ಭಾವತರಂಗವ ಬರೆಯುವದನು,
ಅಂತರಂಗವ ಆಳುವದನು, ಕಲಿಸಿ ಹೋದಳಾಕೆ.
ನಿಸ್ವಾರ್ತಿಯಾಗಿ ಬದುಕುವದನು,
ಬದುಕುವಾ ಕಲೆಯನ್ನು, ಕಲಿಸಿ ಹೋದಳಾಕೆ.!
ದೇಶವೇ ಗುರುವೆಂದು,
ಗುರುವೇ ತಾಯಿಯೆಂದು,
ತಾಯಿಯೇ ದೈವವೆಂದು, ಕಲಿಸಿ ಹೋದಳಾಕೆ.
ಬದಕುವದನು ಕಲಿಸಿ ಹೋದಳಾಕೆ.!
ಪಕೀರ ನೀನು, ಪಾಪ ಬೇಡ.
ಆಸೆಗೆ ನಾನೇ ಮೂಲ, ಅತಿಯಾಸೆ ಬೇಡ
ನಿನ್ನ ನೀನು ಗೆಲ್ಲೆಂದು, ಕಲಿಸಿ ಹೋದಳಾಕೆ
ಅವಳಿಲ್ಲದೆ ಬದುಕುವದನ್ನು ಕಲಿಸಲಿಲ್ಲವೇಕೆ?!