ಪ್ರಚಲಿತ

ದೇಶದ ಹಿತದೃಷ್ಟಿಯಿಂದಲಾದರೂ ವಿರೋಧಕ್ಕೊಂದಷ್ಟು ಕಡಿವಾಣ ಇರಲಿ

1990ರ ಅವಧಿ. ದೇಶದ ಆರ್ಥಿಕ ಪರಿಸ್ಥಿತಿ ಅದೇಗಿತ್ತು, ಅದೆಷ್ಟು ಪಾತಾಳಕ್ಕೆ ಇಳಿದಿತ್ತು ಎಂದರೆ ಆ ವರ್ಷದ ಬಜೆಟ್ ಮಂಡಿಸಲೇ ಅಸಾಧ್ಯವಾಗೋಗಿತ್ತು ಅಂದಿನ ಚಂದ್ರಶೇಖರ್‍ವರ ಸರಕಾರಕ್ಕೆ!ಒಂದೇ ಮಾತಿನಲ್ಲಿ ಹೇಳುವುದಾದರೆ ದೇಶಕ್ಕೆ ದೇಶವೇ ದಿವಾಳಿಯಾಗುವ ಹಂತಕ್ಕೆ ಬಂದು ನಿಂತಿತ್ತು ನಮ್ಮ ದೇಶ! ನಂಬಿದರೆ ನಂಬಿ ಭಾರತದ ವಿದೇಶಿ ವಿನಿಮಯವು 1990 ಮೇ ತಿಂಗಳ ಮೂರನೇ ವಾರಕ್ಕೆ ಶೂನ್ಯವಾಗುವುದರಲ್ಲಿತ್ತು! ಅಂದರೆ ಪ್ರಪಂಚದ ಮುಂದೆ ಭಾರತ ‘ದಿವಾಳಿ’ ಎಂಬಪಟ್ಟಧಾರಣೆಯಾಗುವಕ್ಷಣಗಣನೆ ಅದು!1947ರಿಂದ ಭಾರತವನ್ನು ಆಳ್ವಿಕೆ ಮಾಡುತ್ತಾ ಬಂದಿದ್ದ ರಾಜಕೀಯ ಪಕ್ಷನಮ್ಮ ದೇಶವನ್ನು ಅದ್ಯಾವ ಪರಿಸ್ಥಿತಿಗೆ ನೂಕಿದೆ ಎಂದು ಬಹುಪಾಲು ಜನರಿಗೆ ಸರಿಸುಮಾರು ಅಂದಾಜಾದದ್ದೇ ಆವಾಗ! ವಿಶ್ವಬ್ಯಾಂಕ್ ಹಾಗೂ ಐಎಂಎಫ್ ಕೂಡ ಈ ಹಂತದಲ್ಲಿ ಭಾರತಕ್ಕೆ ನಯಾ  ಪೈಸೆಯನ್ನೂ ಕೂಡ ಸಾಲನೀಡೆವು ಎಂದು ಕೈಚೆಲ್ಲಿತ್ತು! ಪರಿಸ್ಥಿತಿ ಹದ್ದು ಮೀರಿದ ಈ ಸಂದರ್ಭದಲ್ಲಿ ನಮ್ಮ ದೇಶ ಕೈಗೊಂಡ ಕ್ರಮ ಏನು ಗೊತ್ತೆ? ದೇಶದ ಭವಿಷ್ಯಕ್ಕಾಗಿ ಕೂಡಿಟ್ಟ ಚಿನ್ನವನ್ನು ಗುಟ್ಟಾಗಿ (ಏರ್ ಲಿಪ್ಟ್ ಮಾಡಲೆಂದು ಟ್ರಕ್‍ನಲ್ಲಿ ತುಂಬಿಸಿಕೊಂಡು ವಿಮಾನ ನಿಲ್ದಾಣಕ್ಕೆ ಕೊಂಡೋಗಬೇಕಾದರೆ ಟ್ರಕ್‍ನ ಟಯರ್ ಬ್ಲಾಸ್ಟ್ ಆಗುವ ಮೂಲಕ ಈ ಗುಟ್ಟು ರಟ್ಟಾಯಿತು)ಹೊರದೇಶದ ಬ್ಯಾಂಕಿನಲ್ಲಿ ಅಡವಿರಿಸಿದ್ದು! ಅದು ಕೂಡ ಬರೋಬ್ಬರಿ 67ಟನ್‍ನಷ್ಟು! ಹೌದು,47ಟನ್ ತೂಕದ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‍ನಲ್ಲೂ 20ಟನ್ ಚಿನ್ನವನ್ನು ಯೂನಿಂiÀiನ್ ಬ್ಯಾಂಕ್ ಆಫ್ ಸ್ವಿಜೆರ್‍ಲೇಂಡ್‍ನಲ್ಲೂ ಒತ್ತೆಯಿಟ್ಟು ತುರ್ತು ಸಾಲವಾಗಿ600 ಮಿಲಿಯನ್ ಡಾಲರನ್ನು ತರಿಸಿಕೊಂಡಿತ್ತು ಭಾರತ! ಆರ್ಥಿಕತೆಗೇನೋ ಆಕ್ಸಿಜನ್ ಸಿಕ್ಕಿದಂತಾಯಿತು ಅಂದು ಆದರೆ ತೆಗೆದ  ಸಾಲದ ಮೇಲೆ ನಿರಂತರ ಬಡ್ಡಿ ಕಟ್ಟುವ ಕಾಯಕ ದೇಶಕ್ಕೊದಗಿಬಂತು!ಈ ಗುಟ್ಟಿನ ವಿಷಯ ರಟ್ಟಾಗುತ್ತಲೆ ಜನ ಚಂದ್ರಶೇಖರ್ ಸರಕಾರದ ವಿರುದ್ಧ ತಿರುಗಿ ಬಿದ್ದರು. ಪರಿಣಾಮ ಚಂದ್ರಶೇಖರ್ ಸರಕಾರ ಕೆಲವೇ ತಿಂಗಳುಗಳಲ್ಲಿ ಪನತಕಾಣಬೇಕಾಯಿತು. ಆದರೆ ನಿಜವಾಗಿಯೂ ದೇಶದ ಆರ್ಥಿಕತೆಯನ್ನು ಈ ರೀತಿಯಾಗಿ ಕೀಳು ಮಟ್ಟಕ್ಕೆ ಇಳಿಸಿದ್ದು ಯಾರು?ದೇಶವನ್ನು ದೀರ್ಘಕಾಲದವರಗೆ ಆಳುತ್ತಾ ಬಂದಿದ್ದ ರಾಜಕೀಯ ಪಕ್ಷ ತಾನೆ? ಅದಾಗ್ಯೂ ಜನ ಮತ್ತೆ ಕಿವುಡರಾದರು. ಆಡಳಿತದ ಚುಕ್ಕಾಣಿ ಮತ್ತೆ ಅದೇ ಹಳೆಯ ಪಕ್ಷದ ಕೈ ಸೇರಿತು!

ಈ ಮೇಲಿನ ಪ್ರಸ್ತಾಪ ಏಕೆಂದರೆ, ಮೊನ್ನೆ ತಾನೆ ಮೋದಿ ನೇತೃತ್ವದ ಕೇಂದ್ರ ಸರಕಾರ ಆರ್‍ಬಿಐನ ರಿಸರ್ವ್ ಫಂಡನ್ನು ಪಡೆದುಕೊಂಡಾಗ ನಮ್ಮ ದೇಶದ ಗಲ್ಲಿಗಲ್ಲಿಗಳಲ್ಲಿ ಆರ್ಥಿಕತೆಯ ವಿಶ್ಲೇಷಣೆಗಳು ನಡೆದವು! ಮಾಧ್ಯಮಗಳಲ್ಲೂ ದೊಡ್ಡ ಮಟ್ಟದ ಸುದ್ದಿಯಾದವು. ಅಂಗಡಿ ಕಟ್ಟೆಗಳಲ್ಲಿ ಕುಳಿತು ಕಾಲ ಹರಣ ಮಾಡುವವನೂ ಕೂಡ ಮೋದಿ ಸರಕಾರವು ದೇಶವನ್ನು ಆರ್ಥಿಕ ಅಧಃಪತನಕ್ಕೆ ಕೊಂಡೊಯ್ಯುತ್ತಿದೆ ಎಂದು ದೂರಲು ಪ್ರಾರಂಭಿಸಿದನು! ಜಿಡಿಪಿ ಎಂದರೇನು ಎಂದು ಗೊತ್ತೇ ಇಲ್ಲದವರೂ ಕೂಡ ಇಂದುಜಿಡಿಪಿ ಕುಸಿದಿದೆ, ದೇಶದ ಆರ್ಥಿಕತೆ ಅಲ್ಲೋಲಕಲ್ಲೊಲ ಆಗಿದೆ ಎಂದೆಲ್ಲಾ  ಬಂಬ್ಡಾ ಹೊಡೆಯುವಲ್ಲಿ ನಿರತರಾಗಿದ್ದಾರೆ. 1950ರ ಸುಮಾರಿಗೆ ಡಾಲರ್ ಒಂದಕ್ಕೆ 4.16 ಮೌಲ್ಯವಿದ್ದ ರೂಪಾಯಿ ದರವು 2000ನೇ ಇಸವಿಗೆ ಬಂದಾಗ ಅದುರುಪಾಯಿ 50ರ ಆಸು ಪಾಸಿಗೆ ಬಂದಿತ್ತು ಎಂಬುದನ್ನು ಇವರೆಲ್ಲಾ ಅದೇಗೆ ಮರೆತು ಬಿಟ್ಟಿದ್ದಾರೋ ಆ ದೇವರಿಗೇ ಗೊತ್ತು!1947 ರಿಂದ 2000ನೇ ಇಸವಿಯವರಗೆ ಈ ದೇಶದಲ್ಲಿ ನಡೆದಿರುವ ಆರ್ಥಿಕ ವೈಫಲ್ಯಗಳಿಗೆ ದೇಶವನ್ನು ಏಕಸ್ವಾಮ್ಯವಾಗಿ ಆಳಿದ್ದರಾಜಕೀಯ ಪಕ್ಷವೇಹೊಣೆಗಾರಿಕೆಯನ್ನು ಹೊರಬೇಕು ತಾನೇ? ನಡೆದಿರುವ ತಪ್ಪಿಗೆ ತಲೆಬಾಗಬೇಕು ತಾನೆ?ಆದರೆ ಆ ಪಕ್ಷ ಬಿಡಿ ಸ್ವತಃ ಜನರೇ ಈ ವಿಚಾರಗಳನ್ನು ಮರೆತುಬಿಟ್ಟಿರುವುದು ನಿಜಕ್ಕೂ ಖೇದಕರವೇ.

ನೆನಪಿಡಿ ದೇಶದ ಇಂದಿನ ಕುಂಠಿತ ಆರ್ಥಿಕ ಬೆಳವಣಿಗೆಗೆ ಅಂತರರಾಷ್ಟ್ರೀಯ ಮಟ್ಟದ ಕಾರಣಗಳೂ ಇವೆ ಎಂಬುದು ಸತ್ಯ. ಆದರೂ ಕೂಡಜನ ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದರೆ ಅದುತಪ್ಪಲ್ಲ ಬಿಡಿ. ಆದರೆ ತನ್ನ ಹೆಗಲ ಮೇಲೆ  ಗುರುತರವಾದ ಅಪಾದನೆ ಇಟ್ಟುಕೊಂಡವರೂ ಮೋದಿ ಸರಕಾರದ ಆರ್ಥಿಕತೆಯ ಬಗ್ಗೆ ಲೇವಡಿ ಮಾಡುವುದು ಎಂದರೆ  ಅದ್ಯಾವ ನೈತಿಕತೆಯ ಮೇಲೆ ಎಂಬುದೇ ಇಲ್ಲಿ ಪ್ರಶ್ನೆ!

ಇವತ್ತು ನಮ್ಮ ದೇಶದಲ್ಲಿ ನಡೆಯುತ್ತಿರುವ ವಿಚಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಒಂದಂತು ಸ್ಪಷ್ಟವಾಗುತ್ತಿದೆ. ಅದೇನೆಂದರೆ ಇಂದು ಮೋದಿ ಮತ್ತವರ ಸರಕಾರದ ಯಶಸ್ಸು ಅಥವಾ ಅದಕ್ಕೆ ಸಿಕ್ಕಿರುವ ಜನಬೆಂಬಲಈ ದೇಶದ ಪ್ರತಿಪಕ್ಷಗಳ ಪಾಲಿಗೆ ಒಂದು ದೊಡ್ಡ ಮುಳ್ಳಿನಂತಾಗಿದೆ.ಅದಕ್ಕಾಗಿ ಆಡಳಿತವು ಅದೇನೆ ಕಾನೂನುಗಳನ್ನು ಮಾಡಿದರೂ, ಯೋಜನೆಗಳನ್ನು ಹಾಕಿದರೂ ಅದರಲ್ಲೊಂದಷ್ಟು ಕೊಂಕು ಹುಡುಕಿ ಅದನ್ನು ದೊಡ್ಡ ಮಟ್ಟದಲ್ಲಿ ಜನವಿರೋಧಿಸುವಂತೆ ಮಾಡುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡುತ್ತಾ ಬರುತ್ತಿದೆ.  ನೀವೇ ನೋಡಿ, ಪರಮ ಶತ್ರುವಾದ ಪಾಕಿಸ್ಥಾನದ ವಿರುದ್ಧ ಅಂದು ನಮ್ಮ ಸೈನಿಕರು ಸಟೆದು ನಿಂತು ಸರ್ಜಿಕಲ್ ದಾಳಿ ನಡೆಸಿದಾಗ ಇಡೀ ದೇಶವೇ ಸಂಭ್ರಮ ಪಟ್ಟಿದ್ದರೆ ನಮ್ಮ ದೇಶದ ಪ್ರತಿಪಕ್ಷಗಳು ನಡೆದಿರುವ ಘಟನೆಗೆ ಸಾಕ್ಷ್ಯ ಕೇಳಿತ್ತು! ಅಂತಹ ದಾಳಿ ನಡೆದೇ ಇಲ್ಲವೆಂದು ಬಿಂಬಿಸಲು ಪ್ರಯತ್ನ ಪಟ್ಟಿತ್ತು! 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವೆಂದು ಘೋಷಿಸಿದಾಗ ಪಾಕಿಸ್ಥಾನಕ್ಕಿಂತಲೂ ಹೆಚ್ಚು ಪರಿತಪಿಸಿದ್ದು, ದೊಡ್ಡ ಮಟ್ಟದ ಹೇಳಿಕೆ ಕೊಟ್ಟಿದ್ದು ಇದೇ ನಮ್ಮ ಪ್ರತಿಪಕ್ಷಗಳು! ಭ್ರಷ್ಟಾಚಾರವನ್ನು ನಿಲ್ಲಿಸಬೇಕು, ಕಪ್ಪು ಹಣವನ್ನು ಹೊರಗೆಳೆಯಬೇಕು ಎಂದು ಮನಿ ಡಿಮೋನಿಟೈಸೇಷನ್‍ನಂತಹ ಕಠಿಣ ತೀರ್ಮಾನಕ್ಕೆ ಕೇಂದ್ರಾಡಳಿತವು ಕೈ ಹಾಕಿದಾಗ ಅದನ್ನೇಗೆ ವಿಫಲಗೊಳಿಸಬಹುದು ಎಂಬುದರ ಬಗ್ಗೆಯೇ ದಿನ ಪೂರ್ತಿ ಯೋಚಿಸಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿದ್ದು ಕೂಡ ಇದುವೇ ಪ್ರತಿಪಕ್ಷಗಳು. ಮೊನ್ನೆ ತಾನೇಸಿಎಎ ಎಂಬ ಕಾನೂನು ಜಾರಿಯಾಯಿತು. ಸಿಎಎಎಂಬುದು ಪೌರತ್ವವನ್ನ ನೀಡುವ ಕಾಯ್ದೆಯೇ ಹೊರತು ಕಸಿದುಕೊಳ್ಳುವ ಕಾಯ್ದೆ ಅಲ್ಲ, ಇದು ಧಾರ್ಮಿಕ ತುಳಿತಕ್ಕೆ ಒಳಗಾದ ಬಾಂಗ್ಲಾ, ಪಾಕಿಸ್ಥಾನ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವ ಕಾನೂನು ಅಷ್ಟೇ ಎಂಬುದಾಗಿ ನಮ್ಮ ಆಡಳಿತವುಪರಿಪರಿಯಾಗಿ ಹೇಳಿಕೊಂಡರೂ ನಮ್ಮ ವಿರೋಧ ಪಕ್ಷಗಳು ಕಿವಿಗೆ ಹಾಕಿಕೊಳ್ಳಲಿಲ್ಲ. ಬದಲಾಗಿ ದೇಶದುದ್ದಗಲಕ್ಕೂ ಗಲಭೆ ಎಬ್ಬಿಸಿ ಮೋದಿ ಸರಕಾರವನ್ನು ಹಳಿಯುವ ಪ್ರಯತ್ನವನ್ನಷ್ಟೇ ಪಟ್ಟಿತು. ಮಾತ್ರವಲ್ಲದೆ ಅಮೇರಿಕಾದ ಅಧ್ಯಕ್ಷ ಭಾರತಕ್ಕೆ ಬೇಟಿನೀಡಿದ ಸಂದರ್ಭದಲ್ಲಂತೂ ದೇಹಲಿಯನ್ನು ರಕ್ತದ ಮಡುವಿನಲ್ಲಿ ಕೆಡವಿಸಿ ಅಂತರರಾಷ್ಟ್ರೀಯ ಮಟ್ಟದ ಸುದ್ದಿಯಾಗಿಸಲು ಪ್ರಯತ್ನ ಪಟ್ಟಿತ್ತು. ದೇಶದ ಮಾನ ಹರಾಜಿಗೆ ಬಿದ್ದರೂ ಚಿಂತಿಲ್ಲಒಟ್ಟಿನಲ್ಲಿ ಮೋದಿ ಮತ್ತವರ ತಂಡವನ್ನು ವಿರೋಧಿಸಬೇಕು ಎಂಬುದೊಂದೇ ಪ್ರತಿಪಕ್ಷಗಳ ಧ್ಯೇಯವಾಗಿರುವುದು ನಿಜಕ್ಕೂ ಅಸಹನೀಯವೇ!

ವಿಪರ್ಯಾಸವೆಂದರೆಸಿಎಎ ವಿಚಾರದಲ್ಲಿ ಈದೇಶದ ಅಲ್ಪಸಂಖ್ಯಾತರಂತೂ ಪ್ರತಿಪಕ್ಷಗಳ ಷಡ್ಯಂತ್ರಕ್ಕೆ ಬಹುಪಾಲು ಬಲಿಯಾಗಿ ಹೋದಂತಿದೆ. ಇಲ್ಲವೆಂದಾದರೆ ಎಲ್ಲೋ ದೂರದ ಪಾಕಿಸ್ಥಾನ, ಬಾಂಗ್ಲದೇಶ ಅಫಘಾನಿಸ್ಥಾನದ ಮುಸಲ್ಮಾನನಿಗೆ ಭಾರತದ ಪೌರತ್ವ ದಕ್ಕದೇ ಹೊದರೆ ಇವರಿಗೇನು ತೊಂದರೆ!? ಅಷ್ಟಕ್ಕೂ ನೆರೆಹೊರೆಯಿಂದ ಬರುವವರಲ್ಲಿ ಯಾರಿಗೆ ಪೌರತ್ವ ನೀಡಬೇಕು, ಅದ್ಯಾರಿಗೆ ನೀಡಬಾರದು ಎಂಬುದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಖಂಡಿತಾ ಇದೆ. ಸಿಎಎ ಯ ಮೂಲಕ ಪೌರತ್ವವನ್ನು ಧರ್ಮದ ಆಧಾರದ ಮೇಲೆ ನೀಡಲಾಗುತ್ತಿದೆ ಇದು ಸಂವಿಧಾನ ವಿರೋಧಿ ಕೃತ್ಯ ಎಂಬುದು ಇನ್ನು ಕೆಲವರ ವಿತಂಡವಾದ. ಆದರೆ ದೇಶದ ಪೌರತ್ವವನ್ನು ಇನ್ನೂ ಹಲವಾರು ವಿಧಾನಗಳ ಮೂಲಕವೂ ಪಡೆಯಬಹುದಾಗಿದ್ದು ಅವುಗಳನ್ನೆಲ್ಲಾ ಧರ್ಮದ ಆಧಾರದಲ್ಲಿ ಮಾಡದೆ ಅರ್ಹತೆಯನ್ನು ನೋಡಿಯೇ ಮಾಡಲಾಗುತ್ತಿದೆ ಎಂಬುದು ಅಷ್ಟೇ ಸತ್ಯ. ಸಿಎಎ ಯಲ್ಲಿ ನಿರ್ಧಿಷ್ಟ ದಿನಾಂಕಕ್ಕಿಂತ ಮೊದಲು ಬಂದಿರುವ ನಿರಾಶ್ರಿತರನ್ನು ದೇಶದ ಪೌರರನ್ನಾಗಿ ಒಪ್ಪುವ ಇಲ್ಲವೇ ಒಪ್ಪದೆ ವಾಪಾಸು ಅವರರವ ದೇಶಕ್ಕೆ ಕಳುಹಿಸುವತಂತ್ರಗಾರಿಕೆಯಿದೆಯಷ್ಟೇ. ಏನೇ ಇರಲಿ ಇವತ್ತು ಸಿಎಎ ದೇಶದ ಕಾನೂನು ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಕಾನೂನು ಅಂದ ಮೇಲೆ ಅದನ್ನು ಪಾಲಿಸುವುದು, ಗೌರವ ಸಲ್ಲಿಸುವುದು  ಈ ನೆಲದ ಪ್ರತಿಯೋರ್ವನ ಕರ್ತವ್ಯ.ಈ ದೇಶದ ಕಾನುನಿಗೆ ಅಗೌರವ ತೋರಿಸಿ ಅದರ ವಿರುದ್ಧ ಹೋರಾಟ ಮಾಡುವುದು ಇದೆಯಲ್ಲೇ ಅದು ನಿಜವಾದ ಅರ್ಥದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆ! ನೆನಪಿಡಿ,ಇವತ್ತು ಬಿಜೆಪಿ ಸರಕಾರ ಮಾಡಿದ ಕಾನೂನನ್ನು ದೊಂಬಿ ಗಲಭೆಯ ಮೂಲಕ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ವಿರೋಧಿಸುತ್ತೇವೆ ಎಂದರೆ  ಮುಂದೊಂದು ದಿನ ಆ ಪಕ್ಷಗಳು ಅಧಿಕಾರಕ್ಕೆ ಬಂದು ಇನ್ನೇನೋ ಕಾನೂನನ್ನು ರೂಪಿಸಿದಾಗ ಇದೇ ಬಿಜೆಪಿಯು ಗಲಭೆ ಹೋರಾಟಗಳನ್ನು ಮಾಡಿ ಕಾನೂನನ್ನು ಮುರಿಯ ಹೊರಟರೆ ಆವಾಗ ಪ್ರಜಾಪ್ರಭುತ್ವಕ್ಕೆ ಎಲ್ಲಿ ಬಂತು ಬೆಲೆ!?

ಇರಲಿ ನಿಜಕ್ಕೂ ಸಿಎಎ ಯಿಂದ ತೊಂದರೆಯಿದೆ, ದೇಶದ ನಾಗರಿಕರ ಪೌರತ್ವಕ್ಕೆ ಸಂಚಕಾರವಿದೆ ಎಂದಾದರೆ ಅದು ಹೇಗೆ ಎಂಬುದನ್ನಾದರೂ ಈ  ವಿರೋಧಪಕ್ಷಗಳೂ ಜನರ ಮುಂದಿಡಬೇಕಿತ್ತು. ಸಾರ್ವಜನಿಕ ಚರ್ಚೆಗೆ ಆಡಳಿತ ಪಕ್ಷವನ್ನು ಕರೆಯಬೇಕಿತ್ತು. ಆದರೆ ಅದನ್ನು ಮಾಡದೆ ಅಲ್ಪಸಂಖ್ಯಾತರನ್ನು ದೇಶದ ಆಡಳಿತದ ವಿರುದ್ಧ ಏಕಾಏಕಿ ಎತ್ತಿಕಟ್ಟಿದ್ದು ಸುತರಾಂ ಒಪ್ಪತಕ್ಕದ್ದಲ್ಲ. ಸಿಎಎ ಯ ಬಗೆಗೆ ಮಾಹಿತಿಯೇ ಬೇಡ. ಅದರ ಬಗ್ಗೆ ಹೇಳಲು ಕೇಳಲು ನಮ್ಮ ಮನೆಗೆ ಬರುವುದೇ ಬೇಡ ಎಂಬಿತ್ಯಾದಿ ಅರ್ಥವುಳ್ಳ ಚೀಟಿಗಳು ಅದೆಷ್ಟೊ ಮುಸಲ್ಮಾನರುಗಳ ಗೋಡೆಗಳಲ್ಲಿ ರಾರಾಜಿಸುತ್ತಿವೆ.ಅಂದರೆ ಇಲ್ಲಿ ಗೊಂದಲವಿರುವ ವಿಚಾರವನ್ನು ತಿಳಿದು ಕೊಳ್ಳಬೇಕು ಎನ್ನುವ ಮನಸ್ಸನ್ನೇ ಅವರಿಂದ ಕಸಿದುಕೊಳ್ಳಲಾಗಿದೆ! ಬದಲಾಗಿ ಆ ಮನದೊಳಗೆ ನೀವಿನ್ನು ಈ ನೆಲ ಜಲವನ್ನು, ಆಸ್ತಿ ಅಂತಸ್ತುಗಳನ್ನು ಬಿಟ್ಟು ನೆರೆಯ ಪಾಕಿಸ್ತಾನಕ್ಕೆ ಓಡಬೇಕಾಗುತ್ತದೆ ಎಂಬ ಅಸಂಬದ್ಧವಾದ ಭಯವನ್ನೇ ಆ ಮನಸುಗಳಲ್ಲಿ ತುಂಬಿಸಲಾಗಿದೆ. ಪ್ರತಿಪಕ್ಷಗಳು ಅದೆಷ್ಟು ಪರಿಣಾಮಕಾರಿಯಾಗಿ ಬಿಜೆಪಿ ಹಾಗೂ ಮೋದಿಯವರನ್ನು ಶತ್ರುಗಳಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದರೆ ಇವತ್ತು ‘ಕರೋನ’ದಂತಹ ಜಾಗತಿಕ ಮಹಾಮಾರಿಯ ವಿಚಾರದಲ್ಲೂಮೋದಿ ಹೇಳುವ ಮಾತುಗಳು, ಮಾಡುತ್ತಿರುವ ಕಾರ್ಯಗಳನ್ನು ಹಗುರಾತಿ ಹಗುರ ವಿಚಾರಗಳೇ ಎಂಬಂತೆಬಿಂಬಿಸಲು ಪ್ರಯತ್ನಿಸುತ್ತಿದೆ.ಏಕತೆಯನ್ನು ಸಾರುವ ದೀಪ ಉರಿಸುವಿಕೆಯಾಗಲಿ, ಕೃತಜ್ಞತೆಯನ್ನು ಸಲ್ಲಿಸುವ ಚಪ್ಪಾಳೆ ತಟ್ಟುವಿಕೆಗಳಾಗಿ ಹಾಸ್ಯದ ವಿಚಾರಗಳಾಗಿಯೇ ಗೋಚರಿಸಿರುವುದು ಬಹುಶಃ ಭಾರತದಲ್ಲಷ್ಟೇ ಇರಬಹುದೇನೋ!

ಹೌದು ರಾಜಕೀಯ ಇಷ್ಟೊಂದು ಹೊಲಸಾಗಬಾರದಾಗಿತ್ತು. ಕೆಟ್ಟದನ್ನು ಕೆಟ್ಟದು ಅನ್ನುವ ಹಾಗೆ ಒಳ್ಳೆಯದನ್ನು ಒಳ್ಳೆಯದು ಎನ್ನವ ಮನೋಭಾವನೆ ಕೂಡ ರಾಜಕೀಯ ಪಕ್ಷಗಳಲ್ಲಿ ಇರಬೇಕಿತ್ತು. ದೇಶದ ಒಟ್ಟಾರೆ ಹಿತಾಸಕ್ತಿಯ ವಿಚಾರ ಬಂದಾಗಲಂತೂ ನಾವೆಲ್ಲಾ ಭಾರತೀಯರು ಎಂಬ ಒಗ್ಗಟಿನ ಬಲ ಪ್ರದರ್ಶಿಸಬೇಕಿತ್ತು. ಅಧಿಕಾರದ ಲಾಲಸೆಗಾಗಿ ದೇಶದ ಹಿತವನ್ನು, ಮರ್ಯಾದೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಿಗಿಡುವಂತ ಹೀನ ಬುದ್ಧಿ ಬಹುಷಃ ಈ ನಮ್ಮ ದೇಶದ ರಾಜಕೀಯ ಪಕ್ಷಗಳಲ್ಲಷ್ಟೇ ಇರಲು ಸಾಧ್ಯ!ಪ್ರಸ್ತುತ ದೇಶ ದೊಡ್ಡ ಸಂಕಟದಲ್ಲಿರುವುದು ಕರೋನ ವೈರಸ್‍ನಿಂದ. ಆರ್ಥಿಕತೆ ಹಾಗೂ ಸಾಮಾಜಿಕ ಜೀವನಗಳೆರಡಕ್ಕೂ ಪೆಟ್ಟುಕೊಡುತ್ತಾ ಮುನ್ನುಗ್ಗುತ್ತಿರುವ ಕರೋನದ ಅಟ್ಟಹಾಸವನ್ನು ಮುರಿಯುವ ವಿಚಾರದಲ್ಲಾದರೂ ಎಲ್ಲಾ ಪಕ್ಷಗಳು ಸಕರಾತ್ಮಕವಾಗಿ ವರ್ತಿಸಿದರೆ ಒಳಿತು.ಒಂದಷ್ಟು ಒಳ್ಳೆಯ ಸಲಹೆಗಳನ್ನು ನೀಡುತ್ತಾ, ಅದಾಗಲೇ ಬಂದಿರುವ ಸಲಹೆಗಳನ್ನು ಶಿರಸಾವಹಿಸಿ ಪಾಲಿಸುತ್ತಾ, ಪಾಲಿಸುವಂತೆ ಜನರಿಗೆ ಮನವರಿಕೆ ಮಾಡುತ್ತಾ ಈ ದೇಶವನ್ನು ರಕ್ಷಿಸುವ ಕಾಯಕದಲ್ಲಿ ‘ಪ್ರತೀ ಪಕ್ಷಗಳು’ಸ್ನೇಹಿತರಂತೆ ಬೆಸೆದುಕೊಳ್ಳಲಿ ಎಂಬುದೇ ಎಲ್ಲರ ಆಶಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!