ಅಂಕಣ

ರುದ್ರೇಶ್ ಕೊಲೆ ಮತ್ತು ಇಸ್ಲಾಂ ಭಯೋತ್ಪಾದನೆ: ಇಲ್ಲಿವೆ ನಿಮಗೆ ಗೊತ್ತಿಲ್ಲದ ಕೆಲವು ಸತ್ಯಗಳು…

ಇಸ್ಲಾಮಿಕ್ ಜಿಹಾದಿ ಕೃತ್ಯಕ್ಕೆ ರುದ್ರೇಶ್ ಬಲಿಯಾಗಿ ಇಂದಿಗೆ ಸರಿಯಾಗಿ ಒಂದು ವರ್ಷ. ರಸ್ತೆ ಬದಿಯಲ್ಲಿ ಸ್ನೇಹಿತರೊಂದಿಗೆ ಮಾತಾಡುತ್ತಿದ್ದ ರುದ್ರೇಶ್ ಅವರ ಕುತ್ತಿಗೆಯನ್ನು ಹಾಡುಹಗಲೇ ಕೊಯ್ದು ಹಾಕಿದ್ದರು. ರಾಜ್ಯ ಪೊಲೀಸರ ಪರಿಶ್ರಮದಿಂದಾಗಿ ಕೊಲೆಗಡುಕರನ್ನು ಬಂಧಿಸಿಲಾಯಿತು ಕೊನೆಗೂ. ಹಾಗೆ ಬಂಧಿಸಿ ವಿಚಾರಣೆಗೆ ಗುರಿ ಮಾಡಿದಾಗ ಬೆಳಕಿಗೆ ಬಂದ ಸತ್ಯ ಏನೆಂದರೆ ಆ ಕೊಲೆಗಡುಕರೆಲ್ಲರೂ PFI ಮತ್ತು SDPI ಸಂಘಟನೆಗಳ ಸಕ್ರಿಯ ಸದಸ್ಯರು ಎಂಬುದು.

ಶಿವಾಜಿನಗರ ರುದ್ರೇಶ್ ಕೊಲೆಯಾದದ್ದು ಯಾವುದೇ ವೈಯಕ್ತಿಕ ಕಾರಣಕ್ಕಲ್ಲ, ಆಸ್ತಿ ಗಲಾಟೆಗಲ್ಲ. ನಿಮಗೆ ತಿಳಿದಿರಲಿ, ರುದ್ರೇಶ್ ಕೊಲೆಯಾದದ್ದು 1೦೦% ಇಸ್ಲಾಮಿಕ್ ಭಯೋತ್ಪಾದನೆಗೆ. ಹಾಗೆಂದು ನಾವು ಹೇಳುತ್ತಿಲ್ಲ; ಹಿಂದೂಪರ ಸಂಘಟನೆಗಳು ಕತೆ ಕಟ್ಟುತ್ತಿಲ್ಲ; ಅಥವಾ ಸಂಘ ಪರಿವಾರ ಕೂಡ ಇಲ್ಲದ ಕತೆ ತಂದು ಇಲ್ಲಿ ನಿಮ್ಮನ್ನು ಮಂಗ ಮಾಡುತ್ತಿಲ್ಲ. ನಮಗೆ ರುದ್ರೇಶ್ ಮೇಲೆ ಯಾವ ವೈಯಕ್ತಿಕ ದ್ವೇಷವೂ ಇರಲಿಲ್ಲ; ಅಸಲಿಗೆ ಆ ವ್ಯಕ್ತಿಯ ಬಗ್ಗೆ ಏನೇನೂ ಗೊತ್ತಿರಲಿಲ್ಲ; ಆದರೆ ಗಣವೇಷದಲ್ಲಿರುವ ಹಿಂದೂ ಒಬ್ಬನನ್ನು ಕೊಂದುಹಾಕಬೇಕೆಂಬ ಆದೇಶ ಇದ್ದದ್ದರಿಂದ ರುದ್ರೇಶ್ ಅವರನ್ನು ಆರಿಸಿಕೊಂಡೆವು ಎಂದು ಕೊಲೆಗಡುಕರೇ ಒಪ್ಪಿಕೊಂಡಿದ್ದಾರೆ. ಅಂದರೆ, ರುದ್ರೇಶ್ ಹತ್ಯೆ ನಡೆದದ್ದು ಆತ ಹಿಂದು ಎಂಬ ಏಕೈಕ ಕಾರಣಕ್ಕೆ. ರುದ್ರೇಶ್ ಕೊಲೆಗೆ ಕೇರಳದಲ್ಲಿ ತರಬೇತಿ ನೀಡಲಾಗಿತ್ತು. ಚಲಿಸುವ ಬೈಕಿನಲ್ಲಿ ಕೂತು ಮನುಷ್ಯರ ಕುತ್ತಿಗೆ ಕುಯ್ಯುವುದು ಹೇಗೆ ಎಂದು ನಾಯಿಗಳ ಕುತ್ತಿಗೆ ಕೊಯ್ದು ಈ ದುರುಳರು ಟ್ರೈನಿಂಗ್ ಪಡೆದಿದ್ದರು.

*ಇಸ್ಲಾಮಿಕ್ ಸ್ಟೇಟ್ ನಿರ್ಮಾಣವೇ ಹತ್ಯೆಯ ಮೂಲೋದ್ದೇಶ*
NIA ನಡೆಸಿದ ವಿಚಾರಣೆಯ ವೇಳೆ ರುದ್ರೇಶ್ ಹಂತಕರು ಹೇಳಿರುವ ಮಾತುಗಳನ್ನು ನೋಡಿದ್ದೀರಾ? “ಮೂರ್ತಿಪೂಜಕರನ್ನು ಕೊಲ್ಲುವುದು, ಜಿಹಾದ್ ನಡೆಸುವುದು ಮತ್ತು ಭಾರತವನ್ನು ಇಸ್ಲಾಮಿಕ್ ರಾಜ್ಯವನ್ನಾಗಿಸುವುದಕ್ಕಾಗಿ ರುದ್ರೇಶನನ್ನು ಕೊಂದೆವು” ಎಂದು ಈ ಮುಸ್ಲಿಂ ಕೊಲೆಗಡುಕರು ಬಾಯಿಬಿಟ್ಟಿದ್ದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಮೂಲಭೂತವಾದವು ಈ ಮೂಲಕ ಬೆತ್ತಲಾಗಿತ್ತಾದರೂ, ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ಇನ್ನೂ ಇನ್ನೂ ಮುಸ್ಲಿಂ ಓಲೈಕೆಯಲ್ಲಿ ನಿರತವಾದೆ.

(೧) ಇಂದು ಕರ್ನಾಟಕದ ಕೆಲವು ಭಾಗಗಳಲ್ಲಿ ಹಿಂದೂಗಳು ಭಯದಿಂದ ಜೀವ ಹಿಡಿದುಕೊಂಡು ಬದುಕಬೇಕಾದ ಪರಿಸ್ಥಿತಿ ಇದೆ. ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಕೊಡಗು ಮುಂತಾದ ಪ್ರದೇಶಗಳಲ್ಲಿ ಲ್ಯಾಂಡ್ ಜಿಹಾದ್ ಸದ್ದಿಲ್ಲದೆ ನಡೆಯುತ್ತಿದೆ. ಹಿಂದೂಗಳ ವಾಸಸ್ಥಳ ಎಲ್ಲೆಲ್ಲಿದೆಯೋ ಅಲ್ಲೆಲ್ಲ ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿದೆ. ಹಿಂದೂಗಳನ್ನು ಅತ್ಯಂತ ವ್ಯವಸ್ಥಿತವಾಗಿ ಒಂದೊಂದೇ ಜಾಗದಿಂದ ಹೊರದಬ್ಬುವ ಕೆಲಸಗಳು ನಡೆಯುತ್ತಿವೆ. ಎಂದಿನಂತೆ ಸರಕಾರ ಈ ವಿಷಯದಲ್ಲಿ ಮೌನ.

(೨) ರಾಜ್ಯಾದ್ಯಂತ PFI, SDPI ಸಂಘಟನೆಗಳವರ ಅಟ್ಟಹಾಸ ಮೇರೆ ಮೀರುತ್ತಿದೆ. ಇವರು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಪ್ರಗತಿಪರರು ವೇದಿಕೆ ಮೇಲಿಂದಲೇ ಹಿಂದೂಗಳನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆ. ದೇಶದ ಸಮಗ್ರತೆಯನ್ನೇ ಪ್ರಶ್ನಿಸುವ ಮಾತುಗಳನ್ನು ಆಡುತ್ತಿದ್ದಾರೆ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಸಂಪೂರ್ಣ ಅಸಾಂವಿಧಾನಿಕವಾಗಿರುವ ಈ ಮಾತುಗಳ ವಿಷಯದಲ್ಲೂ ಸರಕಾರ ಎಂದಿನಂತೆ ಮೌನ.

(೩) ನಾಲ್ಕು ವರ್ಷಗಳ ಹಿಂದೆ ಇದೇ ಸಿದ್ದರಾಮಯ್ಯನವರ ಸರಕಾರ ಸಾವಿರಕ್ಕೂ ಅಧಿಕ PFI, SDPI ಕಾರ್ಯಕರ್ತರನ್ನು ವಿವಿಧ ಕ್ರಿಮಿನಲ್ ಕೇಸ್ ಗಳಿಂದ ಖುಲಾಸೆ ಮಾಡಿ ಸಮಾಜದೊಳಗೆ ಬಿಟ್ಟಿತು. ಅವರಲ್ಲಿ ಅದೆಷ್ಟೋ ಜನ ನೇರವಾಗಿ ಪೊಲೀಸ್ ಇಲಾಖೆಯ ಮೇಲೇ ಹಲ್ಲೆ ನಡೆಸಿದವರಿದ್ದರು. ಪೊಲೀಸ್ ಅಧಿಕಾರಿಗಳನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿದವರಿದ್ದರು. ಅಂಥ ಗಂಭೀರ ಕ್ರಿಮಿನಲ್ ಚಟುವಟಿಕೆ ಮಾಡಿದ್ದವರನ್ನು ಕೂಡ ಸರಕಾರ ಏಕಾಏಕಿ ಒಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ದೋಷಮುಕ್ತಗೊಳಿಸಿತು. ಆ ಅಷ್ಟೂ ಜನರ ಮೇಲಿನ ಕೇಸುಗಳನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಡ್ರಾಪ್ ಮಾಡಿತು.

(೪) ರಾಜ್ಯದಲ್ಲಿ ಹದಿನೈದಕ್ಕೂ ಹೆಚ್ಚು ಬಲಪಂಥೀಯ ಕಾರ್ಯಕರ್ತರು ಕೊಲೆಯಾಗಿದ್ದಾರೆ, ಅಥವಾ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಯಾವ ಪ್ರಕರಣದ ತನಿಖೆ ಕೂಡ ಚುರುಕುಗತಿಯಲ್ಲಿ ನಡೆಯುತ್ತಿಲ್ಲ. ತನಿಖೆಯ ಏಕಮಾತ್ರ ಉದ್ದೇಶ, ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲಿ ಬಲಪಂಥೀಯರನ್ನು ಸಿಕ್ಕಿಸಿ ಹಾಕುವುದು, ಅಷ್ಟೇ! ರುದ್ರೇಶ್ ಕೊಲೆ ಈ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಡೆದುಹೋದ ಅತ್ಯಂತ ಭೀಕರ ಹತ್ಯೆ. ಅದೃಷ್ಟವಶಾತ್, ಇದು “ಕೊಲೆಯಲ್ಲ, ಆತ್ಮಹತ್ಯೆ” ಎಂದು ಕತೆ ಕಟ್ಟಲು ಆಗದ ಒಂದು ಪ್ರಕರಣ. ಹಾಗಾಗಿ ಕೊಲೆಗಡುಕರನ್ನು ಹಿಡಿಯಲೇಬೇಕಾದ ಅನಿವಾರ್ಯತೆ ಸರಕಾರಕ್ಕೆ ಸೃಷ್ಟಿಯಾಯಿತು. ಕೊಲೆ ಮಾಡಿದ ತಂಡದಲ್ಲಿದ್ದ ಆರು ಮಂದಿ ಪೈಕಿ ಐವರು ಸಿಕ್ಕಿದ್ದಾರೆ. ಈ ಐದೂ ಮಂದಿ PFI, SDPI ಸಂಘಟನೆಗಳಿಗೆ ಸೇರಿದವರು. ಆದರೆ ಈವರೆಗೂ ಈ ಸಂಘಟನೆಗಳನ್ನು ನಿಷೇಧಿಸುವ ಕುರಿತು ರಾಜ್ಯ ಸರಕಾರ ಯೋಚಿಸಿಲ್ಲ. ಸರಕಾರದ ನಿಷ್ಕ್ರಿಯತೆಗೆ ಇದಕ್ಕಿಂತ ಉದಾಹರಣೆ ಬೇಕಾ?

*ಮಹಿಳಾ ಕಾಂಗ್ರೆಸ್ ವನಿತೆಯರು ರುದ್ರೇಶ್ ಹೆಂಡತಿಗೆ ಅರಿಶಿನ-ಕುಂಕುಮ‌ ಕೊಡ್ತಾರಾ?*
ಇನ್ನೇಳು ತಿಂಗಳಲ್ಲಿ ಚುನಾವಣೆ ಇರುವ ಕಾರಣ ಮಹಿಳಾ ಕಾಂಗ್ರೆಸ್ಸಿನವರು ಮನೆ ಮನೆಗೆ ತೆರಳಿ ಅರಿಶಿನ ಕುಂಕುಮ ನೀಡುವ ಯೋಜನೆ ಹಾಕಿದ್ದಾರೆ. ಮಹಿಳಾ ಕಾಂಗ್ರೆಸ್ಸಿಗೆ ಇಲ್ಲೊಂದು ಪ್ರಶ್ನೆಯಿದೆ. ಪುರುಷ ಕಾಂಗ್ರೆಸ್ ವಿಭಾಗದ ಸರ್ವಾಧಿಕಾರಿಯಾದ ಸಿದ್ದರಾಮಯ್ಯನವರಿಗೆ PFI, SDPI ಸಂಘಟನೆಗಳ ಮೇಲಿರುವ ವಿಶೇಷ ಪ್ರೀತಿ-ವಿಶ್ವಾಸ-ಆದರಗಳಿಂದ ಆ ಸಂಘಟನೆಯ ಸದಸ್ಯರ ಮೇಲಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆದರು. ತರುವಾಯ ಶಿವಮೊಗ್ಗದ ವಿಶ್ವನಾಥ್, ಮಡಿಕೇರಿಯ ಕುಟ್ಟಪ್ಪ, ಮೂಡಬಿದರೆಯ ಪ್ರಶಾಂತ್ ಪೂಜಾರಿ, ಶಿವಾಜಿನಗರದ ರುದ್ರೇಶ್, ಮೈಸೂರಿನ ರಾಜು, ಕುಶಾಲನಗರದ ಪ್ರವೀಣ್ ಪೂಜಾರಿ, ದಕ್ಷಿಣ ಕನ್ನಡದ ಶರತ್ ಮಡಿವಾಳ, ಪಿರಿಯಾಪಟ್ಟಣದ ಮಾಗಳಿ ರವಿ PFI ಮತ್ತು SDPI ಕ್ರೌರ್ಯಕ್ಕೆ ಬಲಿಯಾದವರು. ಸಿದ್ದರಾಮಯ್ಯ ಅವರ ಓಲೈಕೆ ರಾಜಕಾರಣದಿಂದಾಗಿಯೇ ಈ ಇಸ್ಲಾಮಿಕ್ ಉಗ್ರ ಸಂಘಟನೆಗಳು ಮನಸೋ ಇಚ್ಛೆ ಗೂಂಡಾಗಿರಿ ನಡೆಸುತ್ತಿವೆ.
ಸಿದ್ದರಾಮಯ್ಯನವರ ಕೃಪಾಪೋಷಣೆಯಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವ  ಈ ಸಂಘಟನೆಗಳ ರಕ್ತದಾಹಕ್ಕೆ ಬಲಿಯಾದವರ ಹೆಂಡತಿ, ತಾಯಿ, ಅಕ್ಕ, ತಂಗಿಯರಿಗೆ ಮಹಿಳಾ ಕಾಂಗ್ರೆಸ್ ಸದಸ್ಯೆಯರು ಅರಿಶಿನ-ಕುಂಕುಮ ಕೊಡ್ತಾರೆಯೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Vrushanka Bhat

Editor at Vikrama Kannada Weekly

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!