Featured ಅಂಕಣ

ಕ್ವಾಟ್ರಂಗ್ಡಿ ಮುಂದೆ ಎಲ್ದೆಲ್ಡು ಗಂಟೆ ಕಾಯೋವಾಗ ಬರ್ದಿರೋ ಅಂಡುರಿ ನೋಟ್ ಬ್ಯಾನ್ ಆದ್ಮಾಕೆ ಯಾಕ್ಲಾ ಬತ್ತಿದೆ??

ಬಾರಪ್ಪಾ ಬಾ.. ನಿಮ್ ಮೋದಿ ಏನೋ ಭಾಳ ದೊಡ್ಡ ಸಾದ್ನೆ ಮಾಡೈತೆ ಅಂತ ಕೊಚ್ಕೊತಿದ್ದೆ ಅಲ್ವೇನ್ಲಾ?? ನೋಡ್ಲಾ ಇವಾಗ ನೋಟ್ ಬ್ಯಾನ್ ಮಾಡಿ ಏಟೋಂದು ಜನಕ್ಕೆ ಕಷ್ಟ ಆಗ್ತೈತೆ? ಎಲ್ಲುಗ್ಲಾ ಓಗ್ಬೇಕು ಚೇಂಜ್ ಇಲ್ಲಾಂದ್ರೆ ಅಂತ ಗೋಪಾಲಣ್ಣನ್ ಕಾಲೇಳೀತು ಮುರುಗನ್.

ಈಗಿನ್ನೂ ಸಿವಾ ಅಂತ ಕಟ್ಟೆ ಮ್ಯಾಕೆ ಕುಂತಾವ್ನೆ.. ಯಾಕ್ಲಾ ಗೋಪಾಲಣ್ಣಿ ಮ್ಯಾಕೆ ಅಂಗೆ ಎರಗ್ತೀಯಾ, ವಸಿ ತಡ್ಕೋಳ್ಲಾ ಅಂತ ಸಮಾಧಾನ ಮಾಡ್ತು ಕಲ್ಲೇಶಿ.

ಲೇ ಮಿಸ್ಟರ್ ಕೋಳೀ ಮುರುಗನ್ ನಿನ್ನ್ ಮೂತಿಗ್ ಕೋತಿ ಕಡ್ಯಾ..ಇಲ್ಲೀಗಂಟ ಯಾರೂ ಮಾಡ್ದಿರೋ ಒಳ್ಳೇ ಕೆಲ್ಸಾನಾ ಮೋದಿ ಮಾಡಿರೋವಾಗ ನಿನ್ನಂತ ಹಲ್ಕಾ ನನ್ನ್ ಮಕ್ಳಿಗೆ ಅಂಡುರಿ ಕಣಲಾ. ಮೂವತ್ತು ರುಪಾಯಿ ಕ್ವಾಟ್ರು ಕುಡ್ಯೋಕೆ ಎಲ್ದೆಲ್ಡು ಗಂಟೆ ಕ್ಯೂನಲ್ಲಿ ಬಾಯ್ಬಾಯಿ ಬಿಟ್ಟು ನಿಲ್ಲೋವಾಗ ಬರ್ದಿರೋ ಅಂಡ್ನೋವು ಇವಾಗ ಎಂಗ್ಲಾ ಬರತ್ತೆ. ಬ್ಲಾಕ್ ಮನಿ ಇಟ್ಕೊಂಡಿರೋ ನಿನ್ನಂತ ನಾಲ್ಕು ಲುಚ್ಚಾ ನನ್ ಮಕ್ಳನ್ನ್ ಬಿಟ್ರೆ ಮತ್ತೆಲ್ರೂ ಮೋದಿಗೆ ಶಬ್ಬಾಸ್ ಯೋಳವ್ರೆ ಕಣ್ಲಾ ಅಂತ ಭಾಳ ಸೀರಿಯಸ್ಸಾಗಿ ಉತ್ರ ಕೊಡ್ತು ಗೋಪಾಲಣ್ಣ.

ಕೂಲ್ ಡೌನ್ ಗೋಪಾಲಣ್ಣ. ಅಂಗೇ ನಿನ್ನ್ ಕಾಲೆಳ್ಯೋಕೆ ಮೋದಿ ನಿರ್ದಾರ ಇರೋದ ಮಾಡ್ದೆ. ನಾವೂ ಸಪೋರ್ಟೇಯಾ ಮೋದೀಗೆ. ಕೈ ಪಕ್ಸ್ದೋರು ಮತ್ತು ಆಮ್ ಆದ್ಮಿ ಪಕ್ಸ್ದೋರೆಲ್ಲಾ ಅಂಡ್ಸುಟ್ಟ ಬೆಕ್ಕ್ ತರ ಆಡ್ತಿದಾವೆ ಕಣ್ಲಾ ನೋಟ್ ಬ್ಯಾನ್ ಆದ್ ಮ್ಯಾಕೆ. ರಾಉಲ್ಲು ಅದೆಲ್ಲೋ ಕ್ಯೂನಲ್ಲಿ ನಿಂತ್ಬುಟ್ಟು ದುಡ್ಡು ಇಸ್ಕೊಂಡು ಜನ್ಗಳತ್ರ ಮಂಗ್ಳಾರ್ತಿ ಮಾಡ್ಸ್ಕೋಂಡು ಬಂದೈತೆ. ನಿಮ್ಮ್ ರಮ್ಮೂನೂವೇ ಮಂಡ್ಯಕ್ಕ್ ಓಗ್ಬುಟ್ಟು ಜನ್ಗಳತ್ರ ಸರ್ಯಾಗೆ ಬೈಸ್ಕೊಂಡು ಬಂದೈತೆ. ಇನ್ನಾ ನಮ್ಮ್ ಕಾಮಿಡಿ ಪೀಸು ಕೇಜ್ರಿ ಅಂಕಲ್ಲೂವೇ ದಿಲ್ಲಿನಾಗೆ ಮೋದಿ ನಿರ್ದಾರ ಇರೋದ  ಮಾಡಕ್ಕೇಂತ ಬೀದಿಗ್ ಬಂದ್ರೆ ಜನಾ ಮೋದಿ ಮೋದಿ ಅಂತ ಘೋಷ್ನೆ ಕೂಗ್ಬಿಟ್ಟು ಓಡ್ಸ್ಬುಟ್ಟಾವ್ರೆ ಅದನ್ನ. ಆವಯ್ಯ ಇಂಗೇ ಆಡ್ತಿದ್ರೆ ಜನ ಮಕ ಮೂತಿ ನೋಡ್ದೇ ಇಕ್ತಾವ್ರೆ ನೋಡ್ಲಾ ಒಂದಿವ್ಸ ಅಂತ ಸಮ್ಜಾಯ್ಸಿ ಕೊಡ್ತು ಮುರುಗನ್.

ನಮ್ಮಂತ ಬಡವ್ರಿಗೆ ಮೋದಿ ನಿರ್ದಾರದಿಂದ ಏನೂ ಪ್ರಾಬ್ಲೆಮ್ಮಾಗಿಲ್ಲ ಕಣಣ್ಣಾ. ಎಲ್ಲೆಲ್ಲೋ ಕ್ಯೂ ನಿಲ್ಲೋ ನಮ್ಗಳಿಗೆ ದೇಸಕ್ಕಾಗಿ ಇಷ್ಟೂ ಮಾಡಕ್ಕಾಗಲ್ವೇನ್ಲಾ… ಬುಡ್ಲಾ ಬೇರೆ ಇಚಾರ ಮಾತಾಡೋಣಾ… ಎನಾಯ್ತ್ಲಾ ಸೇಟೂ ಕಥೆ?? ರಾಜ್ನಾಮೆ ಕೊಟ್ಟು ಮನೆಗೋಯ್ತೇನ್ಲಾ?? ಅಂತೇಳ್ತು ಕಲ್ಲೇಶಿ…

ಶಿದ್ದಣ್ಣ ಎಲ್ಲಾ ಕೇಳುತ್ತೆ ರಾಜ್ನಾಮೆ. ಸೇಟೂ ಅದೇನ್ ಸ್ಟೇಜ್ ಮ್ಯಾಕೆ ನೋಡಿತ್ತೋ ಅದನ್ನ ಶಿದ್ದಣ್ಣಂಗೆ ತೋರಿಸ್ಬುಟ್ಟು ನಾನೇನೂ ತಪ್ಮಾಡಿಲ್ಲ ಸಿವಾ, ನನ್ನಾ ತೆಗಿಬೇಡಿ ಕ್ಯಾಬಿನೆಟ್ನಿಂದಾ ಅಂತ ಹೇಳ್ಬುಟ್ಟೈತೆ. ಶಿದ್ದಣ್ನನೂವೇ ಪಾಪ ಸೇಟು ಸಾಬು ಏನೂ ತಪ್ಮಾಡಿಲ್ಲ, ಬುಡ್ರಲಾ ಸೇಟೂನಾ ಅದ್ರ್ಪಾಡಿಗೇ ಅಂತ ತೆಪ್ಪಗೆ ಕೂತ್ಕಂಬಿಟ್ಟಿದೆ. ಅವತ್ತು ಬಿಜೇಪಿನೋರು ಇದೇ ತರ ಪಿಚ್ಚರು ನೋಡಿದ್ದಾಗ ಶಿದ್ದಣ್ಣ ಗಂಟ್ಲರ್ಕಂಡು ಊರ್ತುಂಬಾ ಯೋಳ್ಕೊಂಡು ಬಂದಿಲ್ವೇನ್ಲಾ… ನಿಮ್ಮ್ ಪ್ಲವರ್ ಪಾರ್ಟಿನೋರ್ಗೆ ಚೂರಾರ ಕಿಚ್ಚು ಐತೇನ್ಲಾ?? ಒಂದೆರ್ಡು ದಿವ್ಸ ಸುಮ್ಕೆ ಮೀಡ್ಯಾ ಮುಂದೆ ಸೇಟು ರಾಜ್ನಾಮೆ ಕೊಡ್ಲಿ ಅಂತ ನಾಟ್ಕ ಮಾಡ್ಬುಟ್ಟು ತೆಪ್ಗಾಗಿ ಕೂತ್ಬುಟ್ಟವೆ ಅಂತೇಳ್ತು ಗೋಪಾಲಣ್ಣ…

ಬಿಗ್ಬಾಸ್ ಎಲ್ಲೀಗಂಟ ಬಂತ್ಲಾ?? ಯಾರೆಲ್ಲಾ ಓದ್ರುಲಾ ಒರ್ಗಡೆ ಅಂತ ಕೇಳ್ತು ಕಲ್ಲೇಶಿ..

ಥತ್ತೇರಿಕೆ, ಬರೀ ಟೀಆರ್ಪಿಗಾಗಿ ಏನೂ ಮಾಡ್ತವ್ರೆ ಕಣ್ಲಾ ಈ ಚಾನೆಲ್ನವ್ರು. ಆವಯ್ಯ ಉಚ್ಚ ವೆಂಕಟ್ಟು ಎಂಗಿರೋನು ಅಂತ ಗೊತ್ತಿದ್ರೂ ಮತ್ತ್ ಕರಿಸ್ಬಿಟ್ಟಾವ್ರೆ ಮನೆಯೊಳಿಕ್ಕೆ. ವೆಂಕಟ್ಟು ಬಂದೋವ್ನೆ ಪ್ರತಮ್ಮುಗೆ ಒಡ್ದೈತೆ ಕಣ್ಲಾ.. ನೋಡೋದೇ ಬಿಟ್ಟೀನಿ ಕಣಲಾ ಆ ಮ್ಯಾಕೆ ಅಂತ ಬೇಜಾರ್ನಾಗೆ ಯೋಳ್ತು ಮುರುಗನ್..

ಮಳ್ಯಾಳೀ ಕಮ್ ಕನ್ನಡ ಸಾಮೀಜೀ ಪ್ರಣವಾನಂದ ಮದ್ವೆ ಆಗ್ಬುಟ್ಟೈತೆ ಕಣ್ಲಾ.. ಏನೇ ಯೋಳ್ಲಾ ನಿತ್ಯಾನಂದ ಸಾಮೀ ತರ ಒಳ್ಗೊಳ್ಗೇ ಕಬಡ್ಡೀ ಆಡೋದ್ರಿಂದ ಪ್ರಣವಾನಂದ ಸಾಮೀಜೀ ತರ ಮಾಡೋದೇ ಬೆಸ್ಟೂ ಕಣಲಾ ಅಂತೇಳ್ತು ಕಲ್ಲೇಶಿ…

ರೆಡ್ಡೀ ಮಗ್ಳ್ ಮದ್ವೇಗ್ ಓಗಿದ್ದೇನ್ಲಾ.. ಎಂಗ್ಲಾ ಇತ್ತು ಬಾಡೂಟ ಅಂತ ಗೋಪಾಲಣ್ಣನ್ ಕೇಳ್ತು ಮುರುಗನ್..

ಏನೂಂತ ಕೇಳ್ತಿಯಾ.. ಎಂಗೆಂತಾ ಯೋಳೋಣಾ.. ಮದ್ವೆ ಐಬೋಗನಾ… ಗುಂಟೂರು ಚಿಕನ್ ಮೊನ್ನೆ ತಿಂದಿದ್ದು ಇನ್ನೂ ಅರ್ಗಿಲ್ಲ ಕಣ್ಲಾ.. ಯಾಕೋ ಒಂದ್ತರಾ ಒಟ್ಟೆ ಗುಳ್ಗಳಾ ಅನ್ತೈತಿ. ಕೊಡ್ಲಾ ಒಂದ್ಚೊಂಬು ನೀರ್ನಾ.. ಬತ್ತೀನಿ ಕಣಣ್ಣಾ.. ಸಿವನೇ ಸಂಬುಲಿಂಗ ಅಂತ ಜಾಗ ಕಾಲಿ ಮಾಡ್ತು ಗೋಪಾಲಣ್ಣ!..

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!