ಅಂಕಣ

ಇದಕ್ಕೆ ಹೇಳುವುದು ಎಲ್ಲರೂ ಮೋದಿಯಾಗಲು ಸಾಧ್ಯವಿಲ್ಲವೆಂದು.

ಮೋದಿಯವರನ್ನು ನಕಲು ಹೊಡೆದವರು ಅನೇಕ ಜನರಿದ್ದಾರೆ. ದೆಹಲಿ ಮುಖ್ಯಮಂತ್ರಿಯಂತು ನಾನು ಮೋದಿಗಿಂತಲೂ ಶ್ರೇಷ್ಠ  ಎಂದು ಅವರಿಂಗಿತಲೂ ಒಂದು ಹೆಜ್ಜೆ  ಮುಂದೆ ಇಡುವೆನೆಂದವ ದೆಹಲಿಯನ್ನು ಭ್ರಷ್ಟ ಮುಕ್ತರಾಜ್ಯ ಮಾಡುತ್ತೇನೆಂದು ಬಾಯಿ ಬಾಯಿ ಬಡಿದುಕೊಂಡು ಮುಖ್ಯಮಂತ್ರಿಯಾಗಿ ತನ್ನ ಸಚಿವರನ್ನೇ ಹತೋಟಿಯಲ್ಲಿ ಇಡಲು ಸಾಧ್ಯವಾಗಲೇ ಇಲ್ಲ. ದೆಹಲಿಯ ಕಾರ್ಯವೆಲ್ಲಾ  ಬಿಟ್ಟು ದೇಶದ ಪ್ರಧಾನಿಯನ್ನು ನಿಂಧಿಸುತ್ತಾ ಕಾಲ ಕಳೆಯುತ್ತಿದ್ದಾರೆ.  ನೋಟು ನಿಷೇಧವಾದ ನಂತರವಂತೂ ಕ್ರೇಜಿವಾಲರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಮಾತೆತ್ತಿದರೆ ಮೋದಿ ಅಂತವರು ಇಂತವರು ಅನ್ನುತ್ತಲೇ ಇರುವುದು ರೂಢಿಯಾಗಿದೆ. ದೇಶದ ಅತೀ ದೊಡ್ಡ ಹಗರಣದ ರುವಾರಿ ಎಂದು ಬೀದಿ ಬೀದಿಗಳಲ್ಲಿ ಬಾಯಿ ಬಡಿದುಕೊಂಡಿದ್ದಾರೆ. ರಾಹುಲ್ ಗಾಂಧಿಯಂತು “ನನಗೆ ಸಂಸತ್ತಿನಲ್ಲಿ ಮಾತನಾಡುವ ಅವಕಾಶವೇ ಸಿಕ್ಕಿಲ್ಲ, ಸಿಕ್ಕಿದ್ದರೆ ಸಂಸತ್ತಿನಲ್ಲಿ ಭೂಕಂಪವಾಗುತ್ತಿತ್ತು.” ಎಂದರು. ಈ ಹೇಳಿಕೆಗೆ ನೂರಾರು ವ್ಯಂಗ್ಯದ ಹೊನಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾಂಬಿಸಿತು. ಮೋದಿಯವರು ಇಷ್ಟೊಂದು ದೊಡ್ಡ ಕಠಿಣ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಈ ವಿಪಕ್ಷಗಳಿಗೆ ಹಗಲಿನ ನಿದ್ದೆಯಲ್ಲಿಯೂ ಕನಸು ಬೀಳಲಿಲ್ಲ. ಕೋಲ್ಕತಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯು ತನ್ನ ಮೈಯಲ್ಲೇ ಇರುವೆ ಬಿಟ್ಟವರಂತೆ ಊರೆಲ್ಲಾ   ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಕರ್ನಾಟಕ ತಮಿಳುನಾಡಿನಲ್ಲಿ ಆದಾಯ ಇಲಾಖೆಯವರು ದಾಳಿ ಮಾಡಿದ್ದೇ ಮಾಡಿದ್ದು. ಅದು ಎಲ್ಲೆಲ್ಲಿ ಸಾಧ್ಯ ವೋ ಅಲ್ಲಿ ಶೇಖರಿಸಿಟ್ಟಿದ್ದ ಕಾಳಧನವನ್ನು ತಮ್ಮ ದಿವ್ಯ ದೃಷ್ಟಿಯಿಂದ ಕಂಡು ಹಿಡಿದರು . ಅದನ್ನೆಲ್ಲಾ ಹೊರ ಹಾಕಿದರು. ಕಾಳಧನ ಸಿಕ್ಕಿದ್ದರಲ್ಲಿ ಪಶ್ಚಿಮ ಬಂಗಾಳಕ್ಕೆ ಮೊದಲ ಸ್ಥಾನವಾದರೆ ಕರ್ನಾಟಕಕ್ಕೆ  ಎರಡನೇ ಸ್ಥಾನ ದೊರಕಿದೆ. ಮೋದಿಯವರು ಜನರನ್ನು ತಲುಪಲು ಸಾಮಾಜಿಕ ಜಾಲತಾಣದ ಸದುಪಯೋಗವನ್ನು ಪಡೆದುಕೊಂಡರು. ತಿಂಗಳಲ್ಲಿ ಒಂದು ದಿನ ರೇಡಿಯೋ ಮೂಲಕ ತಮ್ಮ ಮನದಾಳದ ಮಾತನ್ನು ಜನತೆಯ ಮುಂದೆ ಇಡುತ್ತಾ ಇದ್ದರು. ಅದನ್ನು ನಕಲು ಮಾಡಲು ಹೊರಟ ನಮ್ಮ ಮುಖ್ಯಮಂತ್ರಿಗಳು ಮೊದಲ ಪ್ರಯತ್ನದಲ್ಲೇ ವಿಫಲರಾದರು ಕಾರಣ ಸುಜ್ಞಾನದ ಕೊರತೆ. ನೋಟು ನಿಷೇಧದ ಪ್ರಕ್ರಿಯೆ ಶುರುವಾದದ್ದು ನವೆಂಬರ್ 8 ರಂದು ಅಲ್ಲ. ಇದು ಸುಮಾರು ಒಂದುವರೆ ವರ್ಷದಿಂದ ಗುಪ್ತವಾಗಿ ನಡೆಯುತ್ತಾ ಬಂದಿತ್ತು . ಮೋದಿಯವರು ಈ ನೋಟು ನಿಷೇಧದ ಪ್ರಕ್ರಿಯೆಯನ್ನು ಎಷ್ಟು ಗುಪ್ತವಾಗಿ ಇಟ್ಟಿದ್ದರು ಎಂದರೆ ಘೋಷಣೆಯಾದಾಗ ಮಿತ್ತ ಸಚಿವರಿಗೇ ಆಘಾತವಾಗಿತ್ತು. ಮೋದಿಯವರು ಸ್ವತಃ ತಮ್ಮ ಸಂಪುಟ ಸಚಿವರನ್ನೇ ನಂಬಲಿಲ್ಲ ಎಂದರೆ ಎಲ್ಲರನ್ನೂ ಒಂದು ಕ್ಷಣ ಹುಬ್ಬೇರಿಸುವಂತೆ ಮಾಡಿದ್ದು ಸುಳ್ಳಲ್ಲ. ಮೋದಿಯವರಿಗೆ ತೀರಾ ಹತ್ತಿರದಲ್ಲಿದ್ದ ಕೆಲವೊಬ್ಬ ನಂಬಿಕಸ್ಥ ಜನರಲ್ಲಿ ಈ ವಿಷಯವನ್ನು ಹಂಚಿಕೊಂಡು ಗುಪ್ತ ಸಭೆಗಳನ್ನು ಮಾಡಿ ಮಾಧ್ಯಮಗಳ ಕಣ್ತಪ್ಪಿಸಿ ಸತತ ಆರು ತಿಂಗಳಿನಿಂದ ನಿರಂತರವಾಗಿ ಪೂರ್ವ ಸಿದ್ಧತೆಗಳನ್ನು ಮಾಡುತ್ತಾ ಇದ್ದರು. ಯಾವೊಬ್ಬನಿಗೂ ಸಣ್ಣದೊಂದು ಸುಳಿವು ಕೂಡ ಸಿಗದಂತೆ ಮಾಡಿದ್ದು ತಮಾಷೆಯ ವಿಷಯವಲ್ಲ. ವಿಪಕ್ಷಗಳು ಮಾತೆತ್ತಿದರೆ ಕಾಲಾವಕಾಶ ಬೇಕಿತ್ತು ಎನ್ನುವುದೊಂದೇ ಅವರ ನಿತ್ಯಕರ್ಮವಾಗಿದೆ.

 

               ಅಂದು ನವೆಂಬರ್ 8ರ ನಂತರ ದೇಶದಲ್ಲಿ ಏನೆಲ್ಲಾ ಆಗಿದೆ ಅಂತ ಎಲ್ಲರಿಗೂ ಗೊತ್ತೇ ಇದೆ.  ಜನ ಮಾತ್ರ ಕೊಂಚವೂ ವಿಚಲಿತರಾಗದೆ ದೇಶ ಸೇವೆಯಲ್ಲಿಯೇ ಭಾಗವಹಿಸುತ್ತಿದ್ದೇನೆ ಎಂದು ಖುಷಿಯಿಂದ ಸಾಲಿನಲ್ಲಿ ನಿಂತು ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ . ಅದೇಕೋ ನಾನು ನವೆಂಬರ್ 8 ಕ್ಕೆ ರಾತ್ರಿ ATM ನಿಂದ ದುಡ್ಡನ್ನು ತೆಗೆಯಲು ಹೊಗಿದ್ದೆ. ದುರಾದೃಷ್ಟವೋ ಎನ್ನುವಂತೆ ನನ್ನ ATM card block ಆಗಿತ್ತು. ATM ಪಕ್ಕದಲ್ಲೆ ಅಂಗಡಿಯಲ್ಲಿ ಬಿತ್ತರಿಸುತ್ತಿದ್ದ ಸುದ್ದಿಯ ಮೇಲೆಯೇ ಎಲ್ಲರ ಗಮನ ಕೇಂದ್ರೀರೀಕೃತವಾಗಿತ್ತು . ನಾನು ಅತ್ತ ನೋಡಿದೆ. ಆಗಲೇ ಗೊತ್ತಾಗಿದ್ದು ನೋಟು ನಿಷೇಧದ ಪ್ರಕ್ರಿಯೆ!!! ನನ್ನಲ್ಲಿ ಇದ್ದದ್ದು ನೂರರ ನೋಟು 5  ಮತ್ತು 500 ರ ಎರಡು ನೋಟು. ಅಯ್ತಲ್ಲಪ್ಪ ಇನ್ನೇನು ಮಾಡಲಿ ಎಂದು ತಲೆ ಮೇಲೆ ಕೈ ಕೊಟ್ಟು  ಒಂದು ಕ್ಷಣ ಚಿಂತೆಗೆ ಜಾರಿದೆ. ನೋಟು ನಿಷೇಧವಾಗಿ ಎರಡು ದಿನ ಯಾವುದೇ ತೊಂದರೆ ಆಗಲೇ ಇಲ್ಲ.. ಯಾಕೆಂದರೆ ನೂರರ 5 ನೋಟಿತ್ತು. ಅಸಲಿಗೆ ನನಗೆ ಬೇಕಾದದ್ದು ಹೆಚ್ಚೆಂದರೆ 30 ರೂ. ದಿನಕ್ಕೆ . ಅದು ಬಿಟ್ಟರೆ ನನಗೆ ಬೇರೆ ಖರ್ಚಿಲ್ಲ. ಮೂರನೇ ದಿನ ಸ್ವಲ್ಪ ಸಿಟ್ಟು ಬಂದದ್ದಿದೆ. ಆಗ ತಾನೆ ಬ್ಯಾಂಕಿಗೆ ಹೋಗಿ ಯಾವುದೇ ನೋಟಿನ ವಿನಿಮಯ ಮಾಡಲಾಗದೆ ಹಿಂತಿರುಗಿದೆ. ದಿನಕ್ಕೆ ಬೇಕಾದಷ್ಟೇ ಖರ್ಚು ಮಾಡಲು ಶುರು ಮಾಡಿದೆ. ಎರಡು ವಾರ ಕಳೆದಾಗ ಗೊತ್ತಾಗಿದ್ದು ನಾನು ಖರ್ಚು ಮಾಡಿದ್ದು ಕೇವಲ ರೂ .500. ಅನಗತ್ಯ ಖರ್ಚುವೆಚ್ಚಗಳೆಲ್ಲಾ ನಿಂತಿತ್ತು. ಈಗ ಇದೇ ನನಗೆ ಅಭ್ಯಾಸವಾಗಿ ಬಿಟ್ಟಿದೆ.  ಖರ್ಚಿಗೆ ನಿಯಂತ್ರಣ ಬೇಕಾಗಿತ್ತು. ಇದೀಗ ಆಗಿದೆ. ಇನ್ನೇನು ಬೇಕು? ಇದು ನಾನು ಮೋದಿಯವರಿಂದ ಕಲಿತ ಪಾಠ. ಕೊಂಚ ಬಿಡುವಿನ ವೇಳೆಯಲ್ಲಿ ನನ್ನಲ್ಲಿದ್ದ ಹಳೇಯ ಎರಡು 500 ರೂ.ಗಳನ್ನು ಬದಲಾಯಿಸಿದೆ. ನನ್ನ ಅನಗತ್ಯ ಖರ್ಚುವೆಚ್ಚವನ್ನೆಲ್ಲಾ ಕಡಿವಾಣ ಹಾಕಿ ನಿಲ್ಲಿಸಿದ ಮೋದಿಯವರನ್ನು ಅಭಿನಂದಿಸಲೇಬೇಕು.

 

                  ನೋಟು ನಿಷೇಧಿಸಿ ವಿಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಮೋದಿ ದೇಶದ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ. ಮೋದಿಯವರ ಹಾದಿಯಂತೆ ಇನ್ನೊಂದು ದೇಶ ‘ವೆನೆಜುವೆಲಾ’ ನೋಟು ನಿಷೇಧಿಸಿತ್ತು… ನೋಟು ನಿಷೇಧವನ್ನು ಕೇವಲ 3-4 ದಿನದಲ್ಲಿ ಹಿಂತೆಗೆದುಕೊಂಡಿದೆ. ಇಡೀ ವೆನೆಜುವೆಲಾವೇ  ಕಂಗಾಲಗಿ ಹೋಗಿತ್ತು. ಅಲ್ಲಿಗೆ ಆ ಪಕ್ರಿಯೆಯಲ್ಲಿ ವಿಫಲವಾಯಿತು..!!!   ಕಾರಣ ಏನು ಗೊತ್ತಾ ? ಯಾವ ಪೂರ್ವ ಸಿದ್ಧತೆ ಮಾಡಿಲ್ಲ… ಅಲ್ಲಿಯ ಜನರಲ್ಲಿ ಸಹಕಾರ ಇರಲಿಲ್ಲ.. ದುಡ್ಡಿಗಾಗಿ  ಹಿಂಸೆಯನ್ನು  ಪ್ರಚೋದಿಸಿದ್ದಾರೆ ಅಲ್ಲಿನ ಜನಸಂಖ್ಯೆ ಕೇವಲ 3.2 ಕೋಟಿ. ಅಷ್ಟು ಕಡಿಮೆ ಜನಸಂಖ್ಯೆ ಹೊಂದಿದ್ದ ದೇಶಕ್ಕೆ ನೋಟು ನಿಷೇಧದ ಪ್ರಕ್ರಿಯೇ ಸಹಿಸಿಕೊಳ್ಳಲಾಗಲಿಲ್ಲ.  ಈ ಪ್ರಕ್ರಿಯೆ ಭಾರತದಲ್ಲಿ  ಸಫಲವಾಗಿದೆ. ಕಾರಣ ಮೋದಿಯವರ ಪೂರ್ವ ಸಿದ್ಧತೆ. ಪ್ರತಿ ಗಂಟೆಗೊಮ್ಮೆ  ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರು. ಅದಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುತ್ತಾ ಇದ್ದರು. ಭಾರತದ ಜನಸಂಖ್ಯೆ 125 ಕೋಟಿ. ಸ್ವಲ್ಪ ಎಡವಿದ್ದರೂ ವಿಶ್ವದ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಭಾರತಕ್ಕೆ ಎದುರಾಗುತ್ತಿತ್ತು.  ನೋಟು ನಿಷೇಧಿಸಿ 40 ದಿನ ಕಳೆದರೂ ಎಲ್ಲಿಯೂ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿಲ್ಲ…ಇಲ್ಲಿಯ ಜನರು ಬ್ಯಾಂಕ್ ನೌಕರರು ಸರ್ಕಾರದ ನಿರ್ಧಾರಕ್ಕೆ  ಸಹಕಾರ ನೀಡಿದ್ದರು… ಕೆಲವೊಂದು ಮಾಧ್ಯಮವೂ ಸೇರಿದಂತೆ ವಿಪಕ್ಷದ ಕೆಲವು ನಾಯಕರು ಜನರ ಹಾದಿ ತಪ್ಪಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ . ಆದರೂ ಜನರು ಮಾತ್ರ ಯಾವುದೇ ಗೊಂದಲಕ್ಕೆ  ಒಳಗಾಗಲೇ ಇಲ್ಲ. …ಈಗಲೂ ಭ್ರಷ್ಟರು ಮಾತ್ರ ಭಯದಲ್ಲಿಯೇ ದಿನಕಳೆಯುತ್ತಿದ್ದಾರೆ.  ಭಾರತವು ನೋಟು ನಿಷೇಧಿಸಿದ್ದನ್ನು ಇಡೀ ವಿಶ್ವವೇ ಕೊಂಡಾಡಿತ್ತು. ಅದರಂತೆ ಕೆಲವೊಂದು ದೇಶವು ಭಾರತದ ಹಾದಿ ಹಿಡಿದು ಆದರ ರೂಪುರೇಷೆಯನ್ನು ಸಿದ್ಧಪಡಿಸಿ  ತಾನು ನೋಟು ನಿಷೇಧ ಮಾಡುವುದಾಗಿ ಹೇಳಿತ್ತು… ಆದರೆ ಅದರ ಮುಂದಿನ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕ್ರಿಯೆಯಿಂದ ಹಿಂದೆ ಸರಿದಿದೆ. 125 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಸುಮಾರು 14 ಲಕ್ಷ ಕೋಟಿ ಮೌಲ್ಯದ ನೋಟು ನಿಷೇಧವೆಂದರೆ ಸಾಮಾನ್ಯ ವಿಷಯವಲ್ಲ….!!!  ಇದರ ಗಂಬೀರತೆಯು ಯಾವ ರಾಜಕಾರಣಿಗೂ ಅರ್ಥವಾಗದೇ ಇದ್ದದ್ದು ಮಾತ್ರ ವಿಪರ್ಯಾಸವೇ ಸರಿ.

 

                  ಅಲ್ಲಿ ಅಷ್ಟು ಕೋಟಿ ಇಲ್ಲಿ ಇಷ್ಟು ಕೋಟಿ ಎನ್ನುವುದೇ ಸುದ್ದಿಯಾಗಿ ಬಿಟ್ಟಿದೆ . ಬಾತ್ ರೂಮ್’ನಲ್ಲಿ ಮಂಚದ ಕೆಳಗೆ ನೀರಿನ ಸಂಪಿನಲ್ಲಿ ಎಲ್ಲೇ ಅಡಗಿಸಿಟ್ಟಿಸಿದ್ದರೂ ಕಾಳಧನಿಕರು ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಪ್ರಕ್ರಿಯೆ ಪ್ರಾರಂಭವಾಗಿ 40 ಕ್ಕೂ ಹೆಚ್ಚು ದಿನಗಳಾಗಿದೆ. ಭ್ರಷ್ಟರ ಮನೆಗೆ ದಾಳಿಯಾಗುತ್ತಲೇ ಇದೆ. ಬಗೆದಷ್ಟು ಸಿಗುತ್ತಲೇ ಇದೆ. ಆದರೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿಲ್ಲ ಎನ್ನುವುದೇ ಬೇಸರದ ಸಂಗತಿ.


                 ಸ್ವಾತಂತ್ರ್ಯಾ ನಂತರದ ಅರುವತ್ತು ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಧನೆಯನ್ನು ಅವರೇ ಹೇಳಿಕೊಳ್ಳುವಂತೆ ಮಾಡಿದೆ. ದೇಶದಲ್ಲಿ ಅನಕ್ಷರಸ್ಥರಿದ್ದಾರೆ, ಬಡವರಿದ್ದಾರೆ, ಮೊಬೈಲ್ ಇಲ್ಲದವರಿದ್ದಾರೆ ಹೀಗೆ ಹತ್ತು ಹಲವು ವಿಷಯವನ್ನು ಹೇಳಿದಾಗ ಅವರ ಸಾಧನೆ‌ ಶೂನ್ಯ ಎನ್ನುವುದು ಸ್ಪಷ್ಟವಾಗಿ ಹೇಳಬಹುದು. ಇದನ್ನು ನಾವು ನೀವು ಅಥವಾ ಮಾಧ್ಯಮದವರು ಹೇಳಿದ್ದು ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ .ಹೇಳಿದ್ದು ಯಾರು ಗೋತ್ತಾ? ಕಾಂಗ್ರೆಸ್’ನ ಘಟಾನುಘಟಿಗಳೇ…!!!‌  ‘ತುರ್ತು ಪರಿಸ್ಥಿತಿಗಿಂತ ಸಾವಿರ ಪಟ್ಟು ನೋಟು ನಿಷೇಧದ ಪ್ರಕ್ರಿಯೆಯೆ ಮೇಲು’ ಎಂದು ಜನರೇ ಇದೀಗ ಮಾತನಾಡಿಕೊಳ್ಳುತ್ತಿದ್ದಾರೆ. ಮೋದಿ ಏನೂ ಮಾಡಿಲ್ಲ ಎನ್ನುವ ಬಿಟ್ಟಿ ಪ್ರಚಾರಪ್ರಿಯರಿಗೆ ನಿಜಕ್ಕೂ ಇದು ನೀತಿ ಪಾಠವೇ ಸರಿ. ಇಷ್ಟೊಂದು ದೊಡ್ಡ ಮಟ್ಟಿನ ಕಾರ್ಯ ಮಾಡುವಾಗ ತಪ್ಪುಗಳಾಗುವುದು ಸಹಜ.ಅದೇ ತಪ್ಪನ್ನು  ದೊಡ್ಡದಾಗಿ ಬಿಂಬಿಸುವುದು ತಪ್ಪಲ್ಲವೇ?   ಮೋದಿ ಪ್ರಧಾನಿಯಾದ ಬಳಿಕವೇ ಭಾರತದ ಆರ್ಥಿಕ ಸ್ಥಿತಿಯು ಬಲಗೊಂಡಿದೆ. ಇದೀಗ ವಿಶ್ವದ ಆರ್ಥಿಕ ಶಕ್ತಿಯಲ್ಲಿ ಆರನೇ ಸ್ಥಾನ ಗಳಿಸಿಕೊಂಡದ್ದು ಸಾಮಾನ್ಯ ವಿಷಯವೇನಲ್ಲ.

               ನೂರಕ್ಕೆ ನೂರು ಭ್ರಷ್ಟರನ್ನು ಹಿಡಿಯಲು ಸಾಧ್ಯವಾಗಿಲ್ಲ ಯಾಕೆ ಅದಕ್ಕೆ ಕಾರಣಗಳು ಹಲವಿದೆ. ಕಪ್ಪು ಕುಳಗಳಿಗೆ ಕೆಲವು ಬ್ಯಾಂಕಿನ ಅಧಿಕಾರಿಗಳು ಕೈ ಜೋಡಿಸಿದ್ದಾರೆ . ರಾಜ್ಯ ಸರ್ಕಾರಗಳು ಸಹಕಾರ ನೀಡಲೇ ಇಲ್ಲ. ನಿಷೇಧಿಸಿದ್ದು ಕೇವಲ ಎರಡು ರೀತಿಯ ನೋಟು( 500 ಹಾಗೂ 1000). ಸಂಪೂರ್ಣ ನೋಟು ನಿಷೇಧಿಸಿದ್ದರೆ ಶೇ.90 ರಷ್ಟು ಕಪ್ಪು ಹಣ ಸಿಗುತ್ತಿತ್ತು. ಆದರೂ ಏನಂತೆ ಭವಿಷ್ಯದಲ್ಲಿ ಭಾರೀ ಬದಲಾವಣೆಗೆ ನಾಂದಿ ಹಾಡಿದೆ. ಮೋದಿಯೊಬ್ಬರಿಂದಲೇ ಎಲ್ಲವೂ ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಅವರ ಉತ್ತಮ ಯೋಜನೆಗಳನ್ನು ಬೆಂಬಲಿಸುವುದು ಎಲ್ಲಾ ಭಾರತೀಯರ ಕರ್ತವ್ಯ ಕೂಡ. ಒಂದೇ ಕೈಯಿಂದ ಚಪ್ಪಾಳೆ ತಟ್ಟುವುದು ಅಸಾಧ್ಯ.  ಹಳೆಯ ರಾಜಕೀಯದ ದ್ವೇಷವನ್ನು ಬದಿಗಿಟ್ಟು ಈ ಮಹಾಯಜ್ಞದಲ್ಲಿ ಭಾಗವಹಿಸಿ ದೇಶಸೇವೆಯಲ್ಲಿ ಪಾಲ್ಗೊಗೊಳ್ಳುವ ಅವಕಾಶ ಎಲ್ಲರಿಗೂ ದೊರಕಿದೆ. ನಾನೆ ಬೇರೆ ನನ್ನ ಸ್ಟೈಲೇ ಬೇರೆ ಎಂದು ಭ್ರಷ್ಟಾಘಾತ ನೀಡಿದ ಮೋದಿಯವರ ಕಾರ್ಯ ವೈಖರಿಯನ್ನು ಕಂಡ ವಿಪಕ್ಷಗಳ ಮನಸ್ಸಿನಲ್ಲಿ ಆತಂಕ ಮೂಡಿದೆ.

 

            ದೇಶದ ಎಲ್ಲಾ ಕಡೆ ಕ್ಯಾಶ್ ಲೆಸ್ ವ್ಯವಹಾರ ಶುರುವಾಗುತ್ತಾ ಇದೆ.  ಈ ಕ್ಯಾಶ್ ಲೆಸ್ ಆದರೆ ಭಾರತದ ಆರ್ಥಿಕವಾಗಿ ಬಲಗೊಳ್ಳುತ್ತದೆ. ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಕಾಗದ ಬಳಕೆಯು ಕಡಿಮೆ ಆಗುತ್ತದೆ. ಯಾರೇನೇ ಹೇಳಲಿ ಮೋದಿಯವರು ಮಾಡಿದ್ದು ಸರಿಯೇ ಎನ್ನುವ ಅಭಿಪ್ರಾಯವೇ ಎಲ್ಲಡೆ  ಸಿಗುತ್ತಿದೆ. ನನಗೆ ಯಾಕೆ ಮೋದಿಯವರ ಒಂದೂ ಚಿಂತನೆಯೂ ಹೊಳೆಯುತ್ತಿಲ್ಲ ಎನ್ನುವುದು ಕೆಲವರ ಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆ ಹೇಳುವುದು ಎಲ್ಲರಿಗೂ ಮೋದಿಯಾಗಲು ಸಾಧ್ಯವಿಲ್ಲ ಎಂದು.

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!