ಅಂಕಣ

ಕೆಮ್ಮಾದ್ರು ಕಮ್ಮಿ ಆಗ್ಬೋದು ಆದ್ರೆಉಚ್ತನ ಅಲ್ಲ ಕಣಣ್ಣೋ!!!

ಎಂಗಲಾ ಇದ್ಯ ಬಿಕ್ನಾಸೀ ನನ್ನ ಮಗನೇ ಅಂತ ತನ್ನ ಹಟ್ಟಿ ಮುಂದೆ ಬಂದ ಮುರುಗನ್ ಕೇಳ್ತು ಗೋಪಾಲಣ್ಣ.

ಇನ್ನೆಂಗಲಾ ಇರ್ತೀನಣ್ಣೋ.. ಆರಕ್ಕೇರಿಲ್ಲಮೂರಕ್ಕಿಳೀಲಿಲ್ಲ .. ಅಂತ ಉತ್ರ ಕೊಡ್ತು ಮುರುಗನ್. ಕಲ್ಲೇಶಿನೂ ಮುರುಗನ್ ಜೊತೆ ಬಂದಿತ್ತು.

ಓ ಅಂಗಂದ್ರೆ ನಮ್ಮ್ ಸಿದ್ದಣ್ಣನ್ ಗವರ್ಮೆಂಟ್ ತರ ಇದ್ಯ ಅನ್ನು.. ಅಲ್ಲಾ ಕಣ್ಲಾ ಇರೋದ ಪಕ್ಸದೋರು ಅದೇನೇ

ತಿಪ್ಪರ್ಲಾಗ ಹಾಕಿದ್ರೂ, ಪೈಜಾಮ ಇಡ್ದ್ಬುಟ್ಟು ಜಗ್ಗಾಡಿದ್ರೂ ಜಾರ್ಜು ಕುರ್ಚಿ ಬಿಟ್ಟೇಳಿಲ್ಲಾ..ಅದ್ಯಾಕಲಾ ಇದ್ದ್ ಕಿದ್ದಂಗೆ ರಾಜ್ನಾಮೆ ಪತ್ರ ವಗಾಸೈತೆ? ಅಂತ ಕೇಳ್ತು ಗೋಪಾಲಣ್ಣ.

ಅದ್ಯಾವಾಗ ಕೋರ್ಟ್ ಅಲ್ಲಿ ಜಡ್ಜು ಮಕ್ಕುಗೀತೋ ಇರೋ ಸ್ವಲ್ಪ ಮರ್ವಾದೇನಾರ ಉಳುಸ್ಕಳೋಣಾ ಸಿವಾ ಅಂತ ರಾಜ್ನಾಮೆ ಕೊಟ್ಟೈತೆ ಕಣ್ಲಾ. ಇದು ನಮ್ಮ ಪಕ್ಸದ ಓರಾಟದ ಪಲ ಅಂತ ಕಮಲ ಮತ್ತು ತೆನೆ ಒತ್ತೋರ ಪಕ್ಸ್ದೋರು ಪಟಾಕಿ ಸಿಡ್ಸಿ ಲಾಡು ಹಂಚಿ ಕುಸಿ ಪಟ್ಟಾವ್ರೆ ಕಣ್ಲಾ ಅಂತ ಸಮಜಾಯ್ಸಿ ಕೊಡ್ತು ಮುರುಗನ್.

ಬುಡ್ಲಾ.. ಕೇಜ್ರಿವಾಲುದು ಅದ್ಯೇನ್ಲಾ ಮ್ಯಾಟರ್ರು.ಕೆಮ್ಮು ಎಂಗೈತ್ಲಾ ಅದ್ಕೆ ಇವಾಗ ಅಂತ ಕೇಳ್ತು ಕಲ್ಲೇಶಿ.

ಥತ್ತೇರಿಕೆಕೆಮ್ಮು ವಾಸಿ ಆಗ್ತಿದ್ದಂಗೆ ಉಚ್ಚುಚ್ಚಾಗಿ ಆಡೋಕೆ ಸುರು ಮಾಡೈತೆ ಕಣ್ಲಾ. ಬೆಳ್ಗೆ ಕಕ್ಕ ಸರ್ಯಾಗಿ ಆಗಿಲ್ಲಾಂದ್ರು ಮೋದಿನೇ ಕಾರ್ಣ ಅಂತ ಊರೂರು ಯೋಳ್ಕೊಂಡು ಬರ್ತೈತೆ. ಮೊನ್ನೆ ಮೋದಿ ನನ್ನ ಕೊಲ್ಲೋಕೆ ಟ್ರೈ ಮಾಡ್ತೈತೆ ಅಂತಾ ಯೋಳಿ ಸುಮ್ಕೆ ಟೀಆರ್ಪಿ ಮಾಡ್ಕಂಡೈತೆ ಕಣಪ್ಪೋಕೆಮ್ಮಾದ್ರು ಕಮ್ಮಿ ಆಗ್ಬೋದು ಆದ್ರೆ ಕೇಜ್ರಿದು ಉಚ್ತನಅಲ್ಲಾ ಕಣ್ಲಾ ಅಂತ ಯೋಳ್ತು ಗೋಪಾಲಣ್ಣ.

 

ನೀರ್ದೋಸೆ ಟ್ರೇಲರ್ ನೋಡ್ದೇನ್ಲಾ? ಅರಿಪ್ರಿಯಾ ಬುಸ್ಬುಸಿಯಾಗಿ ದ್ವಾಸಿ ಮಾಡಿ ಬಳ್ಸವ್ಳೇ ಕಣ್ಲಾ.ನೋಡೋರ್ಗೂ ತಿನ್ನೋರ್ಗೋ ಅಬ್ಬಾನೇ ಅಬ್ಬ ಕಣ್ಲಾ ಅಂತು ಕಲ್ಲೇಶೀ..

ನೋಡೀವ್ನಿ ಕಣ್ಲಾ. ಅರಿಪ್ರಿಯಾಗೆ ಉಚ್ಚ ವೆಂಕಟ್ಟು ಉಗ್ದೀರದನ್ನೂ ನೋಡೀವ್ನಿ. . ರಮ್ಮುನ ಬಿಟ್ಟು ಅರಿಪ್ರಿಯಾಗೆ ದ್ವಾಸಿ ಮಾಡಮ್ಮ ಅಂತ ಚಾನ್ಸ್ ಕೊಟ್ರೆ ವೆಂಕಟ್ಟು ಸುಮ್ಕೆ ಕೂರುತ್ತೇನ್ಲಾ??  ಐಟಮ್ಮ್ ಸಾಂಗ್ ಮಾಡಿದ್ರೆ ಬಿಡತ್ತೇನ್ಲಾ ವೆಂಕಟ್ಟು.?? ವೆಂಕಟ್ಟು ಕರ್ನಾಟಕದ ಕಬಾಲಿ ಇದ್ದಂಗೆ ಕಣ್ಲಾ. ರಜ್ನೀ ಮತ್ತು ವೆಂಕಟ್ಟು ಇಬ್ರೂಗೂವೇ ಪಾರೀನಲ್ಲೂ ಪ್ಯಾನ್ಸ್ ಅವ್ರೆಕಣ್ಲಾ ಅಂತೇಳ್ತು ಗೋಪಾಲಣ್ಣ.

ಇಸ್ಯಾ ಗೊತ್ತೇನ್ಲಾ ಗೋಪಾಲಣ್ಣಿ. ಕರ್ನಾಟಕ ಬಂದ್ ದಿವ್ಸ ನಾರಾಯ್ಣ ಗೋಡ್ರ ಸಂಗಟ್ನೆ ಜತೆ ಟೈರು ಸುಟ್ಟು ಓರಾಟ ಮಾಡಿ ಕಂಟ್ಮುಟ್ಟ ಕುಡುದ್ಬಿಟ್ಟು ಮನೆ ಮುಂದೆ ರಂಪ ಮಾಡಿದ್ದಕ್ಕೆ ಮುರುಗನ್ಗೆ ಮನೆ ಸುತ್ತ ಮುತ್ತ ಜನ ಸರ್ಯಾಗೇ

ಮಂಗ್ಳಾರ್ತಿ ಮಾಡವ್ರೆ. ಪಾಪ ಸರ್ಯಾಗಿ ನಡ್ಯಾಕೂ ಆಯ್ತಿಲ್ಲ ಅಂತ ಮುರುಗನ್ ಕಿಚಾಯಿಸ್ತು ಕಲ್ಲೇಶಿ.

ಅಲೆಲೆಲೆಲೆ ಇದ್ಯೇನ್ಲಾ ದೋಡ್ಡ್ ಇಸ್ಯಾಮಡ್ಕೇರಿಲಿಕುಡ್ದು ರಂಪ ಮಾಡ್ದ ಅಂತ ಅದ್ಯಾರೋ ಮಿನಿಷ್ಟ್ರು ಮಗಂಗೇ ತಬ್ಲಾಕ್ಕೆ ನಜ್ದಾಂಗೆ ನಜ್ಜ್ ಬಿಟ್ಟವ್ರೆ ಅಂತೆ.ಮುರುಗನ್ ನೋಡಾಕೆ ಒಳ್ಳೆ ಫಾರಮ್ಮ್ ಅಂದಿ ತರಇದೆ.. ಅದ್ಕೂ ಸರ್ಯಾಗಿ ಆಕ್ಕೊಂಡುರುಬ್ಬಿದ್ರೇನೇಯಾ  ಬುದ್ದಿ ಬರೋದು. ಒಳ್ಳೇ ಕೆಲ್ಸ ಮಾಡವ್ರೆ ಬುಡ್ಲಾ ಅಂತ ಮುರುಗನ್ ಬುಡಕ್ಕೇ ಇಡ್ತು ಗೋಪಾಲಣ್ಣ.

ಅಮಿಕ್ಕೊಂಡು ಕೂರ್ರಲಾ ದರ್ಬೇಸಿ ನನ್ ಮಕ್ಳಾಉಡದ್ ಬಾಯಿ ಈಸ್ವರ್ರು ಕಥೆ ಏನ್ಲಾ? ಶೀಟೀ ರವಿಗೆ ನೇಣ್ಣಾಕಿ ಅಂತ ಮೀಡ್ಯಾ ಮುಂದೆ ಮೊನ್ನೆ ಯೋಳ್ತಿತ್ತು. ಏನ್ಲಾ ಮ್ಯಾಟರ್ರು ಅಂತ ಕೇಳ್ತು ಮುರುಗನ್

ಅಗಳಗಳಗಳೋ.. ಅದಂಗೆ ಯೋಳಿದ್ದು ಅಲ್ಲ ಕಣ್ಲಾ!! ಶೀಟಿ ರವಿ ಅಪ್ರಾದಿ ಅಂತ ಸಾಬೀತಾದ್ರೆ ನೇಣಾದ್ರೂ ಆಕಿ ಅಂತೇಳಿದ್ದು. ಬಾಳ ಇಂದೆ ಯೆಡ್ಯೂರ್ ಮೇಲಿರೋವಷ್ಟು ಕೇಸ್ ಏನಾದ್ರೂ ನನ್ ಮ್ಯಾಕೆ ಇದ್ರೆ ನಾನಾವಗ್ಲೇ ನೇಣಾಕೋಳ್ತಿದ್ದೆ ಅಂದಿತ್ತು ಕಣ್ಲಾ ಇದೇ ಈಸ್ವರ್ರು. ಅದ್ರ್ ಬಾಯಿಂದ ಯಾವಾಗ ಅದೇನು ಬರತ್ತೋ ಅದ್ಕೇ ಗೊತ್ತಿರಲ್ಲ.ನಡೀರ್ಲಾ ಭಾಳ ಒತ್ತಾತು. ಕೆಲ್ಸ ನೋಡ್ರಲಾ ಅಂತ ಗೋಪಾಲಣ್ಣ ಯೋಳ್ತಿದ್ದಂತೆ ಕಲ್ಲೇಶೀ ಮುರುಗನ್ ಇಬ್ರೂ ಪೋಟಾಗ್ಬುಟ್ಟಿದ್ದವು!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!