ಪ್ರಚಲಿತ

ಪ್ರಾಮಾಣಿಕತೆಯ ಹುಡುಕಾಟದಲಿ

ಪ್ರಾಮಾಣಿಕತೆಗೆ ಧಕ್ಕೆ ಬಂದಾಗ,ಸಮಾಜದಲ್ಲಿ ಆಳುವವರು ಎನ್ನಿಸಿಕೊಂಡವರು ಅತಿರೇಕದ ವರ್ತನೆ ತೋರಿಸಿದಾಗ ಜನರು ಸಹಿಸುವುದಿಲ್ಲ ಬೀದಿಗೆ ಬಂದು ಹೋರಾಡುತ್ತಾರೆ ಎಂದು  ಸದ್ಯದ ಕರ್ನಾಟಕದ ದಕ್ಷ IAS ಅಧಿಕಾರಿ #ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವೇ ಸಾಕ್ಷಿ.ಸಮಾಜದ ಸ್ವಾಸ್ಥ್ಯ ಕೆಡಿಸುವ,ಅನೈತಿಕ ರಾಕ್ಷಸ ಮನೋಭಾವಕ್ಕೆ ಡಿ.ಕೆ.ರವಿ ಎಂಬ ಪ್ರಾಮಾಣಿಕ ಮನುಷ್ಯ ಬಲಿಯಾದರು.ನಮ್ಮನ್ನಾಳುವವರು ನಮ್ಮ ಸಾಮಾಜದ ಒಳಿತಿಗಾಗಿ ಕೆಲಸ ಮಾಡಬೇಕು,ಜನ ಸಾಮಾನ್ಯ ನ ಭಾವನೆಗಳಿಗೆ ಬೆಲೆ ಕೊಡದಿದ್ದರೂ ಧಕ್ಕೆ ತರಬಾರದು ಆದರೆ ನಮ್ಮ ಕರ್ನಾಟಕದ ಸರ್ಕಾರ ಮೇಲಿನ ಎರಡನ್ನೊಂದೇ ಅಲ್ಲದೆ ನಮ್ಮ ಭಾವನೆಗಳನ್ನೇ ಹತ್ತಿಕ್ಕುವ ಪ್ರಯತ್ನವನ್ನ ಮಾಡಿಬಿಟ್ಟಿತು.CBI ತನಿಖೆಗೆ ಒಪ್ಪಿಸಿ ಎಂದು ಒಂದು ವಾರ ಹೋರಾಡಿ ಜಡ ಮನಸ್ಸಿನ ರಾಜನನ್ನು (ಸನ್ಮಾನ್ಯ ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನ) ಮೊನ್ನೆ ಸೋಮವಾರ ಎಚ್ಚರಿಸಿದರೆ ,ಒಲ್ಲದ ಮನಸ್ಸಿನಿಂದ ಸದನದಲ್ಲಿ ಸಿಬಿಐ ಗೆ ಒಪ್ಪಿಸಿ”ಕ್ಷುಲ್ಲಕ ರಾಜಕೀಯ ದುರುದ್ದೇಶ ” ಎಂದು  ಹೇಳುತ್ತಾರೆಂದರೆ ಸಾಮಾನ್ಯರಾದ ನಾವುಗಳು ರಾಜನ ಮನೋಭಾವವನ್ನ ಪ್ರಶ್ನಿಸಲೇಬೇಕು ಅಲ್ಲವೇ???

Bureaucracy (ಅಧಿಕಾರಿವರ್ಗ)ನಮ್ಮ ಸಮಸ್ಯೆಗಳಿಗೆ,ನಮ್ಮ ಮನಸ್ಸುಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಸಮಾಜವೊಂದೇ ಅಲ್ಲ ಕೆಲವು ಭ್ರಷ್ಟ ಮನಸ್ಸುಗಳೂ ಬದಲಾಗುತ್ತದೆ.ಅಧಿಕಾರಿಗಳ ಕೇಂದ್ರಿತ ಆಡಳಿತ ಅಥವಾ ಅಧಿಕಾರಿ ಧೋರಣೆ ಸಮಾಜದ ಬಳಲಿದ,ತುಳಿತಕ್ಕೊಳಗಾದ ಮನಸ್ಸುಗಳಿಗೆ ಸ್ಪಂದಿಸದಿದ್ದರೆ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ,ಯಾವುದೆ ಪಕ್ಷ ಚುಕ್ಕಾಣಿ ಹಿಡಿದರೂ,ಸಾಮಾಜಿಕ ಮೌಲ್ಯಗಳ ಬಗ್ಗೆ  ಉದ್ದುದ್ದ ಭಾಷಣ ಮಾಡಿದರೂ ಕಿಂಚಿತ್ತೂ ಪ್ರಯೋಜನವಿಲ್ಲ.IAS ಅಧಿಕಾರಿಗಳು ಸರಕಾರದ ಆಯಕಟ್ಟಿನ ಜಾಗದಲ್ಲಿ ಕಾರ್ಯವನ್ನು ನಿರ್ವಹಿಸುತ್ತಾರೆ.ಕಷ್ಟ ಪಟ್ಟಿ IAS ಓದಿ ಸಮಾಜ ಸೇವೆ ಮಾಡಬೇಕೆಂಬ ಮನಸ್ಥಿತಿಯೊಂದಿಗೆ ಸಮಾಜದ,ಸರಕಾರದ ಬಾಗವಾಗುತ್ತಾರೆ.ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ದಕ್ಷ,ಪ್ರಾಮಾಣಿಕ ಅನಿಸಿಕೊಂಡ ಅಧಿಕಾರಿಯ ಮನಸ್ಸು ಬದಲಾಗುವುದಿಲ್ಲ.ಸಾಮಾಜಿಕ, ಸಾರ್ವಜನಿಕ ಸೇವೆಯೆಂಬ ಮೂಲ ಉದ್ದೇಶ ಮರೆಯದೇ ದಿನೆ ದಿನೆ ಸಾಮಾನ್ಯರಾಗಿ ಸಮಾಜದ ಜನರ ಕಷ್ಟಗಳಿಗೆ,ಅನ್ಯಾಯ ಅಕ್ರಮಗಳ ವಿರುದ್ಧ, ಜನಪ್ರತಿನಿಧಿ ಎನ್ನಿಸಿಕೊಂಡವನ ಭಷ್ಟತೆಯ ವಿರುದ್ಧ ಹೋರಾಡುತ್ತಾರೆ.ಇಂತಹ ಅಧಿಕಾರಿಗಳೇ ಡಿ ಕೆ ರವಿ,ಮಂಜುನಾಥ,ಮದನ್ ನಾಯಕ್,ರಶ್ಮಿ ಮಹೇಶ್,ಹರ್ಷಗುಪ್ತ,ಮದನ್ ಗೋಪಾಲ್,ಶಾಲಿನಿ ರಜನೀಶ್ ರಂತಹ ಅನೇಕರು.ಆದರೆ ಸಮಾಜಕ್ಕಾಗಿ ಸರ್ವಸ್ವವನ್ನೂ ಮುಡುಪಾಗಿಟ್ಟ ಇವರುಗಳು ನಾವೇ ಸ್ರಷ್ಟಿಸಿದ ಈ ಸಮಾಜದಲ್ಲಿ ಎಷ್ಟು safe ಎಂಬ ಪ್ರಶ್ನೆಗಳನ್ನ ನಾವುಗಳು ಕೇಳಿಕೊಳ್ಳಬೇಕು ಅಲ್ಲವೇ????
ಡಿ.ಕೆ ರವಿ ಅವರನ್ನ ಸ್ಮರಿಸುತ್ತ ಅವರಂತೇ ಇರುವ ಇನ್ನೊಬ್ಬ ನಮ್ಮ ಪಕ್ಕದ ರಾಜ್ಯ ತಮಿಳುನಡಿನ ದಕ್ಷ IAS ಅಧಿಕಾರಿಯೊಬ್ಬರ ಜೀವನಗಾಥೆಯನ್ನ ನಿಮ್ಮೆದುರಿಗೆ ಬಿಚ್ಚಿಡುವ ಪ್ರಯತ್ನ ಮಾಡುತ್ತೇನೆ.

ಇವರ ಹೆಸರು ಉಬಾಗರಾಮಪಿಳೈ ಸಗಾಯಮ್.ಇವರ ಹೆಸರನ್ನ ನೀವುಗಳು ಕೇಳಿದ್ದೀರಾ?ಕೇಳಿರಲಿಕ್ಕಿಲ್ಲ ಏಕೆಂದರೆ ಇವರು ಯಾವತ್ತೂ ಇಂಗ್ಲಿಷ್, ಹಿಂದಿ,ತಮಿಳು ಪತ್ರಿಕೆಯ ಮುಖಪುಟವನ್ನ ಅಲಂಕರಿಸಲೇ ಇಲ್ಲವಲ್ಲ.ಸಗಾಯಮ್ ೪೮ ಗಂಟೆಗಳ್ಲಿ ಎರಡು ಬಾರಿ ವರ್ಗಾವಣೆ ಆದರು ಕಾರಣ ರಾಜ್ಯ ಜವಳಿ ಸಚಿವ ಗೋಕುಲ್ ಇಂದಿರಾ ಅವರನ್ನ ಎದುರು ಹಾಕಿಕೊಂಡಿದ್ದರು.ಸಗಾಯಮ್ ತಮಿಳುನಾಡಿನ Co-Optex ನ ಮುಖ್ಯ ಆಡಳಿತ ಆದಿಕಾರಿ ಆಗಿದ್ದರು.ಒಮ್ಮೆ ಆಡಳಿತ ಪಕ್ಷದ ಬೆಂಬಲಿಗರ ದಾಳಿಗೆ ಕಲ್ಲಾರುಂಚಿಯಲ್ಲಿರುವ co-optex showroom ಪುಡಿ ಪುಡಿ ಆಗಿತ್ತು ಇದನ್ನ ಸಹಿಸದ ಸಗಾಯಮ್ ಗೋಕುಲ್ ಇಂದಿರಾ ಬೆಂಬಲಿಗರಾದ ಇವರೆಲ್ಲರ ಮೇಲೆ case ಜಡಿದರು including ಗೋಕುಲ್ ಇಂದಿರಾ.ಆಳುವ ಸರಕಾರವನ್ನೇ ಎದುರು ಹಾಕಿಕೊಂಡ ಈ ಸಗಾಯಮ್ ಜನ ಸಾಮಾನ್ಯನಿಗೆ ಹತ್ತಿರವಾಗಿದ್ದರು.ಇನ್ನು ವರ್ಗಾವಣೆಯ ಬಗ್ಗೆ  ಸಗಾಯಮ್ ಹೇಳೊ ಮಾತು “it is another day at the office”ಏಕೆಂದರೆ ಸಗಾಯಮ್ ೨೪ ಭಾರಿ ವರ್ಗಾವಣೆ ಆಗಿದ್ದರು.ಅಧಿಕಾರದ ಆಸೆಯುಳ್ಳ ಭ್ರಷ್ಟ ರಾಜಕಾರಣುಗಳಿಗೆ ಸಗಾಯಮ್ ದುಸ್ವಪ್ನವಾಗಿ ಕಾಡುತ್ತಿದ್ದರು.

ಸಗಾಯಮ್ ಜನನ ೧೯೬೨ ರಲ್ಲಿ ತಮಿಳುನಾಡಿನಲ್ಲಿ ಆಯಿತು.ಇವರು ತಮಿಳುನಾಡಿನ ಮೊದಲ IAS ಅಧಿಕಾರಿ.ಕ್ರಷಿಕ ತಂದೆಯ ಕಿರಿಯ ಮಗನಾಗಿ ಜನಿಸಿದ್ದರು ಸಗಾಯಮ್.ಪ್ರಾಥಮಿಕ, ಪ್ರೌಢ  ಶಿಕ್ಷಣವನ್ನ ತನ್ನೂರಿನಲ್ಲೇ ಓದಿ ಪದವಿ ಪೂರ್ವ ಮತ್ತು ಪದವಿಯನ್ನ ತಮಿಳುನಾಡಿನಲ್ಲಿ ಓದಿ ಉನ್ನತ ಶಿಕ್ಷಣದ ಜೊತೆ ಕಾನೂನು ಪದವಿಯನ್ನೂ ಓದಿದರು ಸಗಾಯಮ್. ಸಗಾಯಮ್ ಗೆ ತಾಯಿಯೇ ಪ್ರೇರಣೆ.ತಮ್ಮ ಪ್ರತೀ ಮಾತಿನಲ್ಲೂ ತಾಯಿಯನ್ನ ನೆನಪಿಸಿಕೊಳ್ಳೊ ಸಗಾಯಮ್ ತಾಯಿ ನನಗೆ ಬದುಕಿನ ಮೌಲ್ಯ ಕಲಿಸಿದಳು ಎನ್ನುತ್ತಾರೆ. ಯಾವತ್ತೂ ಪ್ರಾಮಾಣಿಕತೆ ಮತ್ತು ಪ್ರೀತಿಯಿಂದ ಬದುಕು ಎಂಬ ತಾಯಿಯ ಮಾತನ್ನ ಯಾವಾಗಲೂ ನೆನಸಿಕೊಳ್ಳುತ್ತಾರೆ ಸಗಾಯಮ್.ಸಣ್ಣ ವಯಸ್ಸಿನಲ್ಲಿ ಒಮ್ಮೆ ಸಗಾಯಮ್ ಬೇರೆಯವರ ತೋಟದಿಂದ ಮಾವಿನ ಹಣ್ಣುಗಳನ್ನು ಕದ್ದು ತರುತ್ತಾರೆ ಅದನ್ನು ತಾಯಿಗೆ ನೀಡುತ್ತಾರೆ ಅದನ್ನ ನೋಡಿದ ತಾಯಿ ಇದನ್ನ ತೋಟದ ಮಾಲೀಕರಿಗೆ ಮರಳಿ ಕೊಟ್ಟು ಬಾ ಅನ್ನುತಚತಾಳೆ ಆಗ ಸಗಾಯಮ್ ನನ್ನ ಸ್ನೇಹಿತರೂ ತುಂಬಾ ಜನ ಕದ್ದು ತಂದಿದ್ದಾರೆ ಎಂದಾಗ ತಾಯಿ ತಪ್ಪು ನಾಲ್ಕು ಜನ ಸೇರಿ ಮಾಡಿದರೂ ತಪ್ಪೆ ಒಬ್ಬ ಮಾಡಿದರೂ ತಪ್ಪೆ,ನಾಲ್ಕು ಜನ ಮಾಡಿದಾಗ ಅದು ಸರಿ ಅಲ್ಲ ಹೋಗಿ ಮರಳಿ ಕೊಟ್ಟು ಬಾ ಅಂದ ಮಾತು ಸಗಾಯಮ್ ರ ಬದುಕಿನಲ್ಲಿ ಪ್ರಾಮಾಣಿಕತೆಯನ್ನ ಜೀವಂತವಾಗಿರಿಸಿತು.

ಕೆಲಸಗಳಲ್ಲಿ ಸಗಾಯಮ್ ಅವರ policy “Reject bribe and hold your head high”ಎಂಬುದು,ಇದೇ policy ಇಂದಾಗಿ ಸಗಾಯಮ್ ೨೪ ಬಾರಿ ವರ್ಗಾವಣೆ ಆದರು.೨೦೧೧ ರಲ್ಲಿ ತಮಿಳುನಾಡಿನಲ್ಲಿ ಚುನಾವಣಾ ಅಖಾಡ ರಂಗೇರಿತ್ತು ಆಗ ಸಗಾಯಮ್ ಮಧುರೈ ನ ಜಿಲ್ಲಾಧಿಕಾರಿಯಾಗಿದ್ದರು.ಆ ಸಮಯದಲ್ಲಿ ಸ್ಥಳೀಯ ಜನರಿಗೆ ಮತದಾನದ ಮಹತ್ವವನ್ನು ತಿಳಿಹೇಳುವ ಪ್ರಯತ್ನದಲ್ಲಿ ಸಗಾಯಮ್ ಇದ್ದರು.ಅದೇ ಸಮಯದಲ್ಲಿ ‘ದುರೈ’ನ ಅಕ್ರಮ ಕಲ್ಲು ಗಣಿಗಾರಿಕೆಯ ಬಗ್ಗೆ ಸಗಾಯಮ್ ಗೆ ತಿಳಿಯಿತು,ಚುನಾವಣಾ ಜಾಗ್ರತಿಯ ಜೊತೆಗೆ ಮೇಲುರ್ ಮತ್ತು ಕಿಲಿಯೂರ್ ನ ಸುತ್ತ ಮುತ್ತ ಓಡಾಡಿ ಅಕ್ರಮ ಕಲ್ಲುಗಣಿಗಾರಿಕೆಯ ಬಗ್ಗೆ ತನಿಖೆ ಮಾಡಿದರು.ಅಂದಹಾಗೆ ಈ ‘ದುರೈ’ ಯಾರು ಗೊತ್ತೆ? ಈತ ತಮಿಳುನಾಡಿನ ಮಾಜಿ ಸಚಿವನ ಮಗ ಮುಖ್ಯವಾಗಿ ನಿಕಟಪೂರ್ವ ಮುಖ್ಯಮಂತ್ರಿ ಕರುಣಾನಿದಿಯ ಖಾಸಾ ಮೊಮ್ಮಗ. ಎಲ್ಲ ತನಿಖದಯನ್ನ ಮಾಡಿದ ಸಗಾಯಮ್ ಸರಕಾರಕ್ಕೊಂದು ವಿವರವಾದ ಪತ್ರ ಬರೆದು ಸರಾಕಾರಕ್ಕಾದ ನಷ್ಟಗಳ ಬಗ್ಗೆ,ದುರೈನ ಅಕ್ರಮಗಳ ಬಗ್ಗೆ ಇಂಚಿಚಾಗಿ ವರದಿಯನ್ನು ಸಲ್ಲಿಸುತ್ತಾರೆ.ಈ Mafia ದಲ್ಲಿ ಪ್ರತಿಷ್ಟಿತ ಕಂಪನಿಗಳ ಕೈವಾಡವಿರುವುದು ಬಯಲಾಗುತ್ತದೆ.ಸಗಾಯಮ್ ಯಾರಿಗೂ ಜಗ್ಗದ ಅಧಿಕಾರಿ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ ಜೊತೆಗೆ ಮಧುರೈ ನಲ್ಲಿ bribe free ಚುನಾವಣೆ ನಡೆಸುವಲ್ಲೂ ಯಶಸ್ವಿಯಾಗುತ್ತಾರೆ.ಮಧುರೈ ಮಾಜಿ ಸಚಿವರೊಬ್ಬರ ಕ್ಷೇತ್ರವಾಗಿರುತ್ತದೆ. ಸ್ವಚ್ಛ ಚುನಾವಣೆ ನಡೆಸಿದ್ದಕ್ಕಾಗಿ S.Y.Qureshi ಅವರು Apreciation Certificate ಅನ್ನು ಸಗಾಯಮ್ ಗೆ ನೀಡುತ್ತಾರೆ.

ಇದಾದ ಮೇಲೆ ಸಗಾಯಮ್ ಗ್ರಾಹಕರ Complaint ಮತ್ತು ಹೋರಾಟದ ಪ್ರತೀಕಾವಾಗಿ ವಿಶ್ವದ ದೊಡ್ಡ MNC PEPSI ಯ plant ಗೇ ಬೀಗ ಜಡಿಯುತ್ತಾರೆ ಕಾರಣ pepsi bottle ಗಳಲ್ಲಿನ floating dirt ಆಗಿತ್ತು ಮತ್ತೆ ಸಗಾಯಮ್ ತಮಿಳುನಾಡಿನ ಜನರ ಮನಸ್ಸಿಗೆ ಹತ್ತಿರವಾಗಿದ್ದರು.ಇಷ್ಟೆಲ್ಲದರ ನಡುವೆ ಸಗಾಯಮ್ ಅದೆಷ್ಟೋ ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಟ್ಟರು.ತಮಿಳುನಾಡಿನ ಚೆಗಲ್ಪಟ್ಟುವಿನಲ್ಲಿ ಅಕ್ರಮ ಸಾರಾಯಿಗಳನ್ನ ಸಂಪೂರ್ಣವಾಗಿ ತಡೆದು ಅಲ್ಲಿನ ಅದೆಷ್ಟೋ  ಕುಟುಂಬಗಳು ಬೀದಿಗೆ ಬರುವುದನ್ನ ತಡೆದರು.Deputy sales commisioner ಆಗಿದ್ದ ಸಂದರ್ಭದಲ್ಲಿ Subsidized ಸಿಲಿಂಡರ ಬಳಕೆಯಲ್ಲಾಗುತ್ತಿದ್ದ ಅಕ್ರಮವನ್ ತಡೆದರು,೩ದಿನಗಳಲ್ಲಿ ೫೦೦೦ ಅಕ್ರಮ ಸಿಲಿಂಡರ್ ಗಳನ್ನ ಅಕ್ರಮ Restaurant ಗಳಿಂದ ವಶಪಡಿಸಿಕೊಂಡರು.    ಇಷ್ಟೆಲ್ಲದರ ನಡುವೆ ಸಗಾಯಮ್ ತನ್ನದೇ ತರಹದ ಮನಸ್ಥಿತಿ ಹೊಂದಿರುವ ಹುಡುಗಿಯನ್ನ ಮದುವೆ ಆದರು,ಎರಡು ಮುದ್ದಾದ ಮಕ್ಕಳಿಗೆ ತಂದೆಯಾದರು.೨೩ ವರ್ಷಗಳ ಸೇವೆಯಲ್ಲಿ ೨೪ ಬಾರಿ ವರ್ಗಾವಣೆ ಆದರು ಪ್ರಸ್ತುತ ೫೩ ವರ್ಷ ವಯಸ್ಸಿನ ಸಗಾಯಮ್.ಎಂದಿಗೂ ಪ್ರಾಮಾಣಿಕತೆ,ನಂಬಿಕೆಯನ್ನ ಕಳೆದುಕೊಳ್ಳದೇ ಸಮಾಜ ಸೇವೆ ಮಾಡಿದರು ರಿಯಲ್ “ಸಿಂಗಮ್” ಸಗಾಯಮ್.

ಪ್ರಸ್ತುತ ಸಗಾಯಮ್ Tamilnadu Handlom Co-op ನ MD ಆಗಿ ಸೇವೆ ಸಲ್ಲಿಸುತ್ತಿದ್ದಾರೆ ನಮ್ಮ” ಸಿಂಗಮ್”.ಅಲ್ಲಿ ಅಧಿಕಾರ ವಹಿಸಿಕೊಂಡಾಗ ಅಲ್ಲಿಯ ಎಲ್ಲ ಕೆಲಸಗಾರರನ್ನ ೯೦ ವರ್ಷ ಹಳೆಯ ಉತ್ಪಾದಕರುಗಳ ಮನೆಗಳಿಗೆ ಕರೆದುಕೊಂಡು ಹೋಗಿ ಅವರ ಬಡತನಗಳ ದರ್ಶನ ಮಾಡಿಸಿದರು.ಸಗಾಯಮ್ ಅಧಿಕಾರ ವಹಿಸಿಕೊಂಡ ಮೇಲೆ೨೦೧೨-೧೩ ರಲ್ಲಿ Co-Optex ನ ಲಾಭ ೧೩.೫ ಕೋಟಿಗೆ ತಲುಪಿತು ಮತ್ತು ೨೦೧೩-೧೪ ನಲ್ಲಿ ೧೫ ಕೋಟಿ ತಲುಪಿ ದಾಖಲೆಯ ಲಾಭ ಗಳಿಸಿತು.

ಸಗಾಯಮ್ ರಂತಹ ಅನೇಕರು ನಮ್ಮ ನಡುವೆ ಇದ್ದಾರೆ.ಸಗಾಯಮ್, ಹಣಕೊಡದೇ ಕೆಲಸವಾಗೊಲ್ಲ ಎಂಬ ನಮ್ಮ ಮನಸ್ಥಿತಿಗೆ ಮತ್ತು ಹಣ ಕೊಡದೇ ಇದ್ದರೆ ಕೆಲಸ ಮಾಡಲ್ಲ ಎಂಬ ಅಧಿಕಾರಿಯ ಮನಸ್ಥಿತಿಗೆ ಉತ್ತರವಾಗಲಿ ಎಂಬುದೇ ಆಶಯ.ನಮ್ಮ ಭ್ರಷ್ಟ ವ್ಯವಸ್ಥೆ ಯಾವಾಗಲೂ ಸಗಾಯಮ್,ಡಿ ಕೆ ರವಿ ಅಂತವರನ್ನ ಮುಗಿಸಲು ಯತ್ನಸುತ್ತಿರುತ್ತದೆ.ರಾಜಕೀಯ ಡೊಂಬರಾಟದಲ್ಲಿ,ಅನ್ಯಾಯಗಳಲ್ಲಿ ಅದೆಷ್ಟೋ ಪ್ರಾಮಾಣಿಕರನ್ನ ಕಳೆದುಕೊಂಡು ಜನಸಾಮಾನ್ಯರಾದ ನಾವುಗಳು ನೋವನುಭವಿಸುತ್ತಿದ್ದೇವೆ  ಹಾಗಾಗಿ ಭ್ರಷ್ಟ ವ್ಯವಸ್ಥೆಯ ಕೊನೆಗಾಣಿಸುವ ಹೊಣೆ ನಮ್ಮ ಮೇಲಿದೆ ಆ ನಿಟ್ಟಿನಲ್ಲಿ ಸಾಗೋಣ. ಜೈ ಹಿಂದ್

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!