ಅಂಕಣ

ಗೆಲುವಿನ ಸಂಭ್ರಮಕ್ಕೆ ನರರಕ್ತದ ಔತಣ; ಇದುವೇ ಕೆಂಪು ಭಯೋತ್ಪಾದನೆಯ ಮರ್ಮ

ಬಿಜೆಪಿಯು ಕೇರಳದಲ್ಲಿ ನಡೆಸುತ್ತಿರುವ ಜನರಕ್ಷಾ ಯಾತ್ರೆಯು ಯಾವ ಕಾರಣಕ್ಕೆ ನಡೆಯುತ್ತಿದೆ ಎಂಬುದನ್ನು ನೀವು ಈಗಾಗಲೇ ತಿಳಿದಿರಬಹುದು. ಕಮ್ಯುನಿಸ್ಟರ ಕೆಂಪು ಭಯೋತ್ಪಾದನೆಯನ್ನು ಇಲ್ಲವಾಗಿಸುವುದೇ ಪ್ರತಿಭಟನೆಯ ಮೂಲ ಉದ್ದೇಶ. 2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷ ಗೆದ್ದಮೇಲಷ್ಟೇ ಹಿಂಸಾಚಾರ ಭುಗಿಲೆದ್ದಿರುವುದಲ್ಲ. ಪಿಣರಾಯಿ ವಿಜಯನ್ ಗೆದ್ದ ನಂತರ ಹಾಗೂ ಗೆಲ್ಲುವುದಕ್ಕೂ ಮುನ್ನ ಕಮ್ಯುನಿಸ್ಟರದ್ದು ‘ರಕ್ತಚರಿತ್ರೆ’ಯೇ. ಅದನ್ನೊಮ್ಮೆ ನೋಡಿಬರೋಣ.

ಎಡಪಂಥೀಯರು ತಮ್ಮದೆಂದು ಹೇಳಿಕೊಳ್ಳುವ ಬಹುತ್ವ, ಸಹಿಷ್ಣುತೆ, ಶಾಂತಿ-ಕ್ರಾಂತಿ, ಪ್ರಜಾಪ್ರಭುತ್ವ ಇತ್ಯಾದಿ ಪದಗಳನ್ನು ರಾಜಕೀಯ ಪ್ರಾಬಲ್ಯ ಪಡೆದ ಕೂಡಲೆಮರೆತುಬಿಡುತ್ತಾರೇನೋ ಎಂಬ ಸಂಶಯ ಇತ್ತೀಚಿನ ದಿನಗಳಲ್ಲಿ ಜನಸಾಮ್ಯಾರನ್ನು ಕನಸಿನಲ್ಲೂ ಕಾಡುತ್ತಿರುವುದು ಸುಳ್ಳಲ್ಲ. ನೆರೆಯ ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರವು ಜನರಅಭಿಪ್ರಾಯಗಳನ್ನು ಗೋಣಿ ಚೀಲದೊಳಗೆ ಕಟ್ಟಿ ದಕ್ಷಿಣ ಚೀನಾ ಸಮುದ್ರಕ್ಕೆ ಎಸೆದಿರುವ ನಿದರ್ಶನವಿದೆಯಾದರೂ, ಭಾರತದ ಕಮ್ಯುನಿಸ್ಟರು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿಸ್ವಾತಂತ್ರ್ಯವನ್ನು ಬೆಂಬಲಿಸುತ್ತಾರೆ ಎಂದೇ ನಂಬಲಾಗಿತ್ತು. ಆದರೆ ಕೇರಳ ರಾಜ್ಯದಲ್ಲಿ ಕಮ್ಯುನಿಸ್ಟ್ ಪಕ್ಷ ಸರ್ಕಾರ ರಚಿಸುವುದು ದೃಢವಾದ ಸಂದರ್ಭದಲ್ಲಿ ನಡೆದ ಘಟನೆಗಳು ದಾರುಣಮತ್ತು ಕ್ರೂರ.

ಕೇರಳದಲ್ಲಿ ಬಿಜೆಪಿಯ ಓಟ್ ಬ್ಯಾಂಕ್ ಹಿಂದೆಂದಿಗಿಂತಲೂ ಹೆಚ್ಚು ವಿಸ್ತರಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ವರದಿ ಮಾಡಿದ್ದವು. ಈ ವರದಿಗಳನ್ನು ಸಹಿಸುವಷ್ಟು ಸಹಿಷ್ಣುತೆಕೇರಳದಲ್ಲಿ ಸೈದ್ಧಾಂತಿಕವಾಗಿ ನೆಲೆಯೂರಿದ್ದ ಎಡಪಕ್ಷಗಳಿಗಿರಲಿಲ್ಲ. ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೋ ಇಲ್ಲವೋ ಎನ್ನುವುದಕ್ಕಿಂತ, ಬಿಜೆಪಿ ಪರವಾದ ಅಲೆ ರಾಜ್ಯದಲ್ಲಿ ಹುಟ್ಟಿದ್ದೇಕೆಂಪು ಬಾವುಟ ಹಾರಿಸುವ ಕಾಮ್ರೆಡ್‌ಗಳಿಗೆ ಇಷ್ಟವಾಗಿರಲಿಲ್ಲ ವೆಂದು ಕಾಣುತ್ತದೆ. ಸಿದ್ಧಾಂತಿಕ ದ್ವೇಷ ಯಾವಪರಿಯಿತ್ತೆಂದರೆ, ಚುನಾವಣೆಯಲ್ಲಿ ಎಡಪಕ್ಷಗಳು ಗೆಲ್ಲುವುದುಖಚಿತವಾಗುತ್ತಿದ್ದಂತೆ, ಪ್ರಾಣಿಗಳನ್ನು ಅಟ್ಟಾಡಿಸಿಕೊಂಡು ಹೊಡೆಯುವಂತೆ ಬಿಜೆಪಿ ಮತ್ತು ಆರೆಸ್ಸೆಸ್ ಸ್ವಯಂಸೇವಕರನ್ನು ರಸ್ತೆ-ರಸ್ತೆಗಳಲ್ಲಿ ಹುಡುಕಿ ಹುಡುಕಿ ಹೊಡೆದರು. ಕತ್ತಿಯಲ್ಲಿಕೊಚ್ಚಿದರು. ಸೈದ್ಧಾಂತಿಕ ದ್ವೇಷಕ್ಕೆ ಮಹಿಳೆ ಪುರುಷರೆಂಬ ಭೇದವಿರಲಿಲ್ಲ. ಕಣ್ಣಿಗೆ ಕಟ್ಟಿದ್ದ ಕೆಂಪು ಪಟ್ಟಿ, ಇಡೀ ಸಮಾಜವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಚೋದಿಸುತ್ತಿತ್ತು. ದೆಹಲಿಯ ಅಂತಾರಾಷ್ಟ್ರೀಯ ಸೆಮಿನಾರ್ ಹಾಲ್‌ಗಳಲ್ಲಿ ಬಹುತ್ವ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಪನ್ಯಾಸಗಳನ್ನು ನೀಡುವ ಸೀತಾರಾಂ ಯೆಚೂರಿಯವರ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಅಕ್ಷರಶಃ ಪುಂಡು ಪೋಕರಿಗಳಾಗಿ ರಸ್ತೆಗಿಳಿದಿದ್ದರು.

ಕೇರಳದ ನೂತನ ಮುಖ್ಯಮಂತ್ರಿ ಸಿಪಿಐ(ಎಂ)ನ ಪಿನರಾಯಿ ವಿಜಯನ್ ಪ್ರತಿನಿಧಿಸುವ ಪಿನರಾಯಿ ಪಂಚಾಯತ್ ಒಂದರಲ್ಲೇ 48 ಮನೆಗಳ ಮೇಲೆ ದಾಳಿ ನಡೆದಿದೆ. ಆ ಮನೆಗಳಲ್ಲಿದ್ದವಾಹನಗಳನ್ನು ಸುಡಲಾಗಿದೆ. ಆ ಮನೆಯವರು ಬಿಜೆಪಿ ಸಮರ್ಥಕರಾಗಿದ್ದರು ಎಂಬುದೇ ಬಹುತ್ವ ಪ್ರತಿಪಾದಕರು ನಡೆಸಿದ ದಾಳಿಯ ಕಾರಣ. ಈ ಘಟನೆಗಳು ನಡೆದಿದ್ದೇ ಹೌದಾದರೆ, ಸುದ್ದಿವಾಹಿನಿಗಳು ಏಕೆ ಪ್ರಸಾರ ಮಾಡಲಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ದೌರ್ಭಾಗ್ಯದ ಸಂಗತಿಯೇನೆಂದರೆ, 1947ರಲ್ಲೇ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದರೂ, ಪಿನರಾಯಿಪಂಚಾಯತ್ ಒಳಗೆ ಮಾಧ್ಯಮಗಳು ಪ್ರವೇಶಿಸಬೇಕೆಂದರೆ ಕಾಮ್ರೆಡ್‌ಗಳ ಅನುಮತಿ ಬೇಕೇ ಬೇಕು. ಪಿನರಾಯಿಯಲ್ಲಿ ನಡೆದಿರುವ ಮಾನವ ಹಕ್ಕು ಉಲ್ಲಂಘನೆಯನ್ನು ವರದಿ ಮಾಡಲುಮಾಧ್ಯಮಕ್ಕೆ ಅನುವು ಮಾಡಿಕೊಡಬೇಕೆಂದು ಆರೆಸ್ಸೆಸ್ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ ಜೆ.ನಂದಕುಮಾರ್ ಬಹಿರಂಗ ಸವಾಲು ಎಸೆದಿದ್ದರೂ, ಈ ಕ್ಷಣದವರೆಗೆ ಪಿನರಾಯಿವಿಜಯನ್ ತುಟಿಕ್‌ಪಿಟಿಕ್ ಎಂದಿಲ್ಲ. ಕೇರಳದಲ್ಲಿ ಹೆಚ್ಚುತ್ತಿರುವ ರಾಜಕೀಯ ದಾಳಿ ಮತ್ತು ಹತ್ಯೆ ಸಂಬಂಧ ಕೂಡಲೇ ತನಿಖೆ ನಡೆಸುವಂತೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ಸುದ್ದಿಗೋಷ್ಠಿ ಕರೆದು ಸೀತಾರಾಂ ಯಚೂರಿಯವರನ್ನು ಒತ್ತಾಯಿಸಿದ್ದರು. ಬಿಜೆಪಿ ಮತ್ತು ಸಂಘದ ಸ್ವಯಂಸೇವಕರ ಸಾವು ಯಚೂರಿಯ ಮನಸ್ಸಿಗೆ ವೇದನೆ ನೀಡುತ್ತಿಲ್ಲ. ಭಿನ್ನ ಸಿದ್ಧಾಂತಹೊಂದಿದವರು ಮನುಷ್ಯರೇ ಅಲ್ಲ ಎನ್ನುವುದು ಕಮ್ಯುನಿಸ್ಟರ ಸಂವಿಧಾನದಲ್ಲೇನಾದರೂ ಇದೆಯೇ ಎಂದು ವಿಶ್ಲೇಷಿಸುವ ಕಾಲ ಬಂದಿದೆ. ಒಂದು ವೇಳೆ ದೇಶದಾದ್ಯಂತ ಎಡಪಕ್ಷಗಳುಅಧಿಕಾರಕ್ಕೆ ಬಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಅಂತಿಮ ಸಂಸ್ಕಾರ ಮಾಡುವುದಿಲ್ಲವೆನ್ನುವುದಕ್ಕೆ ಏನು ಆಧಾರ?
ಬಿಜೆಪಿ ಸರ್ಕಾರ ರಚಿಸಿದಲ್ಲೆಲ್ಲೂ ರಾಜಕೀಯ ಕೊಲೆಗಳಾದದ್ದನ್ನು ಕೇಳಿಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತದೆ ಎಂಬ ಆರೋಪವಿದೆಯಾದರೂ,

ಅಧಿಕಾರಕ್ಕೆ ಬಂದಾಗ ವಿರೋಧಿಗಳನ್ನು ಸ್ಮಶಾನಕ್ಕೆ ಕಳಿಸಿದ ಉದಾಹರಣೆಗಳಿಲ್ಲ. ಆದರೆ ಕೇರಳವನ್ನು ಸಿದ್ಧಾಂತಗಳ ಮೂಲಕ ಆವರಿಸಿರುವ ಕೆಂಪು ಪಾಳಯದ ಪ್ರತಿನಿಧಿಗಳು, ರಾಜಕೀಯ ವಿರೋಧವನ್ನು ಹತ್ಯೆಯ ಮೂಲಕ ಶಮನ ಮಾಡುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಕೇರಳದಲ್ಲಿ ನಡೆದಿರುವ ಸೈದ್ಧಾಂತಿಕ ಮತ್ತು ರಾಜಕೀಯ ಹತ್ಯೆ ಹಾಗೂ ದಾಳಿಗಳ ವಿವರ ಹೀಗಿದೆ.

ಜ.12, 2012 : ಕೇರಳದ ಪಾಯೊಳ್ಳಿಯ ಭಾರತೀಯ ಮಜ್ದೂರ್ ಸಂಘ ಮತ್ತು ಬಿಜೆಪಿ ನಾಯಕ ಮನೋಜ್ ಸಿ.ಸಿ (38) ಅವರ ಮನೆಗೆ ನುಗ್ಗಿ ಹತ್ಯೆ
ಜ.19, 2012 : ಕೇರಳದ ತ್ರಿಶೂರ್‌ನ ಮನಲೂರು ಪ್ರದೇಶದಲ್ಲಿ ಆರೆಸ್ಸೆಸ್ ಸ್ವಯಂಸೇವಕ ಶರೋನ್ ಹತ್ಯೆ
ಜು.17, 2012 : ಕೇರಳದ ಅಲಪ್ಪುಜಾ ಜಿಲ್ಲೆಯಲ್ಲಿ ಎಬಿವಿಪಿ ಕಾರ್ಯಕರ್ತ ವಿಶಾಲ್ ಹತ್ಯೆ
ಸೆ.6, 2012 : ಕೇರಳದ ಕಣ್ಣೂರಿನ ಬಳಿ ಎಬಿವಿಪಿ ವಿದ್ಯಾರ್ಥಿ ನಾಯಕ ಸಚಿನ್ ಗೋಪಾಲನ್ (21) ಹತ್ಯೆ
ಸೆ.6, 2013 : ಕೇರಳದ ಪೂಜಪ್ಪುರದ ತಾಮಲಂ ಪ್ರದೇಶದಲ್ಲಿ ಬೆಳಗಿನ ಜಾವ 2 ಗಂಟೆಗೆ ಆರೆಸ್ಸೆಸ್ ಸ್ವಯಂಸೇವಕ ಡಿ.ವಿನುಮೋನ್ ಹತ್ಯೆ
ಡಿ.19, 2013 : ಕೇರಳದ ಕ್ಯಾಲಿಕಟ್‌ನ ಆರೆಸ್ಸೆಸ್ ಶಾಖೆಯೊಂದರ ಮುಖ್ಯಶಿಕ್ಷಕ ಅನೂಪ್ (29). ಸಿಪಿಎಂ ನಾಯಕರೊಬ್ಬರು ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಕೆಲಸಮಾಡುತ್ತಿದ್ದರು. ದುಷ್ಕರ್ಮಿಗಳು ಕುಟ್ಯಾಡಿಯಲ್ಲಿ ನಡೆಯುತ್ತಿದ್ದ ಹಿಂದು ಐಕ್ಯವೇದಿ ಕಾರ್ಯಕ್ರಮದ ಮೇಲೆ ನಾಡಬಾಂಬ್ ಎಸೆದು ಅನೂಪ್‌ರ ಹತ್ಯೆ ಮಾಡಿದರು.
ಡಿ.1, 2013 : ಕೇರಳದ ಕಣ್ಣೂರಿನ ಸಮೀಪದ ಕೊತ್ತುಪರಂಬು ಎಂಬಲ್ಲಿ ಮೋಕೆರಿ ಈಸ್ಟ್ ಯು.ಪಿ.ಶಾಲೆಯಿದೆ. 1999ರ ಡಿ.1ರಂದು ಶಾಲೆಯ ಆರನೆ ತರಗತಿಯ ಮಕ್ಕಳಿಗೆಟಿ.ಕೆ.ಜಯಕೃಷ್ಣನ್ ಮಾಸ್ಟರ್ ಪಾಠ ಮಾಡುತ್ತಿದ್ದ ವೇಳೆ ಏಳು ಮಂದಿ ಗೂಂಡಾಗಳು ಕಮ್ಯುನಿಸ್ಟ್ ಘೋಷಣೆಗಳನ್ನು ಕೂಗುತ್ತ ಪ್ರವೇಶಿಸಿದರು. 11 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಮುಂದೆಯೇ 48 ಬಾರಿ ಮಚ್ಚಿನಿಂದ ಕಡಿದು ಜಯಕೃಷ್ಣನ್ ಅವರನ್ನು ಕೊಲ್ಲಲಾಯಿತು. ಜಯಕೃಷ್ಣನ್ ಬಿಜೆಪಿಯ ಯುವ ಮೋರ್ಚಾ ಉಪಾಧ್ಯಕ್ಷರಾಗಿದ್ದರು. ಅವರ ಹತ್ಯೆಯಾದದಿನವನ್ನು ಬಲಿದಾನ ದಿವಸ ಎಂದು ಆಚರಿಸಲಾಗುತ್ತಿದೆ. 2013ರ ಡಿ.1ರಂದು ಆಯೋಜಿಸಲಾಗಿದ್ದ ಬಲಿದಾನ ದಿವಸ ಕಾರ್ಯಕ್ರಮಕ್ಕೆ ಪಯ್ಯನೂರ್ ಶಾಖೆ ಕಾರ್ಯವಾಹ ವಿನೋದ್ಕುಮಾರ್ ಸ್ನೇಹಿತರೊಂದಿಗೆ ವಾಹನದಲ್ಲಿ ತೆರಳುತ್ತಿದ್ದರು. ವಾಹನವನ್ನು ಅಡ್ಡಗಟ್ಟಿದ ಗುಂಪೊಂದು ಮಾರಕಾಸ್ತ್ರಗಳು ಮತ್ತು ನಾಡ ಬಾಂಬ್ ಸಿಡಿಸಿ ವಿನೋದ್ ಕುಮಾರ್ ಅವರಹತ್ಯೆಗೈಯಿತು
ಸೆ.1, 2014 : ಕೇರಳದ ಕಣ್ಣೂರಿನ ತಲಸ್ಸೆರಿಯಲ್ಲಿ ಆರೆಸ್ಸೆಸ್ ಜಿಲ್ಲಾ ಶಾರೀರಿಕ್ ಪ್ರಮುಖ್ ಮನೋಜ್ ಕುಮಾರ್ ಹತ್ಯೆ
ಡಿ.7, 2014 : ಕೇರಳದ ಕಣ್ಣೂರಿನ ಪಯ್ಯನ್ನೂರಿನ ಬಿಜೆಪಿ ಜಿಲ್ಲಾ ಅಧ್ಯಕ್ಷ ಪಿ.ಅರುಣ್ ಕುಮಾರ್, ಆರೆಸ್ಸೆಸ್ ಜಿಲ್ಲಾ ಕಾರ್ಯವಾಹ ತನೇರಿಕರದ್ ಕೆ.ರಾಜೇಶನ್ ಹಾಗೂ ಇತರರ ಮನೆಗಳಮೇಲೆ ದಾಳಿ
ಮಾ.8,2016 : ಕೇರಳದ ಕಣ್ಣೂರಿನಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಸ್ವಯಂಸೇವಕ ಎ.ವಿ.ಬಿಜು ಮೇಲೆ ಮಕ್ಕಳ ಮುಂದೆಯೇ ಮಾರಣಾಂತಿಕ ಹಲ್ಲೆ
ಅ.8, 2014 : ಕೇರಳದ ಕಣ್ಣೂರಿನ ಬಳಿ ವಿಜಯ ದಶಮಿಯ ಪಥಸಂಚಲನಕ್ಕೆ ತೆರಳುತ್ತಿದ್ದ ಸ್ವಯಂಸೇವಕರ ಮೇಲೆ ಮಾರಣಾಂತಿಕ ಹಲ್ಲೆ
ಫೆ.15, 2016 : ಕೇರಳದ ಕಣ್ಣೂರಿನ ಆರೆಸ್ಸೆಸ್ ಸ್ವಯಂಸೇವಕ ಸುಜಿತ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪೋಷಕರ ಎದುರಿಗೇ ಮಚ್ಚಿನಿಂದ ಕೊಚ್ಚಿ ಹತ್ಯೆ.

ಇವು ಕೆಲವೇ ಕೆಲವು ಉದಾಹರಣೆಗಳು. RSS activists murder by CPM in Kerala ಎಂದು Google ನಲ್ಲಿ ಹುಡುಕಿದರೂ ಅಸಂಖ್ಯಾತ ಪ್ರಕರಣಗಳು ಸಿಗುತ್ತವೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಹುತ್ವದ ಮಾತನಾಡುವ ಶಾಂತಿ ದೂತರು ಈಗಲಾದರೂ ಬಾಯಿ ಬಿಡಬಹುದೇ?

 

ಕೃಪೆ: ವಿಕ್ರಮ ವಾರಪತ್ರಿಕೆ

Facebook ಕಾಮೆಂಟ್ಸ್

ಲೇಖಕರ ಕುರಿತು

Vrushanka Bhat

Editor at Vikrama Kannada Weekly

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!