ಪ್ರಚಲಿತ

ಪಾಪಿರಾಷ್ಟ್ರದ ಸರ್ವನಾಶಕ್ಕೆ “ನಮೋ” ಸೂತ್ರ

ಕ್ಷಮಿಸಿಬಿಡಿ ಸೈನಿಕರೇ..ದೇಶ ಕಾಯುವ ನಿಮ್ಮ ಪವಿತ್ರ ಕೆಲಸವ ಕನಿಷ್ಟ ಗೌರವಿಸದ ಜನ ನಾವಾಗಿದ್ದಕ್ಕೆ, “ದಿನ ಸಾಯೋರಿಗೆ ಆಳುವರ್ಯಾರೂ” ಎಂದು ಅಹಂಕಾರದ ಮಾತಾಡಿದ್ದಕ್ಕೆ, “ಸೈನ್ಯಕ್ಕೆ ಸೇರುವುದು ಮನೆಯಲ್ಲಿನ ಬಡತನವ ನಿವಾರಿಸಲು” ಎಂಬ ಬೇಜಾವಾಬ್ದಾರೀ ಹೇಳಿಕೆಗಳನ್ನು ಕೊಡುತ್ತಿರುವುದಕ್ಕೆ, “ಸೈನಿಕರು ಮಾನವ ಹಕ್ಕುಗಳನ್ನು ಉಲ್ಲಂಗಿಸುತ್ತಿದ್ದಾರೆ” ಎಂಬ ಪಾಠ ಮಾಡುತ್ತಿರುವುದಕ್ಕೆ, ಬರ್ಹಾನ್ ವಾನಿ ಎಂಬ ಪ್ರತ್ಯೇಕತಾವಾದಿಯನ್ನು ಹೊಡೆದುರಿಳಿಸಿದರೂ ಅವನನ್ನು ಯಂಗ್ ಹೀರೊ ಎಂದು ಅವನ ಮೇಲೆ ಸಿಂಪಥಿಯನ್ನು ಸ್ರಷ್ಟಿಸಿದ್ದಕ್ಕೆ,ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಆತ್ಮಸ್ಥೈರ್ಯ ಕುಗ್ಗಿಸುವುದನ್ನೇ ಕೆಲಸವನ್ನಾಗಿಸಿಕೊಂಡಿದ್ದಕ್ಕೆ. ಒಂದೆಡೆ ಪಾಕಿಸ್ತಾನವೆಂಬ ಪರಮ ಪಾಪಿ ರಾಷ್ಟ್ರದ ಮೋಸದಾಟಕ್ಕೆ ಎದಿರೇಟು ಕೊಡುವುದಾದರೆ ಇನ್ನೊಂದೆಡೆ ದೇಶದ ಅರೆಬೆಂದ ಬುದ್ದಿಜೀವಿಗಳ ಮಾತಿನೇಟನ್ನು ಎದುರಿಸಬೇಕಾದ ಪರಿಸ್ಥಿತಿ. ಕ್ಷಮಿಸಿಬಿಡಿ ನಮ್ಮನ್ನು ನಿಮ್ಮ ಮನಸ್ಸನ್ನು ನೋಯಿಸುತ್ತಿರುವುದಕ್ಕೆ.ನಿಮ್ಮ ಧೈರ್ಯಕ್ಕೆ, ನಿಮ್ಮ ಸೇವೆಗೆ ನಿಮ್ಮೊಳಗಿನ ಅಗಾಧ ದೇಶಭಕ್ತಿಗೆ ಏಸೀ ಸ್ಟೂಡಿಯೋದಲ್ಲಿ ಕೂತು ಟ್ವೀಟ್ ಮಾಡುವವರು ಅದ್ಯಾವ ಲೆಕ್ಕ.? ಇವರೆಲ್ಲ ನಿಮ್ಮ ಕಾಲಡಿಯ ಧೂಳಾಗಲೂ ಲಾಯಕ್ಕಿಲ್ಲದ ನಮಕ್ ಹರಾಮಿಗಳು ಎನ್ನದೆ ಬೇರಿನ್ನೇನನ್ನೂ ಹೇಳಲು ಸಾಧ್ಯವಿಲ್ಲ.ಕಾಶ್ಮೀರ್ ಥೋ ಹೋಗಾ ಲೇಕಿನ್ ಪಾಕಿಸ್ತಾನ್ ನಹೀ ಹೋಗಾ ಎಂಬ ನಿಮ್ಮ  ಉದ್ಘೋಷದ ಎದಿರು ಕಾಶ್ಮೀರದ ಆಜಾದಿಯ ಬಗ್ಗೆ ಒದರುತ್ತಿರುವವರ ಘೋಷಣೆ ನಗಣ್ಯವೇ ಸರಿ.

ಇದೀಗ ಪಾಕಿಸ್ತಾನ ಮಿತಿ ಮೀರಿ ವರ್ತಿಸುತ್ತಿದೆ. ಕಾಶ್ಮೀರವೆಂಬ ಭಾರತದ ಅಮೂಲ್ಯ ಭಾಗವನ್ನು ತನ್ನದಾಗಿಸಿಕೊಳ್ಳಲು ವಿಪರೀತ ಹವಣಿಸುತ್ತಿರುವ ಪಾಪಿರಾಷ್ಟ್ರ ಸಾವಿರಾರು ಸೈನಿಕರ ಬಲಿ ತೆಗೆದುಕೊಂಡು ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಅಂದರೆ ಭಾರತ ತನ್ನ ಶಕ್ತಿಯನ್ನು ಪ್ರದರ್ಶಿಸುವ ಕಾಲ ಈಗ ಬಂದಿದೆ ಎಂದರ್ಥ ಅಲ್ಲವೇ.ಪ್ರತೀ ಹೊಸ ಸರಕಾರ ಬಂದಾಗ ಪಾಕಿಸ್ತಾನದ ಜೊತೆ ಮಾತುಕತೆಯನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು ಪಾಪಿ ರಾಷ್ಟ್ರದ ಜೊತೆ ಮಾತುಕತೆಗೆ ತೆರಳುತ್ತವೆ, ಜಗತ್ತಿನಲ್ಲಿ ಸರ್ವರೂ ಸಮಾನರೂ ಎಂದುಕೊಂಡು ಭಾರತದ ಹಿತವನ್ನು ಚೂರು ಬಯಸದ ವೈರಿ ರಾಷ್ಟ್ರವನ್ನೂ ಕೂಡ ಕ್ಷಮಿಸುವ ಮನಸ್ಸು ಮಾಡಿದ್ದೇ ನಮ್ಮ ತಪ್ಪಾಯಿತೋ ಏನೋ.. ಅದು 2010 ರ ಜನವರಿಯ ಸಮಯವಿರಬೇಕು ಬಹುಶ: ನೀವು ಓದಿರುತ್ತೀರಿ ಭಾರತ ಮತ್ತು ಪಾಕಿಸ್ತಾನದ ಎರಡು ದೊಡ್ಡ ಮಾಧ್ಯಮ ಸಂಸ್ಥೆಗಳು ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತವೆ ಅದೇ “ಅಮನ್ ಕೀ ಆಶಾ. ಭಾರತದ “ಟೈಮ್ಸ್ ಆಫ್ ಇಂಡಿಯಾ” ಮತ್ತು ಪಾಕಿಸ್ತಾನದ “ದ ಜಂಗ್ ಗ್ರೂಪ್” ಆ ಎರಡು ಮಾಧ್ಯಮ ಸಂಸ್ಥೆಗಳು. ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಸಾಮರಸ್ಯ ತರುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಆದರೇ ಇದರಿಂದ ಆಗಿದ್ದೇನು?ಪಾಕಿಸ್ತಾನ ಮತ್ತು ಭಾರತದ ಲಿಬರಲ್ಸ್ ಒಂದಿಷ್ಟು ಜನ ಪತ್ರಿಕೆಯಲ್ಲಿ ಸುದ್ದಿಯಾದರೇ ಹೊರತು ಏನು “ಆಶಾನೂ” ಗೋಚರಿಸಲಿಲ್ಲ.ಭಾರತಕ್ಕೆ ಸಿಕ್ಕಿದ್ದು  ಪುಣೆ ಮತ್ತು ವಾರಣಾಸಿಯಲ್ಲಾದ ಭಯೋತ್ಪಾದಕ ದಾಳಿ ಮಾತ್ರ. ಇದಾದ ನಂತರದ ದಿನಗಳಲ್ಲಿ ಮತ್ತೆ  ಭಾರತದ ದೆಹಲಿ, ಮುಂಬೈ, ಹೈದರಾಬಾದ್,ಬೆಂಗಳೂರು, ಬುದ್ಧ ಗಯಾ, ಪಾಟ್ನಾ ಮತ್ತು ಪಠಾನಕೋಟ್’ಗಳ ಮೇಲೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ದಾಳಿ ನಿರಂತರ ನಡೆದೇ ಇತ್ತು.ಮತ್ತೆ  ಈಗ ಉರಿಯಲ್ಲಾದ ದಾಳಿ.ಸಾಕು ಮಾಡು ಪಾಕಿಸ್ತಾನ ನಿನ್ನ ಸರ್ವನಾಶ ಮಾಡಲು ಭಾರತವೆಂಬ ಈ ರಾಷ್ಟ್ರದ ಸೈನಿಕರಿಗೆ ದೊಡ್ಡ ಕೆಲಸವೇ ಅಲ್ಲ.ಇಷ್ಟು ವರ್ಷ ನಮಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿತ್ತು. ಆದರೆ ಈಗ ಅದ್ಯಾವುದರ ಕೊರತೆಯೇ ಇಲ್ಲ. ನಿನ್ನನ್ನು ವಿಶ್ವದ ಭೂಪಟದಿಂದ ಬುಡ ಸಮೇತ ಕಿತ್ತು ಹಾಕುವ ಸಮಯ ಬಂದಿದೆ.

ಬಹುಶಃ ಇಡೀ ವಿಶ್ವದಲ್ಲಿ ಭಾರತ ಎನ್ನುವ ರಾಷ್ಟ್ರದಲ್ಲಿ ಮಾತ್ರ ಈ ದೇಶದ ಸ್ವಾತಂತ್ರ್ಯವನ್ನೇ ಪ್ರಶ್ನಿಸಬಹುದೇನೋ. ಜವಾಬ್ಧಾರೀ ಸ್ಥಾನದಲ್ಲಿರಬೇಕಾದ ಮಾಧ್ಯಮ ಸಂಸ್ಥೆಗಳು ತಮ್ಮ ದೇಶದ ರಾಷ್ಟ್ರೀಯತೆಗೆ ಮಾರಕವಾಗಬಹುದಾದಂತಹ ವಿಚಾರಗಳನ್ನು ಯಾವುದೇ ಮಾನ ಮರ್ಯಾದೆ ಇಲ್ಲದೇ ಪ್ರಕಟಿಸಬಹುದೇನೋ ಅಲ್ಲವೇ?ಕಾಶ್ಮೀರದ ವಿಚಾರ ಬಂದಾಗಲೂ ಸಿದ್ಧಾಂತ, ಕೋಮುವಾದ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಭಾಷಣ ಮಾಡುತ್ತಾ ಭಾರತದ ಅನ್ನವನ್ನೇ ತಿನ್ನುವವರನ್ನು ತಾಯ್ಗಂಡರು ಎನ್ನಬಹುದು.ಭಾರತ ಪಾಕಿಸ್ತಾನವನ್ನು ಹೇಗೆ ವ್ಯವಸ್ತಿತವಾಗಿ ನಿರ್ನಾಮ ಮಾಡಬಹುದು ಎಂಬುದನ್ನು ಒಮ್ಮೆ ನೋಡೋಣ.  ನಿಮಗೆಲ್ಲ ತಿಳಿದಿರಲಿ ನರೇಂದ್ರ ಮೋದಿ ಸುಮ್ಮನೇ ಕುಳಿತಿಲ್ಲ. ಒಂದು ಮಾತನ್ನೂ ಆಡದೆ ಪಾಕಿಸ್ತಾನವನ್ನು ಬಗ್ಗು ಬಡಿಯುವ ಅವರ ತಂತ್ರದ ಕೆಲವು ಮಜಲುಗಳ ಪರಿಚಯವನ್ನು ನಾನು ನಿಮಗೆ ಮಾಡಿಸುತ್ತೇನೆ. ಮೋದಿಯವರ ಮಾಸ್ಟರ್ ಪ್ಲಾನ್ ಜೊತೆ ಭಾರತ ಪಾಕಿಸ್ತಾನವ ಬಗ್ಗು ಬಡಿಯಲು ಒಂದಿಷ್ಟು ಹಾದಿಯನ್ನು ತುಳಿಯಬೇಕಿದೆ. ಆ ಹಾದಿಯ ಕಿರು ಪರಿಚಯ ಮಾಡಿಕೊಡುವ ಪ್ರಯತ್ನ ಇದು.ಕಾಶ್ಮೀರದ ವಿಚಾರದಲ್ಲಿ ನರೇಂದ್ರ ಮೋದಿಯವರ ಸರಕಾರ ಹಿಂದಿನ ಎಲ್ಲ ಸರಕಾರಗಳಿಗಿಂತ  ಸ್ಪಷ್ಟ ನಿಲುವು ತಾಳಿದೆ ಎನ್ನುವುದರಲ್ಲಿ ನಿಮಗೆ ಯಾವ ಅನುಮಾನವೂ ಬೇಡ.

ಸಿಂಧೂ ಕಣಿವೆ ನದಿ ನೀರು ಹಂಚಿಕೆ ಒಪ್ಪಂದವನ್ನು ಮುರಿಯುವುದು:

ಜಗತ್ತಿನಲ್ಲಿ ಅತ್ಯಂತ ಯಶಸ್ವೀ ನದಿ ನೀರು ಹಂಚಿಕೆ ಒಪ್ಪಂದ ಇರುವುದು ಯಾವ ರಾಷ್ಟ್ರಗಳ ನಡುವೆ ತಿಳಿದಿದೆಯೇ? ನೀವು ನಂಬಲೇಬೇಕು ಅದು ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ “ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ”. ಇಡೀ ವಿಶ್ವದಲ್ಲಿ ಈ ನದಿ ನೀರು ಹಂಚಿಕೆ ಒಪ್ಪಂದದಷ್ಟು ಯಶಸ್ವೀ ಒಪ್ಪಂದ ಇನ್ನೊಂದಿಲ್ಲ. ಸನ್ಮಾನ್ಯ ನೆಹರು ಎಂಬ ಪಂಡಿತ ಈ ಒಪ್ಪಂದಕ್ಕೆ ಸೆಪ್ಟೆಂಬರ್ 19, 1960ರಲ್ಲಿ ಸಹಿ ಹಾಕಿದ್ದರು. ಈ ಒಪ್ಪಂದವಾದ ನಂತರ ಅದೆಷ್ಟು ಬಾರಿ ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡಿತು ಎಂಬುದು ನಿಮಗೆ ತಿಳಿದಿದೆ. ಆದರೆ ಈ ಒಪ್ಪಂದ ಮಾತ್ರ ತೆರೆ ಮರೆಯಲ್ಲಿಯೇ ಉಳಿಯಿತು,  ನಮ್ಮ ಸಿಂಧೂ ನದಿಯ ನೀರು ಕುಡಿವ ಪಾಕಿಸ್ತಾನ ನಮ್ಮ ಮೇಲೆ ಪದೇ ಪದೇ ಮುಗಿ ಬೀಳುತ್ತಲೆ ಇದೆ. ಈಗ ನರೇಂದ್ರ ಮೋದಿ ಈ ಒಪ್ಪಂದವನ್ನು ಮುರಿಯುವ ಮಾತನಾಡಿದ್ದಾರೆ. “ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದು ಸರಿಯಲ್ಲ ” ಎಂಬ ಮೋದಿಯವರ ಮಾತಿನ ಹಿಂದೆ ಇನ್ನೊಂದು ಸ್ಟ್ರ್ಯಾಟಜೀ ಇದೆ. ಬೀಸ್,ರಾವಿ ಮತ್ತು ಸತ್ಲುಜ್ ಎಂಬ ಸಿಂಧೂ ನದಿಯ ಉಪ ನದಿಗಳ ಜೀವ ನಿಂತಿರುವುದು ಇದೆ ಒಪ್ಪಂದದ ಮೇಲೆ. ಸಿಂಧೂ ನದಿಯ ಶೇಕಡಾ 80ರಷ್ಟು ನೀರು ಪಾಕಿಸ್ತಾನಕ್ಕೆ ಹರಿದು ಹೋಗುವಂತೆ ಮಾಡುವುದೇ ಈ ಒಪ್ಪಂದದ ಮೂಲ ಉದ್ದೇಶವಾಗಿತ್ತು. ಪಾಕಿಸ್ತಾನದ 2.6 ಕೋಟಿ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿ ಬರೋದು ಇದೆ ಸಿಂಧೂ ನದಿಯಿಂದ, ಅಂದರೆ ಅಂದಾಜು ಪಾಕಿಸ್ತಾನದ ಶೇಕಡಾ 20 ಭೂಬಾಗಕ್ಕೆ ನಮ್ಮ ಸಿಂಧೂ ನದಿಯೇ ಮೂಲ. ಒಂದು ವೇಳೆ ಭಾರತವೆನಾದರೂ ಈ ಒಪ್ಪಂದ ಮುರಿದುಕೊಂಡರೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ನೀರಿನ ಕೊರತೆ ಕಾಣಿಸುತ್ತದೆ. ಬರಗಾಲ,ನೀರಿನ ಅಬಾವ ಪಾಕಿಸ್ತಾನದಲ್ಲಿ ಮನೆ ಮಾಡಿ ಆರ್ಥಿಕವಾಗಿ ಆ ಪಾಪಿರಾಷ್ಟ್ರ ಇನ್ನಷ್ಟು ಕುಗ್ಗಬಹುದು.ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿದು ಹೋಗುವ ಹಾದಿಯಲ್ಲಿ ಬೇಕಾದಷ್ಟು ಅಣೆಕಟ್ಟು ಹೊಂದಿರುವಾಗ ನಮಗೆ ನೀರು ಶೇಕರಣೆಯ ಸಮಸ್ಯೆಯೇ ತಲೆದೂರುವುದಿಲ್ಲ. ಒಂದು ವೇಳೆ ಪ್ರಧಾನಿ ಈ ನಿರ್ಧಾರ ತೆಗೆದುಕೊಂಡರೆ ಅದು ಪಾಕಿಸ್ತಾನದ ಮೇಲೆ ನ್ಯೂಕ್ಲಿಯರ್ ಧಾಳಿ ಮಾಡಿದಷ್ಟೇ ಪ್ರಭಾವಿಯಾಗಿರುತ್ತದೆ.

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ವಿಶ್ವದೆಲ್ಲೆಡೆ ಬಿಂಬಿಸುವುದು:

ಮೋದಿ ಅದಾಗಲೇ ಒಂದು ಹಂತದವರೆಗೆ ಈ ಕೆಲಸವನ್ನು  ಮಾಡಿ ಮುಗಿಸಿದ್ದಾರೆ. ವಿಶ್ವದ ಪ್ರಮುಖ ವೇದಿಕೆಗಳಲ್ಲಿ ಪಾಕಿಸ್ತಾನದ ವಿಚಾರವನ್ನು ತೆಗೆದುಕೊಂಡು ಆ ರಾಷ್ಟ್ರದ ಇನ್ನೊಂದು ಮುಖವನ್ನು ಬಯಲು ಮಾಡುತ್ತಾ “ಭಯೋತ್ಪಾದಕ ರಾಷ್ಟ್ರವೆಂಬ” ನಾಮಕರಣವನ್ನು ಪಾಕಿಸ್ತಾನಕ್ಕೆ ಮಾಡಿಬಿಟ್ಟರೆ ಪಾಕಿಸ್ತಾನದ ನಡು ಮುರಿದಂತೆ. ಜಾಗತಿಕ ವೇದಿಕೆಗಳಲ್ಲಿ ಪಾಕಿಸ್ತಾನದ ಕರಾಳ ಚರಿತೆಯ ಬಯಲು ಮಾಡಿ ಅದನ್ನು ಸರ್ವನಾಶ ಮಾಡುವ ಈ ಸ್ಟ್ರ್ಯಾಟಜೀ ಅದಾಗಲೇ ಸುಮಾರು ಪೂರ್ಣಗೊಂಡಿದೆ. ಮೋದಿಯವರ ವಿದೇಶೀ ಪ್ರವಾಸದ ಬಗ್ಗೆ ಇಲ್ಲಸಲ್ಲದ ಮಾತನಾಡಿದವರಿಗೆ ಬಹುಶಃ ಈಗಲಾದರೂ ಉತ್ತರ ಸಿಕ್ಕಿದೆಯೇನೋ ಅಂದುಕೊಂಡಿದ್ದೇನೆ. ಜಗತ್ತಿನ ಅನೇಕ ರಾಷ್ಟ್ರಗಳು ಭಾರತದ ಪ್ರತೀ ನಡೆಯನ್ನು ಬಹಿರಂಗವಾಗಿ ಬೆಂಬಲಿಸುತ್ತಿವೆ ಅಂದರೆ ಅದರ ಹಿಂದೆ ನರೇಂದ್ರ ಮೋದಿಯವರ ವಿದೇಶಾಂಗ ನೀತಿ ಅದ್ಭುತವಾಗಿ ಕೆಲಸ ಮಾಡಿದೆ ಎಂದರ್ಥ. ಅಮೆರಿಕ, ರಷ್ಯ,ಫ್ರ್ಯಾನ್ಸ್, ಜಪಾನ್, ವಿಯೆಟ್ನಾಮ್, ಇಸ್ರೇಲ್,ಅಫ್ಗಾನಿಸ್ತಾನ್, ಬಾಂಗ್ಲಾದೇಶ, ಸೌದಿ ಅರೇಬಿಯಾ ಹೀಗೆ ಅನೇಕ ರಾಷ್ಟ್ರಗಳು ಭಾರತವನ್ನು ಬೆಂಬಲಿಸುವ ಮಾತನ್ನಾಡಿವೆ. ಭಾರತ, ಇರಾನ್ ಮತ್ತು ಅಫ್ಗಾನಿಸ್ತಾನ್ ರಾಷ್ಟ್ರಗಳು ಸೇರಿ ಪರ್ಶಿಯನ್ ಗಲ್ಫ್ ಎಂಬಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡಿವೆ. ಅದೇ “ಚಾಹಬಾರ್ ಪೋರ್ಟ್” ಒಪ್ಪಂದ. ಈ ಒಪ್ಪಂದದ ಪ್ರಕಾರ ಮೂರೂ ರಾಷ್ಟ್ರಗಳ ವಾಣಿಜ್ಯ ಮತ್ತು ಸಾರಿಗೆ ಮಾರ್ಗಗಳು ಈ ಬಂದರಿನ ಮೂಲಕ ನಡೆಯಬೇಕು ಎಂಬುದು. ಇದಕ್ಕೂ ಮುಂಚೆ ಈ ಮೂರು ರಾಷ್ಟ್ರಗಳು ಪಾಕಿಸ್ತಾನವನ್ನು ಸಾರಿಗೆ ವಿಷಯಕ್ಕಾಗಿ ಅವಲಂಬಿತವಾಗಬೇಕಿತ್ತು. ಆದರೆ ಈ ಒಪ್ಪಂದದ ನಂತರ ಪಾಕಿಸ್ತಾನಕ್ಕೆ ಆರ್ಥಿಕವಾಗಿ ತುಂಬಾ ನಷ್ಟವಾಗಲು ಶುರುವಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲ ಸಂಪರ್ಕವನ್ನು ಕಡಿತಗೊಳಿಸುವುದು. :

ಇದೊಂತರಾ ಅತ್ಯವಶ್ಯಕ ನಿರ್ಧಾರವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ಸಂಪರ್ಕ ವ್ಯವಸ್ಥೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ಮೋದಿ ಸರಕಾರ ಮಾಡಬೇಕಿದೆ.ಸ್ನೇಹಿತರೇ ಇಂಗ್ಲೀಶ್ ನಲ್ಲಿ ಒಂದು ಒಳ್ಳೆಯ ಸಂದೇಶವಿದೆ ಅದು ಏನೆಂದರೆ,“If your plan is for one year, plant rice. If your plan is for ten years, plant trees. If your plan is for one hundred years, educate children ”. ಅಂದರೆ ಹಿಂದಿನ ಸರಕಾರದಂತೆ ಈ ಸರಕಾರ ತನ್ನ ನಿರ್ಧಾರವನ್ನು ಪತ್ರಿಕಾಗೋಷ್ಠಿಯನ್ನು ನಡೆಸುವುದರ ಮೂಲಕ ಬಹಿರಂಗಪಡಿಸುತ್ತದೆ ಎಂದು ತಿಳಿಡಿಕೊಳ್ಳಬೇಡಿ. “ಆಡದೆ ಮಾಡುವುವವನು ರೂಢಿಯೊಳಗುತ್ತಮನು” ಎಂಬ ನಾಣ್ಣುಡಿಯಂತೆ ನರೇಂದ್ರ ಮೋದಿಯವರ ಸರಕಾರ ಕೆಲಸ ಮಾಡುತ್ತದೆ ಎಂಬುದು ಬಹುಶಃ ನಿಮಗೂ ತಿಳಿದಿದೆ ಎಂದುಕೊಂಡಿದ್ದೇನೆ. ಭಾರತದ ಶಾಂತಿಕದಡುವುದನ್ನೇ ತನ್ನ ಮೂಲ ಗುರಿ ಎಂದುಕೊಂಡಿರುವ ದೇಶದ ಜೊತೆ ಸಂಪರ್ಕ ಇಟ್ಟುಕೊಂಡು ಯಾವುದೇ ಪ್ರಯೋಜನವಿಲ್ಲ . ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲ ಸಂಪರ್ಕ ಮಾಧ್ಯಮವನ್ನು ನಿಲ್ಲಿಸುವಂತಹ ನಿರ್ಧಾರವನ್ನು ಮೋದಿ ತೆಗೆದುಕೊಳ್ಳಬೇಕಿದೆ. ಸಾರಿಗೆ ಸಂಪರ್ಕವನ್ನು ನಿಲ್ಲಿಸಿ ಪಾಕಿಸ್ತಾನಕ್ಕೆ ಮತ್ತು ಅದನ್ನು ಪೋಷಿಸಲು ಹವಣಿಸುತ್ತಿರುವ ನಮ್ಮೊಳಗಿನ ದ್ರೋಹಿಗಳಿಗೆ ಬುದ್ಧಿಕಲಿಸಬೇಕಿದೆ. ಲಾಹೋರ್ ಮತ್ತು ದೆಹಲಿಯ ನಡುವೆ ಸಂಪರ್ಕ ಕಲ್ಪಿಸುವ “ಸದಾ-ಎ-ಸರ್ಹಾದ್”, ಜೋಧ್ಪುರ ಮತ್ತು ಕರಾಚಿಗೆ ಸಂಪರ್ಕ ಕಲ್ಪಿಸುವ “ಥಾರ್ ಎಕ್ಸ್‌ಪ್ರೆಸ್”, ದೆಹಲಿ ಮತ್ತು ಅತ್ತಾರಿಗೆ ಸಂಪರ್ಕ ಕಲ್ಪಿಸುವ “ಸಮಜೊತ ಎಕ್ಸ್‌ಪ್ರೆಸ್” ರೈಲುಗಳನ್ನು ತಕ್ಷಣವೇ ನಿಲ್ಲಿಸುವ ನಿರ್ಧಾರವನ್ನು ಸರಕಾರ ಕೈಗೊಳ್ಳಬೇಕಿದೆ.

ಸೊ ಕಾಲ್ಡ್  “ಶಾಂತಿ ಧೂತ”ರ (Peace Doves)ಮಗ್ಗಲು ಮುರಿಯುವುದು:

ಯಾರು ಈ ಶಾಂತಿ ಧೂತರು? ಇದಕ್ಕೆ ಉತ್ತರ ಆಜಾದಿಯ ಘೋಷಣೆ ಕೂಗುತ್ತಾ ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗಿರುವ ಈ ಶಾಂತಿ ಧೂತರುಗಳನ್ನು ಮಟ್ಟ ಹಾಕುವುದು ಮೋದಿ ಮಾಡಿದ ಮೊದಲ ಕೆಲಸ. ಆದರೆ ಆ ನಿಟ್ಟಿನಲ್ಲಿ ಮೋದಿ ಇನ್ನೂ ಸರಿಯಾಗಿ ಯಶಸ್ವಿಯಾಗಲಿಲ್ಲ. ಹಿಂದಿನ ಸರಕಾರಗಳು ಇದ್ದಾಗ ಒಂದು ಹೊಗಳು ಭಟ ಗುಂಪು ಸರ್ಕಾರವನ್ನು ನಿಯಂತ್ರಿಸುವಷ್ಟು  ಬೆಳೆದಿತ್ತು. ಇವರನ್ನು ವ್ಯವಸ್ಥಿತವಾಗಿ ಬೆಳೆಸುವ ಕೆಲಸವನ್ನು ಮಾಡಿದ್ದು ಕೂಡ ಒಂದು ಮನೆತನ. ಹಾಗಾದರೆ ಇವರೆಲ್ಲ ಯಾವ ರೀತಿಯಲ್ಲಿ ದೇಶಕ್ಕೆ ಮಾರಕವಾಗಿದ್ದಾರೆ ?  ಬಡವರನ್ನು ಮತ್ತು ದಲಿತರನ್ನು ಉದ್ಧಾರ ಮಾಡುತ್ತೇವೆ ಎಂದು ಒಂದಿಷ್ಟು ಸ್ವಯಂ ಸೇವಾ ಸಂಸ್ಥೆಗಳನ್ನು ಕಟ್ಟಿಕೊಂಡು, ಮಾಧ್ಯಮ ಮನೆಗಳೊಳಗೆ ವಿಷ ಮನಸ್ಸಿನ ಪತ್ರಕರ್ತರುಗಳು ವೇಷ ಹಾಕಿಕೊಂಡು,ಲಿಬರಲ್ಸ್ ಎಂಬ ನಾಮಫಲಕಗಳನ್ನು ಕುತ್ತಿಗೆಗೆ ನೇತಾಕಿಕೊಂಡು, ಕಾಲೇಜ್್’ಗಳಲ್ಲಿ ವಿದ್ಯಾರ್ಥಿಗಳ ಸಂಘಟನೆಗಳನ್ನು ಕಟ್ಟಿಕೊಂಡು ಹೀಗೆ ಇನ್ನೂ ಅನೇಕ ವಿಧಗಳಲ್ಲಿ ಭಾರತವನ್ನು ವಿಶ್ವದ ಎಲ್ಲ ರಾಷ್ಟ್ರಗಳ ಎದುರಿಗೆ ತಲೆತಗ್ಗಿಸುವಂತೆ ವ್ಯವಸ್ಥಿತ ಸಂಚನ್ನು ಇವರುಗಳು ರೂಪಿಸುತ್ತಿದ್ದಾರೆ.ಮೋದಿ ಅಧಿಕಾರಕ್ಕೆ ಬಂದ ಮೇಲೆ ಇವರುಗಳ ಆಟ ನಡೆಯಲೇ ಇಲ್ಲ. ಸ್ವಯಂ ಸೇವಾ ಸಂಸ್ಥೆಗಳ ಕಳ್ಳಾಟಕ್ಕೆ ತಡೆಯೊಡ್ಡಿದ್ದು ನರೇಂದ್ರ ಮೋದಿಯವರ ಸರಕಾರ, ಕಾಶ್ಮೀರದಲ್ಲಿ ಶಾಂತಿ ಕದಡಲು ಸದಾ ಪ್ರಯತ್ನಿಸುತ್ತಿದ್ದ ಹುರಿಯತ್’ನ ಮಗ್ಗಲು ಮುರಿಯಲು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ನರೇಂದ್ರ ಮೋದಿಯವರ ಸರಕಾರ.ಮಣಿಶಂಕರ್ ಅಯ್ಯರ್ ಅಂತಹಾ ಹೊಲಸು ರಾಜಕಾಣಿ ಪಾಕಿಸ್ತಾನದ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತ ಸಂವಿಧಾನಿಕವಾಗಿ ಚುನಾಯಿತಗೊಂಡಿರುವ ಸರ್ಕಾರವನ್ನು ಹೀಯಾಳಿಸುತ್ತ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ನಿರಂತರ ಶ್ರಮಿಸುತ್ತಿದ್ದಾರೆ. ಸುದೀಂದ್ರ ಕುಲಕರ್ಣಿಯೆಂಬ  ಸ್ವಯಂ ಘೋಷಿತ ಲೇಖಕ ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ರತ್ನಗಂಬಳಿ ಹಾಸಿ ತನ್ನ ಪುಸ್ತಕ ಬಿಡುಗಡೆಗೆ ಸ್ವಾಗತಿಸುತ್ತಾನೆ.ಇದೆಲ್ಲ ಸಾಧ್ಯವಾಗುತ್ತಿರುವುದು ಭಾರತದಲ್ಲಿ ಮಾತ್ರ. ಬರ್ಕಾ ದತ್ ,ರಾಜದೀಪ್ ಸರ್ದೇಸಾಯಿಯಂತಹ ಪತ್ರಕರ್ತರ ರಾಷ್ಟ್ರವಿರೋಧಿ ನಡೆಗಳನ್ನು ಹಂತಹಂತವಾಗಿ ಗಮನಿಸಿ ಅವರಿಗೆ ಪಾಠ ಕಲಿಸುವ ಕೆಲಸ ಮಾಡಬೇಕಿದೆ.

ಈಗ ನೋಡಿ ಎಲ್ಓಸಿಯನ್ನು ಹೊಕ್ಕಿ ಪಾಕಿಸ್ತಾನದ ಸುಮಾರು ಮೂವತ್ತೆಂಟು ಭಯೋತ್ಪಾದಕರನ್ನು ಮತ್ತು ಒಂಬತ್ತು ಪಾಪಿ ಸೈನಿಕರನ್ನು ಹೊಡೆದುರುಳಿಸಿ ಬಂದಿರುವ ನಮ್ಮ ಸೈನಿಕರ ಸಾಹಸವನ್ನು ಮತ್ತು ಈ ನಿರ್ಧಾರ ತೆಗೆದುಕೊಂಡು ಸೈನಿಕರ ಉತ್ಸಾಹ ಇಮ್ಮಡಿಗೊಳಿಸಿದ ಹೆಮ್ಮೆಯ ಪ್ರಧಾನಿಗೆ ಅಭಿನಂದನೆ ಸಲ್ಲಿಸದಿದ್ದರೆ ಭಾರತೀಯನಾಗಿ ಏನು ಪ್ರಯೋಜನ? ಭಾರತದ ತಾಕತ್ತು ಪ್ರಶ್ನಿಸುವ ಪಾಕಿಗಳಿಗೆ ಐವತ್ತಾರು ಇಂಚಿನ ಎದೆಯ ಪ್ರಧಾನಿ ಉತ್ತರ ನೀಡಿದ್ದಾರೆ.. ನಿರ್ಧಾರ ಕೈಗೊಳ್ಳದೆ ನಿಧಾನವಾಗಿ ಚಾಣಾಕ್ಷ ನಿರ್ಧಾರ ತೆಗೆದುಕೊಳ್ಳುವಮೋದಿಯ ಸ್ಟ್ರಾಟಿಜಿಯ ಎದುರು ಪಾಕಿಸ್ತಾನದ ಆಟ ನಡೆಯುವುದಿಲ್ಲ. ಉರಿ ದಾಳಿಯ ಬಳಿಕ ಹಿಗ್ಗಾಮುಗ್ಗ ಟೀಕೆಗೊಳಗಾಗಿದ್ದ ಮೋದಿ ಈಗ ತನ್ನ ಕೆಲಸದಿಂದಲೇ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.!

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!