ಪ್ರಚಲಿತ

ರಾಜಕೀಯ ಹಂತಕ ಸಿದ್ದರಾಮಯ್ಯ

ರಾಜಕೀಯ ಹಂತಕ ಸಿದ್ದರಾಮಯ್ಯ, ಹೀಗೆಂದು ಹೇಳಿದವರು ಬೇರೆಯಾರೋ ಸಾಮಾನ್ಯರಲ್ಲ. ದಲಿತ ಹೋರಾಟವನ್ನೇ ಜೀವನವಾಗಿಸಿಕೊಂಡ ಶ್ರೀನಿವಾಸ್ ಪ್ರಸಾದ್. ಶ್ರೀನಿವಾಸ್ ಪ್ರಸಾದ್ ಇಂದು ಬಿಜೆಪಿಯಲ್ಲಿರಬಹುದು; ಹಾಗೆಂದ ಮಾತ್ರಕ್ಕೆ ಬಿಜೆಪಿಯಲ್ಲಿರುವುದ್ದೇ ಈ ಹೇಳಿಕೆ ನೀಡಲು ಕಾರಣವಲ್ಲ. ಹಾಗಾದರೆ ಸಿದ್ದರಾಮಯ್ಯ ರಾಜಕೀಯ ಹಂತರಕರೇ? ರಾಜಕೀಯ ಹಂತಕ ಎಂಬುದರ ಅರ್ಥವೇನು ಎಂಬುದನ್ನು ನಾವು ನೋಡಬೇಕು.

ಭಾರತದ ಚಲನೆ ನಿಂತಿರುವುದೇ ರಾಜಕೀಯ ಪಕ್ಷಗಳ ಮೇಲೆ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸರ್ಕಾರ ರಚಿಸುತ್ತವೆ. ದೇಶದ ಉಸಿರೇ ಈ ಸರ್ಕಾರಗಳು. ನಾವು ಯಾವುದನ್ನು ಸಂಸ್ಕೃತಿ ಎನ್ನುತ್ತೇವೆ, ಯಾವುದನ್ನು ಪರಂಪರೆ ಎನ್ನುತ್ತೇವೆ, ಯಾವುದನ್ನು ದೇಸಿ ಎನ್ನುತ್ತೇವೆ ಅದನ್ನು ಕಾಪಾಡುವ ಅಥವಾ ನಾಶಪಡಿಸುವ ಸಂಪೂರ್ಣ ಶಕ್ತಿ ಮತ್ತು ಅಧಿಕಾರ ಸರ್ಕಾರಗಳಿಗಿರುತ್ತವೆ. ಕೆಲವು ಸರ್ಕಾರಗಳು ಭಾರತೀಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋದರೆ ಇನ್ನು ಕೆಲವರು ಅದನ್ನು ಮುರಿಯುತ್ತಾರೆ. ನಿಮಗೊಂದು ವಿಷಯ ನೆನಪಿರಲಿ, ಸಂಸ್ಕೃತಿ, ಪರಂಪರೆಯೆಂದರೆ ಕೇವಲ ಹಬ್ಬ-ಹರಿದಿನಗಳನ್ನು ಆಚರಿಸುವುದು, ದೇವಸ್ಥಾನಗಳಲ್ಲಿ ಪೂಜೆ ಮಾಡುವುದಷ್ಟಕ್ಕೇ ಸೀಮಿತವಾಗುವುದಿಲ್ಲ. ಸಮಾಜದಲ್ಲಿ ಮೌಲ್ಯಗಳನ್ನು ಸ್ಥಾಪಿಸುವ ಮತ್ತು ಸ್ಥಾಪಿತಗೊಂಡ ಮೌಲ್ಯಗಳನ್ನು ಕಾಪಿಡುವ ಕೆಲವೂ ‘ಪರಂಪರೆಯ ಸಂರಕ್ಷಣೆ’ಯ ಮುಂದುವರೆದ ಭಾಗ. ರಾಜ್ಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಹದಗೆಟ್ಟ ಕಾನೂನು ವ್ಯವಸ್ಥೆ, ನಗರಾಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ಕುಸಿತ ಹೀಗೆ ಹತ್ತು ಹಲವು ಸಂಗತಿಗಳು ಸಮಾಜದ ಮೌಲ್ಯವನ್ನು ಕೆಳಕ್ಕೆಳೆಯುತ್ತವೆ. ಸಮಾಜದ ಮೌಲ್ಯಗಳನ್ನು ಕುಸಿಯುವಂತೆ ಮಾಡುವುದು ನರಹತ್ಯೆಗಿಂತಲೂ ಕ್ರೂರವಾದದ್ದು. ಅದನ್ನು ರಾಜಕೀಯ ಕಗ್ಗೊಲ್ಲೆ ಎನ್ನಬಹುದು. ಹೀಗೆ ಮಾಡುವವರನ್ನು ರಾಜಕೀಯ ಹಂತಕರು ಎನ್ನಬಹುದು. ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯರನ್ನು ರಾಜಕೀಯ ಹಂತಕ ಎಂದು ಕರೆದದ್ದು ಇದೇ ಕಾರಣಕ್ಕೆ.

ಭ್ರಷ್ಟಾಚಾರ ಎನ್ನುವ ಪೆಡಂಭೂತ

ಬೆಂಗಳೂರಿನಲ್ಲಿ 10 ದಿನ ಮಳೆ ಸುರಿದದ್ದಕ್ಕೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಕಳೆದ 5 ದಿನದಲ್ಲಿ ಆ ಗುಂಡಿಗಳಿಗೆ ಬಲಿಯಾದವರ ಸಂಖ್ಯೆ 3. ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದವರು 10ಕ್ಕೂ ಹೆಚ್ಚು. ಮುಂದಿನ ದಿನಗಳಲ್ಲಿ ಸ್ಮಶಾನದಲ್ಲಿ ದಾಖಲಾಗುವವರೆಷ್ಟು, ಆಸ್ಪತ್ರೆಯಲ್ಲಿ ದಾಖಲಾಗುವವರೆಷ್ಟು ಎಂಬುದನ್ನು ಹೇಳಲಸಾಧ್ಯ. ಹಾ, ಇಲ್ಲಿ ಕೇವಲ ಸಾವಿನ ಬಗ್ಗೆ ಮಾತ್ರ ಯೋಚಿಸಬೇಡಿ. ಕಳಪೆ ರಸ್ತೆಗಳನ್ನು ನಿರ್ಮಿಸಿದ ಕಂಪನಿ, ರಸ್ತೆ ಸರಿಯಾಗಿ ನಿರ್ಮಾಣವಾಗಿದೆ ಎಂದು ಪ್ರಮಾಣಪತ್ರ ನೀಡಿದ ಇಂಜಿನಿಯರ್, ಬಿಬಿಎಂಪಿ ಆಯುಕ್ತರು ಮತ್ತು ಬೆಂಗಳೂರಿನದ್ದು ಅಂತಾರಾಷ್ಟ್ರೀಯ ಮಟ್ಟದ ರಸ್ತೆಗಳು ಎಂದು ಲಕ್ಷಾಂತರ ರೂ. ಖರ್ಚು ಮಾಡಿ ಜಾಹಿರಾತು ನೀಡಿದ ಸಿ.ಎಂ.ಸಿದ್ದರಾಮಯ್ಯ. ಹೀಗೆ ರಸ್ತೆಯಲ್ಲಿರುವ ಗುಂಡಿಯಲ್ಲಿ ಇವರೆಲ್ಲರ ಹೆಸರೂ ಕೆತ್ತಿದೆ.

ನೇರವಾಗಿ ಸಿಎಂ ಲಂಚ ಪಡೆದರೆ ಮಾತ್ರ ಅವರು ಭ್ರಷ್ಟರು ಅಂತಲ್ಲ. ನೀವು ಒಂದು ತಾಲೂಕು ಕಚೇರಿಗೆ ಹೋಗಿ. ಅಲ್ಲಿ ನಿಮ್ಮ ಯಾವುದೇ ಕೆಲಸವನ್ನು ಸುಲಭವಾಗಿ ಮಾಡಿಕೊಂಡುಬರಲು ಸಾಧ್ಯವೇ? ಆರೋಪವೆಂಬಂತೆ ರಾಜ್ಯದಲ್ಲಿ ನಾಲ್ಕು-ಐದು ಇರಬಹುದಷ್ಟೇ. ಉಳಿದೆಲ್ಲಕಡೆ ಪರಿಸ್ಥಿತಿ ಏನೇನು ಎಂಬುದು ನಿಮಗೇ ಗೊತ್ತಿದೆ. ಇದನ್ನು ಸರಿ ಮಾಡುವ ಕೆಲಸ ಯಾರದ್ದು? ಮುಖ್ಯಮಂತ್ರಿಯಾಗುವುದೆಂದರೆ ಕೇವಲ ವಿಧಾನಸೌಧಕ್ಕೆ ಸೀಮಿತವೇ? ಭ್ರಷ್ಟ ವ್ಯವಸ್ಥೆಯನ್ನು ಪೋಷಿಸುವವನು ಭ್ರಷ್ಟಾಚಾರಿಯಲ್ಲವೇ? ಈಗ ಹೇಳಿ, ಶ್ರೀನಿವಾಸ್ ಪ್ರಸಾದ್ ಹೇಳಿದುದರಲ್ಲಿ ತಪ್ಪೇನಿದೆ?

ಇಸ್ಲಾಮಿಕ್ ಮೂಲಭೂತವಾದಕ್ಕೆ ಸರಣಿ ಕೊಲೆಗಳು

ರಾಜ್ಯದಲ್ಲಿ ಸಾಲು-ಸಾಲು ಕೊಲೆಗಳಾಗುತ್ತಿವೆ. Of course ಕೊಲೆಗಳು ಹಿಂದೆಯೂ ನಡೆಯುತ್ತಿತ್ತು. ಆದರೆ ಅವುಗಳಲ್ಲಿ ಹೆಚ್ಚಿನವು ವೈಯಕ್ತಿಕ ದ್ವೇಷದಿಂದ ಆಗುತ್ತಿತ್ತು. ಆದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಮೇಲೆ ರಾಜಕೀಯ ದ್ವೇಷ ಮತ್ತು ಇಸ್ಲಾಮಿಕ್ ಮೂಲಭೂತವಾದಕ್ಕೆ ಬಲಿಯಾಗುತ್ತಿದ್ದಾರೆ. ಮಲ್ಲಿಕಾರ್ಜುನ ಬಂಡೆ, ಕಲ್ಬುರ್ಗಿ, ಗೌರಿ ಲಂಕೇಶ್, ಕುಟ್ಟಪ್ಪ ಮುಂತಾದವರ ಕೊಲೆಗಳ ಬಗ್ಗೆ ಕನಿಷ್ಟ ಸಾಕ್ಷಿಯೂ ಸರ್ಕಾರದ ಬಳಿಯಿಲ್ಲ. ಶಿವಾಜಿನಗರದ ರುದ್ರೇಶ್ ಕೊಲೆಗೆ ಇಸ್ಲಾಮಿಕ್ ಮೂಲಭೂತವಾದವೇ ಕಾರಣವೆಂದು ಸಾಬೀತಾಗಿದ್ದರೂ ಆ ಬಗ್ಗೆ ಚಕಾರವೆತ್ತಿಲ್ಲ. ಈಗ ಹೇಳಿ, ಶ್ರೀನಿವಾಸ್ ಪ್ರಸಾದ್ ಹೇಳಿದುದರಲ್ಲಿ ತಪ್ಪೇನಿದೆ?

ಜಾತ್ಯತೀತ ನಾಡಿನಲ್ಲಿ ಜಾತಿಬೀಜ ಬಿತ್ತನೆ

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ‘ಇಡೀ ಸಮಾಜವೇ ಒಂದು’ ಎಂದು ನೋಡಬೇಕಾಗಿದ್ದ ಸರ್ಕಾದವರು ಜಾತಿ ಸಮಾವೇಶಗಳನ್ನು ಅಧಿಕೃತಗೊಳಿದೆ. ಸಿದ್ದರಾಮಯ್ಯನವರು ಜಾತಿಗಳನ್ನು ಉಲ್ಲೇಖ ಮಾಡಿಯೇ ಮಾತನಾಡುತ್ತಾರೆ. ಅದರ ಮುಂದುವರೆದ ಭಾಗವಾಗಿ ಲಿಂಗಾಯಿತರ ಮನೆಗಳ ಮಧ್ಯೆಯೂ ಕೊಡಲಿಯೇಟು ಹಾಕಿದ್ದಾರೆ. ಸಿದ್ದರಾಮಯ್ಯರ ಉದ್ದೇಶ ಬಲಿಷ್ಠವಾದ ಲಿಂಗಾಯತ ಸಮುದಾಯವನ್ನು ಒಡೆಯುವುದೇ ಆಗಿದೆ ಹೊರತು ಪ್ರತ್ಯೇಕ religion ಮಾಡುವುದಿಲ್ಲ. ಸಮಾಜದಲ್ಲಿ ಸಾಮರಸ್ಯ ಹೆಚ್ಚಿದಂತೆ ತನ್ನ ಹಾಗೂ ತನ್ನ ಸರ್ಕಾರದ ಬಂಡವಾಳ ಬೆತ್ತಲಾಗುವ ಕಾರಣ ಸಮಾಜವನ್ನೇ ಇಡೆಯುವ ಮೂಲಕ ಮತ್ತೊಮ್ಮೆ ಹಸ್ತಪಕ್ಷವನ್ನು ಪ್ರತಿಷ್ಠಾಪಿಸಹೊರಟಿದ್ದಾರೆ.

ಈಗ ಹೇಳಿ, ಶ್ರೀನಿವಾಸ್ ಪ್ರಸಾದ್ ಹೇಳಿರುವುದರಲ್ಲಿ ತಪ್ಪೇನಿದೆ? ಈ ಸಮಾಜಘಾತುಕ ಶಕ್ತಿಯನ್ನು ಹಂತಕ ಎನ್ನದೆ ಬೇರೇನೆನ್ನಬೇಕು?

Facebook ಕಾಮೆಂಟ್ಸ್

ಲೇಖಕರ ಕುರಿತು

Vrushanka Bhat

Editor at Vikrama Kannada Weekly

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!