ಅಂಕಣ

ಯಾಕೋ ಇತ್ತಿತ್ಲಾಗೇ ಪ್ಯಾಪರ್ರು ಸಿಮ್ಮಗಳೇ ಜಾಸ್ತಿ ಆಗ್ಬುಟ್ಟಾವೆ ಕಣ್ಲಾ..!!

ಕಟ್ಟಿಂಗ್ ಮಾಡ್ಸಾಕೆ ಅಂತ ಕಲ್ಲೇಶೀ ಸೆಲೂನ್ ಗೆ ಗೋಪಾಲಣ್ಣ ಎಂಟ್ರಿ ಕೊಡ್ತು. ಇರೋ ಎಲ್ಡುಕೂದ್ಲನ್ನ ಬಾಚ್ಕೋತಾ ಅಲ್ಲೇ ಕೂತಿತ್ತು ಮುರ್ಗೇಶೀ ಅಲಿಯಾಸ್ ಕೋಳೀ ಮುರುಗನ್.

ಅಲೆಲೆಲೆಲೆಲೆ ಗ್ವಾಪಾಲಣ್ಣೀ!! ಯಾಕ್ಲಾ ಬಂದೀಯಾ ಇಲ್ಲಿಗೆ ಅಂತ ಮಾತು ಆರಂಭಿಸ್ತು ಮುರುಗನ್.

ಬಿಕ್ನಾಸೀ ನನ್ ಮಗನೇ… ನಿನಿಗ್ ಕರಿ ನಾಗ್ರಾವ್ ಕಡ್ಯಾ..  ಕಟ್ಟಿಂಗ್ ಸಾಪ್ಗೆ ಎರ್ಕೋಳೋಕೆ ಅಲ್ದೆ ಮತ್ತ್ಯಾಕ್ಲಾ ಬರ್ತಾರೆ?? ಅಂತ ಮಕ್ಕುಗೀತು ಗೋಪಾಲಣ್ಣ.

ಉಡದ್ ಬಾಯಿ ಈಸ್ವರ್ರು ಒಸ ಸಂಗಟ್ನೆ ಕಥೆ ಎಲ್ಲೀಗಂಟ ಬಂತ್ಲಾ?? ಯೆಡ್ರು ಇರುದ್ದ ಗುಟ್ರು ಒಡ್ದೇ ಸಿದ್ದ ಅಂತ ರಾಯಣ್ಣ ಎಸ್ರನ್ನ್ ಯೋಳಿ ಅದೇನೋ ಹಿಂದ ಸಂಗಟ್ನೆ ಕಟ್ಕಂಡು ರಾಜ್ಕೀಯ ಮಾಡ್ತೈತೆ ಅಂತ ಕೇಳ್ತು ಕಲ್ಲೇಶಿ.

ಇನ್ನೇನ್ಲಾ ಮಾಡತ್ತೆ ಈಸ್ವರ್ರು. ಪ್ಲವರ್ ಪಾರ್ಟಿನಾಗೆ ಅದ್ರ್ ಹಿಂದ ಮುಂದ ಯಾರೂ ಇಲ್ಲ.  ಅದ್ನ ಕ್ಯಾರೇ ಅನ್ನೋರಿಲ್ಲ. ಎಂಗೋ ಇಂಗೋ ಸ್ವಲ್ಪ ಹವಾ ಮೆಂಟೇನ್ ಮಾಡ್ಕೋಳೋಕೆ ಈತರಾ ಖುಲ್ಲಂ ಖುಲ್ಲಾ ರಾಜ್ಕೀಯ ಮಾಡ್ತೈತೆ ಕಣ್ಲಾ ಬುಡ್ಲಾ ಅಂತೇಳ್ತು ಗೋಪಾಲಣ್ಣ.

ಕಳ್ಸಾ ಬಂಡೂರಿ ಓರಾಟದ್ ಕತೆ ಏನ್ಲಾ? ರೈತ್ರು ಅದೇಟೇ ಓರಾಟ ಮಾಡಿದ್ರೂ ನಮ್ಮ್ ಎಂಪಿಗಳು ಯಾರೂ ಕ್ಯಾರೇ ಅಂತಿಲ್ಲ ಅಂತ ಕೇಳ್ತು ಕೋಳೀ ಮುರುಗನ್..

ಥತ್ತೇರಿಕೆ.. ನಮ್ಮ್ ಎಂಪಿಗ್ಳೆಲ್ಲ ಬರೀ ಪ್ಯಾಪರ್ರು ಸಿಮ್ಮಗಳು ಕಣ್ಲಾ. ಬರೀ ಪ್ಯಾಪರ್ರ್ ನಾಗೆ ಸಿಮ್ಮ ತರಗರ್ಜನೆ ಮಾಡಿದ್ರೆ ಸಾಲಲ್ಲ ಕಣ್ಲಾ.. ಜನಗ್ಳ ಪ್ರಾಬ್ಲೆಮ್ಮು ಕೇಳೋರು ಯಾರೂ ಇಲ್ಲ ಕಣ್ಲಾ.ಬುಡ್ಲಾ ಅವ್ಗಳ್ ಇಶ್ಯಾ ಮಾತಾಡಿ ನಾಲ್ಗೆ ಯಾಕ್ಲಾ ಕೊಳ್ಕ್ ಮಾಡ್ತೀಯಾ ಅಂತ ಉತ್ರ ಕೊಡ್ತು ಗೋಪಾಲಣ್ಣ.

ರಮ್ಮುಗೆ ಅದ್ಯೇನ್ಲಾ ಆಗೈತೆ. ಪಾಕಿಸ್ತಾನದ್ ಜನಾನೇ ಒಳ್ಳೇರೂ ಅಂತಾ ಯೋಳೈತೆ ಅಂತಾ ಕೇಳ್ತು ಕಲ್ಲೇಶಿ.

ಅಗಳಗಳಗಳಗಳೋ ನೀರ್ದ್ವಾಸಿ ಪಿಚ್ಚರಲ್ಲಿ ಜಗ್ಗೇಶು ಕೊಟ್ಟಿರೋ ಮಾಂಜಾಕ್ಕೆ ಉರ್ಕೊಂಡು ಯೋಳಿರ್ಬೇಕು ಕಣ್ಲಾ. ಯಾಕೋ ಇತ್ತಿತ್ಲಾಗೆ ರಮ್ಮು ಉಚ್ಚ ವೆಂಕಟು ತರಾನೇ ಎಂಗೆಂಗೋ ಆಡ್ತೈತೆ ಕಣ್ಲಾ ಅಂತೇಳ್ತು ಮುರುಗನ್. ಮಾತಾಡ್ತಾನೇ ಮುರುಗನ್ಗೆ ಕಟ್ಟಿಂಗ್ ಮಾಡಿ ಮುಗುಸ್ತು ಕಲ್ಲೇಶಿ.

ಕಟ್ಟಿಂಗ್ ಮಾಡ್ಸಾಕೆ ಗೋಪಾಲಣ್ಣಿ ಕುಂತ್ಕೊಂಡ್ತು.ಗೋಪಾಲಣ್ಣಿ ಅದ್ಯಾರೋ ಹಲ್ಕಾ ನನ್ ಮಕ್ಳು ಬ್ಯಾಂಗ್ಳೂರಲ್ಲಿ ಉಂಡ್ ಮನೇಗೇ ದ್ರೋಹ ಮಾಡಾವ್ರಂತೆ. ದೇಶದ ಇರುದ್ದಾನೇ ಗೋಷ್ಣೆ ಕೂಗಾವ್ರಂತೆ. ಪೋಲಿಸ್ರೇನ್ಲಾ ಕಳ್ಳೆ ಪೂರಿ ತಿಂತಾ ಕೂತವ್ರೇನ್ಲಾ ಅಂತ ಕೇಳ್ತು ಮುರುಗನ್!

ಪೋಲೀಸ್ರು ಕೆಲ್ಸ ಏನಿದ್ರೂ ಎಲ್ಮೆಟ್ ಇಲ್ದೆ ಓಡಾಡೋ ಅಮಾಯಕ್ರನ್ನ್ ಇಡ್ಯೋಕೆ, ನೀರು ಕೇಳೋ ರೈತ್ರಿಗ್ ಲಾಟೀ ಬೀಸಾಕೆ ಆಗೋಯ್ತ್ಲಾ.ದೇಶದ್ ಇರುದ್ದ ಮಾತಾಡೋರಿಗೆ ಪುಲ್ಲು ಪ್ರೊಟೆಕ್ಷನ್ ಕೊಡ್ತಾವ್ರೆ ಕಣ್ಲಾ. ಕೊಟ್ಟಿಲ್ಲಾಂದ್ರೂ ಸಿಎಮ್ಮ್ ಮತ್ತು ಓಮ್ ಮಿನಿಸ್ಟ್ರುಗೆ ಸಜೆಶನ್ ಕೊಡೋವ್ರು ಭಾಳ ಮಂದಿ ಅವ್ರೆ ಕಣ್ಲಾ ಅಂತ ಶ್ಯಾಣೆ ಬೇಜಾರ್ದಲ್ಲಿ ಯೋಳ್ತು ಗೋಪಾಲಣ್ಣ.

ಗಿಣಿ ಸಾಸ್ತ್ರ ಯೋಳ್ತಿದ್ದೋರಲ್ಲ ಭಾಳ ದೊಡ್ಡ ಸ್ವಾಮೀಜಿ ಆಗ್ಬುಟ್ಟಿದ್ದಾರೆ ಕಣ್ಲಾ. ಆಟೋ ಓಡುಸ್ತಿದ್ದ ಆಸಾಮಿ ಆರ್ಯವರ್ಧನ್ನು ಸಂಖ್ಯಾಸಾಸ್ತ್ರ ಜೋತಿಸಿ ಆಗ್ಬುಟ್ಟಿಲ್ವೇನ್ಲಾ.?? ಮ್ಯಾಕೆ ಹಾಲ್ಗೂ ಡಿಮ್ಯಾಂಡ್ ಬಂದೈತೆ. ಮಿಲ್ಕ್ ಮಿನಿಸ್ಟ್ರು ಮಂಜು ಮೊನ್ನೆ ಅದೇ ಹಾಲ್ಕರೆದು ಒಂದ್ ಚೊಂಬು ಗಟ್ಟಿ ಮ್ಯಾಕೆ ಹಾಲು ಗಟ್ಗಟಾ ಕುಡ್ದೈತೆ ಕಣ್ಲಾ. ಎಲ್ರ ಟೇಮೂ ಬದ್ಲಾಗ್ತಿದೆ ಆದ್ರೆ ಅವ್ನಯ್ಯನ್ ನಮ್ಮ್ ಟೇಮೇ ಮಾತ್ರ ಭಾಳ ಕರಾಬಾಗೈತೆ ಕಣ್ಲಾ ಅಂತೇಳ್ತು ಕಲ್ಲೇಶಿ.

ಎಲ್ರಿಗೂ ಕಾಲ ಬತ್ತೈತೆ ಕಣ್ಲಾ. ನಡೀರ್ಲಾ ನಮ್ಮ್ ಲಕ್ಕು ಎಂಗೈತೆ ಅಂತಾ ರುಷಿಕುಮಾರ್ ಸ್ವಾಮಿ ಅತ್ರ ಕೇಳ್ಕೊಂಡು ಬರಾಣ ಅಂತ ಕಟ್ಟಿಂಗ್ ದುಡ್ಡು ಕೊಡ್ದೇ ಗೋಪಾಲಣ್ಣ ಎಸ್ಕೇಪ್ ಆಯ್ತು!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!