ಕವಿತೆ

ತಂತ್ರಜ್ಞೆ ಮಂತ್ರಜ್ಞೆ ಗೌರಿ

ತಾಯಿ ಗೌರಿ ತಂತ್ರಜ್ಞೆ

ಅದ್ಭುತ ಮಂತ್ರಜ್ಞೆ

ತಂತ್ರ ಮಂತ್ರ ಯಂತ್ರ ಜತೆ

ಕೂಡಿಸಲದೆ ಗಣಪತಿಯಾಯ್ತೆ ||

 

ಶಕ್ತಿಯವಳು ಶಿವನ ಸತಿ

ಅದ್ಭುತ ಕಲಾಕೃತಿ

ಮೈ ಬೆವರು ಅರಿಶಿನ ಕೊಳೆ

ಕಸದಿಂದ ರಸ ಬಾಲನಾದ ಕಲೆ ||

 

ಉಮೆಯವಳು ಅಭಿಯಂತೆ

ಜೀವಕೆ ನೀರ್ಜಿವ ಬೆರೆತೆ

ಸೃಜಿಸಿರಬೇಕು ದೇವ ಜೀವಿಯ

ಮಗನ ಹೆಸರಲಿ ತಾಂತ್ರಿಕ ವಿಜಯ ||

 

ಅಲೆಮಾರಿ ಪರಶಿವನಾತ

ಗೌರಮ್ಮನಿಗೆ ಏಕಾಂತ

ಬೇಸರ ಕಳೆಯೆ ಮಜ್ಜನ ಪೂರ

ಶಕ್ತಾಯುಧದ ಜತೆಗೆ ಕಾವಲುಗಾರ ||

 

ಮಿಕ್ಕಿದ್ದೆಲ್ಲ ಪುರಾಣದ ಕದನ

ಪಾತ್ರಕೆ ದಕ್ಕಿ ಗಜವದನ

ಮಾತ್ರನಲ್ಲ ನೆಪ ಸಕಲಾದಿ ವಂದ್ಯ

ಮೂರೇ ಸುತ್ತಲಿ ಗೆದ್ದ ಸೋದರ ಪಂದ್ಯ ||

 

ಸ್ವರ್ಣಗೌರಿ ವೀರ ಧೀರ ವನಿತೆ

ಗಣಪನ ಜತೆ ಪೂಜಿಸುತೆ

ಸ್ಮರಿಸುತ ಬೆರಗಲಿ ಜಗ ನಮನ

ಅರಿಯಲಾಗದೆಯೂ ಶಕ್ತಿ ವಿಜ್ಞಾನ ||

 

ತಾಯಿ ಮುಂದೆ ಮಗ ಹಿಂದೆ

ಹೊರಟ ಪರಿಷೆ ಕಣ್ಮುಂದೆ

ಸಾಲು ಸಾಲಲಿ ಭಕ್ತರ ಮಂದೆ

ಸುಕೃತಿ ಬೇಡಿ ಶರಣಾಗಿವೆ ಬುಡದೆ ||

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!