ನಿನ್ನ ಅರಿಯರು ಯಾರು!
ನನ್ನ ಬಿಟ್ಟು ಇನ್ನಾರು?
ಮಾತು ನಿನ್ನರಿವು, ಪರ್ಣ ನಿನ್ನೆಸರು.
ಕವಿತೆ ನಿನ್ನುಸಿರು, ಭಾವ ನಿನ್ನ ಸಿರಿಯು.
ಸಿರಿ ದೇವಿಯೂ ನೀ ವರ್ಷದಾಯಿನಿ
ಪ್ರೀತಿಯಲ್ಲಿ ನೀ ಸುವರ್ಣವೋ
ಕೋಪದಲ್ಲಿ ಸೂರ್ಯರಶ್ಮಿ ನೀ
ನಗುವೇ ನಿನ್ನ ಆಭೂಷಣವು
ಧನ್ಯವೀ ಜನುಮ,
ನಿನ್ನ ಕಂಡ ಆ ಘಳಿಗೆ
ನೀನೇ ದೇವತೆ ನನ್ನ ಪದಸಿರಿಗೆ
ನೀನೇ ಗಾಯಕಿ ನನ್ನ ಗಾನಸಿರಿಗೆ