ಅಂಕಣ

ಆಯಮ್ಮ ನಮ್ಮತ್ರ ನೀರು ಬುಡುಸ್ತಾ ಕುಂತಿದ್ರೆ ಈಯಮ್ಮ ರಂಗೋಲಿ ಬುಡುಸ್ತಾ ಕುಂತೈತೆ ಕಣಣ್ಣಾ!!

ಸೂರ್ಯ ನೆತ್ತಿಗೇರೋ ಒತ್ಗೆ ಗೋಪಾಲಣ್ಣ ಹಟ್ಟಿ ಮುಂದೆ ಬಂದ್ವು ಮುರುಗನ್ ಮತ್ತು ಕಲ್ಲೇಶೀ…

ಎಲ್ಲೀಗಂಟ ಬಂತ್ಲಾ ಕಾವೇರಿ ಓರಾಟ ಮತ್ತು ಸ್ಟ್ರೈಕೂ ಅಂತ ಮಾತು ಆರಂಭಿಸ್ತು ಗೋಪಾಲಣ್ಣ!!

ನೀರು ಬುಡೋವಷ್ಟು ಬುಟ್ಟು ಇನ್ನು ಬುಡಲ್ಲಾ ಅಂತ ತೀರ್ಮಾನ ಮಾಡವ್ರೆ ಕಣಣ್ಣಾ. ಎಲ್ಲಾರು ಸೀರಿಯಸ್ಸಾಗಿ ಅಧಿವೇಸ್ನಾದಲ್ಲಿ ಭಾಗವಹ್ಸಿದ್ರೆ ನಿಮ್ಮ್ ಉಮಾಕ್ಕ ಮಾತ್ರ ಅದ್ರ್ ಪಾಡಿಗೆ ಆರಾಮಾಗಿ ರಂಗೋಲಿ ಬುಡುಸ್ತಾ ಕುಂತಿತ್ತು ಕಣ್ಲಾ ಅಂತೇಳ್ತು ಮುರುಗನ್.

ಅಗಳಗಳಗಳೋ…. ಒಂದ್ಕಾಲ್ದ ಈರೋಯಿನ್ನ್ ಜಯಮ್ಮ ಅತ್ಲಾಗೇ ತಮಿಳ್ನಾಡಲ್ಲಿ ಕುಂತ್ಕಂಡು ನಮ್ಮತ್ರ ನೀರು ಬುಡುಸ್ತಾ ಇದ್ರೆ ಇಲ್ಲಿ ನಮ್ಮ ಉಮಾಕ್ಕ ಮಾತ್ರ ರಂಗೋಲಿ ಬುಡುಸ್ತೈತೆ ಅಂದ್ರೆ ಅರ್ತ ಮಾಡ್ಕೋಳ್ಲಾ ನಮ್ಮ್ಗಳ ಅಣೆಬರಾನಾ ಅಂತ ಬೇಜಾರ್ದಲ್ಲಿ ಯೋಳ್ತು ಕಲ್ಲೇಶೀ…

ಮಂಡ್ಯದ್ ಗಂಡು ಅಂಬ್ರೀಶು ಯಾಕ್ಲಾ ಕಾವೇರಿ ಇಚಾರ್ದಾಗೆ ಸೈಲೆಂಟ್ ಆಗ್ಬುಟ್ಟೈತೆ?? ಅಂತಾ ಕೇಳ್ತು ಮುರುಗನ್.

ಥತ್ತೇರಿಕೆ! ಅದ್ಕೆ ಮಂತ್ರಿ ಕುರ್ಚಿ ಒಂಟೋದಾಗ ಆದ್ ನೋವೇ ಇನ್ನೂ ವಾಸಿಯಾಗಿಲ್ಲ ಕಣ್ಲಾ. ಇನ್ನಾ ಜನರ್ ನೋವ್ ಎಂಗ್ಲಾ ಅರ್ತ ಆಗ್ತೈತೆ? ಅಂತ ಮಕ್ಕುಗೀತು ಗೋಪಾಲಣ್ಣ. ಪ್ಯಾಪರ್ರು ಸಿಮ್ಮ ಮಂಡ್ಯದಲ್ಲಿ ಓರಾಟ ಮಾಡಾಕ್ ಓಗಿ ಜನ್ಗಳತ್ರ ಬೈಸ್ಕೊಂಡ್ ಬಂತಂತೆ ಕಣ್ಲಾ. ರಮ್ಮೂನೂವೆ ಎದ್ರುಕ್ಕೊಂಡು ಮನೆಯೊಳಿಕ್ಕೆ ಕುತ್ಕೊಂಡೈತೆ ಕಣ್ಲಾ ಅಂತಾ ಯೋಳ್ತು ಗೋಪಾಲಣ್ಣ.

ಸರ್ವ ಪಕ್ಸ ಮೀಟಿಂಗ್ ಗೆ ಫ್ಲವರ್ ಪಾರ್ಟಿಯವ್ರು ಓಗಿಲ್ವಂತೆ ಔದೇನ್ಲಾ ಅಂತ ಪ್ರಶ್ನೆ ಆಕ್ತು ಕಲ್ಲೇಶಿ.

ಹೂ ಕಣ್ಲಾ. ಯೆಡ್ರು ಈಸ್ವರ್ರು ರಾಯಣ್ಣ ಬ್ರ್ರಿಗೇಡ್ ಅಂತಾ ಬಡ್ದಾಡ್ಕಂದು ಕುಂತವೆ. ಇನ್ನುಳ್ದ ಲೀಡರ್ಸು ನಿದ್ದೆ ಮಾಡ್ಕಂಡು ಆರಾಮಾಗವೆ. ಏನೇ ಯೋಳ್ಲಾ ನಮ್ಮ್ ದೊಡ್ಡ್ ಗೌಡ್ರು ಭಾಳ ವಾಸಿ ಇಂತಾ ಟೇಮಲ್ಲಿ ಅಂತೇಳ್ತು ಮುರುಗನ್.

ಅದ್ಯಾವ್ದೋ ಸಾಮೀಜಿ ಬಿಳಿ ಕಾಗೆ ನೋಡೈತೆ. ಅದ್ರಿಂದಾನೇ ಕಾವೇರಿ ಇಚಾರದಲ್ಲಿ ನಮ್ ರಾಜ್ಯಕ್ಕೆ ಸೋಲಾಗಿರೋದು ಅಂತ ಅದ್ಯಾವುದೋ ಟೀವಿಯವ್ರು ಜನ್ರಿಗೆ ಕಾಗೆ ಆರಿಸ್ತಿದ್ರು ಕಣ್ಲಾ ಅಂತ ಯೋಳ್ತು ಗೋಪಾಲಣ್ಣ.

ವೆಂಕಟ್ ಕಥೆ ಏನ್ಲಾ?? ರಿಲೀಸ್ ಆಯ್ತೆನ್ಲಾ ಪೊರ್ಕಿ ಹುಚ್ಚ ವೆಂಕಟ್ ಪಿಚ್ಚರ್ರು ಅಂತ ಕೇಳ್ತು ಕಲ್ಲೇಶಿ.

ಅಯ್ಯಾ ನಿನ್ನ ಮಕ್ಕೆ ಬೂದಿ ಬಳಿಯಾ!! ಕಾವೇರಿ ಇಶ್ಯಾದಾಗೆ ಇಂಪಾರ್ಟೆಂಟ್ ಮ್ಯಾಟರ್ರು ಮಾತಾಡ್ತಿರೋವಾಗ ಹುಚ್ಚ್ ವೆಂಕಟ್ ಬಗ್ಗೆ ಮಾತಾಡಿ ಟೇಮ್ ವೇಸ್ಟ್ ಮಾಡ್ತಿಯ್ಲೋ ಅಡ್ಕಸ್ಬಿ ನನ್ ಮಗನೇ. ಕಾವೇರಿ ಇವಾದ ಸರಿ ಓಗ್ಲಿ ಅಂತ ವಾಟಾಳೂ ಮತ್ತು ಪೂಜಾರಿ ಪಾಪ ನೆತ್ತಿ ಸುಡೋ ಬಿಸ್ಲಲ್ಲಿ ಉರ್ಳು ಸೇವೆ ಕೂಡಾ ಮಾಡಾವ್ರೇ… ನೀರಿಲ್ಲ್ದೇ ಬತ್ತಿರೋ ಕಾವೇರಿ ನೋಡ್ತಾ ಇದ್ರೆ ಒಟ್ಟೆ ಚುರುಕ್ಕ್ ಅಂತೈತೆ ಅಂತ ಕೋಪದಲ್ಲಿ ಉತ್ರ ಕೊಡ್ತು ಗೋಪಾಲಣ್ಣ.

ಕೂಲ್ ಡೌನ್ ಗೋಪಾಲಣ್ಣ. ಒಸಿ ಸಮಾದಾನ ಮಾಡ್ಕ. ನೀನೆಸ್ಟೇ ಓರಾಟ ಆಗೂ ಆರಾಟ ಮಾಡಿದ್ರೂವೇ ನೀರು ಬಿಡೋದ್ರ ಬಗ್ಗೆ ಡಿಸಿಶನ್ ಮಾಡೋದು ಸರ್ಕಾರ ಕಣ್ಲಾ. ಹುಚ್ಚ್ ವೆಂಕಟ್ ತಿಕ್ಲಾ ವೆಂಕಟ್ ಅನ್ನೋ ಪಿಚ್ಚರ್ ಮಾಡ್ತೈತೆ. ಮೊದ್ಲೇ ತಿಕ್ಲು ಅದು. ಇವಾಗ ಅದೇ ಎಸ್ರಲ್ಲಿ ಪಿಚ್ಚರ್ರು ಬ್ಯಾರೆ ಅಂತ ಕಲ್ಲೇಶಿಗೂ ಉತ್ರ ಕೊಡ್ತು ಮುರುಗನ್.

ಜಾರ್ಜು ಮತ್ತ್ ಮಿನಿಸ್ಟರ್ ಆಗೈತೇನ್ಲಾ?? ಎಲ್ಲಾ ಕೇಸೂ ಬಿದ್ದೋದ್ವೇನ್ಲಾ ಅಂತಾ ಕೇಳ್ತು ಕಲ್ಲೇಶಿ.

ಹೌದು ಕಣಣ್ಣಾ. ಜಾರ್ಜು ಮತ್ತೆ ಚಾರ್ಜು ತಗೊಂಡೈತೆ ಅಂತೇಳ್ತು ಮುರುಗನ್.

ಥತ್ತೇರಿಕೆ ಮಾತಾಡ್ತಾ ಟೇಮ್ ಆಗಿದ್ದೇ ಗೊತ್ತಾಗಿಲ್ಲ. ಜಿಯೋ ಸಿಮ್ ಇಸ್ಕಾಳಾಕೆ ಪಟ್ಣಕ್ಕೆ ಓಗ್ಬೇಕಿತ್ತು. ಬತ್ತೀನಿ ಕಣ್ರಲಾ. ಸಿವನೇ ಸಂಬುಲಿಂಗ ಅಂತೇಳಿ ಗೋಪಾಲಣ್ಣ ಜಾಗ ಖಾಲಿ ಮಾಡ್ತು!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!