ಕಾಣದೆ ಹೋದರೆ ಅರೆಘಳಿಗೆ,
ಅರಸಿದೆ ನಯನವು ನಿನ್ನ…
ನಿನ್ನನು ಕಂಡ ಮರುಘಳಿಗೆ;
ಭಾವದ ಧಾಟಿಯೇ ಭಿನ್ನ!
ಎಲ್ಲರಂತೆ ನಾನಲ್ಲ, ಬಲ್ಲೆಯೇನು ನೀ?
ಅನುಗಾಲವೂ ಅನುರಾಗಿ ನಾ, ನಂಬೆನ್ನನು!!!
ಸೋತಿದೆ ಪ್ರೀತಿಸು ಎಂದು
ಹೇಳುವ ಧೈರ್ಯವು,
ಸನಿಹವೇ ಕೂತಿರು
ಎಲ್ಲವ ಹೇಳಲಿ ಮೌನವು…!
ಸುಳಿವೆ ಇಲ್ಲದೇ ಬಳಿಗೆ ಬಂದಿದೆ ಒಂದು ಕವಿತೆ ಸಾಲು…
ಮೆಲ್ಲ ಬಂದು ನಡೆಸೀಗ ಸಲ್ಲಾಪವ,
ಬರಿ ನೋಟಕೂ ಸರಿ ಎನ್ನುವೆ, ನಂಬೆನ್ನನು!!!
ಕನಸಿನ ಮೇಳದಿ,
ಕೇವಲ ನಿನ್ನದೇ ಮಳಿಗೆಯು…
ಮುನಿಸಲೂ ಚಂದವೇ,
ನಿನ್ನ ಕಣ್ಣಿನ ಕುಸುರಿಯು!
ಕಳೆದು ಹೋಗುವ ಆಸೆಯಾಗಿದೆ, ಜೊತೆಗೆ ಬರುವೆಯೇನು?
ಝಲ್ಲೆನ್ನಿಸು ನನ್ನೊಮ್ಮೆ ಮೆಲ್ಲುಸಿರಲೇ…
ಅತಿ ಶೀಘ್ರವೇ ಸರಿಹೋಗುವೆ, ನಂಬೆನ್ನನು!!!