ಅಂಕಣ

ಗದ್ದಾರ್’ಗಳಿಗೂ ಚಾದರ ಅರ್ಪಿಸುವ ಭೋಳೇತನ

2010ರ ನವೆಂಬರಿನಲ್ಲಿ ಇಂಗ್ಲೆಂಡಿನ ಹೃದಯ ಭಾಗದ ದಕ್ಷಿಣ ಯಾರ್ಕ್ ಶೈರ್’ನ ರೋದೆರ್ ಹ್ಯಾಮ್ನಲ್ಲಿ ಅಪ್ರಾಪ್ತ ಹುಡುಗಿಯರ ಮೇಲಿನ ಲೈಂಗಿಕ ಶೋಷಣೆಯ ಪ್ರಕರಣ ದಾಖಲಿಸಿ ಐದು ಜನರನ್ನು ಕಾರಾಗೃಹಕ್ಕಟ್ಟಲಾಯಿತು. ತಮ್ಮಲ್ಲಿನ ಅಪಸವ್ಯಗಳನ್ನು ಜಗತ್ತಿನ ಮುಂದೆ ಮುಚ್ಚಿಡಲು ಯತ್ನಿಸುವ ಪಾಶ್ಚಾತ್ಯರ ಧೋರಣೆಯಿಂದಾಗಿ ಅದೇನು ದೊಡ್ಡ ಸುದ್ದಿಯಾಗಲೇ ಇಲ್ಲ. ಆದರೆ ಎರಡು ವರ್ಷದ ಬಳಿಕ 2012ರ ಸೆಪ್ಟೆಂಬರಿನಲ್ಲಿ ಆಂಡ್ರ್ಯೂ ನೋರ್ಫೋಕ್ ಎಂಬ ಟೈಮ್ಸ್ ಪತ್ರಕರ್ತ, ಪೊಲೀಸರ ಗುಪ್ತ ವರದಿಯನ್ನಾಧರಿಸಿ ಜಗತ್ತನ್ನೇ ಬೆಚ್ಚಿ ಬೀಳಿಸಿದ ಪ್ರಕರಣವೊಂದನ್ನು ಬಯಲಿಗೆಳೆದ. ವಿಚಿತ್ರವೆಂದರೆ ಅಷ್ಟು ಹೊತ್ತಿಗೆ ಕಳೆದ ಹದಿನಾರು ವರ್ಷದಲ್ಲಿ 1400 ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಆ ನಗರದಲ್ಲಿ ದಾಖಲಾಗಿದ್ದವು. ಗಮನಿಸಿ ಅವು ದಾಖಲಾದ ಪ್ರಕರಣಗಳು! ಮುಚ್ಚಿ ಹೋದವು ಇನ್ನೆಷ್ಟೋ? ಮಾಧ್ಯಮಗಳಲ್ಲಿ ವರದಿಯಾಗಿ ಜನ ಇನ್ನೇನು ಮೈಮೇಲೆ ಉಗುಳುವುದೊಂದು ಬಾಕಿ ಎನ್ನುವ ಸಮಯದಲ್ಲಿ ಬುಡಕ್ಕೆ ಬೆಂಕಿ ಬಿದ್ದವರಂತೆ ಕಾರ್ಯಾಚರಣೆಗೈದ ಪೊಲೀಸರು ಕೆಲವರನ್ನು ಬಂಧಿಸಿ, ಜನ ಹಾಗೂ ಮಾಧ್ಯಮಗಳನ್ನು ತೆಪ್ಪಗಾಗಿಸಲು ಪ್ರಯತ್ನಿಸಿದರು. ಹಾಗಾದರೆ ಅಷ್ಟು ವರ್ಷ ಆ ಪ್ರಕರಣಗಳೆಲ್ಲಾ ಮುಚ್ಚಿ ಹೋದದ್ದು ಯಾಕೆ? ಜಗತ್ತಿನ ಮೂಲೆ ಮೂಲೆಯ ಕ್ಷುಲ್ಲಕ ಸುದ್ದಿಯನ್ನೂ ನಾಚಿಕೆಯಿಲ್ಲದೆ ದೊಡ್ಡದು ಮಾಡಿ ಪ್ರಕಟಿಸುವ ಬಿಬಿಸಿಗೆ ಇಷ್ಟೊಂದು ದೊಡ್ಡ ಪ್ರಕರಣ ಅರಿವಾಗದೇ ಹೋಯಿತೇ? ಮಂಗಳೂರಿನ ಪಬ್ಬಿನಲ್ಲಿ ಪಾರ್ಟಿ ಮಾಡುತ್ತಿದ್ದ ಹುಡುಗಿಗೆ ದಾರಿ ತಪ್ಪಬೇಡ ಎಂದು ಒಂದೇಟು ಬಿಗಿದದ್ದನ್ನೇ ಭಯಂಕರ ಅಪರಾಧ ಎನ್ನುತ್ತಾ ದೊಡ್ಡ ಗಂಟಲಲ್ಲಿ ಅರಚಿದ್ದ ವಿದೇಶೀ ಮಾಧ್ಯಮಗಳಿಗೆ ಸಾಲು ಸಾಲು ಅತ್ಯಾಚಾರದಂತಹ ಈ ಭಯಾನಕ ಪ್ರಕರಣದ ಬಗ್ಗೆ ಮಾತಾಡಲು ನಾಲಿಗೆ ತಿರುಗಲಿಲ್ಲವೇಕೆ? ಇಂಗ್ಲೆಂಡ್ ಸೂರ್ಯ ಮುಳುಗದ ಸಾಮ್ರಾಜ್ಯ ಎನ್ನುವ ಭಯವೇ? ಹಾಗೇನೂ ಇಲ್ಲ; ಅಲ್ಲಿ 1945ರ ವೇಳೆಗೆ ಸೂರ್ಯ ಅಸ್ತಂಗತನಾಗಿ ಬೆಳಗಿನ ಚಹಾಕ್ಕೂ ತತ್ವಾರವಾಗಿತ್ತು. ಮತ್ತೇನು? ಒಂದೇ. ಇಸ್ಲಾಮೋಫೋಬಿಯಾ!

ಈ ಎಲ್ಲಾ ಪ್ರಕರಣದ ಹಿಂದೆ ಇದ್ದವರು ಮುಸ್ಲಿಮರು. ಅದಕ್ಕಾಗಿಯೇ ತಾನು ಬದುಕಿಕೊಳ್ಳಲು ಎಂದಿನ ತನ್ನ ಸೆಕ್ಯುಲರ್ ಬಳ್ಳಿಗೆ ಜೋತು ಬಿದ್ದಿತ್ತು ಬಿ.ಬಿ.ಸಿ. ಉಳಿದ ವಿದೇಶೀ ಮಾಧ್ಯಮಗಳು ಕೂಡಾ. ಇದು ಒಂದು ಜನಾಂಗವನ್ನೇ ಅಳಿಸುವ ಪ್ರಯತ್ನ, ಮುಸ್ಲಿಂ ಮತಾಂಧತೆಯ ಅತಿರೇಕ ಎನ್ನುವುದನ್ನು ಪೊಲೀಸರು ಅಥವಾ ಬಿಬಿಸಿಯಂತಹಾ ಮಾಧ್ಯಮಗಳು ಅಲ್ಲಗೆಳೆಯಬಹುದು. ಆದರೆ ಅದೇ ಸತ್ಯ. ಈ ಎಲ್ಲಾ ಪ್ರಕರಣಗಳ ಹಿಂದಿರುವವರು ಪಾಕಿಸ್ತಾನೀ ಮೂಲದವರು ಎನ್ನುವುದೂ ಪೊಲೀಸರಿಗೆ ತಿಳಿದಿದೆ. ಈ ಎಲ್ಲಾ ಅಪಸವ್ಯಗಳನ್ನು ತಡೆಯಲೆಂದು ಯಾವ ಸಮಿತಿಯನ್ನು ಪೊಲೀಸ್ ಇಲಾಖೆ ಸ್ಥಾಪಿಸಿತ್ತೋ ಅದಕ್ಕೊಬ್ಬ ಇಸ್ಲಾಂ ಮತೀಯನನ್ನೇ ಮುಖ್ಯಸ್ಥನಾಗಿ ನೇಮಿಸಿತ್ತು. ಅಲ್ಲಿಗೆ ಪ್ರಕರಣ ಹಳ್ಳ ಹಿಡಿಯುವುದು ನಿಶ್ಚಿತವಾಗಿತ್ತು. 2013ರಲ್ಲಿ ಆತ ಆರೋಪಿಗಳೊಂದಿಗೆ ಸಂಬಂಧ ಹೊಂದಿರುವ ಆರೋಪದ ಮೇಲೆ ಜನರ ಆಕ್ರೋಶಕ್ಕೆ ಗುರಿಯಾಗಿ ಕೆಳಗಿಳಿದ ಬಳಿಕವೇ ಘಟನೆಯ ಗಂಭೀರತೆ ಬೆಳಕಿಗೆ ಬಂದದ್ದು. ಇತ್ತೀಚಿನ ವರದಿ ಪ್ರಕಾರ ದಾಖಲಾದ ಪ್ರಕರಣಗಳ ಸಂಖ್ಯೆ 1500 ದಾಟಿದೆ. ಭಾರತದಲ್ಲಿ ಹೇಗೆ ‘ಲವ್ ಜಿಹಾದ್’ ಹೆಸರಲ್ಲಿ ಹಿಂದೂ ರಕ್ತವನ್ನು ಅಪವಿತ್ರಗೊಳಿಸಲಾಗುತ್ತದೆಯೋ, ಅದೇ ರೀತಿ ಇಂಗ್ಲೆಂಡಿನಲ್ಲಿ ಮತಾಂಧ ರಕ್ಕಸಪಡೆ ಆಡಿದ‘ಗ್ರೂಮಿಂಗ್ ರಿಂಗ್’ಎಂಬ ಆಟ ಇದು. ಪ್ರಕರಣ ಬೆಳಕಿಗೆ ಬಂದ ನಂತರವೂ ಬಿಬಿಸಿ ಮುಸ್ಲಿಮರನ್ನು ಹೆಸರಿಸಿಲ್ಲ. ಅದು ಇಂದಿಗೂ ಹೇಳುವುದು ಏಷ್ಯನ್ನರೆಂದೇ!

ಅದು ಇಂಗ್ಲೆಂಡಿನ ಕಥೆ. ಹಿಂದೊಮ್ಮೆ ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಮೋಸದಿಂದಲೇ ವಶಪಡಿಸಿಕೊಂಡು ಆಳಿ ದೊಡ್ಡಣ್ಣನಾಗಿ ಮೆರೆದ ಗ್ರೇಟ್ ಬ್ರಿಟನ್ನಿನಂತಹ ಬ್ರಿಟನ್ನಿಗೂ ಮತಾಂಧತೆಯೊಳಗಿನ ಕುಟಿಲತೆ ಅರಿವಾಗಲಿಲ್ಲ. ಹಾಗೆಂದೇ ಅವರನ್ನು ಒಳಗೆ ಬಿಟ್ಟುಕೊಂಡು ತನ್ನನ್ನು ತಾನು ಸುಟ್ಟುಕೊಳ್ಳುತ್ತಾ ಸಾಗಿದೆ ಇಂಗ್ಲೆಂಡ್. ಆದರೆ ಮುಸ್ಲಿಂ ಮತಾಂಧತೆಯ ಈ ಕ್ರೌರ್ಯವೇನು ಹೊಸದೇ? ಅವರೆಂದಾದರೂ ಸಭ್ಯ ಸಮಾಜದ ಭಾಗವಾಗಿದ್ಡಾರೆಯೇ? ಇತಿಹಾಸ ಇಲ್ಲವೆಂದೇ ಉತ್ತರಿಸುತ್ತದೆ. ಸೆಕ್ಯುಲರ್ ಮುಖವಾಡಕ್ಕೆ ಮಾತ್ರ ಅವರಲ್ಲಿ ಶಾಂತಿ ಕಾಣುತ್ತದೆ; ಅಮಾಯಕರು ಕಾಣಿಸುತ್ತಾರೆ; ಸಮಾಜ ಸರ್ವಸ್ವವನ್ನು ಧಾರೆಯೆರೆದಿದ್ದರೂ ಏನೂ ಸಿಗದ ನತದೃಷ್ಟರೇ ಕಾಣಿಸುತ್ತಾರೆ. ಹೇಗೆ ಇಂಗ್ಲೆಂಡಿನಲ್ಲಿ ಜನಾಂಗವನ್ನೇ ಅಶುದ್ಧಗೊಳಿಸಿ ನಾಶಮಾಡುವ ಹುನ್ನಾರ ನಡೆದಿತ್ತೋ ಅಂತಹುದು ಭಾರತದಲ್ಲಿ ಎಷ್ಟೊಂದು ನಡೆದಿತ್ತು! ಮೊಘಲರ ಕಾಲದಲ್ಲಿ, ಬ್ರಿಟಿಷರ ಸೆರಗಿನ ರಕ್ಷಣೆಯಲ್ಲಿ, ಮುಂದೆ ಸ್ವತಂತ್ರ ಭಾರತದಲ್ಲಿ ಪರಿವಾರವೊಂದರ ಕೃಪಾಕಟಾಕ್ಷದಲ್ಲಿ!

ಅದೆಲ್ಲಾ ಹಳೆಯ ಕಥೆ; ಈಗ ಹಾಗಿಲ್ಲ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ರೋದೆರ್ ಹ್ಯಾಮಿನಲ್ಲಿ ನಡೆದ ಸರಣಿ ಪ್ರಕರಣಗಳಿಗಿಂತ ಐದು ವರ್ಷ ಮುಂಚೆ ಭಾರತದ ಅಜ್ಮೀರ್’ನಲ್ಲೂ ಅಂತಹುದೇ ಪ್ರಕರಣಗಳು ನಡೆದಿದ್ದವು. ಯಥಾಪ್ರಕಾರ ಪೊಲೀಸ್ ಇಲಾಖೆ ಪ್ರಕರಣದ ದೂರು ಪತ್ರಗಳನ್ನು ಕಾಲ ಕೆಳಗೆ ಹಾಕಿ ಕೂತಿತ್ತು. ಮಾಧ್ಯಮಗಳು ತಮ್ಮನ್ನು ತಾವು ಮಾರಿಕೊಂಡಿದ್ದವು. ಕೆಲವು ಕಾಲೇಜು ಯುವತಿಯರು, ಹಲವು ಶಾಲಾ ಬಾಲಕಿಯರ ಸಹಿತ 500ಕ್ಕೂ ಹೆಚ್ಚು ಹುಡುಗಿಯರು ದೌರ್ಜನ್ಯಕ್ಕೆ ಒಳಗಾದರು. ಬಾಲಕಿಯರನ್ನು ಲೈಂಗಿಕವಾಗಿ ಶೋಷಣೆಗೊಳಿಸಿ ಆ ಫೋಟೋಗಳನ್ನು ಬಳಸಿ ಬ್ಲ್ಯಾಕ್ ಮೈಲ್ ಮಾಡಿ ಅತ್ಯಾಚಾರವೆಸಗಲಾಗುತ್ತಿತ್ತು. ಇದನ್ನು ತಡೆಯುವ ಬದಲು ಸ್ಥಳೀಯ ಮಾಧ್ಯಮಗಳು ಆ ಚಿತ್ರಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಸಂತ್ರಸ್ಥೆಯರನ್ನು ಮತ್ತಷ್ಟು ಕುಗ್ಗಿಸುವ ನೀಚ ಕಾರ್ಯ ಕೈಗೊಂಡವು. ಇದರ ಬೆನ್ನು ಹತ್ತಿ ಹೋದ ಓರ್ವ ಪತ್ರಕರ್ತ ಹಾಗೂ ಪೊಲೀಸ್ ಇಲಾಖೆ ಸ್ವಲ್ಪವೇ ಸಮಯದಲ್ಲಿ ತಮ್ಮ ಕಾರ್ಯವನ್ನು ನಿಲ್ಲಿಸಿಬಿಟ್ಟರು. ಸ್ಥಳೀಯ ರಾಜಕಾರಣಿಗಳು ತನಿಖೆ ಮುನ್ನಡೆಯದಂತೆ ತಡೆಯೊಡ್ಡಿದರು. ಕಾರಣ ಅಪರಾಧಿಗಳು ಆ ಒಂದು ಕುಟುಂಬದವರಾಗಿದ್ದರು…ಅದು ಖಾದಿಮ್ಸ್’ಗಳ ಪರಿವಾರ; ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಮೊದಲ ಶಿಷ್ಯರು ಎಂದು ಇತಿಹಾಸದಲ್ಲಿ ದಾಖಲಾದ ಅಜ್ಮೀರ್ ದರ್ಗಾದ ಉಸ್ತುವಾರಿ ನೋಡಿಕೊಳ್ಳುವ ಖಾದಿಮ್ ಪರಿವಾರ!

ಅತ್ಯಾಚಾರಿಗಳೆಲ್ಲಾ ಈ ಪರಿವಾರಕ್ಕೆ ಸೇರಿದವರು ಹಾಗೂ ಮುಸ್ಲಿಮರು ಎಂದು ಗೊತ್ತಾದುದೇ ತಡ ಪ್ರಕರಣ ಹಳ್ಳ ಹಿಡಿಯಿತು. ಮರಣ ಭೀತಿಯಿಂದ ಸಾಕ್ಷಿಗಳು ಮುಗುಮ್ಮಾಗುಳಿದರು. ಅಂತೂ ಇಂತೂ ಹೇಗೋ ಸಾಗಿದ ತನಿಖೆಯಿಂದಾಗಿ 1998ರಲ್ಲಿ ರಾಜಸ್ಥಾನದ ಉಚ್ಛ ನ್ಯಾಯಾಲಯ ಎಂಟು ಜನಕ್ಕೆ ಜೀವಾವಧಿ ಶಿಕ್ಷೆ ವಿಧಿಸಿತು. ಸರ್ವೋಚ್ಛ ನ್ಯಾಯಾಲಯ ಈ ಶಿಕ್ಷೆಯನ್ನು ಹತ್ತು ವರ್ಷಕ್ಕೆ ಇಳಿಸಿತು. ಇದು ನಮ್ಮ ನ್ಯಾಯದಾನದ ಪರಿ! ಇದರ ನಡುವೆ ಈ ಪ್ರಕರಣದ ಮುಖ್ಯ ಅರೋಪಿ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಫಾರೂಕ್ ಚಿಸ್ತಿ ಮಾನಸಿಕ ಅಸ್ವಸ್ಥನೆಂದು ನಾಟಕವಾಡಿ ಬಚಾವಾಗಲು ಯತ್ನಿಸಿದ. 2007ರಲ್ಲಿ ಅವನ ಮೇಲಿನ ಶಿಕ್ಷೆಯನ್ನು ರಾಜಸ್ಥಾನದ ಉಚ್ಛ ನ್ಯಾಯಾಲಯ ಮತ್ತೆ ಎತ್ತಿ ಹಿಡಿಯಿತು. ಮೊನ್ನೆ ಫೆಬ್ರವರಿ 15ಕ್ಕೆ ಹದಿನೆಂಟನೆಯ ಆರೋಪಿ ಸುಹೈಲ್ ಚಿಸ್ತಿ ಶರಣಾಗುವುದರೊಂದಿಗೆ ಇಪ್ಪತ್ತಾರು ವರ್ಷಗಳ ಬಳಿಕವಾದರೂ ಸಂತ್ರಸ್ಥರಿಗೆ ನ್ಯಾಯ ಒದಗಿಸಿದ ನಮ್ಮ ನ್ಯಾಯ ವ್ಯವಸ್ಥೆಗೊಮ್ಮೆ ಉಘೇ ಉಘೇ ಎನ್ನಬೇಕು! ಅಷ್ಟು ತ್ವರಿತವಾಗಿದೆ ನಮ್ಮ ನ್ಯಾಯದಾನ! ನಮ್ಮ ಕಾನೂನು ಎಷ್ಟು ಪ್ರಬಲವಾಗಿದೆಯೆಂದರೆ ಸುಹೈಲ್ ಹಾಗೂ ಸಲೀಮ್ ಚಿಸ್ತಿಯನ್ನು ಬಿಟ್ಟು ಉಳಿದವರೆಲ್ಲರೂ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಅಜ್ಮೀರ್ ದರ್ಗಾದಲ್ಲಿ ಮೆರೆಯುತ್ತಿದ್ದಾರೆ! ಹಿಂದೂಗಳು ಮತ್ತೆ ಅಲ್ಲೇ ಚಾದರ ಅರ್ಪಿಸುತ್ತಲೇ ಇದ್ದಾರೆ!

ಹಾಂ ಈ ಕುಟುಂಬದ ಗುರುವಿನ ಬಗೆಗೂ ಹೇಳಬೇಕು. ಮೊಯಿನುದ್ದೀನ್ ಚಿಸ್ತಿ. ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನ ಸಹಾಯಕನಾಗಿ ಬಂದ ಸೂಫಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಘೋರಿಯೇನೋ ಎರಡೂ ಬಾರಿ ಪಲಾಯನ ಮಾಡಿದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಮುಂದೆ ಘೋರಿಗೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲಲು ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಅದಕ್ಕೆ ಈ ಚಿಸ್ತಿಯ ಪ್ರೇರಣೆಯಿತ್ತು. ಇಂದು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಚಾದರ ಅರ್ಪಿಸಿ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು. ಗುರುವೇ ಅಂತಹವನು! ಇರಲು ಅಶನ, ವಸನ, ವಸತಿ ಕೊಟ್ಟ ಭಾರತದ ವರ ಪುತ್ರನ ಬೆನ್ನಿಗೆ ಇರಿದವನು! ಇನ್ನು ಆ ಮನೋಭಾವನೆ ಆ ಪರಿವಾರಕ್ಕೆ ಬಾರದೇ ಇದ್ದೀತೇ?

ಅಜ್ಮೀರ್ ಪ್ರಕರಣದಲ್ಲಿ ಬಂಧಿಸಲ್ಪಟ್ಟವರು ಹದಿನೆಂಟು ಜನ ಮಾತ್ರ. ಉಳಿದವರು ತಪ್ಪಿಸಿಕೊಂಡುಬಿಟ್ಟರು. ರೋದೆರ್ ಹ್ಯಾಮಿನಲ್ಲಾದಂತೆ ಇದೊಂದು ಪೂರ್ವಯೋಜಿತ ಕೃತ್ಯವೇ ಆಗಿತ್ತು. ಹಿಂದೂಗಳನ್ನು ಅಕ್ಷರಶಃ ನಾಶ ಮಾಡುವುದೇ ಇದರ ಉದ್ದೇಶವಾಗಿತ್ತು. ಇಂತಹ ಕೃತ್ಯ ಇಂದು ಲವ್ ಜಿಹಾದ್ ಸ್ವರೂಪ ಪಡೆದು ಹಲವು ಕಡೆ ಹಬ್ಬಿದೆ. ಇದನ್ನು ಸಮರ್ಥಿಸಿಕೊಳ್ಳುವ ಸೆಕ್ಯುಲರು ದಂಡೇ ಇದೆ. ನಮ್ಮ ನ್ಯಾಯಾಧೀಶರುಗಳು ಲವ್ ಜಿಹಾದಿನ ಅರಿವಿದ್ದೂ ಬೆಪ್ಪರಂತೆ ತಮ್ಮ ಪುಸ್ತಕದ ಬದನೆಕಾಯಿಯ ನ್ಯಾಯವನ್ನೇ ಕೊಡುತ್ತಾ ಲವ್ ಜಿಹಾದ್ ಸಂತ್ರಸ್ಥೆಯರನ್ನು ಜಿಹಾದಿಗಳ ಜೊತೆಯೇ ಕಳುಹುತ್ತಿದ್ದಾರೆ. ಚಾಣಕ್ಯನಂತಹ ಸಮರ್ಥ ರಾಜ್ಯ-ಅರ್ಥ-ನ್ಯಾಯ ಶಾಸ್ತ್ರಜ್ಞನಿದ್ದ ದೇಶದ ದುರವಸ್ಥೆ ಇದು.

(ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಿತ ಬರಹ)

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!