Featured ಅಂಕಣ

ಬಿಡಿಸಲಾಗದ ಸೃಷ್ಟಿಯ ಕಗ್ಗಂಟುಗಳು

ಈ ಭೂಮಂಡಲದ ಮೇಲೆ ಮನುಷ್ಯ ಪ್ರಾಣಿ ಹುಟ್ಟಿದಾಗಿನಿಂದಲೂ ಸುಮ್ಮನೆ ಕೂರುವ ವ್ಯವಧಾನವನ್ನು ಕಲಿತಿಲ್ಲ. ತನ್ನ ಸುತ್ತಲಿನ ಪ್ರಪಂಚದ ರಹಸ್ಯಗಳನ್ನು ಅರಿತುಕೊಳ್ಳಲು ಹರಸಾಹಸವನ್ನೇ ಮಾಡಿದ್ದಾನೆ ಹಾಗೂ ಮಾಡುತ್ತಲೇ ಇದ್ದಾನೆ. ಪ್ರತೀ ತಲೆಮಾರುಗಳು ತಮ್ಮ ಕೈಲಾದಷ್ಟು ಹೊಸ ಹೊಸ ಅಧ್ಯಯನಗಳನ್ನು ಮಾಡುವುದರ ಮೂಲಕ ಹಲವಾರು ಸೃಷ್ಟಿಯ ರಹಸ್ಯಗಳನ್ನು ಅರಿಯಲು ಶತಾಯ ಗತಾಯ ಪ್ರಯತ್ನ ಪಟ್ಟಿದ್ದಾನೆ. ಆದರೂ ಸೃಷ್ಟಿಯ ಮುಂದೆ ಮನುಷ್ಯ ಬರೀ ಸಣ್ಣದೊಂದು ಹುಳುವಷ್ಟೇ. ಎಲ್ಲವನ್ನೂ ತಿಳಿದವರಿಲ್ಲ ಎಂಬ ಮಾತಿನಂತೆ, ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಹುಡುಕುವುದೂ ಕಷ್ಟಸಾಧ್ಯ. ಯಾಕೆಂದರೆ ಸೃಷ್ಟಿಯ ನಿಯಮಗಳು ಮನುಷ್ಯನ ಯೋಚನೆಗೆ ನಿಲುಕದಷ್ಟು ಅಗಾಧವಾಗಿವೆ.

ಇದುವರೆಗೂ ತನ್ನ ಗಮನಕ್ಕೆ ಬಂದಿರುವ ಹಲವಾರು ಕುತೂಹಲಗಳಿಗೆ ಉತ್ತರ ಹುಡುಕುತ್ತ ಬಂದಿರುವ ಮನುಷ್ಯ ಎಲ್ಲವನ್ನು ಒಂದು ತಲೆಮಾರಿಂದ ಇನ್ನೊಂದು ತಲೆಮಾರಿಗೆ ಸಾಗಿಸುವಲ್ಲಿ ಸಂಪೂರ್ಣವಾಗಿ ಸಫಲನಾಗಿಲ್ಲದಿದ್ದರು, ಒಂದಷ್ಟು ರಹಸ್ಯಗಳಿಗೆ ತಾನು ಕಂಡುಕೊಂಡ ಉತ್ತರವನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಬಳುವಳಿಯಾಗಿ ಕೊಟ್ಟಿದ್ದಾನೆ. ಈವತ್ತು ನಮ್ಮಲ್ಲಿ ಅತ್ಯುನ್ನತವಾದ ತಂತ್ರಜ್ಞಾನವಿದೆ. ಸೃಷ್ಟಿಯ ಹಲವಾರು ರಹಸ್ಯಗಳಿಗೆ ನಮ್ಮ ಬಳಿ ಉತ್ತರವಿದ್ದರೂ, ಎಲ್ಲ ಸಂದರ್ಭದಲ್ಲಿಯೂ ಈ ಉತ್ತರಗಳಿಂದ ಕೆಲವೊಂದು ವಿಚಿತ್ರ ಸಂದರ್ಭಗಳನ್ನು ವಿವರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಇಂತಹ ಹಲವಾರು ರಹಸ್ಯಗಳು ಈಗಲೂ ನಮ್ಮನ್ನು ಸುತ್ತುವರೆದಿವೆ. ಸೃಷ್ಟಿಯ ಕೆಲವೊಂದು ಬಿಡಿಸಲಾಗದ ಕಗ್ಗಂಟುಗಳತ್ತ ಒಂದು ಸಣ್ಣ ಪ್ರಯಾಣ ಮಾಡಿ ಬರೋಣ ಬನ್ನಿ.
ಬರ್ಮುಡಾ ತ್ರಿಕೋನ (Bermuda Triangle)

ಬರ್ಮುಡಾ ತ್ರಿಕೋನ (Bermuda Triangle)

ಸೃಷ್ಟಿಯ ಹಲವಾರು ಬಿಡಿಸಲಾಗದ ರಹಸ್ಯಗಳ ಸಾಲಿಗೆ ಬರ್ಮುಡಾ ತ್ರಿಕೋನವೂ ಸಹ ಸೇರಿಕೊಳ್ಳುತ್ತದೆ. ಇದನ್ನು ಡೆವಿಲ್ಸ್ ಟ್ರಯಾಂಗಲ್(Devils Triangle) ಎಂದೂ ಕರೆಯಲಾಗುತ್ತದೆ. ಈ ಟ್ರಯಾಂಗಲ್ ಉತ್ತರ ಅಂಟ್ಲಾಂಟಿಕ್ ಸಾಗರದ ಪಶ್ಚಿಮ ಭಾಗದಲ್ಲಿದೆ. ಈ ಡೆವಿಲ್ಸ್ ತ್ರಿಕೋನ ಫ್ಲೋರಿಡಾ, ಸ್ಯಾನ್ ಜುಆನ್ ಹಾಗೂ ಬರ್ಮುಡಾ ಮಧ್ಯದಲ್ಲಿರುವ ಸಾಗರ. ಕಳೆದ ಒಂದು ಶತಮಾನದಲ್ಲಿ ಈ ತ್ರಿಕೋನದಲ್ಲಿ ಹಲವಾರೂ ವಿಮಾನಗಳೂ ಹಾಗೂ ದೋಣಿಗಳು ಸಣ್ಣ ಸುಳಿವೂ ಸಿಕ್ಕದಂತೆ ಮಾಯವಾಗಿಹೋಗಿವೆ. ಈ ಬರ್ಮುಡಾ ಟ್ರಯಾಂಗಲ್ ಸೃಷ್ಟಿಸುತ್ತಿರುವ ವಿಚಿತ್ರ ಘಟನೆಗಳು ಮನುಷ್ಯನ ತಲೆ ಕೆಡಿಸಿವೆ ಹಾಗೂ ವಿಜ್ಞಾನಕ್ಕೆ ಬಹು ದೊಡ್ಡ ಸವಾಲಾಗಿದೆ. ಭೌತಶಾಸ್ತ್ರದ ನಿಯಮಗಳನ್ನೇ ಬುಡಮೇಲು ಮಾಡಿದೆ. ಈ ತ್ರಿಕೋನದ ಒಳಗೆ ಸಿಲುಕಿಕೊಂಡು ಮರೆಯಾಗಿ ಹೋದವರ ಬಗ್ಗೆ ಮೊದಲು ತಿಳುದುಬಂದಿದ್ದು 1950ರಲ್ಲಿ. ಅಮೇರಿಕಾ ನೌಕಾದಳದ ಐದು ಬಾಂಬರ್ಸ್’ಗಳನ್ನುಹೊತ್ತ ಫ್ಲೈಟ್-19(Flight 19)  ವಿಮಾನ ಬರ್ಮುಡಾ ತ್ರಿಕೋನದ ಒಡಲಾಳ ಸೇರಿಬಿಡುತ್ತದೆ. ವಿಮಾನದ ನಾಯಕ ಕೊನೆಯ ಕ್ಷಣಗಳಲ್ಲಿ ಆಡಿದ ಮಾತುಗಳಿವು,

“We are entering white water, nothing seems right. We don’t know where we are, the water is green, no white.”

02_egypt-pyramid

ಈಜಿಪ್ಟ್’ನ ಪಿರಮಿಡ್’ಗಳು (Pyramids)

ಈಜಿಪ್ಟ್’ನ ಪಿರಮಿಡ್’ಗಳು ಬಿಡಿಸಲಾಗದ ಸೃಷ್ಟಿಯ ಕಗ್ಗಂಟುಗಳಲ್ಲಿ ಒಂದು. ಈ ಪಿರಮಿಡ್’ಗಳಲ್ಲಿ ಅಗಾಧವಾದ ಶಕ್ತಿ ಇದೆಯಂತೆ. ಈ ಬೃಹತ್ ಆಕಾರದ ಪಿರಮಿಡ್’ಗಳನ್ನು ಈಜಿಪ್ಟಿಯನ್ನರು ಹೇಗೆ ಕಟ್ಟಿದರು ಎನ್ನುವುದೇ ಉತ್ತರ ದೊರೆಯದೆ ಇರುವ ದೊಡ್ಡ ಪ್ರಶ್ನೆ. ಇನ್ನೊಂದು ವಿಚಿತ್ರ ಹಾಗೂ ನಂಬಲಸಾಧ್ಯವಾದ ಸಂಗತಿಯೆಂದರೆ, ಜಗತ್ತಿನಲ್ಲಿ ಚಕ್ರಗಳ ಆವಿಷ್ಕಾರವಾಗುವುದಕ್ಕಿಂತ ಮುಂಚೆಯೇ ಈ ಪಿರಮಿಡ್’ಗಳನ್ನು ಕಟ್ಟಲಾಗಿದೆಯಂತೆ.

ಈಜಿಪ್ಟ್ ಪಿರಾಮಿಡ್ಗಳಲ್ಲೇ ಬಹಳ ಪುರಾತನವಾದ ಪಿರಮಿಡ್ ಎಂದರೆ ಗೀಝ ಪಿರಮಿಡ್(Giza Pyramid). ಇದು ಗ್ರೇಟ್ ಪಿರಮಿಡ್ ಆಫ್ ಗೀಝ(Great Pyramid of Giza) ಎಂದೇ ಪ್ರಸಿದ್ಧವಾಗಿದೆ. ಪುರಾತನ ಕಾಲದ 7 ಅದ್ಭುತಗಳಲ್ಲಿ ಇದೂ ಒಂದು. ಪುರಾತನ ಕಾಲದ 7 ಅದ್ಭುತಗಳಲ್ಲಿ ಸದ್ಯಕ್ಕೆ ಉಳಿದಿರುವ ಏಕೈಕ ಅದ್ಭುತವೇ ಈ ಗೀಝ ಪಿರಮಿಡ್. ಹಲವಾರು ಶತಮಾನಗಳಿಂದಲೂ ಈ ಪಿರಮಿಡ್ ತನ್ನ ಅಸ್ತಿತ್ವವನ್ನು ಹಾಗೆ ಉಳಿಸಿಕೊಂಡು ಬಂದಿದೆಯಂತೆ. ಅದೆಂತ ಅದ್ಭುತವಾದ ಹಾಗೂ ವಿಶೇಷವಾದ ಶೈಲಿಯಲ್ಲಿ ಈ ಸ್ಮಾರಕವನ್ನು ಕಟ್ಟಿದ್ದಾರೋ..!

ಪಿರಮಿಡ್ ಪವರ್ (Pyramid Power)

ಪಿರಮಿಡ್’ಗಳ ಅಪಾರವಾದ ಶಕ್ತಿಯಿಂದ ಹಲವಾರೂ ಉಪಯೋಗಗಳಿವೆಯಂತೆ. ಈ ಪಿರಮಿಡ್’ಗಳು ಬರೀ ಮಮ್ಮಿಗಳನ್ನು ಸಂಗ್ರಹಿಸಿಡುವ ಗೋರಿಗಳಾಗಿರಲಿಲ್ಲ, ಜೊತೆಗೆ ಆಹಾರ ಪದಾರ್ಥಗಳನ್ನು ಹಲವಾರು ದಿನಗಳವರೆಗೆ ಪಿರಮಿಡ್’ಗಳಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಹಾಗೂ ಮನುಷ್ಯನ ಆರೋಗ್ಯದ ಗುಣಮಟ್ಟವನ್ನು ಸುಧಾರಿಸಲು, ಶಸ್ತ್ರಾಸ್ತ್ರಗಳ ಗುಣಮಟ್ಟವನ್ನು ಕಾಪಾಡಲು ಪಿರಮಿಡ್’ಗಳ ಶಕ್ತಿಯನ್ನು ಬಳಸಿಕೊಳ್ಳುತ್ತಿದ್ದರು ಈಜಿಪ್ಟಿಯನ್ನರು.

ಅಪರಿಚಿತ ಹಾರಾಡುವ ವಸ್ತುಗಳು ಅಥವಾ ಹಾರುವ ತಟ್ಟೆಗಳು (UFO)

ಅಪರಿಚಿತ ಹಾರಾಡುವ ವಸ್ತುಗಳು ಅಥವಾ ಹಾರುವ ತಟ್ಟೆಗಳು (UFO)

ಹಾರುವ ತಟ್ಟೆ ಅಥವಾ UFO (Unidentified Flying Objects)ಗಳು ಇಂದಿಗೂ ರಹಸ್ಯವಾಗಿಯೇ ಉಳಿದಿರುವ ವಿಷಯ. ಇವುಗಳ ಬಗ್ಗೆ ನಮಗೆ ಖಚಿತವಾದ ಮಾಹಿತಿಯೇ ಇಲ್ಲ. ಅಲ್ಲಿ ಇಲ್ಲಿ ಕಂಡವು ಎಂಬ ಸುದ್ದಿಯನ್ನು ನೀವು ಕೇಳಿರುತ್ತೀರಿ. ಆದರೆ ನಿಜವಾಗಿಯೂ ಇಂತಹ ಸಂಗತಿಯೊಂದು ಇದೆ ಎಂಬುದನ್ನೇ ನಂಬಲಸಾಧ್ಯ. ಅಸಲಿಗೆ ಈ ಪದವನ್ನು ಹುಟ್ಟುಹಾಕಿದ್ದು ಅಮೇರಿಕಾ ಸಂಯುಕ್ತ ಸಂಸ್ಥಾನಗಳ ವಾಯುಪಡೆ. ನಮ್ಮ ಕಣ್ಣಿಗೆ ಸರಿಯಾಗಿ ಗೋಚರಿಸದ ಹಾಗೂ ಗುರುತಿಸಲಾಗದ ವಸ್ತುಗಳಿಗೆ UFO ಎಂದು ಕರೆಯಲಾಗುತ್ತದೆ. ಈ UFO ಗಳು ಅನ್ಯ ಲೋಕದ ಬಾಹ್ಯಾಕಾಶ ನೌಕೆಗಳೆಂದೂ ಉಲ್ಲೇಖವಿದೆ. ಏಲಿಯನ್’ಗಳು ಈ ಹಾರುವ ತಟ್ಟೆಗಳಲ್ಲಿಯೇ ಸಂಚರಿಸುತ್ತವೆಯಂತೆ.

UFOಗಳ ಮೇಲೆ ಹಲವಾರು ಸಂಶೋಧನೆಗಳು ನಡೆದಿವೆ ಹಾಗೂ ಇನ್ನೂ ನಡೆಯುತ್ತಲೇ ಇವೆ. ಹಲವಾರು ದೇಶಗಳ ಸರಕಾರ ಇವುಗಳ ಅಧ್ಯಯನ ನಡೆಸಿವೆ. ಅವುಗಳಲ್ಲಿ ಪ್ರಮುಖವಾದ ರಾಷ್ಟ್ರಗಳೆಂದರೆ ಅಮೇರಿಕಾ, ರಶಿಯಾ, ಕೆನೆಡಾ, ಮೆಕ್ಸಿಕೋ, ಸ್ಪೇನ್, ಬ್ರೆಜಿಲ್, ಫ್ರಾನ್ಸ್, ಪೆರು ಹಾಗೂ ಜಪಾನ್. ಈ ಸೃಷ್ಟಿಯಲ್ಲಿ ಅಡಗಿರುವ ಇನ್ನೂ ಬಗೆಹರಿಸಲಾಗದ ರಹಸ್ಯಗಳಲ್ಲಿ ಈ ಹಾರುವ ತಟ್ಟೆಗಳು ಸೇರಿಕೊಳ್ಳುತ್ತವೆ.

ಸ್ಟೋನ್ ಹೆಂಜ್ (Stonehenge)

ಸ್ಟೋನ್ ಹೆಂಜ್ (Stonehenge)

ಈ ಸ್ಟೋನ್ ಹೆಂಜ್ ಹುಟ್ಟಿಸುತ್ತಿರುವ ಊಹಾಪೋಹಾಗಳನ್ನು ಬಹುಷಃ ಇನ್ಯಾವ ಸ್ಥಳವೂ ಹುಟ್ಟಿಸಿರಲಿಕ್ಕಿಲ್ಲ. ಈ ಅಗಾಧವಾದ ಸೃಷ್ಟಿಯೊಳಗೆ ಹುದುಗಿಹೋಗಿರುವ ವಿಚಿತ್ರ ಹಾಗೂ ರಹಸ್ಯಗಳ ಸಾಲಿಗೆ ಈ ಸ್ಟೋನ್ ಹೆಂಜ್ ಕೂಡ ಸೇರಿಕೊಳ್ಳುತ್ತದೆ. ಈ ಸ್ಟೋನ್ ಹೆಂಜ್ ಇರುವುದು ಇಂಗ್ಲೆಂಡಿನ ಗ್ರಾಮಾಂತರ ಪ್ರದೇಶದಲ್ಲಿ. ಈ ವಿಚಿತ್ರ ಶೈಲಿಯ ಸ್ಮಾರಕ ಎಂತವರನ್ನು ಒಮ್ಮೆ ಅದರತ್ತ ಕಣ್ಣು ಹಾಯಿಸುವಂತೆ ಮಾಡುತ್ತದೆ. ಸುಮಾರು 5000 ಸಾವಿರ ವರುಷಗಳಿಂದ ಈ ಸ್ಮಾರಕ ಹಾಗೆಯೇ ನಿಂತಿದೆಯಂತೆ. ವಿಶಿಷ್ಟವಾದ ಶೈಲಿಯಲ್ಲಿ ಕಟ್ಟಲಾಗಿರುವ ಈ ಸ್ಮಾರಕವನ್ನು ಅಸಲಿಗೆ ಯಾವ ಕಾರಣಕ್ಕೆ ಕಟ್ಟಲಾಗಿದೆ ಅನ್ನೋದೇ ಇನ್ನು ಸರಿಯಾಗಿ ತಿಳಿಯದ ರಹಸ್ಯ.

05_lost-city-of-atlantis

ಸುಮಾರ 2300 ವರ್ಷಗಳ ಹಿಂದೆ ಖ್ಯಾತ ತತ್ತ್ವಜ್ಞಾನಿ ಪ್ಲಾಟೋ ಅತ್ಯಂತ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ, ಶ್ರೀಮಂತ ಹಾಗೂ ಶಾಂತಿ ತುಂಬಿದ ಒಂದು ಸುಂದರ ನಾಗರೀಕತೆಯ ಬಗ್ಗೆ ಉಲ್ಲೇಖಿಸಿದ್ದಾನಂತೆ. ಅದೊಂದು ಸುಂದರ ನಗರ. ಪುಟ್ಟ ದ್ವೀಪ. ವಿಚಿತ್ರ ಸಂಗತಿ ಎಂದರೆ ಈ ಸುಂದರ ನಗರ ರಾತ್ರಿ ಬೆಳಗಾಗುವುದರೊಳಗೆ ನಾಪತ್ತೆಯಾಗಿ ಹೋಯಿತಂತೆ. ಈ ನಗರ ಭೀಕರವಾದ ಭೂಕಂಪ ಹಾಗೂ ಪ್ರವಾಹದ ಹೊಡೆತದಿಂದ ಅಟ್ಲಾಂಟಿಕ್ ಸಾಗರದೊಳಗೆ ಮುಳುಗಿ ಹೋಯಿತೆಂದು ಇತಿಹಾಸದ ಪುಟಗಳಲ್ಲಿ ಅಚ್ಚಾಗಿದೆ. ಜಗತ್ತಿನ ಹಲವಾರೂ ಮೇಧಾವಿಗಳು ಹಾಗೂ ವಿಜ್ಞಾನಿಗಳು ಈ ನಗರ ನಿಜವಾಗಿಯೂ ಇತ್ತೆಂದು ಅಧ್ಯಯನ ಹಾಗೂ ಸಾಕ್ಷಿಗಳಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ ಈವತ್ತಿಗೂ ಈ ಕಳೆದುಹೋದ ನಗರ ಸೃಷ್ಟಿಯಲ್ಲಿ ಹುದುಗಿರುವ ಬಿಡಿಸಲಾಗದ ಕಗ್ಗಂಟುಗಳ ಸಾಲಿಗೆ ಸರಿಕೊಂಡಿದೆ.

ಈ ಮೇಲಿನ ಐದು ವಿಚಿತ್ರಗಳು ಸೃಷ್ಟಿಯ ಬಿಡಿಸಲಾಗದ ಕಗ್ಗಂಟುಗಳಿಗೆ ಕೇವಲ ಸಣ್ಣ ಉದಾಹರಣೆ ಅಷ್ಟೇ. ಇಂತಹ ಹಲವಾರು ರಹಸ್ಯಗಳು ಹಾಗೂ ವಿಚಿತ್ರ ಸಂಗತಿಗಳು ಈ ಜಗತ್ತಿನಲ್ಲಿ ಬಹಳಷ್ಟಿವೆ. ಎಷ್ಟು ಕೆದುಕಿದರೂ ಈ ರಹಸ್ಯಗಳ ಆಳವೆಷ್ಟೆಂದು ಸರಿಯಾಗಿ ತಿಳಿಯೋದೇ ಇಲ್ಲ. ಹಲವಾರು ವಿಚಿತ್ರ ಸಂಗತಿಗಳನ್ನು ತನ್ನ ಒಡಲಾಳದಲ್ಲಿ ಕಾಪಾಡಿಕೊಂಡು ಬಂದಿರುವ ಈ ಸೃಷ್ಟಿಯೇ ವಿಚಿತ್ರ…!

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!