ಆಶೀರ್ವಾದ ? – ಬಿಡುವೆ ಇಲ್ಲ.. (೦೫) ಶುಭ ಕೋರಿಕೆ ಉಳಿತಾಯ ಖರ್ಚಲಿ – ‘ಇ’ವಿನಿಮಯ ! (೦೬)...