ಪ್ರಚಲಿತ

ಈ ಪ್ರಕರಣವನ್ನು ಮೋದಿಗೆ ಹೇಗೆ ಕನೆಕ್ಟ್ ಮಾಡೋದು?

ಅರವಿಂದ್ ಕೇಜ್ರಿವಾಲ್ ಅವರು ‘ಒಂದು ಪಕ್ಷಕ್ಕೆ ಯಾರ್ಯಾರನ್ನ ಆಯ್ಕೆ ಮಾಡಬಾರದು’ ಎಂಬ ವಿಷಯದ ಮೇಲೆ ಪುಸ್ತಕವನ್ನೇ ಬರೆಯಬಹುದು. ಅವರ ಒಬ್ಬ ಎಮ್.ಎಲ್.ಎ ಪವಿತ್ರ ಖುರಾನ್’ ಅನ್ನು ಅಗೌರವಿಸಿದರು, ಒಬ್ಬರು ತಮ್ಮ ಹೆಂಡತಿಯ ಮೇಲೆ ಕೈಮಾಡಿದರು, ಇನ್ನೊಬ್ಬರು ನಕಲಿ ಪದವಿಯಿಂದಾಗಿ ಸಸ್ಪೆಂಡ್ ಆಗಿದ್ದಾರೆ. ಪವರ್’ಕಟ್ ಬಗ್ಗೆ ಕೇಳಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಯುವಕನಿಂದ ಅತ್ಯಾಚಾರ ಹಾಗೂ ಕೊಲೆಯ ಬೆದರಿಕೆ ಹಾಕಿಸಿದ್ದಾರೆ ಮತ್ತೊಬ್ಬ ಎಮ್.ಎಲ್.ಎ. ೨೧ ಜನ ಎಮ್.ಎಲ್.ಎ’ಗಳು ಇದಾಗಲೇ ಚುನಾವಣಾ ಸಂಹಿತೆಯನ್ನ ಉಲ್ಲಂಘಿಸಿರುವ ಕಾರಣಕ್ಕೆ, ಎಲೆಕ್ಷನ್ ಕಮಿಷನ್’ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಸುಲ್ತಾನ್’ಪುರ ಮಜ್ರಾದ ಎಮ್.ಎಲ್.ಎ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಆಗಿದ್ದ ಸಂದೀಪ್ ಕುಮಾರ್ ಸರದಿ. ಎನ್.ಡಿ.ಟಿ,ವಿ ಅವರ ರಿಪೋರ್ಟ್ ಪ್ರಕಾರ ಕೇಜ್ರಿವಾಲ್ ಅವರಿಗೆ ಒಂದು ಸಿ.ಡಿ. ನೀಡಲಾಗಿದ್ದು ಅದರಲ್ಲಿ ಸಂದೀಪ್ ಕುಮಾರ್ ಅವರು ಇಬ್ಬರು ಮಹಿಳೆಯರೊಂದಿಗೆ ಇದ್ದ ವೀಡಿಯೋ ಹಾಗೂ ಕೆಲವು ಆಕ್ಷೇಪಾರ್ಹ ಫೋಟೋಗಳಿದ್ದವು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ತಕ್ಷಣವೇ ಕ್ಯಾಬಿನೆಟ್’ನಿಂದ ಸಂದೀಪ್’ರನ್ನು ತೆಗೆದು ಹಾಕಿದ್ದು ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ.

ಸರಿ, ಸಂದೀಪ್ ಕುಮಾರ್ ಉತ್ತಮ ಪಕ್ಷದಲ್ಲಿದ್ದ ಒಬ್ಬ ಕೆಟ್ಟ ಮನುಷ್ಯ. ರಾಜಕೀಯದಲ್ಲಿ ಶುದ್ಧತೆಯನ್ನು ತರುವ ನಿಟ್ಟಿನಲ್ಲಿ ಬದ್ಧರಾಗಿರುವ ಕೇಜ್ರಿವಾಲ್ ಸಂದೀಪ್ ಅವರನ್ನು ಹೊರ ಹಾಕಿದರು. ನಾವು ಆವರ ಆಯ್ಕೆಯ ಕುರಿತು ವ್ಯಂಗ್ಯವಾಡಬಹುದುದು. ಆದರೆ ಅವರು ಈಗ ಮಾಡಿದ್ದು ಮಾತ್ರ ಸರಿಯೇ ತಾನೆ? ಎಲ್ಲ ಪಕ್ಷಗಳು ಕೂಡ ಇವರಿಂದ ಕಲಿತು, ತಪ್ಪು ಮಾಡುವವರನ್ನು ಹೊರ ಹಾಕಿ ಒಂದು ಉತ್ತಮ ರಾಜಕಾರಣಕ್ಕೆ ಅನುವು ಮಾಡಿಕೊಡಬೇಕಲ್ಲವೇ? ಖಂಡಿತ.. ಆದರೆ ಈ ಪ್ರಕರಣದಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿರುವುದಕ್ಕಿಂತ ಇನ್ನೂ ಕೆಲ ಅಂಶಗಳಿವೆ.

ಟಿ.ವಿ. ಜರ್ನಲಿಸ್ಟ್ ಆಗಿರುವ ಮಾನಕ್ ಗುಪ್ತಾ ಅವರು ಇದನ್ನ ಬೇರೆಯದೇ ರೀತಿಯಲ್ಲಿ ಹೇಳುತ್ತಾರೆ. ಮಾನಕ್ ಗುಪ್ತಾ ಅವರು ಹೇಳುವಂತೆ, ಆ ವೀಡಿಯೋವನ್ನ ೨ ತಿಂಗಳ ಮೊದಲೇ ಮಾಡಲಾಗಿತ್ತು ಮತ್ತು ೧೫ ದಿನಗಳ ಹಿಂದೆಯೇ ಆ ವೀಡಿಯೋ ಕೇಜ್ರಿವಾಲ್’ರನ್ನ ತಲುಪಿತ್ತು. ಆದರೆ ಈ ಕಥೆಗೆ ತಿರುವು ಬಂದಿದ್ದು ಮಾತ್ರ ಮೊನ್ನೆ ಈ ವೀಡಿಯೋ ಲೆಫ್ಟಿನೆಂಟ್ ಗವರ್ನರ್ ಆಗಿರುವ ನಜೀಬ್ ಜಂಗ್’ರನ್ನು ತಲುಪಿದಾಗ. ಒಂದು ನಿಮಿಷವೂ ತಡ ಮಾಡದೇ ಸಿನಿಮಾ ರಿವ್ಯೂ ಬರೆಯುವ ಕೇಜ್ರಿವಾಲ್  ಈ ವಿಷಯದಲ್ಲಿ ಮಾತ್ರ ೧೫ ದಿನಗಳ ಕಾಲ ಸುಮ್ಮನೇ ಕುಳಿತಿದ್ದರು. ಆದರೆ ವೀಡಿಯೋ ಎಲ್.ಜಿ ಅವರನ್ನು ತಲುಪಿದ್ದರಿಂದ ಕೇಜ್ರಿವಾಲ್ ಕ್ರಮ ತೆಗೆದುಕೊಳ್ಳಲೇಬೇಕಿತ್ತು. ಗೇಮ್ ಓವರ್ ಆಗಿದೆ ಎಂದು ತಿಳಿದ ನಂತರ ಈ ತರಹದ ಕ್ರಮ ತೆಗೆದುಕೊಂಡು ಎಷ್ಟು ಸಾಧ್ಯವೋ ಅಷ್ಟು ಮನ್ನಣೆ (ಹಾಗೆ ಸಿಂಪತಿ ಕೂಡ) ಪಡೆಯುವ ಪ್ರಯತ್ನ ಮಾಡಿದ್ದಾರೆ.

ಕೇಜ್ರಿವಾಲ್ ಈಗ ಸಂದೀಪ್ ಅವರ ರಾಜೀನಾಮೆಯನ್ನು ಪಡೆದಾಗಿದೆ. ಈಗ  ಕುತೂಹಲವಿರುವುದು ಕೇಜ್ರಿವಾಲ್ ಅವರು ಈ ಪ್ರಕರಣವನ್ನು ಮೋದಿಯವರಿಗೆ ಹೇಗೆ ಕನೆಕ್ಟ್ ಮಾಡಲಿದ್ದಾರೆ ಎನ್ನುವುದರ ಬಗ್ಗೆ.

(ಮೂಲ ಲೇಖನ : ಅತುಲ್ ಕುಮಾರ್ ಮಿಶ್ರಾ, ದ ಫ್ರಸ್ಟ್ರೇಟೆಡ್ ಇಂಡಿಯನ್)

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!