ಅಂಕಣ

ಪಾಪಿರಾಷ್ಟ್ರದ ಸರ್ವನಾಶಕ್ಕೆ ನಮೋ ಸೂತ್ರ

ಪಾಕಿಸ್ತಾನ ಮಿತಿ ಮೀರಿ ವರ್ತಿಸುತ್ತಿದೆ. ಕಾಶ್ಮೀರವೆಂಬ ಭಾರತದ ಅಮೂಲ್ಯ ಭಾಗವನ್ನು ತನ್ನದಾಗಿಸಿಕೊಳ್ಳಲು ವಿಪರೀತ ಹವಣಿಸುತ್ತಿರುವ ಪಾಪಿರಾಷ್ಟ್ರ ಇಲ್ಲಿಯವರೆಗೆ ಸಾವಿರಾರು ಸೈನಿಕರನ್ನು ಬಲಿ ತೆಗೆದುಕೊಂಡು ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಲೇ ಬಂದಿದೆ. ಪ್ರತೀ ಹೊಸ ಸರಕಾರ ಬಂದಾಗ ಪಾಕಿಸ್ತಾನದ ಜೊತೆ ಮಾತುಕತೆಯನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು ಪಾಪಿ ರಾಷ್ಟ್ರದ ಜೊತೆ ಮಾತುಕತೆಗೆ ತೆರಳುತ್ತವೆ, ಜಗತ್ತಿನಲ್ಲಿ ಸರ್ವರೂ ಸಮಾನರೂ ಎಂದುಕೊಂಡಿರುವ,ನಮ್ಮ ಹಿತವನ್ನೇ ಚೂರು ಬಯಸದ ವೈರಿ ರಾಷ್ಟ್ರವನ್ನೂ ಕೂಡ ಕ್ಷಮಿಸುವ ಮನಸ್ಸು ಮಾಡಿದ್ದೇ ನಮ್ಮ ತಪ್ಪಾಯಿತೋ ಏನೋ ಎಂಬಂತಹ ಭಾವನೆ ಈ ಸಮಯಕ್ಕೆ ಬರುತ್ತಿದೆ. ಅದು 2010 ರ ಜನವರಿಯ ಸಮಯವಿರಬೇಕು ಬಹುಶ: ನೀವೂ ಓದಿರುತ್ತೀರಿ ಭಾರತ ಮತ್ತು ಪಾಕಿಸ್ತಾನದ ಎರಡು ದೊಡ್ಡ ಮಾಧ್ಯಮ ಸಂಸ್ಥೆಗಳು ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತವೆ ಅದೇ “ಅಮನ್ ಕೀ ಆಶಾ. ಭಾರತದ “ಟೈಮ್ಸ್ ಆಫ್ ಇಂಡಿಯಾ” ಮತ್ತು ಪಾಕಿಸ್ತಾನದ “ದ ಜಂಗ್ ಗ್ರೂಪ್” ಆ ಎರಡು ಮಾಧ್ಯಮ ಸಂಸ್ಥೆಗಳು. ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಸಾಮರಸ್ಯ ತರುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಆದರೆ ಇದರಿಂದ ಆಗಿದ್ದೇನು?ಪಾಕಿಸ್ತಾನ ಮತ್ತು ಭಾರತದ ಲಿಬರಲ್ಸ್ ಒಂದಿಷ್ಟು ಜನ ಪತ್ರಿಕೆಯಲ್ಲಿ ಸುದ್ದಿಯಾದರೇ ಹೊರತು ಯಾವುದೇ ‘ಆಶಾನೂ’ ಗೋಚರಿಸಲಿಲ್ಲ ಬದಲಾಗಿ ಭಾರತಕ್ಕೆ ಸಿಕ್ಕಿದ್ದು ಅದೇ ಪಾಕಿಸ್ತಾನದವರು ಪೋಷಿಸುತ್ತಿರುವ ಉಗ್ರಗಾಮಿಗಳಿಂದ ಪುಣೆ ಮತ್ತು ವಾರಣಾಸಿಯಲ್ಲಾದ ಭಯೋತ್ಪಾದಕ ದಾಳಿ ಮಾತ್ರ. ಇದಾದ ನಂತರದ ದಿನಗಳಲ್ಲಿ ಮತ್ತೆ ಭಾರತದ ದೆಹಲಿ, ಮುಂಬೈ, ಹೈದರಾಬಾದ್,ಬೆಂಗಳೂರು, ಬುದ್ಧ ಗಯಾ, ಪಾಟ್ನಾ, ಪಠಾಣ್ ಕೋಟ್ ಮತ್ತು ಉರಿಯಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ದಾಳಿ ನಿರಂತರವಾಗಿ ನಡೆದೇ ಇತ್ತು.ಉರಿ ದಾಳಿಯಾದ ಮೇಲೆ ಸುಮ್ಮನಿರದ ಭಾರತ ಪಾಕಿಸ್ತಾನದೊಳಗೆ ಹೋಗಿ ಉಗ್ರರನ್ನು ನಾಶ ಮಾಡಿ ಬಂದಿತ್ತು.ಇದಕ್ಕೂ ಬಗ್ಗದ ಉಗ್ರ ರಾಷ್ಟ್ರ ಉಗ್ರರನ್ನು ಪೋಷಿಸುತ್ತಾ ಪುಲ್ವಾಮದಲ್ಲಿ ದಾಳಿ ಮಾಡಿ ನಮ್ಮ ದೇಶದ ನಲವತ್ತೆರಡು ಜನ ಸೈನಿಕರ ಪ್ರಾಣವನ್ನು ಬಲಿಪಡೆಯಿತು.ಇದೇ ಉಗ್ರರನ್ನು ಹೊಡೆದುರುಳಿಸಲು ಏರ್ ಸ್ಟ್ರೈಕ ಮಾಡಿದ ಭಾರತದ ನಡೆಯನ್ನು ಖಂಡಿಸಿ ಪಾಕಿಸ್ತಾನದ ಸರಕಾರ ಬೊಬ್ಬೆ ಹೊಡೆಯುತ್ತದೆ ಮತ್ತು ಗಡಿಯಲ್ಲಿ ಅಪ್ರಚೋದಿತ ದಾಳಿಯನ್ನು ಮಾಡುತ್ತದೆ ಅಂದರೆ ಪಾಕಿಸ್ತಾನದ ಬೆಂಬಲ ಉಗ್ರರಿಗೆ ಎಂದೇ ಅಂದುಕೊಳ್ಳಬೇಕಲ್ಲವೇ? ಪಾಕಿಸ್ತಾನವೆಂಬ ಈ ಹೊಲಸು ರಾಷ್ಟ್ರವನ್ನು ಸರ್ವನಾಶ ಮಾಡುವುದು ನಮ್ಮ ಸೈನಿಕರಿಗೆ ದೊಡ್ಡ ಕೆಲಸವೇ ಅಲ್ಲ ಆದರೆ ಈ ರಾಷ್ಟ್ರದ ಮನಸ್ಥಿತಿಯನ್ನು ಸಂಪೂರ್ಣವಾಗಿ ಬೆತ್ತಲುಗೊಳಿಸಿ ವಿಶ್ವದ ಇತರ ರಾಷ್ಟ್ರಗಳಿಂದಲೂ ಛೀಮಾರಿ ಹಾಕಿಸುವ ಕೆಲಸವನ್ನು ಭಾರತ ಈಗ ಮಾಡುತ್ತಿದೆ. ಇಷ್ಟು ವರ್ಷ ಭಾರತಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿತ್ತು ಆದರೆ ಈಗ ಅದರ ಕೊರತೆಯೇ ಇಲ್ಲ. ಪಾಕಿಸ್ತಾನವೆಂಬ ಪಾಪಿಸ್ತಾನದ ಬೌದ್ಧಿಕ ಉಗ್ರತನವನ್ನು ಬೆತ್ತಲು ಮಾಡಿದ್ದು ಈ ನವ ಭಾರತದ ರಾಜತಾಂತ್ರಿಕತೆ.

ಪುಲ್ವಾಮಾ ದಾಳಿಯ ಬಳಿಕ, ಉಗ್ರರ ಮೇಲೆ ದಿಟ್ಟ ಕ್ರಮಕ್ಕಾಗಿ ಹಾತೊರೆಯುತ್ತಿದ್ದ ಇಡೀ ದೇಶದ ಜನರ ಆಶಯವೇ ಮೂರ್ತರೂಪ ಪಡೆದಂತೆ, ಫೆ.26ರ ಮುಂಜಾನೆ ಭಾರತೀಯ ವಾಯುಪಡೆ ಮಾರಕ ದಾಳಿ ನಡೆಸಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು. ಪಾಕಿಸ್ತಾನದ ಒಳಗಿರುವ ಬಾಲಾಕೋಟ್‌ ಎಂಬಲ್ಲಿ ನಡೆದ ಈ ಸರ್ಜಿಕಲ್‌ ದಾಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಿಹಾದಿಗಳು ಹತರಾಗಿದ್ದಾರೆ ಎಂದು ಸರಕಾರ ತಿಳಿಸಿತು. ಅಂದು ನಿಖರವಾದ ದಾಳಿ ನಡೆಸಿದ ನಮ್ಮ ಸೈನ್ಯದ ಯೋಧರು ತಮ್ಮ ಕೂದಲೂ ಕೊಂಕದೆ ಹಿಂದಿರುಗಿರುವುದು ನಿಜಕ್ಕೂ ರೋಚಕ ಮತ್ತು ಸಮಾಧಾನಕರ. ಈ ದಾಳಿ ಎಷ್ಟು ಖಚಿತವಾಗಿತ್ತು ಎಂದರೆ, ಅಲ್ಲಿ ಉಗ್ರರು ಮಾತ್ರ ಸತ್ತಿದ್ದು, ಯಾವುದೇ ಸಾಮಾನ್ಯ ನಾಗರಿಕನಿಗೆ ತೊಂದರೆಯಾಗಿಲ್ಲ. ಅಂದರೆ ನಮ್ಮ ಗುರಿ ಭಯೋತ್ಪಾದಕರ ಹನನವೇ ಹೊರತು ಪಾಕ್‌ ಪ್ರಜೆಗಳಲ್ಲ ಎಂಬುದು ಸ್ಪಷ್ಟ. ಸಾಕಷ್ಟು ಸಂಯಮ ಹಾಗೂ ರಾಜತಾಂತ್ರಿಕ ಮಾತುಕತೆಯ ಮೂಲಕವೇ ಪಾಕನ್ನು ಹಾದಿಗೆ ತರಲು ಯತ್ನಿಸುತ್ತಿದ್ದ ನಮ್ಮ ಸರಕಾರದ ನಿಲುವು ಜಾಗತಿಕ ಸಮುದಾಯದ ಮೆಚ್ಚುಗೆ ಪಡೆದಿದೆ. ಐದಾರು ದಶಕಗಳಿಂದ ನಾವು ಅನುಭವಿಸುತ್ತಿರುವ ಭಯೋತ್ಪಾದನೆಯ ಕಿರುಕುಳ, ನೋವನ್ನು ಇಂದು ಜಾಗತಿಕ ಸಮುದಾಯವೂ ಅರ್ಥ ಮಾಡಿಕೊಂಡಿದೆ; ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ನಿಲುವಿನ ಪರ ನಿಂತಿದೆ. ಮಿಲಿಟರಿ ಕಾರ್ಯಾಚರಣೆಯ ಜತೆಗೆ ಅಂತಾರಾಷ್ಟ್ರೀಯ ಸಮುದಾಯದ ಒತ್ತಡವನ್ನೂ ಪಾಕ್‌ ಮೇಲೆ ತಂದಿರುವ ಭಾರತದ ಪಾರದರ್ಶಕ ನೈತಿಕ ನಿಲುವು ಪ್ರಶಂಸನೀಯವಾದುದು. ಆದರೆ ನಾವು ನಮ್ಮ ಸೈನ್ಯದ ತಾಕತ್ತು ಏನೂ ಎಂಬುದನ್ನು ತೋರಿಸುವುದು ಕೂಡ ಅಗತ್ಯವಾಗಿತ್ತು; ಅದೇ ಈಗ ಆಗಿರುವುದು. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಉಳಿಸಿಕೊಳ್ಳಲು ಯುದ್ಧಕ್ಕೂ ಸಿದ್ಧ ಎಂಬ ಸೂಚನೆಯನ್ನು ನಮ್ಮ ಸರಕಾರ ಜಗತ್ತಿನ ಮುಂದೆ ಈಗ ನೀಡಿದೆ. ಇಂಥ ಬಿಕ್ಕಟ್ಟಿನ ಸಮಯದಲ್ಲಿ, ಸ್ಪಷ್ಟ, ಖಚಿತ ಹಾಗೂ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬಲ್ಲ ಪ್ರಬಲ ನಾಯಕತ್ವವೂ ನಮ್ಮ ದೇಶಕ್ಕೆ ದೊರೆತಿರುವುದು ಗಮನಾರ್ಹ ಅಂಶ. ದೇಶದ ನಾಯಕ ಹೀಗಿರಬೇಕು ಎಂದು ಬಯಸಿದ್ದ ಕೋಟಿ ಕೋಟಿ ಜನರಿಗೆ ಈಗ ನಾಯಕನೆಂದರೆ ನಮ್ಮ ದೇಶದ ಪ್ರಧಾನಿಗಳಿಂತರಬೇಕು ಎಂಬ ಸ್ಪಷ್ಟತೆ ಮೂಡಿದೆ.

ಪ್ರಮುಖ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದಲ್ಲಿ ಬಿದ್ದಿದ್ದ ಅಭಿನಂದನ್ ಅವರನ್ನು ಬಿಡುಗಡೆ ಮಾಡಿ ತನ್ನನ್ನು ತಾನು ಶಾಂತಿಯ ಪ್ರತಿಪಾದಕ ಎಂದು ಬಿಂಬಿಸಲು ಹೊರಟ ಪಾಕಿಸ್ತಾನದ ನೈಜತೆ ಇಡೀ ಜಗತ್ತಿಗೇ ತಿಳಿದಿಲ್ಲವ? ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಮಾತುಕತೆಯಿಲ್ಲದೆ, ಯಾವುದೇ ರಾಜಿ ಅಥವಾ ಒಪ್ಪಂದ ಮಾಡಿಕೊಳ್ಳದೆ, ಯಾವುದೇ ಯುದ್ಧ ಸೂಚನೆಯೂ ಇಲ್ಲದೆ ಪಾಕಿಸ್ತಾನ ಬಿಡುಗಡೆಗೆ ಒಪ್ಪಿಕೊಂಡಿರುವುದು ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.” ಅಂತಾರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಜಿನೀವಾ ಸಮಾವೇಶದ ಒಪ್ಪಂದದ ಪ್ರಕಾರ ನಡೆದುಕೊಳ್ಳದ ನೀವು, ನಮ್ಮ ವಾಯುಸೇನೆಯ ಯೋಧನನ್ನು ಅಕ್ರಮವಾಗಿ ಬಂಧಿಸಿದ್ದೀರಿ. ಇದರ ಕುರಿತಾಗಿ ಯುಎನ್ ನಿಯಮಗಳ ಪ್ರಕಾರ ನಮಗೆ ಅಧಿಕೃತವಾಗಿ ಮಾಹಿತಿಯನ್ನೂ ಸಹ ನೀವು ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಯೋಧನನ್ನು ಗೌರವಯುತವಾಗಿ ನೀವು ನಡೆಸಿಕೊಳ್ಳಬೇಕು. ಅಲ್ಲದೇ ಅತ್ಯಂತ ಶೀಘ್ರದಲ್ಲಿ ಅವರನ್ನು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕಳುಹಿಸುವ ಕುರಿತಾಗಿ ನೀವು ಭರವಸೆ ನೀಡಬೇಕು. ಇದರ ಹೊರತಾಗಿ ಏನಾದರೂ ತೊಂದರೆಯಾದರೆ ಪರಿಣಾಮ ಎದುರಿಸುತ್ತೀರಿ” ಎಂದು ಭಾರತ ಪಾಕಿಸ್ತನಕ್ಕೆ ಎಚ್ಚರಿಸಿತ್ತು.ಇದೇ ವೇಳೆ, ಜಾಗತಿಕ ಮಟ್ಟದಲ್ಲಿ ಕೂಡ ಪಾಕ್ ಮೇಲೆ ಒತ್ತಡ ತರುವಲ್ಲಿ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದ್ದರ ಪರಿಣಾಮ ಅಂತಿಮವಾಗಿ ಭಾರತದ ರಾಜತಾಂತ್ರಿಕ ಚಾಣಾಕ್ಷತನಕ್ಕೆ, ಧೈರ್ಯಕ್ಕೆ ಹೆದರಿದ ಪಾಕ್ ಅಭಿನಂದನ್ ಬಿಡುಗಡೆಗೆ ಒಪ್ಪಿ ಅವರನ್ನು ಭಾರತಕ್ಕೆ ಮರಳಿ ಕಳಿಸಿತು.

2018ರ ಫೆಬ್ರವರಿಯಲ್ಲಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಪ್ಯಾರಿಸ್ನಲ್ಲಿ ಸಭೆ ಸೇರಿದ್ದಾಗ ಪಾಕಿಸ್ತಾನವನ್ನು ಕಂದುಪಟ್ಟಿಗೆ ಸೇರಿಸಬೇಕೆಂದು ಭಾರತ ತನ್ನ ವಾದ ಮಂಡಿಸಿತ್ತು. ಆದರೆ ಪಾಕಿಸ್ತಾನ ತನ್ನನ್ನು ಇದರಿಂದ ಹೊರಗಿಡುವಂತೆ ಜಗತ್ತನ್ನೆಲ್ಲಾ ಬೇಡಿಕೊಂಡಿತ್ತು. ವಾಸ್ತವವಾಗಿ ಎಫ್ ಎಟಿ ಎಫ್ ನಲ್ಲಿ ಕಂದುಪಟ್ಟಿಯಲ್ಲಿರುವುದೆಂದರೆ ಅಂತಹ ರಾಷ್ಟ್ರ ಭಯೋತ್ಪಾದಕರಿಗೆ ಸಹಕಾರ ಮಾಡುತ್ತಿದೆ ಎಂದೂ ಹಣಕಾಸು ವಹಿವಾಟಿನಲ್ಲಿ ಜಾಗತಿಕ ಮಟ್ಟದ ದೋಷಗಳನ್ನೂ ಮಾಡುತ್ತಿದೆ ಎಂದೂ ಅರ್ಥ. ಇತರೆ ರಾಷ್ಟ್ರಗಳು ಅವರಿಗೆ ಸಾಲ ಕೊಡುವಾಗ ನೂರು ಬಾರಿ ಯೋಚಿಸುತ್ತಾರೆ. ಬೇಡುವ ಸ್ಥಿತಿಗೆ ಬಂದಿದ್ದ ಪಾಕಿಸ್ತಾನಕ್ಕೆ ಹೇಗಾದರೂ ಮಾಡಿ ಈ ಬೀಸುವ ದೊಣ್ಣೆಯಿಂದ ಪಾರಾಗಬೇಕಿತ್ತು. ಆದರೆ ಭಾರತ ಬಿಡಲಿಲ್ಲ. ಸದಸ್ಯರಲ್ಲಿ ಮೂರು ರಾಷ್ಟ್ರಗಳು ಈ ಪ್ರಸ್ತಾವನೆಯನ್ನು ವಿರೋಧಿಸಿದರೆ ಪಾಕಿಸ್ತಾನವನ್ನು ಈ ಪಟ್ಟಿಯಿಂದ ಹೊರಗಿಡಬಹುದಿತ್ತು. ಚೀನಾ, ಟಕರ್ಿ ಮತ್ತು ಸೌದಿ ಅರೇಬಿಯಾಗಳು ಪಾಕಿಸ್ತಾನದ ಪರವಾಗಿ ನಿಂತಿದ್ದವು. ಭಾರತ ತನ್ನ ಪ್ರಭಾವವನ್ನು ಬಳಸಿ ಸೌದಿಯನ್ನು ತನ್ನತ್ತ ಒಲಿಸಿಕೊಂಡಿತು. ಉಳಿದವು ಎರಡೇ ರಾಷ್ಟ್ರಗಳಾದ್ದರಿಂದ ಬೇರೆ ದಾರಿಯಿಲ್ಲದೇ ಚೀನಾ ಕೂಡ ಹೊರಗಿರಬೇಕಾಯ್ತು. ಕೊನೆಗೆ ಪಾಕಿಸ್ತಾನವನ್ನು ಕಂದುಪಟ್ಟಿಗೆ ಸೇರಿಸಿದ ಜಗತ್ತು ವಿಶ್ವಾಸ ಬರುವಂತೆ ನಡೆದುಕೊಂಡರೆ ಮಾತ್ರ ನಿಮ್ಮನ್ನು ಇಲ್ಲಿಂದ ಹೊರಗಿಡಲಾಗುವುದು ಎಂದಿತು. ಈಗ ಈ ಘಟನೆಯ ನಂತರ ಭಾರತದ ಪ್ರಯಾಸ ಹೇಗಿದೆಯೆಂದರೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ರಾಜತಾಂತ್ರಿಕ ಪ್ರಯತ್ನವನ್ನು ಆರಂಭಿಸಿದೆ. ಹಾಗೇನಾದರೂ ಆದರೆ ಪಾಕಿಸ್ತಾನ ಅಕ್ಷರಶಃ ತನ್ನನ್ನೇ ತಾನು ತಿನ್ನುವ ರಾಷ್ಟ್ರವಾಗಿಬಿಡಬೇಕಾಗುತ್ತದೆ.38 ದೇಶಗಳನ್ನು ಸದಸ್ಯರಾಗಿ ಹೊಂದಿರುವ ಎಫ್.ಎ.ಟಿ.ಎಫ್ ನ ಸಭೆಯು ಪ್ಯಾರಿಸ್ ನಲ್ಲಿ ನಡೆಯುತ್ತಿದೆ. ಪಾಕಿಸ್ತಾನವು ಅದರ ಕಾರ್ಯ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮೇ 2019 ರ ವರೆಗೆ ಸಮಯವನ್ನು ನೀಡಲಾಗಿದೆ ಎಂದು ಎಫ್.ಎ.ಟಿಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭಯೋತ್ಪಾದನೆ ಹಣಕಾಸು ಕುರಿತಂತೆ ಭೀತಿಗೊಳಿಸುವ ಪಾಕಿಸ್ತಾನದ ಬದ್ಧತೆಗಳು ಈ ವರ್ಷ ಜೂನ್ ಮತ್ತು ಅಕ್ಟೋಬರ್ ನಲ್ಲಿ ಪರಿಶೀಲಿಸಲಾಗುವುದು ಒಂದು ವೇಳೆ ಪ್ರಧಾನಿ ಇಮ್ರಾನ್ ಖಾನ್ ಅವರ ದೇಶವು ಗುರಿಗಳನ್ನು ಪೂರೈಸದಿದ್ದರೆ ಅದನ್ನು ಕಪ್ಪುಪಟ್ಟಿಗೆ ಸೇರಿಸಬಹುದಾಗಿದೆ ಎಂದು ಎಫ್.ಎ.ಟಿಎಫ್ ಅಭಿಪ್ರಾಯಪಟ್ಟಿದೆ. ಅಂದರೆ ವಿಶ್ವದ ಮಟ್ಟದಲ್ಲಿ ಪಾಕಿಸ್ತಾನದ ಮಾನ ಒಂದು ಹಂತಕ್ಕೆ ಹರಾಜಾಗಿದೆ ಎಂದೇ ಹೇಳಬಹುದು.ಒಂದು ವೇಳೆ ಪಾಕಿಸ್ತಾನವನ್ನೇನಾದರೂ ಕಪ್ಪುಪಟ್ಟಿಗೆ ಸೇರಿಸುವ ಕೆಲಸ ಆದರೆ ಪಾಕಿಸ್ತಾನಕ್ಕೆ ಐಎಂಎಫ್, ವಿಶ್ವಬ್ಯಾಂಕ್, ಎಡಿಬಿ, ಐರೋಪ್ಯ ಒಕ್ಕೂಟಗಳಿಂದ ಆರ್ಥಿಕ ನೆರವು ಬಂದ್ ಆಗುತ್ತದೆ.ಮೂಡಿ, ಫಿಚ್ ಇತರ ಜಾಗತಿಕ ಆರ್ಥಿಕ ಸಂಸ್ಥೆಗಳು ಈ ದೇಶಕ್ಕೆ ಮಾನ್ಯತೆ ನೀಡುವುದಿಲ್ಲ.ವಿಶ್ವದ ಇತರ ದೇಶಗಳ ಬಂಡವಾಳ ಹೂಡಿಕೆ ಹಾಗೂ ಆರ್ಥಿಕ ನೆರವಿನ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಎಲ್ಲ ಸನ್ನಿವೇಶ ಸೃಷ್ಟಿಯಾಗಬಹುದು.

ಪಾಕಿಸ್ತಾನಕ್ಕೆ ಕೊಟ್ಟಿದ್ದ ಆಪ್ತರಾಷ್ಟ್ರದ ಸ್ಥಾನಮಾನವನ್ನು ಭಾರತ ಕಸಿದುಕೊಂಡಿದೆ. ಇದು 1996ರಲ್ಲಿ ವಿಶ್ವ ವ್ಯಾಪಾರ ಒಕ್ಕೂಟದ ನೀತಿಗಳ ಆಧಾರದ ಮೇಲೆ ಮಾಡಿಕೊಂಡ ನಿರ್ಣಯ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಸ್ತುಗಳ ಮೇಲೆ 200 ಪ್ರತಿಶತ ತೆರಿಗೆಯನ್ನು ಭಾರತ ಹೇರಿದ್ದು ಪಾಕಿಸ್ತಾನದ ಮೇಲೆ ಇದರಿಂದ ಆಗುವ ಪರಿಣಾಮ ಅತ್ಯಲ್ಪ ಏಕೆಂದರೆ ನಮ್ಮಿಬ್ಬರ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಪಾಕಿಸ್ತಾನದ ಪಾಲು ಕಾಲು ಭಾಗವಷ್ಟೇ. ಆದರೆ ನಾವು ಈ ಸ್ಥಾನಮಾನವನ್ನು ಕಿತ್ತುಕೊಂಡಿರುವುದರಿಂದ ಪಾಕಿಸ್ತಾನದ ಸುತ್ತಮುತ್ತಲಿನ ರಾಷ್ಟ್ರಗಳೂ ಕೂಡ ಇದರ ಕುರಿತಂತೆ ಯೋಚನೆ ಮಾಡಬಹುದು ಮತ್ತು ಅದು ಪಾಕಿಸ್ತಾನದ ಒಟ್ಟಾರೆ ವಿದೇಶೀ ವಿನಿಮಯದ ಮೇಲೆ ಆಘಾತಕಾರಿ ಪರಿಣಾಮವನ್ನು ಉಂಟುಮಾಡಬಹುದು. ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯನ್ನಾಗಿಸಲು ಏನೇನು ಕ್ರಮವನ್ನು ತೆಗೆದುಕೊಳ್ಳಬೇಕೋ ಅದನ್ನು ಭಾರತ ಸರಕಾರ ತೆಗೆದುಕೊಳ್ಳುತ್ತಿದೆ.ರಾಜತಾಂತ್ರಿಕವಾಗಿ ಎರಡು ದೇಶಗಳ ನಡುವೆ ಮುಂದೆ ನಡೆಯಬಹುದಾದ ದ್ವಿಪಕ್ಷೀಯ ಸಂಬಂಧಗಳಿಗೆ ಇದರಿಂದ ತೊಂದರೆಯಾದರೂ, ಭಾರತದ ಈ ನಿರ್ಧಾರದಿಂದ ಪಾಕಿಸ್ತಾನದ ವಾಣಿಜ್ಯ ಮಾರುಕಟ್ಟೆಗೆ ಭಾರೀ ಹೊಡೆತ ಬೀಳಲಿದೆ.

ಫೆಬ್ರುವರೀ 17ರಿಂದ ಜಾರಿಗೆ ಬರುವಂತೆ ಕಾಶ್ಮೀರದ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿರುವ ವಿಶೇಷ ಭದ್ರತೆಯನ್ನು ಜಮ್ಮು ಕಾಶ್ಮೀರ ರಾಜ್ಯಾಡಳಿತ ಹಿಂದಕ್ಕೆ ಪಡೆದುಕೊಂಡಿದೆ. ಮಿರ್ವಾಜ್ ಉಮರ್ ಫಾರೂಕ್, ಅಬ್ಧುಲ್ ಗನಿಭಟ್, ಬಿಲಾಲ್ ಲೋನ್, ಹಶೀಮ್ ಖುರೇಷಿ ಮತ್ತು ಶಬ್ಬೀರ್ ಶಾ ಅವರಿಗೆ ನೀಡಲಾಗಿದ್ದ ವಿಶೇಷ ಸವಲತ್ತು ಮತ್ತು ಭದ್ರತೆಯನ್ನು ಹಿಂದಕ್ಕೆ ಪಡೆದು, ಮೋದಿ ಸರಕಾರ ಶಾಕ್ ನೀಡಿದೆ. ಭಾರತದಲ್ಲಿದ್ದು ಮಾತೃಭೂಮಿಗೆ ದ್ರೋಹ ಬಗೆಯುತ್ತಿರುವವರಿಗೆ ಇದು ಭರ್ಜರಿ ಶಾಕ್ ಎಂದು ವ್ಯಾಖ್ಯನಿಸಲಾಗುತ್ತಿದೆ. ಮ್ಮು-ಕಾಶ್ಮೀರದಲ್ಲಿ ಜಮಾತ್-ಎ-ಇಸ್ಲಾಮಿ ಸಂಘಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬ್ಯಾನ್ ಮಾಡಿದೆ. ದೆಹಲಿಯ ಗೃಹಸಚಿವಾಲಯದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಜಮಾತ್-ಎ-ಇಸ್ಲಾಮಿ ಸಂಘಟನೆ ಕಾಶ್ಮೀರದಲ್ಲಿ ರಾಷ್ಟ್ರ ವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿದ್ದು, ಇದೊಂದು ಕಾನೂನುಬಾಹಿರ ಸಂಸ್ಥೆಯಾಗಿದೆ. ಆದ್ದರಿಂದ 1967ರ ಕಾಯ್ದೆಯ 3ರ ಪ್ರಕಾರ ಈ ಸಂಘಟನೆಯನ್ನು ನಿಷೇಧ ಮಾಡಲಾಗಿದೆಂದು ಅಧಿಸೂಚನೆ ಹೊರಡಿಸಿದೆ. ಪಾಕ್ನ ಬ್ಯಾಕ್ ಬೋನ್ ಆಗಿರುವ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿ ಜೆಇಐ ಸಂಘಟನೆ ರಾಷ್ಟ್ರ ವಿರೋಧಿ ಹಾಗೂ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದೆ. ಇದೊಂದು ಪ್ರತ್ಯೇಕವಾದಿಗಳ ಗುಂಪಾಗಿದ್ದು, ಕೃತ್ಯಗಳಲ್ಲಿ ಭಾಗಿಯಾಗಿದೆ. ಇಷ್ಟೇ ಅಲ್ಲದೇ ಜಮ್ಮುಕಾಶ್ಮೀರ ಹಾಗೂ ದೇಶದ ಇತರೆ ಕಡೆಗಳಲ್ಲಿ ಉಗ್ರಗಾಮಿತ್ವ, ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದೆಂದು ಗೃಹ ಸಚಿವಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಜೈಷ್‌ ಎ ಮೊಹಮದ್‌ ಸಂಘಟನೆಯ ಉಗ್ರನೊಬ್ಬ ಆತ್ಮಾಹುತಿ ಬಾಂಬ್ ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರನ್ನ ಬಲಿಪಡೆದಿದ್ದ. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ 150 ಜೆಎಐ ಸಂಘಟನೆಯ ನಾಯಕರನ್ನ ಕೇಂದ್ರ ಸರ್ಕಾರ ವಶಕ್ಕೆ ಪಡೆದಿತ್ತು. ಈಗ ಆ ಸಂಘಟನೆಗಳನ್ನೇ ಸಂಪೂರ್ಣವಾಗಿ ಬ್ಯಾನ್‌ ಮಾಡುವಂತಹ ಮಹತ್ವದ ನಿರ್ಧಾರ ಕೈಗೊಂಡಿದೆ. ಜಮಾತ್‌ ಎ ಇಸ್ಲಾಮಿ ಸಂಘಟನೆಯ ನಾಯಕರು, ಕಚೇರಿಗಳು ಮತ್ತು ನಿವಾಸಗಳ ಮೇಲೆ ಸರಕಾರ ದಾಳಿ ನಡೆಸಿತ್ತು. ಈ ವೇಳೆ ಅಕ್ರಮ ದಾಖಲೆ ಪತ್ರಗಳನ್ನು ಪರಿಶೀಲನೆಗಾಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸುಮಾರು 50 ಕೋಟಿ ಆಸ್ತಿ ಜಪ್ತಿ ಮಾಡಿದ್ದಾರೆ.

ಜಗತ್ತಿನಲ್ಲಿ ಅತ್ಯಂತ ಯಶಸ್ವೀ ನದಿ ನೀರು ಹಂಚಿಕೆ ಒಪ್ಪಂದ ಇರುವುದು ಯಾವ ರಾಷ್ಟ್ರಗಳ ನಡುವೆ ತಿಳಿದಿದೆಯೇ? ನೀವು ನಂಬಲೇಬೇಕು ಅದು ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ “ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ”. ಇಡೀ ವಿಶ್ವದಲ್ಲಿ ಈ ನದಿ ನೀರು ಹಂಚಿಕೆ ಒಪ್ಪಂದದಷ್ಟು ಯಶಸ್ವೀ ಒಪ್ಪಂದ ಇನ್ನೊಂದಿಲ್ಲ. ಸನ್ಮಾನ್ಯ ನೆಹರು ಎಂಬ ಪಂಡಿತ ಈ ಒಪ್ಪಂದಕ್ಕೆ ಸೆಪ್ಟೆಂಬರ್ 19, 1960ರಲ್ಲಿ ಸಹಿ ಹಾಕಿದ್ದರು. ಈ ಒಪ್ಪಂದವಾದ ನಂತರ ಅದೆಷ್ಟು ಬಾರಿ ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡಿತು ಎಂಬುದು ನಿಮಗೆ ತಿಳಿದಿದೆ. ಆದರೆ ಈ ಒಪ್ಪಂದ ಮಾತ್ರ ತೆರೆ ಮರೆಯಲ್ಲಿಯೇ ಉಳಿಯಿತು, ನಮ್ಮ ಸಿಂಧೂ ನದಿಯ ನೀರನ್ನು ಕುಡಿವ ಪಾಕಿಸ್ತಾನ ನಮ್ಮ ಮೇಲೆ ಪದೇ ಪದೇ ಮುಗಿ ಬೀಳುತ್ತಲೆ ಇದೆ. ಈಗ ನರೇಂದ್ರ ಮೋದಿ ಈ ಒಪ್ಪಂದವನ್ನು ಮುರಿಯುವ ಮಾತನಾಡಿದ್ದಾರೆ. “ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದು ಸರಿಯಲ್ಲ ” ಎಂಬ ಮೋದಿಯವರ ಮಾತಿನ ಹಿಂದೆ ಇನ್ನೊಂದು ಸ್ಟ್ರ್ಯಾಟಜೀ ಇದೆ. ಬೀಸ್,ರಾವಿ ಮತ್ತು ಸಟ್ಲೇಜ್ ಎಂಬ ಸಿಂಧೂ ನದಿಯ ಉಪ ನದಿಗಳ ಜೀವ ನಿಂತಿರುವುದು ಇದೆ ಒಪ್ಪಂದದ ಮೇಲೆ. ಸಿಂಧೂ ನದಿಯ ಶೇಕಡಾ 80ರಷ್ಟು ನೀರು ಪಾಕಿಸ್ತಾನಕ್ಕೆ ಹರಿದು ಹೋಗುವಂತೆ ಮಾಡುವುದೇ ಈ ಒಪ್ಪಂದದ ಮೂಲ ಉದ್ದೇಶವಾಗಿತ್ತು. ಪಾಕಿಸ್ತಾನದ 2.6 ಕೋಟಿ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿ ಬರೋದು ಇದೆ ಸಿಂಧೂ ನದಿಯಿಂದ, ಅಂದರೆ ಅಂದಾಜು ಪಾಕಿಸ್ತಾನದ ಶೇಕಡಾ 20 ಭೂಬಾಗಕ್ಕೆ ನಮ್ಮ ಸಿಂಧೂ ನದಿಯೇ ಮೂಲ. ಒಂದು ವೇಳೆ ಭಾರತವೆನಾದರೂ ಈ ಒಪ್ಪಂದ ಮುರಿದುಕೊಂಡರೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ನೀರಿನ ಕೊರತೆ ಕಾಣಿಸುತ್ತದೆ. ಬರಗಾಲ,ನೀರಿನ ಅಬಾವ ಪಾಕಿಸ್ತಾನದಲ್ಲಿ ಮನೆ ಮಾಡಿ ಆರ್ಥಿಕವಾಗಿ ಆ ಪಾಪಿರಾಷ್ಟ್ರ ಇನ್ನಷ್ಟು ಕುಗ್ಗಿಸಬಹುದು.ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿದು ಹೋಗುವ ಹಾದಿಯಲ್ಲಿ ಬೇಕಾದಷ್ಟು ಅಣೆಕಟ್ಟು ಹೊಂದಿರುವಾಗ ನಮಗೆ ನೀರು ಶೇಕರಣೆಯ ಸಮಸ್ಯೆಯೇ ತಲೆದೂರುವುದಿಲ್ಲ. ಒಂದು ವೇಳೆ ಪ್ರಧಾನಿ ಈ ನಿರ್ಧಾರ ತೆಗೆದುಕೊಂಡರೆ ಅದು ಪಾಕಿಸ್ತಾನದ ಮೇಲೆ ನ್ಯೂಕ್ಲಿಯರ್ ಧಾಳಿ ಮಾಡಿದಷ್ಟೇ ಪ್ರಭಾವಿಯಾಗಿರುತ್ತದೆ.ತ್ರಿವಳಿ ನದಿಗಳಾದ ರಾವಿ, ಬಿಯಾಸ್, ಸಟ್ಲೇಜ್ ನದಿಗಳಿಂದ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆಯಲಾಗಿದೆ. ಇದು ಪಾಕಿಸ್ತಾನಕ್ಕೆ ಕುಡಿಯುವ ನೀರಿನ ಅವಶ್ಯಕತೆಗೆ ಪೂರೈಕೆಯಾಗುತ್ತಿದೆ. ಈ ನೀರನ್ನು ನಿಲ್ಲಿಸಿದ್ರೆ ಪಾಕಿಸ್ತಾನ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಈಗ ಈ ಕುರಿತು ಮಾತನಾಡಿರುವ ಸಚಿವ ನಿತಿನ್ ಗಡ್ಕರಿ, ಈ ಮೂರೂ ನದಿಗಳ ನೀರನ್ನು ನಾವೇ ಬಳಸಿಕೊಂಡು, ಯುಮನಾ ನದಿಗೆ ತಿರುಗಿಸಿದ್ರೆ ಯಮುನೆಯ ಪುನಶ್ಚೇಃತನಕ್ಕೂ ನೆರವಾಗಲಿದೆ ಎಂದು ತಿಳಿಸಿದ್ದಾರೆ.ನಮ್ಮ ಸೈನಿಕರ ರಕ್ತವನ್ನು ಹರಿಸುವ ದೇಶಕ್ಕೆ ನೀರು ಕೊಡುವುದೇ ಇರುವುದರಿಂದ ನಮ್ಮ ಮಾನವೀಯತೆಗೆ ಯಾವುದೇ ಧಕ್ಕೆ ಬರದು.

ಈ ನಡುವೆ ಜಮ್ಮು ಕಾಶ್ಮೀರದಲ್ಲಿದ್ದ ಕಾಫೀರರಿಂದ ನಮ್ಮ ಸೈನಿಕರನ್ನು ಉಳಿಸಿಕೊಳ್ಳಲು ಸರಕಾರ ಕಣಿವೆ ರಾಜ್ಯದ ಯೋಧರಿಗೆ ವಿಮಾನಯಾನ ಸೌಕರ್ಯವನ್ನು ಒದಗಿಸುವ ಕೆಲಸವನ್ನೂ ಕೂಡ ನಮ್ಮ ಕೇಂದ್ರ ಸರಕಾರ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನ್ವಯ್ ನಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳುತ್ತಿದ್ದ ನಿರಾಯುಧ ಯೋಧರ ಮೇಲೆ ನಡೆದ ಭೀಕರ ದಾಳಿ ಬಳಿಕ ಸೇನೆ ಮಹತ್ತರವಾದ ಈ ನಿಯಮವನ್ನು ಜಾರಿಗೆ ತಂದಿದೆ. ಪುಲ್ವಾಮ ಉಗ್ರ ದಾಳಿಯ ಬೆನ್ನಲ್ಲೇ ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ವಿಮಾನಯಾನ ಸೌಕರ್ಯ ಕಲ್ಪಿಸಿದೆ‌. ಕೇಂದ್ರ ಸಶಸ್ತ್ರ ಪೋಲಿಸ್ ಪಡೆಗಳ ಯೋಧರು ಊರಿಗೆ ತೆರಳುವಾಗ ಮತ್ತು ಕರ್ತವ್ಯಕ್ಕೆ ಮರಳುವಾಗ ವಾಣಿಜ್ಯ ವಿಮಾನಗಳಲ್ಲಿ ಸಂಚರಿಸಲು ಗೃಹ ಸಚಿವಾಲಯ ಅವಕಾಶ ಕಲ್ಪಿಸಿದೆ. ಭಾರತದಲ್ಲಿದ್ದುಕೊಂಡೇ ಉಗ್ರರಿಗೆ ಸಹಾಯ ಮಾಡುತ್ತಿದ್ದ ಅನೇಕ ಕಾಶ್ಮೀರಿಗಳಿಂದ ನಮ್ಮ ನಮ್ಮ ಸೈನಿಕರನ್ನು ರಕ್ಷಿಸಿಕೊಳ್ಳಬೇಕಾದದ್ದು ನಮ್ಮ ಸರಕಾರದ ಆದ್ಯ ಕರ್ತವ್ಯವಾಗಿತ್ತು ಅದನ್ನೇ ಈ ಸರಕಾರ ಮಾಡಿದ್ದು.

ಒಟ್ಟಿನಲ್ಲಿ ಪಾಕಿಸ್ತಾನವನ್ನು ಯುದ್ಧರಂಗದಲ್ಲಿ ಹಾಗೂ ರಾಜತಾಂತ್ರಿಕವಾಗಿ ಮಗ್ಗಲು ಮುರಿಯುವುದರಲ್ಲಿ ನಮ್ಮ ಕೇಂದ್ರ ಸರಕಾರ ಪರಿಣಾಮಕಾರಿಯಾಗಿ ಯಶಸ್ಸನ್ನು ಪಡೆದಿದೆ. ಇದರ ಜೊತೆಗೆ ಇನ್ನೊಂದು ಕೆಲಸವಾಗಬೇಕು ಅದು ಈ ಸೊ ಕಾಲ್ಡ್ “ಶಾಂತಿ ಧೂತ”ರ (ಪೀಸ್ ಡವ್ಸ್)ಮಗ್ಗಲು ಮುರಿಯುವುದು. ಯಾರು ಈ ಶಾಂತಿ ಧೂತರು?ಆಜಾದಿಯ ಘೋಷಣೆ ಕೂಗುತ್ತಾ ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗಿರುವ ಈ ಶಾಂತಿ ಧೂತರುಗಳನ್ನು ಮಟ್ಟ ಹಾಕುವ ಈ ಪ್ರೋಸೆಸ್ ನಲ್ಲಿ ಮೋದಿ ಇನ್ನೂ ಸರಿಯಾಗಿ ಯಶಸ್ವಿಯಾಗಲಿಲ್ಲ. ಹಿಂದಿನ ಸರಕಾರಗಳು ಇದ್ದಾಗ ಒಂದು ಹೊಗಳು ಭಟ ಗುಂಪು ಸರ್ಕಾರವನ್ನು ನಿಯಂತ್ರಿಸುವಷ್ಟು ಬೆಳೆದಿತ್ತು. ಇವರನ್ನು ವ್ಯವಸ್ಥಿತವಾಗಿ ಬೆಳೆಸುವ ಕೆಲಸವನ್ನು ಮಾಡಿದ್ದು ಕೂಡ ಒಂದು ಮನೆತನ. ಹಾಗಾದರೆ ಇವರೆಲ್ಲ ಯಾವ ರೀತಿಯಲ್ಲಿ ದೇಶಕ್ಕೆ ಮಾರಕವಾಗಿದ್ದಾರೆ ? ಬಡವರನ್ನು ಮತ್ತು ದಲಿತರನ್ನು ಉದ್ಧಾರ ಮಾಡುತ್ತೇವೆ ಎಂದು ಒಂದಿಷ್ಟು ಸ್ವಯಂ ಸೇವಾ ಸಂಸ್ಥೆಗಳನ್ನು ಕಟ್ಟಿಕೊಂಡು, ಮಾಧ್ಯಮ ಸಂಸ್ಥೆಗಳಲ್ಲಿ ವಿಷ ಮನಸ್ಸಿನ ಪತ್ರಕರ್ತರುಗಳ ವೇಷ ಹಾಕಿಕೊಂಡು,ಲಿಬರಲ್ಸ್ ಎಂಬ ನಾಮಫಲಕಗಳನ್ನು ಕುತ್ತಿಗೆಗೆ ನೇತಾಕಿಕೊಂಡು, ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳ ಸಂಘಟನೆಗಳನ್ನು ಕಟ್ಟಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಅಕೌಂಟ್ಗಳ ಮೂಲಕ ದೇಶವಿರೋಧಿ ಹ್ಯಾಶ್ ಟ್ಯಾಗ್ ಗಳನ್ನು ಟ್ರೆಂಡ್ ಮಾಡಿಕೊಂಡು ಹೀಗೆ ಇನ್ನೂ ಅನೇಕ ವಿಧಗಳಲ್ಲಿ ಭಾರತವನ್ನು ವಿಶ್ವದ ಎಲ್ಲ ರಾಷ್ಟ್ರಗಳ ಎದುರಿಗೆ ತಲೆತಗ್ಗಿಸುವಂತಹ ವ್ಯವಸ್ಥಿತ ಸಂಚನ್ನು ಇವರುಗಳು ರೂಪಿಸುತ್ತಿದ್ದಾರೆ.ಮೋದಿ ಅಧಿಕಾರಕ್ಕೆ ಬಂದ ಮೇಲೆ ಅರವತ್ತು ವರ್ಷ ಆಳಿದವರು ನಿರ್ಮಿಸಿಕೊಟ್ಟಿದ್ದ ಕೋಟೆಯೊಳಗೆ ಗಡದ್ಧಾಗಿ ತಿಂದು ಮಲಗಿದ್ದವರಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಮಣಿಶಂಕರ್ ಅಯ್ಯರ್ ಅಂತಹಾ ಹೊಲಸು ರಾಜಕಾಣಿ ಪಾಕಿಸ್ತಾನದ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತ ಸಂವಿಧಾನಿಕವಾಗಿ ಚುನಾಯಿತಗೊಂಡಿರುವ ಸರ್ಕಾರವನ್ನು ಹೀಯಾಳಿಸುತ್ತ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ನಿರಂತರ ಶ್ರಮಿಸುತ್ತಿದ್ದಾರೆ, ಸುದೀಂದ್ರ ಕುಲಕರ್ಣಿಯೆಂಬ ಸ್ವಯಂ ಘೋಷಿತ ಲೇಖಕ ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ರತ್ನಗಂಬಳಿ ಹಾಸಿ ತನ್ನ ಪುಸ್ತಕ ಬಿಡುಗಡೆಗೆ ಸ್ವಾಗತಿಸುತ್ತಾನೆ, ಪಾಕಿಗಳ ದಾಳಿಗೆ ಪ್ರತಿದಾಳಿ ನಡೆಸಲು ಸನ್ನದ್ಧವಾಗಿರುವ ಸೇನೆಗೆ ಬಿಟ್ಟಿ ಉಪದೇಶ ನೀಡುವ ಕೆಲಸವನ್ನು ನವಜೋತ್ ಸಿಂಗ್ ಸಿದ್ದು ಮಾಡುತ್ತಾನೆ, ಜಿನೇವಾ ಒಪ್ಪಂದದ ಪ್ರಕಾರ ಅಭಿನಂದನ್ ಅವರನ್ನು ಕಳುಹಿಸಿಕೊಟ್ಟ ಪಾಕಿಸ್ತಾನವನ್ನು ರಾಜ್ದೀಪ್ ಹೊಗಳುತ್ತಾನೆ, ಏರ್ ಸ್ಟ್ರೈಕ್ ಮಾಡಿ ಉಗ್ರರ ನೆಲೆಯನ್ನು ಧ್ವಂಸ ಮಾಡಿದ ಸೇನೆಯ ಬಗ್ಗೆ ದಿಗ್ವಿಜಯ್ ಸಿಂಗ್ ತುಚ್ಛವಾಗಿ ಮಾತನಾಡುತ್ತಾನೆ ಜೊತೆಗೆ ಇವರನ್ನೆಲ್ಲರನ್ನೂ ಪಾಕಿಸ್ತಾನೀಯರು ಅವರ ದೇಶದಲ್ಲಿ ಹೊಗಳುತ್ತಾರೆ. ಇದೆಲ್ಲ ಸಾಧ್ಯವಾಗುತ್ತಿರುವುದು ಭಾರತದಲ್ಲಿ ಮಾತ್ರ.
ಈಗ ಮತ್ತೆ ಚುನಾವಣೆ ಬಂದಿದೆ ಮೋದಿ ವಿರೋಧಿಸುವುದನ್ನೇ ಉದ್ಯೋಗ ಮಾಡಿಕೊಂಡು ಕೆಲವರು ಕೆಲಸ ಮಾಡುತ್ತಿದ್ದಾರೆ ನಾವು ಇವರಿಗೆಲ್ಲ ಉತ್ತರ ಕೊಡಬೇಕಾದ ಸಮಯ ಇದು. ಇವರ ಹಾರಟಕ್ಕೆ ,ಡಬಲ್ ಸ್ಟಾಂಡರ್ಡ್ ರಾಜಕಾರಣ ಕ್ಕೆ ಮೇ 23 ರ ಫಲಿತಾಂಶ ಉತ್ತರವಾಬೇಕು. ಮೋದಿ ಮತ್ತೊಮ್ಮೆ ಎನ್ನಲು ಹಲವು ಕಾರಣಗಳ ನಡುವೆ ಶತ್ರು ರಾಷ್ಟ್ರದ ನಡು ಮುರಿದಿದ್ದು ಕೂಡ ಪ್ರಮುಖ ಅನ್ನುವುದನ್ನು ನಾವು ಅರಿತು ಈ ಬಾರಿ ಮತ ಚಲಾಯಿಸಬೇಕಿದೆ.ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾದರೆ ಹಣವನ್ನು ತಿಂದು ತೇಗಿದ ಕುಟುಂಬ ಬೀದಿಯಲ್ಲಿ ನಿಂತು ಚೀರಾಡುವ ಕಾಲ ಬರಬಹುದು. ಬೇಲ್ ಮೇಲೆ ಓಡಾಡುತ್ತಿರುವ ಅಮ್ಮ ಮಗ ಶಾಶ್ವತವಾಗಿ ಜೈಲಿನ ಕಂಬಿ ಎಣಿಸಬಹುದು, ಕುಟುಂಬ ರಾಜಕಾರಣವೇ ಅತ್ಯುನ್ನತ ಸಾಧನೆ ಎಂದುಕೊಂಡಿರುವ ಅಪ್ಪ ಮಕ್ಕಳ ಪಕ್ಷ ನೆಲಕಚ್ಚಬಹುದು, ದೇಶದ ಪ್ರಧಾನಿಯ ಬಗ್ಗೆ ತುಚ್ಛವಾಗಿ ಮಾತನಾಡುವ ಮಾಜಿ ಮುಖ್ಯಮಂತ್ರಿಯ ಸೊಲ್ಲಡಗಬಹುದು, ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಅನ್ನ ತಿಂದು ತಾಯ್ಗಂಡತನದ ಕೆಲಸ ಮಾಡುತ್ತಿರುವ ಆಂತರಿಕ ಭಯೋತ್ಪಾದಕರ ಹಾರಾಟಕ್ಕೊಂದು ಅಂತ್ಯಕಾಣಬಹುದು. ಹೀಗಾಗಿ ನಮ್ಮ ಮತವನ್ನು ಮೋದಿಯವರಿಗೆ ಮೀಸಲಿಡೋಣ. ಮೋದಿ ಮತ್ತೊಮ್ಮೆ ಅನ್ನೋಣ

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!