ಅಂಕಣ ಆಕಾಶಮಾರ್ಗ

ಸ್ಟ್ರೋಕ್‍ಗಳನ್ನು ಬೇಡವೆನ್ನುವುದೂ ಭಯೋತ್ಪಾದನೆಯೇ…!

ಒಂದು ಸಣ್ಣ ಕ್ಯಾಲ್ಕುಲೇಶನ್ನು. ಅನಾಮತ್ತು ಎಪ್ಪತ್ತು ವರ್ಷ ಆಗೊಗಿದೆ. ಯಾಕೆ ಇನ್ನು ಭಾರತಕ್ಕಾಗಲಿ ಪಾಕಿಸ್ತಾನಕ್ಕಾಗಲಿ ಕಾಶ್ಮೀರ ವಿಷಯವನ್ನು ಬಗೆಹರಿಸಲೇ ಆಗುತ್ತಿಲ್ಲ. ಎಷ್ಟೆ ಬಡಿದಾಡಿದರೂ ಭಾರತವಂತೂ ಅದನ್ನು ಬಿಟ್ಟುಕೊಡಲಾರದು. ಎಷ್ಟೇ ಮೇಲೆ ಬಿದ್ದು ಯುದ್ಧ ಮಾಡಿದರೂ ಪಾಕಿಸ್ತಾನಕ್ಕೆ ಕಾಶ್ಮೀರ ವಿಷಯದಲ್ಲಿ ಒದೆ ತಿನ್ನುವುದೂ ತಪ್ಪುತ್ತಿಲ್ಲ. ಹೋಗಲಿ ಸಾವಿರ ವರ್ಷದ ಯುದ್ಧ ಮಾಡಿ ಗೆಲ್ಲುತ್ತೇನೆಂದು ಹೂಂಕರಿಸಿದ ಯಾವ ನಾಯಕನಿಗೂ ಕನಿಷ್ಟ ತನ್ನದೇ ಸೈನ್ಯವನ್ನೂ ಸಂಭಾಳಿಸುವ ಖದರ್ರೂ ಬಂದಿದ್ದೇ ಕಾಣುತ್ತಿಲ್ಲ. (ಜನರಲ್ ಯಾಹ್ಯಾ ಖಾನ್‍ನಿಂದ ಬೆನಜೀರ್ ಭುಟ್ಟೊವರೆಗೂ ಒಬ್ಬರೂ ಸರಿಯಾಗಿ ಅವರ ಅಧಿಕಾರಾವಧಿಯನ್ನೇ ಮುಗಿಸಲಾಗಲಿಲ್ಲ. ಇದ್ದ ನೆಲದಲ್ಲೇ ನೇಣು, ರಾಜಕೀಯ ಕೊಲೆಗಳಿಗೆ ಬಲಿಯಾಗಿ ಹೋದರಲ್ಲ. ಇನ್ನು ಸಾವಿರ ವರ್ಷದ ಯುದ್ಧವೆಲ್ಲಿಂದ ಬರ್ಬೇಕು..?) ನೇರ ಯುದ್ಧದಲ್ಲಿ ಗೆಲ್ಲಲಾಗುವುದೇ ಇಲ್ಲ ಪರೋಕ್ಷ ಯುದ್ಧದಲ್ಲಂತೂ ಮೋದಿಯಂತಹ ದೈತ್ಯ ಕೆಲಸಗಾರ ಪ್ರಧಾನಿಯಾದ ಮೇಲೆ ಸಾಧ್ಯವೇ ಇಲ್ಲ ಎನ್ನುವಂತಹ ವಾತಾವರಣ ನಿರ್ಮಿಸಿಬಿಟ್ಟಿದ್ದಾರೆ. ಇಂತಹ ಕಾರಣಗಳಿಗಾಗೇ ಇವತ್ತು ಕಾಶ್ಮೀರ ಬಗೆಹರಿಯುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದರೆ, ಅಲ್ಲಿನ ಆರ್ಥಿಕತೆಯನ್ನು ಪಾಕಿಸ್ತಾನ ಬುಡಮೇಲು ಮಾಡಿದ ರೀತಿಯಿದೆಯಲ್ಲ ಅದ್ಯಾವ ಪರಿಯಲ್ಲಿ ಕಣಿವೆ ರಾಜ್ಯವನ್ನು ಜೀರ್ಣಗೊಳಿಸಿತ್ತೆಂದರೆ ಮೋದಿ ಹೀಗೊಂದು ಆರ್ಥಿಕ ಸ್ಟ್ರೈಕ್ ಘೋಷಿಸದೆ ಕಾಶ್ಮೀರದ ಅನಧೀಕೃತ ಆರ್ಥಿಕತೆಯ ಬೆನ್ನೆಲುಬು ಮುರಿಯುವುದು ಸಾಧ್ಯವೇ ಇರಲಿಲ್ಲ.

(ಅಂದ ಹಾಗೆ ಜಾಗತಿಕವಾಗಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವುದು ಯಾವ ವಿದೇಶಿ ನಾಯಕನಿಗೂ ಬೇಕಿಲ್ಲ ಮತ್ತು ಅಂತರಾಷ್ಟ್ರೀಯ ರಾಜಕೀಯ ಚದುರಂಗದ ದಾಳವಾಗಿ ಇದು ಬಳಕೆಯಾಗುತ್ತಿದೆ. ಅದಕ್ಕಾಗೇ ಒಂದು ನಿರ್ಣಾಯಕ ಹಂತವನ್ನು ಸೃಷ್ಟಿಸಲು ಸಾಧ್ಯವಾಗುತ್ತಲೇ ಇಲ್ಲ ಹೊರತಾಗಿ ಭಾರತೀಯ ಮುಸ್ಲಿಂರಿಗಾಗಲಿ, ಪಾಕಿಗಳಿಗಾಗಲಿ ತೀರ ಎದೆಯೊಡೆದುಕೊಂಡು ಯುದ್ಧ, ಮತ್ತೊಂದು ಎಂದು ನಿಲ್ಲುವ ಹರಕತ್ತೇ ಇಲ್ಲ. ಆದರೆ ನಿಯಂತ್ರಣದ ದಂಡ ಇರುವುದೇ ಬೇರೆ ದೇಶಗಳ ಕೈಯ್ಯಲ್ಲಿ. ಅವರು ಪಾಕಿಸ್ತಾನವನ್ನು ತಮ್ಮಿಚ್ಛೆಯಂತೆ ಛೂ ಬಿಡುತ್ತಿದ್ದರೆ ಅದನ್ನು ಕೊಟ್ಟು ಕೂತಿದ್ದು ಯಾರೆಂದು ಮತ್ತೆ ಹೇಳಬೇಕಿಲ್ಲ. ಈ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. )

ಅದರಲ್ಲೂ ಮೊದಲೇ ಪ್ರಕ್ಷಬ್ಧ ಪರಿಸ್ಥಿಯ ಲಾಭ ಎತ್ತುವುದರಲ್ಲಿ ನಿಸ್ಸಿಮವಾಗಿರುವವರನ್ನು ಹೀಗೆ ಅಧೀಕೃತವಾಗೇ ಹೊಡೆಯುವ ನಿಖರ ಔಚಿತ್ಯ ಕೈಗೊಳ್ಳಲೇಬೇಕಿತ್ತು. ಕಾರಣ ಕಾಶ್ಮೀರದಾದ್ಯಂತ ಲಭ್ಯವಿರುವ ಖೋಟಾ ನೋಟು ಮತ್ತು ಕಪ್ಪು ಹಣದ ಚಲಾವಣೆಯ ಸಂಖ್ಯೆ ನೂರಕ್ಕೆ, ನೂರಾ ಒಂಭತ್ತು ದಾಟಿತ್ತು ಎನ್ನುತ್ತದೆ ಸಮೀಕ್ಷೆ. ಅದರೊಂದಿಗೆ ಎದುರಿಗೇ ಇರುವ ಉ.ಪ್ರ. ಚುನಾವಣೆಯಲ್ಲಿ ಹರಿದು ಬರಲಿದ್ದ ಕಪ್ಪುಹಣದ ಮೊತ್ತವೇ ಮೂವತ್ತು ಸಾವಿರ ಕೋಟಿ ಮೀರಲಿತ್ತು. ಏನಾಗಬೇಡ ಒಂದು ದೇಶದ ಆರ್ಥಿಕತೆ. ಮೋದಿಯವರನ್ನು ಹೊರತು ಪಡಿಸಿದರೆ ಇನ್ನೊಬ್ಬೆ ಒಬ್ಬ ಮೀಟರು ಇರುವ ಪ್ರಧಾನಿ ಭವಿಷ್ಯತ್ತಿನಲ್ಲಿ ಬರುವ ಬಗ್ಗೆನೆ ನನಗೆ ಸಂಶಯವಿದೆ.

ಅದಕ್ಕೆ ಸರಿಯಾಗಿ ಇದ್ದಕ್ಕಿದ್ದಂತೆ ಆರ್ಥಿಕ ವ್ಯವಸ್ಥೆಯ ಮೇಲೂ ಸುಪರ್‍ಸ್ಟ್ರೋಕ್ ಹೊಡೆದು ಒಂದೇ ಆರ್ಡರ್‍ನಲ್ಲಿ ಸಂಪೂರ್ಣ ಭೂಗತ ಲೋಕ ಮತ್ತು ಶತ್ರುರಾಷ್ಟ್ರಗಳು ಸುಲಭವಾಗಿ ಭಾರತವನ್ನು ಅಸ್ಥಿರಗೊಳಿಸುವ ಯೋಜನೆ ರೂಪಿಸಿದ್ದುವಲ್ಲ ಅದನ್ನು ಯಾವ ಹಂತದಲ್ಲೂ ಮರುಬಳಕೆಗೂ, ಇನ್ಯಾವ ರೀತಿಯಲ್ಲೂ ಉಪಯೋಗಕ್ಕೆ ಬಾರದಂತೆ ಬರಬಾದು ಮಾಡಿ ಬಿಟ್ಟಿದ್ದಾರೆ. ಇನ್ನೆಲ್ಲಿಂದ ಎದ್ದು ಕೂರಬೇಕು ಖೋಟಾ ನೋಟಿನ ಜಾಲ. ಒಂದು ಗೊತ್ತಿರಲಿ. ಭಾರತದೊಳಕ್ಕೆ ಬರುತ್ತಿದ್ದ ಖೋಟಾ ನೋಟಿನ ಜಾಲದ ವ್ಯವಸ್ಥೆ ಇಲ್ಲೊಂದು ಪ್ರಬಲ ಸಮಾನಾಂತರ ಆರ್ಥಿಕತೆಯನ್ನೇ (ಬ್ಲಾಕ್ ಎಕಾನಮಿ) ಹುಟ್ಟು ಹಾಕಿತ್ತು. ಅದ್ಯಾವ ರೀತಿಯಲ್ಲಿ ಬೆಳೆದು ನಿಂತಿತ್ತೆಂದರೆ ಯಾವ ಮುಲಾಜೂ ಇಲ್ಲದೆ ದಾಳಿ ಮಾಡಿದರೂ ನಿಯಂತ್ರಣ ಅಸಾಧ್ಯವೇ ಎನ್ನುವ ಹಂತವನ್ನು ತಲುಪಿ ಬಿಟ್ಟಿತ್ತು. ಹಾಗಾಗೇ ದೇಶಿಯವಾಗೂ ಮತ್ತು ಅಂತರಾಷ್ಟ್ರೀಯವಾಗೂ ಭಾರತವನ್ನು ಪ್ರಬಲಗೊಳಿಸುವ ಉದ್ದೇಶದಿಂದ ಮೋದಿ ಮೂರೂವರೆ ತಿಂಗಳಿಂದ ರಹಸ್ಯವಾಗಿ ಕಾರ್ಯಾಚರಣೆಗಿಳಿದಿದ್ದ ಯೋಜನೆಯನ್ನು ಅನಾಮತ್ತಾಗಿ ಜಾರಿಗೆ ತಂದರು.

ಇದರಿಂದಾಗಿ ಸರಾಸರಿ ತಿಂಗಳಿಗೆ ಭಾರತದಲ್ಲಿದ್ದ ಎಜೆಂಟರಿಗೆ ಸಲ್ಲಿಕೆಯಾದ ನಂತರವೂ ಉಳಿಯುತ್ತಿದ್ದ ಐನೂರು ಕೋಟಿಯಷ್ಟು ಪಾಕಿಸ್ತಾನದ ಮಂತ್ಲಿ ಆಮದನಿಗೆ ಬ್ರೆಕ್ ಬಿದ್ದಿದೆ. ಅಲ್ಲಿಂದ ಬರುತ್ತಿದ್ದ ಖೋಟಾ ನೋಟು ಹಾವಳಿ ಯಾವ ರೀತಿಯಲ್ಲೂ ನಿಲ್ಲಿಸಲಾಗುತ್ತಲೇ ಇಲ್ಲ. ಆವತ್ತು ಸಿಕ್ಕಿ ಬಿದ್ದ ಹ್ಯಾಡ್ಲಿ ಮತ್ತು ಬಾಂಗ್ಲಾದಿಂದ ಆಮುದಾದ ವಸ್ತುವಿನಲ್ಲಿದ್ದ ಕಪ್ಪು ಹಣ ಮತ್ತು ಪ್ರತಿ ಬಾರಿ ಭಯೋತ್ಪಾದಕರ ಜೋಬಿನಲ್ಲಿರುತ್ತಿದ್ದ ಕಂತೆಗಟ್ಟಲೇ ಹಣಗಳೂ, ತೀರ ಅಸಲಿಯನ್ನೇ ಹೋಲುವ ಖೋಟಾ ನೋಟು ಪಾಕಿಸ್ತಾನದ ಉತ್ಪನ್ನವೇ ಆಗಿರುತ್ತಿತ್ತು ಎನ್ನುವುದನ್ನು ಬೇರೆ ಹೇಳಬೇಕಿಲ್ಲ.

(ಇದ್ದಕ್ಕಿದ್ದಂತೆ ಆರ್ಥಿಕ ಸ್ಟ್ರೋಕ್‍ನ ಸಿಕ್ಸರ್ ಭಾರಿಸಿದ ಪ್ರಧಾನಿಯ ಹೊಡೆತಕ್ಕೆ ಅಕ್ಷರಶ: ಕಪ್ಪುಹಣದ ಧಣಿಗಳು ಅಲ್ಲಾಡಿ ಹೋಗಿದ್ದಾರೆ. ಪ್ರಧಾನಿ ಅದ್ಯಾವ ಮಟ್ಟದಲ್ಲಿ ಆಪತ್ತು ಎದಿರು ಹಾಕಿಕೊಂಡಿದ್ದಾರೆಂದರೆ ಅವರ ಶತ್ರುಗಳ ಸಂಖ್ಯೆ ಒಂದೇ ನಿಮಿಷದಲ್ಲಿ ಸಾವಿರ ಪಟ್ಟು ಹೆಚ್ಚಿದ್ದು ಸುಳ್ಳಲ್ಲ. ಆದರೆ ಈ ದೇಶ ಒಮ್ಮೆ ತೀರ ನಿಶ್ಚಿಂತೆಯಿಂದ ನಿದ್ರಿಸುವಂತಹ, ನಮಗೊಬ್ಬ ನಾಯಕನಿದ್ದಾನೆ ಎನ್ನಿಸುವಂತಹ ಕೋಟ್ಯಾಂತರ ಭಾರತೀಯರ ಬೆಂಬಲವನ್ನೂ ಒಂದೇ ಒಂದು ಕವರ್‍ಡ್ರೈವ್‍ನಿಂದ ಗಿಟ್ಟಿಸಿ ಬಿಟ್ಟಿದ್ದಾರೆ ಮತ್ತು ಈ ವಿಷಯವೇ ಇವತ್ತು ಕಳೆದುಕೊಂಡ ಕಪ್ಪು ಹಣಕ್ಕಿಂತಲೂ ಮಿಗಿಲಾಗಿ ಮರ್ಮಾಘಾತವನ್ನುಂಟು ಮಾಡಿದ್ದು ಎದುರಾಳಿಗಳಿಗೆ. ಒಂದು ಸರ್ಜಿಕಲ್ ಸ್ಟ್ರೈಕೇ ಇನ್ನೂ ಜೀರ್ಣವಾಗಿರಲಿಲ್ಲ. ಅಡ್ಡೇಟಿನ ಮೇಲೆ ಗುದ್ದೇಟು ಎನ್ನುವಂತೆ ಮೋದಿ ಇದನ್ನೂ ಬಾರಿಸಿ ಬಿಟ್ಟಿದ್ದಾರೆ, ಎಂದಿನಂತೆ ಎಬುಜೀಗಳು ಪಿಸಣಾರಿತನದಿಂದ ಮುಲಮುಲ ಎನ್ನತೊಡಗಿದ್ದಾರೆ ಕ್ಷೀಣವಾಗಿ..)

ಪ್ರತಿ ರಾಜ್ಯದಲ್ಲೂ ಬೇರೆ ಬೇರೆ ರೀತಿಯ ಕಮೀಶನ್ ಮೂಲಕ ಒಳ ನುಸುಳುತ್ತಿದ್ದ ಕಪ್ಪು ಹಣದ ಖೋಟಾ ನೋಟು ಉತ್ತರ ಭಾರತದಲ್ಲಿ ಅದರಲ್ಲೂ ಶಿಕ್ಷಣ ವ್ಯವಸ್ಥೆ ಇವತ್ತಿಗೂ ಮೇಲಕ್ಕೆತ್ತಲಾಗದ ಸ್ಥಿತಿಯಲಿದ್ದ ಏರಿಯಾಗಳಲ್ಲಿ ಸುಲಭವಾಗಿ ಸಂಚಲನಕ್ಕೆ ಕಾರಣವಾಗುತ್ತಿತ್ತು. ಅಲ್ಲೆಲ್ಲಾ ದಶಕಗಳಿಂದಲೂ ಖೋಟಾ ನೋಟು ತೀರ ಸಾಮಾನ್ಯ ಎನ್ನುವ ರೀತಿಯಲ್ಲೂ ಬಳಕೆಯಾಗುತ್ತಲೇ ಇತ್ತು. ಇದರಿಂದಾಗಿ ಹೆಚ್ಚಾಗಿ ಉತ್ತರಪ್ರದೇಶ, ಬಿಹಾರ್, ಒಡಿಸ್ಸ ಮತ್ತು ಪಶ್ಚಿಮ ಬಂಗಾಲದಲ್ಲಿ(ಇದಂತೂ ಕಮ್ಮಿ ನಿಷ್ಟೆಯವರ ಕೈಯ್ಯಲ್ಲಿ ಅದ್ಯಾವ ಮಟಕ್ಕೆ ಹಡಾಲೆದ್ದು ಹೋಗಿದೆಯೆಂದರೆ ವೈಭವೋಪೇತ ದಿನಗಳನ್ನು ಕಾಣಲು ಮೂರು ದಶಕಗಳೇ ಬೇಕೇನೊ) ತೀವ್ರ ಎನ್ನುವ ಪರಿಣಾಮಕ್ಕೆ ಭಾರತೀಯ ಆರ್ಥಿಕತೆಗೆ ತುತ್ತಾಗುತ್ತಲೇ ಇತ್ತು. ಕೊನೆ ಕೊನೆಗೆ ಎಷ್ಟೆಂದರೆ ಪ್ರತಿ ನೂರರ ಒಂದು ಕಟ್ಟಿನಲ್ಲಿ ಸಲೀಸಾಗಿ ಹತ್ತು ಖೋಟಾ ನೋಟುಗಳು ನುಸುಳುವಷ್ಟು ಪ್ರಬಲವಾಗಿ ಇಂತಹ ವ್ಯವಹಾರದ ಮೇಲೆ ಪಾಕಿಸ್ತಾನದ ಆರ್ಥಿಕ ಭಯೋತ್ಪಾದನೆ ತನ್ನ ಹಿಡಿತ ಸಾಧಿಸಿತ್ತು. ಅದರಲ್ಲೂ ಪ್ರತಿ ರಾಜ್ಯಗಳಿಗೂ ಒಂದೊಂದು ಬೆಲೆಯನ್ನು ನಿಗದಿಪಡಿಸಲಾಗಿತ್ತು.

ಬಿಹಾರದಲ್ಲಿ ಒಂದು ಲಕ್ಷಕ್ಕೆ ಎಪ್ಪತ್ತು ಸಾವಿರ ಮತ್ತು ಉತ್ತರಪ್ರದೇಶದ ಕೆಲಭಾಗದಲ್ಲಿ ಅರವತ್ತು ಸಾವಿರ ಹಾಗು ಓಡಿಸ್ಸಾದಲ್ಲಿ ಎಂಭತ್ತು ಮತ್ತು ದಿಲ್ಲಿ ಆಸುಪಾಸಿನಲ್ಲಿ ತೊಂಭತ್ತಕ್ಕೆ ಒಂದು ಲಕ್ಷ ಖೋಟಾ ನೋಟು ಬಿಕರಿಯಾಗುತ್ತಿತ್ತು. ಅಂದರೆ ಒಂದು ಲಕ್ಷ ಪಾಕಿಸ್ತಾನದ ಭಾರತೀಯ ಕರೆನ್ಸಿ ಬದಲಿಗೆ, ಮೇಲ್ಕಾಣಿಸಿದ ಮೊತ್ತದ ಅಸಲಿ ನೋಟುಗಳು ಬದಲಾಗುತ್ತಿದ್ದವು. ಇದರಲ್ಲೂ ಎರಡು ರೀತಿಯ ಫಾಯಿದೆ ಇತ್ತು. ಒಂದು ಇಲ್ಲಿನ ಕಪ್ಪು ಹಣದ ಚಲಾವಣೆ  ಸುಲಭ ಸಾಧ್ಯವಾಗುತ್ತಿತ್ತು ಮತ್ತು ಅಸಲಿಗೆ ಖೋಟಾನೋಟನ್ನು ನೀಡುವ ಮೂಲಕ ಅಸಲಿನ ಹಣವನ್ನೇ ಕಪ್ಪು ಹಣವನ್ನಾಗಿ ಪರಿವರ್ತಿಸಿ ಸಂಗ್ರಹಿಸುವ ಮೂಲಕ ಅಗಾಧ ವೈಪರಿತ್ಯವನ್ನು ಭಾರತೀಯ ಅರ್ಥ ವ್ಯವಸ್ಥೆಯ ಮೇಲೆ ಹೇರಲಾಗುತ್ತಿತ್ತು.

ಇದಕ್ಕೆಲ್ಲಾ ಬೆಂಬಲವಾಗಿ ನಿಲ್ಲುತ್ತಿದ್ದುದು ಪಾಕಿಸ್ತಾನದ ಪರಮ ನಿರ್ಲಜ್ಯ ಪಾತಕಿ ದಾವುದ್ ಮತ್ತವನ ಸಹಚರರು. ಅವನ ಎಜೆಂಟರ ಮೂಲಕ ಮತ್ತು ಇತರ ದೇಶಗಳ ಹವಲಾ ನೆಟ್‍ವರ್ಕ ಮೂಲಕ ಭಾರತದೊಳಕ್ಕೆ ಬರುತ್ತಿದ್ದ ಕಪ್ಪು ಹಣ ಮತ್ತು ಖೋಟಾ ನೋಟುಗಳು ಎಗ್ಗಿಲ್ಲದೆ ಸರಿದಾಡುತ್ತಿದ್ದುದರಿಂದಲೇ ಆರ್ಥ ವ್ಯವಸ್ಥೆಯಲ್ಲಿ ನಮ್ಮ ಸೂಚ್ಯಂಕ ಯಾವತ್ತೂ ಮೇಲಕ್ಕೆ ಹೋಗುತ್ತಲೇ ಇರಲಿಲ್ಲ ಮತ್ತು ಈ ಸಮಸ್ಯೆ ಮೋದಿಯಂತಹ ಪ್ರಧಾನಿಯೊಬ್ಬರು ಕೈಗೆತ್ತಿಕೊಳ್ಳದಿದ್ದರೆ ಎಷ್ಟೇ ದಶಕಗಳು ಕಳೆದರೂ ಬದಲಾಗುತ್ತಿರಲಿಲ್ಲ.

ಆದಾಗ್ಯೂ ಸಹಜ ಮತ್ತು ಕೆಳಹಂತದ ಜನರಿಗೆ ಇದರ ಬಿಸಿ ತಟ್ಟಿರಲಿಲ್ಲವಾದರೂ, ಇದ್ದಕ್ಕಿಂತ ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ಬದುಕಿನ ಮೇಲೆ ಪರಿಣಾಮ ಬೀರುತ್ತಿದ್ದ ಬೆಲೆ ಏರಿಕೆಯ ಅಂದಾಜೇ ನಮ್ಮಲ್ಲಿ ಜನ ಸಾಮಾನ್ಯನಿಗೆ ಸಿಕ್ಕುತ್ತಿರಲಿಲ್ಲ. ಎಲ್ಲೆಲ್ಲೂ ಭತ್ತವಿದೆ ಆದರೆ ಅಕ್ಕಿ ಮಾತ್ರ ಅನಾಮತ್ತಾಗಿ ಐವತ್ತರ ಆಸುಪಾಸಿಗಿದೆ. ಲೆಕ್ಕದ ಹೊರಗೆ ಗೋಧಿ ಬೆಳೆಯುತ್ತಿದ್ದೇವೆ ಆದರೆ ರೇಟು ಮಾತ್ರ ಕೆಳಗಿಳಿಯುತ್ತಿಲ್ಲ, ಯಾವಾಗ ಯಾವ ರೀತಿಯಲ್ಲಿ ಲೆಕ್ಕಿಸಿದರೂ ಮಾರುಕಟ್ಟೆ ಯಾಕೆ ಪಲ್ಲಟಗೊಳ್ಳುತ್ತಿದೆ ಎನ್ನುವ ಲಾಜಿಕ್ಕೆ ಬುಡಮೇಲಾಗುತ್ತಿತ್ತು. ಇದಕ್ಕೂ ಹುಯಿಲು ಎಬ್ಬಿಸುವ ಬುದ್ಧಿಜೀವಿಗಳ ಬಗ್ಗೆ ಬರೆಯ ಹೊರಟರೆ ಅವರಿಗೂ ಇದೆಲ್ಲಾ ಗೊತ್ತಿಲ್ಲದ್ದೇನೂ ಅಲ್ಲ. ಆದರೂ ಗಂಜಿ ಕುಡಿದು ಆಶ್ರಯ ಪಡೆದಿದ್ದಾರಾದ್ದರಿಂದ ಅವರು ಇದನ್ನು ವಿರೋಧಿಸಲೇಬೇಕು. ಹಾಗೆ ವಿರೋಧಿಸಿ ಇದ್ದಬದ್ದ ಮಾನ್ಯ ಮರ್ಯಾದೆಯನ್ನೂ ಸಾಂಸ್ಕೃತಿಕ ವಲಯದಾಚೆಗೂ ಹರಾಜು ಹಾಕಿಕೊಂಡುಬಿಟ್ಟಿದ್ದಾರೆ. ಅದಕ್ಕೆ ಸರಿಯಾಗಿ

” ಅಯ್ಯೋ.. ಬಡವರ ಗತಿಯೇನು..? “

” ಹೀಗೆ ಇದ್ದಕ್ಕಿದ್ದಂತೆ ನೋಟುಗಳನ್ನು ಕಿತ್ತುಕೊಂಡರೆ ಬಡ ಭಾರತೀಯ ಬದುಕುವುದು ಹೇಗೆ..? “

” ಮೊದಲು ಎರಡು ಸಾವಿರ ನೋಟಿನಲ್ಲಿ ಚಿಪ್ ಇರುತ್ತದೆಂದರು ಈಗ ನೋಡಿದರೆ ಇರುವುದಿಲ್ಲವಂತೆ ಅಂದರೆ ಭ್ರಷ್ಟಾಚಾರ ಸಾವಿರದ ಬದಲಿಗೆ ಎರಡು ಸಾವಿರದ ನೋಟಿನಲ್ಲಿ ಚಲಾವಣೆಗೆ ಬರಲಿದೆ. ಇದರಿಂದ ಬಿ.ಜೆ.ಪಿ. ಯವರಿಗೇ ಡಬ್ಬಲ್ ಧಮಾಕ”

ಎಂಬಿತ್ಯಾದಿ ಬಾಯಿ ತುರಿಕೆ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರು ಒಂದು ಕಡೆಯಾದರೆ, ಮೋದಿ ಮತ್ತು ಕೇಂದ್ರ ಸರಕಾರವನ್ನು ಹಣಿಯಲೆಂದೇ ಸಾಮಾಜಿಕ ಜಾಲ ತಾಣ ನಿರ್ವಹಿಸಲು ಕೂತಿರುವ ಕೆಲವು ಬರಗೆಟ್ಟ ಹೆಂಗಸರು, ” ಇದರಿಂದ ಭಾರತೀಯ ಬಡವರಿಗೆ ಯಾವ ಉಪಯೋಗವೂ ಇಲ್ಲ.. ” ಎಂದು ಹುಯಿಲಿಡತೊಡಗಿದ್ದರು. ಕಾರಣವಿಷ್ಟೆ ಇವರಿಗೆಲ್ಲಾ ಸಲ್ಲುತ್ತಿದ್ದುದೇ ಇಂಥಾ ಕಪ್ಪುಹಣದ ರೂಪದಲ್ಲಿದ್ದ ಸಾವಿರ ಮುಖ ಬೆಲೆಯ ನೋಟುಗಳು ಮತ್ತು ಅಂತಹ ಹರಾಮಿ ದುಡ್ಡಿನಿಂದಲೇ ಬದುಕು, ಬರಹ ಕಟ್ಟಿಕೊಂಡು ಸರಸ್ವತಿಗೂ ದ್ರೋಹ ಬಗೆಯುತ್ತಾ, ಸಾಮಾಜಿಕ ಜಾಲತಾಣದಲ್ಲಿ ಕಂಡವರ ಮನೆಗಳ ಮಧ್ಯೆ ಮನಸ್ತಾಪಕ್ಕೂ ಕಾರಣವಾಗುತ್ತಿದ್ದರು.

ಈಗ ಇಷ್ಟು ಸಲೀಸಾಗಿ ಅದಿನ್ಯಾವನು ಇವರನ್ನೆಲ್ಲಾ ಪುಗಸಟ್ಟೆ ಸಾಕುತ್ತಾನೆ. ಅದರಲ್ಲೂ ಬೆಂಗಳೂರಿನ ಬದುಕಿಗೆ ಗಾಡಿ, ಮಕ್ಕಳ ಫೀಸು, ಬಾಡಿಗೆ ಮನೆ ಮತ್ತು ಇನ್ನಿತರ ಶೃಂಗಾರ ಸಾಧನಗಳ ಖರ್ಚಿಗೆ ಕನಿಷ್ಟ ಮೂವತ್ತು ಸಾವಿರಗಳಾದರೂ ಬೇಕು. ಅಂದಹದ್ದನ್ನೆಲ್ಲಾ ಇವತ್ತು ನೌಕರಿ, ಚಾಕರಿ ಮತ್ತೊಂದು ಮದಲೊಂದು ಏನೂ ಇಲ್ಲದೆ ಮನೆಯಲ್ಲಿ ಇದ್ದೇ, ಬರೀ ಸಾಮಾಜಿಕ ಜಾಲತಾಣದಲ್ಲಿ ಸಮಾಜ ದ್ರೋಹಿ, ದೇಶದ್ರೋಹಿ ಚಿಂತನೆ ಬಿತ್ತುತ್ತಾ ಬದುಕುತ್ತಿರುವವರಿಗೆ ಸುಲಭವಾಗಿ ಸಂಪಾದನೆ ಹೇಗೆ ಸಾಧ್ಯ ಎನ್ನುವ ಅಧ್ಬುತ ಲಾಜಿಕ್ಕನ್ನೆಲ್ಲಾ ನಾನಿಲ್ಲಿ ವಿವರಿಸಬೇಕಿಲ್ಲ. ಏನಿದ್ದರೂ ಪಾಶ್ಚಾತ್ಯ ದೇಶಗಳ ದುಡ್ಡು ದುಗ್ಗಾಣಿ ಮೇಲೆ ಬದುಕುತ್ತಿದೆ ಇಂಥವರ ಮನೆ ಮನಸ್ಸು ಎರಡೂ. ಹಾಗಾದರೆ ಇಲ್ಲಿರುವ ಬಡ ಭಾರತೀಯನ ಪರಿಸ್ಥಿತಿ..? ಅದಕ್ಕಾಗೇ ಇಂತಹದ್ದೊಂದು ದಿಟ್ಟ ನಿರ್ಧಾರ ಕೈಗೊಳ್ಳಬೇಕಾಯಿತು ಪ್ರಧಾನಿ. ಆದರೆ ಇಲ್ಲಿ ನೋಡಿ. ಇಂತಹದ್ದೊಂದು ಬೆಳವಣಿಗೆಯ ಮೂಲಕ ಎಲ್ಲಾ ಕಪ್ಪು ಹಣದ ಬಾಗಿಲನ್ನು ಶಟರ್ ಸಮೇತ ಎಳೆದು ಕಟ್ಟಿ ಹಾಕಿದ್ದರೆ, ವಿಲವಿಲ ಎನ್ನುತ್ತಿರುವ ದ್ರೋಹಿಗಳ ಪಡೆ ಇದನ್ನೂ ಮೊದಲೇ ಹೇಳಿ ಮಾಡಬೇಕಿತ್ತು ಎನ್ನುತ್ತಿದೆ. ಅಲ್ಲಿಗೆ ಇಂಥವರದ್ದೆಲ್ಲಾ ಮರ್ಮ ಏನು ಎನ್ನುವುದು ಗೊತ್ತಾಯಿತಲ್ಲ.

ಒಂದು ನೆನಪಿರಲಿ, ಪಾಕಿಸ್ತಾನ ನೇರ ಯುದ್ಧಕೆ ಸಿಕ್ಕದೆ ಬರೀದೆ ಕಳ್ಳಾಟ ಆಡುತ್ತಿದ್ದುದರಿಂದ ಅದನ್ನು ಅವರದೇ ಸರಹದ್ದಿಗೆ ನುಗ್ಗಿ ಬಡಿದು ಬಂದದ್ದಾಯಿತು. ಇತ್ತ ಒಳಗೊಳಗೇ ದೇಶದ ಸುರಕ್ಷತೆಗೆ ಆತಂಕ ಮತ್ತು ಭದ್ರತೆಗೆ ಸಮಸ್ಯೆ ಎರಡನ್ನೂ ಒಡ್ಡುತ್ತಿದ್ದ ಸಿಮಿ ಉಗ್ರರನ್ನು ಹೊಡೆದು ಮಲಗಿಸಲಾಯಿತು (ಇನ್ನೇನು ಅವರೆಲ್ಲಾ ಉಗ್ರರೇ ಎಂದು ಗೊತ್ತಾದ ಮೇಲೂ ಅವರನ್ನು ಬಿಸಿನೀರು, ಮುದ್ದೆ, ಚಾಕಣ ಕೊಟ್ಟು ಸಾಕಬೇಕಿತ್ತೇ..?) ಇದೀಗ ಅದೆಲ್ಲದರೆ ತಾಯಿ ಬೇರಿನಂತಿದ್ದ ಕಪ್ಪುಹಣದ ಶಕ್ತಿಯನ್ನು, ಆರ್ಥಿಕ ತುರ್ತುಪರಿಸ್ಥಿತಿಯ ಮೂಲಕ ಸದೆ ಬಡೆಯಲಾಗುತ್ತಿದೆ. ಆದರೆ ಇದರ ಇನ್ನೊಂದು ಮಗ್ಗುಲಿಗೆ ನಿಂತು ನೋಡಿದರೆ ಇದನ್ನು ವಿರೋಧಿಸುತ್ತಾ ವಿತಂಡವಾದ ಮಾಡುತ್ತಿರುವವರು, ಪರೋಕ್ಷವಾಗಿ ಭಯೋತ್ಪಾದನೆಯ ಬೆಂಬಲಿಗರೇ ಆಗುತ್ತಾರಲ್ಲವೇ..?

ಕಾರಣ ಇವತ್ತು ಇಂಥಾ ಆರ್ಥಿಕ ನೀತಿಯನ್ನು ವಿರೋಧಿಸುವವರು, ಮೆತ್ತಗೆ ಸಿಮಿ ಉಗ್ರರನ್ನು ಎನ್‍ಕೌಂಟರ್ ಮಾಡಬಾರದಿತ್ತು ಎನ್ನುವವರಿಗೂ, ಅತ್ತ ಬುರ್ಹಾನ ವಾನಿಯನ್ನು ಹಿರೋ ಮಾಡುವವರಿಗೂ ಕೊನೆಗೆ ಅಫ್ಜಲ್ ಗುರುವನ್ನು ಹುತಾತ್ಮರನಾಗಿಸುವವರಿಗೂ ಏನಾದರೂ ವ್ಯತ್ಯಾಸ ಇದೆಯಾ ಎಂದರೆ ನೈಯಾ ಪೈಸೆಯಷ್ಟೂ ಫರಕ್ಕು ಕಾಣಿಸುತ್ತಿಲ್ಲ. ಕಾರಣ ನೇರವಾಗಿ ಅತ್ತ ಸೈನಿಕರು ಮತ್ತು ಪ್ರಧಾನಿಯ ಬಳಗ ಇದೆಲ್ಲದರ ವಿರುದ್ಧ ಹೊಡೆದಾಡುತ್ತಾ ಜೀವ ಪಣಕ್ಕಿಡುತ್ತಿದ್ದರೆ, ಒಳಾಗೊಳಗೆ ಅವರನ್ಯಾಕೆ ಬಡಿದ್ರಿ, ದುಡ್ಯಾಕೆ ಕ್ಯಾನ್ಸಲ್ ಮಾಡಿದ್ರಿ ಎನ್ನುವ ಪಿಸಣಾರಿ ಹೆಂಗಸರ/ಎಬುಜೀಗಳ ಮಾತುಗಳು ಬದುಕಿನ ಆಸಕ್ತಿ ಕಳೆದುಕೊಂಡ ರಸಹೀನ ಹೆಂಗಸೊಬ್ಬಳ ಪ್ರಲಾಪದಂತೆ ಅನ್ನಿಸುತ್ತದೆ ನನಗೆ. ಕಾರಣ ಬದುಕಲು, ಖುಷಿಪಡಲು ಎರಡಕ್ಕೂ ಇಂಥವರ ಬಳಿ ಕಾರಣಗಳಿರುವುದಿಲ್ಲ. ಏನಿದ್ದರೂ ಬರೀ ಬೇರೆಯವರ ಯಶಸ್ಸಿನ ಮೇಲೆ ನಂಜುಕಾರಿ ಬದುಕುವುದೇ ಧ್ಯೇಯವಾಗಿರುವಾಗ ಅಭಿವೃದ್ಧಿಯ ನಡೆ ಇವರ ಕಣ್ಣಿಗೆ ಧನಾತ್ಮಕವಾಗಿ ಕಾಣಿಸುವುದಾದರೂ ಹೇಗೆ…?

ಪ್ಲೀಸ್…ಪ್ಲೀಸ್… ಬದುಕಲು ಕಲಿಯಿರಿ ಇನ್ನಾದರೂ ನಿಯತ್ತಾಗಿ, ನೈತಿಕವಾಗಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Santoshkumar Mehandale

ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!