ಅಂಕಣ

ಲಕ್ಕೇ ಚೇಂಜ್ ಮಾಡ್ಬುಟ್ಟ ಕಿಸ್ಸು..!! ಸೀನಣ್ಣ ಮಾತ್ರ ಬುಸ್ ಬುಸ್ಸ್..!!

ರಾ ರಾ..  ಸರಸಕು ರಾರಾ… ಅಂತ ಗೋಪಾಲಣ್ಣ ಹಟ್ಟಿ ಮುಂದೆ ಬಂದ್ವು ಮುರುಗನ್ ಮತ್ತು ಓತಿಕ್ಯಾತ.

ಅಗಳಗಳಗಳಗಳೋ.. ಇದ್ಯೇನಾತ್ಲಾ ಕಳ್ಳ್ ಬಡ್ಡಿ ಮಕ್ಳಾ ನಿಮ್ಗಳ್ಗೇ?. ನಿನ್ನೇ ತನ್ಕ ಸರೀ ಇದ್ರಲ್ವೋ.ಅದ್ಯಾಕ್ಲಾ ದೆವ್ವದ್ ಸಾಂಗೇಳಿ ಎಲ್ರನ್ನೂ ಬಯ ಬೀಳುಸ್ತಿದೀರಾ??

ಏನೂ ಇಲ್ಲ ಕಣಣ್ಣೋ.. ನಮ್ಮ್ ಮಹಾರಾಜರ್ ಮದ್ವೇಲಿ ತುಂಡೂ ಗುಂಡೂ ಎರಡನ್ನೂವೇ ಗಂಟ್ ಪೂರ್ತಿ ಇಳ್ಸ್ಕಂಡ್ ಒಂದು ಓಲ್ಡ್ ಲೇಡಿ ಟಪಾಂಗುಚ್ಚಿ ಡ್ಯಾನ್ಸ್ ಮಾಡ್ತಿತ್ತು ಕಣ್ಲಾ. ಮಹಾರಾಣಿ ಕಡೆಯವ್ರು ಇದನ್ನ್ ನೋಡಿ ಭಯ ಬಿದ್ದೋದ್ರಂತೆ ಕಣ್ಲಾ.ಇದ್ಯೇನಪ್ಪಾ ನಾಗ್ವಲ್ಲಿ ಮತ್ತೇನಾದ್ರೂ ಬಂದೈತಾ ಅಂತ. ಕಡೆಗ್ ನಮ್ಮ್  ಪ್ರಗತಿಪರ ಓರಾಟಗಾರ ಕಾಮಿಡಿ ಸ್ವಾಮಿ ಮಂತ್ರ ಮಾಡ್ತಿದ್ದಂಗೆ ಲೇಡಿ ಸೈಲೆಂಟ್ ಆಗ್ಬುಡ್ತಂತೆ, ಇಟೇಯಾ ಕಣಲಾ ಮಾಟರ್ರು ಅಂತ ಒಂದೇ ಉಸ್ರಲ್ಲಿ ಯೋಳ್ಬಿಡ್ತು ಮುರುಗನ್.

ಥತ್ತೇರಿಕೆ, ಈ ಮ್ಯಾಟರ್ರು ಯೋಳೋಕೆ ನಾಗ್ವಲ್ಲಿ ಸಾಂಗು ಯಾಕ್ರಾ ಯೋಳ್ತಿರಾ. ಬೀಪಿ ಗೀಪಿ ರೈಸ್ ಆಗ್ಬಿಟ್ಟು ಎಲ್ಲಾರೂ ಸಿವನ್ ಪಾದ ಸೇರ್ಬುಟ್ಟಿದ್ರೆ ಏನಲಾ ಮಾಡ್ತಿದ್ದ್ರಾ ಅಂತ ಗರಮ್ಮ್ ಆಯ್ತು ಗೋಪಾಲಣ್ಣಿ.

ನಿಂಗೇನಾಗುತ್ತೆ ಬುಡಲಾ. ಒಳ್ಳೆ ದೇವ್ರಿಗೆ ಬಿಟ್ಟಿರೋ ಕೋಣ ತರ ಇದ್ಯಾ ಅಂತ ಕಿಚಾಯಿಸ್ತು ಓತಿಕ್ಯಾತ.

ಸಾರಿ ಗೋಪಾಲಣ್ಣಿ, ಪೀಲಿಂಗ್ ಮಾಡ್ಕೋಬೇಡಾ, ಕೈ ಪಕ್ಸದ ಭಿನ್ನಮತದ್ ಕಥೆ ಎಲ್ಲೀಗಂಟ ಬಂತ್ಲಾ? ಅಂತ ಕೇಳ್ತು ಮುರುಗನ್.

ನಿಮ್ಮ್ ಸೀನಣ್ಣನ್ ಬುಟ್ಟು ಮತ್ತೆಲ್ಲಾ ಕೂಲ್ ಆಗವ್ರೆ ಕಣ್ಲಾ. ಕಿಸ್ಸು ಸಿಕ್ಕಿದ್ ಮ್ಯಾಲೆ ಸಿದ್ದಣ್ಣನ್ ಲಕ್ಕೇ ಚೇಂಜ್ ಆಗ್ಬುಟ್ಟೈತೆ!! ಅಂಬ್ರೀಷು, ಕಮ್ರಲ್ಲು,ಚಿಂಚನ್ಸೂರು ಎಲ್ಲಾ ಸೈಲೆಂಟ್ ಆಗ್ಬುಟ್ಟಾವೆ ನೋಡ್ಲಾ. ಸೀನಣ್ಣ ಮಾತ್ರ ಸಿದ್ರಾಮಣ್ಣ ವಂಚಕ,ದ್ರೋಹಿ ಅಂತೇಳಿ ವಾಚು ಗೀಚು ಅಂತಾ ಸಿದ್ದಣ್ಣನ್ ಪುರಾಣ ಎಲ್ಲ ಬಟಾ ಬಯಲು ಮಾಡ್ತಾ ಕೂತೈತೆ ಕಣಪ್ಪಾ. ನಿಮ್ಮ್ ಚಿಂಚನ್ಸೂರು ನೋಡುದ್ರೆ ಮಾತ್ರ ಪಾಪ ಅನ್ಸುತ್ತೆ ಕಣ್ಲಾ. ಅದ್ರ್ ಪಾಡಿಗೆ ಬಟ್ಟೆ ನೇಯ್ಕಂಡು, ಗುಬ್ಬಿ ಇಟ್ಕಂಡು, ಚಾನ್ಸ್ ಸಿಕ್ದಾಗ ಸರಿಯಾಗೆ ಮೇಯ್ಕಂಡು ಆರಾಮಾಗಿ ಇತ್ತು ನೋಡಲಾ. ಅದ್ಯಾರ್ ಕಣ್ಣು ಬಿತ್ತೋ ಏನೋ ಎಲ್ಲ ಕಳಕ್ಕಂಡ್ ಬಿಟ್ಟು ಬೆಪ್ಪಾಗ್ ಬುಡ್ತು ನೋಡ್ಲಾ ಅಂತ ಗೋಪಾಲಣ್ಣಿ ಯೋಳ್ತು.

ಬುಡಲಾ. ಒಸ ಮಿನಿಸ್ಟರ್ಸ್ ಕಥೆ ಏನ್ಲಾ?ರಮೇಶ್ಕುಮಾರ್ ಭಾಳ ಗರಮ್ಮಾಗಿತ್ತಂತೆ ಮೊನ್ನೆ ಯಾರೋ ಡಾಕ್ಟ್ರಪ್ಪನ್ ಮ್ಯಾಕೆ? ಔದೇನ್ಲಾ ಅಂತ ಗೋಪಾಲಣ್ಣನ್ ಕೇಳ್ತು ಓತಿಕ್ಯಾತ.

ಊ ಕಣಲಾ ನಿಮ್ಮ್ ರಮೇಶ್ಕುಮಾರ್ ಬರೀ ಅಸ್ಸೆಂಬಿನಲ್ಲಿ ಕಾಮಿಡಿ ಮಾಡೋಕೇ ಸೈ ಅನ್ಕೊಂಡಿದ್ದೆ. ಪರ್ವಾಗಿಲ್ಲ. ಕೆಲ್ಸಾನೂ ಮಾಡ್ತೈತೆ.ಇನ್ನುಳ್ದಿರೋ ಮಿನಿಸ್ಟರ್’ಗಳು ಕೆಲ್ಸ ಕಲ್ತು ಪೀಲ್ಡ್’ಗೆ ಬರೋ ಒತ್ನಾಗೆ ಅಸ್ಸೆಂಬ್ಲಿ ಎಲೆಕ್ಷನ್ ಬರೋದು ಗ್ಯಾರಂಟಿ ಕಣ್ಲಾ ಅಂತ ಗೋಪಾಲಣ್ಣ ಯೋಳ್ತು.

ಕುಮಾರ್ ಸ್ವಾಮಿದು ಏನಲಾ ಗದ್ಲ. ಜಗ್ಳ ಮಾಡ್ಕೋಂಡು ಗಂಡ ಎಂಡ್ರು ಇಬ್ರೂ ಬೀದಿ ರಂಪಾ ಮಾಡ್ತವೆ? ಅಂತಾ ಕೇಳ್ತು ಮುರುಗನ್.

ಯಾವ ಎಂಡ್ತಿ ಜತೆ ಜಗ್ಳ ಆಡೈತೆ ಅಣ್ಣಾ ಕುಮಾರಣ್ಣಾ? ಇಟ್ಕಂಡೋಳೋ? ಕಟ್ಕಂಡೋಳೋ?

ಯಾರೋ ಯೋಳಿದ್ರು ಮಗನ್ ಮೂವೀ ಶೂಟಿಂಗೆ ಪಾರೀನ್ ಓಗೈತೆ ಅದು ಅಂತಾ ಕೇಳ್ತು ಓತಿಕ್ಯಾತ.

ಥತ್ತೇರಿಕೆ.. ನಿನಗ್ ಚೇಳ್ಕಡಿಯಾ!!… ಇಮಾಮ್ ಸಾಬಿಗೂ ಮುಲ್ಲಾ ಸಾಬಿಗೂ ಯಾಕ್ಲಾ ಸಂಬಂದ ಕಟ್ತಿದಿಯಾ? ಅವ್ನು ಯೋಳ್ತಿರೋದು ಕಮಲ ಪಕ್ಸದ ಕುಮಾರಸ್ವಾಮಿ ಕತೆ ಕಣ್ಲಾ. ನಿನ್ನ್ ಮಾತು ದೊಡ್ಡ್ ಗೌಡ್ರು ಕೇಳ್ಸ್ಕೊಂಡ್ರೆ ನಿನ್ನ ಜೆಡಿಎಸ್’ನಿಂದ ಓಡ್ಸ್ಬಿಡ್ತಾರೆ ಅಡ್ಡ್ ಕಸ್ಬಿ ನನ್ ಮಗನೇ ಅಂತ ಮಕ್ಕುಗೀತು ಓತಿಕ್ಯಾತ ಗೋಪಾಲಣ್ಣಿ.

ಕಮಲ ಪಕ್ಸದೋರ ಕಥೆ ಏನ್ಲಾ? ಯೆಡ್ಯೂರು ಯಾರ್ ಮಾತೂ ಕೇಳಾಕಿಲ್ಲ. ತನಗ್ ಬೇಕಾದವ್ರನ್ನ ಜಿಲ್ಲಾದ್ಯಕ್ಸ ಮಾಡೈತೆ ಅಂತಾ ಉಡದ್ ಬಾಯಿ ಈಸ್ವರ್ರು ಓದಲ್ಲ್ ಬಂದಲ್ಲ್ ಬೈತಾ ಬತ್ತೈತೆ. ಇದ್ರ ವಿರುದ್ದ ಓರಾಟ ಮಾಡೇ ಸಿದ್ದ, ನಂಜೊತೆ ಇರೋರೆಲ್ಲಾ ಯಾರೂ ಯೆಡ್ಯೂರು ಕರ್ದಿರೋ ಮೀಟಿಂಗ್ನಾಗೆ ಓಗಾಕಿಲ್ಲ ಅಂತೇಳಿತ್ತು. ಏನಾತ್ಲಾ ಯೆಡ್ಯೂರು ಈಸ್ವರ್ರು ಪೈಟು? ಒಸಿ ಬುಡ್ಸಿ ಯೋಳ್ಲಾ.. ಅಂತ ಮುರುಗನ್ ಯೋಳ್ತು.

ಈಸ್ವರ್ರು ಜೊತೆಗಿದ್ದೋರೆಲ್ಲಾ ಯೆಡ್ಯೂರು ಕರ್ದಿದ್ದ ಮೀಟಿಂಗ್ ಓಗ್ಬಿಟ್ಟು ಟೀ ಕಾಪಿ ಕುಡ್ಕಂಡು ಯೆಡ್ಯೂರ್ಗೆ ಜೈ ಅಂತೇಳಿ ಬಂದವೆ ಕಣ್ಲಾ.. ಕೆಟ್ರೂ ಇವಕ್ಕೆ ಬುದ್ದಿ ಬರಾಕಿಲ್ಲ ಕಣ್ಲಾ. ಕಚ್ಚಾಡ್ಕಂಡು ಸಾಯ್ತವೆ. ಇವ್ರ್ ಇಸ್ಯಾ ಬುಡ್ಲಾ. ಇಫ್ತಾರ್ ಪಾರ್ಟಿ ಇದೆ, ಬಂದ್ಬುಡು ಗೋಪಾಲಣ್ಣಿ ಅಂತ ಮಟನ್ ಸಾಪ್ ರಪೀಕ್ ಕರ್ದೈತೆ. ಓಗ್ಬುಟ್ಟು ಒಟ್ಟೆ ಬಿರ್ಯೋ ತರ ಬಿರ್ಯಾನಿ ತಿಂದ್ಬುಟ್ಟು ಬರೋಣ ಅಂತ ಗೋಪಾಲಣ್ಣ ಯೋಳ್ತಿದ್ದಂಗೆ ಎಲ್ರೂ ಜಾಗ ಕಾಲಿ ಮಾಡ್ಬುಟ್ರು.!!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!