ಅಂಕಣ

ವಾಚ್!!

ವಾಚ್ ಎಂದಾಕ್ಷಣ ಗೋಡೆಯ ಮೇಲಿದ್ದ ಗಡಿಯಾರ ನೋಡಿದೆ, ಮೂರೂ ಘಂಟೆಗೆ ಇನ್ನು ಮೂರೂ ನಿಮಿಷ. ತಡಬಡಾಯಿಷಿ ಬ್ಯಾಗ್ ಪ್ಯಾಕ್ ಮಾಡಿಕೊಂಡು ಆಫೀಸಿನ ಮೆಟ್ಟಿಲಿಳಿವಾಗ ಕಣ್ಣ ಮುಂದೆ ಬಿಎಂಟಿಸಿ ಬಸ್ ಮತ್ತು ಸಿಲ್ಕ್ ಬೋರ್ಡಿನ ಟ್ರಾಫಿಕ್ ಬಂದು ಹೋಯಿತು. ಬೊಮ್ಮಸಂದ್ರದಿಂದ ಬಸವನಗುಡಿಗೆ ಒಂದು ಘಂಟೆಯಲ್ಲಿ ತಲುಪುವೆನೆಂದು ಜಂಬ ಕೊಚ್ಚಿಕೊಂಡವನಿಗೆ ದೊಡ್ಡ ಬಸವ ದರ್ಶನ ಕೊಟ್ಟಿದ್ದು ಸಾಯಂಕಾಲ ೫ ಘಂಟೆಗೆ. ಒಂದು ಘಂಟೆಯಿಂದ ಕಾಯಿತ್ತಿದ್ದ ಗೆಳತಿಯ ಮುಖದತೇಜಸ್ಸು ಪ್ರಯಾಣದ ಆಯಾಸವನ್ನೇ ಮರೆಸಿತು. ಆದರೂ ಅಂದು ಅವಳು ನೀಡಿದ ಉಡುಗರೇ ಮನಸಲ್ಲಿ ಯೋಚನಾ ಲಹರಿಯನ್ನೇ ಬಿಟ್ಟಿತು. ಇಂಜಿನಿಯರಿಂಗ್ ಓದುವಾಗ ಸ್ನೇಹಿತರೆಲ್ಲ ಹಾಕುತಿದ್ದ ಫಾಸ್ಟ್ ಟ್ರ್ಯಾಕ್ ವಾಚನ್ನು ಒಂದು ಸಲ ಕೈಗೆ ಕಟ್ಟಿಕೊಂಡು ಸಂಭ್ರಮಿಸುತಿದ್ದವನಿಗೆ ರೋಲಾಕ್ಸ್ ವಾಚ್ ಸಿಕ್ಕಾಗ ಏನಾಗಬೇಡ?

ಸಮಯ ಬದಲಾಗಿದೆ!

ಅದು ಒಂದು ಚಿಕ್ಕ ಹಳ್ಳಿ, ಒಂದು ಹೊತ್ತಿನ ಊಟಕ್ಕಾಗಿ ಗೌಡರ ಮನೆಯಲ್ಲಿ ಕೂಲಿ ಮಾಡುತಿದ್ದ ಯಲ್ಲಪ್ಪನಿಗೆ ತನ್ನ ಮಗನನ್ನು ಓದಿಸಿ ವಿದ್ಯಾವಂತನನ್ನಾಗಿ ಮಾಡುವಾಸೆ, ಕೈಯಲ್ಲಿ ಬಿಡಿಗಾಸು ಇಲ್ಲದ ಯಲ್ಲಪ್ಪ ಪಟ್ಟಣಕ್ಕೆ ಮಗನನ್ನು ಹೇಗೆ ಕಳಿಸಿಯಾನು? ಅವನಿಗಿದ್ದದ್ದು ಒಂದೇ ದಾರಿ ತನ್ನನ್ನು ತಾನೇ ಮಾರಿಕೊಳ್ಳುವದು! ಗೌಡರ ಬಳಿ ಅಂಗಲಾಚಿ ಐವತ್ತು ಸಾವಿರಕ್ಕೆ ಜೀವನಪರ್ಯಂತ ಜೀತ ಮಾಡುತ್ತೇನೆಂದ. ಇತ್ತ ಐವತ್ತು ಸಾವಿರ ಪಡೆದ ಯಲಪ್ಪನ ಮಗನಿಗೆ ಅಪ್ಪನನ್ನು ಹೇಗಾದರೂ ಮಾಡಿ ಜೀತದಿಂದ ಬಿಡಿಸುವ ಹಂಬಲ ಇಷ್ಟದಿಂದ ಓದಿ ಸಿವಿಲ್ ಸರ್ವಿಸ್ ಪಾಸ್ ಮಾಡಿದ. ತನ್ನದೇ ಜಿಲ್ಲೆಗೆ ಮುಂದೆ ಜಿಲ್ಲಾಧಿಕಾರಿಯಾಗಿ ಬಂದ. ಜೀತ ಮಾಡುತಿದ್ದಯಲ್ಲಪ್ಪ ಇಂದು ಜಿಲ್ಲಾಧಿಕಾರಿಯ ಅಪ್ಪ, ಅದೇ ಊರಿನ ಗೌಡ ಇಂದು ಪ್ರಧಾನಿಯ ನೋಟಬಂದಿಯಿಂದ ಬಚ್ಚಿಟ್ಟಿದ್ದ ಎಲ್ಲ ಹಣ ಕಳೆದುಕೊಂಡು ಬೀದಿಗೆ ಬಂದ! ಸಮಯಎಷ್ಟು ಬೇಗ ಬದಲಾಗುತ್ತದೆ ಅಲ್ಲವೇ. ಇದೆ ಇಪ್ಪತೈದು ವರ್ಷಗಳ ಹಿಂದೆ ಅಮೆರಿಕೆಯ ವೈಟ್ ಹೌಸ್ ಗೇಟಿನ ಮುಂದೆ ನಿಂತು ಫೋಟೋ ತಗೆಸಿಕೊಂಡಿದ್ದ ನರೇಂದ್ರ ಮೋದಿಗೆ, ಇಂದು ಅದೇ ವೈಟ್ ಹೌಸ್ಗೆ ಹೋದರೆ ರಾಜ ಸನ್ಮಾನ! ಭ್ರಷ್ಟಾಚಾರ ವಿರೋಧಿ ಮುಖವಾಡದಿಂದ ಬೆಳಕಿಗೆಬಂದ ಅರವಿಂದ ಕೇಜ್ರಿವಾಲ್ ಇಂದು ಅದೇ ಭ್ರಷ್ಟಚಾರದ ಇನ್ನೊಂದು ಮುಖ. ಸಮಯ ಬದಲಾಗುತ್ತದೆ.

ಸಮಯ ಬದಲಾಗಿಯೇ ಇಲ್ಲ.

ಅದು ದೆಹಲಿಯ ಲಜಪತ್ ನಗರ್, ಚುನಾವಣೆ ಸಮಯ ಬೇರೆ, ಅಲ್ಲೇ ಗಲ್ಲಿಯ ಮನೆಯ ಮುಂದೆ ತುಂಬಾ ಜನ ಸೇರಿದ್ದರು. ಹೊಸ್ತಿಲಲ್ಲಿ ಕುಳಿತಿದ್ದ ತಾಯಿಯ ರೋದನೆ ಮನ ಕುಲುಕುವಂತಿತ್ತು. ಅಲ್ಲಿ ನೆರೆದಿದ್ದ ಮಾಧ್ಯಮ ವೃಂದದ ಮಾತಿಗೆ ಕಿವಿ ಕೊಟ್ಟಾಗ ತಿಳಿದಿದ್ದೇನೆಂದರೆ ಶಾಲೆ ಮುಗಿಸಿ ವಾಪಸಾಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆಂದು. ಅಷ್ಟರಲ್ಲೇ ನೆರೆದಿದ್ದ ಜನರೆಲ್ಲಾ ಚದುರತೊಡಗಿದರು, ಏನಾಗಿದೆ ಎನ್ನುವದರಲ್ಲಿ ಬಂದ ರಾಜಕಾರಣಿ ದುಃಖತಪ್ತರನ್ನು ಸಮಾಧಾನ ಪಡಿಸುತ್ತಾ ಮಾಧ್ಯಮದವರನ್ನು ಕರೆದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ. ಅವನ ಮಾತುಗಳಿಂದ ಜನ ಮೂಕವಿಸ್ಮಿತರಾದರು. ಮುಂದೆ ಅಧಿಕಾರಕ್ಕೂ ಬಂದ ಮುಖ್ಯಮಂತ್ರಿಯಾದ. ಸ್ವಲ್ಪ ಸಮಯದ ನಂತರ ಘಟನೆ ಮರುಕಳಿಸಿತು, ತಾನೇ ಮಾಡಿದ ಆಪಾದನೆಗಳಿಂದು ತನ್ನನ್ನೇ ಒರಗಿನಿಂತಿವೆ. ಆದರೆ ಲಜ್ಜೆಯಿಲ್ಲದ ಜನರಲ್ಲವೇ, ಮತ್ತೊಂದು ಚುನಾವಣೆಗೆ ಸಜ್ಜಾಗಿ ನಿಂತಿದ್ದಾರೆ. ಸಮಯ ಬದಲಾಗಲಿಲ್ಲ! ಅಂದು ಬಡತನ ನಿರ್ಮೂಲನೆಗೆ ಹೊರಟವರು ಇನ್ನು ಬಡತನ ನಿರ್ಮೂಲನೆಯಲ್ಲೇ ಇದ್ದೇವೆ.

ಬದಲಾವಣೆ ತರುತ್ತಿರುವವನು ಮನುಷ್ಯನೋ? ಸಮಯವೋ? ಕಣ್ಣಿಗೆ ಕಾಣುವದು ನಿಜವಾದರೆ ಮನುಷ್ಯನೇ ಬದಲಾಯಿಸುತ್ತಿರುವದು. ಮತ್ತೆ ಸಮಯ? ಉಪೇಂದ್ರರ ಮಾತು ನೆನಪಾಗುತ್ತೆ ” ಎಲ್ಲರ ಕಾಲ್ ಎಳೆಯುತ್ತೆ ಕಾಲ “, ಅದಕ್ಕೆ ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ್ದು ” ನಿನ್ನ ಅಧಿಕಾರ ಬರಿ ಕೆಲೆಸ ಮಾಡುವದು ಫಲಾಫಲಗಳು ಅವನಿಗೆ ಬಿಟ್ಟಿದ್ದು “

Facebook ಕಾಮೆಂಟ್ಸ್

ಲೇಖಕರ ಕುರಿತು

Sachin anchinal

Writer by Love, Politician by Passion, Engineer by Profession. basically from Vijayapur (Bijapur). and loves to travel, read books and cricket .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!